Police Bhavan Kalaburagi

Police Bhavan Kalaburagi

Wednesday, June 2, 2021

BIDAR DISTRICT DAILY CRIME UPDATE 02-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 02-06-2021

 

ಸಂತಪೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 31-05-2021 ರಂದು 2230 ಗಂಟೆಗೆ ಫಿರ್ಯಾದಿ ನೀಲಮ್ಮಾ ಗಂಡ ಗಣಪತಿ ಮೇತ್ರೆ ವಯ: 50 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಂತಪೂರ ರವರ ಮಗನಾದ ಮೋಹನ ವಯ: 28 ವರ್ಷ ಇತನು ತಮ್ಮ ಹೊಲದಲ್ಲಿ ಟ್ರಾಕ್ಟರದಿಂದ ನೇಗಿಲು ಹೊಡೆಯಲು ಹೋಗಿ ಹೊಗಿರುತ್ತಾನೆ, ನಂತರ ದಿನಾಂಕ 01-06-2021 ರಂದು ನೀರಡಿಕೆಯಾಗಿದ್ದರಿಂದ ಮನೆಗೆ ನೀರು ಕುಡಿಯಲು ನಡೆದುಕೊಂಡು ಬರುವಾಗ ಬಲಗಾಲ ಕಿರೆ ಬೆರಳು ಪಕ್ಕದ ಬೆರಳಿನ ಮಧ್ಯಾಭಾಗದಲ್ಲಿ ಹೊಲದಲ್ಲಿದ ವಿಷಾಕಾರಿ ಹಾವು ಕಚ್ಚಿ ಓಡಿ ಹೋಗಿದ್ದರಿಂದ ಆತನಿಗೆ ಕ್ರೂಜರ ಜೀಪನಲ್ಲಿ ಖಾಸಗಿ ಚಿಕಿತ್ಸೆಗಾಗಿ ಚಿಕ್ಲಿ (ಜೆ) ಗ್ರಾಮಕ್ಕೆ ಕರೆದುಕೊಂಡು ಹೋಗಿ ಔಷಧಿ ಕುಡಿಸುವಾಗ ಮೋಹನ ಇತನು ಔಷಧಿ ಕುಡಿದಿರುವುದಿಲ್ಲಾ, ನಂತರ ಆತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 34/2021, ಕಲಂ. 201, 324, 363, 325, 307 302 ಐಪಿಸಿ :-

ದಿನಾಂಕ 27-05-2021 ರಂದು ಫಿರ್ಯಾದಿ ರಾಘವೇಂದ್ರ ತಂದೆ ಶ್ರೀರಾಮ ಪ್ರಸಾದ ಉಪಾರ ಸಾ: ಆಣದೂರ ಗ್ರಾಮ ರವರ ಮಗನಾದ ಗಾಯಾಳು ಆಕಾಶ ತಂದೆ ರಾಘವೇಂದ್ರ ಉಪಾರ ವಯ: 10 ವರ್ಷ, ಸಾ: ಆಣದೂರ ಗ್ರಾಮ  1230 ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಹೊರಗಡೆ ಹೋಗಿ ಮ್ಮೂರ ಮತ್ತು ಸಿಂಕಿಂದ್ರಾಪೂರ ಮದ್ಯದಲ್ಲಿ ಅನರಾಜ ಕುಲಕರ್ಣಿ ರವರ ಹೊಲದ ಹತ್ತಿರ ರೋಡಿನ ಬದಿಯಲ್ಲಿರುವ ಹಣ್ಣಿನ ಭಂಡಿಯ ಹತ್ತಿರ ಆಟ ಆಡುತ್ತಿರುವಾಗ ಆರೋಪಿ ರಾಜು ತಂದೆ ಭೀಮಶಾ ಸಗರ, ವಯ 37 ವರ್ಷ, ಜಾತಿ: ಉಪಾರ, ಸಾ: ಉಪಾರ ಗಲ್ಲಿ ಹುಮನಾಬಾದ ಈತನು ಆಕಾಶ ಈತನಿಗೆ  ಕೊಲೆ ಮಾಡುವ ಉದ್ದೇಶದಿಂದ ಒತ್ತಾಯದಿಂದ ತನ್ನ ಮೋಟಾರ ಸೈಕಲ ಮೇಲೆ ಅಪಹರಿಸಿಕೊಂಡು ಆಣದೂರ ವಾಡಿ ಶಿವಾರದಲ್ಲಿ ಕಾಂತು ತಂದೆ ಗುಂಡಪ್ಪ ರವರ ಹೊಲದ ಕಡೆಗೆ  ಕರೆದುಕೊಂಡು ಹೋಗಿ ಕಲ್ಲಿನಿಂದ ತಲೆಯ ಮೇಲೆ, ಬಾಯಿಯ ಮೇಲೆ ಹೊಡೆದು ಭಾರಿ ಗಾಯ ಪಡಿಸಿ ಚೂಪಾದ ಕಟರದಿಂದ ನಡು ತಲೆಯಲ್ಲಿ, ಕುತ್ತಿಗೆಯ ಮೇಲೆ, ಎಡ ಗಲ್ಲದ ಮೇಲೆ, ಎಡಗೈಗೆ ಮತ್ತು ಎದೆಯಲ್ಲಿ ಹೊಡೆದು ಗಾಯ ಪಡಿಸಿದ್ದರಿಂದ ಆತನಿಗೆ  ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ  ತಂದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಭಾಲ್ಕೆ ವೈದೇಹಿ ಆಸ್ಪತ್ರೆಗೆ ತಂದು ದಾಖಲು ಮಾಡಿ, ನಂತರ ಹೆಚ್ಚಿನ ಚಿಕಿತ್ಸೆ ಕುರಿತು ನಿಜಾಮ ಆಸ್ಪತ್ರೆ ಪಂಜಾಗುಟ್ಟಾ ಹೈದರಾಬಾದಗೆ ಕರೆದುಕೊಂಡು ಹೋಗಿ ದಾಖಲು ಮಾಡಿ ನಂತರ ದಿನಾಂಕ 30-05-2021 ರಂದು ಮರಳಿ ಬೀದರ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 01-06-2021 ರಂದು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 35/2021, ಕಲಂ. 363 ಐಪಿಸಿ :-

ದಿನಾಂಕ 01-04-2021 ರಂದು ಮೀನಾಕ್ಷಿ ಗಂಡ ಬೀರಪ್ಪಾ ಪೂಜಾರಿ ವಯ: 35 ವರ್ಷ, ಜಾತಿ: ಕುರುಬ, ಸಾ: ಖೇರ್ಡಾ (ಬಿ) ರವರು ಕೂಲಿ ಕೆಲಸ ಕುರಿತು ಹುಮನಾಬಾದಗೆ ಹೋದಾಗ ಮಗಳಾದ ವೈಷ್ಣವಿ ಇವಳು 1530 ಗಂಟೆಯಿಂದ 1600 ಗಂಟೆಯ ಸಮಯದಲ್ಲಿ ಮನೆಯಿಂದ ಹೋರಗೆ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ, ಆಕೆಯನ್ನು ಎಲ್ಲಾ ಕಡೆಗೆ ಹುಡುಕಾಡಿದೂ ಎಲ್ಲಯು ಆಕೆಯ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ, ವೈಷ್ಣವಿ ಇವಳಿಗೆ ಯಾರೋ ಅಪಹರಿಸಿಕೊಂಡು ಹೋಗಿರಬೇಕೆಂದು ಸಂಶಯ ಇರುತ್ತದೆ, ಮಗಳು ಮನೆಯಿಂದ ಹೋಗುವಾಗ ಅವಳ ಮೈಮೇಲೆ 1) ಹಳದಿ ಬಣ್ಣದ ಟಾಪ, 2) ಕೆಂಪು ಬಣ್ಣದ ಲೆಗಿನ್ಸ್, 3) ಕೆಂಪು ಬಣ್ಣದ ಸ್ಕಾರ್ಪ ಇರುತ್ತವೆ, ಅವಳ ಚಹರೆ ಪಟ್ಟಿ 1) ಎತ್ತರ 5 ಫೀಟ ಎತ್ತರ, ತೆಳ್ಳನೆ ಮೈಕಟ್ಟು, ಗೋಧಿ ಮೈಬಣ್ಣ, 2) ಕನ್ನಡ ಭಾಷೆ ಮಾತಾನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 52/2021, ಕಲಂ. ಮನುಷ್ಯ ಕಾಣೆ :-

ದಿನಾಂಕ 15-03-2021 ರಂದು 0800 ಗಂಟೆಗೆ ಫಿರ್ಯಾದಿ ಕನ್ಯಾಕುಮಾರಿ ಗಂಡ ಸುರೇಶ ಸಾ: ಜಾಂತಿ ರವರ ಗಂಡನಾದ ಸುರೇಶ ತಂದೆ ಬಸಪ್ಪಾ ತರನಳ್ಳೆ ವಯ: 36 ವರ್ಷ, ಜಾತಿ: ಲಿಂಗಾಯತ, ಉ: ಪೇಟ್ರೊಲ ಬಂಕನಲ್ಲಿ ಮ್ಯಾನೆಜರ್, ಸಾ: ಜಾಂತಿ, ತಾ: ಭಾಲ್ಕಿ ರವರು ಪೇಟ್ರೊಲ ಬಂಕಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದರವರು ಮರಳಿ ಮನೆಗೆ ಬಂದಿರುವುದಿಲ್ಲ, ಅವರನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಅವರು ಕಾಣೆಯಾಗಿರುತ್ತಾರೆ, ತನ್ನ ಗಂಡನ ಚಹರೆ ಪಟ್ಟಿ 1) ಸಾಧಾರಣ ದಪ್ಪನೆಯ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ಅಂದಾಜು 5 ಅಡಿ 5 ಇಂಚ ಉದ್ದ, 2) ಮಾತಾಡುವ ಭಾಷೆ: ಕನ್ನಡ, ಹಿಂದೆ, 3) ಧರಿಸಿದ ಬಟ್ಟೆ  ಬಿಳಿ ಹಾಫ್ ಶರ್ಟ, ಹಸೀರು ಪ್ಯಾಂಟ ಧರಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 01-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಸಂತಪೂರ ಪೋಲಿಸ ಠಾಣೆ ಅಪರಾಧ ಸಂ. 47/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 01-06-2021 ರಂದು ಸಂತಪೂರ-ಜಮಗಿ ರೋಡಿನ ಪಕ್ಕದಲ್ಲಿದ್ದ ಸಂತಪೂರ ಸರಕಾರಿ ಶಾಲೆಯ ಗೇಟ ಹತ್ತಿರ ಒಬ್ಬ ವ್ಯಕ್ತಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾನೆಂದು ಸಿದ್ದಲಿಂಗ ಪಿಎಸ್ ಐ ಸಂತಪೂರ ಪೋಲಿಸ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸಂತಪೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಗೇಟಿನ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಸುಭಾಷ ತಂದೆ ನಾಗಪ್ಪಾ ಒಡಿಯಾರ ವಯ: 28 ವರ್ಷ, ಜಾತಿ: ವಡ್ಡರ, ಸಾ: ಸಂತಪೂರ ಇತನು ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕೂಗಿ ಕರೆದು ಅದೃಷ್ಟ ಸಂಖ್ಯೆಗೆ ಹಣ ಹಚ್ಚ್ಚಿದರೆ 1/-ರೂಪಾಯಿಗೆ 80/- ರೂ., 10/- ರೂಪಾಯಿಗೆ 800/- ರೂ. ಕೊಡುತ್ತೇವೆಂದು ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅನ್ನುವ ಅಂಕಿ ಸಂಖ್ಯೆಯ ಚೀಟಿಗಳು ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಸದರಿ ಅದೃಷ್ಟ ಸಂಖ್ಯೆಗೆ ಹಣ ಪಡೆದುಕೊಳ್ಳುತ್ತಿದ್ದವನು ಸ್ಥಳದಿಂದ ಓಡಿ ಹೋಗುವ ಸಂಭವ ಕಂಡು ಬಂದಿರುವ ಕಾರಣ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿದಾಗ ಅದೃಷ್ಟ ಸಂಖ್ಯೆಗೆ ಹಣ ಕೊಡುತ್ತಿದ್ದ ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿಗೆ ಹಿಡಿದುಕೊಂಡು ಆತನಿಂದ 1) ನಗದು ಹಣ 1500/- ರೂ., 2) ಅಂಕಿ ಸಂಖ್ಯೆ ಬರೆದ 1 ಮಟಕಾ ಚೀಟಿ ಹಾಗೂ 36) ಒಂದು ಪೆನ್ನು ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 27/2021, ಕಲಂ. 279, 337, 338 ಐಪಿಸಿ :-

ದಿನಾಂಕ 02-06-2021 ರಂದು ಫಿರ್ಯಾದಿ ಸಂಜು ತಂದೆ ಗಣಪತಿ ಸೋಳಂಕೆ ವಯ: 36 ವರ್ಷ, ಜಾತಿ: ಘಿಸಾಡಿ, ಸಾ: ಗುಂಜರಗಾ ರವರು ತಮ್ಮ ಭಾವನಾದ ಪಿಂಟು ತಂದೆ ರಘುನಾಥ ಪವಾರ ಸಾ: ಗುಂಜರಗಾ ಇಬ್ಬರೂ ಕೂಡಿಕೊಂಡು ಖಾಸಗಿ ಕೆಲಸದ ನಿಮಿತ್ಯ  ತಮ್ಮ ಅಕ್ಕಳ ಮನೆ ಮಾಣಿಕೇಶ್ವರಕ್ಕೆ ಭಾವನ ಮೋಟಾರ ಸೈಕಲ ನಂ. ಎಮ್.ಹೆಚ್-14/ಎಸ್-0542  ನೇದರ ಮೇಲೆ ಹೋಗಿ ಮರಳಿ ಮ್ಮೂರಿಗೆ ಬರುವಾಗ ಮೋಟಾರ ಸೈಕಲನ್ನು ಭಾವ ಪಿಂಟು ರವರು ಚಲಾಯಿಸಿಕೊಂಡು ಮಾಣಿಕೇಶ್ವರ ಅಟ್ಟರಗಾ ರಸ್ತೆ  ಬ್ರಿಜ್ ಹತ್ತಿರ ಬಂದಾಗ ಹಿಂದಿನಿಂದ ಕಾರ ನಂ. ಎಪಿ-28/ಬಿಎಕ್ಸ-2964 ನೇದರ ಚಾಲಕನಾದ ಆರೋಪಿ ಸುನೀಲ ತಂದೆ ರಮೇಶ ನಾಮಪಲ್ಲೀ ವಯ: 35 ವರ್ಷ, ಜಾತಿ: ನಕಾಶ, ಸಾ: ಹೈದ್ರಾಬಾದ ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತ ಮೋಟಾರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲ ಸೊಂಟದಲ್ಲಿ  ಗುಪ್ತಗಾಯ ಮತ್ತು ಬಲಗೈ ಮೊಳಕೈ ಹತ್ತಿರ ತರಚಿದ ಗಾಯವಾಗಿರುತ್ತದೆ, ಪಿಂಟು ರವರಿಗೆ ಬಲಸೊಂಟದಲ್ಲಿ ಭಾರಿ ಗುಪ್ತಗಾಯ ಮತ್ತು ಬಲಭುಜ, ಬಲಗೈಗೆ ಗುಪ್ತಗಾಯ ಮತ್ತು ಬಲಗಾಲಿನ ಬೆರಳಿನ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ತಮ್ಮ ಸಂಬಂಧಿಕರಾದ ದತ್ತಾತ್ರೆಯ ಸೊಳಂಕೆ ಮೇಹಕರ ರವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಅವರು ಒಂದು ಬಾಡಿಗೆ ವಾಹನ ಮಾಡಿಕೊಂಡು ವಿಳಂಬವಾಗಿ ಬಂದಿರುತ್ತಾರೆ ಮತ್ತು ನಮಗೆ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕಳುಹಿಸಲು ವಿನಂತಿ ಇದೆ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.