ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-10-2020
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 75/2020, ಕಲಂ. 279, 304 (ಎ) ಐ.ಪಿ.ಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 01-10-2020 ರಂದು ಫಿರ್ಯಾದಿ ನಾಗಶೆಟ್ಟಿ ತಂದೆ ಶಾಮಣ್ಣಾ ನಿಲಪ್ಪನೋರ, ವಯ: 43 ವರ್ಷ, ಜಾತಿ: ಲಿಂಗಾಯತ, ಸಾ: ಕಂಗನಕೋಟ, ತಾ: ಬೀದರ, ಸದ್ಯ: ಹೂಗೇರಿ ಬೀದರ ರವರ ತಮ್ಮನಾದ ಶಿವಕುಮಾರ ಇತನು ಮನೆಯಿಂದ ಕೆಲಸಕ್ಕೆ ಹೋಗಲು ಮೊಟಾರ ಸೈಕಲ ನಂ. ಕೆಎ-38/ಎಸ್-1987 ನೇದ್ದನ್ನು ಚಲಾಯಿಸಿಕೊಂಡು ಸೆಂಟ್ ಜೊಸೇಫ ಸ್ಕೂಲ ಕಡೆಯಿಂದ ಶಹಾಪೂರ ಗೇಟ ಕಡೆಗೆ ಹೋಗಲು ಡಿವೈಡರ ಗ್ಯಾಪ ಹತ್ತಿರ ಟರ್ನ ಮಾಡುವಾಗ ಬೀದರ ಕಡೆಯಿಂದ ಒಂದು ಕಾರ ನಂ. ಕೆಎ-38/ಎಮ್-4650 ನೇದ್ದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಮಾಡಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯದಿಯವರ ತಮ್ಮ ಶಿವಕುಮಾರ ಇತನು ಭಾರಿ ರಕ್ತ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 38/2020, ಕಲಂ. 279, 337, 338 ಐಪಿಸಿ :-
ದಿನಾಂಕ 01-10-2020 ರಂದು ಫಿರ್ಯದಿ ಸೈಯದ ಹುಸೇನ ತಂದೆ ಮಹಮ್ಮದ ಶರೀಫ್ ಮುದ್ದೆವಾಲೆ ವಯ: 56 ವರ್ಷ, ಜಾತಿ: ಮುಸ್ಲಿಂ, ಸಾ: ಯಾಕತಪುರ ರವರು ಒಕ್ಕಲುತನ ಕೆಲಸಕ್ಕೆ ತನ್ನ ಎಕ್ಸ್.ಎಲ್ 100 ಮೊಟಾರು ಸೈಕಲ್ ನಂ. ಕೆಎ-38/ಎಕ್ಸ್-2291 ನೇದರ ಮೇಲೆ ಯಾಕತಪುರ ಗ್ರಾಮದಿಂದ ರಾಜಗೀರಾ ಗ್ರಾಮದ ಹೊಲಕ್ಕೆ ಟೀಫನ್ ತೆಗೆದುಕೊಂಡು ಹೋಗುವಾಗ ಮನ್ನಳ್ಳಿ ಕೆರೆಯ ಪಾಳೆಯ ತಿರುವಿನಲ್ಲಿ ಎದುರಿನಿಂದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆಎ-39/ಕ್ಯೂ-9740 ನೇದರ ಚಾಲಕನಾದ ಆರೋಪಿ ವಿಜಯಕುಮಾರ ತಂದೆ ವೀರಶೆಟ್ಟಿ ವಯ: 38 ವರ್ಷ, ಜಾತಿ: ಟೋಕರಿ ಕೋಳಿ, ಸಾ: ಮನ್ನಳ್ಳಿ ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಫಿರ್ಯಾದಿಯ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿಯ ಬಲ ಮತ್ತು ಎಡ ಮೊಳಕಾಲುಗಳ ಕೆಳಗೆ ಎರಡು ಕಾಲುಗಳಿಗೆ ರಕ್ತಗಾಯವಾಗಿರುತ್ತದೆ ಮತ್ತು ಆರೋಪಿಗೆ ಹಿಂಬದಿ ಮತ್ತು ನಡು ತಲೆಯಲ್ಲಿ ಭಾರಿ ರಕ್ತಗಾಯ, ಮೂಗಿನಿಂದ ರಕ್ತ ಸೋರಿದ್ದು ಇರುತ್ತದೆ, ನಂತರ ಮನ್ನಳ್ಳಿ ಗ್ರಾಮದ ಪರಶುರಾಮ ಮೇಕಾನಿಕ ಹಾಗೂ ಫಿರ್ಯಾದಿಯ ಮಗ ಸೈಯಾದ ಅರೀಫ @ ಬಬ್ಲು ರವರು ಬಂದು 108 ಅಂಬುಲೆನ್ಸಗೆ ಕರೆ ಮಾಡಿ ಚಿಕಿತ್ಸೆ ಕುರಿತು ಬೀದರ ಸಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 144/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 01-10-2020 ರಂದು ಗಾಂಧಿಗಂಜ ಮೊತಿ ಬಜಾರದ ಹತ್ತಿರ ಇರುವ ರಾಜಾ ಬಾರ ಹತ್ತಿರ ಮಟಕಾ ಚಿಟಿಗ¼ÀÄ ಬರೆದುಕೊಳ್ಳುತ್ತಿದ್ದಾರೆಂದು ಮಂಜನಗೌಡ ಪಾಟೀಲ್ ಪಿ.ಎಸ್.ಐ-1 ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೆರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೀದರ ಗಾಂಧಿಗಂಜ ಮೋತಿ ಬಜಾರದಲ್ಲಿರುವ ರಾಜಾ ಬಾರ ಹತ್ತಿರ ಹೊಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಮಹ್ಮದ ಫೇರೋಜ್ ತಂದೆ ಮಹ್ಮದ ಸಿದ್ದಿಕ್ ವಯ: 30 ವರ್ಷ, ಸಾ: ಶಹಾಗಂಜ ಬೀದರ ಇತನು ಒಂದು ರೂಪಾಯಿಗೆ 100/- ರೂಪಾಯಿ ಕೊಡುವುದಾಗಿ ಒದರಾಡುತ್ತಾ ಮಟಕಾ ಚೀಟಿಗಳನ್ನು ಬರದುಕೊಳ್ಳುತ್ತಿರುವುದನ್ನು ಖಚಿತಪಡಿಸಿಕೊಂಡು ಆತನ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದಕೊಂಡು ಅವನ ಅಂಗ ಜಡ್ತಿ ಮಾಡಲು ಆತನ ಬಳಿ ನಗದು ಹಣ 3,100/- ರೂ. ಹಾಗು 5 ಮಟಕಾ ಚಿಟಿಗಳು ಮತ್ತು ಒಂದು ಬಾಲಪೆನ್ನ ಇದ್ದು, ಪಂಚರ ಸಮಕ್ಷಮ ಸದರಿಯವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 113/2020, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಸಾಯಿನಾಥ ತಂದೆ ವೈಜಿನಾಥ ಮಡಿವಾಳ ವಯ: 29 ವರ್ಷ, ಸಾ: ಶಾಹಪುರ ಗೇಟ್ ಬೀದರ ರವರ ತಂಗಿಯಾದ ದೇವಿಕಾ ಇವಳು ಈಗ ಸೂಮಾರು 10-15 ದಿವಸಗಳ ಹಿಂದಿನಿಂದ ಬೀದರ ನಗರದ ಅಕ್ಕಮಹಾದೇವಿ ಕಾಂಪ್ಲೆಕ್ಷನಲ್ಲಿರುವ ಶಿವಾ ಎಂಟರಪ್ರೈಜಸನಲ್ಲಿ ಕಂಪ್ಯುಟರ್ ಕ್ಲಾಸಗೆ ಹೋಗುತ್ತಿದ್ದು ಅವಳೊಂದಿಗೆ ಫಿರ್ಯಾದಿಯವರ ಚಿಕ್ಕಪ್ಪನ ಮಗಳಾದ ಕು. ಜ್ಯೋತಿ ವಯ: 22 ವರ್ಷ ಇವಳು ಕೂಡಾ ಹೋಗುತ್ತಿದ್ದಳು, ಸದರಿಯವರು ದಿನಾಲು ಮನೆಯಿಂದ ಕಂಪ್ಯುಟರ ಕ್ಲಾಸಗೆಂದು 1200 ಗಂಟೆಗೆ ಬಿಟ್ಟು ಕ್ಲಾಸ ಮುಗಿಸಿಕೊಂಡು ಮರಳಿ ಮನೆಗೆ ಅಂದಾಜು 1500 ಗಂಟೆಗೆ ಬರುತ್ತಿದ್ದರು, ಹೀಗಿರುವಾಗ ಎಂದಿನಂತೆ ದಿನಾಂಕ 30-09-2020 ರಂದು ದೇವಿಕಾ ಹಾಗೂ ಕು. ಜ್ಯೋತಿ ಇಬ್ಬರು ಕೂಡಿಕೊಂಡು ಮನೆಯಿಂದ 1200 ಗಂmೆಗೆ ಹೋಗಿದ್ದು ಇರುತ್ತದೆ, ನಂತರ ಅಂದಾಜು 1930 ಗಂಟೆಗೆ ಜ್ಯೋತಿ ಇವಳು ಫಿರ್ಯಾದಿಯವರ ಮನೆಗೆ ಬಂದು ತಿಳಿಸಿದ್ದೆನೆಂದರೆ, ತಾನು ಮತ್ತು ದೇವಿಕಾ ಇಬ್ಬರು ಕೂಡಿಕೊಂಡು ಮನೆಯಿಂದ ಕಂಪ್ಯುಟರ ಕ್ಲಾsಸಿಗೆಂದು ಹೋಗಿ ಕ್ಲಾಸ್ ಮುಗಿಸಿಕೊಂಡು ನಂತರ ಪಾಪನಾಶ ದೇವಸ್ಥಾನಕ್ಕೆ ಹೋಗಿ ಬರೋಣ ಅಂತ ಹೇಳಿಕೊಂಡು ಪಾಪನಾಶ ಮಂದಿರಕ್ಕೆ ಹೋಗಿ ಮರಳಿ ಪಾಪನಾಶ ಗೇಟ್ ಹತ್ತಿರ ಬಂದಾಗ ದೇವಿಕಾ ಇವಳು ಸ್ವಲ್ಪ ಕೆಲಸ ಇದೆ ಅಂತ ಹೇಳಿ ಶಿವನಗರ ಕಡೆಗೆ ಹೋದವಳು ಸೂಮಾರು 1 ಗಂಟೆಯಾದರು ಮರಳಿ ಬರದೆ ಇದ್ದರಿಂದ ನಂತರ ದೇವಿಕಾ ಇವಳಿಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಅಂತ ಹೇಳಿರುತ್ತದೆ ಅಂತ ತಿಳಿಸಿದ್ದು ಇರುತ್ತದೆ, ದೇವಿಕಾ ಇವಳು ದಿನಾಂಕ 30-09-2020 ರಂದು 1800 ಗಂಟೆಂiÀÄ ಸುಮಾರಿಗೆ ಕಾಣೆಯಾಗಿರುತ್ತಾಳೆ, ಕಾಣೆಯಾದವಳ ವಿವರ 1) ಹೆಸರು: ದೇವಿಕಾ, 2) ತಂದೆ ಹೆಸರು: ವೈಜಿನಾಥ ಮಡಿವಾಳ, 3) ವಯ: 27 ವರ್ಷ, 4) ಎತ್ತರ :- 5’2 ಫೀಟ, 5) ಚಹರೆ ಪಟ್ಟಿ: ದಪ್ಪನೆಯ ಮೈಕಟ್ಟು, ಗೋಧಿü ಮೈಬಣ್ಣ, 6) ಧರಿಸಿದ ಬಟ್ಟೆಗಳು: ಅರಸಿನ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಲೆಗಿಂಗ್ಸ್ ಹಾಗೂ 7) ಮಾತನಾಡುವ ಭಾಷೆ: ಹಿಂದಿ, ಕನ್ನqÀ ತೆಲಗು ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.