ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 12-08-2016
ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 96/16 ಕಲಂ 279,304(ಎ) ಐ.ಪಿ.ಸಿ.
ದಿನಾಂಕ.10/08/2016 ರಂದು ಹೊಟೆಲ
ಮಾಲೀಕ ಅಬ್ದುಲ ರಸೀದ ರವರು ಹಾಗೂ
ನಾಮದೇವ ತಂದೆ ಮಾಣಿಕ
ಜಮಾದಾರ, 35 ವರ್ಷ, ಸಾ.ನಿರಗುಡಿ
ರವರು ಮನೆಗೆ ಹೋಗಲು ರಾ.ಹೆ.ನಂ.9 ರ ಬಸವೇಶ್ವರ ಚೌಕ ಹತ್ತಿರ ಇಬ್ಬರೂ
ಅಟೊ ದಾರಿ ಕಾಯುತ್ತ ನಿಂತಿರುವಾಗ ಸಮಯ ರಾತ್ರಿ 9 ಗಂಟೆಗೆ ಬಸವಕಲ್ಯಾಣ ಕಡೆಯಿಂದ ಬರುತ್ತಿರುವ
ಒಂದು ಲಕ್ಷ್ಮಿ ಹಾಲಿನ ವಾಹನ ನಂ.ಎಂ.ಎಚ-13-ಎ.ಕ್ಸ-7955 ನೇದ್ದರ ಚಾಲಕನು ತನ್ನ ವಾಹನವನ್ನು
ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಶ್ರೀಮತಿ. ಇಂದುಬಾಯಿ ಗಂಡ ನಾಮದೇವ ಜಮಾದಾರ, 30 ವರ್ಷ ನಾಮದೇವನಿಗೆ ಡಿಕ್ಕಿ ಮಾಡಿರುತ್ತಾನೆ. ಡಿಕ್ಕಿಯ
ಪ್ರಯುಕ್ತ ನಾಮದೇವನು ಕೆಳಗೆ ಬಿದ್ದು ಬಲ
ಕಪಾಳದಲ್ಲಿ ಮತ್ತು ಹಿಂದೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಗುನ್ನೆ ನಂ. 114/16 ಕಲಂ
279, 338 ಐಪಿಸಿ :-
ದಿನಾಂಕ 11-08-2016 ರಂದು ಫಿರ್ಯಾದಿ ಶ್ರೀ.ಸಂಜುಕುಮಾರ ತಂದೆ ಶಿವಮೂರ್ತಿ
ಹೂಗಾರ ವಯ: 36 ವರ್ಷ, ಸಾ: ಹೊರಂಡಿ ರವರು ಹಾಗೂ ಅವರ ಮಗ ಗಣೇಶ ಇಬ್ಬರು ಕೂಡಿಕೊಂಡು ಕಮಲನಗರದಲ್ಲಿ ಕೆಲಸ ಇದ್ದುದರಿಂದ ಮುಂಜಾನೆ 7:30 ಗಂಟೆ ಸುಮಾರಿಗೆ ಇಬ್ಬರೂ
ಕೂಡಿ ಮನೆಯಿಂದ ಹೊರಂಡಿ ಗ್ರಾಮದ ಬಸ್ಸ ನಿಲ್ದಾಣಕ್ಕೆ ಬರುವಷ್ಟರಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸು
ಹೋಗಿತ್ತು. ಆಗ ನಾವು ಬಸ್ಸ ನಿಲ್ದಾಣದಲ್ಲಿಯೆ ನಿಂತಾಗ ಗ್ರಾಮದಲ್ಲಿಂದ ಒಂದು ಆಟೊ ಸೋನಾಳ
ಗ್ರಾಮಕ್ಕೆ ಹೋಗುವ ಸಲುವಾಗಿ ಬಂದಾಗ ಅದರಲ್ಲಿ ಕುಳಿತು ಇಬ್ಬರೂ
ಹೊರಂಡಿ ಕ್ರಾಸವರೆಗೆ ಬಂದು ಅದರಿಂದ ಇಳಿದು ಕಮಲನಗರ ಕಡೆಗೆ ಹೋಗಲು ಯಾವದೆ ವಾಹನ ಬಾರದಿದ್ದರಿಂದ
ನನ್ನ ಮಗನಿಗೆ ಶಾಲೆಗೆ ತಡವಾಗುತ್ತದೆ ಅಂತಾ ನಾನು ನನ್ನ ಮಗ ಇಬ್ಬರೂ ನಡೆದುಕೊಂಡು ಕಮಲನಗರ ಕಡೆಗೆ
ಬರುತ್ತಿದ್ದಾಗ ಮುಂಜಾನೆ 08:15 ಗಂಟೆ ಸುಮಾರಿಗೆ ಹೊರಂಡಿ ಕ್ರಾಸದಿಂದ ಸ್ವಲ್ಪ
ಮುಂದೆ ಬಂದಾಗ ಹಿಂದಿನಿಂದ ಕಮಲಾಕರ ಪಾಟೀಲ ರವರು ತನ್ನ ಟ್ರಾಕ್ಟರನ್ನು ಅತಿ
ವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿ ಮಗ
ಗಣೇಶನಿಗೆ ಡಿಕ್ಕಿ ಪಡಿಸಿದ ಪರಿಣಾಮ ತನ್ನ ಮಗನ ಬಲಗಾಲ ಮೊಳಕಾಲ ಕೆಳಗೆ ಭಾರಿ
ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ. ಮತ್ತು ಬಲಗೈಯ ತೋರು ಬೆರಳು, ನಡುವಿನ ಬೆರಳು,
ಮತ್ತು ಉಂಗುರ ಬೆರಳು ಕಟ್ಟಾಗಿ
ಭಾರಿ ರಕ್ತಗಾಯವಾಗಿರುತ್ತದೆ. ಆಗ ಸದರಿ ಟ್ರಾಕ್ಟರ ಇಂಜಿನ ನಂ ನೋಡಲು ಎಮ್.ಎಚ್-24/ಎಲ್-7094 ನೇದ್ದು ಇದ್ದು ಟ್ರಾಲಿ ನಂಬರ ಇರುವದಿಲ್ಲ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ