ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-04-2018 ರಂದು ಚಿಂಚೋಳಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಚಿಂಚೋಳಿ ಗ್ರಾಮದ ಸರಕಾರಿ ಶಾಲೆಯಿಂದ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸರಕಾರಿ ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಚೀಲವನ್ನು ಹಿಡಿದುಕೊಂಡು ನಿಂತಿದ್ದನು. ಆಗ ನಾವು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ಸದರಿ ವ್ಯೆಕ್ತಿಯ ಮೇಲೆ ದಾಳಿ ಮಾಡಿ, ಅವನ ಹತ್ತಿರ ಇದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ 96 Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ ರಟ್ಟಿನ ಪೌಚಗಳು ಅಕಿ- 2688/- ರೂ ಕಿಮ್ಮತ್ತಿನವುಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮಲ್ಲಯ್ಯ ತಂದೆ ರುಕುಮಯ್ಯ ಗುತ್ತೆದಾರ ಸಾ|| ಚಿಂಚೋಳಿ ತಾ|| ಅಫಜಲಪೂರ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 96 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ವಿಠಲ ತಂದೆ ಬಂಡೆಪ್ಪಾ ಜಮಾದಾರ ಸಾ: ಹೋಳಕುಂದಾ ತಾ; ಜಿ: ಕಲಬುರಗಿ ರವರ ಮಗನಾದ ಉಮೇಶ ಇತನು ನಮ್ಮೂರಿನ ಬಸವರಾಜ ಬುಯ್ಯಾರ ಇವರ ಲಾರಿ ನಂ ಕೆಎ 56 0038 ನೇದ್ದರ ಮೇಲೆ ಈಗ ಸುಮಾರು 3 ತಿಂಗಳಿಂದ ಕ್ಲೀನರ್ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ಇಂದು ದಿನಾಂಕ 1/4/2018 ರಂದು ಮದ್ಯರಾತ್ರಿ 2-00 ಗಂಟೆಯ ಸುಮಾರಿಗೆ ನಮ್ಮೂರಿನ ಬಸವರಾಜ ಬುಯ್ಯಾರ ಇವರು ನಮ್ಮ ಮನೆಗೆ ಬಂದು ನನ್ನ ಮಗನಾದ ಉಮೇಶ ಇತನಿಗೆ ಕರೆದು ಲಾರಿಯಲ್ಲಿ ಹಿಂಡಿ ಲೋಡ ಮಾಡಿದ್ದು ಅಥಣಿಗೆ ಹೋಗಿ ಖಾಲಿ ಮಾಡಿಕೊಂಡು ಬರುವದು ಇದೇ ಸಂಗಡ ಬರುವಂತೆ ಹೇಳಿದ ಪ್ರಕಾರ ನನ್ನ ಮಗ ಉಮೇಶ ಇತನು ಬಸವರಾಜ ಬುಯ್ಯಾರ ಇವರ ಮಗನಾದ ಘಾಳಪ್ಪ ಇತನ ಜೊತೆಯಲ್ಲಿ ಲಾರಿ ಮೇಲೆ ಹೋಗಿರುತ್ತಾನೆ. ಇಂದು ದಿನಾಂಕ 1/4/2018 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಬಸವರಾಜ ಬುಯ್ಯಾರ ಇವರು ನನಗೆ ಪೊನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮಗನಾದ ಉಮೇಶ ಇತನು ಲಾರಿ ನಂ ಕೆಎ 56 0038 ನೇದ್ದರಲ್ಲಿ ಕುಳಿತುಕೊಂಡು ಕಲಬುರಗಿಯಿಂದ ಜೇವರಗಿ ಕಡೆಗೆ ಹೋಗುತ್ತಿರುವಾಗ ನನ್ನ ಮಗ ಘಾಳಪ್ಪ ಇತನು ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಹೋಗಿ ರಾಷ್ಟ್ರಿಯ ಹೆದ್ದಾರಿ 218 ರ ಸೋಮನಾಥ ಹಳ್ಳಿ ಮತ್ತು ಹಸನಾಪುರ ಕ್ರಾಸ ಮದ್ಯದಲ್ಲಿ ಲಾರಿ ಪಲ್ಟಿ ಮಾಡಿದ್ದರಿಂದ ನಿಮ್ಮ ಮಗನಿಗೆ ತಲೆಗೆ ಹಾಗು ಇತರೆ ಕಡೆಗೆ ಭಾರಿ ಗುಪ್ತಗಾಯಗಳು ಮತ್ತು ತರಚಿದ ಗಾಯಗಳು ಆಗಿರುತ್ತವೆ ಆತನಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ಮಾರ್ಗಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಮೃತ ದೇಹ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಇರುವ ಬಗ್ಗೆ ತಿಳಿಸಿದ್ದರಿಂದ ನಾನು ಮತ್ತು ನನ್ನ ಅಣ್ಣನ ಮಗನಾದ ಶರಣಪ್ಪ, ಮಗ ಮಹೇಶ ಮತ್ತು ನಮ್ಮ ಸಂಬಂಧಿ ಶ್ರೀಶೈಲ ಜಮಾದಾರ ಎಲ್ಲರೂ ಕೂಡಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೊಣೆಗೆ ಬಂದು ನೋಡಲಾಗಿ ನನ್ನ ಮಗ ಉಮೇಶ ಇತನಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಕಿವಿಯಿಂದ ರಕ್ತ ಮತ್ತು ಬಾಯಿಯಿಂದ ನೊರೆ ಬಂದು ದೇಹದ ಇತರೆ ಕಡೆಗೆ ತರಚಿದ ಗಾಯಗಳಾಗಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ದಿನಾಂಕ:-31/03/2018 ರಂದು ಮಧ್ಯಾಹ್ನ ನಮಗೆ ಪರಿಚಯದವರಾದ ದೇವಿಂದ್ರ ತಂದೆ ಭೀಮರಾಯ ಅಳ್ಳೊಳ್ಳಿ ಸಾ: ಕಡಕೊಳ ಇವರ ಇಂಡಿಕಾ ಕಾರ ನಂಬರ ಕೆ ಎ 01 ಎ ಜಿ- 1486 ನೇದರಲ್ಲಿ ನನ್ನ ಹೆಂಡತಿ ಶರಣಮ್ಮ ಳನ್ನೂ ಕೂಡಿಸಿಕೂಂಡು ಉಪಚಾರ ಕುರಿತು ಯಡ್ರಾಮಿಗೆ ನನ್ನ ಮಕ್ಕಳಾದ ಶಾಂತಮ್ಮ ಭಾಗಮ್ಮ ಬಸವರಾಜ ಹಾಗೂ ನಮ್ಮೂರು ಸಿದ್ದಲಿಂಗ ಬಿಳವಾರ ರವರು ಕೂಡಿಕೂಂಡು ಕಾರಿನಲ್ಲಿ ಹೂಗಿರುತ್ತಾರೆ ಕಾರನ್ನು ದೇವಿಂದ್ರ ನಡಿಸುತ್ತಿದ್ದನು ನಂತರ 4:15 ಪಿ ಎಮ ಸುಮಾರಿಗೆ ನನ್ನ ಮಗ ಬಸವರಾಜ ಇವನು ಮನೆಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ಇದಿಗ ನಮ್ಮ ತಾಯಿಗೆ ಯಡ್ರಾಮಿ ಚಾಯಾಗಳು ದವಾಖಾನೆ ಉಪಚಾರ ಪಡಿಸಿಕೂಂಡು ಮರಳಿ ಅದೆ ಕಾರಿನಲ್ಲಿ ಊರಿಗೆ ಬರುವಾಗ ಕಾರು ಯಡ್ರಾಮಿ ಗ್ರಾಮ ದಾಟಿ ಕಲ್ಯಾಣಿರಾಯ ಸಾಹು ರವರ ಹೂಲದ ಹತ್ತಿರ ಕಾರಿನ ಚಾಲಕ ದೇವಿಂದ್ರನ್ನು ತನ್ನ ಕಾರನ್ನು ಅತಿ ವೆಗವಾಗಿ & ನಿಷ್ಕಾಳಜಿ ತನದಿಂದ ಚಲಾಯಿಸಿ ಒಮ್ಮೆಲೆ ಬಲಗಡೆ ಕಟ್ಟ ಮಾಡಿರುವುದರಿಂದ ಕಾರನ್ನು ಬೇವನ ಗಿಡಕ್ಕೆ ಡಿಕ್ಕಿ ಹೂಡೆದು ಪಲ್ಟಿ ಯಾಗಿರುತ್ತದೆ ಬೆಗನೆ ಬರಿ ಯಂತ ಎಂದಾಗ ನಾನು & ನನ್ನ ಕಿರಿ ಮಗ ಪರುಶುರಾಮ ಹಾಗೂ ಗ್ರಾಮಸ್ಥರು ಕೂಡಿ ಸ್ಥಳಕ್ಕೆ ಹೂಗಿ ನೂಡಿದಾಗ ನನ್ನ ಹೆಂಡತಿ ಶರಣಮ್ಮ ಇವಳ ಹಣೆಯ ಮೆಲೆ ಬಾರಿ ರಕ್ತ ಗಾಯವಾಗಿ ರಕ್ತ ಸೂರುತ್ತಿತ್ತು ಭಾಗಮ್ಮ ಇವಳಿಗೆ ಬಲ ಮೆಲಕಿನ ಹತ್ತಿನ ಬಾರಿ ರಕ್ತ ಗಾಯ ವಾಗಿದ್ದು ಬಲಗೈ ರಟ್ಟಿಯಲ್ಲಿ ಬಾರಿ ಒಳ ಪೆಟ್ಟವಾಗಿ ಮುರದಿರುತ್ತದೆ ಮುಖದ ಮೇಲೆ ದರಿಚಿದ ಗಾಯ ವಾಗಿರುತ್ತದೆ ಶಾಂತಮ್ಮಗೆ ಹಣೆಯ ಮೆಲೆ ರಕ್ತ ಗಾಯ ವಾಗಿದ್ದು ಎದೆಗೆ ಟೂಂಕಕ್ಕೆ ಒಳ ಪೆಟ್ಟು ಯಾಗಿರುತ್ತದೆ ಬಸವರಾಜು ಗೆ ಕೈ & ಕಾಲಿಗೆ ತೆರಚಿದ ಗಾಯಗಳು ಯಾಗಿರುತ್ತದೆ ಸಿದ್ದಲಿಂಗನಿಗೆ ಟೂಂಕಕ್ಕೆ ಒಳ ಪೆಟ್ಟಾಗಿ & ಗದ್ದದ ಮೇಲೆ ರಕ್ತದ ಗಾಯ ವಾಗಿರುತ್ತದೆ ಅದರಂತೆ ಕಾರು ಚಾಲಕ ದೇವಿಂದ್ರ ಗೆ ಕೂಡಾ ಒಳ ಪೆಟ್ಟ ವಾಗಿರುತ್ತದೆ ನಂತರ ನನ್ನ ಹೆಂಡತಿಗೆ & ಮಕ್ಕಳಾದ ಭಾಗಮ್ಮ , ಶಾಂತಮ್ಮ , ಬಸವರಾಜ ರವರಿಗೆ ಉಪಚಾರ ಕುರಿತು 108 ವಾಹನದಲ್ಲಿ ಹಾಕಿ ಕೂಂಡು ಜೇವರ್ಗಿ ಸರಕಾರ ದವಾಖಾನಗೆ ತಂದು ಹೇಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೂಗುವಾಗ ಕಟ್ಟಿ ಸಂಗಾವಿ ಹತ್ತಿರ ಅಂದಾಜು 6:30 ಪಿ ಎಮ ಸುಮಾರಿಗೆ ನನ್ನ ಹೆಂಡತಿ ಶರಣಮ್ಮ & ಮಗಳು ಭಾಗಮ್ಮ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ಶ್ರೀ ಮಾನಯ್ಯ ತಂದೆ ಯಮನಯ್ಯ ಗುತ್ತೆದಾರ ಸಾ ಆಲೂರು ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.