Police Bhavan Kalaburagi

Police Bhavan Kalaburagi

Wednesday, October 23, 2019

KALABURAGI DISTRICT REPORTED CRIMES

ಆಕ್ರಮವಾಗಿ  ನಾಡಪಿಸ್ತೂಲ ಮಾರಾಟಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ: 22-10-2019 ರಂದು ಮಾಶಾಳ ಬೋರುಟಗಿ ರೋಡಿಗೆ ಇರುವ ಕಂಕರ ಮಶೀನ್ ಹತ್ತಿರ ಒಬ್ಬ ವ್ಯಕ್ತಿ ಪಿಸ್ತೂಲು ಇಟ್ಟುಕೊಂಡು ನಿಂತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬೋರುಟಗಿ ರೋಡಿಗೆ ಇರುವ ಕಂಕರ ಮಶೀನ್ ಹತ್ತಿರ ಹೋಗುತ್ತಿದ್ದಂತೆ, ರೋಡಿನ ಮೇಲೆ ನಿಂತಿದ್ದ ಒಬ್ಬ ವ್ಯೆಕ್ತಿ ನಮ್ಮ ಪೊಲೀಸ್ ಜೀಪನ್ನು ನೋಡಿ ಓಡ ಹತ್ತೀದನು ಆಗ ನಾವು ಸದರಿಯವನನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಈರಪ್ಪ ತಂಧೆ ಗಂಗಾಧರ ನಾಯ್ಕೋಡಿ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನನ್ನು ಪಂಚರ ಸಮಕ್ಷಮ ಚೆಕ್ ಮಾಡಲಾಗಿ ಸದರಿಯವನ ಹತ್ತಿರ ಪ್ಯಾಂಟಿನ ಜೇಬಿನಲ್ಲಿ ಒಂದು ನಾಡ ಪಿಸ್ತೂಲು & 01 ಜಿವಂತ ಗುಂಡು ಇದ್ದು. ಸದರಿಯವನಿಗೆ ಪಿಸ್ತೂಲು ಮತ್ತು ಗುಂಡು ಬಗ್ಗೆ ವಿಚಾರಿಸಲು, ಸದರಿ ಪಿಸ್ತೂಲು ಮತ್ತು ಗುಂಡನ್ನು ಮಾರಾಟ ಮಾಡಬೆಕೆಂದು ಇಲ್ಲಿ ನಿಂತಿದ್ದೆನೆ ಎಂದು ತಿಳಿಸಿದನು. ಸದರಿ ಪಿಸ್ತೂಲು ಮತ್ತು ಗುಂಡಿನ ಬಗ್ಗೆ ಹಾಗೂ ಪರವಾನಿಗೆ ಬಗ್ಗೆ ವಿಚಾರಿಸಲು, ಸದರಿ ಪಿಸ್ತೂಲು ಮತ್ತು ಗುಂಡನ್ನು ನಾನು ಮದ್ಯ ಪ್ರದೇಶ ರಾಜ್ಯದಲ್ಲಿ 10 ಸಾವಿರ ರೂಪಾಯಿ ಕೊಟ್ಟು ಖರಿದಿ ಮಾಡಿರುತ್ತೇನೆ. ನನಗೆ ಪಿಸ್ತೂಲು ಮತ್ತು ಗುಂಡು ಮಾರಾಟ ಮಾಡಿದ ವ್ಯೆಕ್ತಿಯ ಹೆಸರು ವಿಳಾಸ ಗೊತ್ತಿರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನಿಗೆ ಇನ್ನು ಎಷ್ಟು ಜನರಿಗೆ ಮಾರಾಟ ಮಾಡಿದಿ ಎಂಬ ಬಗ್ಗೆ ವಿಚಾರಿಸಲು ಹಿಂದೆ ನಾನು ನಮ್ಮೂರಿನ ಅಬಿಷೇಕ @ ರವಿ ತಂದೆ ಸೈಬಣ್ಣ ತಳವಾರ  ಈತನಿಗೆ ಒಂದು ಪಿಸ್ತೂಲನ್ನು ಮತ್ತು ಒಂದು ಜಿವಂತ ಗುಂಡನ್ನು  ಹಾಗೂ ಶರಣಗೌಡ ತಂದೆ ಗಂಗಪ್ಪ ಪಾಟೀಲ ಸಾ|| ಗುಂದಗಿ ಈತನಿಗೆ ಒಂದು ನಾಡ ಪಿಸ್ತೂಲು ಮತ್ತು ಎರಡು ಜಿವಂತ ಗುಂಡುಗಳನ್ನು, ಈರಣ್ಣ ತಂದೆ ಶರಣಗೌಡ ಪಾಟೀಲ ಸಾ|| ಗುಂದಗಿ ಈತನಿಗೆ ಒಂದು ನಾಡ ಪಿಸ್ತೂಲು ಮತ್ತು ಒಂದು ಜಿವಂತ  ಗುಂಡನ್ನು,  ರಮೇಶ ತಂದೆ ಬಾಬುರಾವ ಹಡಪದ ಸಾ|| ತಡಕಲ ತಾ|| ಆಳಂದ ಈತನಿಗೆ ಒಂದು ನಾಡ ಪಿಸ್ತೂಲನ್ನು ಮತ್ತು ಒಂದು ಜಿವಂತ ಗುಂಡನ್ನು ಮತ್ತು ಪ್ರಭು ತಂದೆ ತುಕಾರಾಮ ಜಮಾದಾರ ಸಾ|| ದುದ್ದಣಗಿ ಈತನಿಗೆ ಒಂದು ನಾಡ ಪಿಸ್ತೂಲು ಮತ್ತು ಒಂದು ಜಿವಂತ ಗುಂಡನ್ನು ಮಾರಾಟ ಮಾಡಿರುತ್ತೇನೆ. ಸದರಿಯವರೆಲ್ಲರಿಗೂ ನಾನು ಮಾರಾಟ ಮಾಡಿದ ಪಿಸ್ತೂಲನ್ನು ಮತ್ತು ಗುಂಡುಗಳನ್ನು ಮದ್ಯ ಪ್ರದೇಶದಲ್ಲಿ ಕಡಿಮೆ ರೇಟಿಗೆ ಖರಿದಿ ಮಾಡಿ  ಇಲ್ಲಿ 30-40 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿರುತ್ತೇನೆ ಎಂದು ತಿಳಿಸಿದನು. ಸದರಿ ಆರೋಫಿತನು ಅಕ್ರಮವಾಗಿ ಇಟ್ಟುಕೊಂಡ ಒಂದು ನಾಡ ಪಿಸ್ತೂಲು ||ಕಿ|| 30,000/- ರೂ ಹಾಗೂ 01 ಜಿವಂತ ಗುಂಡು ||ಕಿ|| 100/- ರೂ ಕಿಮ್ಮತ್ತಿನದು ಇದ್ದು, ಸದರಿ ಪಿಸ್ತೂಲನ್ನು ಮತ್ತು ಗುಂಡನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಸದರಿ ಒಂದು ನಾಡ ಪಿಸ್ತೂಲನ್ನು ಮತ್ತು ಒಂದು ಜಿವಂತ ಗುಂಡನ್ನು ಪ್ರತ್ಯಕವಾಗಿ  ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು:
ನೆಲೋಗಿ ಠಾಣೆ : ದಿನಾಂಕ:22-10-2019 ರಂದು ಮದ್ಯಾಹ್ನ ಶ್ರೀ ಕ್ಷೀರಾನಂದ ತಂದೆ ಮಡಿವಾಳಪ್ಪ ಮಾಗಣಗೇರಿ ಸಾ: ಚಿಕ್ಕಸಿಂದಗಿ ತಾ: ಸಿಂದಗಿ ರವರ ತಂಗಿ ರೇಣುಕಾಬಾಯಿ ಇವಳಿಗೆ ದೀಪಾವಳಿ ಹಬ್ಬಕ್ಕೆ ಕರೆದುಕೊಂಡು ಬರುತ್ತೇನೆ ಅಂತಾ ನಮ್ಮ ತಮ್ಮ ರೇವಣಸಿದ್ದ ಮನೆಯಲ್ಲಿ ನಮಗೆ ಹೇಳಿ, ನಮ್ಮ ಪಲ್ಸರ ಸೈಕಲ ಮೋಟಾರ ನಂ. ಕೆಎ-28 ಇಎ-2734 ನೇದ್ದರ ಮೇಲೆ ಹೋಗಿದ್ದನು. ನಂತರ ಇಂದು ಮದ್ಯಾಹ್ನ 3-30 ಗಂಟೆಗೆ ಜೇರಟಗಿ ಗ್ರಾಮದಿಂದ ನಮ್ಮೂರ ಮಲ್ಲಪ್ಪ ನಾಗಾವಿ ಇವರಿಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಿಮ್ಮೂರ ರೇವಣಸಿದ್ದಪ್ಪ ತಂದೆ ಮಡಿವಾಳಪ್ಪ ಮಾಗಣಗೇರಿ ಎಂಬುವವನು ತನ್ನ ಪಲ್ಸರ ಸೈಕಲ ಮೋಟಾರ ಮೇಲೆ ಜೇರಟಗಿಯಿಂದ ಜೇವರ್ಗಿ ಕಡೆಗೆ ರಾಷ್ಟ್ರೀಯ ಹೆದ್ದಾರಿ-50 ಮೇಲೆ ಜೇರಟಗಿ ದಾಟಿ ರದ್ದೆವಾಡಗಿ ಪೆಟ್ರೋಲ ಪಂಪ ಹತ್ತಿರ ಹೋಗುತ್ತಿರುವಾಗ ಒಂದು ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲಅನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೋಂಡು ಬಂದು ರೇವಣಸಿದ್ದನ ಮೋಟಾರ ಸೈಕಲಕ್ಕೆ ಓರಟ್ಯಾಕ ಮಾಡಲು ಹೋಗಿ ರೇವಣಸಿದ್ದನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದು ರೇವಣಸಿದ್ದನು ರಸ್ತೆಯ ಮೇಲೆ ಬಿದ್ದು ಅವನ ತೆಲೆಯ ಹಿಂದುಗಡೆ ಬಾರಿ ರಕ್ತಗಾಯ ವಾಗಿದ್ದು, ಅವನಿಗೆ ಉಪಚಾರ ಕುರಿತು ಅವನಿಗೆ 108 ಅಂಬುಲೆನ್ಸ ವಾಹನದಲ್ಲಿ ಹಾಕಿ ಸಿಂದಗಿಗೆ ಕಳುಹಿಸಿರುತ್ತೇವೆ ಅಂತಾ ತಿಳಿಸಿರುತ್ತಾರೆ ಅಂತಾ ಹೇಳಿದಾಗ,  ನಾನು ನಮ್ಮೂರ ಅನೀಲ ಮಾಗಣಗೇರಿ, ಬಸವರಾಜ ಮಾಗಣಗೇರಿ ಹಾಗೂ ಇತರರೂ ಕೂಡಿ ಸಿಂದಗಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಮ್ಮ ರೇವಣಸಿದ್ದನು ಸೈಕಲ ಮೋಟಾರ ಅಪಘಾತದಲ್ಲಿ ಆದ ಗಾಯಗಳ ಬಾದೆಯಿಂದ ಸತ್ತಿದ್ದನು. ನನ್ನ ತಮ್ಮನ ತೆಲೆಗೆ, ಹೊಟ್ಟೆಗೆ ಬಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿತ್ತು. ವಿಚಾರಣೆಯಲ್ಲಿ ನನ್ನ ತಮ್ಮ ರೇವಣಸಿದ್ದನಿಗೆ ಅಪಗಾತ ಪಡಿಸಿದ ಮೋಟಾರ ಸೈಕಲ ಸವಾರನ ಹೆಸರು ಮಲ್ಕಣ್ಣಗೌಡ ಜೊಗೂರ ಸಾ: ಯಾತನೂರ ಅಂತಾ ಗೊತ್ತಾಗಿದ್ದು ಇರುತ್ತದೆ. ಅಪಗಾತದಲ್ಲಿ ಮಲ್ಕಣ್ಣಗೌಡ ಇವನಿಗೂ ಸಹ ಗಾಯಗಳು ಆಗಿರುತ್ತವೆ ಅಂತಾ ಗೊತ್ತಾಗಿರುತ್ತದೆ, ಅತೀ ವೇಗ ಮತ್ತು ಅಲಕ್ಷತನದಿಂದ ತನ್ನ ಸೈಕಲ ಮೋಟಾರ ನಡೆಸಿ ನಮ್ಮ ತಮ್ಮನ ಮೋಟಾರ ಸೈಕಲಕ್ಕೆ ಓರಟ್ಯಾಕ ಮಾಡಿ ಡಿಕ್ಕಿ ಪಡಿಸಿ ಸೈಕಲ ಮೋಟಾರ ಸಮೇತ ಓಡಿ ಹೋದ ಮಲ್ಕಣ್ಣಗೌಡ ಜೊಗೂರ ಸಾ: ಯಾತನೂರ ಇವನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ನೀತಾ ಗಂಡ ವಿರೇಶ ಹಿರೇಮಠ ಸಾ|| ಯೋಗಾಪೂರ ಕಾಲೋನಿ ವಿಜಯಪೂರ ರವರು  ಕಂಪನಿ ನಾಟಕದಲ್ಲಿ ಪಾತ್ರಗಳನ್ನು ಮಾಡುತ್ತಾ ಗಂಡ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸಿಕೊಂಡಿರುತ್ತೇನೆ. ನನ್ನ ಗಂಡನಾದ ವಿರೇಶ ತಂದೆ ಗುರಯ್ಯ ಹಿರೇಮಠ ಇವರು ಕೂಡಾ ನಾಟಕದಲ್ಲಿ ಪ್ಯಾಡ್ ವಾಧ್ಯ ಬಾರಿಸುವವರಾಗಿರುತ್ತಾರೆ ಅದರಂತೆ ನಮ್ಮ ಸಂಬಂಧಿಕನಾದ ಶ್ರೀಶೈಲ ತಂದೆ ಶಿವಚಲಪ್ಪ ಅಕ್ಕಾ ಸಾ: ನಿಂಬಾಳ ತಾ: ಆಳಂದ ಇತನು ಕೂಡಾ ನನ್ನ ಗಂಡನಂತೆ ಪ್ಯಾಡ್ ವಾಧ್ಯ ಬಾರಿಸುವವನಾಗಿರುತ್ತಾನೆ ಮತ್ತು ಸದರಿ ಶ್ರೀಶೈಲ ರವರ ಮನೆ ನಮ್ಮ ಮನೆ ಪಕ್ಕದಲ್ಲಿ ಇರುತ್ತದೆ. ನಾನು ದೀಪಾವಳಿ ಹಬ್ಬದ ಪ್ರಯುಕ್ತ 15 ದಿನಗಳ ಹಿಂದೆ ನನ್ನ ತವರುರಾದ ಮೈಂದರ್ಗಿ ಗ್ರಾಮಕ್ಕೆ ನನ್ನ ಮಕ್ಕಳಾದ 1) ಆದಿತ್ಯ, 2) ಅಮೃತ ರವರೊಂದಿಗೆ ವಿಜಯಪೂರದಿಂದ ಬಂದಿರುತ್ತೇನೆ. ದಿನಾಂಕ 16-10-2019 ರಂದು ಬೆಳಿಗ್ಗೆ 11:00 .ಎಮ್ ಸುಮಾರಿಗೆ ನನ್ನ ಗಂಡನಾದ ವಿರೇಶ ರವರು ನನಗೆ ಫೋನ್ ಮಾಡಿ ನಾನು ಮತ್ತು ಶ್ರೀಶೈಲ ಇಬ್ಬರು ಕೂಡಿ ಮೋಟಾರ ಸೈಕಲ್ ಮೇಲೆ ಮೈಂದರ್ಗಿಗೆ ಬರುತ್ತಿದ್ದೇವೆ ಅಂತಾ ತಿಳಿಸಿರುತ್ತಾರೆ. ನಂತರ 4:45 ಪಿ.ಎಮ್ ಸುಮಾರಿಗೆ ನಾನು ನನ್ನ ಗಂಡನು ಇನ್ನು ಎಲ್ಲಿ ಇದ್ದಾರೆ ಅಂತಾ ಮಾಹಿತಿ ಕೇಳುವ ಸಲುವಾಗಿ ನನ್ನ ಗಂಡನ ಮೋಬಾಯಿಲ್ ನಂಬರಕ್ಕೆ ಫೋನ್ ಮಾಡಿದಾಗ ಯಾರೋ ಒಬ್ಬರು ಫೋನ್ ರಿಶೀವ್ ಮಾಡಿ ಮೋಬಾಯಿಲ ಇರುವ ವ್ಯಕ್ತಿಗೆ ಅಫಜಲಪೂರ ದಿಂದ ದುಧನಿಗೆ ಹೋಗುವ ಮುಖ್ಯೆ ರಸ್ತೆಯ ಮೇಲೆ ಗಣೇಶನ ಗುಡಿಯ ಮುಂದೆ ಅಫಘಾತವಾಗಿರುತ್ತದೆ. ಅಂತಾ ತಿಳಿಸಿದರು. ಆಗ ನಾನು ಅಫಜಲಪೂರದಲ್ಲಿ ನಮಗೆ ಪರಿಚಯದವರಾದ ಚಂದು ಬನ್ನೆಟ್ಟಿ ರವರಿಗೆ ಪೊನ ಮಾಡಿ ವಿಷಯ ತಿಳಿಸಿದ ಮೇರಗೆ ಸದರಿಯವರು ಸ್ಥಳಕ್ಕೆ ಹೋಗಿ ನನ್ನ ಗಂಡನಿಗೆ ಅಫಘಾತವಾಗಿರುವದನ್ನು ನೋಡಿ ನನ್ನ ಗಂಡನಿಗೆ ಅಫಜಲಪೂರ ಸರಕಾರಿ ಆಸ್ಪತ್ರೇಯಲ್ಲಿ ಪ್ರಾಥಮೀಕ ಚಿಕಿತ್ಸೆ ಕೊಡಿಸಿ ನಂತರ ಅಲ್ಲಿಂದ 108 ಅಂಬ್ಯೂಲೆನ್ಸ ವಾಹನದ ಮುಖಾಂತರ ಕಲಬುರಗಿಯ ಯುನೈಟೇಡ ಆಸ್ಪತ್ರೇಯಲ್ಲಿ ಸೇರಿಕೆ ಮಾಡಿ ನನಗೆ ಕಲಬುರಗಿಗೆ ಬರಲು ಹೇಳಿದ್ದರಿಂದ ನಾನು ಮತ್ತು ನನ್ನ ಅಕ್ಕಳಾದ ಸೀಮಾ ಗಂಡ ಮನೋಜ ಪೂಜಾರಿ ರವರು ನೇರವಾಗಿ ಕಲಬುರಗಿಯ ಯುನೈಟೆಡ ಆಸ್ಪತ್ರೇಗೆ ಹೋಗಿ ನನ್ನ ಗಂಡನಿಗೆ ನೋಡಲಾಗಿ ನನ್ನ ಗಂಡನಿಗೆ ಎಡಗಡೆ ಕಿವಿಯ ಮೇಲೆ ಎಡ ತಲೆಗೆ ಭಾರಿ ರಕ್ತಗಾಯ ಮತ್ತು ಎಡ ಭುಜಕ್ಕೆ ಎಡ ಮೋಣಕಾಲಿಗೆ ರಕ್ತಗಾಯ ಹಾಗೂ ಕುತ್ತಿಗೆಯ ಹಿಂದಿನ ಎಲುಬು ಮುರಿದಂತೆ ಆಗಿರುತ್ತದೆ, ಗದ್ದಕ್ಕೆ ರಕ್ತಗಾಯ ಮತ್ತು ಎದೆಗೆ ಹಾಗೂ ಹೊಟ್ಟೆಗೆ ಒಳಪೆಟ್ಟು ಆಗಿರುತ್ತದೆ. ನನ್ನ ಗಂಡನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತೆವೆ.  ಗಂಡನಾದ ವಿರೇಶ ಇವರು ನಮ್ಮ ಸಂಭಂದಿಕನಾದ ಶ್ರೀಶೈಲ ಇವರು ಚಲಾಯಿಸುತ್ತಿದ್ದ ಮೋಟರ ಸೈಕಲ ನಂ ಕೆಎ-28 ಇಯು-7724 ನೇದ್ದರ ಮೇಲೆ ಹಿಂದೆ ಕುಳಿತು ಮೈಂದರ್ಗಿಗೆ ಹೋಗುತ್ತಿದ್ದಾಗ ಅಫಜಲಪೂರ ಪಟ್ಟಣದಲ್ಲಿ ದುಧನಿ ರೋಡಿಗೆ ಇರುವ ಗಣಪತಿ ಗುಡಿಯ ಮುಂದೆ ರೋಡಿನ ಮೇಲೆ. ಮೋಟರ ಸೈಕಲ ನಡೆಸುತ್ತಿದ್ದ ಶ್ರೀಶೈಲ ಈತನು ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮೋಟರ ಸೈಕಲ ಸ್ಕೀಡ್ ಮಾಡಿದ್ದರಿಂದ, ಮೋಟರ ಸೈಕಲ ಮೇಲೆ ಹಿಂದೆ ಕುಳಿತ ನನ್ನ ಗಂಡನಿಗೆ ಭಾರಿ ರಕ್ತಗಾಯ ಮತ್ತು ಭಾರಿ ಒಳಪೆಟ್ಟುಗಳು ಆಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಜಯಶ್ರೀ ಗಂಡ ಶಿವಗೊಂಡಪ್ಪ ಮೂರಮನ ಸಾ|| ಅಳ್ಳಗಿ (ಬಿ) ಗ್ರಾಮ ತಾ|| ಅಫಜಲಪೂರ ರವರ ಮಗಳಾದ ರಾದಿಕಾ ವಯ|| 17 ವರ್ಷ ಇವಳು ಅಫಜಲಪೂರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಯಲ್ಲಿ ವಿದ್ಯಾಬ್ಯಾಸ ಮಾಡುತ್ತಾಳೆ. ನನ್ನ ಮಗಳು ಪ್ರತಿ ದಿವಸ ಕಾಲೇಜಿಗೆ ನಮ್ಮೂರಿನಿಂದ ಬಸ್ಸಿನಲ್ಲಿ ಹೋಗಿ ಬರುವುದು ಮಾಡುತ್ತಾಳೆ. ದಿನಾಂಕ 10-10-2019 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನನ್ನ ಮಗಳಾದ ರಾದಿಕಾ ಇವಳು ಎಂದಿನಂತೆ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮ ಮನೆಯಿಂದ ಕಾಲೇಜಿಗೆ ಹೋಗಿರುತ್ತಾಳೆ. ಸಂಜೆ ಎಷ್ಟೊತ್ತಾದರೂ ನನ್ನ ಮಗಳು ಮನೆಗೆ ಬರದೆ ಇದ್ದುದರಿಂದ ನನ್ನ ಮಗಳ ಮೋ ನಂ 6364233882 ನೇದ್ದಕ್ಕೆ ಪೋನ್ ಮಾಡಿದಾಗ ನನ್ನ ಮಗಳ ಮೋಬೈಲ ಪೋನ್ ಸ್ವೀಚ್ ಆಪ್ ಆಗಿರುತ್ತದೆ. ನಂತರ ನನ್ನ ಮಗಳನ್ನು ನಾನು ಮತ್ತು ನನ್ನ ಮಕ್ಕಳು ಹಾಗೂ ನಮ್ಮ ಸಂಭಂದಿಕರು ಕೂಡಿ ಅಂದಿನಿಂದ ಇಂದಿನ ವರೆಗೆ ದುಧನಿ, ಅಕ್ಕಲಕೋಟ, ವಿಜಯಪೂರ, ಸಿಂದಗಿ ಆಲಮೇಲ್, ಘತ್ತರಗಾ, ದೇವಲ ಗಾಣಗಾಪೂರಗಳಿಗೆ ಹೋಗಿ ನನ್ನ ಮಗಳನ್ನು ಹುಡುಕಾಡಿದ್ದು ನನ್ನ ಮಗಳು ಎಲ್ಲಿಯೂ ಪತ್ತೆ ಆಗಿರುವುದಿಲ್ಲ. ನನ್ನ ಮಗಳಾದ ರಾದಿಕಾ ಇವಳನ್ನು ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಅಫಹರಿಸಿಕೊಂಡು ಹೋಗಿದ್ದು, ನನ್ನ ಮಗಳನ್ನು ಪತ್ತೆ ಮಾಡಿ, ನನ್ನ ಮಗಳನ್ನು ಅಪಹರಿಸಿದವರ ಮೇಲೆ ಕಾನೂನಿನ ಕ್ರಮ ಜರೂಗಿಸಬೇಕು ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.