Police Bhavan Kalaburagi

Police Bhavan Kalaburagi

Thursday, March 9, 2017

BIDAR DISTRICT DAILY CRIME UPDATE 09-03-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-03-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 26/2017, ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿಕಾಯ್ದೆ :-
ದಿನಾಂಕ 08-03-2017 ರಂದು ಫಿರ್ಯಾದಿ ಉಮೇಶ ತಂದೆ ಶಿವಪುತ್ರ ತಂದೆ ಚಪ್ಪಳಗೆ ವಯ: 42 ವರ್ಷ,  ಜಾತಿ: ಲಿಂಗಾಯತ, ಸಾ: ಹಳ್ಳಿ, ತಾ: ಬಸವಕಲ್ಯಾಣ ರವರು ಕಿರಾಣಿ ತರಲು ಹೋಗುವಾಗ ತಮ್ಮೂರಲ್ಲಿ ರಾ.ಹೆ ನಂ. 09 ರ ಮೇಲೆ ಮುಂಬೈಯಿಂದ ಹೈದ್ರಾಬಾದ ಕಡೆಗೆ ಹೋಗುವ ಯಾವುದೊ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿರುವ ಒಂದು ಹುಚ್ಚು ಹೆಣ್ಣು ಮಗಳಿಗೆ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯಿಂದ ಸದರಿ ಹುಚ್ಚು ಹೆಣ್ಣು ಮಗಳ ತಲೆಗೆ ಭಾರಿ ಗಾಯ ಹಾಗೂ ಎಡಗಾಲಿಗೆ ಭಾರಿ ರಕ್ತಗಾಯವಾಗಿ ಕಾಲು ಚಿದಿಯಾಗಿ ಘಟನಾ ಸ್ಥಳದಲ್ಲೆಯೇ ಮೃತಪಟ್ಟಿರುತ್ತಾಳೆ, ಸದರಿ ಹೆಣ್ಣು ಮಗಳು ಅಪರಿಚಿತಳಿದ್ದು ಅಂದಾಜು 45 ವರ್ಷ ವಯಸ್ಸು, ದುಂಡು ಮುಖ, ಗೋಧಿ ಮೈಬಣ್ಣ, ಎತ್ತರ 5 ಫೀಟ, ಅವಳ ಮೈಮೇಲೆ ಒಂದು ಕೆಂಪು ಬಣ್ಣದ ಹೂವುಳ್ಳ ಕುಪ್ಪಸ, ಸೀರೆ, ಗುಲಾಬಿ ಲಂಗ ಧರಿಸಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 41/2017, ಕಲಂ 448, 302 ಜೊತೆ 34 ಐಪಿಸಿ :-  
ಫಿರ್ಯಾದಿ ನಿಲಮ್ಮಾ ಗಂಡ ಮಾರುತಿ ಶಿಂದೆ ವಯ: 40 ವರ್ಷ, ಜಾತಿ: ಎಸ್.ಸಿ. ಮಾದಿಗ, ಸಾ: ಹಳ್ಳಿ, ತಾ: ಬಸವಕಲ್ಯಾಣ ರವರ ಮತ್ತು ಫಿರ್ಯಾದಿಯ ದೊಡ್ಡಮಾವನ ಮಗನಾದ ದತ್ತು ತಂದೆ ಲಕ್ಕಪ್ಪಾ ಶಿಂದೆ ಇಬ್ಬರ ನಡುವೆ 5-6 ವರ್ಷಗಳಿಂದ ಹೊಲ ಮತ್ತು ಮನೆಯ ಹಂಚಿಕೆಯ ವಿಷಯದಲ್ಲಿ ಹಳೆಯ ವೈರತ್ವ ಇರುತ್ತದೆ, ಆಗಾಗ ಸದರಿ ದೊಡ್ಡಮಾವನ ಮಗ ದತ್ತು ತಂದೆ ಲಕ್ಕಪ್ಪಾ ಶಿಂದೆ ಮತ್ತು ಅವನ ಮಕ್ಕಳಾದ ಶಿವಾನಂದ ತಂದೆ ದತ್ತು ಶಿಂದೆ, ದಯಾನಂದ ತಂದೆ ದತ್ತು ಶಿಂದೆ ಹಾಗೂ ಸೋಮನಾಥ ತಂದೆ ದತ್ತು ಶಿಂದೆ ಇವರು ನಾಲ್ಕು ಜನ ಕೂಡಿ ಪಿರ್ಯಾದಿಯ ಗಂಡನಿಗೆ ನೀನು ನಮ್ಮ ಕೈಯಲ್ಲಿ ಸಿಕ್ಕರೆ ನಿನಗೆ ಹೋಡೆದು ಖಲಾಸ್ ಮಾಡುತ್ತೆವೆ ಎಂದು ಹೆದರಿಸಿಸುತ್ತಾರೆ, ಹೀಗಿರುವಾಗ ದಿನಾಂಕ 06-03-2017 ರಂದು ಆರೋಪಿತರಾದ ಫಿರ್ಯಾದಿಯ ಹಿರಿಯ ಮಾವನ ಮಗನಾದ ದತ್ತು ತಂದೆ ಲಕ್ಕಪ್ಪ ಶಿಂದೆ ಮತ್ತು ಅವನ ಮಕ್ಕಳಾದ ಶಿವಾನಂದ ದತ್ತು ಶಿಂದೆ, ದಯಾನಂದ ತಂದೆ ದತ್ತು ಶಿಂದೆ ಹಾಗೂ ಸೋಮನಾಥ ತಂದೆ ದತ್ತು ಶಿಂದೆ ಇವರು ನಾಲ್ಕು ಜನ ಫಿರ್ಯಾದಿಯ ಮನೆಗೆ ಬಂದು ಫಿರ್ಯಾದಿಯ ಗಂಡನಾದ ಮಾರುತಿ ತಂದೆ ನರಸಪ್ಪಾ ಶಿಂದೆ ವಯ 45 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹಳ್ಳಿ, ತಾ: ಬಸವಕಲ್ಯಾಣ ಇವರ ಜೊತೆಯಲ್ಲಿ ವಿನಾಃ ಕಾರಣ ಜಗಳ ತೆಗೆದು ಗಂಡನ ಗುಪ್ತಾಂಗದ ಮೇಲೆ ಮತ್ತು ಹೊಟ್ಟೆಯಲ್ಲಿ ಒದ್ದು ಭಾರಿ ಗುಪ್ತಗಾಯ ಪಡಿಸಿದ್ದರಿಂದ ಗಂಡ ಮಾರುತಿ ಶಿಂದೆ ಇವರಿಗೆ ಚಿಕಿತ್ಸೆ ಕುರಿತು ಮಂಠಾಳ ಹಾಗೂ ಹೆಚ್ಚಿನ ಚಿಕಿತ್ಸೆಗೆ ಉಮರ್ಗಾಕ್ಕೆ ತೆಗೆದುಕೊಂಡು ಹೋದಾಗ ಫಿರ್ಯಾದಿಯವರ ಗಂಡ ದಿನಾಂಕ 08-03-2017 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದು ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 24/2017, PÀ®A 32, 34 PÉ.E PÁAiÉÄÝ :-
¢£ÁAPÀ 08-03-2017 gÀAzÀÄ n.FgÀuÁÚ ¦.J¸ï.L PÀªÀÄ®£ÀUÀgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆgÀAr UÁæªÀÄzÀ ªÀĺÁzÉêÀ zɪÁ®AiÀÄzÀ ºÀwÛgÀ DgÉÆæ gÀvÁßPÀgÀ vÀAzÉ ²æÃzsÀgÀ ªÉÆÃgÉ ªÀAiÀÄ: 33 ªÀµÀð, eÁw:J¸ï.¹ ºÉÆ°AiÀÄ, ¸Á: ºÉÆgÀAr EvÀ£ÀÄ C£À¢üÃPÀÈvÀªÁV ªÀÄzÀå ªÀiÁgÁmÁ ªÀiÁqÀÄwÛzÁÝUÀ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ DvÀ¤AzÀ Njf£À¯ï ZÁé¬Ä¸ï JPïëmÁæ ªÀiÁ¯ïÖ 90 JªÀiï.J¯ï 55 ¥ÉÃ¥ÀgÀ ¥ËZï C.Q 1459/- gÀÆ zÀµÀÄÖ d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 28/2017, ಕಲಂ 366(ಎ), 376 ಐಪಿಸಿ ಜೊತೆ 3, 4 ಪೊಸ್ಕೋ ಕಾಯ್ದೆ :-
ದಿನಾಂಕ 03-03-2017 ರಂದು ಫಿರ್ಯಾದಿಯ ಮಗಳು ಎಂದಿನಂತೆ ಶಾಲೆಗೆ ಹೋಗಿ ಬರುತ್ತೇನೆಂದು ಬ್ಯಾಗ ತೆಗೆದುಕೊಂಡು ಮನೆಯಿಂದ ಶಾಲೆಗೆ ಹೋಗಿ ಮನೆಗೆ ಬಂದಿರುವುದಿಲ್ಲ, ಆಗ ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ಗ್ರಾಮದ ಎಲ್ಲಾ ಕಡೆ ಹೋಗಿ ಹುಡುಕಾಡಿದರೂ ಸಹ ಮಗಳ ಪತ್ತೆಯಾಗಿರುವುದಿಲ್ಲ, ನಂತರ ತಮ್ಮ ಎಲ್ಲಾ ಸಂಬಂಧಿಕರಿಗೆ ವಿಚಾರಿಸಿ ತಿಳಿದುಕೊಳ್ಳಲು ಮಗಳ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ನಂತರ ಫಿರ್ಯಾದಿಯ ಮಗಳು ಹೇಳಿಕೆ ನೀಡಿದ್ದೆನೆಂದರೆ ಆರೋಪಿ ಓಂಕಾರ ತಂದೆ ರೇವಣಪ್ಪಾ ರಾಣಪ್ಪನೋರ ವಯ: 25 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಇಟತಾ ಗ್ರಾಮ ಇತನ ಜೊತೆ ಸುಮಾರು 9 ತಿಂಗಳಿಂದ ಪ್ರೀತಿ ಪ್ರೇಮ ಮಾಡುತ್ತಿದ್ದು ಹೀಗೆ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಾ ಈಗ ಸುಮಾರು 20 ದಿವಸದ ಹಿಂದೆ ಊರಿನ ತಮ್ಮ ಮನೆ ಹತ್ತಿರ ರಾತ್ರಿ ಇಬ್ಬರ ಮಧ್ಯ ದೈಹಿಕ ಸಂಪರ್ಕ ಆಗಿರುತ್ತದೆ, ನಂತರ ದಿನಾಂಕ 03-03-2017 ರಂದು ಫಿರ್ಯಾದಿಯ ಮಗಳು ಮತ್ತು ಓಂಕಾರ ಇಬ್ಬರು ಪರಸ್ವರ ಇಚ್ಛೆಯಿಂದ ಹೈದ್ರಾಬಾದಕ್ಕೆ ಹೊಗಿ ಅಲ್ಲಿ ದಿನಾಂಕ  06-03-2017 ರವರೆಗೆ ಉಳಿದುಕೊಂಡಾಗ ಇಬ್ಬರ ಮಧ್ಯ ಹಲವಾಗು ಬಾರಿ ದೈಹಿಕ ಸಂಪರ್ಕ ಆಗಿದ್ದು ಇರುತ್ತದೆ ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:08/03/17 ರಂದು ಸಾಯಂಕಾಲ ಠಾಣಾ ವ್ಯಾಪ್ತಿಯಲ್ಲಿ ಬರುವ ಮದಿನಾ ಕಾಲೋನಿ ಮಕ್ಕಾ ಮಜೀದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಜನರು ರಸ್ತೆಯ ಪಕ್ಕದಲ್ಲಿ ನಿಂತು ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹೀತಿ ಮೇರೆಗೆ ಶ್ರೀ ಸಂಜೀವಕುಮಾರ ಪಿ.ಎಸ್‌‌.  ರಾಘವೇಂದ್ರ ನಗರ ಪೊಲೀಸ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮದಿನಾ ಕಾಲೋನಿ ಮಕ್ಕಾ ಮಜೀದ ಸ್ವಲ ಮುಂದೆ ಇದ್ದಂತೆ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ಹೋಗಿ ಮಕ್ಕಾ ಮಜೀದ ಮರೆಯಲ್ಲಿ ನಿಂತು ನೋಡಲು ಅಲ್ಲಿ ಇಬ್ಬರೂ  ಜನರು  ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ ಒಂದು ರೂ ಗೆ 90 ರೂ ಕೊಡುತ್ತೇನೆ ಅಂತಾ ಕೂಗುತ್ತಾ ರಸ್ತೆಗೆ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದು ಒಂದು ಚೀಟಿ ಸಾರ್ವಜನಿಕರಿಗೆ ಕೋಡುತ್ತಾ ಇನ್ನೊಂದು ಚೀಟಿ ತನ್ನ ಹತ್ತಿರ ಇಟ್ಟುಕೊಳ್ಳುತ್ತಾ ಇದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಇಬ್ಬರನ್ನೂ ಹಿಡುದು ಅವರ ಹೆಸರು ವಿಳಾಸ ವಿಚಾರಿಸಲು ಅವರು ತಮ್ಮ ತಮ್ಮ ಹೆಸರು 1) ಅಮ್ಜದ ತಂದೆ ಸರ್ದಾರಖಾನ ಸಾ:ಮಹ್ಮದಿ ಮಜೀದ ಹತ್ತಿರ ಜಿಲಾನಾಬಾದ ಎಂ.ಎಸ್‌‌.ಕೆ ಮೀಲ್ಕಲಬುರಗಿ 2) ಸರ್ದಾರಬಾಷಾ ತಂದೆ ಹಸನಮೀಯ್ಯಾ ಸಾ:ಮೀಜಬಾ ನಗರ ಕಲಬುರಗಿ ಅಂತಾ ತಿಳಿಸಿದನು ಹೀಗೆ ಒಟ್ಟು ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 870/-ರೂ ಮತ್ತು 7 ಮಟಕಾ ನಂಬರ ಬರೆದ ಚೀಟಿಗಳೂ, 02 ಬಾಲ್ಪೇನಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಭೀರಪ್ಪ ತಂದೆ ಸಿದ್ದಪ್ಪ ಪೂಜಾರಿ ಸಾ: ಘತ್ತರಗಾ ರವರಿಗೆ ಘತ್ತರಗಾದಿಂದ ಅಫಜಲಪೂರಕ್ಕೆ ಹೋಗುವ ರೋಡಿನ ಕಡೆಗೆ ನಮ್ಮ ಹೊಲ ಇರುತ್ತದೆ. ನಮ್ಮ ಹೊಲದಲ್ಲಿ ಕಬ್ಬಿನ ಬೆಳೆ ಇರುತ್ತದೆ. ದಿನಾಂಕ 06-03-2017 ರಂದು ಸಾಯಂಕಾಲ ನನ್ನ ತಮ್ಮನಾದ ಮಲ್ಲಪ್ಪ ತಂದೆ ಸಿದ್ದಪ್ಪ ಪೂಜಾರಿ ಈತನು ಕಬ್ಬಿನ ಬೆಳೆಗೆ ನೀರು ಬಿಡಲು ಮೋಟರ ಚಾಲು ಮಾಡಿ ಬರುತ್ತೇನೆ ಅಂತ ಹೇಳಿ ನಮ್ಮ ಮೋಟರ ಸೈಕಲ ನಂ ಕೆಎ-32 ಆರ್-6092 ನೇದ್ದನ್ನು ತಗೆದುಕೊಂಡು ಅಫಜಲಪೂರ ರೋಡಿಗೆ ಇರುವ ನಮ್ಮ ಹೊಲಕ್ಕೆ ಹೋಗಿರುತ್ತಾನೆ. ರಾತ್ರಿ 8-45 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಮನೆಯವರೆಲ್ಲರು ಮನೆಯಲ್ಲಿದ್ದಾಗ, ನಮ್ಮ ಗ್ರಾಮದ ಆರೀಫ್ ತಂದೆ ಚಾಂದಸಾಬ ಕೂಡಿ ಎಂಬಾತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಿಮ್ಮ ತಮ್ಮನಾದ ಮಲ್ಲಪ್ಪನಿಗೆ ನಮ್ಮೂರಿನ ಅಂಬೇಡ್ಕರ ಸರ್ಕಲ ಹತ್ತಿರ ಟ್ಯಾಕ್ಟರ  ನಂ ಕೆಎ-32 ಟಿಎ-4155 (ಇಂಜಿನ್ ಮಾತ್ರ) ನೇದ್ದರ ಚಾಲಕನು ತನ್ನ ಟ್ಯಾಕ್ಟರನ್ನು ಅಫಜಲಪೂರದ ಕಡೆಯಿಂದ ಘತ್ತರಗಾದ ಕೆಡಗೆ ನಡೆಸಿಕೊಂಡು ಬರುತ್ತಿದ್ದು ಅವನು ತನ್ನ ಟ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಿಮ್ಮ ತಮ್ಮ ಮಲ್ಲಪ್ಪನ ಹಿಂದಿನಿಂದ ಬಂದು ಮಲ್ಲಪ್ಪನಿಗೆ ಜೋರಾಗಿ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿ ತನ್ನ ಟ್ಯಾಕ್ಟರ ಸಮೇತ ಕೊಳ್ಳೂರ ಗ್ರಾಮದ ಕೆಡಗೆ ಓಡಿ ಹೊಗಿರುತ್ತಾನೆ. ನಂತರ ನಾನು ಮತ್ತು ಅಂಬೇಡ್ಕರ ಸರ್ಕಲದ ಹತ್ತಿರ ಇದ್ದ  ನಮ್ಮೂರಿನ ರಾವುತಪ್ಪ ಸಿಂಗೆ, ಕಲ್ಲಪ್ಪ ಹೂಗಾರ, ಬಾಬುಗೌಡ ಪಾಟೀಲ ರವರೆಲ್ಲರೂ ಮಲ್ಲಪ್ಪನ ಹತ್ತಿರ ಹೋಗಿ ನೋಡಲು ಆತನ ತಲೆಗೆ ಭಾರಿ ರಕ್ತಗಾಯವಾಗಿ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸ್ರಾವವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತ ತಿಳಿಸಿದನು. ವಿಷಯ ಗೊತ್ತಾದ ಕೂಡಲೆ ನಾನು ಮತ್ತು  ನನ್ನ ತಮ್ಮ ಮಲ್ಲಪ್ಪನ ಹೆಂಡತಿ ಶರಣಮ್ಮ, ತಾಯಿ ಮಾಯಮ್ಮ ಮತ್ತಿರರು ಅಂಬೇಡ್ಕರ ಸರ್ಕಲ ಹತ್ತಿರ ಬಂದು ನನ್ನ ತಮ್ಮನ ಮಲ್ಲಪ್ಪನ ಶವ ನೋಡಿರುತ್ತೇವೆ. ಅವನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸ್ರಾವವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದನು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿದ್ದರಿಂದ ಸಾವು ಪ್ರಕರಣ :
ಆಳಂದ ಠಾಣೆ : ಶ್ರೀ ಗುಡುಸಾಬ ತಂದೆ ಸೈಪನಸಾಬ್‌ ಪಟೇಲ್‌ ಸಾ: ತೆಲೆಕುಣಿ ತಾ:ಆಳಂದ ಇವರ ಮಗ ಖಲೀಲ ಮತ್ತು ಸೋಸೆ ಶಾಹಿನ್‌ಬೀ ಇಬ್ಬರು ಕೂಡಿ ದಿನಾಂಕ:07/03/2017 ರಂದು ರಾತ್ರಿ ನನ್ನ ಸೂಸೆಯ ತವರು ಮನೆಯಾದ ಬೋರಗಾಂವ ಗ್ರಾಮಕ್ಕೆ ಹೋಗಿ ಬರಬೇಕೆಂದು ಮನೆಯಿಂದ ಸತೀಶ ಹತ್ತೆ ರವರ ಮೋಟರ ಸೈಕಲ ನಂ ಎಮ್‌ಎಚ್‌-05 ಕ್ಯೂ -9173 ನೇದ್ದರಲ್ಲಿ ಹೋದರು. ನಂತರ ರಾತ್ರಿ 10;00 ಗಂಟೆಗೆ ಯ್ಯಾರೂ ನನ್ನ ಮಗನ ಮೊಬೈಲದಿಂದ ಪೂನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಸಾವಳೇಶ್ವರ ಕ್ರಾಸ ದಾಟಿ ಸಿದ್ರಾಮಪ್ಪಾ ಝಳಕಿಕರ್‌ ರವರ ಹೊಲದ ಹತ್ತಿರ ರೋಡಿನ ಮೇಲೆ ರಾತ್ರಿ 9:30 ಗಂಟೆ ಸುಮಾರಿಗೆ ನಿಮ್ಮವರಿಗೆ ರಸ್ತೆ ಅಫಘಾತವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಕೂಡಲೇ ಬರಲು  ತಿಳಿಸಿದಾಗ ನಾನು ಮತ್ತು ನಿಜಲಿಂಗಪ್ಪಾ ಮೋದೆ ಹಾಗು ನಮ್ಮ ಸಂಬಂದಿಕರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗ ಖಲೀಲ್‌ ಮತ್ತು ಸೋಸೆ ಶಾಹಿನ್‌ಬಿ ಇದ್ದು ಅವರಿಗೆ ತಲೆಗೆ ಮತ್ತು ಅಲ್ಲಲ್ಲಿ ಭಾರಿ ಗಾಯವಾಗಿ ಮೃತಪಟ್ಟಿದ್ದರು. ನಂತರ ಅಲ್ಲಿದ್ದವರಿಗೆ ವಿಚಾರಿಸಲು ಯಾವುದೋ ವಾಹನದ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ  ಇವರ ಮೋಟರ ಸೈಕಲಿಗೆ ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ ಅಂತಾ ಗೊತ್ತಾಯಿತು. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ. ಶ್ರೀಮಂತರಾವ ತಂದೆ ಗೋವಿಂದರಾವ ಪಾಟೀಲ್. ಸಾ : ಸೊಂತಗ್ರಾಮ ತಾ;ಜಿ;ಕಲಬುರಗಿ ಸದ್ಯ ಸಿದ್ರಾಮೇಶ್ವರ ಕಾಲೂನಿ ಆಳಂದ ಚಕ್ಕ ಪೋಸ್ಟ ಕಲಬುರಗಿ ಇವರ ಮಗ ರಾಜೇಶ ಪಾಟೀಲ್ ಇವನು ದಿನಾಂಕ.7-3-2017 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನನ್ನ ಮಗ ರಾಜೇಶ ಇತನು ಹೋಟೆಲಕ್ಕೆ ಕೆಲಸಕ್ಕೆ ಹೋದನು  ಮದ್ಯ  ರಾತ್ರಿ ದಿನಾಂಕ. 8-3-2017 ರಂದು  3-50 ಎ.ಎಂ. ಸುಮಾರಿಗೆ ನಮ್ಮ ಗ್ರಾಮದ ಮನೋಜ ರೊಂಟ ಇತನು ನನಗೆ ಫೋನ ಮೂಲಕ ತಿಳಿಸಿದ್ದೇನೆಂದರೆ ನನ್ನ ಮಗ ರಾಜೇಶ ಪಾಟೀಲ್ ಈತನಿಗೆ  ಆಳಂದ ಚಕ್ಕ ಪೋಸ್ಟ ಹತ್ತಿರ ರಿಂಗರೋಡ ಮೇಲೆ ಅಪಘಾತವಾಗಿ ಪೆಟ್ಟಾಗಿ ಮೃತಪಟ್ಟಿರುತ್ತಾನೆ ಬೇಗ ಬರುವಂತೆ ತಿಳಿಸಿದ್ದು ಗಾಬರಿಗೊಂಡು ನಾನು ಮತ್ತು ನನ್ನ ಮಗ ವಿನೋದ ಪಾಟಳ್ ಇಬ್ಬರು ಕೂಡಿಕೊಂಡು ಕಲಬುರಗಿ ಗೆ ಬಂದು ಆಸ್ಪತ್ರೆಯಲ್ಲಿ ನನ್ನ ಮಗನಿಗೆ ನೋಡಲು ಮೃತಪಟ್ಟಿದ್ದು ಆತನ ಮುಖಕ್ಕೆ ಭಾರಿ ಪೆಟ್ಟಾಗಿ ಮೂಗಿಗೆ ಭಾರಿ ಪೆಟ್ಟಾಗಿ ಕಟ್ಟಾ ಆದಂತೆ ಆಗಿ ರಕ್ತಸ್ರಾವವಾಗಿರುತ್ತದೆ. ನಂತರ ವಿಚಾರಣೆ ಮಾಡಲಾಗಿ. ಗೊತ್ತಾಗಿದ್ದೇನೆಂದರೆ ನನ್ನ ಮಗಾ ರಾಜೇಶ ಪಾಟೀಲ್ ಇತನು ಹೋಟೆಲದಲ್ಲಿ ತನ್ನ ಕೆಲಸ ಮುಗಿಸಿಕೊಂಡು ತನ್ನ ಹೊಂಡಾ ಶೈನ ಮೋಟಾರ ಸೈಕಲ್ ನಂ.ಕೆ.ಎ.32 ಯು. 3924  ಇದರ ಮೇಲೆ ಮನೆಗೆ ಬರುತ್ತಿರುವಾಗ ಆಳಂದ ಚಕ್ಕ ಪೋಸ್ಟ ಹತ್ತಿರ ರಿಂಗರೋಡನ ಪೂರ್ವ ದಂಡಗೆ ಬರುತ್ತಿರುವಾಗ  ಯಾವುದೋ ಒಂದು ವಾಹನ ಹುಮನಾಬಾದ ರಿಂಗರೋಡ ಕಡೆಯಿಂದ ಒಂದು ವಾಹನವು  ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಅಪಘಾತ ಪಡಿಸಿದ್ದರಿಂದ  ರಾಜೇಶನಿಗೆ ಭಾರಿಗಾಯವಾಗಿ ಸ್ಥಳದಲ್ಲೆ  ಮೃತ ಪಟ್ಟಿದ್ದು ಅಪಘಾತ ಪಡಿಸಿದ ವಾಹನ ಚಾಲಕನು ತನ್ನ ವಾಹನವನ್ನು  ನಿಲ್ಲಿಸಿದೆ ಹಾಗೆ ಓಡಿಸಿಕೊಂಡು ಹೋದ ಬಗ್ಗೆ ಗೊತ್ತಾರಿರುತ್ತದೆ. ಈ ಘಟನೆಯು ದಿನಾಂಕ. 7-3-2017 ರಂದು ರಾತ್ರಿ  11-30 ಪಿ.ಎಂ.ದಿಂದ ದಿನಾಂಕ. 8-3-2017 ರಂದು  2-30 ಎ.ಎಂ.ದ ಮದ್ಯದ ಅವಧಿಯಲ್ಲಿ ಈ ಘಟನೆ ಸಂಭವಿಸಿರುವದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸೇಡಂ ಠಾಣೆ : ಶ್ರೀ ಗುಂಡಪ್ಪ ತಂದೆ ನರಸಪ್ಪ ಕುಂಬಾರ ಸಾ|| ಬಂಕಲಗಾ, ತಾ|| ಚಿತ್ತಾಪೂರ ರವರ ಅಣ್ಣ-ತಮ್ಮಕಿಯ ಮಗನಾದ ಅಯ್ಯಪ್ಪ ತಂದೆ ಚಂದ್ರಪ್ಪ ಕುಂಬಾರ ಈತನು ತನ್ನ ಮೊಟಾರ ಸೈಕಲ್ ತೆಗೆದುಕೊಂಡು ತಾನು ತನ್ನ ಹೆಂಡತಿಗೆ ಕರೆದು ಬರುತ್ತೇನೆ ಅಂತಾ ಹೇಳಿ ತಾನು ತೆಲಂಗಾಣ ರಾಜ್ಯದ ಉಡಮಲಗಿದ್ದ ಗ್ರಾಮಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದನು. ನಂತರ ಸಾಯಂಕಾಲ 07:45 ಗಂಟೆಗೆ ನಾಚವಾರದಿಂದ ಯಾರೋ ಫೋನ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ನನ್ನ ಅಣ್ಣನ ಮಗನಾದ ಅಯ್ಯಪ್ಪ ಈತನು ಸಾಯಂಕಾಲ ನಾಚವಾರ ಗ್ರಾಮ ದಾಟಿ ಸ್ವಲ್ಪ ಮುಂದೆ ಹಂದರಕಿ-ಮುಧೋಳ ರೋಡಿನಲ್ಲಿ ತನ್ನ ಮೊಟಾರ ಸೈಕಲ್ ನಂ.KA05HH5368 ನೆದ್ದನ್ನು ಅತಿ ವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೋಗಿ ಮುಂದೆ ಬರುತ್ತಿರುವ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದು ಅವನ ಹೊಟ್ಟೆ ಹರಿದು ಕರುಳು ಹೊರಗೆ ಬಂದು ಭಾರಿ ಗಾಯವಾಗಿ ಮೃತಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನಮ್ಮೂರ ರಾಮಲಿಂಗ ಗಣಾಪೂರ, ವೆಂಕಟರಮಣ ಬೇವಿನಗಿಡ ಮತ್ತಿತರು ಕೂಡಿ ನಾಚವಾರ ಗ್ರಾಮದ ಹತ್ತಿರ ಬಂದು ನೋಡಲಾಗಿ ಅಯ್ಯಪ್ಪ ಈತನು ಸತ್ತಿದ್ದನು. ಅವನಿಗೆ ನೋಡಲಾಗಿ ಅವನ ಹೊಟ್ಟೆ ಹರಿದು ಕರುಳು ಹೊರ ಬಂದಿದ್ದು, ಬಲಗಡೆ ಹೊಟ್ಟೆಯ ಹರಿದು ಭಾರಿ ರಕ್ತಗಾಯವಾಗಿದ್ದನ್ನು ನೋಡಿದೆವು. ಸ್ಥಳದಲ್ಲಿ ಎತ್ತಿನ ಬಂಡಿ ಸಹ ಬಿದ್ದಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿದ್ದರಿಂದ ಮೃತಪಟ್ಟ ಪ್ರಕರಣ :
ಮಹಿಳಾ ಠಾಣೆ : ಶ್ರೀ ಶಿವಲಿಂಗಪ್ಪಾ ತಂದೆ ಭೀಮರಾಯ ಬೇರಜಿ ಸಾ”ಸಾವಳಗಿ (ಬಿ) ಹಾ;ವ: ಮಹಾಲಕ್ಷ್ಮೀ ಲೇ ಔಟ ಕಲಬುರಗಿ ಇವರ ಮಗಳಾದ ಪ್ರೀತಿ ಎಂಬುವಳಿಗೆ 2001 ರಲ್ಲಿ ಕಡಣಿ ಗ್ರಾಮದ ಶಿವರುದ್ದ ತಂದೆ ತಿಪ್ಪಣ್ಣ ಕರಿಕಲ್ ಎಂಬುವನ ಜೊತೆ ಲಗ್ನ ಮಾಡಿಕೊಟ್ಟಿದ್ದು ಆಕೆಗೆ ಎರಡು ಗಂಡು ಮಕ್ಕಳು ಒಂದು ಹೆಣ್ಣು ಮಗಳು ಇರುತ್ತಾಳೆ ಅವಳು ತನ್ನ ಕುಟುಂಬದೊಂದಿಗೆ ಕಲಬುರಗಿ ನಗರದ ಕೈಲಾಸ ನಗರದ ಸ್ವಂತ ಮನೆಯಲ್ಲಿ ವಾಸವಾಗಿರುತ್ತಾರೆ. ಈಗ ಸುಮಾರು 1 ವರ್ಷದಿಂದ ನನ್ನ ಮಗಳ ಭಾವನಾದ ಬಸವರಾಜನ ಹೆಂಡತಿ ಶೆಶಿಕಲಾ ಇವಳೊಂದಿಗೆ ಮತ್ತು ಅವರ ಮನೆ ಬಾಡಿಗೆ ಇದ್ದ ಮಲ್ಲಮ್ಮ ಇವಳೊಂದಿಗೆ ಅನೈತಿಕ ಸಂಬಂದ ಬೆಳಸಿದ್ದು ಈ ವಿಷಯ ನನ್ನ ಮಗಳು ಪ್ರೀತಿ ನನಗೆ ಹಾಗೂ ನನ್ನ ಹೆಂಡತಿ ಕಸ್ತೂರಿಬಾಯಿ ಇವಳಿಗೆ ತಿಳಿಸಿದಾಗ ಹಲವಾರು ಬಾರಿ ಬೇರೆ ಹೆಂಗಸಿನ ಜೊತೆ ಅನೈತಿಕ ಸಂಬಂದ ಬಿಟ್ಟು ಹೆಂಡತಿ ಮಕ್ಕಳೊಂದಿಗೆ ಸರಿಯಾಗಿ ಇರಲು ತಿಳಿಸಿದರು ಕೂಡಾ ಅದೇ ಪ್ರವ್ರತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಕ್ಕೆ ನನ್ನ ಮಗಳು ನನಗೆ ನನ್ನ ಗಂಡ ಶಿವರುದ್ದ ಇವನು ನೆಗೆಣಿ ಶೆಶಿಕಲಾ ಬಾಡಿಗೆ ಇರುವ ಮಲ್ಲಮ್ಮ ಇವಳ ಜೊತೆಗೆ ಅನೈತಿಕ ಸಂಬಂದ ಇದ್ದುದ್ದಕ್ಕೆ ಪ್ರತಿನಿತ್ಯ ರಾತ್ರಿ ಮನೆಗೆ ಬಂದು ಹೆಂಗಸ್ಸಿನ ಜೊತೆ ನಾನು ಸಂಬಂದ ಇಟ್ಟುಕೊಂಡಿದ್ದೆನೆ. ನೀನು ಏನಾದರು ವಿಷ ತೆಗೆದುಕೊಂಡು ಸತ್ತು ಹೋಗು ಅಂತಾ ಕಿರುಕುಳ ನೀಡುತ್ತಿದ್ದನು ಅಲ್ಲದೇ ಅನೈತಿಕ ಸಂಬಂದ ಇಟ್ಟುಕೊಂಡ ಶೆಶಿಕಲಾ ಮತ್ತು ಮಲ್ಲಮ್ಮ ಇವರು ಕೂಡಾ ತನ್ನ ಜೊತೆಗೆ ಜಗಳ ಮಾಡುತ್ತಿದ್ದಾರೆ ಅಂತಾ ತಿಳಿಸಿದ್ದು ಮುಂದೆ ಸರಿ ಹೋಗುತ್ತದೆ ಅಂತಾ ಹಲವಾರು ಭಾರಿ ತಿಳುವಳಿಕೆ ಹೆಳಿದ್ದು  ದಿನಾಂಕ 07.03.2017 ರಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ನಾನು ಕಲಬುರಗಿ ನಗರದ ಕೋರ್ಟ ರೋಡಿನಲ್ಲಿ ಇರುವ ಬೇಕರಿಯಲ್ಲಿ ವ್ಯಾಪಾರ ಮಾಡುತ್ತಿರುವಾಗ ನನ್ನ ಮೊಮ್ಮಗಳಾದ ಸ್ನೇಹ ಇವಳು ಮೊಬೈಲ ಮುಖಾಂತರ ತಿಳಿಸಿದ್ದೆನೆಂದರೆ ಮಮ್ಮಿ ಗೋಲಿ ತೆಗೆದುಕೊಂಡಿದ್ದಾಳೆ. ಅರ್ಜಟ ಮನೆಗೆ ಬಾ ಅಂತಾ ತಿಳಿಸಿದ್ದರಿಂದ ನಾನು ಕೈಲಾಸ ನಗರದ ಮನೆಗೆ ಹೋಗಿ ನೋಡಲು ನನ್ನ ಮಗಳು ಒದ್ದಾಡುತ್ತಿದ್ದಳು. ಅಷ್ಟರಲ್ಲಿ ಅವಳ ಗಂಡ ಶಿವರುದ್ರ ಇವನು ಬಂದಿದ್ದು ಆಸ್ಪತ್ರೆಗೆ ತೋರಿಸಲು ನಾನು ಆಟೋದಲ್ಲಿ ತನ್ನ ಮಿತ್ರ ಮಲಕಾರಿಯೊಂದಿಗೆ ಬರುತ್ತೇವೆ ನಿನ್ನ ಗಾಡಿ ಮೇಲೆ ನಡಿರಿ ಅಂತಾ ಹೇಳಿದ್ದು ನನ್ನ ಮಗಳು ಆಟೋದಲ್ಲಿ ಹಾಕುವಾಗ ನನ್ನ ಜೊತೆ ಸರಿಯಾಗಿ ಮಾತನಾಡಿದ್ದು ಆಸ್ಪತ್ರೆಗೆ ಬರುವಷ್ಟರಲ್ಲಿ ಮ್ರತಪಟ್ಟ ಬಗ್ಗೆ ಗೊತ್ತಾಗಿದ್ದು ನನ್ನ ಮಗಳ ಕುತ್ತಿಗೆ ಮೇಲೆ ಗಾಯದ ಗುರುತು ಇದ್ದ ಬಗ್ಗೆ ಕಂಡು ಬಂದಿದ್ದು ಇರುತ್ತದೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜೀವದ ಭಯ ಹಾಕಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಕಲ್ಲಮ್ಮ ಗಂಡ ಶರಣಪ್ಪ ನಾಯ್ಕೊಡಿ ಸಾಃ ಖಾದ್ಯಾಪೂರ ತಾಃ ಜೇವರಗಿ ಇವರ ಅಣ್ಣತಮ್ಮಕೀಯ ಸುಬ್ಬಣ್ಣ ತಂದೆ ಕೆರೆಪ್ಪ ನಾಯ್ಕೊಡಿ ಇವರು ನಮ್ಮ ಸಂಗಡ ಹೊಲದ ಬಂದಾರಿಯ ವಿಷಯದಲ್ಲಿ ಮತ್ತು ಮನೆಯ ಮುಂದಿನ ಜಾಗದ ವಿಷಯದಲ್ಲಿ ಸುಮಾರು 3-4 ವರ್ಷದಿಂದ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾನೆ ಅದರಿಂದ ಅವರಿಗೂ ನಮಗೂ ವೈಮನಸ್ಸು ಇರುತ್ತದೆ. ನಾವು ನಮ್ಮ ಮನೆಗೆ ಹಾದುಹೋಗುವ ದಾರಿಯಲ್ಲಿಯೇ ಸುಬ್ಬಣ್ಣನು ತನ್ನ ಹೊಸ ಮನೆ ಕಟ್ಟಲು ತಂದು ಕಲ್ಲುಗಳು ಹಾಕಿ ಗಡಾಯಿ ಮಾಡುತ್ತಿದ್ದನು. ನಮಗೆ ಮನೆಗೆ ಹೋಗಲು ತೊಂದರೆ ಆಗುತ್ತಿದ್ದರಿಂದ ನನ್ನ ಗಂಡ ಶರಣಪ್ಪನು ದಿ. 05.03.2017 ರಂದು ರಾತ್ರಿ ದಾರಿಯಲ್ಲಿನ ಕಲ್ಲು ತೆಗೆಯಿರಿ ನಮಗೆ ಮನೆಗೆ ಹೋಗಲು ತೊಂದರೆ ಆಗುತ್ತಿದೆ ಅಂತಾ ಅಂದಾಗ ಸುಬ್ಬಣ್ಣ ಮತ್ತು ಅವನ ಹೆಂಡತಿ ಇಬ್ಬರೂ ನನ್ನ ಗಂಡನ ಸಂಗಡ ಜಗಳ ಮಾಡಿ ಅವಾಚ್ಯವಾಗಿ ಬೈಯ್ದು ಕಲ್ಲಿನಿಂದ ಹೊಡೆದಿರುತ್ತಾರೆ ಬಿಡಸಲು ಹೋದ ನನಗೂ ಹೊಡೆ ಬಡೆ ಮಾಡಿತ್ತಿದ್ದಾಗ ನಮ್ಮೂರ ಹೀರಗಂಟೆಪ್ಪ ತಂದೆ ಶಿವಪ್ಪ ನಾಯ್ಕೊಡಿ ಮತ್ತು ಸುಬಾಷ ತಂದೆ ಕೆಂಚಪ್ಪ ನಾಯ್ಕೊಡಿ ಇವರು ಬಂದು ಜಗಳ ಬಿಡಿಸಿರುತ್ತಾರೆ. ಅಲ್ಲದೆ ಸುಬ್ಬಣ್ಣ ಅವನ ಹೆಂಡತಿ ನಾವು ನೀಮಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ನಾವು ಅವರಿಗೆ ಅಂಜಿ ಊರು ಬಿಟ್ಟು ನಮ್ಮ ಕೊಡಚಿ ಗ್ರಾಮಕ್ಕೆ ಹೋಗಿ ನಮಗೆ ಪರಿಚಯದವರಾದ ಇಸ್ಮಾಯಿಲ್ ರವರ ಮನೆಯಲ್ಲಿ ಉಳಿದೇವು. ಮರು ದಿವಸ ಮುಂಜಾನೆ ನನ್ನ ಗಂಡನು ನಾನು ಮತ್ತು ಮಗ ಚನ್ನಪ್ಪ ಇಬ್ಬರೂ ಊರಿಗೆ ಹೋಗುತ್ತೆವೆ ಅಂತಾ ಹೇಳಿದಾಗ, ನಾನು ನನ್ನ ಮಕ್ಕಳಿಗೆ ಕರೆದುಕೊಂಡು ಕೊಡಚಿಯಿಂದ ಯಡ್ರಾಮಿಗೆ ಹೋಗುವಾಗ ನನ್ನ ಗಂಡನು ನನಗೆ ಹೇಳಿದ್ದೆನೆಂದರೆ ಸುಬ್ಬಣ್ಣ ಮತ್ತು ಅವನ ಹೆಂಡತಿ ನನಗೆ ಬಿಡುವುದಿಲ್ಲಾ ಅವರು ನನಗೆ ಖಲಾಸ ಮಾಡುತ್ತಾರೆ ನಾನು ಏನಾದರೂ ಮಾಡಿಕೊಂಡು ಸಾಯಿತ್ತೆನೆ ಅಂತಾ ಹೇಳಿದ್ದನು. ಅದಕ್ಕೆ ನಾನು ನನ್ನ ಗಂಡನಿಗೆ ದೈರ್ಯ ಹೇಳಿದ್ದೆನು. ನೀನ್ನೆ ದಿ. 06.03.2017 ರಾತ್ರಿ 9.00 ಗಂಟೆಯ ಸುಮಾರಿಗೆ ನನ್ನ ಗಂಡ ಮತ್ತು ಮಗ ಚನ್ನಪ್ಪ ಇಬ್ಬರೂ  ಖಾದ್ಯಾಪೂರಕ್ಕೆ  ನಮ್ಮ ಮನೆಗೆ ಹೋದಾಗ 1) ಸುಬ್ಬಣ್ಣ ತಂದೆ ಕೆರೆಪ್ಪ ನಾಯ್ಕೊಡಿ, 2) ಬಸ್ಸಮ್ಮ ಗಂಡ ಸುಬ್ಬಣ್ಣಾ ನಾಯ್ಕೊಡಿ ಸಾಃ ಖಾದ್ಯಾಪೂರ, 3) ಹಣಮಂತ ತಂದೆ ಚಂದಪ್ಪ ತಳವಾರ ಸಾಃ ಸೂರಪೂರ ಇವರು ನನ್ನ ಗಂಡನ ಸಂಗಡ ಜಗಳ ಮಾಡಿ ನೀನಗೆ ಮತ್ತು ನೀಮ್ಮ ಮನೆಯವರಿಗೆಲ್ಲಾ ಬಿಡುವುದಿಲ್ಲಾ ಖಲಾಸ ಮಾಡುತ್ತೆವೆ ಎಂದು ಬೇದರಿಕೆ ಕೂಡಾ ಹಾಕಿದ್ದರು ದಿನಾಂಕ 07.03.2017 ರಂದು ಸಾಯಂಕಾಲ ನಾನು ಯಡ್ರಾಮಿಯಲ್ಲಿದ್ದಾಗ ನಮ್ಮ ಮಗ  ಚನ್ನಪ್ಪನು ನನಗೆ ಪೊನ ಮಾಡಿ ತಂದೆ ಶರಣಪ್ಪನು ಮೂದಬಾಳ ಕ್ರಾಸ್ ಹತ್ತಿರ ಕ್ರೀಮಿನಾಶಕ ಎಣ್ಣೆ ಕುಡಿದಿರುತ್ತಾನೆ ಅವನಿಗೆ ಉಪಚಾರಕ್ಕಾಗಿ ಜೇವರಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೆವೆ ಅಂತಾ ಹೇಳಿದ ಕೂಡಲೆ ನಾನು ಮತ್ತು ನನ್ನ ಬಾವ ಸಿದ್ದಣ್ಣ ತಂದೆ ಚನ್ನಪ್ಪ ನಾಯ್ಕೊಡಿ ಇಬ್ಬರೂ ಕೂಡಿ ಜೇವರಗಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಗಂಡನು ಮೃತಪಟ್ಟಿದ್ದು ಅಲ್ಲಿಯೇ ಇದ್ದ ನನ್ನ ಮಗ ಹೇಳಿದ್ದೆನೆಂದರೆ ನಾನು ಸಾಯಂಕಾಲ 5.00 ಗಂಟೆಯ ಸುಮಾರಿಗೆ ಊರಲ್ಲಿ ಇದ್ದಾಗ ನಮ್ಮ ತಂದೆಯವರ ಮೊಬೈಲಿಗೆ ಕರೆ ಮಾಡಿದಾಗ ಯಾರೊ ಒಬ್ಬರೂ ಪೊನ ಎತ್ತಿ ನೀಮ್ಮ ತಂದೆ ಮೂದಬಾಳ ಕ್ರಾಸ್ ಹತ್ತಿರ ರೋಡಿನಲ್ಲಿ ಕ್ರೀಮಿನಾಶಕ  ಔಷದ ಕುಡಿದು ಬಿದ್ದಿರುತ್ತಾನೆ  ಅಂತಾ ಹೇಳಿದಾಗ ಕೂಡಲೆ ನಾನು ಮತ್ತು ನಮ್ಮ ಕಾಕ ನಿಂಗಣ್ಣ ಇಬ್ಬರೂ ಕೂಡಿಕೊಂಡು ಮೂದಬಾಳ ಕ್ರಾಸ್ ಕ್ಕೆ ಬಂದು ನಮ್ಮ ತಂದೆಯವರಿಗೆ ನೋಡಲಾಗಿ ಅವನ ಬಾಯಿಯಿಂದ ಬುರುಗು ಬರುತ್ತಿತ್ತು ಮತ್ತು ಅವನ ಬಾಯಿಯಿಂದ ಕ್ರೀಮನಾಶಕ ಔಷದ ವಾಸನೆ ಬರುತ್ತಿತ್ತು. ಅವನಿಗೆ ಮಾತನಾಡಿಸಲು ಅವನು ಮಾತನಾಡಿರುವುದಿಲ್ಲಾ. ನಂತರ ನಾವು ಒಂದು ಅಂಬುಲೇನ್ಸ್ ಅವನಿಗೆ ವಾಹನದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆ ತರುವಾಗ ಸಾಯಂಕಾಲ 6.00 ಗಂಟೆ ಸುಮಾರಿಗೆ ಚಿಗರಳ್ಳಿ ಕ್ರಾಸ್  ಹತ್ತಿರ ತಂದೆ ಶರಣಪ್ಪ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಸುಬ್ಬಣ್ಣ ಮತ್ತು ಅವನ ಹೆಂಡತಿ ಬಸಮ್ಮ ಹಾಗೂ ಹಣಮಂತ ಇವರು ನನ್ನ ಗಂಡನ ಸಂಗಡ ಹೊಲದ ಬಂದಾರಿಯ & ಮನೆಯ ದಾರಿಯ ವಿಷಯದಲ್ಲಿ ಜಗಳ ಮಾಡಿ  ಖಲಾಸ ಮಾಡುತ್ತೆವೆ ಅಂತಾ ಬೇದರಿಕೆ ಹಾಕಿದಕ್ಕೆ ನನ್ನ ಗಂಡ ಶರಣಪ್ಪನು ಅವರಿಗೆ ಅಂಜಿ ದಿ. 07.03.17 ರಂದು ಸಾಯಂಕಾಲ 4.30 ಗಂಟೆಯ ಸುಮಾರಿಗೆ ಮೂದಬಾಳ ಕ್ರಾಸ್ ಹತ್ತಿರ ಕ್ರೀಮೀನಾಶ ಔಷದ ಕುಡಿದು ಆಸ್ಪತ್ರೆಗೆ ತರುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ  ಪ್ರರಕರಣ ದಾಖಲಾಗಿದೆ.
ಕಳವು ಪ್ರಕರಣಗಳು:
ಕಮಲಾಪೂರ ಠಾಣೆ : ಶ್ರೀ ಆನಂದ ತಂದೆ ಸಂಗಪ್ಪ ಖೊಬಣ್ಣ ಸಾ: ಕನಕಟ್ಟಾ ಹಾ.ವ. ಕಮಲಾಪೂರ ಇವರು 2015 ನೇ ಸಾಲಿನ ಮೇ ತಿಂಗಳಲ್ಲಿ ಕಮಲಾಪೂರ ಗ್ರಾಮದಲ್ಲಿ ಕಲಬುರಗಿ-ಹುಮನಾಬಾದ ರಾಷ್ಟ್ರಿಯ ಹೆದ್ದಾರಿ ನಂ 218 ನೇದ್ದಕ್ಕೆ ಹೊಂದಿಕೊಂಡಿರುವ ಶ್ರೀ ಪ್ರಕಾಶ ಗೋಣಿ ಇವರ 4 ಷಟರಗಳನ್ನು ಬಾಡಿಗೆಯ ಮೇಲೆ ಪಡೆದುಕೊಂಡು ಶಿವಾನಂದ ಟೈರ್ಸ್ ಅಂತ ಅಂಡಗಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಬಂದಿರುತ್ತೆನೆ. ನಾನು ಎಮ್.ಎರ್.ಎಫ್ ಟೈರದ ಡಿಲರ ಶೀಪ ಪಡೆದುಕೊಂಡಿದ್ದು ನನ್ನ ಅಂಗಡಿಯಲ್ಲಿ ಎಮ್.ಎರ್.ಎಫ್ ಟೈರಗಳನ್ನು ಮಾರಾಟ ಮಾಡುತ್ತಾ ಬಂದಿದ್ದು ಇರುತ್ತದೆ.ಎಂದಿನಂತೆ ನಾನು ದಿನಾಂಕ 06.03.2017 ರಂದು ಬೆಳ್ಳಿಗ್ಗೆ 10 ಗಂಟಗೆ ನಾನು ಕಮಲಾಪೂರದಲ್ಲಿರುವ ನನ್ನ ಅಂಗಡಿಗೆ ಬಂದು ವ್ಯಾಪಾರ ಮಾಡಿಕೊಂಡು ರಾತ್ರಿ 8 ಗಂಟೆಯ ಸುಮಾರಿಗೆ ಅಂಗಡಿಯನ್ನು ಬಂದ ಮಾಡಿಕೊಂಡು ಮನೆಗೆ ಹೋಗಿದ್ದು ಇರುತ್ತದೆ. ಇಂದು ದಿನಾಂಕ 07.03.2017 ರಂದು ಬೆಳ್ಳಿಗ್ಗೆ 07:00 ಗಂಟೆಯ ಸುಮಾರಿಗೆ ನಮ್ಮ ಅಂಗಡಿಯ ಪಕ್ಕದಲ್ಲಿರುವ ವಿಶ್ವಕರ್ಮ ರೊಟ್ಟಿ ಅಂಗಡಿಯವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಮ್ಮ ಟೈರ ಅಂಗಡಿಯ ಶಟರ ಕೀಲಿ ಮೂರಿದು ಶಟರ ಸ್ವಲ್ಪ ತೆರೆದಿದ್ದು ಯಾರೊ ಕಳ್ಳರು ಅಂಗಡಿ ಕಳ್ಳತನ ಮಾಡಿರಬಹುದು ಅಂತ ತಿಳಿಸಿದ್ದು ಗಾಬರಿಗೊಂಡು ನಾನು ನಮ್ಮ ಗ್ರಾಮದಿಂದ ಕಮಲಾಪುರಕ್ಕೆ ಬಂದು ನನ್ನ ಅಂಗಡಿಗೆ ಹೋಗಿ ನೋಡಲು ನನ್ನ ಅಂಗಡಿಯ ಶಟರ ಕೀಲಿ ಮೂರಿದಿದ್ದು ನಂತರ ನಾನು ನನ್ನ ಅಂಗಡಿಯ ಒಳಗೆ ಹೋಗಿ ನೋಡಲು ಅಂಗಡಿಯಲ್ಲಿ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಪರಿಶೀಲಿಸಿ ನೋಡಲು ನನ್ನ ಅಂಗಡಿಯಲ್ಲಿ ಇಟ್ಟಿದ್ದ. 1. ಟಂಟಂ, ಅಪೇಯ 10 ಟೈರುಗಳು ಅ:ಕಿ: 21000/-ರೂ 2. ಸ್ಲೆಂಡರ ಮೊಟಾರ ಸೈಕಲದ 7 ಟೈರಗಳು ಅ:ಕಿ: 12250/- ರೂ 3. ಅಶೋಕ ಲೈಲ್ಯಾಂಡ ದೊಸ್ತ ವಾಹನ 2 ಟೈರಗಳು ಅ:ಕಿ: 8600/- ರೂ 4. ಬುಲೇರೊ ಪಿಕಅಪ್ ವಾಹನದ 2 ಟೈರಗಳು ಅ:ಕಿ: 8400/- ರೂ 5. ಕಮಾಂಡರ ಜೀಪದ ಹಿಂದಿನ 2 ಟೈರಗಳು ಅ:ಕಿ: 8200/- ರೂ 6. ಟ್ರಾಕ್ಟರ ಇಂಜನ್ ಮುಂದಿನ 1 ಟೈರ ಅ:ಕಿ: 3200/- ರೂ 7. ಕಮಾಂಡರ ಜೀಪಿನ ಮುಂದಿನ 2 ಟೈರಗಳು 7400/- ರೂ  ಹೀಗೆ ಒಟ್ಟು 69050/- ರೂಪಾಯಿ ಬೆಲೆಯ ಹೊಸ ಟೈರುಗಳು ನಮ್ಮ ಅಂಗಡಿಯಿಂದ ಕಳ್ಳತನವಾಗಿದ್ದು ಇರುತ್ತದೆ.  ದಿನಾಂಕ 06.03.2017 ರಂದು ರಾತ್ರಿ 8 ಗಂಟೆಯಿಂದ ದಿನಾಂಕ 07.03.2017 ರಂದು ಬೆಳ್ಳಿಗ್ಗೆ 07:00 ಗಂಟೆಯ ವರೆಗೆ ಯಾರೊ ಕಳ್ಳರು ನಮ್ಮ ಅಂಗಡಿಯ ಶಷಟ ಕೀಲಿ ಮೂರಿದು ನಮ್ಮ ಅಂಗಡಿಯ ಒಳಗೆ ಪ್ರವೇಶ ಮಾಡಿ ಒಟ್ಟು 69050/- ರೂ ಬೇಲೆಯ ಎಮ್.ಎರ್.ಎಫ್. ಟೈರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಮಂಜುನಾಥ ತಂದೆ ಶಿವಶರಣಯ್ಯ ಗುತ್ತೆದಾರ ಸಾ:ಕಟ್ಟೋಳ್ಳಿ ತಾ:ಜಿ: ಕಲಬುರಗಿ ರವರ ಚಿಕ್ಕಪ್ಪನಾದ ಮಲ್ಲಿಕಾರ್ಜುನ ತಂದೆ ಮೋದಯ್ಯ ಗುತ್ತೆದಾರ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ನಾನು ದಿನಾಲು ನಮ್ಮೂರಿನಲ್ಲಿರುವ ನಮ್ಮ ಚಿಕ್ಕಪ್ಪನ ಮನೆಯಲ್ಲಿಯೇ ದಿನಾಲು ಮಲಗಿಕೊಳ್ಳುತ್ತೇನೆ.  ದಿನಾಂಕ:07/03/2017 ರಂದು ರಾತ್ರಿ 09-00 ಗಂಟೆ ಸುಮಾರಿಗೆ ಎಂದಿನಂತೆ ಊಟ ಮಾಡಿ ನನ್ನ ಚಿಕ್ಕಪ್ಪನ ಮನೆಯಲ್ಲಿ ಮಲಗಿಕೊಳ್ಳಲು ಹೋಗಿರುತ್ತೇನೆ. ನಮ್ಮ ಮನೆಯಲ್ಲಿ ನಾಲ್ಕು ಕೋಣೆಗಳಿದ್ದು ನನ್ನ ತಾಯಿ ಚಂದ್ರಕಲಾ ಹಾಗು ಅತ್ತೆ ಜಗದೇವಿ ಗಂಡ ದಸ್ತಯ್ಯ ಗುತ್ತೆದಾರ ಇಬ್ಬರೂ ಅಡುಗೆ ಮನೆಯಲ್ಲಿ ಮಲಗಿಕೊಂಡು ಉಳಿದ ಕೋಣೆಗಳಿಗೆ ಬೀಗ ಹಾಕಿಕೊಂಡು ಮಲಗಿದ್ದು ನಾನು ಇಂದು ಬೆಳಗಿನ 06-00 ಗಂಟೆ ಸುಮಾರಿಗೆ ಚಿಕ್ಕಪ್ಪನ ಮನೆಯಿಂದ ಎದ್ದು ನಮ್ಮ ಮನೆಗೆ ಹೋಗಿ ನೋಡಲಾಗಿ ನನ್ನ ತಾಯಿ ಚಂದ್ರಕಲಾ ಹಾಗು ಅತ್ತೆ ಜಗದೇವಿ ಗಂಡ ದಸ್ತಯ್ಯ ಗುತ್ತೆದಾರ ಇಬ್ಬರೂ ಮಲಗಿಕೊಂಡ ಅಡುಗೆ ಕೋಣೆಗೆ ಕೊಂಡಿ ಹಾಕಿದ್ದು ಪಕ್ಕದ ಕೋಣೆಯ ಬಾಗಿಲು ತೆರೆದಿದ್ದನ್ನು ನೋಡಿ ಗಾಬರಿಗೊಂಡು ಹೋಗಿ ನೋಡಲಾಗಿ ಬಾಗಿಲಿಗೆ ಹಾಕಿದ ಕೀಲಿ ಮುರಿದಿದ್ದನ್ನು ನೋಡಿ ಅಡುಗೆ ಕೋಣೆಯಲ್ಲಿ ಮಲಗಿದ ನನ್ನ ತಾಯಿ ಹಾಗು ಅತ್ತೆಗೆ ಕೊಂಡಿ ತೆಗೆದು ಎಬ್ಬಿಸಿ ಎಲ್ಲರೂ ಕೂಡಿ ಕೀಲಿ ಮುರಿದ ಕೋಣೆಗೆ ಹೋಗಿ ನೋಡಲಾಗಿ ಕೋಣೆಯಲ್ಲಿರುವ ಅಲಮಾರ ಕೀಲಿ ಮುರಿದು ಅಲೆಮಾರಿಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹೋರಗೆ ಬಿದ್ದಿದ್ದು ನೋಡಲಾಗಿ ಅಲಮಾರಿಯಲ್ಲಿಟ್ಟಿರುವ 1) ಬಂಗಾರದ 30 ಗ್ರಾಮದ ಮೂರು ಎಳೆಯ ಸರಾ ಅ.ಕಿ. 84,000/- ರೂ. 2) 10 ಗ್ರಾಮದ ಒಂದು ಬಂಗಾರದ ಲಾಕೇಟ್ ಅ.ಕಿ. 28,000/- ರೂ. 3) 5 ಗ್ರಾಮದ ಎರಡು ಸುತ್ತುಂಗರ ಅ.ಕಿ. 28,000/- ರೂ  4) ನಗದು ಹಣ 3000/- ರೂ. ಹೀಗೆ ಒಟ್ಟು 1,43,000/- ರೂ. ಕಿಮ್ಮತ್ತಿನ ಮಾಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                                                      
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಪರೆಪ್ಪಾ ತಂದೆ ಸಾಯಬಣ್ಣ ಭುಳಗುರಿ ಸಾ : ಗೋಲಗೇರಾ ತಾ : ಶಹಾಪೂರ ಜಿ : ಯಾದಗೀರ  ಇವರ ತಂದೆ ಸಾಯಬಣ್ಣ ಇವರು ಒಕ್ಕಲುತನ ಕೆಲಸ ಹಾಗೂ ಕಾಂಗ್ರೆಸ್ ಪಕ್ಷದ ಕರ್ಯಕರ್ತರಾಗಿ ಕೆಲಸ ಮಾಡುತ್ತಿದ್ದು  2016 ನೇ ಸಾಲಿನಲ್ಲಿ ನಡೆದ ತಾ.ಪಂ ಮತ್ತು ಜಿಲ್ಲಾ  ಪಂಚಯತ ಚುನಾವಣೆಯಲ್ಲಿ ನಮ್ಮ ತಂದೆ ಕಾಂಗ್ರೆಸ್ ಪಕ್ಷದ ತಾ ಪಂ ಅಬ್ಯರ್ಥಿ ಪರವಾಗಿ ಕೆಲಸ ಮಾಡಿದ್ದು ಈ ಚುನಾವಣೆಯಲ್ಲಿ ಪಕ್ಕದ ಊರಿನ ನಮ್ಮ ಸಂಬಂದಿಕನಾದ ಭಿಮರಾಯ ತಂದೆ ಯರೆಪ್ಪ ಯರಣರ ಇತನು ಬಿ.ಜೆ.ಪಿ ಪಕ್ಷದ ಅಬ್ಯರ್ಥಿಯಾಗಿ  ಚುನವಣೆಯಲ್ಲಿ ನಿಂತುಕೊಂಡಿದ್ದು  ಚುನಾವಣೆಯ ಪೂರ್ವದಲ್ಲಿ ಸದರಿ ಭೀಮರಾಯ ಇತನು ನಮ್ಮ ತಂದೆಯ ಹತ್ತೀರ ಬಂದು  ನಮಗೆ ಸಪೋರ್ಟ ಮಾಡಿರಿ ಅಂತಾ ಕೇಳಿಕೊಂಡಿದ್ದು ಅದಕ್ಕೆ ನನ್ನ ತಂದೆಯವರು ಇಲ್ಲ ನಾನು ಬಹಳ ವರ್ಷಗಳಿಂದ ಕಾಂಗ್ರಸ್  ಪಕ್ಷದ ಕಾರ್ಯಕರ್ತನಗಿ ಕೆಲಸ ಮಡುತ್ತಾ ಬಂದಿರುತ್ತೇನೆ ಈಗಲೂ ಕಾಂಗ್ರೇಸ್ ಪಕ್ಷದ ಅಬ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ ಅಂತ ಹೇಳಿ ಕಳುಹಿಸಿರುತ್ತಾರೆ ಅಲ್ಲದೆ ಸದರಿ ಭಿಮರಾಯನಿಗೂ ಹಾಗೂ ನಮ್ಮ ತಂದೆಯ ನಡುವೆ ರೆಶನ ಅಂಗಡಿ  ಮಂಜೂರಾತಿ  ವಿಷಯದಲ್ಲಿ ವೈಮಸ್ಸು  ಬೇಳೆದಿರುತ್ತದೆ. ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷದ ತಾ.ಪಂ ಅಬ್ಯರ್ಥಿ ಗೆದ್ದಿದ್ದರಿಂದ ಸದರಿ ಭಿಮರಾಯ ಯರಣರ ಇತನು ಚುನಾವಣೆಯ ಫಲಿತಾಂಶದ ಬಳಿಕ ತನ್ನ ಸಂಬಂದಿಕರಾದ  ಸಾಮಯ್ಯಾ ಕಾಕನರ,ನಾಗಪ್ಪಾಯರಣರ,ರಾಯಪ್ಪ ಯರಣರ, ಶರಬಣ್ಣ ಜೋಗಿನವರ, ಆನಂದ ಯರಣರ, ಲಚಮಣ ಯರಣರ ,ಸುಬಾಷ ಕಾಕನರ ,ಶರಭಣ್ಣ ಕಾಕನರ ಸಾ// ಎಲ್ಲರೂ ರಸ್ತಾಪೂರ  ಇವರೊಂದಿಗೆ ನಮ್ಮೂರಿಗೆ ಬಂದು ನಮ್ಮ ತಂದೆಗೆ ಮಗನೆ ನೀನು ಚುನಾವಣೆಯಲ್ಲಿ ನಮಗೆ ಸಪೋರ್ಟ ಮಾಡದ ಕಾರಣ ನಾವು ಚುನಾವಣೆಯಲ್ಲಿ ಸೋತಿರುತ್ತೇವೆ ಅಲ್ಲದೆ ನಮ್ಮ ರೇಶನ ಅಂಗಡಿ  ನಿನ್ನ ಹೇಸರಿಗೆ ಮಂಜೂರಾತಿ ಮಾಡಿಕೊಂಡಿದಿ ನೀನು ಹೇಗೆ ಜೀವನ ಮಾಡುತ್ತಿ ನಾವು ನೋಡುತ್ತೇವೆ ಅಲ್ಲದೆ ನಿನ್ನನ್ನು ಕೋಣ ಕಡಿದ ಹಾಗೆ ಕಡಿಯುತ್ತೆವೆ ಅಂತಾ ಜೀವದ ಬೆದರಿಕೆ ಹಕಿ ಹೋಗಿರುತ್ತಾರೆ . ಮೂದೆ ದಿನಂಕ 25/3/2016 ರಂದು  ಬೆಳಿಗ್ಗೆ 11 ಗಂಟೆಯ ಸುಮಾರಿಗೆ ನಮ್ಮ ತಂದೆ ಶಹಾಪೂರಕ್ಕೆ ಹೋದವರು ಮರಳಿ ಮನೆಗೆ ಬಾರದ ಕಾರಣ ನಾವು ಅಲ್ಲಲ್ಲಿ ಹುಡುಕಾಡುತ್ತಿದ್ದಾಗ ಮರುದಿನ  ದಿನಾಂಕ 26/03/2017 ರಂದು ಬೇಳಿಗ್ಗೆ 8-30 ಗಂಟೆಯ ಸುಮಾರಿಗೆ ಫರಹತಾಬಾದದಿಂದ ಒಬ್ಬರು  ಪೊಲೀಸರು  ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ  ಫರಹತಾಬಾದ ಗ್ರಾಮದ ಶಕ್ತಿ ವೈನಶಾಪ ಹಿಂದುಗಡೆ ಹೊಲದಲ್ಲಿ ನಿಮ್ಮ ತಂದೆ ಸರಾಯಿಯಲ್ಲಿ ವಿಷ ಸೇವನೆ ಮಾಡಿ  ಮೃತಪಟ್ಟಿರುತ್ತನೆ ಅಂತ ತಿಳಿಸಿದ ಮೇರೆಗೆ ನನು ಗಾಬರಿಯಾಗಿ ನಮ್ಮ ಸಂಬಂದಿಕರೊಂದಿಗೆ  ಬಂದು ನೋಡಲಗಿ ವಿಷಯ ನಿಜವಿದ್ದು  ನನ್ನ ತಂದೆಯ ಸಾವಿನಿಂದ ನನಗೆ ಎನು ತೋಚದಂತಾಗಿ  ನನ್ನ ತಂದೆಯ ಸಾವಿನಲ್ಲಿ ಸಂಶಯ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನಭಂಗ ಮಾಡಿದ ಪ್ರಕರಣಗಳು :
ಫರತಾಬಾದ ಠಾಣೆ : ದಿ:05/03/17 ರಂದು ಶ್ರೀ ಬೀರಪ್ಪಾ ತಂದೆ ಸಿದ್ದಪ್ಪಾ ಸಲಗರ ಸಾ: ಕಡಣಿ ತಾ; ಕಲಬುರಗಿ ರವರ ಮಗಳು ನಿಖಿತಾ ಇವಳು ತನ್ನ ತಾಯಿಯೊಂದಿಗೆ ಹೊಲ ದಿಂದ  ಮನೆಗೆ ಬರುತ್ತಿರುವಾಗ ಶರಣು ತಂದೆ ನಾಗಣ್ಣ ಲೋಕಣೆ ಸಾ; ಕಡಣಿ ಸದರಿಯವಳಿಗೆ ಮದುವೆ ಯಾಗುತ್ತೇನೆ ಅಂತಾ ಹೇಳಿ ಕೈಹಿಡಿದ್ದು ಜಗ್ಗಾಡಿ ಮಾನಬಂಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಕು||  ನಾಗರತ್ನ ತಂದೆ ಮರೆಪ್ಪ ಶರ್ಮಾ ಸಾ|| ಜನಿವಾರ  ರವರು ದಿನಾಂಕ: 01.0317 ರಂದು ನಮ್ಮೂರಿನಿಂದ ಜೇವರಗಿಗೆ ಬಸ್ಸಿನಲ್ಲಿ ಬರುವಾಗ ಹಿಂದಿನಿಂದ ಬೆನ್ನಹತ್ತಿ ಬಂದು ನಾನು ಕಾಲೇಜಿನೊಳಗೆ ಪರೀಕ್ಷೆಗೆ ಬರೆಯಲು ಕೋಣೆಯಲ್ಲಿ ಹೋದರೆ ಗೇಟಿನಲ್ಲಿ ನಮ್ಮೂರ ಸಂತೋಸ ಸರದರಕಟ್ಟಿ ಇತನು ನಿಂತು ಹೋಗುವಾಗ ಬರುವಾಗ ಚುಡಾಯಿಸಿರುತ್ತಾನೆ ಮತ್ತು ಪರೀಕ್ಷೆ ಮುಗಿಸಿ ಬಸ್ ಸ್ಟ್ಯಾಂಡಿಗೆ ಬರುವಾಗ ಯಾರದೋ ಗಳೆಯರ ಬೈಕ ತೆಗೆದುಕೊಂಡು ನಮ್ಮನ್ನು ಸುತ್ತು ಹಾಕುವದು ನಾವು ಬಸ ಹತ್ತುವ ವರೆಗೆ ಅಲ್ಲಿಯೇ ಬಸ್ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸುವದು ಸೀಟಿನ ಮೇಲೆ ಅಸಯ್ಯವಾಗಿ ಕೂಡವದು ಕಣ್ಣು ಸೊನ್ನೆ ಮಾಡುವದು ಸಿಳ್ಳೆ ಹೊಡೆಯುವದು ಮಾಡಿರುತ್ತಾನೆ. ಮತ್ತು ದಿನಾಂಕ: 03.03.17 ರಂದು 3.30 ಪಿ.ಎಮ್ ಕ್ಕೆ ನಾನು ಮತ್ತು ನಮ್ಮೂರ ಬುದ್ದಮ್ಮ ಸಜ್ಜನ್ ಇಬ್ಬರು ಕೂಡಿ ನಮ್ಮೂರ ಮರಗಮ್ಮ ಗುಡಿಯ ಹತ್ತಿರ ಇರುವ ಬೊರವೆಲ್ ನೀರಿಗೆ ಹೋದಾಗ ನಮ್ಮೂರ ಸಂತೋಷ  ಮಾಂಗ  (ಸರದರಕಟ್ಟಿ ) ಇತನು ನನ್ನ ಹತ್ತಿರ ಬಂದು ನನಗೆ ಕೊರಳಿನಲ್ಲಿನ ಚೈನ್ ಸರ ಹಿಡಿದುಕೊಂಡು ಬಂದು ಏ ಚೈನ್ ತೆಗೆದುಕೋ ಅಂತ ನನ್ನ ಕೈ ಹಿಡಿದು ಜೊಗ್ಗಿದನು ನಾನು ತೆಗೆದುಕೊಳ್ಳುವದಿಲ್ಲಾ ಅಂತ ಅಂದಿದಕ್ಕೆ ನಿಮ್ಮ ತಂದೆ ಮತ್ತು ನಿಮ್ಮ ಅಣ್ಣನಿಗೆ ಹೇಳಿ ಮಾನ ಹರಾಜ ಮಾಡುತ್ತೇನೆ ಅಂತ ಜೀವದ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.