ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ;
26-04-2021
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್.
ನಂ. 10/2021 ಕಲಂ 174 ಸಿ.ಆರ್.ಪಿ.ಸಿ. :-
ದಿನಾಂಕ 25/04/2021 ರಂದು
13:30 ಗಂಟೆಗೆ ಫಿರ್ಯಾದಿ ಶ್ರೀಮತಿ ವರ್ಷಾಬಾಯಿ ಗಂಡ ಸಂಜುಕುಮಾರ ಹೆಗಡೆ
ವಯ: 35 ವರ್ಷ ಜಾತಿ:ಗೊಲ್ಲಾ
ಉ: ಕೂಲಿಕೆಲಸ ಸಾ:ಮಲ್ಲಿಕಾರ್ಜುನ
ವಾಡಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಇವರ ಪತಿಯ ಹೆಸರಿಗೆ
ಸರ್ವೆ ನಂ 145 ರಲ್ಲಿ ಜಮೀನು ಇದ್ದು ಸದರಿ ಜಮೀನಿನಲ್ಲಿ ನೀರಾವರಿ ಮಾಡಿ ಈ ವರ್ಷ ಕಬ್ಬು ಮತ್ತು ತರಕಾರಿ
ಹಾಕಿದ್ದು ಇರುತ್ತದೆ. ದಿ: 25-04-2021 ರಂದು
ಮುಂಜಾನೆ 0900 ಗಂಟೆಗೆ ಇವರ ಗಂಡ ಸಂಜುಕುಮಾರ ತಂದೆ ಮಾರಿತು ಹೆಗಡೆ ವಯ: 45
ವರ್ಷ ರವರು ಹೋಲದಲ್ಲಿರುವ ಕಬ್ಬಿಗೆ ಮತ್ತು ತರಕಾರಿಗೆ ನೀರು ಬೀಡುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿದ್ದು
ನೀರು
ಚಾಲು ಮಾಡಲು ಹೋಗಿದಾಗ ಆಕಸ್ಮಿಕವಾಗಿ
ವಿದ್ಯುತ್ ಹತ್ತಿದರಿಂದ್ದ ಆಸ್ಪತ್ರೆಗೆ
ದಾಖಲಿಸಿದಾಗ ಆಸ್ಪತ್ರೆಯಲ್ಲಿ
ವೈಧ್ಯಾಧಿಕಾರಿಗಳು ಪರೀಕ್ಷೆ ಮಾಡಿ ನನ್ನ ಗಂಡ ಮೃತಪಟ್ಟ ಬಗ್ಗೆ ಖಚಿತಪಡಿಸಿರುತ್ತಾರೆ. ನನ್ನ
ಗಂಡನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ತರಹದ ದೂರು ಅಥವಾ ಸಂಶಯ ಇರುವುದಿಲ್ಲ ಅಂತಾ
ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 76/2021 ಕಲಂ
32, 34 ಕೆ.ಇ. ಕಾಯ್ದೆ ;_
ದಿನಾಂಕ 25/04/2021 ರಂದು 09:00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಕಲವಾಡಿ ಗ್ರಾಮದ ಪರಮೇಶ ತಂದೆ ಮಾರುತಿ
ಹುಲಿ ಇವನು ತನ್ನ ಅಂಗಡಿಯಲ್ಲಿ ಆಕ್ರಮವಾಗಿ ಮಧ್ಯ ಸಂಗ್ರಹಿಸಿಟ್ಟು ಮಾರಾಟ ಮಾಡುತಿದ್ದಾರೆ ಅಂತಾ
ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ವಿಚಾರಿಸಲು
ತನ್ನ ಹೆಸರು ಪರಮೇಶ ತಂದೆ ಮಾರುತಿ ಹುಲಿ ವಯ: 33 ವರ್ಷ ಜಾತಿ: ಎಸ್.ಟಿ ಗೊಂಡ ಉ: ಕಿರಾಣಾ ವ್ಯಾಪಾರ ಸಾ: ಕಲವಾಡಿ ಅಂತಾ
ತಿಳಿಸಿದ್ದು ಸದರಿಯವನ ವಶದಲ್ಲಿ ಇರುವ ಕಾಟನಗಳನ್ನು ಪರಿಶೀಲಿಸಿ ನೋಡಲು ಅದರಲ್ಲಿ 1] ಓರಿಜಿನಲ್ ಚಾಯ್ಸ ವಿಸ್ಕಿ ಎಂಬ ಹೆಸರಿನ
90 ಎಂ.ಎಲ್ ಉಳ್ಳ 96 ಪೇಪರ ಪೌಚ್ ಇದ್ದು ಒಂದೊಂದರ ಬೆಲೆ 35 ರೂ 13 ಪೈಸೆ ಇರುತ್ತದೆ. 2] ಓಲ್ಡ ಟವರನ್ ವಿಸ್ಕಿ ಎಂಬ ಹೆಸರಿನ 180 ಎಂ.ಎಲ್ ಉಳ್ಳ 48 ಪೇಪರ ಪೌಚ್ ಇದ್ದು ಒಂದೊಂದರ ಬೆಲೆ 86 ರೂ 75 ಪೈಸೆ ಇರುತ್ತದೆ. 3] ಯು.ಎಸ್ ವ್ಹಿಸ್ಕಿ ಹೆಸರಿನ 90 ಎಂ.ಎಲ್ ಉಳ್ಳ 67 ಬಾಟಲಗಳು ಇದ್ದು ಒಂದೊಂದರ ಬೆಲೆ 35 ರೂ 13 ಪೈಸೆ ಇರುತ್ತದೆ. 4] ಕಿಂಗ್ ಫೀಶರ ಸ್ಟ್ರಾಂಗ್ ಪ್ರಿಮಿಯಮ
ಎಂಬ ಹೆಸರಿನ 330
ಎಂ.ಎಲ್
ಉಳ್ಳ 10
ಟೀನಗಳು ಇದ್ದು ಒಂದೊಂದರ ಬೆಲೆ 85 ರೂ ಇರುತ್ತದೆ. 5] ಕಿಂಗ್ ಫೀಶರ ಸ್ಟ್ರಾಂಗ್ ಪ್ರಿಮಿಯಮ
ಎಂಬ ಹೆಸರಿನ 330
ಎಂ.ಎಲ್
ಉಳ್ಳ 13
ಬಾಟಲಗಳು
ಇದ್ದು ಒಂದೊಂದರ ಬೆಲೆ 85 ರೂ
ಇರುತ್ತದೆ. 6]
ಮೆಕ್
ಡ್ವಾಲ್ಸ ನಂ 1
ವ್ಹಿಸ್ಕಿ
ಎಂಬ ಹೆಸರಿನ 180
ಎಂ.ಎಲ್
ಉಳ್ಳ 11
ಬಾಟಲಗಳು
ಇದ್ದು ಒಂದೊಂದರ ಬೆಲೆ 198 ರೂ 23 ಪೈಸೆ ಇರುತ್ತದೆ. 7] ಇಂಪೆರಿಯಲ್ ಬ್ಲ್ಯೂ ಎಂಬ ಹೆಸರಿನ 180 ಎಂ.ಎಲ್ ಉಳ್ಳ 14 ಬಾಟಲಗಳು ಇದ್ದು ಒಂದೊಂದರ ಬೆಲೆ 198 ರೂ 21 ಪೈಸೆ ಇರುತ್ತದೆ. ಅಲ್ಲದೆ ಅವನ
ವಶದಲ್ಲಿ ಮಧ್ಯ ಮಾರಾಟ ಮಾಡಿದ ಹಣ 400 ರೂ ಇದ್ದವು ಎಲ್ಲಾ ಸೇರಿ ಅ:ಕಿ: 17200 ರೂ ದಷ್ಟು ಜಪ್ತಿ ಮಾಡಿಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ
ಪೊಲಿಸ್ ಠಾಣೆ ಅಪರಾಧ ಸಂಖ್ಯೆ 49/2021 ಕಲಂ 269, 270, 271 ಐಪಿಸಿ ಮತ್ತು 5(4) ಕರ್ನಾಟಕ ಎಪಿಡೆಮಿಕ್
ಡಿಸಿಆರ್ ಕಾಯ್ದೆ 2020 :-
ದಿನಾಂಕ:
25-04-2021 ರಂದು 1700 ಗಂಟೆಗೆ ಮಹೆಂದ್ರಕುಮಾರ್ ಪಿಎಸ್ಐ ರವರು ಕೋವಿಡ್ 19 ನ 2 ನೇ ಅಲೆಯನ್ನು
ತಡೆಗಟ್ಟುವ ಸಲುವಾಗಿ ಸರ್ಕಾರದ ಆದೇಶ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರ ಆದೇಶ ಸಂಖ್ಯೆ ಕಂ;/ಎಮ್.ಎ.ಜಿ./ಸಿ.ಆರ್.08/2021-22 ನೇದ್ದರಂತೆ
ಸಾರ್ವಜನಿಕರಿಗೆ ಕರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ದಿ:
21-04-2021 ರಂದು ರಾತ್ರಿ 9 ಗಂಟೆಯಿಂದ ದಿ: 04-05-2021 ರಂದು ಬೆಳ್ಳಿಗ್ಗೆ 0600 ಗಂಟೆಯ ವರೆಗೆ
ರಾತ್ರಿ ಕರ್ಫ್ಯೂ ವಿಧಿಸಿದ್ದು ಹಾಗೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 0600 ಗಂಟೆಯವರೆಗೆ
ವಿಕೆಂಡ್ ಕರ್ಫ್ಯೂ ಆದೇಶಿಸಿದ್ದು ಇರುತ್ತದೆ. ಹಿಗಿರುವಲ್ಲಿ ದಿ: 25-04-2021 ರಂದು ಪಿಎಸ್ಐ ರವರು
ಸಿಬ್ಬಂದಿಯೊಂದಿಗೆ ಪೆಟ್ರೋಲಿಂಗ್ ಮಾಡುತ್ತ ಶಾಮಪೂರ, ಸಿದ್ದಾಪೂರವಾಡಿ ಗ್ರಾಮಗಳಿಗೆ ಭೇಟಿ ನೀಡಿ ನಂತರ
1540 ಗಂಟೆಗೆ ಭಾತಂಬ್ರಾ ಕಡೆಗೆ ಹೋದಾಗ ಭಾಲ್ಕಿ ಭಾಂತಾಂಬ್ರ ರೋಡಿಗೆ ಇರುವ ಲಕ್ಷ್ಮಿ ಭಾಂಡೆ ಅಂಗಡಿಯಲ್ಲಿ
ಅದರ ಮಾಲಿಕ 5-6 ಜನರಿಗೆ ಕೂಳಿತುಕೊಳ್ಳಲು ಅವಕಾಶ ಮಾಡಿಕೊಟ್ಟು ಮಾಸ್ಕ್ ಹಾಕಿಕೊಳ್ಳಲದೆ ಮತ್ತು ಯಾವುದೆ
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸದರಿ ವ್ಯಕ್ತಿಗಳಿಗೆ ಭಾಂಡೆ ಮಾರಾಟ ಮಾಡುತ್ತಿರುವುದನ್ನು ನೋಡಿ
ಅವನಿಗೆ ವಿಚಾರಿಸಲು ಹೋದಾಗ ಖರಿದಿ ಮಾಡಲು ಬಂದಿದ್ದ ವ್ಯಕ್ತಿಗಳು ಓಡಿ ಹೋಗಿದ್ದು ನಂತರ ಅಂಗಡಿಯಲ್ಲಿರುವ ಮಾಲಿಕನಿಗೆ ಆತನ ಹೆಸರು ಮತ್ತು ವಿಳಾಸ
ವಿಚಾರಿಸಲು ಆತ ತನ್ನ ಹೆಸರು ವಿನಾಯಕ ತಂದೆ ತುಳಸಿರಾಮ ಗೊಟಕರ ವಯ: 40 ವರ್ಷ, ನಂತರ ಅಂಗಡಿಯ ಮುಂದೆ
ನಿಂತಿದ್ದ ವ್ಯಕ್ತಿಗೆ ವಿಚಾರಿಸಲು ಆತನು ತನ್ನ ಹೆಸರು ಅಬ್ದುಲ ಸಿರಾಜ ತಂದೆ ಅಬ್ದುಲ ಖಾದರ ವಯ:
45 ವರ್ಷ, ಸಾ: ಭಾಂತಂಬ್ರ, 2. ದಿಲಿಪ ತಂದೆ
ಶಿವಪ್ಪ ಭಂಡಾರೆ ವಯ: 44 ವರ್ಷ,ಇವರ ಸಮಕ್ಷಮ ಫೊಟೊ ಮತ್ತು ವಿಡಿಯೊಗ್ರಾಫಿ ಮಾಡಿಕೊಂಡು ಅಂಗಂಡಿಯ ಮಾಲಿಕನಾದ
ವಿನಾಯಕ ತಂದೆ ತುಳಸಿರಾಮ ಗೋಟಕರ ವಯ: 40 ವರ್ಷ, ಸಾ: ಜೊಷಿಗಲ್ಲಿ ಭಾಲ್ಕಿ ರವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 77/2021 ಕಲಂ 269, 270, 271 ಐಪಿಸಿ ಮತ್ತು 5(4) ಕರ್ನಾಟಕ ಎಪಿಡೆಮಿಕ್ ಡಿಸಿಸ್ ಕಾಯ್ದೆ 2020 :-
ದಿನಾಂಕ 25/04/2021 ರಂದು 13:00 ಗಂಟೆಗೆ ಫಿರ್ಯಾದಿ ಅಮರ ಕುಲಕರ್ಣಿ ಪಿ.ಎಸ್,ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರು
ಜೊತೆಯಲ್ಲಿ ಸಿಬ್ಬಂದಿಯೊಂದಿಗೆ ಪೇಟ್ರೊಲಿಂಗ ಕರ್ತವ್ಯ ಮಾಡುತ್ತಾ ಠಾಣೆ ಜೀಪ ನಂ ಕೆಎ 38 ಜಿ 268 ನೇದರಲ್ಲಿ ಕುಳಿತು ಹೋರಟು ಹೋಗುವಾಗ
ದಿಲೀಪ ಎಪಿಸಿ 138 ರವರು ಜೀಪನ್ನು ಚಲಾಯಿಸುತ್ತಿದ್ದು
ಬಸ್ ನಿಲ್ದಾಣ ,
ಬಿ,ಕೆ,ಐ,ಟಿ ಕಾಲೇಜ ,ಬಸವ ನಗರ ,ಕಲವಾಡಿ ನಂತರ ಹಳೆ ಭಾಲ್ಕಿ ,ಬೀದರ ಬೇಸ್ ,ಅಶೋಕ ನಗರ ,ಚೌಡಿ ಕಡೆಗೆ ತಿರುಗಾಡಿ
ಸಾರ್ವಜನಿಕರಿಗೆ ಕೋವಿಡ-2019 ನೇದರ
ಬಗ್ಗೆ ಅರಿವು ಮೂಡಿಸುತ್ತಾ ಮರಳಿ ಕುಂಬೇಶ್ವರ ಗಲ್ಲಿ ಹತ್ತೀರ ಬಂದಾಗ ಕುಂಬೇಶ್ವರ ದೇವಾಲಯದಲ್ಲಿ 11:30 ಗಂಟೆಗೆ ಒಂದು ಮದುವೆಯ ಕಾರ್ಯಕ್ರಮ
ನಡೆಯುತಿರುವ ಬಗ್ಗೆ ಮಾಹಿತಿ ತಿಳಿದು ಕುಂಬೇಶ್ವರ ದೇವಾಲಯದಲ್ಲಿ ಹೋಗಿ ನೋಡಲು ಮಾನ್ಯ
ಜಿಲ್ಲಾಧಿಕಾರಿಗಳು ಬೀದರ ರವರು ಹೊರಡಿಸಿದ ಆದೇಶ ಸಂಖ್ಯೆ:ಕಂ/ಎಂ.ಎ.ಜಿ/ ಸಿ.ಆರ್-08/2021-22/ದಿನಾಂಕ22/04/2021 ನೇದರಲ್ಲಿ ಮದುವೆಯ ಕಾಲಕ್ಕೆ 50 ಜನರಿಗೆ ಸೇರಲು ಮಾತ್ರ ಅವಕಾಶ ಇದ್ದು
ಆದೇಶವನ್ನು ಉಲ್ಲಂಘಿಸಿ ಮದುವೆಯ ಕಾರ್ಯಕ್ರಮದಲ್ಲಿ ಸುಮಾರು 200 ಕಿಂತ ಹೆಚ್ಚು ಜನರು ಭಾಗವಹಿಸಿದ್ದು ಈ
ಮದುವೆಯ ಕಾರ್ಯಕ್ರಮವನ್ನು ಯಾರು ಆಯೋಜಿಸಿದ್ದು ಅಂತಾ
ವಿಚಾರಿಸಲು 1] ಶಿವಾಜಿರಾವ
ತಂದೆ ಧೊಂಡಿಬಾ ಜಾಧವ ವಯ:55 ವರ್ಷ ಜಾತಿ: ಮರಾಠ ಉ: ಒಕ್ಕಲುತನ ಸಾ: ಹರಕಾರ ಗಲ್ಲಿ ಭಾಲ್ಕಿ 2] ಕೈಲಾಸ ಶಿಂಧೆ ಗಜಾನನ ಟೆಂಟ ಹೌಸ
ಮಾಲೀಕರು ಭಾಲ್ಕಿ ಅಂತಾ ತಿಳಿಸಿದ್ದು ಇರುತ್ತದೆ. ಸದರಿಯವರಿಗೆ ಮದುವೆ ನಿಲ್ಲಿಸಲು ಹೆಳಿದಾಗ ಅಡೆ
ತಡೆ ಉಂಟು ಮಾಡಿದ್ದು ಇರುತ್ತದೆ. ಕಾರಣ ಮದುವೆಯ ಆಯೋಜಕರು ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ
ರೋಗದ ಸೋಂಕನ್ನು ಹರಡುವ ಸಂಭವವಿರುವ ನಿರ್ಲಕ್ಷ ಕೃತ್ಯ ಮತ್ತು ಜನರ ಪ್ರಾಣಕ್ಕೆ ಅಪಯಕಾರಿಯಾದ
ಕೋವಿಡ್ ರೋಗದ ಸೋಂಕನ್ನು ಹರಡುವ ಉದ್ದೇಶ, ರೋಗ ನಿರೋದಕ ನಿರ್ಬಂದಕ ನಿಯಮವನ್ನು ಉಲ್ಲಂಘಿಸುವುದು ಮತ್ತು ಸಕಾರದ ಆದೇಶ
ಉಲ್ಲಂಘಿಸುವದು ಮತ್ತು ಮದುವೆ ತಡೆಯಲು ಹೋದಾಗ ಅಡೆ ತಡೆ ಉಂಟು ಮಾಡಿದ್ದು ಇರುತ್ತದೆ.
ಆದರಿಂದ ಸದರಿಯವರ ವಿರುದ್ದ ಪ್ರಕರಣ
ದಾಖಲಿಸಿಕೊಳ್ಳಲಾಗಿದೆ.