ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 06-11-2017 ರಂದು ಶಿವಪೂರ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೊರಟಿರುತ್ತಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್,ಐ,
ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ಯಾಕ್ಟರ ಮರಳು ತುಂಬಿಕೊಂಡು ಬರುತ್ತಿತ್ತು. ಆಗ ಸದರಿ ಟ್ರ್ಯಾಕ್ಟರ ಚಾಲಕನಿಗೆ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾನು ಪಂಚರ ಸಮಕ್ಷಮ ಟ್ಯಾಕ್ಟರ ಚಕ್ಕ ಮಾಡಲು ಟ್ಯಾಕ್ಟರದಲ್ಲಿ ಮರಳು ಇತ್ತು ಸದರಿ ಟ್ಯಾಕ್ಟರ Mahindra Arjun Ultra-1 Engine NO NNHY06809 ಅಂತ ಇದ್ದು ಅ.ಕಿ
3,00,000/-ರೂ ಇರಬಹುದು ಸದರಿ ಟ್ಯಾಕ್ಟರದಲ್ಲಿದ್ದ ಮರಳಿನ ಅ.ಕಿ 3000/- ರೂ ಆಗಬಹುದು ನಂತರ ಟ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ
ಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 06-01-2017 ರಂದು ಶಿವಪೂರ ಬನ್ನಟ್ಟಿ ಗ್ರಾಮದಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್,ಐ, ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಅಫಜಲಪೂರದ ಪಟ್ಟಣದ ದಿಲ್ ಖುಷ್ ದಾಬಾದ ಹತ್ತಿರ ಘತ್ತರಗಾ ರೋಡಿಗೆ ಹೋಗುತಿದ್ದಾಗ ನಮ್ಮ ಎದುರಿನಿಂದ ಒಂದು ಟ್ರ್ಯಾಕ್ಟರ ಬರುತಿತ್ತು , ಆಗ ಸದರಿ ಟ್ರ್ಯಾಕ್ಟರ ಚಾಲಕನಿಗೆ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು Mahindra575 DI ಕಂಪನಿಯ ಟ್ರ್ಯಾಕ್ಟರ ಇದ್ದು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂಬರ KA-36 TC-0845 ಅಂತಾ ಇದ್ದು ಸದರಿ ಟ್ರ್ಯಾಕ್ಟರ ಅ.ಕಿ 3,00,000/-ರೂ ಇರಬಹುದು. ನಂತರ ಟ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ
ಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಣಿ ಕಾಣೆಯಾದ ಪ್ರಕರಣ :
ಶಾಹಾವಾದ ನಗರ ಠಾಣೆ :
ಶ್ರೀ ಹಾಜಪ್ಪಾ ತಂದೆ ಶರಣಪ್ಪಾ ಕಾಳನೂರ ಸಾ:ಹನುಮಾನ ನಗರ ಶಹಾಬಾದ ರವರ ಮಗಳಾದ ಕುಮಾರಿ ಸಂಗೀತಾ ಇವಳು
ಬಿ.ಎ ವಿದ್ಯಾಬ್ಯಾಸ ಮಾಡುತ್ತಿದ್ದು ದಿನಾಂಕ
19/12/2016 ರಂದು ಸಾಯಂಕಾಲ 5-30 ಪಿಎಂ ಕ್ಕೆ ಮನೆಯಿಂದ ಹೊರಗೆ ಹೋದವಳು ರಾತ್ರಿ 10 ಗಂಟೆಯಾದರೂ
ಮನೆಗೆ ವಾಪಸ ಬಂದಿರುವುದಿಲ್ಲಾ. ನನ್ನ ಮಗಳು ಮನೆಗೆ ಬರದಿದ್ದರಿಂದ ಗಾಬರಿಯಾಗಿ ನಾನು
ಮತ್ತು ನಮ್ಮ ಮನೆಯವರು ಎಲ್ಲರೂ ಕೂಡಿ ಶಹಾಬಾದ ಪಟ್ಟಣದಲ್ಲಿ ಮತ್ತು ಸುತ್ತ ಮುತ್ತಲಿನ ಏರಿಯಾ & ನಮ್ಮ ಸಂಬಂಧಿರ
ಊರುಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ.
ದಿನಾಂಕ 19/12/2016 ರಿಂದ ಇಲ್ಲಿಯ ವರೆಗೆ ಕಾಣೆಯಾದ ನನ್ನ ಮಗಳಿಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ
ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ
ಸಾವಿತ್ರಿ ಗಂಡ
ಶಿವಕುಮಾರ ಪಾಟೀಲ್ ಸಾ: ಬೋದನ ವಾಡಿ ರವರು ಸುಮಾರು 4 ವರ್ಷಗಳ ಹಿಂದೆ ಬೋದನ
ವಾಡಿ ಗ್ರಾಮದ ಶಿವಕುಮಾರ ತಂದೆ ರಾಜಶೇಖರ ಪಾಟೀಲ್ ಎಂಬುವವರೊಂದಿಗೆ ಸಾಂಪ್ರದಾಯೀಕವಾಗಿ ಮದುವೆ
ಮಾಡಿಕೊಟ್ಟಿರುತ್ತಾರೆ, ನನಗೆ ಈಗ ಒಂದುವರೆ ವರ್ಷದ ಒಬ್ಬಳು ಹೆಣ್ಣು ಮಗಳು ಮತ್ತು 7 ತಿಂಗಳ ಗಂಡು ಮಗ
ಇರುತ್ತಾನೆ, ಬೋದನ ವಾಡಿ ಗ್ರಾಮದಲ್ಲಿ ನಾನು ಮತ್ತು ನನ್ನ ಗಂಡ ಮಕ್ಕಳು
ಹಾಗೂ ನಮ್ಮ ಅತ್ತೆಯಾದ ಮಹಾದೇವಿ ರವರುಗಳು ಒಂದೆ ಮನೆಯಲ್ಲಿ ವಾಸವಾಗಿದ್ದು ಇನ್ನೂಳಿದ ನನ್ನ 4 ಜನ ಭಾವಂದಿರರು ಅದೇ
ಗ್ರಾಮದಲ್ಲಿ ತಮ್ಮ ಪರಿವಾರದೊಂದಿಗೆ ಬೇರೆ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ,
ದಿನಾಂಕ: 29/12/2016 ರಂದು ಎಳ್ಳ ಅಮವಾಸ್ಯೆ
ಹಬ್ಬ ಇದ್ದುದ್ದರಿಂದ ಹಬ್ಬದ ಕಿಂತ 2 ದಿವಸ ಮುಂಚೆ ನಾನು ನನ್ನ ತವರೂರಾದ ಪಟ್ಟಣ ಗ್ರಾಮಕ್ಕೆ
ಹೋಗಿ ಅಲ್ಲಿಯೇ ವಾಸವಾಗಿರುವಾಗ ನಿನ್ನೆ ದಿನಾಂಕ: 05/01/2017 ರಂದು ರಾತ್ರಿ 9:00 ಗಂಟೆ ಸುಮಾರಿಗೆ ನನ್ನ
ಗಂಡನಾದ ಶಿವಕುಮಾರ ರವರು ನನಗೆ ಫೋನ್ ಮಾಡಿ ನಾನು ನಾಗೇಂದ್ರಪ್ಪ ತಂದೆ ಶಿವರಾಯ ಕೆರಳ್ಳಿ ಸಾ:
ಕಮಲಾನಗರ ಇವರ ಮೊಟಾರ ಸೈಕಲ್ ತೆಗೆದುಕೊಂಡು ಪಟ್ಟಣಕ್ಕೆ ಬರುತ್ತಿದ್ದೇನೆಂದು ತಿಳಿಸಿದ್ದು
ಅದಕ್ಕೆ ನಾನು ಈಗ ತುಂಬಾ ರಾತ್ರಿಯಾಗಿದೆ ಬರಬೇಡಿ ಎಂದು ಹೇಳಿರುತ್ತೇನೆ ನಂತರ ನನಗೆ ಅವರು ಫೋನ್
ಕೂಡಾ ಮಾಡಿರುವುದಿಲ್ಲ, ಇಂದು ದಿನಾಂಕ:- 06/01/2017 ರಂದು ಮುಂಜಾನೆ 08:00 ಗಂಟೆ ಸುಮಾರಿಗೆ ನಾನು
ಮತ್ತು ತಂದೆಯಾದ ಶಿವಶರಣಪ್ಪ ತಾಯಿಯಾದ ವಿಠಬಾಯಿ ರವರೊಂದಿಗೆ ತವರುಮನೆಯಲ್ಲಿರುವಾಗ ಕಮಲಾನಗರದಿಂದ
ನನ್ನ ಅಕ್ಕಳಾದ ಭಾರತಬಾಯಿ ಗಂಡ ಅಂದಪ್ಪ ಬಿರಾದಾರ ಇವರು ನನಗೆ ಫೋನ್ ಮಾಡಿ ನಿನ್ನ ಗಂಡನಾದ
ಶಿವಕುಮಾರ ಈತನು ನಿನ್ನೆ ದಿನಾಂಕ: 05/01/2017 ರಂದು ರಾತ್ರಿ 9:30 ಗಂಟೆ ಸುಮಾರಿಗೆ
ಪಟ್ಟಣಕ್ಕೆ ಹೋಗುತ್ತೇನೆಂದು ಹೇಳಿ ನಾಗೇಂದ್ರಪ್ಪ ಇವರ ಮೊಟಾರ ಸೈಕಲ್ ನಂ. ಕೆಎ32 ವೈ-6723 ನೇದ್ದನ್ನು
ತೆಗೆದುಕೊಂಡು ಹೋಗಿ ಸದರಿ ಮೊಟಾರ ಸೈಕಲ್ ಚಲಾಯಿಸಿಕೊಂಡು ಪಟ್ಟಣಕ್ಕೆ ಹೋಗುವಾಗ ಬೋದನ ದಾಟಿ
ನರೋಣಾ ಕ್ಷೇತ್ರ ಕ್ರಾಸ್ ಸಮೀಪದ ಫೂಲ್ ಸಮೀಪ ಯಾವುದೋ ಒಂದು ವಾಹನ ಗುದ್ದಿದ್ದರಿಂದ ತಲೆಗೆ ಭಾರಿ
ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ಇಂದು ಮುಂಜಾನೆ ಗೊತ್ತಾಗಿರುತ್ತದೆ ಎಂದು ತಿಳಿಸಿದ
ಮೇರೆಗೆ ನಾನು ನರೋಣಾ ಕ್ಷೇತ್ರ ಕ್ರಾಸ್ ಸಮೀಪದ ಫೂಲ್ ಹತ್ತಿರ ಬಂದು ನೋಡಲಾಗಿ ನನ್ನ ಗಂಡನ ತಲೆಗೆ
ಮತ್ತು ಬಲಗಡೆ ಮೆಲುಕಿನ ಹತ್ತಿರ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಎದೆಗೆ ತರಚಿದ ಗಾಯವಾಗಿ
ಮೃತಪಟ್ಟಿದ್ದರು ಅವರು ಚಲಾಯಿಸಿಕೊಂಡು ಬರುತ್ತಿದ್ದ ಮೊಟಾರ ಸೈಕಲ್ ನಂ. ಕೆಎ32 ವೈ-6723 ನೇದ್ದು ರಸ್ತೆಯ
ಎಡಬದಿಯಲ್ಲಿ ಬಿದ್ದಿತ್ತು. ದಿನಾಂಕ:- 05/01/2017 ರಂದು ರಾತ್ರಿ 9:30 ರಿಂದ 10:00 ಗಂಟೆಯ ಮದ್ಯದ
ಅವದಿಯಲ್ಲಿ ನನ್ನ ಗಂಡನಾದ ಶಿವಕುಮಾರ ತಂದೆ ರಾಜಶೇಖರ ಪಾಟೀಲ್ ಇವರು ಹೀರೊ ಹೊಂಡಾ ಮೊಟಾರ ಸೈಕಲ್
ನಂ. ಕೆಎ32 ವೈ-6723 ನೇದ್ದನ್ನು
ಚಲಾಯಿಸಿಕೊಂಡು ಬೋದನ ವಾಡಿ ಗ್ರಾಮದಿಂದ ಪಟ್ಟಣಕ್ಕೆ ಹೋಗುತ್ತಿರುವಾಗ ಮಾರ್ಗಮದ್ಯದಲ್ಲಿ ನರೋಣಾ
ಕ್ಷೇತ್ರ ಕ್ರಾಸ್ ಸಮೀಪದ ಫೂಲ್ ಹತ್ತಿರ ಬರುವಾಗ ಯಾವುದೋ ಒಂದು ವಾಹನ ಚಾಲಕನು ತನ್ನ ಅಧೀನದಲ್ಲಿಯ
ವಾಹನವನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ನನ್ನ ಗಂಡನು ಚಲಾಯಿಸಿಕೊಂಡು
ಬರುತ್ತಿರುವ ಮೊಟಾರ ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನನ್ನ ಗಂಡನ ತಲೆಗೆ ಮತ್ತು
ಮೆಲಕಿನ ಹತ್ತಿರ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ,
ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನಗಳ ಕಳವು ಪ್ರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ
ಶಿವಾನಂದ ತಂದೆ ಅಂಬಣ್ಣ ಲೆಂಗಟಿ ಸಾ||
ಕೈಲಾಸ
ನಗರ ಕಲಬುರಗಿ ಇವರು ದಿನಾಂಕ: 30/12/16 ರಂದು ಬೆಳಗ್ಗೆ 10.00
ಗಂಟೆಗೆ
ನನ್ನ ಮೋಟಾರ ಸೈಕಲ ನಂ.ಕೆಎ.32 ಇ.ಎಮ್.6803
ನೇದ್ದನ್ನು ನಾನು ನನ್ನ ಮನೆ ಕಂಪೌಂಡದಲ್ಲಿ
ನಿಲ್ಲಿಸಿ ಹೈದರಾಬಾದಿಗೆ ಹೋಗಿರುತ್ತೆನೆ. ದಿನಾಂಕ: 31/12/2016 ಬೆಳಗ್ಗೆ 07-00
ಗಂಟೆಯ
ಸುಮಾರಿಗೆ ಮನೆಗೆ ಬಂದಿದ್ದು ನನ್ನ ಮೋಟಾರ ಸೈಕಲ ಇರಲಿಲ್ಲ ನನ್ನ ಹೀರೊ ಹೊಂಡಾ ಸ್ಪೆಂಡರ್ ಮೋಟಾರ ಸೈಕಲ ಕಪ್ಪು ಬಣ್ಣವುಳ್ಳದ್ದು
NO.KA32 EM6803
CHASSIS.NO.MBLHA10CGGHG37882, ENGINE.NO.HA10ERGHG36781 ಅದರ ಅಂ.ಕಿ:
47168/-ರೂ ಬೇಲೆಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು
ಹೋಗಿರುತ್ತಾರೆ. ಪತ್ತೆ ಹಚ್ಚಿ ಕೋಡಬೆಕು
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ :
ರೋಹಿತ ತಂದೆ ಮೋಹನರಾವ ಜವಳಕರ ಸಾ:ಮನೆ
ನಂ.1516, ದೇಶಮುಖ ಲೇಔಟ ಬ್ರಹ್ಮಪೂರ ಕಲಬುರಗಿ ಇವರು. ದಿನಾಂಕ:14/11/2016
ರಂದು ರಾತ್ರಿ 10-30
ಗಂಟೆಗೆ ನಾನು ನನ್ನ ಮೋಟರ ಸೈಕಲ ನಿಲ್ಲಿಸಿದ್ದು ದಿನಾಂಕ:15/11/2016 ರಂದು ಬೆಳಗ್ಗೆ 8-00
ಗಂಟೆಗೆ ನಾನು ಮನೆಯಿಂದ ಹೋರಗಡೆ
ಬಂದು ನೋಡಲು ನನ್ನ ಹೊಂಡಾ ಆಕ್ಟಿವಾ ಮೋಟರ ಸೈಕಲ್ ಇರಲಿಲ್ಲಾ ನಾನು ಅಂದಿನಿಂದ ಎಲ್ಲಾ
ಕಡೆ ಹುಡುಕಾಡಿದರು ಮೋಟರ ಸೈಕಲ ಪತ್ತೆ ಆಗಿರುವುದಿಲ್ಲಾ ದಿನಾಂಕ: 05/01/2017
ರಂದು ಯಾರೋ ಕಳ್ಳರು ನಮ್ಮ ಹೊಂಡಾ ಆಕ್ಟೀವಾ
ಮೋಟರ ಸೈಕಲ ಬಿಳಿ ಬಣ್ಣ ಉಳ್ಳದ್ದು ಇದ್ದು ಅದರ ನಂ. KA32W4282, CHASSIS
NO.ME4JC445AA8372716, ENGINE NO.JC44E0456981 ಅದರ ಅ.ಕಿ:17000/-ರೂ ಬೆಲೆ ಬಾಳುವುದು ಯಾರೋ ಕಳ್ಳರು
ಕಳುವು ಮಾಡಿಕೊಂಡು
ಹೋಗಿರುತ್ತಾರೆ. ಪತ್ತೆ ಹಚ್ಚಿ ಕೋಡಬೆಕು ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.