Police Bhavan Kalaburagi

Police Bhavan Kalaburagi

Thursday, April 16, 2020

BIDAR DISTRICT DAILY CRIME UPDATE 16-04-2020


                        
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 16-04-2020

ಹುಮನಾಬಾದ ಪೊಲೀಸ ಠಾಣೆ ಅಪರಾಧ ಸಂಖ್ಯೆ 49/2020 ಕಲಂ 504,506,298 ಐಪಿಸಿ ಮತ್ತು ಕಲಂ 3 (1) (ಅರ)(ಎಸ)(ಯು) ಎಸ.ಸಿ/ಎಸ.ಟಿ ಎಕ್ಟ :- 

ದಿನಾಂಕ 15/04/2020 ರಂದು 1330 ಗಂಟೆಗೆ ಫಿಯರ್ಾದಿ ಪುಂಡಲಿಕ ತಂದೆ ಕಾಶೆಪ್ಪಾ ಆಮ್ಲೆ ಸಾ. ಸೋನಕೆರಾ ರವರು ಠಾಣೆಗೆ ಹಾಜರಾಗಿ   ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ದಿನಾಂಕ 14/04/2020 ರಂದು ಸಾಯಂಕಾಲ 4.00 ಗಂಟೆಯಸುಮಾರಿಗೆ   ಓಣೆಯ ಸಂಜು ತಂದೆ ಮಾರುತಿ,  ಮಹೇಶ ತಂದೆ ಭೀಮಶಾ ಮಹಾದೇವ ತಂದೆ ತುಕಾರಾಮ ಪೂಜಾರಿ ಮತ್ತು ತುರಾರಾಮ ತಂದೆ ಭೀಮಶಾ ಮೊಹಿ ಮತ್ತು ಫಿರ್ಯಾದಿಯು ಟಿಕ್ ಟಾಕ್ ದಲ್ಲಿ ಒಬ್ಬನು ವಿಡಿಯೋ ಮೂಲಕ ಅವಾಚ್ಯವಾಗಿ ನಿಂದನೆ ಮಾಡಿ  ಜೀವದ ಬೇಧರಿಕೆ ಹಾಕಿ ಜಾತಿ ನಿಂಧನೆ ಮಾಡಿರುತ್ತಾನೆ. ಈ ವಿಡಿಯೋಮಾಡಿದ ವ್ಯಕ್ತಿಯ ಮುಖಾ ಕಾಣಿಸದೇ ಹಾಗೆ ದಿಲ್ ಚಿನ್ಹೆ ಹಾಕಿದ್ದು ಆತನ ಮೈ ಮೇಲಿನ ಬಟ್ಟೆ  ಮತ್ತು ಕೇಳಗಿನ ಭಾಗವನ್ನು ಮತ್ತು ವಿಡಿಯೋದಲ್ಲಿ ಕಾಣಿಸುತ್ತಿರುವ ಹೊಲ ನೋಡಲಾಗಿ ಈ ವ್ಯಕ್ತಿಯು ನಮ್ಮ ಪಕ್ಕದ ಗ್ರಾಮದ ನಿವಾಸಿಯಾದ ತಮ್ಮರೆಡ್ಡಿ ತಂದೆ ಹಣಮಂತರೆಡ್ಡಿ ಅಣೂರೆ ಮು, ಜಾಮಾನಗರ ಘಾಟಬೋರಳ ಈತನೇ ಇರುತರ್ತಾನೆ ಇವನು ಟಿಕಟಾಕ ಮಾಡುವಾಗ ಉಪಯೋಗಿಸಿದ ಹಾಗೂ ಕಾಣಿಸುತ್ತಿರುವ ಯುಜರ್ ಐಡಿ @ 341948825729922 ಇರುತ್ತದೆ. ಈ ವಿಷಯ ಸಾಮಾಜಿಕ ಜಾಲತಾಣಗಲ್ಲಿ ವೈರಲ ಅಗಿರುತ್ತದೆ ಪ್ರಯುಕ್ತ ಪರಶಿಷ್ಟ ಜಾತಿಯಲ್ಲಿ ಬರುವ ಹೊಲಿಯ ಕೋಮಿನ ಜನರ ಭಾವನೆಗಳಿಗೆ ನೋವು ಉಂಟುಮಾಡಿ ಒಂದುಕೋಮಿಗೆ ಜೀವ ಬೇಧರಿಕೆ ಹಾಕಿ ಸಮಾಜಿಕ ಸಮಾರಸ್ಯಕ್ಕೆ ನೋವು ಉಂಟು ಮಾಢಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 26/2020 ಕಲಂ 32, 34, 38(ಎ) ಕೆ ಇ ಎಕ್ಟ ಮತ್ತು ಕಲಂ 273 ಐಪಿಸಿ :-

 ದಿನಾಂಕ 15-04-2020 ರಂದು 2030 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಇದ್ದಾಗ ಮಾಹಿತಿ ಬಂದಿದೇನೆಂದರೆ ರಾಮತೀರ್ಥ(ಕೆ) ಗ್ರಾಮದ ರಸ್ತೆ ಮುಖಾಂತರ ಬಸವಕಲ್ಯಾಣಕ್ಕೆ ಎರಡು ಮೋಟಾರ ಸೈಕಲ ಮೇಲೆ 4 ಜನ ವ್ಯಕ್ತಿಗಳು ಕಳ್ಳ ಭಟ್ಟೆ ಸರಾಯಿಯನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಮೊರಖಂಡಿ ಶಿವಾರದಲ್ಲಿ ಇರುವ  ಮೊರಖಂಡಿ ರಾಮತೀರ್ಥ(ಕೆ)  ರಸ್ತೆ ಮೇಲೆ ಇರುವ ಕೊಂಗೆವಾಡಿ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ 2130 ಗಂಟೆಗೆ ತಲುಪಿ ಜೀಪಿನಿಂದ ಎಲ್ಲರೂ ಕೆಳಗೆ ಇಳಿದು ರೋಡಿನ ಮೇಲೆ ನಿಂತಿರುತ್ತೇವೆ ರಾಮತೀರ್ಥ(ಕೆ) ಗ್ರಾಮದ ಕಡೆಯಿಂದ 2135 ಗಂಟೆಗೆ ಎರಡು ಮೋಟಾರ ಸೈಕಲ ಮೇಲೆ ಬಂದಾಗ   ಕೈ ಸನ್ನೆ ಮಾಡಿ ಎರಡು ಮೋಟಾರ ಸೈಕಲಗಳು ನಿಲ್ಲಿಸಿದಾಗ ಪೊಲೀಸ್ ಜೀಪಿನ ಬೆಳಕಿನಲ್ಲಿ ಎರಡು ಮೋಟಾರ ಸೈಕಲ ಮೇಲೆ ಇದ್ದವರನ್ನು ಪರಿಶೀಲಿಸಿ ನೋಡಲು ಒಂದು ಮೋಟಾರ ಸೈಕಲ ಮೇಲೆ ಇಬ್ಬರು ಜನರು ಇದ್ದು ಮೋಟಾರ ಸೈಕಲ ಹಿಂದೆ ಕುಳಿತವವನು ಒಂದು ಪ್ಲಾಸ್ಟೀಕ ಕ್ಯಾನನನ್ನು ಹಿಡಿದುಕೊಂಡಿರುತ್ತಾನೆ. ಮೋಟಾರ ಸೈಕಲ ಚಲಾಯಿಸುತ್ತಿದ್ದ ವ್ಯಕ್ತಿಗೆ ಆತನ ಹೆಸರು ವಿಚಾರಿಸಲು ಆತನು ತನ್ನ ಹೆಸರು ಪವನ ತಂದೆ ದತ್ತು ಬೊಸ್ಲೆ ವಯ 24 ವರ್ಷ ಜಾತಿ ಮರಾಠಾ ಉದ್ಯೋಗ ಕೂಲಿ ಕೆಲಸ ಸಾ : ಖಾನಾಪೂರ(ಕೆ) ಅಂತಾ ತಿಳಿಸಿದನು. ಮೋಟಾರ ಸೈಕಲ ಮೇಲೆ ಹಿಂದೆ ಪ್ಲಾಸ್ಟೀಕ ಕ್ಯಾನ ಹಿಡಿದುಕೊಂಡು ಕುಂತಿದ ವ್ಯಕ್ತಿಗೆ ಆತನ ಹೆಸರು ವಿಚಾರಿಸಲು ಆತನು ತನ್ನ ಹೆಸರು ವಾಮನ ತಂದೆ ಮಲ್ಲಪ್ಪಾ ಗಾಯಕವಾಡ ವಯ 54 ವರ್ಷ ಜಾತಿ ಎಸ್ ಸಿ ಮಾದಿಗ ಉದ್ಯೋಗ ಕೂಲಿ ಕೆಲಸ ಸಾ : ಖಾನಾಪೂರ(ಕೆ) ಗ್ರಾಮ ಅಂತಾ ತಿಳಿಸಿದನು. ಇಬ್ಬರಿಗೆ ಈ ಪ್ಲಾಸ್ಟೀಕ ಕ್ಯಾನದಲ್ಲಿ ಎನಿದೆ ಅಂತಾ ವಿಚಾರಿಸಿದಾಗ ಇದರಲ್ಲಿ ಕಳ್ಳಭಟ್ಟಿ ಸರಾಯಿ 5 ಲೀಟರದಷ್ಟು ಇರುತ್ತದೆ. ಅಂದಾಜು ಕಿಮ್ಮತ್ತು 500/- ರೂಪಾಯಿ ಆಗುತ್ತದೆ ಅಂತಾ ತಿಳಿಸಿದನು. ಇವರು ಚಲಾಯಿಸಿಕೊಂಡು ಬಂದ ಮೋಟಾರ ಸೈಕಲ ನೋಡಲು ಇದು ಹಿರೊ ಹೊಂಡಾ ಫ್ಯಾಶನ ಪ್ರೋ ಮೋಟಾರ ಸೈಕಲ ನಂಬರ ಕೆಎ-39-ಜೆ-2735 ನೇದ್ದು ಇದ್ದು ಅ : ಕಿ : 20,000/- ರೂಪಾಯಿ ಇರುತ್ತದೆ. ನಂತರ ಇನ್ನೊಬ್ಬ ಮೋಟಾರ ಸೈಕಲ ಸವಾರನಿಗೆ ಹೆಸರು ವಿಚಾರಿಸಲು ಆತನು ತನ್ನ ಹೆಸರು ಗಣಪತಿ ತಂದೆ ವಿಶ್ವನಾಥ ಬೊಕ್ಕೆ ವಯ 25 ವರ್ಷ ಜಾತಿ ಕಬ್ಬಲಿಗ ಉದ್ಯೋಗ ಕೂಲಿ ಕೆಲಸ ಸಾ : ಪಂಚಾಯತ ಕಟ್ಟಾ ತ್ರೀಪೂರಾಂತ ಬಸವಕಲ್ಯಾಣ ಅಂತಾ ತಿಳಿಸಿದನು ಮೋಟಾರ ಸೈಕಲ ಮೇಲೆ ಹಿಂದೆ ಪ್ಲಾಸ್ಟೀಕ ಕ್ಯಾನ ಹಿಡಿದುಕೊಂಡು ಕುಂತಿದ ವ್ಯಕ್ತಿಗೆ ಆತನ ಹೆಸರು ವಿಚಾರಿಸಲು ಆತನು ತನ್ನ ಹೆಸರು ಗುಂಡಪ್ಪಾ ತಂದೆ ಬಂಡೆಪ್ಪಾ ಹಿರಲೆ ವಯ 39 ವರ್ಷ ಜಾತಿ ಕಬ್ಬಲಿಗ ಉದ್ಯೋಗ ಒಕ್ಕಲುತನ ಸಾ : ಪಂಚಾಯತ ಕಟ್ಟಾ ತ್ರೀಪೂರಾಂತ ಬಸವಕಲ್ಯಾಣ ಅಂತಾ ತಿಳಿಸಿದನು. ಇಬ್ಬರಿಗೆ ಈ ಪ್ಲಾಸ್ಟೀಕ ಕ್ಯಾನದಲ್ಲಿ ಎನಿದೆ ಅಂತಾ ವಿಚಾರಿಸಿದಾಗ ಇವರಿಬ್ಬರು ಈ ಕ್ಯಾನದಲ್ಲಿ ಕಳ್ಳಭಟ್ಟಿ ಸರಾಯಿ 5 ಲೀಟರದಷ್ಟು ಇರುತ್ತದೆ. ಅಂದಾಜು ಕಿಮ್ಮತ್ತು 500/- ರೂಪಾಯಿ ಆಗುತ್ತದೆ ಅಂತಾ ತಿಳಿಸಿದರು. ಇವರು ಚಲಾಯಿಸಿಕೊಂಡು ಬಂದ ಮೋಟಾರ ಸೈಕಲ ನೋಡಲು ಇದು ಹಿರೊ ಸ್ಪ್ಲೇಂಡರ್ ಪ್ಲಸ್ ಮೋಟಾರ ಸೈಕಲ ನಂಬರ ಕೆಎ-56-ಜೆ-5575  ನೇದ್ದು ಇದ್ದು ಅ : ಕಿ : 40,000/- ರೂಪಾಯಿ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ  101/2020 ಕಲಂ 87 ಕೆಪಿ ಕಾಯ್ದೆ :-
ದಿನಾಂಕ: 15-04-2020 ರಂದು 14:00 ಗಂಟೆಗೆ ಪಿಎಸ್ಐ ರವರು  ಠಾಣೆಯಲ್ಲಿದ್ದಾಗ ಭಾಲ್ಕಿಯ ಬೀರದೇವಗಲ್ಲಿಯ ಕಾರಂಜಾ ಆಫೀಸ್ ಹತ್ತಿರ ಕೆಲವು ಜನರು ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ  ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ   1) ವಿಜಯಕುಮಾರ ತಂದೆ ಲಕ್ಷ್ಮಿಣರಾವ ಕಾಂಬಳೆ ವಯ: 36 ವರ್ಷ, ಜಾತಿ: ಸಮಗಾರ ಉ: ಚಪ್ಪಲಿ ಅಂಗಡಿ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 550=00 ರೂ ಇದ್ದವು, 2) ಅವಿನಾಥ ತಂದೆ ತಂದೆ ಲಕ್ಷ್ಮಿಣರಾವ ಕಾಂಬಳೆ ವಯ: 49 ವರ್ಷ, ಜಾತಿ: ಸಮಗಾರ ಉ: ಡ್ರೈವರ ಕೆಲಸ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 950=00 ರೂ ಇದ್ದವು, 3) ದಿಲೀಪ ತಂದೆ ವಿಶ್ವನಾಥ ಮಡಿವಾಳ ವಯ: 30 ವರ್ಷ, ಜಾತಿ: ಅಗಸೂರ ಉ: ಲಾಂಡ್ರಿ ಕೆಲಸ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 550=00 ರೂ ಇದ್ದವು, 4) ಮಾರುತಿ ತಂದೆ ಮಾಳಪ್ಪಾ ಹಳ್ಳೆ ವಯ: 44 ವರ್ಷ, ಜಾತಿ: ಕುರುಬ ಉ: ಕಿರಾಣಿ ಅಂಗಡಿ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 350 ರೂ ಇದ್ದವು, 5) ಪ್ರವೀಣ ತಂದೆ ಕಿಶನರಾವ ನೌಬಾದೆ ವಯ: 32 ವರ್ಷ, ಜಾತಿ: ಎಸ್.ಸಿ. ಮಾದಿಗ ಉ: ಖಾಸಗಿ ಕಾಲೇಜದಲ್ಲಿ ಲೆಕ್ಚರ ಕೆಲಸ ಸಾ: ಬೀರದೇಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 200=00 ರೂ ಇದ್ದವು 6) ರಾಜಕುಮಾರ ತಂದೆ ಗಣಪತಿ ಮಳಚಾಪೂರ ವಯ: 50 ವರ್ಷ, ಜಾತಿ: ಕುರುಬ ಉ: ಹೋಟೆಲದಲ್ಲಿ ಕೆಲಸ ಸಾ: ಬೀದರದೇವಗಲ್ಲಿ ಭಾಲ್ಕಿ. ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 150=00 ರೂ ಇದ್ದವು 7) ನಾಗೇಶ ತಂದೆ ವಿಶ್ವನಾಥ ಮಡಿವಾಳ ವಯ: 28 ವರ್ಷ, ಜಾತಿ: ಅಗಸೂರ ಉ: ಇಸ್ತ್ರಿ ದೂಕಾನ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 200 ರೂ ಇದ್ದವು, 8) ಮಾಳಗೊಂಡ ತಂದೆ ಗೊವಿಂದ ಮೇತ್ರೆ ವಯ: 21 ವರ್ಷ, ಜಾತಿ: ಕುರುಬ ಉ: ಡಿ.ಜೆ ಸೌಂಡ್ ಸಿಸ್ಟೆಮ್ ಅಂಗಡಿ ಸಾ: ಬೀರದೇವಗಲ್ಲಿ ಭಾಲ್ಕಿ ಅಂತಾ ತಿಳಿಸಿದ್ದು ಸದರಿಯವನ ಕೈಯಲ್ಲಿ 3 ಇಸ್ಪೇಟ ಎಲೆಗಳು ಹಾಗೂ 150 ರೂ ಇದ್ದವು ಹಾಗು ಎಲ್ಲರ ಮಧ್ಯದಲ್ಲಿ ಜೂಜಾಟದಲ್ಲಿ ತೋಡಗಿಸಿದ ನಗದು ಹಣ 3,450=00 ರೂ ಹಾಗೂ ಮತ್ತು 28 ಇಸ್ಪೆಟ ಎಲೆಗಳು ಇದ್ದವು ಸದರಿಯವರಿಗೆ  ವಿಚಾರಣೆ ಮಾಡಲು ಲ್ಲರೂ ಸೆರಿ ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶಿಬಿನ ಇಸ್ಪೇಟ ಜೂಜಾಟ ಆಡುತಿದ್ದ ಬಗ್ಗೆ ಒಪ್ಪಿ ಕೊಂಡಿದರಿಂದ ಸದರಿಯವರು ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 6,550=00 ರೂ ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.