ಅಪ್ರಾಪ್ತೆಯ
ಮೇಲೆ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ
ಠಾಣೆ : ದಿನಾಂಕ 28-01-2019 ರಂದು ಶ್ರೀಮತಿ ರವರ ಮಗಳು ಲೂಜ ಮೂಷನ್ ಆಗಿದ್ದರಿಂದ ರಾತ್ರಿ 11;00 ಗಂಟೆಗೆ ನನಗೆ ಎಬ್ಬಿಸಿ ನಾನು ಬೈಹಿರದೇಸೆ ಹೋಗಬೇಕು ನನ್ನೊಂದಿಗೆ ಬಾ ಅಂತಾ ಹೇಳಿದಳು, ಆಗ ನಾನು ಅವಳಿಗೆ ನಿನೊಬ್ಬಳೆ ಹೋಗಿ ಅಲ್ಲೆ ರೋಡಿನ ಪಕ್ಕದಲ್ಲಿ ಕೂಳಿತು ಬಾ ಅಂತಾ ಹೇಳಿ ಕಳುಹಿಸಿಕೊಟ್ಟೆ, ಸ್ವಲ್ಪ ಹೊತ್ತಾದನಂತರ ನನ್ನ ಮಗಳು ಮರಳಿ ಬರಲಿಲ್ಲಾ, ನಂತರ ನಾನು ನನ್ನ ಗಂಡ ಇಬ್ಬರು ಕೂಡಿ ರೋಡಿನ ಹತ್ತಿರ ಹೋದಾಗ ಅಲ್ಲೇ ಸಜ್ಜನ ಕಾಂಪ್ಲೆಕ್ಸ ಹತ್ತಿರ ಚೀರಾಡುವ ಸಪ್ಪಳ ಕೇಳಿ ನಾವಿಬ್ಬರು ಅಲ್ಲಿ ಹೋಗಿ ನೋಡಿದಾಗ ನಮ್ಮ ಮಗಳು ರೋಡಿನ ಹತ್ತಿರ ನಿಂತು ಚೀರಾಡುತ್ತಿದ್ದಳು, ಹಾಗು ಮೋಟರ ಸೈಕಲ್ ಗ್ಯಾರೇಜಿನ ರಶೀದ ಮತ್ತು ಅವನೊಂದಿಗೆ ಅಲ್ಲೆ ಕೆಲಸ ಮಾಡುತ್ತಿದ್ದ ಮಂಜುರಪಟೇಲ ಎಂಬುವರು ನಮ್ಮ ಸಂಬಂಧಿಕನಾದ ಧನಸಿಂಗ ತಂದೆ ಸೋಮಸಿಂಗ್ ಪವಾರ ರವರಿಗೆ ಕುತ್ತಿಗೆ ಹಿಚುಕಿ ಸಾಯಿಸಲು ಪ್ರಯತ್ನ ಪಡುತ್ತಿದ್ದರು, ಆಗ ನಾನು ನನ್ನ ಗಂಡ ಮತ್ತು ನಮ್ಮ ತಾಂಡಾದ ದಾದಾರಾಮ ತಂದೆ ದಾಮು ರಾಠೋಡ, ಖೇಮು ತಂದೆ ಲಕ್ಷ್ಮಣ ರಾಠೋಡ ರವರು ಕೂಡಿ ಬಿಡಿಸಿಕೊಂಡಿರುತ್ತೇವೆ,
ಆಗ ಅವರಿಬ್ಬರು ಅಲ್ಲಿಂದ ಓಡಿ ಹೋದರು, ನಂತರ ನನ್ನ ಮಗಳಿಗೆ ಘಟನೆ ಕುರಿತು ಕೇಳಿದಾಗ ಹೇಳಿದ್ದೇನೆಂದರೆ, ನಾನು ಬೈಹಿರದೇಸೆಗೆ ಸಜ್ಜನ ಕಾಂಪ್ಲೇಕ್ಸ ಹಿಂದೆ ಹೋಗಿ ಮರಳಿ ಮನೆಗೆ ಬರುವಾಗ ರಶೀದ ತಂದೆ ಬಾಬು ಮತ್ತು ಅವನೊಂದಿಗೆ ಇದ್ದ ಮಂಜುರಪಟೇಲ ಎಂಬುವರಿಬ್ಬರು ನನಗೆ ತಡೆದು ನಿಲ್ಲಿಸಿದರು, ನಂತರ ಅವರಿಬ್ಬರು ನನಗೆ ಒತ್ತಾಯಪೂರ್ವಕವಾಗಿ ಎಳೆದುಕೊಂಡು ತಮ್ಮ ಗ್ಯಾರೆಜನ ಹಿಂದೆ ಇರುವ ರೂಮಿಗೆ ಒಯ್ದರು, ಆಗ ರಶೀದ ಈತನು ನನಗೆ ಚೀರಾಡಿದರೆ ನಿನಗ ಖಲಾಸ ಮಾಡುತ್ತೇನೆ ಅಂತಾ ಅಂದನು, ಆಗ ನಾನು ಅಂಜಿ ಸುಮ್ಮನಾದೇ, ರಶೀದ ಈತನು ನನಗೆ ಒತ್ತಾಯಪೂರ್ವಕವಾಗಿ ಯಾವುದೋ ಒಂದು ವಸ್ತು ತಿನ್ನಿಸಿದನು, ನಂತರ ರಶೀದ ಇವನು ನನ್ನ ಬಟ್ಟೆಯನ್ನು ತೆಗೆದು ನನಗೆ ಒತ್ತಾಯಪೂರ್ವಕವಾಗಿ ಸಂಭೋಗ ಮಾಡಿದನು, ಅಷ್ಟರಲ್ಲಿ ನಮ್ಮ ಮಾವ ಧನಸಿಂಗ್ ತಂದೆ ಸೋಮಸಿಂಗ ಪವಾರ ರವರು ಸಂಡಾಸಕ್ಕೆ ಬರುವುದನ್ನು ನೋಡಿ ರಶೀದ ಮತ್ತು ಮಂಜುರಪಟೇಲ ಇಬ್ಬರು ಓಡಿ ಹೋಗುತ್ತಿದ್ದರು, ಆಗ ನಾನು ಜೋರಾಗಿ ಚಿರಾಡಿದ್ದರಿಂದ ನಮ್ಮ ಮಾವ ಅವರಿಬ್ಬರನ್ನು ಹಿಡಿದುಕೊಂಡಾಗ ಅವರಿಬ್ಬರು ನಮ್ಮ ಮಾವ ಧನಸಿಂಗ ರವರಿಗೆ ಕುತ್ತಿಗೆ ಹಿಚುಕಿ ಸಾಯಿಸಲು ಪ್ರಯತ್ನ ಪಡುತ್ತಿದ್ದರು, ಆಗ ನಿವೆಲ್ಲರೂ ಬಂದು ಬಿಡಿಸಿಕೊಂಡಿರುತ್ತಿರಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ
ಸಾವು ಪ್ರಕರಣ :
ರೇವೂರ
ಠಾಣೆ : ಶ್ರೀ ಮಹಾಂತಪ್ಪ ತಂದೆ ಸಿದ್ದಣ್ಣ ಬಿರಾದಾರ ಸಾ:ರೇವೂರ
(ಕೆ) ತಾ: ಅಫಜಲಪೂರ ರವರು ದಿನಾಂಕ:28/01/2019 ರಂದು ಕುಲಾಲಿ ರೋಡಿಗೆ ಇರುವ ತಮ್ಮ ಹೋಲಕ್ಕೆ
ಹೋಗಿ ಮರಳಿ ರಾತ್ರಿ 08:00 ಪಿ,ಎಮ್ ಸುಮಾರಿಗೆ ಮನೆಗೆ ಬರುವಾಗ ನಮ್ಮ ಹೋಲದ ಹತ್ತೀರ ನಮ್ಮ
ಗ್ರಾಮದ ಶರಣಪ್ಪ ತಂದೆ ಶೀವಪ್ಪ ಮ್ಯಾಕೇರಿ ರವರ ಹೋಲದಲ್ಲಿ ಯಾರೋ ನರುಳಾಡುವ ಶಬ್ದ ಕೇಳಿತು. ನಾನು
ಹೋಗಿ ನೋಡಲಾಗಿ ಅಂದಾಜು 60-65 ವಯಸ್ಸಿನ ಹೆಣ್ಣು ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಳು. ನಾನು ಮಾತನಾಡಿಸಿದರು
ಅವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ನಾನು ಈ ವಿಷಯವನ್ನು ನಮ್ಮ ಗ್ರಾಮದ ಅಶೋಕ ತಂದೆ
ಗುರುಪಾದಪ್ಪ ಪೊಲೀಸ ಪಾಟೀಲ ರವರಿಗೆ ಮೋಬೈಲ್ ಮೂಲಕ ತಿಳಿಸಿದ ನಂತರ ಅಶೋಕ ಪಾಟೀಲ,ಲಕ್ಷ್ಮೀಪುತ್ರ
ಬಿರಾದಾರ, ಹಸನಪ್ಪ ಮೇಲಿನಕೇರಿ ಮತ್ತು ನನ್ನ ಮಗನಾದ ಶಶಿಕಾಂತ ಬಿರಾದಾರ ರವರೆಲ್ಲರೂ ಸ್ಥಳಕ್ಕೆ
ಬಂದ ನಂತರ 5 ಜನರು ಕೂಡಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಮಗಳನ್ನು ಚಿಕಿತ್ಸೆ ಕುರಿತು
ರೇವೂರ (ಬಿ) ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಸದರಿ ವಿಷಯವನ್ನು ರೇವೂರ ಪೊಲೀಸ ಠಾಣೆಗೆ
ತಿಳಿಸಿ ನಂತರ ರೇವೂರ ಪೊಲೀಸನವರೊಂದಿಗೆ ದಿನಾಂಕ:
29/01/2019 ಮಹಿಳೆಯ ಪಾಲನೆಗಾಗಿ ರಾಜ್ಯ ಮಹಿಳಾ ನಿಲಯ
ಕಲಬುರಗಿ ರವರಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಮಹಿಳಾ ನೀಲಯದವರು ಅಪರೀಚಿತ ಹೆಣ್ಣು
ಮಗಳ ಹೆಚ್ಚೀನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿರುತ್ತಾರೆ. ಇಂದು
ದಿನಾಂಕ:30/01/2019 ರಂದು 12.30 ಪಿ,ಎಮ್ ಸುಮಾರಿಗೆ ರಾಜ್ಯ ಮಹಿಳಾ ನೀಲಯ ಕಲಬುರಗಿಯಿಂದ
ದೂರವಾಣಿ ಮೂಲಕ ವಿಷಯ ತಿಳಿಸಿದ್ದು ಏನೆಂದರೆ, ನಾವು ರಾಜ್ಯ ಮಹಿಳಾ ನೀಲಯ ಕಲಬುರಗಿಯಲ್ಲಿ ಸೇರಿಕೆ
ಮಾಡಿದ್ದ ಅಪರೀಚಿತ ಹೆಣ್ಣು ಮಗಳು ಚಿಕಿತ್ಸೆ ಫಲಕಾರಿ ಆಗದೇ ಇಂದು ದಿನಾಂಕ:30/01/2019 ರಂದು ಜಿಲ್ಲಾ
ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ವಿಷಯ ತಿಳಿದಿರುತ್ತದೆ. ಸದರಿಯವಳ
ಮೃತಪಟ್ಟ ಬಗ್ಗೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ: 30-01-2019 ರಂದು ಶ್ರೀ ಅಣ್ಣಾರಾಯ ತಂದೆ ಶರಣಪ್ಪಗೌಡ ಚೆಟ್ರಕಿ, ಸಾ|| ಬಟಗೇರಾ(ಬಿ)
ಗ್ರಾಮ, ತಾ|| ಸೇಡಂ, ಜಿ|| ಕಲಬುರಗಿ. ರವರ ಮಗನಾದ ಮಲ್ಲಿಕಾರ್ಜುನ ಇತನು ಮುಗನೂರ ಗ್ರಾಮಕ್ಕೆ ಹೋಗಿ
ಮರಳಿ ತನ್ನ ಮೊಟಾರ ಸೈಕಲ್ ನಂ. ಕೆಎ32ಇಹೆಚ್6683 ನೆದ್ದರ ಮೇಲೆ 10:00 ಪಿ.ಎಮ್ ಸುಮಾರಿಗೆ ಸೇಡಂ-ಕೊಡಂಗಲ್ ಮುಖ್ಯರಸ್ತೆಯ ಮೇಲೆ ಬರುವಾಗ ಸೇಡಂ
ವಾಸವದತ್ತಾ ಸಿಮೆಂಟ ಕಂಪನಿಯ ಗೇಟ ಹತ್ತಿರ ಊರಿಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಸ್ಕಾರ್ಪಿಯೋ
ವಾಹನ ನಂ. ಎಮ್.ಹೆಚ್42ವಿ2122 ನೆದ್ದರ ಚಾಲಕನು ತನ್ನ ವಶದಲ್ಲಿದ್ದ ಜೀಪನ್ನು ಅತಿ ವೇಗದಿಂದ ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನನ್ನ ಮಗನಾದ ಮಲ್ಲಿಕಾರ್ಜುನ
ಇತನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸ್ಥಳದಲ್ಲಿಯೆ ಸ್ಕಾರ್ಪಿಯೋ ಜೀಪನ್ನು ಬಿಟ್ಟು ಚಾಲಕ ಓಡಿ
ಹೋಗಿದ್ದು, ಅಪಘಾತದಿಂದ ನನ್ನ ಮಗ ಮಲ್ಲಿಕಾರ್ಜನ
ನ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ಸದರಿಯವನನ್ನು 108 ಅಂಬುಲೆನ್ಸನಲ್ಲಿ
ಆಸ್ಪತ್ರೆಗೆ ಸಾಗಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಲು ಮೃತಪಟ್ಟಿರುವುದಾಗಿ ತಿಳಿಸಿದ್ದು, ಸದರಿ
ಸ್ಕಾರ್ಪಿಯೋ ಜೀಪ್ ನಂ.ಎಮ್.ಹೆಚ್42ವಿ2122 ನೆದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.