Police Bhavan Kalaburagi

Police Bhavan Kalaburagi

Saturday, May 4, 2019

KALABURAGI DISTRICT REPORTED CRIMES

ಕ್ರಿಕೇಟ ಬೆಟ್ಟಿಂಗನಲ್ಲಿ ತೊಡಗಿದವನ ಬಂಧನ :
ಚೌಕ ಠಾಣೆ : ದಿನಾಂಕ. 03.05.2019 ರಂದು ಲೋಹಾರಗಲ್ಲಿಯ ಬಾಲಾಜಿ ಕಲ್ಯಾಣ ಮಂಟಪದ ಮುಂದೆ ರೋಡಿನಲ್ಲಿ ಒಬ್ಬ ಮನುಷ್ಯನು ಐಪಿಎಲ್‌ ಕ್ರಿಕೇಟ ಮ್ಯಾಚ ಕೆಕೆಆರ್ ಮತ್ತು ಪಂಜಾಬ ಕಿಂಗ್ಸ ಲೆವನ್ ಟೀಮ್‌ಗಳ ಮದ್ಯ ನಡೆಯುತ್ತಿರುವ ಮ್ಯಾಚ್‌‌ನಲ್ಲಿ ಕ್ರಿಕೇಟ ಬೆಟ್ಟಿಂಗ್‌ ದಂದೆ ನಡೆಸುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿಐ ಚೌಕ ಠಾಣೆ  ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲೋಹಾರಗಲ್ಲಿಯ ಬಾಲಾಜಿ ಕಲ್ಯಾಣ ಮಂಟಪ ಹತ್ತಿರದಲ್ಲಿ ನಿಂತು ನೋಡಲು ಒಬ್ಬ ಮನುಷ್ಯನು ಬಾಲಾಜಿ ಕಲ್ಯಾಣ ಮಂಟಪದ ಮುಂದಿನ ರೋಡಿನ ಮೇಲೆ ನಿಂತು ಮೊಬೈಲ್‌ ಫೋನ್‌ ಮುಖಾಂತರ ಐಪಿಎಲ್‌ ಕ್ರಿಕೇಟ ಮ್ಯಾಚನಲ್ಲಿನ ನಡೆಯುತ್ತಿರುವ ಒಂದು ಬಾಲಿಗೆ 6 ಹೊಡೆದರೆ  3000/-, 4 ಹೊಡೆದರೆ 2000/-ರೂ ಅಂತ ಮಾತನಾಡುವದನ್ನು ಖಾತ್ರಿ ಪಡಿಸಿಕೊಂಡು ಪಂಚರ ಸಮೇತ ದಾಳಿ ಮಾಡಿ ಬೆಟ್ಟಿಂಗ್‌ ದಂದೆಕೊರನಿಗೆ ಹಿಡಿದು ಅವನ ಹೆಸರು ವಿಚಾರಿಸಲಾಗಿ ರಾಜೀವ ತಂದೆ ಶಿವರಾಯ ಮೂಗನೂರ, ಸಾ: ಜಗತ ಮೇಲಿನಕೇರಿ ಕಲಬುರಗಿ ಅಂತಾ ತಿಳಿಸಿದ್ದು, ಪುನಃ ವಿಚಾರಣೆಗೆ ಒಳಪಡಿಸಲಾಗಿ ತನಗೆ ಕ್ರಿಕೇಟ ಬೆಟ್ಟಿಂಗ ದಂಧೆಯನ್ನು ನಡೆಸುವಂತೆ ಭಿ,ವಿರುಪಾಕ್ಷ ಮತ್ತು ಮಲಬು ಮಲ್ಲು ಸಾ: ಕಲಬುರಗಿ ಇವರು ಹೇಳಿದ್ದು ಬೆಟ್ಟಿಂಗ ನಡೆಸಿದ ಹಣ ಅವರಿಗೆ ಕೊಡುತ್ತೇನೆ ಅಂತಾ ತಿಳಿಸಿದನು. ಆಗ ಅವನಿಗೆ ಹಿಡಿದು ಅಂಗ ಶೋದನೆ ಮಾಡಲು ಸದರಿಯವನ ಹತ್ತಿರ ಕೃತ್ಯಕ್ಕೆ ಬಳಿಸಿದ 1) ಒಂದು ಲಾವಾ ಕಂಪನಿಯ ಮೊಬೈಲ್‌ ಫೊನ್‌ ಅ:ಕಿ:500/- ರೂ. ಮತ್ತು ಬೆಟ್ಟಿಂಗ ಜೂಜಾಟಕ್ಕೆ ಬಳಸಿದ ನಗದು ಹಣ 8,000/- ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಶೋಕ ನಗರ ಠಾಣೆ : ದಿನಾಂಕ:03.05.2019 ರಂದು ಠಾಣಾ ವ್ಯಾಪ್ತಿಯ ಜಿಡಿಎ ಲೇಔಟದಲ್ಲಿರುವ ಸಾಯಿ ಶಕ್ತಿ  ಲಾಡ್ಜಿನ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ  ಪಿಐ. ಅಶೋಕ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜಿಡಿಎ ಲೇಔಟ ಸಾಯಿ ಶಕ್ತಿ  ಲಾಡ್ಜ ಹತ್ತಿರ ಹೋಗಿ ಲಾಡ್ಜನ ಮರೆ ನಿಂತು ನೊಡಲು ಲಾಡ್ಜ ಹಿಂದುಗಡೆ  5 ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿ 5 ಜನ ಜೂಜುಕೊರರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದಿದ್ದು ನಂತರ ಒಬ್ಬೊಬ್ಬರಿಗೆ ವಿಚಾರಣೆ ಮಾಡಿ ಅಂಗ ಜಪ್ತಿ ಮಾಡಿ  ಹೆಸರು ವಿಳಾಸ ವಿಚಾರಿಸಲು  1) ಸಂಜಯಕುಮಾರ ತಂದೆ ಲಕ್ಷ್ಮಣ ಭಜಂತ್ರಿ ಸಾ||  ಬಸವ ನಗರ ಕಲಬುರಗಿ 2) ರವಿ ತಂದೆ ಯಲ್ಲಪ್ಪ ಭಜಂತ್ರಿ ಸಾ|| ಹಾರುತಿ ಹಡಗಿಲ್ ತಾ|| ಜಿ||  ಕಲಬುರಗಿ 3) ಸಿದ್ದಪ್ಪ ತಂದೆ ಜಟ್ಟೆಪ್ಪ ಭಜಂತ್ರಿ ಸಾ|| ಹಾರುತಿ ಹಡಗಿಲ್ ತಾ|| ಜಿ|| ಕಲಬುರಗಿ 4) ಅಣ್ಣಾರಾಯ ತಂದೆ ಸಾಯಿಬಣ್ಣಾ ಸಾ|| ಅಲ್ಲಾಪೂರ ತಾ|| ಆಳಂದ 5)  ಶರಣಪ್ಪ ತಂದೆ ಶಿವಲಿಂಗಪ್ಪ ಭಜಂತ್ರಿ ಸಾ|| ನಂದಿಕೂರ ಕಲಬುರಗಿ ಅಂತ ತಿಳಿಸಿದ್ದು,. ಸದರಿಯವರಿಂದ ಜೂಜಾಟದಲ್ಲಿ ತೊಡಗಿಸಿದ ಒಟ್ಟು ನಗದು ಹಣ 3370/- ಮತ್ತು 52 ಇಸ್ಪಿಟ ಎಲೆಗಳನ್ನು ವಶಕ್ಕೆ ಪಡೆಸು ಸದರಿಯವರೊಂದಿಗೆ ಅಶೋಕ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ,
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ; 02/05/2019 ರಂದು ಬೆಳಿಗ್ಗೆ ನನ್ನ ತಾಯಿ ಚಂದಮ್ಮ ಇವಳು ನ್ಯಾವನೂರ ಗ್ರಾಮದಲ್ಲಿ ನಮ್ಮ ಸಂಬಂದಿ ನಿಧನವಾಗಿದ್ದರಿಂದ ಮಾತನಾಡಿಸಿ ಬರುತ್ತೇನೆ ಸತ್ತ ಸುದ್ದಿ ಮುಟ್ಟಿಸಿ ಬರುತ್ತೇನೆ ಎಂದು ಅವರಾಧ ಗ್ರಾಮದಿಂದ ನಮ್ಮೂರ ಟಂ ಟಂ ದದಲ್ಲಿ ಜೇವರಗಿ ಹೋದಳು. ನಂತರ ಮದ್ಯಾಹ್ನ 12-30 ಘಂಟೆಯ ಸುಮಾರಿಗೆ ಪರಶುರಾಮ ತಂದೆ ಮರೆಪ್ಪ ದೊರೆ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿಮ್ಮ ತಾಯಿಗೆ ಇಂದು ಮದ್ಯಾಹ್ನ 12-15 ಪಿ.ಎಮ್ ಸುಮಾರಿಗೆ ಜೇವರಗಿ ಪಟ್ಟಣದ ಹಳೆಯ ತಹಸಿಲ್ ಆಫಿಸ್ ಹತ್ತಿರ ಒಂದು ನೀರಿನ ಟ್ಯಾಂಕರ್ ಟ್ರಾಕ್ಟರ್ ಚಾಲಕನು ಟ್ರಾಕ್ಟರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಾಯಿ ರೋಡಿನ ಮೇಲೆ ಬಿದ್ದು ತಲೆಗೆ, ಗಲ್ಲಕ್ಕೆ, ಎಡ ಮೆಲಕಿನ ಮೇಲೆ ಭಾರಿ ರಕ್ತ ಘಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದನು. ನಂತರ ನಾನು ಮತ್ತು ನಮ್ಮ ಅಕ್ಕ ಶರಣಮ್ಮ, ಕೂಡಿ ಜೇವರಗಿ ಆಸ್ಪತ್ರೆಗೆ ಬಂದು ನೋಡಲು ನಮ್ಮ ತಾಯಿಗೆ ತಲೆಯೆ ಮೇಲೆ, ಎಡ ಮೆಲಕಿನ ಮೇಲೆ, ಎಡ ಕಣ್ಣಿನ ಕೆಳಗೆ, ಗಲ್ಲಕ್ಕೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದಳು. ನಂತರ ನಾನು ಅಲ್ಲಿಯೇ ಘಟನೆ ನೋಡಿದ ಪರಶುರಾಮ ತಂದೆ ಮರೆಪ್ಪ ದೊರೆ ಈತನಿಗೆ ವಿಚಾರಿಸಲು ವಿಷಯ ತಿಳಿಸಿದ್ದೇನೆಂದರೆ; ಇಂದು ದಿನಾಂಕ; 02/05/2019 ರಂದು ಮದ್ಯಾಹ್ನ 12-15 ಗಂಟೆಯ ಸುಮಾರಿಗೆ ನಾನು ಮತ್ತು ಮಹಾಂತಪ್ಪ ತಂದೆ ಮರೆಪ್ಪ ಬಡಿಗೇರ ಕೂಡಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆ ಹತ್ತಿರ ಇದ್ದಾಗ ಚಂದಮ್ಮ ತಳವಾರ ಇವಳು ಕೆ..ಬಿ ಆಫೀಸ್ ಕಡೆಗೆ ನಡೆದುಕೊಂಡು ಹಳೆಯ ತಹಸಿಲ್ ಆಫಿಸ್ ಎದುರಿನಿಂದ ಹೋಗುತ್ತಿರುವಾಗ ಜೇವರಗಿ ಬಸ್ ನಿಲ್ದಾಣದ ಕಡೆಯಿಂದ ಒಂದು ನೀರಿನ ಟ್ಯಾಂಕರ್ ಟ್ರಾಕ್ಟರ್ ಚಾಲಕನು ಟ್ರಾಕ್ಟರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಾಯಿ ರೋಡಿನ ಮೇಲೆ ಬಿದ್ದು ತಲೆಗೆ, ಗಲ್ಲಕ್ಕೆ ಎಡ ಮೆಲಕಿನ ಮೇಲೆ ಭಾರಿ ಘಾಯವಾಗಿ ಸ್ಥಳದಲ್ಲಿಯೇ ಸತ್ತಿರುತ್ತಾಳೆ. ನಂತರ ನಾನು ಅಲ್ಲಿಯೇ ನಿಂತಿದ್ದ ಟ್ರಾಕ್ಟರ್ ನಂಬರ್ ನೋಡಲು ಅದರ ಮೇಲೆ ನಂಬರ್ ಇರಲಿಲ್ಲ.ಅದರ ಇಂಜಿನ್ ನಂ; NKK4YBE006 ಇದ್ದು, ಅದರ ಚೆಸ್ಸಿ ನಂ: MBNADBGDKNK00804 ಇರುತ್ತದೆ. ಮತ್ತು ನೀರಿನ ಟ್ಯಾಂಕರ್ ಮೇಲೆ; JPL MC 125 ಎಂದು ನಂಬರ ಬರೆದಿದ್ದು ಇರುತ್ತದೆ  ನಂತರ ಟ್ರಾಕ್ಟರ್ ಚಾಲಕನು ಟ್ರಾಕ್ಟರ್ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ  ಅಂತಾ ತಿಳಿಸಿದ್ದು ಮೇರೆಗೆ  ಶ್ರೀ ಶಾಂತಪ್ಪ ತಂದೆ ಶರಣಪ್ಪ ತಳವಾರ ಸಾ; ಅವರಾಧ ಗ್ರಾಮ ತಾ; ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಬೀರಪ್ಪ ತಂದೆ ಮಾರಯ್ಯ ಪೂಜಾರಿ ಸಾಃ ಯಾಳವಾರ ತಾಃ ಜೇವರಗಿ ರವರು ದಿನಾಂಕ 02/04/2019 ರಂದು ಸಾಯಂಕಾಲ ನಾನು ಮತ್ತು ನಮ್ಮೂರ ರಾಹುತಪ್ಪ ತಂದೆ ನಿಂಗಪ್ಪ ಪೂಜಾರಿ ಇಬ್ಬರೂ ಕೂಡಿಕೊಂಡು ಅವನ ಮೊಟಾರ್ ಸೈಕಲ ನಂ ಕೆಎ-32-ಇಕ್ಯೂ- 7774 ನೇದ್ದರ ಮೇಲೆ ಕುಳಿತುಕೊಂಡು ನಮ್ಮೂರಿನಿಂದ ಚಿಗರಳ್ಳಿ ಕ್ರಾಸಗೆ ಬಂದಿರುತ್ತೆವೆ. ಚಿಗರಳ್ಳಿ ಕ್ರಾಸ್ ನಲ್ಲಿ  ಕೆಲಸ ಮುಗಿಸಿಕೊಂಡು, ನಾವಿಬ್ಬರೂ ಕೂಡಿಕೊಂಡು ಚಿಗರಳ್ಳಿ ಕ್ರಾಸ್  ದಾಟಿ ಶಹಾಪೂರ ರೋಡಿನಲ್ಲಿರುವ ದಾಬಾಕ್ಕೆ ಊಟ ಮಾಡಿಕೊಂಡು ಬರಲು ದಾಬಾಕ್ಕೆ ಹೋಗಿ, ದಾಬಾದಲ್ಲಿ ಊಟ ಮಾಡಿ ಮೇಲೆ ನಮೂದಿಸಿದ ಮೊಟಾರ್ ಸೈಕಲ ನಂ ಕೆಎ-32-ಇಕ್ಯೂ-7774 ನೇದ್ದರ ಮೇಲೆ ಕುಳಿತುಕೊಂಡು ನಮ್ಮೂರಿಗೆ ಬರಲು ಚಿಗರಳ್ಳಿ ಕ್ರಾಸ್ ಕಡೆಗೆ ಬರುತ್ತಿದ್ದೆವು ಮೊಟಾರ್ ಸೈಕಲನ್ನು ನಾನು ನಡೆಯಿಸುತ್ತಿದ್ದೆನು, ರಾಹುತಪ್ಪ ಹಿಂದೆ ಕುಳಿತುಕೊಂಡಿದ್ದೆನು. ಜೇವರಗಿ-ಶಹಾಪೂರ ರೋಡ ಚಿಗರಳ್ಳಿ ಕ್ರಾಸ್ ಹತ್ತಿರ ಜೋಗುರು ಪೇಟ್ರೊಲ್ ಪಂಪ್ ಹತ್ತಿರ ರೋಡಿನಲ್ಲಿ ರಾತ್ರಿ 8.30 ಗಂಟೆಗೆ ಬರುತ್ತಿದ್ದಾಗ  ಎದುರಿನಿಂದ ಅಂದರೆ ಜೇವರಗಿ ಕಡೆಯಿಂದ ಒಂದು ಟಾಟಾ ಎ ವಾಹನವನ್ನು ಅದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರ್ ಸೈಕಲ್  ಕ್ಕೆ  ಎದುರಾಗಿ ಡಿಕ್ಕಿಪಡಿಸಿದನು.  ಆಗ ನಾವು ಇಬ್ಬರೂ ಮೊಟಾರ್ ಸೈಕಲದೊಂದಿಗೆ ರೋಡಿನಲ್ಲಿ ಬಿದ್ದೆವು.  ಆಗ ನನಗೆ  ತಲೆಯಲ್ಲಿ ರಕ್ತಗಾಯ,  ಮೂಗಿನ ಹತ್ತಿರ,  ಬಲಕೈ ಮುಂಗೈ ಹತ್ತಿರ ಬಲಕಾಲಿನ ಬೆರಳಿಗೆ ರಕ್ತಗಾಯವಾಗಿರುತ್ತದೆ ಅಲ್ಲದೆ  ಬಲಕೈ ಮುಂಗೈ ಹತ್ತಿರ ಮುರಿದ ಬಾರಿ ಗಾಯವಾಗಿರುತ್ತದೆ ಹಿಂದೆ ಕುಳಿತ ರಾಹುತಪ್ಪ ಇತನಿಗೆ ತಲೆಯಲ್ಲಿ ಬಾರಿ ರಕ್ತಗಾಯವಾಗಿರುತ್ತದೆ. ಎರಡು ಕಾಲಿನ ಮೊಳಕಾಲು ಹತ್ತಿರ, ಮತ್ತು ಗದ್ದಕ್ಕೆ, ತರಚಿದ ರಕ್ತಗಾಯವಾಗಿರುತ್ತದೆ ಅಲ್ಲದೆ ಬಲಕಣ್ಣಿನ ಹತ್ತಿರ ಪ  ಪೆಟ್ಟಾಗಿ  ಕಂದು ಗಟ್ಟಿರುತ್ತದೆ. ನಮ್ಮ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದ ಟಾಟಾ ಎ ವಾಹನ ಚಾಲಕನು ತನ್ನ ವಾಹವನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದನು. ಅದರ ನಂಬರ ರೋಡಿನಲ್ಲಿ ಹೋಗಿ ಬರುವ ವಾಹನಗಳ ಬೆಳಕಿನಲ್ಲಿ ನೊಡಲಾಗಿ ಟಾಟಾ ಎಸಿಇ ವಾಹನ ನಂ ಕೆಎ-33-ಎ- 7529 ನೇದ್ದು ಇತ್ತು,  ಅದರ ಚಾಲಕನು ನಮಗಾದ ಗಾಯಗಳು ನೋಡಿ ತನ್ನ  ಟಾಟಾ ಎ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಡಿ ಹೋದನು ಅವನಿಗೆ ಮುಂದೆ ನೊಡಿದಲ್ಲಿ ಗುರುತಿಸುತ್ತೆನೆ. ಅಫಘಾತವಾಗಿರುವುದನ್ನು ಅಲ್ಲಿಯೇ ಪೇಟ್ರೊಲ್ ಪಂಪ್ ಹತ್ತಿರ ಇದ್ದ ಶಂಕರಲಿಂಗ್ ತಂದೆ  ಈರಣ್ಣಾ ಸೂಗೂರ ಸಾಃ ಗಂವ್ಹಾರ, ಶರಣು ತಂದೆ ಸಾಯಿಬಣ್ಣಾ ಪೂಜಾರಿ ಸಾಃ ಚಿಗರಳ್ಳಿ ಇವರು ನೋಡಿ  ಬಂದು ನಮಗೆ ಎಬ್ಬಿಸಿದರು ನಂತರ ಅವರು ನಮ್ಮಿಬ್ಬರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು  ಜೇವರಗಿ ಸರಕಾರಿ ಆಸ್ಪತ್ರೆಗೆ ತಂದರು ರಾಹುತಪ್ಪನಿಗೆ ಉಪಚಾರ ಕೊಡಿಸಿದರು ಅಲ್ಲಿ  ವೈದ್ಯರು  ರಾಹುತಪ್ಪನಿಗೆ ಬೇಗನೆ ಹೆಚ್ಚಿನ ಉಪಚಾರ ಕುರಿತು  ಕಲಬುರಗಿ ಆಸ್ಪತ್ರೆಗೆ  ತೆಗೆದುಕೊಂಡು ಹೋದಲು ತಿಳಿಸಿದರಿಂದ  ನನಗೆ ಮತ್ತು ರಾಹುತಪ್ಪನಿಗೆ ಒಂದು ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಯಿಂದ ಕಲಬುರಗಿ ಯೂನೈಟೇಡ್ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ.  ರಾಹುತಪ್ಪ ಇತನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ನಾನು ಉಪಚಾರ ಪಡೆದುಕೊಳಲು  ಕಲಬುರಗಿ ಯುನೈಟೇಡ್ ಆಸ್ಪತ್ರೆಗೆ ಬಂದಿರುವುದರಿಂದ  ಟಾಟಾ ಎಸಿಇ ವಾಹನ ನಂ ಕೆಎ-33-ಎ-7529 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರ್ ಸೈಕಲಕ್ಕೆ ಎದುರುನಿಂದ ಡಿಕ್ಕಿಪಡಿಸಿ ನಮಗೆ ಸಾದಾ ಮತ್ತು ಬಾರಿ ಗಾಯಗೊಳಿಸಿ ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ,  ಸದರಿ ಟಾಟಾ ಎ ವಾಹನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ್ದು ದಿನಾಂಕ 03/04/2019 ರಂದು ಸೊಲಾಪೂರ ಗಂಗಾಮಯಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೆವೆ. ನಮ್ಮ ತಂದೆಯವರು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ  ಗುಣಮುಖನಾಗದೆ  ದಿನಾಂಕ 11/04/2019 ರಂದು ಮುಂಜಾನೆ 8.20 ಗಂಟೆಗೆ ಸೊಲಾಪೂರ ಗಂಗಾಮಯಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ 01 : ಶ್ರೀ ಧೂಳಪ್ಪ ರವರು ದಿನಾಂಕ 02-05-2019 ರಂದು ರಾತ್ರಿ 10-15 ಗಂಟೆ ಸುಮಾರಿಗೆ ನಾನು ಸುಪರ ಮಾರ್ಕೆಟನ ಲಸ್ಸಿ ಶಾಪದಿಂದ ತಗೆದುಕೊಂಡು ನನ್ನ ಬ್ಯಾಗನಲ್ಲಿ ಲಸ್ಸಿ ಇಟ್ಟುಕೊಂಡು ನನ್ನ ಮೋಟಾರ ಸೈಕಲ ನಂ ಕೆಎ-32/ಇಟಿ-0450 ನೇದ್ದನ್ನು ಚಲಾಯಿಸಿಕೊಂಡು ಜಗತ ಸರ್ಕಲ ಮುಖಾಂತರ ಹಳೆ ಜೇವರ್ಗಿ ರೋಡಿಗೆ ತಗೆದುಕೊಂಡು ಹೋಗುವಾಗ ದಾರಿ ಮದ್ಯ ಸಿದ್ದಿ ಬಾಶಾ ದರ್ಗಾ ಕ್ರಾಸ ಹತ್ತೀರ ರೋಡ ಮೇಲೆ ಕಾರ ನಂಬರ ಕೆಎ-24/ಎಮ್-1184 ನೇದ್ದರ ಚಾಲಕನು ಎಸವಿಪಿ ಸರ್ಕಲ ಕಡೆಯಿಂದ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೇ ಸನ್ನೇ ಮಾಡದೆ ಇಂಡಿಕೇಟರ್ ಹಾಕದೆ ಒಮ್ಮಲೇ ಹಳೇ ಡಿಪಿಓ ಕ್ರಾಸ ಕಡೆಗೆ ತಿರುಗಿಸಿ ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ  ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಕಮಲಾಕರ ತಂದೆ ಭೀಮಶ್ಯಾ ಜಾಧವ ಸಾಃ ಪಡಸಾವಳಗಿ ತಾಃ ಆಳಂದ ಜಿಃ ಕಲಬುರಗಿ ರವರ ಹೊಲವು ನಮ್ಮೂರಿನ ಸರ್ಕಾರಿ ಆಸ್ಪತ್ರೆಯ ಎದುರುಗಡೆ ಸರ್ವೆ ನಂಬರ 136 ರಲ್ಲಿ ಒಟ್ಟು 06 ಎಕರೆ ಜಮೀನು ಇದ್ದು ಈ ಜಮೀನು ಉಳುಮೆ ಮಾಡಲು ಸುಮಾರು ಒಂದುವರೆ ವರ್ಷಗಳ ಹಿಂದೆ ಒಂದು ಬಿಳಿಯ ಬಣ್ಣದ ಹಾಗೂ ಒಂದು ಕೆಂಪು ಬಣ್ಣದ ಎರಡು ಎತ್ತುಗಳು ಖರಿದಿಸಿದ್ದು ಸದರಿ ಎತ್ತುಗಳನ್ನು ಕಟ್ಟಲು ನಮ್ಮ ಹೊಲದಲ್ಲಿ ಪತ್ರಾಸ ಶೆಡ್ಡು ಹಾಗೂ ಅದರ ಮುಂದೆ ಚಪ್ಪರ ಹಾಕಿದ್ದು ಇರುತ್ತದೆ. ದಿನಾಲೂ ಅದರಲ್ಲಿ ಎತ್ತುಗಳನ್ನು ಕಟ್ಟಿ ಬರುತ್ತೇನೆ. ದಿನಾಂಕ:02/05/2019 ರಂದು ಹೊಲದಲ್ಲಿ ಕೆಲಸ ಮಾಡಿ ಎಂದಿನಂತೆ ಎತ್ತುಗಳನ್ನು ಪತ್ರಾಸ ಶೇಡ್ಡಿನ ಮುಂದಿನ ಚಪ್ಪರದಲ್ಲಿ ಕಟ್ಟಿ ರಾತ್ರಿ 10:30 ಗಂಟೆಗೆ ಮನೆಗೆ ಬಂದಿರುತ್ತೇನೆ. ಮರು ದಿವಸ ಬೆಳಗ್ಗೆ 05:00 ಗಂಟೆಗೆ ಗಳೆ ಹೊಡೆಯಬೇಕು ಎಂದು ಮನೆಯಿಂದ ಎದ್ದು ಹೊಲಕ್ಕೆ ಹೋಗಿ ನೋಡಲಾಗಿ ಚಪ್ಪರದಲ್ಲಿ ಎತ್ತುಗಳು ಕಾಣಲಿಲ್ಲಾ ಎತ್ತುಗಳಿಗೆ ಕಟ್ಟಿದ ಹಗ್ಗಗಳನ್ನು ಕತ್ತರಿಸಿದ್ದು ನೋಡಿ ನಾನು ಗಾಬರಿಯಾಗಿ ಅಲ್ಲೆ ಬಹಿರ್ದೆಸೆಗೆ ಹೋಗುತ್ತಿದ್ದ ವಿಶ್ವನಾಥ ತಂದೆ ಕಲ್ಯಾಣಿ ಜಮಾದಾರ, ಹಣಮಂತ ತಂದೆ ಭೀಮರಾವ ಜಾಧವ ಹಾಗೂ ಪಕ್ಕದ ಹೊಲದ ಹರ್ಷಾನಂದ ತಂದೆ ಈರಣ್ಣಾ ನಿಂಬರ್ಗಿ ರವರಿಗೆ ನನ್ನ ಎತ್ತುಗಳು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ವಿಷಯ ತಿಳಿಸಿ ನಾವೆಲ್ಲರೂ ಕೂಡಿಕೊಂಡು ಸುತ್ತಮುತ್ತಲೂ ಎಲ್ಲ ಕಡೆಗೆ ಹೊಲಗಳಲ್ಲಿ ಹುಡುಕಾಡಿದರು ಎತ್ತುಗಳು ಎಲ್ಲೂ ಕಂಡು ಬಂದಿರುವುದಿಲ್ಲ, ನಂತರ ನಾನು ಮತ್ತು ಮುಬಾರಕ ತಂದೆ ರಾಜಾಭಾಯಿ ಮುಲಗೆ ರವರು ಕೂಡಿಕೊಂಡು ವಾಗ್ದರ್ಗಿ, ವಳಸಂಗ, ಅಚಲೇರ್, ಮೈಂದರ್ಗಿ ಗ್ರಾಮಗಳಿಗೆ ಹೋಗಿ ಹುಡುಕಾಡಿದರು ಎತ್ತುಗಳು ಸಿಕ್ಕಿರುವುದಿಲ್ಲ. ಸದರಿ ನನ್ನ ಎತ್ತುಗಳನ್ನು ಯಾರೋ ಕಳ್ಳರು ದಿನಾಂಕ 02/05/2019 ರ ರಾತ್ರಿ 11-00 ಪಿಎಮ್ ದಿಂದ ದಿನಾಂಕ 03-05-2019 ರ ಬೆಳಗಿನ 05-00 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಎತ್ತುಗಳ ಅಂದಾಜು ಕಿಮ್ಮತ್ತು 48000/- ರೂಪಾಯಿ ಆಗಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.