Police Bhavan Kalaburagi

Police Bhavan Kalaburagi

Wednesday, February 24, 2021

BIDAR DISTRICT DAILY CRIME UPDATE 24-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-02-2021

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 02/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 23-02-2021 ರಂದು ಫಿರ್ಯಾದಿ ಬಸ್ವರಾಜ ತಂದೆ ಗುರುನಾಥ ಕುನ್ನೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಬೆಳಕುಣಿ(ಬಿ) ರವರ ವೈಜಿನಾಥ ತಂದೆ ನಾಗನಾಥ ಬಿರಾದಾರ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಕಾಳಗಾಪೂರ, ತಾ: ಕಮಲನಗರ ರವರು ತನ್ನ ಹೊಲಕ್ಕೆ ಕೆಲಸಕ್ಕೆ ಹೊಗುತ್ತೆನೆ ಅಂತಾ ಹೋಗಿ ತನ್ನ ಹೊಲ ಸರ್ವೆ ನಂ. 62 ನೇದರಲ್ಲಿನ ಬಾರೆ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಭಾವನ ಮರಣದ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲ, ಅವರು ಯಾವ ಕಾರಣಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಅಂತಾ ಗೊತ್ತಾಗಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 279, 337, 338 ಐಪಿಸಿ :-

ದಿನಾಂಕ 23-02-2021 ರಂದು ಫಿರ್ಯಾದಿ ರಾಮಣ್ಣಾ ತಂದೆ ಈಶ್ವರ ಹೆಗಡೆ ಸಾ: ಮುಗನೂರ ರವರ ಚಿಕ್ಕಪ್ಪನ ಮಗನಾದ ವಿಲಾಸ ತಂದೆ ವೈಜಿನಾಥ ಹೆಗಡೆ ಇತನು ಚಿಕ್ಕಪ್ಪನ ಮಗಳಾದ ಶೃತಿ ಹೆಗಡೆ ಇವಳು ಕಾಲೇಜು ಮುಗಿಸಿಕೊಂಡು ದುಬಲಗುಂಡಿ ಗ್ರಾಮಕ್ಕೆ ಬಂದಿದ್ದು ಅವಳನ್ನು ಕರೆದುಕೊಂಡು ಬರುವ ಸಲುವಾಗಿ ಹಿರೋ ಫ್ಯಾಶನ ಪ್ರೋ ಮೋಟಾರ ಸೈಕಲ್ ನಂ. ಕೆಎ-32/.ಎಲ್-3566 ನೇದನ್ನು ಚಲಾಯಿಸಿಕೊಂಡು ದುಬಲಗುಂಡಿ ಗ್ರಾಮಕ್ಕೆ ಹೋಗಿ ದುಬಲಗುಂಡಿ ಗ್ರಾಮದಿಂದ ಮುಗನೂರ ಗ್ರಾಮಕ್ಕೆ ಬರುವಾಗ ಮುಗನೂರ ಗ್ರಾಮದ ಶಿವಾರ ರಾಮಚಂದ್ರ ಹಲಗೆನೋರ ರವರ ಹೊಲದ ಹತ್ತಿರ ರೋಡಿನ ಮೇಲೆ ವಿಲಾಸ ಇವನು ಸದರಿ ಮೋಟಾರ ಸೈಕಲ್ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುವಾಗ ಎದರುಗಡೆಯಿಂದ ಅಂದರೆ ಮುಗನೂರ ಗ್ರಾಮದ ಕಡೆಯಿಂದ ಬಜಾಜ್ ಡಿಸ್ಕವರ್ ಮೋಟಾರ ಸೈಕಲ್ ನಂ. ಎಮ್.ಹೆಚ್-14/ಬಿ.ಡಿ-8434 ನೇದರ ಚಾಲಕನಾದ ಆರೋಪಿ ತಾನಾಜಿ ತಂದೆ ರೇವಣಪ್ಪಾ ಸುಗಂಧಕರ್ ಸಾ: ನಾವದಗಿ ಗ್ರಾಮ ಇತನು ಸಹ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಎರಡು ಮೋಟಾರ ಸೈಕಲ್ ಮುಖಾ ಮುಖಿ ಡಿಕ್ಕಿಯಾಗಿರುತ್ತವೆ, ಸದರಿ ಡಿಕ್ಕಿಯಿಂದ ವಿಲಾಸ ಇತನ ಬಲಗಾಲ ಬೆರಳುಗಳಿಗೆ ಭಾರಿ ಕಟ್ಟಾದ ಗಾಯ, ಬಲಗೈ ಬೆರಳುಗಳಿಗೆ ರಕ್ತಗಾಯ, ಬಲಗಾಲ ಮೋಳಕಾಲಿಗೆ ಮತ್ತು ಮೋಳಕಾಲ ಕೆಳಗೆ ತರಚಿದ ರಕ್ತಗಾಯ, ಎಡಭಾಗದ ಮೂಗಿನ ಕೆಳಗೆ ಹಾಗೂ ಮೇಲುಕಿಗೆ ರಕ್ತಗಾಯಗಳು ಆಗಿರುತ್ತವೆ, ಶೃತಿ ಇವಳಿಗೆ ಬಲಗಾಲ ತೋಡೆಗೆ ಗುಪ್ತಗಾಯ ಮತ್ತು ಎಡಗೈ ಮುಂಗೈ ಹತ್ತಿರ ತರಚಿದ ಗಾಯವಾಗಿರುತ್ತದೆ ಹಾಗೂ ಆರೋಪಿ ತಾನಾಜಿ ಇತನಿಗೆ ಬಲಗೈ ಮೋಳಕೈ ಕೆಳಗೆ, ಬಲಗಾಲ ತೊಡೆಗೆ ತರಚಿದ ರಕ್ತಗಾಯಗಳು ಮತ್ತು ಬಲಗಾಲ ಪಾದಕ್ಕೆ ಗುಪ್ತಗಾಯವಾಗಿರುತ್ತದೆ ನಂತರ ಗಾಯಗೊಂಡ ಎಲ್ಲರಿಗೂ 108 ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಹಳ್ಳಿಖೇಡ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಸಂತಪೂರ ಪೋಲಿಸ ಠಾಣೆ ಅಪರಾಧ ಸಂ. 11/2021, ಕಲಂ. 363 ಐಪಿಸಿ :-

ದಿನಾಂಕ 23-02-2021 ರಂದು ಫಿರ್ಯಾದಿ ಲಾಲಪ್ಪಾ ತಂದೆ ಚಂದ್ರಪ್ಪಾ ಮೇತ್ರೆ ಸಾ: ಲಾಧಾ ರವರ ಮಗಳಾದ ಮಾರ್ತಮ್ಮಾ ಇವಳು ಸಂತಪೂರ ವಿಜಯರಾಜ ಚತುರೆ ಪಿಯು ಕಾಲೇಜನಲ್ಲಿ ಪಿಯುಸಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ, ಅವಳಿಗೆ ಶೆಂಬೆಳ್ಳಿ ಗ್ರಾಮದ ರತಿಕಾಂತ ತಂದೆ ರಾಮಣ್ಣಾ ಈತನು ತನ್ನ ಮೊಟಾರ ಸೈಕಲ್ ಮೇಲೆ ಆಗಾಗ ಕೂಡಿಸಿಕೊಂಡು ಓಡಾಡುತ್ತಿದ್ದ ಬಗ್ಗೆ ತಿಳಿದು ಬಂದಿರುತ್ತದೆ, ಹೀಗಿರುವಾಗ ದಿನಾಂಕ 21-02-2021 ರಂದು ಫಿರ್ಯಾದಿಯು ತನ್ನ ಹೆಂಡತಿ, ತಾಯಿ, ತಂದೆ ಎಲ್ಲರೂ ತಮ್ಮ ಹೊಲಕ್ಕೆ ಕಡಲೆ ಬೆಳೆ ತೆಗೆಯಲು ಹೋದಾಗ ಮನೆಯಲ್ಲಿ ಮಾರ್ತಮ್ಮಾ ಇವಳು ಇದ್ದಳು, ನಂತರ ಎಲ್ಲರೂ ಮನೆಗೆ ಬಂದಾಗ ಮನೆಯಲ್ಲಿ ಮಗಳು ಮಾರ್ತಮ್ಮಾ ಇವಳು ಇದ್ದಿರುವುದಿಲ್ಲಾ, ಆಗ ಫಿರ್ಯಾದಿಯು ಹುಡುಕಾಡುತ್ತಾ ತಮ್ಮೂರಲ್ಲಿ ತಮ್ಮಂದಿರಾದ ಡೇವಿಡ್ ಹಾಗೂ ದಿಲೀಪ ರವರ ಮನೆಗೆ ಹೋಗಿ ಅವರಿಗೆ ವಿಚಾರಿಸಲು ದಿಲೀಪ ಈತನು ತಿಳಿಸಿದೇನೆಂದರೆ ಇಂದು 1600 ಗಂಟೆಗೆ ಮಾರ್ತಮ್ಮಾ ಇವಳಿಗೆ ಶೆಂಬೆಳ್ಳಿ ಗ್ರಾಮದ ರತಿಕಾಂತ ತಂದೆ ರಾಮಣ್ಣಾ ಈತನು ಗ್ರಾಮ ಪಂಚಾಯತ ಹತ್ತಿರದಿಂದ ಮೊಟಾರ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗಿದ್ದು ನೋಡಿರುತ್ತೇನೆ ಎಂದು ತಿಳಿಸಿರುತ್ತಾನೆ, ಮಗಳು ಮಾರ್ತಮ್ಮಾ ಇವಳ ಚಹರೆ ಪಟ್ಟಿ 1) ದುಂಡು ಮುಖ, ಸಣ್ಣ ಮೂಗು, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, 2) 4 ಫೀಟ 10 ಇಂಚು ಎತ್ತರ, 3) ಅವಲು ಮೈಮೇಲೆ ಹಸಿರು ಬಣ್ಣದ ಟಾಪ ಬಿಳಿ ಬಣ್ಣದ ಪ್ಯಾಂಟ ಧರಿಸಿಕೊಂಡಿರುತ್ತಾಳೆ, ಕಾರಣ ಫಿರ್ಯಾದಿಯವರ ಮಗಳಾದ ಮಾರ್ತಮ್ಮಾ ಇವಳು 16 ವರ್ಷ 8 ತಿಂಗಳ ವಯಸ್ಸಿನ ಅಪ್ರಾಪ್ತ ಬಾಲಕಿಯನ್ನು ಆರೋಪಿ ರತಿಕಾಂತ ತಂದೆ ರಾಮಣ್ಣಾ ಸಾ: ಶೆಂಬೆಳ್ಳಿ ಈತನು ಅಪಹರಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 16/2021, ಕಲಂ. 34, 38(ಎ) ಕೆ.ಇ ಕಾಯ್ದೆ :-

ದಿನಾಂಕ 23-02-2021 ರಂದು ಬಾಜೋಳಗಾ ಕ್ರಾಸ್ ಹತ್ತಿರ ಭಾಲ್ಕಿ-ಬಸವಕಲ್ಯಾಣ ರೋಡಿನ ಪಕ್ಕದಲ್ಲಿರುವ ಜೈ ತುಳಜಾ ಭವಾನಿ ಧಾಬಾದಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಹುಲೆಪ್ಪಾ ಪಿಎಸ್ಐ ಖಟಕಚಿಚೊಳಿ ಪೊಲೀಸ ಠಾಣ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಜೋಳಗಾ ಕ್ರಾಸದಿಂದ ಸ್ವಲ್ಪ ದೂರ ಬಂದು ರೋಡಿನ ಬದಿಯಲ್ಲಿ ಒಂದು ಚಿಕನ ಅಂಗಡಿ ಮರೆಯಾಗಿ ನಿಂತು ನೋಡಲು ಭಾಲ್ಕಿ-ಬಸವಕಲ್ಯಾಣ ರೋಡಿನ ಬದಿಯಲ್ಲಿರುವ ಜೈ ತುಳಜಾ ಭವಾನಿ ಧಾಬಾದಲ್ಲಿ ಆರೋಪಿ ಮೌಲಾ ತಂದೆ ಯುನಿಸ ಮೀಯಾ ಫಕೀರ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ದಾಡಗಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆತನಿಗೆ ವಶಕ್ಕೆ ಪಡೆದು ದಾಭಾದಲ್ಲಿನ ಕೌಂಟರ ಪರಿಶೀಲಿಸಿ ನೊಡಲು ಕೌಂಟರ್ ಕೆಳಗೆ 1) ಕಿಂಗ್ ಫೀಶರ ಸ್ಟ್ರಾಂಗ್ ಬಿಯರ್ 650 ಎಂ.ಎಲ್ ವುಳ್ಳ 27 ಬಾಟಲಿಗಳು ಅ.ಕಿ 4050/- ರೂ. ಮತ್ತು 2) ಕಿಂಗ್ ಫೀಶರ ಸ್ಟ್ರಾಂಗ್ ಬಿಯರ್ 330 ಎಂ.ಎಲ್ ವುಳ್ಳ 2 ಡಬ್ಬಿಗಳು ಅ.ಇ 170/- ರೂ. ಹೀಗೆ ಒಟ್ಟು ಸರಾಯಿ 18.210 ಲೀಟರ ನಷ್ಟು ಅ.ಕಿ 4220/- ರೂ. ಮೌಲ್ಯದ ಸರಾಯಿ ಇದ್ದು, ನಂತರ ಆರೋಪಿಗೆ ಸರಾಯಿ ಮಾರಾಟ ಮಾಡಲು ಯಾವುದಾದರು ಇಲಾಖೆಯಿಂದ ಅನುಮತಿ ಪಡೆದುಕೊಂಡಿದ್ದಿಯಾ ಅಂತ ಕೆಳಲು ಸದರಿಯವನು ಇಲ್ಲಾ ಅಂತ ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ ಆತನ ಅಂಗ ಝಡ್ತಿ ಮಾಡಿ ನೊಡಲು ಅವನ ಹತ್ತಿರ ಯಾವುದೆ ವಸ್ತುಗಳು ಸಿಕ್ಕಿರುವುದಿಲ್ಲಾ, ನಂತರ ಸದರಿ ಆರೋತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 20/2021, ಕಲಂ. 32, 34 ಕೆ. ಕಾಯ್ದೆ :-

ದಿನಾಂಕ 23-02-2021 ರಂದು ಮಿರ್ಜಾಪೂರ ಗ್ರಾಮದ ಬೊಂಬಗೊಂಡೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸರಕಾರದಿಂದ ಯಾವುದೇ ಪರವಾನಗಿ ಇಲ್ಲದೆ ಅನಧೀಕೃತವಾಗಿ ಒಂದು ಚೀಲದಲ್ಲಿ ಸರಾಯಿ ಇಟ್ಟುಕೊಂಡು ರಾಯಿ ಮಾರಾಟ ಮಾಡುತ್ತಿದ್ದಾನೆಂದು ವಸೀಮ ಪಟೇಲ್ ಪಿಎಸ್ಐ (ಕಾ&ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮಿರ್ಜಾಪೂರ ಗ್ರಾಮದ ಬೊಂಬಗೊಂಡೇಶ್ವರ ಚೌಕದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಬೊಂಬಗೊಂಡೇಶ್ವರ ಚೌಕ ಹತ್ತಿರ ಆರೋಪಿ ಶಿವಾಜಿ ತಂದೆ ಬಂಡೆಪ್ಪಾ ಕಾಂಬಳೆ ವಯ: 48 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಮಿರ್ಜಾಪೂರ ಇತನು ತನ್ನ ಹತ್ತಿರ ಒಂದು ಚೀಲದಲ್ಲಿ ಸರಾಯಿ ಇಟ್ಟುಕೊಂಡು ಜನರಿಗೆ ಮಾರಾಟ ಮಾಡುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಸದರಿಯವನಿಗೆ ಹಿಡಿಯುವಾಗ ಸರಾಯಿ ಖರಿದಿ ಮಾಡುತ್ತಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಆರೋಪಿಗೆ ಹಿಡಿದು ಚೀಲದಲ್ಲಿ ಏನಿದೆ ಅಂತಾ ವಿಚಾರಣೆ ಮಾಡಲು ಆತನು ತಿಳಿಸಿದ್ದೆನೆಂದರೆ ಇದರಲ್ಲಿ ಸರಾಯಿ ಇದೆ ನಾನು ಸರಕಾರದಿಂದ ಯಾವುದೇ ಪರವಾನಗಿ ಇಲ್ಲದೆ ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದೆನೆ ಅಂತಾ ಒಪ್ಪಿಕೊಂಡಿದ್ದರಿಂದ ಆತನ ಹತ್ತಿರ ಇದ್ದ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ ಓರಿಜಿನಲ್ ಚಾಯಸ ಡಿಲಕ್ಸ ವಿಸ್ಕಿ ಸರಾಯಿ 90 ಎಂ.ಎಲ ವುಳ್ಳ 30 ಟೆಟ್ರಾ ಪ್ಯಾಕೇಟಗಳು ಅ.ಕಿ 1,050/- ರೂ ಇರುತ್ತದೆ, ನಂತರ ಪಂಚರ ಸಮಕ್ಷಮ ಸದರಿ ಸರಾಯಿಯನ್ನು ತಾಬೆಗೆ ತೆಗೆದುಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.