Police Bhavan Kalaburagi

Police Bhavan Kalaburagi

Tuesday, March 9, 2021

BIDAR DISTRICT DAILY CRIME UPDATE 09-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-03-2021

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 17/2021, ಕಲಂ. 279, 337, 338, 304() .ಪಿ.ಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 08-03-2021 ರಂದು ಫಿರ್ಯಾದಿ ಶಿವಾಜಿ ತಂದೆ ಗುಣವಂತರಾವ ಪಾಟೀಲ್ ವಯ: 60 ವರ್ಷ, ಜಾತಿ: ಮರಾಠಾ, ಸಾ: ಲಾಡೇಗಾಂವ, ತಾ: ಮಂಡಲ್ ಜುಕ್ಕಲ್, ಜಿಲ್ಲಾ: ಕಾಮಾರೆಡ್ಡಿ (ಟಿಎಸ್) ರವರ ಸಡಕನಾದ ಪಂಡರಿನಾಥ ಇವರಿಗೆ ಆರಾಮ ಇಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಅಂತ ಗೊತ್ತಾಗಿದ್ದರಿಂದ ಅವರಿಗೆ ಮಾತಾಡಿಸಿಕೊಂಡು ಬರೋಣಾ ಅಂತ ತಮ್ಮ ವೆಗೆನಾರ ಕಾರ ನಂ. ಎಪಿ-28/ಬಿಇ-7813 ನೇದರಲ್ಲಿ ಫಿರ್ಯಾದಿಯವರು ತನ್ನ ಹೆಂಡತಿ ಶಾಲುಬಾಯಿ ಮತ್ತು ಅತ್ತೆ ಪ್ರಯಾಗಬಾಯಿ ವಯ: 70 ವರ್ಷ ಮತ್ತು ಮಾವ ವಿಠಲರಾವ ವಯ: 84 ವರ್ಷ ರವರೆಲ್ಲರು ತಮ್ಮೂರಿಂದ ಬೀದರಗೆ ಬೀದರ ಹೊರ ವಲಯದ ರಿಂಗ ರೋಡ ಬೆನಕನಳ್ಳಿ ಕಡೆಯಿಂದ ಬಂದಾಗ ಚಿಕ್ಕಪೇಟ ಕಡೆಯಿಂದ ಲಾರಿ ನಂ. ಟಿಎಸ್-12/ಯು.ಸಿ-1646 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ  ಓಡಿಸಿಕೊಂಡು ಬಂದು ಫಿರ್ಯಾದಿಯವರ ಕಾರಿಗೆ ಡಿಕ್ಕಿ ಪಡಿಸಿ ಲಾರಿ ಬಿಟ್ಟು ಓಡಿ ಹೋದ ಪರಿಣಾಮ ಫಿರ್ಯಾದಿಯ ಬಲಗಡೆ ಎದೆಯ ಮೇಲೆ ಗುಪ್ತಗಾಯವಾಗಿರುತ್ತದೆ ಮತ್ತು ಹೆಂಡತಿ ಶಾಲುಬಾಯಿ ರವರಿಗೆ ಬಲಗಡೆ ಎದೆಯಲ್ಲಿ ಭಾರಿ ಗುಪ್ತಗಾಯ ಮತ್ತು ಎಡಗಣ್ಣಿನ ಹತ್ತಿರ ರಕ್ತಗಾಯವಾಗಿರುತ್ತದೆ ಮತ್ತು ಮಾವ ವಿಠಲರಾವ ರವರಿಗೆ ಮೇಲಿನ ತುಟಿಗೆ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ ಮತ್ತು ಅತ್ತೆ ಪ್ರಯಾಗಬಾಯಿ ರವರಿಗೆ ಬಲಗೈಗೆ ತರಚಿತ ಗಾಯವಾಗಿದ್ದು ಮತ್ತು ಎದೆಯಲ್ಲಿ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ನಂತರ ಎಲ್ಲರೂ ಸೇರಿ ಅತ್ತೆ ಶವ 108 ಅಂಬುಲೆನ್ಸದಲ್ಲಿ ಹಾಕಿಕೊಂಡು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ಇಟ್ಟು ಉಳಿದವರು ಚಿಕಿತ್ಸೆ ಪಡೆಯುತ್ತಿದ್ದೆವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 26/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 08-03-2021 ರಂದು ಕಬೀರಾಬಾದವಾಡಿ ಗ್ರಾಮದ ಶಿವಾರ ಗುರುನಾಥ ಹುಡಗಿ ರವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಲ್ಲಾಲಿಂಗ ತಂದೆ ಪ್ರಭುರಾವ ಹಂದಿಕೇರಿ ಮತ್ತು ಗುರುನಾಥ ತಂದೆ ವಿರಶೆಟ್ಟಿ ಹುಡಗಿ ಇಬ್ಬರು ಸಾ: ಕಬೀರಾಬಾದವಾಡಿ ರವರು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನಿಂಗಪ್ಪಾ ಮಣ್ಣೂರ ಪಿ.ಎಸ್.(ಕಾಸು) ಹಳ್ಳಿಖೇಡ[ಬಿ] ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಬೀರಾಬಾದವಾಡಿ ಗ್ರಾಮದ ಶಿವಾರ ಗುರುನಾಥ ಹುಡಗಿ ರವರ ಹೊಲದ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಆರೋಪಿತರಾದ 1) ಯಲ್ಲಾಲಿಂಗ ತಂದೆ ಪ್ರಭುರಾವ ಹಂದಿಕೇರಿ ವಯ: 32 ವರ್ಷ, ಜಾತಿ: ಎಸ್.ಟಿ ಗೊಂಡ, 2) ಗುರುನಾಥ ತಂದೆ ವಿರಶೆಟ್ಟಿ ಹುಡಗಿ ವಯ: 57 ವರ್ಷ, ಜಾತಿ: ಲಿಂಗಾಯತ ಇಬ್ಬರು ಸಾ: ಕಬೀರಾಬಾದವಾಡಿ ಇವರಿಬ್ಬರು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದಿ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿದಾಗ ಮಟಕಾ ಚೀಟಿ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಹಾಗೂ ಆರೋಪಿ ಗುರುನಾಥ ಇವರೆಲ್ಲರೂ ಓಡಿ ಹೋಗಿದ್ದು, ನಂತರ ಆರೋಪಿ ಯಲ್ಲಾಲಿಂಗ ಇತನಿಗೆ ಹಿಡಿದು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ 4,100/- ರೂ. ನಗದು ಹಣ, 2 ಮಟಕಾ ಚೀಟಿ ಮತ್ತು 1 ಪೆನ್ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 23/2021, ಕಲಂ. 279, 338 ಐಪಿಸಿ :-

ದಿನಾಂಕ 08-03-2021 ರಂದು ಫಿರ್ಯಾದಿ ರಾಮ ತಂದೆ ಶಂಕರರಾವ ಕಾಂಬಳೆ, ವಯ: 45 ವರ್ಷ, ಜಾತಿ: ಸಮಗಾರ, ಸಾ: ಶಹಾಪೂರ ಗಲ್ಲಿ ಬಸವಕಲ್ಯಾಣ ರವರು ಚಲಾಯಿಸುತ್ತಿದ್ದ ಮೋಟರ ಸೈಕಲ ನಂ. ಕೆಎ-56/ಜೆ-9814 ನೇದರ ಹಿಂಭಾಗ ತನ್ನ ಮಗನಾದ ಬಬ್ಲು ಕಾಂಬಳೆ ವಯ: 14 ವರ್ಷ ಈತನನ್ನು ಕೂಡಿಸಿಕೊಂಡು ಪ್ರತಿ ದಿನದಂತೆ ತನ್ನ ಮನೆಯಿಂದ ಧಾಭಾಗಳಿಗೆ ರೊಟ್ಟಿ ಸಪ್ಲಾಯಿ ಮಾಡುವ ಕುರಿತು ರೊಟ್ಟಿ ಕಟ್ಟಿಕೊಂಡು ಖಾನಾಪೂರ ರೋಡಿಗೆ ಇರುವ ಬಿ.ಕೆ ಧಾಭಾಕ್ಕೆ ರೊಟ್ಟಿ ಕೊಟ್ಟು ಮರಳಿ ಪುನಃ ಬಸವಕಲ್ಯಾಣಕ್ಕೆ ಬರುವಾಗ ಪರ್ತಾಪೂರ - ಖಾನಾಪುರ ರೋಡಿನ ತಿರುವಿನ ಹತ್ತಿರ ಬಂದಾಗ ಬಸವಕಲ್ಯಾಣ ಕಡೆಯಿಂದ ಅಪ್ಪಿ ಗೂಡ್ಸ ವಾಹನ ಸಂ. ಕೆಎ-39/4727 ನೇದರ ಚಾಲಕನಾದ ಆರೋಪಿ ಸಲಾವುದ್ದೀನ್ ತಂದೆ ಶಬ್ಬೀರಮಿಯ್ಯ ಗಿಡಗಾಸಿ, ಸಾ: ಪರ್ತಾಪೂರ ಒತಮಿ ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತನ್ನ ವಾಹನದ ಬಲಭಾಗದ ಇಂಡಿಕೇಟರ್ ಹಾಕದೇ ಮತ್ತು ಕೈಸನ್ನೆ ತೋರಿಸದೇ ಒಮ್ಮೇಲೆ ತನ್ನ ವಾಹನವನ್ನು ಬಲಭಾಗಕ್ಕೆ ತಿರುಗಿಸಿಕೊಂಡು ಫಿರ್ಯಾದಿಯವರ ಮೋಟರ ಸೈಕಲಗೆ ಡಿಕ್ಕಿ ಮಾಡಿದ ಪ್ರಯುಕ್ತ ಫಿರ್ಯಾದಿಯವರ ಎಡಗೈ ಮುಂಗೈ ಹತ್ತಿರ, ಬಲಗಡೆ ಎದೆಯ ಮೇಲೆ ಭಾರಿ ಗುಪ್ತಗಾಯ, ಬಾಯಿಯ ಕೆಳತುಟಿಯ ಮೇಲೆ ಭಾರಿ ರಕ್ತಗಾಯ, ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ ಮತ್ತು ಹಿಂದೆ ಕುಳಿತ ಮಗ ಬಬ್ಲು ಕಾಂಬಳೆ ಈತನಿಗೆ ಬಲಗಡೆ ಗಲ್ಲಕ್ಕೆ ರಕ್ತಗಾಯ, ಬಲಮೊಳಕೈಗೆ ಭಾರಿ ಗುಪ್ತಗಾಯ, ಬಲಸೊಂಟಕ್ಕೆ, ಹೊಟ್ಟೆಯಲ್ಲಿ, ಎಡಗಾಲು ಹಿಮ್ಮಡಿ ಕೆಳಗೆ ರಕ್ತಗಾಯವಾಗಿರುತ್ತದೆ. ಸದರಿ ಘಟನಯನ್ನು ಕಂಡು ಅಲ್ಲಿಂದಲೇ ಹೋಗುತ್ತಿದ್ದ ಮಲ್ಲಪ್ಪ ರಾಯವಡೆ ಸಾ: ಬಸವಕಲ್ಯಾಣ ಮತ್ತು ರಾಜಕುಮಾರ ತಂದೆ ಕರಣರಾವ ಜಾಧವ ಸಾ: ಬಸವಕಲ್ಯಾಣ ರವರು ಗಾಯಗೊಂಡ ಎಲ್ಲರಿಗೂ ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 07/2021, ಕಲಂ. 457, 380 ಐಪಿಸಿ :-

ದಿನಾಂಕ 07-03-2021 ರಂದು 2330 ಗಂಟೆಯಿಂದ ದಿನಾಂಕ 08-03-2021 ರಂದು 0430 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಅಬ್ದುಲಸಾಬ ತಂದೆ ಅಲಿಸಾಬ ಶೇಕ್ ವಯ: 65 ವರ್ಷ, ಜಾತಿ: ಮುಸ್ಲಿಂ, ಸಾ: ಹಂಗರಗಾ ರವರ ಮನೆಯ ಬಾಗಿಲಿನ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಅಲ್ಮಾರದಲ್ಲಿನ 1) ಒಂದುವರೆ ತೊಲೆಯ ಬಂಗಾರದ ನೆಕ್ಲೇಸ್ ಅ.ಕಿ 27,000/- ರೂ., 2) 5 ಗ್ರಾಂ ಬಂಗಾರದ ಎಲೆಗಳು ಅ.ಕಿ 9,000/- ರೂ., 3) ಒಂದು ತೊಲೆ ಬಂಗಾರದ ಕೊರಳಿನ ಮಂಗಳ ಸೂತ್ರ (ಗಲ್ಸರಿ) ಅ.ಕಿ 18,000/- ರೂ., 4) 9 ಗ್ರಾಂ ಬಂಗಾರದ ಕೊರಳಿನ ಸರಪಳ ಅ.ಕಿ 28,140/- ರೂ., 5) 20 ತೊಲೆಯ ಬೆಳ್ಳಿಯ ಚೈನ್ ಅ.ಕಿ 14,000/- ರೂ. ಹಾಗೂ 6) ನಗದು ಹಣ 25,000/- ರೂಪಾಯಿ ಹೀಗೆ ಒಟ್ಟು 1,21,140/- ರೂಪಾಯಿಯ ಬಂಗಾದ ವಡವೆಗಳು ಹಾಗು ನಗದು ಹಣ ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 08/2021, ಕಲಂ. 457, 380 ಐಪಿಸಿ :-

ದಿನಾಂಕ 07-03-2021 ರಂದು 2330 ಗಂಟೆಯಿಂದ ದಿನಾಂಕ 08-03-2021 ರಂದು 0230 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಶ್ರೀಕಾಂತ ತಂದೆ ಹುಲ್ಲಪ್ಪಾ ಜೊಂದಾಳೆ ವಯ: 60 ವರ್ಷ, ಜಾತಿ: ಎಸ್.ಸಿ ಮಹಾರ, ಸಾ: ಹಂಗರಗಾ ರವರ ಮನೆಯ ಬಾಗಿಲಿನ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿ ಅಲ್ಮಾರದಲ್ಲಿನ 30,000/- ರೂಪಾಯಿ ನಗದು ಹಣ ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 19/2021, ಕಲಂ. 454, 457, 380 ಐಪಿಸಿ :-

ದಿನಾಂಕ 05-03-2021 ರಂದು 1100 ಗಂಟೆಯಿಂದ ದಿನಾಂಕ 07-05-2021 ರಂದು 0900 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಕಮಲಾಬಾಯಿ ಗಂಡ ಚಿಂತಾಮಣಿ ಔಟೆ ವಯ: 51 ವರ್ಷ, ಜಾತಿ: ಕಬ್ಬಲಿಗ, ಸಾ: ಬಟಗೇರಾ, ತಾ: ಬಸವಕಲ್ಯಾಣ ರವರ ಮನೆಯ ಬಾಗಿಲು ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಅಲಮಾರ ಮತ್ತು ಪೇಟಿಯ ಕೀಲಿ ಮುರಿದು ಅವುಗಳಲ್ಲಿದ್ದ 1) 7 ಗ್ರಾಂ ಬಂಗಾರದ 01 ಲಾಕೀಟ ಅ.ಕಿ 31,500/- ರೂ., 2) 5 ಗ್ರಾಂ ಬಂಗಾರದ 02 ಹೂವು ಅ.ಕಿ 22,500/- ರೂ., 3) 5 ಗ್ರಾಂ ಬಂಗಾರದ 01 ಉಂಗೂರ ಅ.ಕಿ 22,500/- ರೂ., 4) 3 ಗ್ರಾಂ ಬಂಗಾರದ 01 ಉಂಗೂರ ಅ.ಕಿ 13,500/- ರೂ., 5) 20 ಗ್ರಾಂ 02 ಬೆಳ್ಳಿ ಗ್ಲಾಸ್ ಅ.ಕಿ 1600/- ರೂ., 6) 10 ಗ್ರಾಂ 01 ಬೆಳ್ಳಿ ಬಟ್ಟಲು ಅ.ಕಿ 400/- ರೂ., 7) 50 ಗ್ರಾಂ 01 ಉಡದಾರ ಅ.ಕಿ 2000/- ರೂ ಮತ್ತು 8) ನಗದು ಹಣ 20,000/- ರೂಪಾಯಿ ಹೀಗೆ ಒಟ್ಟು 1,14,000/- ರೂಪಾಯಿ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳು ಹಾಗು ನಗದು ಹಣ ಕಳವು ಮಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.