ಇಸ್ಪೀಟ
ಜೂಜಾಟದಲ್ಲಿ ನಿರತವರ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 06.09.2018 ರಂದು ಕಲಬುರಗಿ ನಗರದ ಸುಪರ್ ಮಾರ್ಕೇಟನ ಎಸ್,ಬಿ.ಹೆಚ್ ಬ್ಯಾಂಕ
ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ದುಂಡಾಗಿ ಕುಳಿತು
ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ದೈವದ್ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ ಅಂತಾ
ಖಚಿತವಾದ ಬಾತ್ಮಿ ಬಂದ ಮೇರೆಗೆ, ಮಾನ್ಯ ಎಸ್.ಪಿ ಕಲಬುರಗಿ, ಮಾನ್ಯ ಪೊಲೀಸ ಉಪಾಧೀಕ್ಷಕರು (ಬಿ) ಉಪ-ವಿಭಾಗ ಕಲಬುರಗಿರವರ ಮಾರ್ಗದರ್ಶನದಲ್ಲಿ ಶ್ರೀ.
ಕಪೀಲದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕಲಬುರಗಿ ನಗರದ
ಎಸ್.ಬಿ.ಹೆಚ್ ಬ್ಯಾಂಕನ ಹತ್ತಿರ ಹೋಗಿ ಕಂಪೌಂಡ ಗೋಡೆಯ ಮರೆಯಲ್ಲಿ ದೂರದಲ್ಲಿ ಜೀಪ
ನಿಲ್ಲಿಸಿ ನಾವು ಜೀಪನಿಂದ ಇಳಿದು ಸ್ವಲ್ಪ ನಡೆದು ಹೋಗಿ ಸದರಿ ಸ್ಥಳಕ್ಕೆ ತಲುಪಿ ಗೋಡೆಯ ಮರೆಯಲ್ಲಿ ನಿಂತು ನೋಡಲು ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಕಂಬದ ಬೆಳಕಿನಲ್ಲಿ 3-4 ಜನರು ದುಂಡಾಗಿ ಕುಳಿತು
ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ 100 ರೂಪಾಯಿ ಬಾಹರ 100 ರೂಪಾಯಿ ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ದಾಳಿ
ಮಾಡಿ 4 ಜನರನ್ನು ಹಿಡಿದುಕೊಂಡಿದ್ದು ಆಗ ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಲು
ತಮ್ಮ ಹೆಸರುಗಳು 1) ಸುನೀಲ ಕುಮಾರ ತಂದೆ ಭಿಮಣ್ಣ ಸಾ: ರಾಮ ನಗರ ಹುಮನಬಾದ ರಿಂಗ ರೋಡ ಕಲಬುರಗಿ 2) ಸುಜೀತಕುಮಾರ ತಂದೆ
ಶಂಬುಲಿಂಗಪ್ಪ 3) ಮಹಾನಿಂಗಪ್ಪ ತಂದೆ ಶಿವಶರಣಪ್ಪ ಸಾ: ರಾಮ ನಗರ ಹುಮನಾಬಾದ ರಿಂಗರೋಡ ಕಲಬುರಗಿ 4) ಬಸವರಾಜ ತಂದೆ ಭಗವಂತಪ್ಪ
ಸಾ: ಬಸವೇಶ್ವರ ಕಾಲನಿ ಕಲಬುರಗಿಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 13930/-ರೂ ಹಾಗೂ 52 ಇಸ್ಪೆಟ್ ಎಲೆಗಳು
ದೊರೆತ್ತಿದ್ದು. ಅವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಬ್ರಹ್ಮಪುರ ಠಾಣೆಗೆ ಬಂದು
ಪ್ರಕರಣ ದಾಖಲಿಸಲಾಗಿದೆ.:
ನರೋಣಾ ಠಾಣೆ : ದಿನಾಂಕ
06-09-2018 ರಂದು ನರೋಣಾ ಪೊಲೀಸ್ ಠಾಣೆ ಯ
ವ್ಯಾಪ್ತಿಯ ಕಮಲಾನಗರ ಗ್ರಾಮದ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆದ ಬಗ್ಗೆ ಬಾತ್ಮಿ
ಮೇರೆಗೆ ಪಿ.ಎಸ್.ಐ. ನರೋಣಾ ಠಾಣೆ ಹಾಗು
ಸಿಬ್ಬಂದಿ ಮತ್ತು ಪಂಚರೊಂದಗೆ ಸ್ಥಳಕ್ಕೆ ಹೋಗಿ ಜೂಜಾಟ ನಡೆದ ನಗ್ಗೆ ಖಚಿತಪಡಿಸಿಕೊಂಡು ದಾಳಿ
ಮಾಡಿ 7 ಜನರನ್ನು ವಶಕ್ಕೆ ಪಡೆದು
ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಪರುಶರಾಮ ತಂದೆ
ಗುರಣ್ಣಾ ಪೂಹಾರಿ ಸಾ : ಬೋದನ ವಾಡಿ 2) ರುದ್ರಶೆಟ್ಟಿ ತಂದೆ
ಮಡಿವಾಳಪ್ಪಾ ಪಾಟೀಲ ಸಾ : ಬೋದನ ವಾಡಿ 3) ಶಿವರಾಜ ತಂದೆ ಶ್ರೀಮಂತರಾಯ ಬಾಬನಿ ಸಾ ಕಮಲನಗರ 4)
ಪ್ರದೀಪಕುಮಾರ ತಂದೆ ಶಿವಶರಣಪ್ಪಾ ಕುಂಬಾರ ಸಾ : ಕಮಲನಗರ 5) ಬಸವರಾಜ ತಂದೆ ಗುರಲಿಂಗಪ್ಪಾ
ಮುನ್ನಳ್ಳಿ ಸಾ : ಸಾವಳಗಿ ಕೆ 6) ಚನ್ನವೀರ ತಂದೆ
ಚಂದ್ರಶಾ ರೋಲೆ ಸಾ : ತೋಳನ ವಾಡಿ 7) ಶಿವಶಂಕರ ತಂದೆ ರಾಜು ಬಿರಾದರ ಸಾ ಬೋದನ ವಾಡಿ ಅಂತಾ
ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3500/- ರೂ ಹಾಗು 52 ಇಸ್ಪೀಟ
ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ ಮಹಿಬೂಬ ತಂದೆ ಮೆಹತಾಬಸಾಬ ಅತ್ತಾರ ಸಾ ಬೆಳಂಬಗಿ ರವರು ತಮ್ಮ ಜಾಗೆಯಲ್ಲಿ
ಬಾತ್ರರೂಂ ಮತ್ತು ಸಂಡಾಸ ರೂಂ ಕಟ್ಟಿಸುತ್ತಿರುವುದರಿಂದ ಮುರಂ ತರಿಸಿ ನಮ್ಮೂರಿನ ರಮೇಶ ತೋಳನೂರೆ
ಇವರ ಕಿರಾಣಿ ಅಂಗಣಿಯ ಮುಂದೆ ಇರುವ ರಸ್ತೆಯ ಮೇಲೆ ಹಾಕಿಸಿದ್ದಲ್ಲಿ ಅಲ್ಲಿಯಿಂದ ನಮ್ಮ ಪ್ಲಾಟಿಗೆ
(ಜಾಗೆಗೆ) ತಂದು ಹಾಕಲು ನಮ್ಮೂರಿನ ಹಣಮಂತ ತಂದೆ ನಿಂಗಪ್ಪ ಮೋಟೆ ಇವರಿಗೆ ಕೂಲಿ ಕೆಲಸಕ್ಕೆ
ಹೇಳಿದ್ದು ಅದರಂತೆ ಸದರಿ ಹಣಮಂತ ಇವರು ನಿನ್ನೆ ದಿನಾಂಕ:05/09/2018 ರಂದು ಮಧ್ಯಾಹ್ನ 2-30 ಗಂಟೆ ಸುಮರಿಗೆ ಸದರಿ
ರಮೇಶ್ ಇವರ ಮನೆಯ ಮುಂದೆ ಹಾಕಿದ ನಮ್ಮ ಮುರಂನ್ನು ತುಂಬುತ್ತಿರುವಾಗ ನಮ್ಮೂರಿನ ಶರಣಪ್ಪಾ ತಂದೆ
ವಿಠಲ್ ತಿಮ್ಮಾಜಿ ಹಾಗೂ ಶರಣಪ್ಪ ತಂದೆ ಹಣಮಂತರಾಯ ಹಳಕೆ ಇವರುಗಳು ಕೂಡಿ ಹಣಮಂತ ಇವರೊಂದಿಗೆ ನಕರಿ
ಮಾಡುತ್ತಾ ಕೆಲಸಕ್ಕೆ ಅಡೆತಡೆ ಮಾಡುತ್ತಿದ್ದುದರಿಂದ ನಾನು ಅವರಿಗೆ ಕೆಲಸ ಮಾಡುವರಿಗೆ ತೊಂದರೆ
ಕೊಡಬೇಡವೆಂದು ಹೇಳುತ್ತಿರುವಾಗ ಸದರಿ ಶರಣಪ್ಪಾ ತಿಮ್ಮಾಜಿ, ಶರಣಪ್ಪ ಹಳಕೆ ಹಾಗೂ ಅಲ್ಲಿಯೇ ಇದ್ದ ಶಾಂತಪ್ಪಾ ರವಿ ಮೋಟೆ ಇವರುಗಳು ಕೂಡಿಕೊಂಡು
ಬಂದು ಅವರಲ್ಲಿ ಶರಣಪ್ಪಾ ತಿಮ್ಮಾಜಿ ಇವನು ನನಗೆ ನೀನು ಯಾವಅಲೆ ಬೋಸಡಿ ಮಗನೆ ಕೇಳುವನು ಎಂದು
ಅವಾಚ್ಯವಾಗಿ ಬೈಯುತ್ತಾ ನನ್ನೊಂದಿಗೆ ಜಗಳಕ್ಕೆ ಬಿದ್ದು ಶರಣಪ್ಪಾ ಹಳಕೆ ಹಾಗೂ ಶಾಂತಪ್ಪಾ ಮೋಟೆ
ರವರು ನನಗೆ ಒತ್ತಿಹಿಡಿದಿದ್ದು ಶರಣಪ್ಪಾ
ತಿಮ್ಮಾಜಿ ಇವನು ನನಗೆ ಅಲ್ಲಿಯೇ ಪಕ್ಕದಲ್ಲಿಯೇ ಇದ್ದ ಸುತ್ತಿಗೆ ತಗೆದುಕೊಂಡು ನನ್ನ ತಲೆಗೆ
ಮತ್ತು ಎಡಗಡೆ ಮಗ್ಗಲಿಗೆ ಹೊಡೆದಿದ್ದರಿಂದ ತಲೆಗೆ ರಕ್ತಗಾಯವಾಗಿದ್ದು ನಂತರ ಶರಣಪ್ಪಾ ಹಳಕೆ
ಮತ್ತು ಶಾಂತಪ್ಪಾ ಮೋಟೆ ರವರುಗಳು ಕೈಯಿಂದ ಬೆನ್ನಮೇಲೆ ಹೊಡೆಯುತ್ತಿರುವಾಗ ಅಲ್ಲಿಯೇ ಇದ್ದ
ನಮ್ಮೂರಿನ ರಮೇಶ ತಂದೆ ಶರಣಪ್ಪಾ ತೋಳನೂರೆ, ಮಲ್ಲಪ್ಪ
ಸಜ್ಜನ ಮತ್ತು ಹಣಮಂತ ತಂದೆ ನಾಗಪ್ಪಾ ಮೋಟೆ ರವರುಗಳು ಕೂಡಿ ಜಗಳ ನೋಡಿ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋನಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಅಬ್ದುಲ
ಖುದ್ದುಸ ತಂದೆ ಅಬ್ದುಲ ಗಫೂರ ಸಾ:ಮಹಡಿ
ಮೊಹಲ್ಲಾ ಕಲಬುರಗಿ ಇವರು ಬ್ರಹ್ಮಪೂರ ಬಡಾವಣೆಯ ಸ.ನಂ.127/1 (ಭಾಗ) ಪ್ಲಾಟ
ನಂ.61 ಮಹಾನಗರ ಪಾಲಿಕೆ ನಂ:11-1041/127/1ಪಿ/61 ಇದನ್ನು
ಶ್ರೀ ಬಾಬುರಾವ ತಂ: ಧೋಂಡಿಬಾ ಇವರ ಕಡೆಯಿಂದ ಖರೀದಿಸಿದ ಅದಕ್ಕೆ ಸಂಬಂಧಿಸಿದ ಖರೀದಿ ನೋಟರಿ ಪತ್ರ ಸಂ:17.7.2018 ರಂತೆ ಬರೆಸಿಕೊಂಡಿರುತ್ತೇನೆ. ಅದು ಕಟ್ಟಡವಾದ ಸ್ಥಳವಾಗಿರುತ್ತದೆ. ಆದರೆ ಸದರಿ ಈ ಪ್ಲಾಟಿಗೆ ಸಂಬಂಧ ಇಲ್ಲದ ಮೇಲೆ ತಿಳಿಸಿದ ದಿಗಂಬರ ಕುಕ್ ಶಾದಾಬಾ (ಸೆಲ್ ನಂ: 9845609499), ಶಿವು ಯಲಗಾರ
(ಸೆಲ್ ನಂ:8867736477) ಒಬ್ಬ
ಸ್ತ್ರೀ, ಕಲಿಯಾರ್ (ಸೆಲ್ ನಂ: 9972786724) ಯುಸುಫ್ ಮತ್ತು ಶಾಕೀರ ಇವರೆಲ್ಲರೂ ಕೂಡಿ ಸದರಿ ಜಾಗದಲ್ಲಿ ದಾದಾಗಿರಿ ಮಾಡುತ್ತಾ ಕೈಯಲ್ಲಿ ಚಾಕು ಚೂರಿ, ಕಟ್ಟಿಗೆ ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ನೀವು ಈ ಪ್ಲಾಟಿನ ವಿಷಯಕ್ಕೆ ಬಂದರೆ ನಿಮ್ಮ ಜೀವ ತೆಗೆಯುತ್ತೇವೆ ಎಂದು ಜೀವದ ಭಯ ಒಡ್ಡುತ್ತಿದ್ದಾರೆ. ಅಲ್ಲದೆ ಯುಸುಫ್ ಮತ್ತು ಶಾಕೀರ
ಎಂಬುವರು ದಿ:31.8.2018 ಸಮಯ ಮಧ್ಯಾನ
1.00 ಗಂಟೆಗೆ ಹಾಗೂ ದಿಗಂಬರ ಶಿವು ಯಲಗಾರ ಒಬ್ಬ ಸ್ತ್ರೀ ಕಲಿಯರಾ ಇವರು ಸಹ ಬಂದು ಬೊರವೆಲ್ ವಾಹನ ವ ನ್ನು ತೆಗೆದುಕೊಂಡು ಬಂದು ಅಲ್ಲಿ ಬೊರವೆಲ್ ಹಾಕಲು ಯತ್ನಿಸುತ್ತಿದ್ದಾರೆ. ನಾವು ಎಷ್ಟು ಹೇಳಿದರು ಕೇಳುತ್ತಿಲ್ಲ. ಇದರಿಂದ ನಮ್ಮ ಜೀವಕ್ಕೆ ತುಂಬಾ ಅಪಾಯವಿದ್ದು ನಮ್ಮ ಹತ್ತಿರ 1995 ಪೇಪರ ಇದ್ದರೆ ಅವರು 2005 ರ ದಾಖಲೆಗಳು ಪಡೆದುಕೊಂಡು ಬಂದು ಭಯ ಹಾಕುತ್ತಿದ್ದಾರೆ ನೀವು ಇತ್ತ ಕಡೆ ಬಂದರೆ ನಿಮಗೆ ಬಿಡುವುದಿಲ್ಲವೆಂದು ಭಯ ಒಡ್ಡುತ್ತಿದ್ದಾರೆ. ಪ್ರಯುಕ್ತ ಮಾನ್ಯರು ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನಿಜವಾದ ದಾಖಲಾತಿಗಳನ್ನು ತಾವು ಪರಿಶೀಲಿಸಿ ಸದರಿ ದಾಖಲಾತಿಗಳ ಪ್ರಕಾರ ಅವರು ಮುಂದೆ ಈ ಪ್ಲಾಟನ ವಿಷಯಕ್ಕೆ ಬರದಂತೆ ಸೂಕ್ತ ಕ್ರಮ ಕೈಕೊಂಡು ನನಗೆ ಅವರಿಂದ ತಮ್ಮ ರಕ್ಷಣೆ ಹಾಗೂ ನ್ಯಾಯ ಒದಗಿಸಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.