ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:
08-07-2020
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 103/2020 ಕಲಂ 379 ಐಪಿಸಿ :-
ದಿನಾಂಕ 07/07/2020 ರಂದು 1300 ಗಂಟೆಗೆ ಫಿರ್ಯಾದಿ ಶ್ರೀ ಅನಿಲಕುಮಾರ ತಂದೆ ಬಸವರಾಜ ಬಿರಾದಾರ ವಯ 44 ವರ್ಷ, ಉ-ಜೆಸ್ಕಾಂ ಶಾಖಾಧಿಕಾರಿ
ಯುನಿಟ ನಂ 03 ಬೀದರ ಉಪ ವಿಭಾಗ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆದರೆ
ಬೀದರ ತಾಲುಕಿನ ಚಿಟ್ಟಾವಾಡಿ ಗ್ರಾಮ ಶಿವಾರದಲ್ಲಿ ಇರುವ ಚಿಟ್ಟಾವಾಡಿ ಹೌಸಿಂಗ ಬೊರ್ಡ ಖಾಲಿ
ನಿವೆಶನ ಬಡಾವಣೆಯಲ್ಲಿ ಜೆಸಕಾಂ ಇಲಾಖೆಗೆ ಸೇರಿದ ವಿದ್ಯುತ ಸರಬರಾಜು ಕುರಿತು ಟ್ರಾಂಸಫಾರಂಗಳು
ಅಳವಡಿಸಿದ್ದು ಇರುತ್ತದೆ. ದಿನಾಂಕ 28/06/2020 ರಂದು ಪಿರ್ಯಾದಿಯವರು ಸದರಿ ಎರಿಯಾದಲ್ಲಿ ವಿದ್ಯುತ ಸರಬರಾಜು
ಪರಿಶಿಲನೆ ಹಾಗು ಲೈನ ಫಾಲ್ಟ ಪರಿಶಿಲಿಸಲು
ಹೊಗಿದ್ದು ಸದರಿ ಟ್ರಾಂಸಫಾರಂ ಗಳ ರಿಡಿಂಗ ಚೇಕ ಮಾಡಿರುತ್ತಾರೆ. ಪುನಃ ದಿನಾಂಕ 06/07/2020 ರಂದು ಮುಂಜಾನೆ 1000 ಗಂಟೆಯ ಸುಮಾರಿಗೆ
ಪರಿಶೀಲನೆ ಹಾಗು ರಿಡಿಂಗ ಚೇಕ ಮಾಡಲು ಹೊದಾಗ ಅಲ್ಲಿ ಸದರಿ ಟ್ರಾಂಸಫಾರಂಗಳು ಕೇಳಗೆ ಬಿದ್ದಿದು
ನೊಡಿ ಪರಿಶಿಲಿಸಿದಾಗ ಟ್ರಾಂಸಫಾರಂ ಗಳಲ್ಲಿನ
ಅಲುಮಿನಿಯಮ ಕಾಯಿಲ ಹಾಗು ಆಯಿಲ ಕಳವು ಆಗಿದ ಬಗ್ಗೆ ತಿಳಿದು ಮೇಲಾಧೀಕಾರಿಗಳಿಗೆ ಈ ವಿಷಯ ತಿಳಿಸಿರುತ್ತೆನೆ, ಅಂದಾಜು 90300=00 ರೂಪಾಯಿ ಬೆಲೆ ಬಾಳುವ ಆಯಿಲ ಮತ್ತು ಅಲುಮಿನಿಯಮ ಕಾಯಿಲ ಯಾರೊ
ಕಳ್ಳರು ದಿನಾಂಕ.28-06-2020 ರಂದು 1800 ಗಂಟೆಯಿಂದ ದಿ, 06/07/2020 ರಂದು 1000 ಗಂಟೆಯ ಅವಧಿಯಲ್ಲಿ
ಕಳವು ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 104/2020 ಕಲಂ 78(3) ಕೆ.ಪಿ. ಕಾಯ್ದೆ :-
ದಿನಾಂಕ 07/07/2020 ರಂದು ಬೀದರ ಜಹಿರಾಬಾದ ರೋಡಿಗೆ ಇರುವ ಶಹಾರ ಹನುಮಾನ ಮಂದಿರದ ಹತ್ತಿರ ಒಬ್ಬ ವ್ಯಕ್ತಿ 1ರೂಪಾಯಿಗೆ 100ರೂಪಾಯಿ ಕೊಡವುದಾಗಿ
ಕುಗುತ್ತಾ ಮಟಕಾ ಚಿಟಿ ಬರೆದುಕೊಳ್ಳೂತ್ತಿದ್ದುದನ್ನು ದೃಡಪಡಿಸಿಕೊಂಡು ಪಿಎಸ್ಐ ರವರು
ಸಿಬ್ಬಂದಿಯೊಂದಿಗೆ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಯಿಸಿ ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಬಸವರಾಜ ತಂದೆ ಶರಣಪ್ಪಾ ಮಂಡಪ್ಪನೋರ ವಯ 28 ವರ್ಷ ಸಾ: ಲಾಡಗೇರಿ ಅಂತಾ ತಿಳಿಸಿದಾಗ ಅವನ ಆಂಗ ಝಡ್ತಿ ಮಾಡಲು
ಅವನ ಬಳಿ ನಗದು ಹಣ 2,200/- ಮತ್ತು 3 ಮಟಕ ಚೀಟಿಗಳು ಹಾಗೂ ಒಂದು ಬಾಲ ಪೆನ್ನು ಅವನಿಂದ ವಶ
ಪಡಿಸಿಕೊಂಡಿದ್ದು ಇರುತ್ತದೆ ನಂತರ ಅವನಿಗೆ ವಿಚಾರಿಸಲು ಅವನು ತಾನು ಬರೆದುಕೊಂಡು ಮಟಕಾ ಚಿಟಿ
ಮತ್ತು ಹಣವನ್ನು ಬೀದರ ನಗರದ ಲಾಡಗೇರಿ ಓಣಿಯ
ರಮೇಶ ತಂದೆ ಮೊಹನರಾವ ಜಮಾದಾರ 30 ವರ್ಷ ಜಾತಿ ಕಬ್ಬಲಿಗೆರ ಉ: ಕೂಲಿ ಕೆಲಸ ಸಾ: ಲಾಡಗೇರಿ ಇತನಿಗೆ
ನಿಡುತ್ತೇನೆ ಅಂತಾ ತಿಳಿಸಿದ ಇರುತ್ತದೆ. ಅವನ ಬಳಿ ಇದ್ದ ನಗದು ಹಣ ಮತ್ತು ಮಟಕಾ ಚೀಟಿ ಹಾಗೂ ಬಾಲ
ಪೆನ್ನನ್ನು ನಗದು ಹಣ ಜಪ್ತಿ ಮಾಡಿಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 89/2020 ಕಲಂ 78(3) ಕೆಪಿ ಕಾಯ್ದೆ :-
ದಿನಾಂಕ:07/07/2020 ರಂದು 10:30 ಗಂಟೆಗೆ ನಾನು ಸುನೀಲ್ ಕುಮಾರ ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಬಸವ ಕಲ್ಯಾಣ ನಗರದ ಸದಾನಂದ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಗುಪ್ತ ಮಾಹಿತಿ ಬಂದ
ಮೇರೆಗೆ ಸಿಬ್ಬಂದಿಯೊಂದಿಗೆ ಬಸವಕಲ್ಯಾಣ ನಗರದ ಸದಾನಂದ ಮಠದಿಂದ ದಿಂದ 50 ಅಡಿ ಅಂತರದಲ್ಲಿ ಜೀಪ್ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಭಾತ್ಮಿಯಂತೆ ಸದಾನಂದ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಸಮಯ 12:30 ಗಂಟೆಗೆ ಎಲ್ಲರು ಒಮ್ಮಲೆ ದಾಳಿಮಾಡಿದಾಗ ಮಲ್ಲಿಕಾರ್ಜುನ ಸಿಪಿಸಿ-1043 ರವರು ಹಿಡಿದು ಕೊಂಡಿದಾಗ ಪಿ.ಎಸ್.ಐ [ಕಾ&ಸು] ಸದರಿ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಸಾಕೀಬ ತಂದೆ ಸಲಿಮೋದ್ದಿನ ಮಠವಾಲೆ ವಯಸ್ಸು//26 ವರ್ಷ ಜಾತಿ//ಮುಸ್ಲಿಂ ಉ//ಗೋಲ್ಡಸ್ಮಿತ್ ಸಾ//ಖಿಲ್ಲಾಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದಾಗ ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 102500/-ರೂ,ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.