Police Bhavan Kalaburagi

Police Bhavan Kalaburagi

Saturday, July 17, 2021

BIDAR DISTRICT DAILY CRIME UPDATE 17-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-07-2021

 

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 18/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ರವೀಂದ್ರ ತಂದೆ ನಿಲಕಂಠ ಮಾರಜೊಡೆ ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ಕೊಸಮ, ತಾ: ಭಾಲ್ಕಿ ರವರ ಮಗನಾದ ಗಣೇಶ ತಂದೆ ರವಿಂದ್ರ ವಯ: 22 ವರ್ಷ, ಇತನಿಗೆ ಅಂದಾಜು 3-4 ವರ್ಷಗಳಿಂದ ಹೊಟ್ಟೆ ಬೇನೆ ಇದ್ದು, ಖಾಸಗಿ ಚಿಕಿತ್ಸೆ ಮಾಡಿಸಿದರು ಸಹ ಕಡಿಮೆ ಆಗಿರುವುದಿಲ್ಲ, ಈಗ ಎರಡು ಮೂರು ದಿವಸಗಳಿಂದ ಗಣೇಶ ಇತನಿಗೆ ಮಿತಿ ಮೀರಿ ಹೊಟ್ಟೆ ಬೇನೆ ಪ್ರಾರಂಭವಾಗಿರುತ್ತದೆ,       ಹೀಗಿರುವಲ್ಲಿ ದಿನಾಂಕ 15-07-2021 ರಂದು ಫಿರ್ಯಾದಿಯವರ ಮಗನಾದ ಗಣೇಶ ಇತನು ಹೊಟ್ಟೆ ಬೇನೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 16-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 77/2021, ಕಲಂ. ಮನುಷ್ಯ ಕಾಣೆ :-

ದಿನಾಂಕ 14-07-2021 ರಂದು ಫಿರ್ಯಾದಿ ಸಂಪಗಂಡ ಶ್ರೀಕಾಂತ ಗುದಗೆ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಗುಡ್ಡಾ ಕಾಲೋನಿ ಬಸವಕಲ್ಯಾಣ ರವರಿಗೆ ಗಂಡ ಶ್ರೀಕಾಂತ ರವರು ಬೀದರಗೆ ಕರೆದುಕೊಂಡು ಬಂದು ಬೀದರ ಕೆಇಬಿ ಕಛೇರಿ ಹತ್ತಿರ ಇರುವ ಗಂಡನವರ ಅಕ್ಕ ಶ್ರೀತಾ ಗಂಡ ಸಂಗ್ರಾಮ ಕಾಸ್ತೆ ರವರ ಮನೆಯಲ್ಲಿ ಫಿರ್ಯಾದಿಗೆ ಬಿಟ್ಟು ಅವರ ತಾತಾ ಕಲ್ಲಪ್ಪಾ ರವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ತೋರಿಸಿ ಅವರ ದೊಡ್ಡಪ್ಪಾ ಚಂದ್ರಕಾಂತ ಗುದಗೆ ರವರನ್ನು ಭೇಟಿ ಮಾಡಿ ಬರುತ್ತೆನೆಂದು ಮನೆಯಿಂದ ಹೋದರು, ನಂತರ ತಾತ ಕಲ್ಲಪ್ಪಾ ರವರನ್ನು ಚಂದ್ರಕಾಂತ ಗುದಗೆ ರವರ ಹತ್ತಿರ ಬಿಟ್ಟು ಹೋಗಿ ಗಂಡ ತನ್ನ ಮೋಬೈಲ್ ನಂ. 9611145484 ನೇದರಿಂದ ಫಿರ್ಯಾದಿಯ ಮೋಬೈಲ್ ನಂ. 8217579551 ನೇದ್ದಕ್ಕೆ ಕರೆ ಮಾಡಿ ನಾನು ಬೀದರದಲ್ಲಿರುವ ಡಿಸಿಸಿ ಬ್ಯಾಂಕಗೆ ಹೋಗಿ ಬರುತ್ತೇನೆಂದು ಹೇಳಿದರು, ನಂತರ ಫಿರ್ಯಾದಿಯು 1430 ಗಂಟೆಗೆ ನ್ನ ಮೋಬೈಲನಿಂದ ಗಂಡನ ಮೋಬೈಲಗೆ ಕರೆ ಮಾಡಿದಾಗ ಸಿ್ವೕಚ್ ಆಫ್ ಬಂದಿರುತ್ತದೆ, ಫಿರ್ಯಾದಿಯು ಪದೇ-ಪದೆ ನ್ನ ಗಂಡನ ಮೋಬೈಲಗೆ ಕರೆ ಮಾಡಿದರೂ ಸಹ ಅದು ಸ್ಚಿಚ್ಡ್ ಆಫ್ ಅಂತಾ ಬಂದಿರುತ್ತದೆ, ಫಿರ್ಯಾದಿಯು ಗಾಬರಿಗೊಂಡು ಸದರಿ ವಿಷಯವನ್ನು ಮಹಾಗಾಂವದಲ್ಲಿರುವ ತನ್ನ ತಮ್ಮ ಸಚಿನ ರವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಅವರು ಸಹ ಗಂಡನಿಗೆ ಕರೆ ಮಾಡಿದರೂ ಗಂಡನ ಮೋಬೈಲ್ ಸ್ವಿಚ್ಡ್ ಆಫ್ ಬಂದಿರುತ್ತದೆ, ಇಂದಲ್ಲಾ ನಾಳೆ ನ್ನ ಗಂಡನ ಮನೆಗೆ ಬರಬಹುದೆಂದು ಮತ್ತು ಎಲ್ಲ ಬಂದುಬಳಗ ದವರಿಗೆ ಕರೆ ಮಾಡಿ ನ್ನ ಗಂಡನ ಬಗ್ಗೆ ವಿಚಾರಿಸಲು ಎಲ್ಲಿಯು ತ್ತೆಯಾಗÀಲಿಲ್ಲಾ, ಕಾಣೆಯಾದ ನ್ನ ಗಂಡನ ವಿವಿರ 1) ಶ್ರೀಕಾಂತ ಗುದಗೆ ತಂದೆ ಶೆರಣಪ್ಪಾ ಗುದಗೆ ವಯ: 35 ವರ್ಷ, 2) ಎತ್ತರ: 5’ 6’’, 3) ಚಹರೆ: ದುಂಡÄ ಮುಖ, ಸದೃಢವಾದ ಮೈಕಟ್ಟು, ಅಗಲ ಹಣೆ, ನೇರವಾದ ಮೂಗು 4) zsÀರಿಸಿದ ಬಟ್ಟೆ: ಬಿಳಿ ಬಣ್ಣದ ಶರ್ಟ ಒಳಗಡೆ ಚಾಕಲೇಟ ಗೇರೆಯುಳ್ಳದ್ದು, ಕಪ್ಪು ಬಣ್ಣದ ಪ್ಯಾಂಟ ಹಾಗೂ 5) ಮಾತನಾಡುವ ಭಾಷೆ: ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳೀಕೆ ಸಾರಾಂಶದ ಮೇರೆಗೆ ದಿನಾಂಕ 16-06-2021 ರಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ.28/2021, ಕಲಂ. 498(), 323, 324, 504, 307 ಐಪಿಸಿ :-

ಫಿರ್ಯಾದಿ ಅಂಬಿಕಾ @ ಅಮ್ರೀನ್ ಗಂಡ ಶೇಕ  ಖಾಜಾ ಮೈನೊದ್ದಿನ್ ವಯ: 30 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಮುಲ್ತಾನಿ ಕಾಲೋನಿ, ಸದ್ಯ: ಮೈಲೂರು ಬೀದರ ರವರು ಸುಮಾರು 9 ವರ್ಷಗಳ ಹಿಂದೆ ಮುಲ್ತಾನಿ ಕಾಲೋನಿಯ ಎಂ.ಡಿ ಮಜಿತೋದ್ದಿನ ರವರ ಮಗನಾದ ಶೇಖ ಖಾಜಾ ಮೈನೋದ್ದಿನ್ ಇತನಿಗೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಗಂಡನಿಗೆ ಇಸ್ಟೀಟ್ ಆಡುವ ಚಟ ಇದ್ದು, ಮದುವೆಯಾದಗಿನಿಂದ ನನಗೆ ಸಾಲ ಆಗಿದೆ ಅಂತ ಆವಾಗವಾಗ ಜಗಳ ಮಾಡುತ್ತಾ ಬಂದು ಮೇರೆಕೊ ಕರ್ಜೆ ಕೇ ಲೀಯಾ ಪೈಸೆ ಹೋನಾ ಅಂತ ಜಗಳ ಮಾಡುತ್ತಾ ಬಂದು ಕೈಯಿಂದ ಹೊಡೆ ಬಡೆ ಮಾಡುತ್ತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 15-07-2021 ರಂದು ಗಂಡ ಫಿರ್ಯಾದಿಯ ಜೊತೆಯಲ್ಲಿ ಜಗಳ ಮಾಡಿ ನನಗೆ ಸಾಲ ಆಗಿದೆ ಅಂದಾಗ ಫಿರ್ಯಾದಿಯು ಆತನಿಗೆ ನಾನು ಎಲ್ಲಿಂದ ಹಣ ತರಲಿ ನನಗೆ ಯಾರು ಗೊತ್ತಿಲ್ಲಾ, ನೀನು ಯಾವಾಗಲೂ ಇಸ್ಟೀಟ ಆಡಿ ಸಾಲ ಮಾಡುತ್ತಿ ಅಂತ  ಅಂದಾಗ ಗಂಡ ಫಿರ್ಯಾದಿಗೆ ತೂ ಮೆರೆಸೆ ಜಾದಾ ಆವಾಜ ಕರತೀ ಮರದ ಕಾ ಮರದ ಬಂತಿ ಅಂತ ಸಿಟ್ಟಿಗೆ ಬಂದು ಮನೆಯಲ್ಲಿದ್ದ ಬೆಲ್ಟ ತೆಗೆದುಕೊಂಡು ಎರಡು ಕೈಗಳ ರಟ್ಟೆಯ ಮೇಲೆ, ಎರಡು ಕಾಲುಗಳ ತೊಡೆಯ ಮೇಲೆ, ಬೆನ್ನಿನ  ಮೇಲೆ ಹೊಡೆದು ರಕ್ತ ಕಂದು ಗಟ್ಟಿದ ಗಾಯ ಪಡಿಸಿ ಇಂದು ನಿನಗೆ ಜೀವಂತ ಇಡುವುದಿಲ್ಲಾ ಅಂತ ಪಲಂಗದ ಮೇಲೆ ಎಳೆದು ಮೈಮೇಲಿದ್ದ ಓಡಣಿ ತೆಗೆದುಕೊಂಡು ಕುತ್ತಿಗೆಗೆ ಬಿಗಿದು ಕೊಲೆ ಮಾಡಲು ಪ್ರಯತ್ನ ಮಾಡುತ್ತಿರುವಾಗ ಫಿರ್ಯಾದಿ ಮತ್ತು ಫಿರ್ಯಾದಿಯ ಮಕ್ಕಳು ಚಿರಾಡುವ ಶಬ್ದ ಕೇಳಿ ಪಕ್ಕದ ಮನೆಯಲ್ಲಿ ಬಾಡಿಗೆಯಿಂದ ಇದ್ದ ಭಾಸ್ಕರ ಮೇತ್ರೆ ರವರು ಬಂದಾಗ ಗಂಡ ಮನೆಯಿಂದ ಓಡಿ ಹೋಗಿರುತ್ತಾನೆ, ನಂತರ ಸದರಿ ಘಟನೆಯ ಬಗ್ಗೆ ಭಾಸ್ಕರ ರವರು ಫಿರ್ಯಾದಿಯ ತಾಯಿಗೆ ತಿಳಿಸಿದಾಗ ತಾಯಿ, ಅಣ್ಣ, ಚಿಕ್ಕಮ್ಮಾ, ರೇಣುಕಾ, ಚಿಕ್ಕಪ್ಪ ಮತ್ತು ಹೌಸಿಂಗ ಬೋರ್ಡ ಕಾಲೋನಿಯ ಲಕ್ಷ್ಮಿ ಟೀಚ  ರವರೆಲ್ಲರೂ ಮನೆಗೆ ಬಂದು ಫಿರ್ಯಾದಿಗೆ ಆದ ಗಾಯಗಳನ್ನು ನೋಡಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಗಂಡ ಕುತ್ತಿಗೆಗೆ  ಬಿಗಿದ ಪ್ರಯುಕ್ತ ಕುತ್ತಿಗೆಯ ಬಲಭಾಗಕ್ಕೆ ರಕ್ತ ಕಂದು ಗಟ್ಟಿದ ಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 77/2021, ಕಲಂ. 379 ಐಪಿಸಿ :-

ಫಿರ್ಯಾದಿ ಎಮ್.ಡಿ ಖಾಜಾ ತಂದೆ ಮಸ್ತಾನಸಾಬ ಮದರಗಾಂವ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಕಪ್ಪರಗಾಂವ ರವರು ತನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆಎ-39/ಎಲ್-5225 ನೇದನ್ನು ತನ್ನ ಮನೆಯ ಮುಂದೆ ನಿಲ್ಲಿಸಿರುವುದನ್ನು ದಿನಾಂಕ 15-07-2021 ರಂದು 0230 ಗಂಟೆಯಿಂದ 0500 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 16-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 61/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-     

ದಿನಾಂಕ 16-07-2021 ರಂದು ಫಿರ್ಯಾದಿ ಸಂತೋಷ ತಂದೆ ಮಲ್ಲಿಕಾರ್ಜುನ ಹಲಮಡಗಿ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ತೋಪಗಲ್ಲಿ ಹುಮನಾಬಾದ ರವರ ಅಣ್ಣನಾದ ವೀರೇಶ ತಂದೆ ಮಲ್ಲಿಕಾರ್ಜುನ್ ಹಲಮಡಗಿ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ತೋಪಗಲ್ಲಿ ಹುಮನಾಬಾದ ರವರು ವಾಯು ವಿವಹಾರಕ್ಕೆ ಅಂತಾ ಮಾಣಿಕ ಮಂದಿರ ಕಡೆಗೆ ಹೋಗಿ ದೂಮ್ಮನಸೂರ ರಸ್ತೆ ಮೂಲಕ ಮರಳಿ ಮನೆಯ ಕಡೆಗೆ ಬರುತ್ತಿರುವಾಗ ರಾಷ್ಟ್ರಿಯ ಹೇದ್ದಾರಿ ನಂ. 50 ನೇದರ ಧೂಮ್ಮನಸೂರ ಮಧ್ಯ ಬ್ರೀಡ್ಜ್ನ ಹತ್ತಿರ ಅಣ್ಣನಿಗೆ ಯಾವುದೋ ಅಪರಿಚಿತ ವಾಹನದ ಚಾಲಕನು ತನ್ನ ವಾಹವನ್ನು ಅತಿವೇಗ ಹಾಗೂ ನೀಷ್ಕಾಳಜಿತನದಿಂದ ಚಲಾಯಿಸಿಕೊಡು ಬಂದು ಅಣ್ಣನಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಅಣ್ಣನಿಗೆ ಎಡಗಣ್ಣಿನ ಕೆಳಗೆ ರಕ್ತಗಾಯ, ಎಡಗಡೆ ಗಲ್ಲದ ಮೇಲೆ ಗುಪ್ತಗಾಯ, ಬಲಗಣ್ಣಿನ  ಮೇಲೆ ರಕ್ತಗಾಯ, ಹಣೆಯ ಮೆಲೆ ಮತ್ತು ಮೂಗಿನ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ಅದನ್ನು ಕಂಡು ಫಿರ್ಯಾದಿಯು ಅಂಬುಲೆನ್ಸಗೆ ಕರೆ ಮಾಡಿ ಅಣ್ಣನಿಗೆ ಚಿಕ್ಸಿತೆ ಕುರಿತು ಸರಕಾರಿ ಆಸ್ಪತ್ರೆ ಹುಮನಾಬಾದಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.