Police Bhavan Kalaburagi

Police Bhavan Kalaburagi

Saturday, May 8, 2021

BIDAR DISTRICT DAILY CRIME UPDATE 08-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-05-2021

 

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 54/2021, ಕಲಂ. 18(ಸಿ) ಡ್ರಗ್ಸ್‌ & ಕಾಸ್ಮಿಟಿಕ್ ಕಾಯ್ದೆ 1940, ಕಲಂ. 7 ಅಗತ್ಯ ವಸ್ತುಗಳ ಕಾಯ್ದೆ ಮತ್ತು ಕಲಂ. 409, 420 ಜೊತೆ 34 ಐಪಿಸಿ :-

ದಿನಾಂಕ 06-05-2021 ರಂದು ಫಿರ್ಯಾದಿ ಶರಣಬಸಪ್ಪ ಹಣಮನಾಳ ತಂದೆ ಸತ್ಯಪ್ಪ ವಯ: 47 ವರ್ಷ, : ಸಹಾಯಕ ಔಷಧ ನಿಯಂತ್ರಕರು, ಬೀದರ ರವರಿಗೆ ವೀರಣ್ಣ ಮಗಿ ಪಿಎಸ್ಐ ನೂತನ ನಗರ ಪೊಲೀಸ ಠಾಣೆ ಬೀದರ ರವರು ಕರೆ ಮಾಡಿ ನೂತನ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿರುವ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯ ಹತ್ತಿರ  ಇಬ್ಬರು ಜನರು ಕೂಡಿಕೊಂಡು ಕೋವಿಡ್-19 ರೋಗಿಗಳಿಗೆ ಕೋಡುವ Remdesivir ಎಂಬ ಚುಚ್ಚು ಮದ್ದನ್ನು ಯಾವುದೇ ಅನುಮತಿ ಇಲ್ಲದೇ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ತನಗೆ ಮಾಹಿತಿ ಬಂದಿದ್ದು ದಾಳಿ ಕುರಿತು ಹೋಗಲು ನೀವು ಬೀದರ ನೂತನ ನಗರ ಪೊಲೀಸ ಠಾಣೆಗೆ ಬನ್ನಿ ಅಂತ ತಿಳಿಸಿದ ಕೂಡಲೆ ಫಿರ್ಯಾದಿಯವರು ಕೂಡಲೆ ನೂತನ ನಗರ ಪೊಲೀಸ ಠಾಣೆಗೆ ಬಂದು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯರೊಡನೆ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲಾಗಿ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯ ಮೇನ ಗೇಟ ಬಳಿ ಆರೋಪಿತರಾದ 1) ಅಭಿಷೇಕ ತಂದೆ ಯಾದಯ್ಯಾ ಮಡಿವಾಳ ವಯ: 21 ವರ್ಷ, ಜಾತಿ: ಮಡಿವಾಳ, ಸಾ: ಕುಂಬಾರವಾಡ ಬೀದರ, 2) ಆಸಿಫ್ ಅಹ್ಮದ ತಂದೆ ಅಜರ ಅಹ್ಮದ ವಯ: 21 ವರ್ಷ, ಜಾತಿ: ಮುಸ್ಲೀಂ, ಸಾ: ಹಳ್ಳದಕೇರಿ, ಬೀದರ ಇವರು ತಮ್ಮ ಕೈಯಲ್ಲಿ Remdesivir ಚುಚ್ಚು ಮದ್ದು ಹಿಡಿದುಕೊಂಡು ಹೋಗಿ ಬರುವವರಿಗೆ ಹೆಚ್ಚಿಗೆ ಹಣ ಕೊಟ್ಟು ತೆಗೆದುಕೊಳ್ಳುತ್ತೀರಾ? ಎಂಬ ಮಾತು ಖಾತ್ರಿ  ಪಡಿಸಿಕೊಂಡು ಪೊಲೀಸರು ಅವರಿಗೆ ಸುತ್ತುವರೆದು ದಾಳಿ ಮಾಡಿ ಹಿಡಿದು ವಿಚಾರಿಸಿದಲ್ಲಿ ಅವರು ಕೋವಿಡ್-19 ಪಾಜಿಟಿವ್ ರೋಗಿಗಳಿಗೆ ನೀಡುವ Remdesivir ಎಂಬ ಚುಚ್ಚು ಮದ್ದನ್ನು ಮುಖ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ, ನಾವು ಈಗ 24,000/- ರೂ. ಗಳಿಗೆ ಮಾರಾಟ ಮಾಡುತ್ತಿದ್ದೇವೆ ಅಂತ ತಿಳಿಸಿದ್ದು, ಆಗ ಪೊಲೀಸರು ಅವರಿಗೆ ನಿಮಗೆ ಮಾರಾಟ ಮಾಡಲು ಪರವಾನಿಗೆ ಇದೇಯೇ? ಹೇಗೆ? ಎಂದು ಕೆಳಲಾಗಿ ನಮ್ಮ ಹತ್ತಿರ ಯಾವುದೇ ಪರವಾನಿಗೆ ಇಲ್ಲಾ ಅಂತ ತಿಳಿಸಿದರು. ನಂತರ ಅವರ ಹತ್ತಿರ ಪರಿಶಿಲಿಸಿ ನೋಡಲಾಗಿ ಒಂದು Remdesivir ಚುಚ್ಚು ಮದ್ದು ಇದ್ದು ಅದರ ಮೇಲೆ DESREM ಎಂಬ ಟ್ರೆಡ್ ಮಾರ್ಕ ಇರುತ್ತದೆ, ಈ ಬಾಟಲಿಯ ಬ್ಯಾಚ ನಂ. 7606373 ಇದ್ದು  ಮುಖ ಬೆಲೆ 3400/- ರೂ ಇರುತ್ತದೆ, ಇದರ ತಯಾರಿಕಾ ದಿನಾಂಕ 05-04-2021 ಇದ್ದು, ಎಕ್ಸಪೈರಿ ದಿನಾಂಕ 04-10-2022 ಇರುತ್ತದೆ ಹಾಗೂ Mylan Laboratories Limited NO. 19-A, Plot No. 284-B/1, Bommasandra – Jigani Link Road Industrieal Area Anekal taluka Banglore 560105 ಅಂತ ತಯಾರಿಕೆ ಸ್ಥಳ ಇರುತ್ತದೆ ಮತ್ತು ಆರೋಪಿ ಆಸಿಫ್ ಇವನ ಹತ್ತಿರ ಪರಿಶಿಲಿಸಿ ನೋಡಲಾಗಿ ಒಂದು Remdesivir ಚುಚ್ಚು ಮದ್ದು 100 ಎಂ.ಜಿ/ವೈಲ್ ವುಳ್ಳ ಬಾಟಲ್ ಇರುತ್ತದೆ, ಅದು DESREM ಎಂಬ ಟ್ರೆಡ್ ಮಾರ್ಕ ಹೊಂದಿರುತ್ತದೆ, ಈ ಬಾಟಲಿಯ ಬ್ಯಾಚ ನಂ. 7606373, ಮುಖ ಬೆಲೆ 3400/- ರೂ, ಇದರ ತಯಾರಿಕಾ ದಿನಾಂಕ 05-04-2021 ಎಕ್ಸಪೈರಿ ದಿನಾಂಕ 04-10-2022 ಇರುತ್ತದೆ, ಇದು Mylan Laboratories Limited NO. 19-A Plot No. 284-B/1 Bommasandra – Jigani Link Road Industrieal Area Anekal taluka Banglore 560105 ಅಂತ ತಯಾರಿಕೆ ಸ್ಥಳ ಹೊಂದಿರುತ್ತದೆ, ಇವುಗಳನ್ನು ನೀವು ಎಲ್ಲಿಂದ ತಂದು ಕಾಳಸಂತೆಯಲ್ಲಿ ಮಾರಾಟ ಮಾರಾಟ ಮಾಡುತ್ತಿದ್ದಿರಿ ಎಂದು ಕೇಳಿದಾಗ ಆಸಿಫನು ತಿಳಿಸಿದ್ದೆನೆಂದರೆ ನನಗೆ ವಿಜಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಗೆಳೆಯ ಅಭಿಷೇಕ ನೀಡಿದ್ದು ಹಾಗೂ ಅಭಿಷೇಕನ ಮಾಲೀಕರಾದ ಡಾ: ವಿಜಯಾ ಹತ್ತಿ ಇವರು 24,000/- ರೂ. ಯಂತೆ 2 ಇಂಜೆಕ್ಷನಗಳನ್ನು ಮಾರಾಟ ಮಾಡಿಕೊಂಡು ಬಾ ಅಂತ ತಿಳಿಸಿರುತ್ತಾರೆಂದು ನನಗೂ ಸಹ ಅದರಲ್ಲಿ ಒಂದು ಇಂಜೆಕ್ಷನ ಮಾರಾಟ ಮಾಡಿಕೊಡು ಎಂದು ತಿಳಿಸಿದ್ದಾನೆಂದು ಪೊಲೀಸರ ಎದುರು ತಿಳಿಸಿದನು, ಒಂದು Remdesivir Injection ನಾವು ಮಾರಾಟ ಮಾಡಿದರೆ ನನಗೆ 2,000/- ರೂ. ವಿಜಯಾ ಆಸ್ಪತೆಯ ಮಾಲೀಕ ಡಾ: ವಿಜಯಾ ಮೇಡಮ ಅವರಿಂದ ಕಮಿಷನ್ ಕೊಡಿಸುತ್ತೆನೆಂದು ಅಭಿಷೇಕ ಹೆಳಿರುತ್ತಾನೆ, ನಂತರ ಆರೋಪಿ ಅಭಿಷೇಕ ಈತನಿಗೆ ವಿಚಾರಿಸಲಾಗಿ ತಿಸಿದ್ದೆನೆಂದರೆ ನನಗೆ ಇಂದು ವಿಜಯಾ ಆಸ್ಪತ್ರೆಯ ಮಾಲೀಕರಾದ ಡಾ: ವಿಜಯಾ ಹತ್ತಿ ಇವರು 24,000/- ರೂ.ಯಂತೆ ಮಾರಾಟ ಮಾಡಿಕೊಂಡು ಬಾ ಅಂತ 2 ಇಂಜೆಕ್ಷನಗಳು ನೀಡಿರುತ್ತಾರೆಂದು ತಿಳಿಸಿದನು, ಇದರಲ್ಲಿ ಒಂದು Remdesivir Injection ಅನ್ನು ಸುರಕ್ಷಾ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುವ ನನ್ನ ಗೆಳೆಯ ಆಶಿಫ ಅಹ್ಮದನಿಗೆ ನೀಡಿದ್ದು ಆತನು ಸಹ ನನ್ನ ಪಕ್ಕದಲ್ಲಿಯೇ ನಿಂತಿದ್ದಾನೆ ನೋಡಿ ಎಂದು ತಿಳಿಸಿದನು ಹಾಗೂ ಅದನ್ನು ನನಗೆ ಮಾರಾಟ ಮಾಡಿಕೊಡು ನಿನಗೆ 2000/- ರೂ. ಕಮಿಷನ್ ಕೊಡಿಸುತ್ತೆನೆಂದು ಕೂಡಾ ಹೆಳಿರುತ್ತೆನೆ ಮತ್ತು ವಿಜಯಾ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರನಲ್ಲಿ ಒಳರೋಗಿಯಾಗಿ ದಾಖಲಾಗುವ ರೋಗಿಗಳಿಗೆ ಡಾ: ವಿಜಯಾ ರವರು ನಮ್ಮಲ್ಲಿ Iಟಿರಿeಛಿಣioಟಿ ಕೊರತೆ ಇದೆ ಅಂತ ಹೇಳಿ ನನ್ನ ಮೋಬೈಲ್ ನಂ. ಅವರಿಗೆ ಕೊಟ್ಟು ಬೇಕಾದರೆ ಇವರನ್ನು ಸಂಪರ್ಕಿಸಿ ನಿಮಗೆ Remdesivir Injection ಸಿಗುತ್ತವೆ ಅಂತ ಅವರಿಗೆ ಹೇಳಿ ಅವರಿಗೆ ಎಷ್ಟು ಬೇಕು ಅಂತ ತಿಳಿದುಕೊಂಡು ಅಷ್ಟು Remdesivir Injection ಬಾಟಲಗಳನ್ನು ನನ್ನ ಕೈಗೆ ಕೊಟ್ಟು  ಯಾವುದೋ ಒಂದು ಸರ್ಕಲನಲ್ಲಿ ನಿಂತುಕೊ ನಮ್ಮ ವಿಜಯಾ ಆಸ್ಪತ್ರೆಯ ಕೋವಿಡ್ ಕೇರ ಸೆಂಟರನಲ್ಲಿ ಆಡ್ಮಿಟ್ ಆಗಿರುವ ರೋಗಿಯ ಸಂಬಂಧಿಕರು ನಿನಗೆ ಕರೆ ಮಾಡುತ್ತಾರೆ ಆಗ ಅವರಿಗೆ ನೀನಿದ್ದ ಸ್ಥಳಕ್ಕೆ ಕರೆಯಿಸಿಕೊಂಡು ಕನಿಷ್ಠವೆಂದರೆ ಒಂದು ಇಂಜೆಕ್ಷನಗೆ 20,000/ ರೂ.ಯಂತೆ ಕೊಟ್ಟು ಆ ಹಣವನ್ನು ನನಗೆ ತಂದುಕೊಡು ಅಂತ 4-5 ಬಾರಿ ಈ ತರಹ ಸೂಮಾರು ಅಂದಾಜು 18 ರಿಂದ 20 Remdesivir Injection ನನ್ನಿಂದ ಮಾರಾಟ ಮಾಡಿಸಿ ನಮ್ಮ ವಿಜಯಾ ಆಸ್ಪತ್ರೆಗೆ ಜಿಲ್ಲಾ ಔಷಧ ನಿಯಂತ್ರಣ ಕೊಠಡಿಯಿಂದ ರೋಗಿಗಳಿಗೆ 3400/- ರೂ.ಗಳಿಗೆ ಕೊಡುವ ಇಂಜೆಕ್ಷನಗಳನ್ನು ನನ್ನನ್ನು ಏಜೆಂಟನನ್ನಾಗಿ ಬಳಸಿಕೊಂಡು ಸರಕಾರ ನಿಗದಿ ಪಡಿಸಿದ್ದಕ್ಕಿಂತ 8 ಪಟ್ಟು ಹಣವನ್ನು ಪಡೆದು ರೋಗಿಗಳಿಗೆ ಮೋಸ ಮಾಡಿರುತ್ತಾರೆ, ವಿಜಯಾ ಮೇಡಮ್ ಅವರಿಗೆ ನಾನು ಎಷ್ಟು ಬಾರಿ ಮಾರಾಟ ಮಾಡಿ ಹಣ ಕೊಟ್ಟಿದ್ದೆನೆ ಎಂಬುದು ನನ್ನ ನೋಟ್ ಬುಕನಲ್ಲಿದೆ ಅವರು ಆಯಾ ದಿನಾಂಕಗಳಂದು ಹಣ ಪಡೆದು ಅದಕ್ಕೆ ಸಹಿ ಹಾಕಿರುತ್ತಾರೆ ಎಂದು ತಿಳಿಸಿದನು, ಅದರಂತೆ ನಂತರ ಪಂಚರ ಸಮಕ್ಷಮ ಪೊಲೀಸರು ಅವರ ಅಂಗ ಜಡತಿ ಮಾಡಿದಲ್ಲಿ ಅಭಿಷೇಕ ಹತ್ತಿರ ಒಂದು ನೀಲಿ ಬಣ್ಣದ ಓನ್ ಪ್ಲಸ್ ಮೋಬೈಲ್ ಇರುತ್ತದೆ ಹಾಗೂ ಫಿರ್ಯಾದಿವಯರು  ಸದರಿ Remdesivir Injection ಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಈ ಎರಡು ಇಂಜೆಕ್ಷನಗಳು ಕರ್ನಾಟಕ ಸರಕಾರದಿಂದ ತಯಾರಾಗಿದ್ದು ಮತ್ತು ಒರಿಜನಲ್ ಇಂಜೆಕ್ಷನಗಳಾಗಿರುತ್ತದೆ, ಕಾಳಸಂತೆಯಲ್ಲಿ ಮಾರತಕ್ಕದಲ್ಲ ಎಂದು ತಿಳಿಸಿದರು, ಸದರಿ ಮೊಬೈಲ್ ಮತ್ತು Remdesivir Injection ಬಾಟಲಿಗಳು ಜಪ್ತಿ ಮಾಡಿಕೊಂಡು, ಆರೋಪಿತರಿಗೆ ಪೊಲೀಸರು ತಾಬೆಗೆ ತೆಗೆದುಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿ ಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 18/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 06-05-2021 ರಂದು ಫಿರ್ಯಾದಿ ಮಹ್ಮಅಮೇರ ಮಕ್ಸೂದ ತಂದೆ ಎಮ್. ಇಫ್ತೆಕಾರ ವಯ: 28 ವರ್ಷ, ಸಾ: ಗುರುನಾನಕ ಇಂಜನೇರಿಂಗ ಕಾಲೇಜ ಎದುರಿಗೆ ಮೈಲೂರ ಬೀದರ ರವರು ಮನೆಯ ಮುಂದೆ ನಿಂತಾಗ ಗುರುನಾನಕ ಇಂಜನೇರಿಂಗ ಕಾಲೇಜ ಎದರಿಗೆ ಜನ ಸೇರಿರುವದನ್ನು ನೋಡಿ ಫಿರ್ಯಾದಿಯು ಹೋಗಿ ನೋಡಲು ಒಬ್ಬ 20 ರಿಂದ 25 ವರ್ಷದ ಹುಡುಗ ಮುರ್ಚ್ಛೆ ಹೋಗಿ ನರಳುತ್ತಿದ್ದು ಅವನು ಸರಾಯಿ ಕುಡಿದಿರಬೇಕು ಅಂತ ತಿಳಿದು ಸದರಿ ವ್ಯಕ್ತಿ ಯಾರು ಅಂತ ಜನರಿಗೆ ಕೇಳಿದರೆ ಯಾರು ಅವನಿಗೆ ಗುರುತಿಸಿರುವದಿಲ್ಲಾ, ನಂತರ ಫಿರ್ಯಾದಿಯು 108 ಅಂಬುಲೇನ್ಸಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿರುವದಿಲ್ಲಾ ನಂತರ ಅವನು ನರಳುತ್ತಿರುವದನ್ನು ನೋಡಿ ಯಾವುದೆ ವಾಹನ ಸಿಗದೇ ಇರುವದರಿಂದ ಫಿರ್ಯಾದಿಯು ತನ್ನ ಕಾರದಲ್ಲಿ ತೆಗೆದುಕೊಂದು ಹೋಗಿ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಇರುತ್ತದೆ, ನಂತರ ಆತನಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ, ಮೃತನು ಕುಡಿದ ಅಮಲಿನಲ್ಲಿ ಯಾವುದೊ ಕಾಯಿಲೆಯಿಂದ ಮೃತಪಟ್ಟಂತೆ ಕಂಡು ಬರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 07-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 24/2021, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ :-

ದಿನಾಂಕ 07-05-2021 ರಂದು ಬೀದರ ನಗರದ ಪೊಲೀಸ್ ಚೌಕ ಹತ್ತಿರ ಇರುವ ಹಳೆ ರೈಲ್ವೆ ಗೇಟ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಕು.ಸಂಗೀತಾ ಪಿ.ಎಸ್. (ಕಾ.ಸು) ಮಾರ್ಕೆಟ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಪೊಲೀಸ್ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಹಳೆ ರೈಲ್ವೆ ಗೇಟ ಹತ್ತಿರ ಆರೋಪಿ ವಿಲಾತಂದೆ ಅಬ್ದುಲ ರಹೆಮಾನ ವಯ: 50 ವರ್ಷ, ಜಾತಿ: ಮಾಂಗರವಾಡಿ, ಸಾ: ಲಾಲವಾಡಿ ಬೀದರ ಇತನು ತನ್ನ ಕೈಯಲ್ಲಿ ಒಂದು ಕ್ಯಾರಿ ಬ್ಯಾಗ ಹಿಡಿದುಕೊಂಡು ನಿಂತ್ತಿದ್ದು ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವನಿಗೆ ಕ್ಯಾರಿ ಬ್ಯಾಗನಲ್ಲಿ ಏನಿದೆ ಎಂದು ವಿಚಾರಿಸಲಾಗಿ, ಅವನು ಇದರಲ್ಲಿ ಸರಾಯಿ ಇದೆ ಎಂದು ತಿಳಿಸಿದಾಗ ಅವನಿಗೆ ನಿನ್ನ ಹತ್ತಿರ ಕಾಗದ ಪತ್ರಗಳು ಇವೆ ಎಂದು ವಿಚಾರಿಸಲಾಗಿ, ಅವನು ನನ್ನ ಹತ್ತಿರ ಸರಾಯಿಗೆ ಸಂಬಂಧಿಸಿಯಾವುದೇ ಕಾಗದ ಪತ್ರಗಳು ಇರುವುದಿಲ್ಲಾ ಎಂದು ತಿಳಿಸಿದ ಮೇರೆಗೆ ಪಂಚರ ಸಮಕ್ಷಮ ಸದರಿ ಪ್ಲಾಸ್ಟಿಕ ಕ್ಯಾರಿ ಬ್ಯಾಗ ಪರಿಶೀಲಿಸಿ ನೋಡಲಾಗಿದರಲ್ಲಿ 43 ಓರಿಜಿನಲ್ ಚಾಯಿಸ್ ವಿಸ್ಕಿ ಟೆಟ್ರಾ ಪ್ಯಾಕ 90 ಎಂ.ಎಲ್ ವುಳ್ಳವು ಅ.ಕಿ 1505/- ರೂ. ಇದ್ದು, ನಂತರ ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 55/2021, ಕಲಂ. 363 ಐಪಿಸಿ :-

ದಿನಾಂಕ 06-05-2021 ರಂದು 1700 ಗಂಟೆ ಸುಮಾರಿಗೆ ಫಿರ್ಯಾದಿ ಸುರೇಶ ತಂದೆ ಕೊಂಡಿಬಾ ಭೊಸ್ಲೆ ವಯ: 40 ವರ್ಷ, ಜಾತಿ: ಮರಾಠಾ, ಸಾ: ಜೆಪಿ ಕಾಲೋನಿ ರಾಜೇಶ್ವರ, ತಾ: ಬಸವಕಲ್ಯಾಣ ರವರ ಮಗಳಾದ ಸುವಾಸನಿ ಮತ್ತು ಆರಧ್ಯಾ ಇಬ್ಬರು ಅಂಗಡಿಗೆ ಹೋಗುವಾಗ ಮಗಳಾದ ಸುವಾಸನಿ ಇವಳಿಗೆ ಆರೋಪಿ ಖಾಜಾ ಇತನು ಒತ್ತಾಯದಿಂದ ಕಾರಿನಲ್ಲಿ ಕೂಡಿಸಿ ಅಪಹರಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 07-5-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.