ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 07-08-2018
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
127/18 ಕಲಂ 498(ಎ), 304(ಬಿ) 302 ಜೊತೆ 34 ಐಪಿಸಿ :-
ದಿನಾಂಕ 6-08-2018 ರಂದು 1630 ಗಂಟೆಗೆ ಫಿರ್ಯಾದಿ ಶ್ರೀಮತಿ
ಪದ್ಮಾವತಿ ಗಂಡ ಗದಗಯ್ಯಾ ಸ್ವಾಮಿ ಸಾ// ಕೊರೆಕಲ್ ತಾ// ಔರಾದ ಜೀ// ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ
ದೂರು ಸಲ್ಲಿಸಿದರ ಸಾರಾಂಶವೆನೆಂದರೆ ತೋರಣಾ ಗ್ರಾಮದ ಶ್ರೀ
ಮಾದಯ್ಯಾ ಸ್ವಾಮಿ ಅವರ ಮನೆಯಲ್ಲಿ ಮೂರು ತಿಂಗಳ ಹಿಂದಷ್ಟೆ ಅಂದರೇ ಮೇ 4, 2018 ರಂದು
ಅವರ ಮಗನಾದ ನಾಗರಾಜ ಇವರಿಗೆ ಫಿರ್ಯಾದಿ ಮಗಳಾದ ಭಾಗ್ಯಶ್ರೀ ಯೊಂದಿಗೆ
ಆಗಿರುತ್ತದೆ. ಮದುವೆ ಆದನಂತರ ಅವಳನ್ನು
ವಿನಾಕಾರಣ ತೊಂದರೆ ನೀಡುತ್ತಾ ಮೆಕ್ಯಾನಿಕ್ ಅಂಗಡಿ ಹಾಕಬೇಕಾಗಿದೆ ನಿನ್ನ ಮನೆಯಿಂದ ಒಂದು ಲಕ್ಷ
ರೂಪಾಯಿ ತೆಗೆದುಕೊಂಡು ಬಾ ಅಂತಾ ತೊಂದರೆ ನೀಡುತ್ತಿರುತ್ತಾರೆ. ನಾಗರಾಜು ತಂದೆ ಮಾದಯ್ಯಾ ಸ್ವಾಮಿ, ತಾಯಿ ಸಂಗಿತಾ, ಹಾಗೂ
ಕಿರಿಯ ಮಗ ಕಂಟಯ್ಯಾ ಸ್ವಾಮಿ ಅವರ ಮಗಳು ಸುನಿತಾ ಸೇರಿಕೊಂಡು ಕಿರುಕುಳ ನೀಡಿ ರವಿವಾರ ದಿ:
05-08-2018 ರಂದು ಕತ್ತು ಹಿಸುಕಿ ನೇಣು ಹಾಕಿ ಕೊಲೆ ಮಾಡಿರುತ್ತಾರೆ ಅಂತಾ ನೀಡಿದ ದೂರಿನ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕ ಚಿಂಚೋಳಿ
ಪೊಲೀಸ ಠಾಣೆ ಅಪರಾಧ ಸಂಖ್ಯೆ-
123/2018 ಕಲಂ- 323 324 307 341 394 504 506 ಜೋತೆ 34 ಐ.ಪಿ.ಸಿ :-
ಶ್ರೀ ಶಿವಕಾಂತ ತಂದೆ ಬಸವಂತಪ್ಪಾ ಹೋನ್ನಾಳ್ಳೆ ವಯ- 40 ವರ್ಷ ಜಾ-ಲಿಂಗಾಯತ ಉ- ಅಕ್ಕಿ ವ್ಯಾಪಾರ ಸಾ- ನೀಡೇಬಾನ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 04/08/2018 ರಂದು ಬೇಳ್ಳಿಗೆ 0900 ಗಂಟೆಗೆ ಫಿರ್ಯಾದಿಯು ತನ್ನ ಕಾರ ನಂ- MH-03 Z- 2953 ನೇದ್ದರಲ್ಲಿ ಭಾಲ್ಕಿ ಬರುವಾಗ ಮನೆಯ ಮುಂದೆ ತನ್ನ ಕಾರ ಹಿಂದಕ್ಕೆ ತೆಗೆದುಕೊಳ್ಳುವಾಗ ರೋಡಿನ ಮೇಲೆ ಗ್ರಾಮದ ಸಂಗಮೇಶ ಘಾಳೆ ಈತನು ತನ್ನ ಕಾರ ರೋಡಿನ ಮೇಲೆ ನಿಲ್ಲಿಸಿದ ಫಿರ್ಯಾದಿಯ
ಕಾರ್ ಅವನ ಕಾರಿಗೆ ಸ್ವಲ್ಪ ಟಚ್ ಆಗಿರುತ್ತದೆ ಆ ವಿಷಯವಾಗಿ ಗ್ರಾಮದ
ಶಿವರಾಜ ತಂದೆ ರಘುನಾಥ ಸೋನಮಾಳೆ ಮತ್ತು ನಮ್ಮಣ್ಣನ ಮಗ ಸಂಗಮೇಶ ಹೋನ್ನಳೆ ಇವರಿಬ್ಬರೂ ಕಾರಿಗೆ ಆದ ಲುಕ್ಸಾನ ಬಗ್ಗೆ ತುಂಬಿ ಕೂಡಲು ಹೇಳಿದ್ದರಿಂದ ಅದಕ್ಕೆ ಫಿರ್ಯಾದಿಯು
ಒಪ್ಪಿಕೊಂಡಿದ್ದು ದಿನಾಂಕ: 06/08/2018 ರಂದು
ಮುಂಜಾನೆ 9 ಗಂಟೆಗೆ ಫಿರ್ಯಾದಿಯು ಮೋಟರ ಸೈಕಲ್ ನಂ- KA-J-6970
ನೇ ಮೇಲೆ ಲಖನ ತಂದೆ ರಾಜು ಮುದ್ದಾಳೆ ವಿದ್ಯಾರ್ಥಿ ಇವನಿಗೆ ನನ್ನ ಮೋಟರ ಸೈಕಲ್
ಮೆಲೆ ಕೂಡಿಸಿಕೊಂಡು ಭಾಲ್ಕಿಗೆ ಬರುವಾಗ ಅಷ್ಟುರೆ
ರವರ ಹೋಲದ ಹತ್ತಿರ ರೋಡಿನ ಮುಖಾಂತರ ಭಾಲ್ಕಿಗೆ ಬರುವಾಗ ಸಂಗಮೇಶ ತಂದ ಶಿವಕುಮಾರ ಘಾಳೆ ಇವನು ತನ್ನ ಕಾರ ರೋಡಿನ ಮೆಲೆ
ನಿಲ್ಲಿಸಿ ಫಿರ್ಯಾದಿ ಬರುವುದನ್ನು ನೋಡಿ ಕಾರಿನಿಂದ ಕೇಳಗೆ ಇಳಿದು ಸಂಗಮೇಶ
ಘಾಳೆ ಮತ್ತು ಅವರ ತಮ್ಮ ಶ್ರೀಕಾಂತ ತಂದೆ ಶಿವಕುಮಾರ ಘಾಳೆ ಇವರಿಬ್ಬರೂ ನನ್ನ ಹತ್ತಿರ ಬಂದು ನನ್ನ ಮೋಟರ ಸೈಕಲ್ ನಿಲ್ಲಿಸಿ
ಅವ್ಯಾಚವಾಗಿ ಬೈದ್ದು ಕೋಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿ ಪಂಚ ಹೀಡಿದುಕೊಂಡು ಮುಖದ ಮೆಲೆ
ಎಡಗಡೆ ಗಲ್ಲದ ಮೇಲೆ ಎರಡು ಕಡೆಗೆ ಹೋಡೆದು ರಕ್ತಗಾಯಾ ಪಡಿಸಿರುತ್ತಾನೆ ಮತ್ತು ಶ್ರೀಕಾಂತ ಈತನು ತನ್ನ
ಕೈಯಲ್ಲಿ ಬಡಿಗೆ ತೆಗೆದುಕೊಂಡು ಬೇನ್ನಿನ ಮೇಲೆ ಎರಡು, ಎರಡು ತೋಡೆಗಳ ಮೇಲೆ, ಎಡಮೋಳಕಾಲ ಕೇಳಗೆ ಅಲಲ್ಲಿ ಹೋಡೆದು
ಭಾರಿ ರಕ್ತಗಾಯಾ ಪಡಿಸಿರುತ್ತಾರೆ ಮತ್ತು ಬಲಗೈಯಲ್ಲಿರುವ 5 ಗ್ರಾಂ ಬಂಗಾರದ ಉಂಗುರ ಕಸಿದುಕೊಂಡಿರುತ್ತಾನೆ ಮತ್ತು ಸಂಗಮೇಶ ಈತನು ನನ್ನ ಪ್ಯಾಂಟಿನ ಜೇಬಿನಲ್ಲಿರುವ ರೂಪಾಯಿ
50000/- ಕಸಿದುಕೊಂಡಿರುತ್ತಾರೆ
ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.