Police Bhavan Kalaburagi

Police Bhavan Kalaburagi

Saturday, March 17, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 11-03-2018 ರಂದು ಬೆಳಿಗ್ಗೆ ನಮ್ಮ ತಮ್ಮ ಸಂಗಣ್ಣ ಈತನು ನಮ್ಮ ಸೋದರ ಮಾವನ ಮಗನಾದ ನಿಂಗಣ್ಣ ತಂದೆ ಶಿವಶರಣಪ್ಪ ಕಡಬೂರ ಹಾಗು ಅದೇ ಗ್ರಾಮದ ದೌಲತರಾಯ ಕುಂಬಾರ ರವರಿಗೆ ತನ್ನ ಮೋಟರ ಸೈಕಲ್ ಮೇಲೆ ಕೂಡಿಸಿಕೊಂಡು ಯಡ್ರಾಮಿಗೆ ಹೋಗಿ ಬರುತ್ತೇವೆ ಅಂತಾ ಹೇಳಿ ಹೋದರು, ಮೋಟರ ಸೈಕಲ್ ನಮ್ಮ ತಮ್ಮ ನಡೆಸುತ್ತಿದ್ದನು, ಸ್ವಲ್ಪ ಹೊತ್ತಾದ ನಂತರ ಗೂಗಿಹಾಳ ಗ್ರಾಮ ದಾಟಿ 2 ಕಿ.ಮಿ ಮೇಲೆ ಸಿದ್ರಾಮ ಜೀರ ರವರ ಹೊಲದ ಹತ್ತಿರ ಮೋಟರ ಸೈಕಲ್ ಅಪಘಾತವಾಗಿದೆ ಅಂತಾ ಗೊತ್ತಾಗಿ ನಾನು ಮತ್ತು ನಿಂಗಣ್ಣನ ತಮ್ಮ ಅಯ್ಯಣ್ಣ ಕಡಬೂರ ರವರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ಮೋಟರ ಸೈಕಲ್ ನಮ್ಮ ತಮ್ಮನದೆ ಇದ್ದು, ನೋಡಲಾಗಿ ನಿಂಗಣ್ಣ ತಂದೆ ಶಿವಶರಣಪ್ಪ ಕಡಬೂರ ಈತನ ತಲೆಗೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು, ನಂತರ ದೌಲತರಾಯನಿಗೆ ನೋಡಲಾಗಿ ಅವನಿ ಮೈ ಕೈಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು ಅದರಂತೆ ನಮ್ಮ ತಮ್ಮ ಸಂಗಣ್ಣನಿಗು ಸಣ್ಣ ಪುಟ್ಟ ಒಳಪೆಟ್ಟಾಗಿರುತ್ತವೆ, ನಿಂಗಣ್ಣ ಈತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ, ದೌಲತರಾಯನಿಗೆ ಕೇಳಲಾಗಿ ಹೇಳಿದ್ದೇನೆಂದರೆ, ನಾನು ಮತ್ತು ನಿಂಗಣ್ಣ ಕಡಬೂರ ರವರು ಕೂಡಿ ನಿಮ್ಮ ತಮ್ಮ ಸಂಗಣ್ಣ ರವರ ಮೋಟರ ಸೈಕಲ್ ಮೇಲೆ ಯಡ್ರಾಮಿಗೆ ಹೋಗುವಾಗ 9;00 ಗಂಟೆ ಸುಮಾರಿಗೆ ನಮ್ಮೂರ ಸಿದ್ರಾಮ ಜೀರ ರವರ ಹೊಲದ ಹತ್ತಿರ ನಿಮ್ಮ ತಮ್ಮ ನಾವು ಕುಳಿತ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಒಮ್ಮೇಲೆ ಕಟ್ ಮಾಡಿದ್ದರಿಂದ ಮೋಟರ ಸೈಕಲ್ ರೋಡಿನ ಎಡಗಡೆ ಬಿದಿರುತ್ತವೆ, ಆಗ ನಮಗೆ ಗಾಯಗಳು ಆಗಿರುತ್ತವೆ ಅಂತಾ ತಿಳಿಸಿದನು, ನಂತರ ನಿಂಗಣ್ಣ ಕಡಬೂರ ಮತ್ತು ದೌಲತರಾಯ ರವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿ ನಾನು ಮತ್ತು ನಮ್ಮ ತಮ್ಮ ಹಾಗು ಅಯ್ಯಣ್ಣ ಕಡಬೂರ  ಮತ್ತು ಅದೇ ಗ್ರಾಮದ ಗುರಣ್ಣ ಪೂಜಾರಿ ರವರು ಕೂಡಿ ಜೇವರ್ಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ನಂತರ ನಿಂಗಣ್ಣನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ, ನಿಂಗಣ್ಣ ತಂದೆ ಶಿವಶರಣಪ್ಪ ಕಡಬೂರ ರವರು ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಇಂದು ದಿನಾಂಕ 16-03-2018 ರಂದು 4;30 ಪಿ.ಎಂ ಕ್ಕೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ, ಅಂತಾ ಶ್ರೀ ದೇವಿಂದ್ರ ತಂದೆ ತಿಪ್ಪಣ್ಣ ಕರದಳ್ಳಿ ಸಾ|| ಗುಡೂರ ಎಸ್.ಎ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶರಣಬಸಪ್ಪ ತಂದೆ ಬಸವರಾಜ ಬಿರಾಳ ಸಾ: ಲಕ್ಷ್ಮಿ ಗಂಜ ಶಹಾಬಾದ ಇವರದು ಎಪಿ ಎಮ್ ಸಿ ಯಲ್ಲಿ ಶರಣಕೃಪಾ ಟ್ರೇಡಿಂಗ ಕಂಪನಿ ಅಂತಾ ಅಡತ ಅಂಗಡಿ ಇರುತ್ತದೆ. ಅಂಗಡಿಯಲ್ಲಿ ವ್ಯಾಪಾರ ಮಾಡಿದ ಹಣ ಒಂದು ಅಲಮಾರಿಯಲ್ಲಿ 6,36,000-00 ರೂ ಹಾಗೂ ಇನ್ನೊಂದು ಅಲಮಾರಿಯಲ್ಲಿ 1,15.000-00 ರೂ ಹೀಗೆ ಒಟ್ಟು 7,51,000-00 ರೂ ಇಟ್ಟು ಅಡತಿಯನ್ನು ದಿನಾಂಕ: 15/03/2018 ರಂದು ರಾತ್ರಿ ಬಂದ ಮಾಡಿಕೊಂಡು ನಾವೆಲ್ಲಾರೂ ಮನೆಗೆ ಹೋಗಿದ್ದೇವು ಇಂದು ದಿನಾಂಕ: 16/03/2018 ರಂದು 6-30 ಎ.ಎಮ್ ಕ್ಕೆ ನಮ್ಮ ಎಪಿ ಎಮ್ ಸಿ ಯಲ್ಲಿ ಸೇಕ್ಯೂರಿಟಿ ಗಾರ್ಡ ಆದ  ಬಸವರಾಜ  ಪ್ಯಾಟಿ ಇವರು ಪೋನ ಮಾಡಿ ತಿಳಿಸಿದೇನೆಮದರೆ ನಿಮ್ಮ ಅಂಗಡಿಯ ಶೇಟರ ಎತ್ತಿರುತ್ತಾರೆ ಅಂತಾ ತಿಳಿಸಿದ್ದರಿಂದ ಬಂದು ನೋಡಲು ವಿಷಯ ನಿಜವಿದ್ದು ಶೇಟರ ಬೆಂಡಾಗಿದ್ದು ಮದ್ಯದಲ್ಲಿ ರಾಡ ಹಾಕಿ ಶೇಟರ ಎತ್ತಿ ಒಳಗೆ ಹೋಗಿ ಎರಡು ಅಲಮಾರಿಗಳ ಲಾಕ ಮುರಿದು ಒಂದು ಅಲಮಾರಿಯಲ್ಲಿದ್ದ 6,36,000-00 ರೂ ಮತ್ತು ಇನ್ನೊಂದು ಅಲಮಾರಿಯಲ್ಲಿ ಇದ್ದ 1,15,000-00 ರೂ ಹೀಗೆ ಒಟ್ಟು 7,51,000-00 ರೂ ನಗದು ಹಣ ಯಾರೋ ಕಳ್ಳವು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.