Police Bhavan Kalaburagi

Police Bhavan Kalaburagi

Friday, May 31, 2019

KALABURAGI DISTRICT REPORTED CRIMES

ಹಲ್ಲೆ ಪ್ರಕರಣಗಳು  :
ಅಶೋಕ ನಗರ ಠಾಣೆ : ಶ್ರೀಮತಿ ಸುರೇಖಾ ತಂದೆ ಲಾಲಪ್ಪ ಶಾಸ್ತ್ರಿ ಸಾ:ಅಶೋಕ ನಗರ ಕಲಬುರಗಿ. ರವರು ದಿನಾಂಕ: 30.05.2019 ರಂದು ನನ್ನ ಮತ್ತು ನನ್ನ ತಾಯಿಯ ಮುಂದಿನ ಜೀವನದ ಬಗ್ಗೆ ಹೇಗೆ ಅಂತ ನನ್ನ ಅಣ್ಣನಾದ ದತ್ತಾತ್ರೇಯ ತಂದೆ ಲಾಲಪ್ಪ ಶಾಸ್ತ್ರಿ ಮತ್ತು ಜೀತೆಂದ್ರ ತಂದೆ ಲಾಲಪ್ಪ ಶಾಸ್ತ್ರಿ, ಜೈಭೀಮ ತಂದೆ ಲಾಲಪ್ಪ ಶಾಸ್ತ್ರಿ ಇವರಿಗೆ ಕೆಳಲಾಗಿ ನೀವು ಏನು ಕೇಳುತ್ತಿರಿ ರಂಡಿ ಮಕ್ಕಳ, ಭೊಸಡಿ ಮಕ್ಕಳೆ ದತ್ತಾತ್ರೆಯ ಇತನು ಅವಾಚ್ಯವಾಗಿ ಬೈಯುತ್ತಿದ್ದಾಗ ಅವನ ಹೆಂಡತಿಯಾದ ಲತಾ ಗಂಡ ದತ್ತಾತ್ರೇಯ ಇವಳು ಕೈಯಲ್ಲಿ ಒಂದು ಪ್ಲಾಸ್ಟೀಕ್ ಪೈಪ್ ಕೈಯಲ್ಲಿ ಹಿಡಿದುಕೊಂಡು ಬಂದವಳೆ ನನ್ನ ತಲೆಯ ಮೇಲಿನ ಕೂದಲು ಹಿಡಿದು ಒಂದು ಕೈಯಿಂದ ದಬ್ಬಿಸಿ ಒಂದು ಕೈಯಲ್ಲಿದ್ದ ಪೈಪ ನಿಂದ ಬೆನ್ನಿನ ಮೇಲೆ ಹೊಡೆದು ಗುಪ್ತ ಗಾಯ ಪಡಿಸಿದು ಹೊಡೆಯ ಬೇಡ ಅಂತ ಬಲಗೈ ಮೇಲೆ ಮಾಡಿದಾಗ ಬಲಗೈ ಹೆಬ್ಬೆರಳಿಗೆ ಅದೆ ಪೈಪನಿಂದ ಹೊಡೆದು ರಕ್ತ ಗಾಯ ಪಡಿಸಿರುತ್ತಾಳೆ. ಬಿಡಿಸಲು ಬಂದ ನನ್ನ ತಾಯಿಗೆ ಉಮಾ ಗಂಡ ಬಸವರಾಜ ಕಾಲಿನಿಂದ ನನ್ನ ತಾಯಿ ಕಸ್ತೂರಿಬಾಯಿಯ ಟೊಂಕದ ಮೇಲೆ ಒದ್ದಾಗ ಕುಸಿದು ನೆಲಕ್ಕೆ ಬಿದ್ದಿರುತ್ತಾಳೆ. ಇದನ್ನು ನೋಡಿ ನನ್ನ ಅಣ್ಣನಾದ ಜೀತೆಂದ್ರ ತಂದೆ ಲಾಲಪ್ಪ ಶಾಸ್ತ್ರಿ ಇತನು ಬಿಡಿಸಲು ಬಂದರೆ ನಿನು ಏಕೆ ಬಂದಿದ್ದಿ ಭೊಸಡಿ ಮಗನೆ ಅಂತ ವಿಷ್ಣು ತಂದೆ ದತ್ತಾತ್ರೇ ಇತನು ಕೈಯಲ್ಲಿ ಬಡಿಗೆ ತೆಗೆದುಕೊಂಡು ತನ್ನ ಅಣ್ಣನ ಬೆನ್ನ ಮೇಲೆ ಮತ್ತು ಎರಡು ಕಾಲುಗಳ ಮೇಲೆ ಹೊಡದು ಗುಪ್ತ ಗಾಯ ಪಡಿಸಿರುತ್ತಾರೆ. ಅನಿಲ ಇತನು ಓಡಿ ಬಂದವನೆ ನನ್ನ ಅತ್ತಿಗೆಯಾದ ಪ್ರೀಯಾಂಕಾ ಗಂಡ ಜೈಭೀಮ ಶಾಸ್ತ್ರಿ ಇವಳ ಸಿರೆ ಹಿಡಿದು ಜಗ್ಗಾಡಿ ಬೆನ್ನ ಮೇಲೆ ಕಾಲು ಮೇಲೆ ಒದ್ದಿರುತ್ತಾರೆ. ಇದನ್ನು ನೊಡಿದ ಅನಸೂಯಾ ಗಂಡ ದಿ|| ದಶರಥ ಹೊಡಲ್ಕರ ಸಾ:ಸಿ..ಬಿ ಕಾಲೋನಿ ಕಲಬುರಗಿ ಇವರು ಮತ್ತು ಪ್ರಮೀಳಾ ತಂದೆ ಕುಪೇಂದ್ರ ಮತ್ತು ಮಹೇಶ ಇಳಗೇರ ಸಾ:ಅಶೋಕ ನಗರ ಇವರು ಇಲ್ಲರಿಗೂ ಬುದ್ದಿ ಮಾತು ಹೇಳಿ ಜಗಳ ಬಿಡಿಸಿರುತ್ತಾರೆ. ಇಲ್ಲದಿದ್ದರೆ ನಮಗೆ ಇನ್ನು ಬಹಳ ಹೊಡೆಯುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀಮತಿ ಲಾಲಮ್ಮಾ ಗಂಡ ಬಸವರಾಜ ಸಾ:ಸಂಜು ನಗರ ಕಲಬುರಗಿ. ರವರು ದಿನಾಂಕ: 30.05.2019 ರಂದು ಅಶೊಕ ನಗರದಲ್ಲಿರುವ ಮಮ್ಮಗಳಾದ ಲತಾ ಗಂಡ ದತ್ತಾತ್ರೇಯ ಇವರಿಗೆ ಮಾತನಾಡಿಸಲು ಬಂದಾಗ ಪಕ್ಕದ ಮನೆಯವನಾದ ಜೀತೆಂದ್ರ ತಂದೆ ಲಾಲಪ್ಪ ಇತನು ಕೈಯಲ್ಲಿ ಬಡಿಗೆ ಹಿಡಿದುಕೊಂಡು ನನಗೆ ನೊಡಿದವನೆ ರಂಡಿ ನಿನು ಇಲ್ಲಿಗೆ ಏಕೆ ಬಂದಿದ್ದಿ ನಿನು ನಮಗೆ ಏನು ಸಂಬಂಧ ಇಲ್ಲಾ ನಿನಗೆ ಖಾಲಾಸ ಮಾಡುತ್ತೇನೆ ಅಂದವನೆ ತಲೆ ಹಿಂಬಾಗದ ಬಲ ಭಾಗಕ್ಕೆ ಜೊರಾಗಿ ಹೊಡೆದಿದ್ದರಿಂದ ತಲೆ ಒಡೆದು ರಕ್ತ ಸೊರುತ್ತಿತ್ತು. ಇದನ್ನು ನೊಡಿದ ಲತಾ ಗಂಡ ದತ್ತಾತ್ರೇ ಇವಳು ನನ್ನ ಅಜ್ಜಿಗೆ ಏಕೆ ಹೊಡೆಯುತ್ತಿಯಾ ಅಂತ ಬಿಡಿಸಲು ಹೊದರೆ ಲತಾ ಇವಳಿಗು ಕೈಯಿಂದ ತಲೆಯ ಮೇಲೆ ಎದೆಯ ಮೇಲೆ ಹೊಡೆದಿರುತ್ತಾನೆ. ಇದನ್ನು ನೊಡಿ ಮಲ್ಲಿಕಾರ್ಜುನ ತಂದೆ ಶಿವಲಿಂಗಪ್ಪ ದೊಡ್ಡಮನಿ ಮತ್ತು ಗುಂಡಮ್ಮಾ ಗಂಡ ಮಲ್ಲಿಕಾರ್ಜುನ ದೊಡ್ಡಮನಿ ಇವರು ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ. ಮಹಮ್ಮದ ಉಸ್ಮಾನ ತಂದೆ ಮಹಮ್ಮದ ರಶೀದ ಸಾ; ಮಟನ ಮಾರ್ಕೇಟ ಹತ್ತಿರ ದರ್ಗಾ ಹತ್ತಿರ ಛೋಟಾ ರೋಜಾ ಕಲಬುರಗಿ  ರವರು ದಿನಾಂಕ.28-05-2019 ರಂದು ರಾತ್ರಿ ನಾನು ಮತ್ತು ನನ್ನ ಗೆಳೆಯನಾದ ಮಹಮ್ಮದ ಖಮರಶಾ ತಂದೆ ಮಶಾಕ ಶಾ ಇಬ್ಬರು ಕೂಡಿಕೊಂಡು ಆತನ ಆಟೋರಿಕ್ಷಾದಲ್ಲಿ ಹುಮನಾಬಾದರಿಂಗರೋಡ ಕಡೆಯಿಂದ ಹಾಗರಗಾ ರಿಂಗರೋಡ ಕಡೆಗೆ ಬರುತ್ತಿರುವಾಗ ಟಿಪ್ಪು ಸುಲ್ತಾನ ಮೆಡಿಕಲ್ ಕಾಲೇಜ/ಆಸ್ಪತ್ರೆಯ ಎದರುಗಡೆ ರಿಂಗರೋಡ ಪಕ್ಕದ ನಾಲೆಯ ಹತ್ತಿರ ಕೆಲವು ಜನರು ಸೇರಿದ್ದರು ಆಗ ನಾವು ಕೂಡಾ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ವಯಸ್ಸು ಅಂದಾಜು 35-40 ವರ್ಷದ ವ್ಯಕ್ತಿ ಇದ್ದು ಹೆಸರು ವಿಳಾಸ ಗೊತ್ತಾಗಿರುವದಿಲ್ಲ ಸದರಿಯವನು ತಳ್ಳನೆಯ ಮೈಕಟ್ಟು ಹೊಂದಿದ್ದು ಅಶಕ್ತನಾಗಿ ಬಡಕಲು ಶರೀರ ಹೊಂದಿದ್ದು ಯಾವುದೋ ಕಾಯಿಲೆಯಿಂದ ಬಳಲುತಿದ್ದಂತೆ ಕಾಣುತ್ತದೆ ರೋಡಿನ ಪಕ್ಕದ ನಾಲೆಯ ಹತ್ತಿರ ಕುಳಿತಲ್ಲಿಯೇ ಬಿದ್ದು ಮಲಗಿದಲ್ಲಿಯೇ ಮೃತ ಪಟ್ಟಂತೆ ಕಂಡು ಬರುತ್ತದೆ. ಸದರಿಯವನು ತಳ್ಳನೆಯ ಮೈಕಟ್ಟು ಹೊಂದಿದ್ದು, ಕಣ್ಣುಗಳು ತೆರೆದಿದ್ದು, ಬಾಯಿಯಲ್ಲಿನ ಮೇಲಿನ 3-4 ಹಲ್ಲು ಬಿದ್ದಿರುತ್ತವೆ, ಮೈ ಮೇಲೆ ಯಾವುದೇ ಗಾಯವಗೈರೆ ಕಂಡು ಬಂದಿರುವದಿಲ್ಲಾ.  ಸದರಿಯವನು ಮುಸ್ಲಿಂನಂತೆ ಕಾಣುತ್ತಾನೆ , ಸದರಿಯವನ ಮೈ ಮೇಲೆ ಒಂದು ಖಾಕಿ ಕಲರ ಶರ್ಟ , ಒಂದು ಬ್ರೌನಕಲರ ಪ್ಯಾಂಟ, ಹಸಿರು ಕಲರ ಜ್ಯಾಂಗಾ ಧರಿಸಿರುತ್ತಾನೆ. ಇತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ . ಆದುರಿಂದ ಸದರಿ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಬಳಲುತಿದು , ಆಶಕ್ತನಾಗಿದ್ದು ,ರೋಡಿನ ಪಕ್ಕದಲ್ಲಿ ಕುಳಿತಲ್ಲೆಯೇ ಬಿದ್ದು ಮೃತ ಪಟ್ಟಂತೆ ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.