ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-08-2021
ಧನ್ನೂರ ಪೊಲೀಸ ಠಾಣೆ ಅಪರಾಧ ಸಂ. 78/2021, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 15-08-2021 ರಂದು ಫಿರ್ಯಾದಿ ರೂಪಾ ಗಂಡ ಶರಣಯ್ಯಾ ವಯ: 32 ವರ್ಷ, ಜಾತಿ: ಸ್ವಾಮಿ, ಸಾ: ಸಿದ್ದೇಶ್ವರ್ ರವರ ಗಂಡನಾದ ಶರಣಯ್ಯ ತಂದೆ ಕಾಸಯ್ಯ ರವರು ನೇಳಗಿ ಹಾಗೂ ಹಲಬರ್ಗಾಕ್ಕೆ ಹೋಗಿ ಬರುವುದಾಗಿ ಹೇಳಿ ಮೋಟಾರ್ ಸೈಕಲ್ ನಂ. ಕೆಎ-39/ಕ್ಯೂ-8845 ನೇದರ ಮೇಲೆ ಸಿದ್ದೇಶ್ವರದಿಂದ ಹೊರಟು ಹಲಬರ್ಗಾ ಕಡೆಗೆ ಹೋಗುವಾಗ ರೈಲ್ವೆ ಗೇಟ್ ದಾಟಿ ನಾಗಣ್ಣ ಗುಡಿ ಹತ್ತಿರ ರೋಡಿನ ಮೇಲೆ ಹೋಗುವಾಗ ಅವರ ಹಿಂದುಗಡೆಯಿಂದ ಕಾರ್ ನಂ. ಕೆಎ-32/ಪಿ-7512 ನೇದರ ಚಾಲಕನಾದ ಆರೋಪಿ ಆನಂದಕುಮಾರ ತಂದೆ ಸತ್ಯಕುಮಾರ ವಯ: 44 ವರ್ಷ, ಸಾ: ಚಿಮ್ಮನಚೋಡ, ತಾ: ಚಿಂಚೋಳಿ, ಜಿ: ಕಲಬುರ್ಗಿ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಗಂಡನ ವಾಹನಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಗಂಡನ ತಲೆಗೆ ಹಾಗೂ ತಲೆಯ ಹಿಂದೆ ಭಾರಿ ರಕ್ತ ಗಾಯವಾಗಿ ಮೂರ್ಛೆ ಹೋಗಿದ್ದು ಹಾಗೂ ಇತರೆ ಕಡೆ ತರಚಿದ ಗಾಯವಾಗಿದ್ದು ಇರುತ್ತದೆ, ನಂತರ ತನ್ನ ಗಂಡನಿಗೆ 108 ಅಂಬುಲೆನ್ಸ್ ನಲ್ಲಿ ಚಿಕಿತ್ಸೆ ಕುರಿತು ಬೀದರ್ ಸರ್ಕಾರಿ ಆಸ್ಪತ್ರೆಗೆ ತಂದು ತೋರಿಸಿದಾಗ ವೆದ್ಯಾಧಿಕಾರಿಯವರು ಪರೀಕ್ಷಿಸಿ ಗಂಡ ರವರು ದಾರಿಯಲ್ಲೇ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 74/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 16-08-2021 ರಂದು ಉಜಳಂಬ ಗ್ರಾಮದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್.ಐ (ಕಾಸು) ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಉಜಳಂಬ ಗ್ರಾಮಕ್ಕೆ ಹೋಗಿ ಅಲ್ಲಿ ಉಜಳಂಬ ಗ್ರಾಮದ ವಾಲ್ಮಿಕ ಚೌಕ ಹತ್ತಿರ ರೋಡಿನ ಪಕ್ಕದಲ್ಲಿ ಹೋಗಿ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಉಜಳಂಬ ಗ್ರಾಮದಲ್ಲಿರುವ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪ್ರಲ್ಹಾದ ತಂದೆ ಬಳಿರಾಮ ಜೋಗೆ ವಯ: 50 ವರ್ಷ, ಜಾತಿ: ಕೋಳಿ, ಸಾ: ಜೋಗೆವಾಡಿ ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವಾಗ ಪೊಲೀಸ್ ಸಿಬ್ಬಂದಿ ಕೂಡಿ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಂಡಾಗ ಹಣ ಕೊಟ್ಟು ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿಗೆ ವಿಚಾರಿಸಲು ಆತನು ತಿಳಿಸಿದ್ದೆನೆಂದರೆ ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದÄಕೊಳ್ಳುತ್ತಿದ್ದೆನೆ ಅಂತಾ ಹೇಳಿದನು, ನಂತರ ಪಂಚರ ಸಮಕ್ಷಮದಲ್ಲಿ ಅವನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 6070/- ರೂ., 2) 2 ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ನ ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 62/2021, ಕಲಂ. 279, 337, 338 ಐಪಿಸಿ :-
ದಿನಾಂಕ 16-08-2021 ರಂದು ಲಖನಗಾಂವ ಗ್ರಾಮದಲ್ಲಿ ಚಕ್ರಕುಟಿ ಬಾಯವಾ ಮಠದಲ್ಲಿ ಬಾಯವಾ ಮುರ್ತಿ ಸ್ಥಾಪನೆ ಇದ್ದ ಪ್ರಯುಕ್ತ ಫಿರ್ಯಾದಿ ಬಾಳಾಸಾಹೇಬ ತಂದೆ ರಾವುಸಾಹೇಬ ತಗರಖೇಡೆ ವಯ: 33 ವರ್ಷ, ಜಾತಿ: ಮರಾಠಾ, ಸಾ: ಲಖನಗಾಂವ ರವರು ತನ್ನ ತಂದೆಯಾದ ರಾವುಸಾಹೇಬ ತಂದೆ ಕೇಶವರಾವ ತಗರಖೇಡೆರವರು ಇಬ್ಬರು ಕೂಡಿ ತಮ್ಮ ಕಾರ ನಂ. ಎಮ್.ಹೆಚ್-24/ಜೆ-0029 ನೇದರಲ್ಲಿ ಲಖನಗಾಂವ ಗ್ರಾಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುವಾಗ ಸೋನಾಳ ಗ್ರಾಮ ದಾಟಿದಾಗ ಸೋನಾಳ ಹೊರಂಡಿ ಕ್ರಾಸ ಮಧ್ಯ ರೋಡಿನಲ್ಲಿ ಎದುರಿನಿಂದ ಹೊರಂಡಿ ಕ್ರಾಸ ಕಡೆಯಿಂದ ಮೋಟಾರ ಸೈಕಲ್ ನಂ. ಟಿ.ಎಸ್-13/ಇ.ಪಿ-6544 ನೇದರ ಚಾಲಕನಾದ ಆರೋಪಿ ವಿನೋದ ತಂದೆ ರಾಜೇಂದ್ರ ಸೂರ್ಯವಂಶಿ ವಯ: 25 ವರ್ಷ, ಜಾತಿ: ಮಾದಿಗ, ಸಾ: ಸಾಯಗಾಂವ ಇತನು ತನ್ನ ಮೋಟಾರ್ ಸೈಕಲ ಹಿಂದುಗಡೆ ಮಾರುತಿ ತಂದೆ ವಿಠಲ ಮೇತ್ರೆ ವಯ: 60 ವರ್ಷ, ಜಾತಿ: ಮಾದಿಗ, ಸಾ: ಘಾಟ ಬೋರಾಳ ರವರಿಗೆ ಕೂಡಿಸಿಕೊಂಡು ಅತೀವೇಗ ಹಾಗು ನಿಷ್ಕಾಳಜಿಯಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಕಾರಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಕಾರಿನ ಬಲ ಬದಿಯ ಭಾಗ ಡ್ಯಾಮೇಜ ಆಗಿದ್ದು ಅಲ್ಲದೆ ಬಲಭಾಗಕ್ಕೆ ಎದುರಿನ ಗ್ಲಾಸ ಒಡೆದಿರುತ್ತದೆ ಹಾಗೂ ಆರೋಪಿಯ ಬಲಗಣ್ಣಿನ ಹುಬ್ಬಿಗೆ ರಕ್ತಗಾಯ, ಬಲಗಲ್ಲಕ್ಕೆ ತರಚಿದ ರಕ್ತಗಾಯ, ಬಾಯಿಯಲ್ಲಿನ ಎರಡು ಹಲ್ಲುಗಳು ಬಿದಿದ್ದು ಅಲ್ಲದೇ ಬಲಮೊಳಕಾಲಿಗೆ ಗುಪ್ತಗಾಯವಾಗಿದ್ದು ಇರುತ್ತದೆ, ಸದರಿ ಮೊಟಾರ ಸೈಕಲ್ ಹಿಂದೆ ಕುಳಿತ ವ್ಯಕ್ತಿಗೆ ಬಲಮೊಳಕಾಲ ಕೆಳಗೆ ಸ್ವಲ್ಪ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಅವರಿಗೆ 108 ಅಂಬುಲೇನ್ಸ ನಲ್ಲಿ ಕಮಲನಗರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.