Police Bhavan Kalaburagi

Police Bhavan Kalaburagi

Thursday, December 24, 2020

BIDAR DISTRICT DAILY CRIME UPDATE 24-12-2020

  

                                                      ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 24-12-2020

ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2020 ಕಲಂ 498(ಎ), 302 ಐಪಿಸಿ :-

ದಿನಾಂಕ 23-12-2020 ರಂದು 1130 ಗಂಟೆಗೆ ಫಿರ್ಯಾದಿ ಶ್ರೀಮತಿ ಸಾವಿತ್ರಿ ಗಂಡ ವಿಠ್ಠಲ್ ವಯ 45 ವರ್ಷ ಉ: ಮನೆ ಕೆಲಸ ಜಾ: ಕೊಳಿ ಸಾ: ದೇಗಲವಾಡಿ ತಾ: ನಾರಾಯಣಖೇಡ ಜಿ: ಸಂಗಾರಡ್ಡಿ (ಟಿಎಸ್.) ರವರು ಠಾಣೆಗೆ ಹಾಜರಾಗಿ ನೀಡಿರುವ ದೂರಿನ ಸಾರಾಂಶವೆನೆಂದರೆ ಇವರ ಹಿರಿಯ ಮಗಳಾದ ಪದ್ಮಾವತಿ ಇವಳಿಗೆ ಕೃಷ್ಣಾ ತಂದೆ ದಿ: ಚಂದರರಾವ ಸಾ: ಹಣೆಗಾಂವ ತಾ: ದೆಗಲೂರ ಇತನಿಗೆ ಕೊಟ್ಟು 4 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತಾರೆ. ಅವಳಿಗೆ ಚಂದ್ರೀಕಾ ಅಂತ ಎರಡು ವರ್ಷದ ಹೆಣ್ಣು ಮಗು ಇರುತ್ತದೆ.  ಅಳಿಯ ಕೃಷ್ಣಾ ಇತನು ಸದಾಶಿವಪೇಟದಲ್ಲಿ ಲೊಕಲ್ ಆಟೋ ಪೈನಾನ್ಸ್ ವ್ಯಾಪಾರ ಮಾಡಿಕೊಂಡು ಇರುತ್ತಾನೆ. ಅಳಿಯನಿಗೆ ಬೇರೆ ಹೆಣ್ಣುಮಕ್ಕಳ ಸಹವಾಸ ಇದ್ದು, ಮದುವೆಯಾದ ಸ್ವಲ್ಪ ತಿಂಗಳ ನಂತರ ಆತನು ಫೀರ್ಯಾದಿ ಮಗಳ ಜೊತೆಯಲ್ಲಿ ಯಾವಾಗಲು ಜಗಳ ತೆಗೆಯುವದು ಮಾಡುತ್ತಾ ಬಂದು ನೀನು ಸರಿಯಾಗಿಲ್ಲ, ನನಗೆ ಇಷ್ಟ ಇಲ್ಲ ನೀನು ಮನೆಯಿಂದ ಹೋಗು ಅಂತ ಜಗಳ ಮಾಡುತ್ತಾ ಕೈಯಿಂದ ಹೊಡೆ ಬಡೆ ಮಾಡುತ್ತಾ ಬಂದು ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ.  ನಂತರ ಅವನಿಗೆ ತಿಳುವಳಿಕೆ ಹೇಳಿದ ನಂತರ ಇಂದಿಗೆ 15-20 ದಿವಸಗಳ ಹಿಂದೆ ನನ್ನ ಮಗಳಿಗೆ ಚೆನ್ನಾಗಿ ನೋಡಿಕೊಳ್ಳುತ್ತೆನೆಂದು ಅವಳಿಗೆ ನಮ್ಮ ಮನೆಯಿಂದ ಕರೆದುಕೊಂಡು ಹೋಗಿರುತ್ತಾನೆ. ನಂತರ ನಮ್ಮ ಮಗಳಿಗೆ ನಾವು ವಿಚಾರಿಸಿದಾಗ, ಆತನು ಏನು ಸುದರಾಯಿಸಿರುವದಿಲ್ಲ ಮೊದಲಿನ ಹಾಗೆ ಇರುತ್ತಿದ್ದಾನೆ ಅಂತ ಹೇಳಿರುತ್ತಾಳೆ.  ದಿನಾಂಕ 21-12-2020 ರಂದು  ಅಳಿಯ ಕೃಷ್ಣಾ ಹಾಗು ನನ್ನ ಮಗಳು ಮತ್ತು ಮೊಮ್ಮಗಳಿಗೆ ಜೊತೆಯಲ್ಲಿ ಕರೆದುಕೊಂಡು ಫಿರ್ಯಾದಿ ಮನೆಯಲ್ಲಿ ಉಳಿದುಕೊಂಡಿರುತ್ತಾರೆ. ಅವಳು  ಮನೆಗೆ ಬಂದಾಗ, ನಾನು ಅವಳಿಗೆ ಹೇಗೆ ಇದ್ದಿ ಅಂತ ವಿಚಾರಿಸಿದಾಗ, ನನಗೆ ದಿನಾಲು ಅಲ್ಲಿ ಹೊಡೆ ಬಡೆ ಮಾಡುತ್ತಾ, ಹೊಲಸು ಶಬ್ದಗಳಿಂದ ರಂಡಿ ನೀನು ಇದ್ದರೆ ಇರು ಇಲ್ಲವಾದರೆ ಹೋಗು ಅಂತ ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾನೆ, ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಅಂತ ಅಳುತ್ತಾ ನನ್ನ ಮತ್ತು ನನ್ನ ಗಂಡನ ಮುಂದೆ ಹೇಳಿರುತ್ತಾಳೆ. ಆ ದಿವಸ ರಾತ್ರಿ ಉಳಿದು ದಿನಾಂಕ 22-12-2020 ರಂದು ರಾತ್ರಿ 7-00 ಗಂಟೆಗೆ ನಾವು ಸದಾಶಿವಪೇಟಕ್ಕೆ ಹೋಗುತ್ತೇವೆ ಅಂತ ಹೇಳಿದಾಗ. ಬೇಡ ಕತ್ತಲಾಗಿದೆ ಇಲ್ಲೆ ಉಳಿಯಿರಿ ನಾಳೆ ಹೋಗಿರಿ ಅಂತ ಹೇಳಿರುತ್ತೇವೆ. ಆಗ ಅಳಿಯ ಚಿಂತಾಕಿಯಲ್ಲಿ ನನ್ನ ಅಣ್ಣನಿದ್ದಾನೆ ಆತನಿಗೆ ಭೆಟ್ಟಿ ಮಾಡಿ ಹೋಗುತ್ತೇವೆ ಅಂತ ಹೇಳಿ ಹೋಗಿರುತ್ತಾರೆ. ನಂತರ ರಾತ್ರಿ 9-30 ಗಂಟೆಗೆ  ಬೆನಕನಳ್ಳಿ ದಾಟಿದ ನಂತರ ಕಾರ ಎಕ್ಸಿಡೆಂಟ್ ಆಗಿದೆ ಪದ್ಮಾವತಿ ಇವಳು ಸಿರಿಯಸ್ ಇದ್ದು, ಅವಳಿಗೆ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇನೆ  ತಿಳಿಸಿರುತ್ತಾರೆ. ತಕ್ಷಣ ಬೀದರ ಸಕರ್ಾರಿ ಆಸ್ಪತ್ರೆಗೆ ರಾತ್ರಿ 1100 ಗಂಟೆಯ ಸುಮಾರಿಗೆ ನೋಡಲಾಗಿ, ಅವಳ ಕುತ್ತಿಗೆಯ ಸುತ್ತಲು ಕಂದು ಗಟ್ಟಿದ ರಕ್ತಗಾಯ ಆಗಿದ್ದು ಇರುತ್ತದೆ. ನಂತರ ನಾವೆಲ್ಲರೂ ಸ್ಥಳಕ್ಕೆ ಹೋಗಿ ಕಾರ ಸಹ ನೊಡಿ ಬಂದಿರುತ್ತೇವೆ. ನನ್ನ ಅಳಿಯ ಕಾರನಲ್ಲಿ ಕರೆದುಕೊಂಡು ಬಂದು ಕೈಯಿಂದ ಕೊರಳಿಗೆ(ಕುತ್ತಿಗೆ) ಹಿಚುಕಿ (ಒತ್ತಿ) ಕೊಲೆ ಮಾಡಿರುತ್ತಾನೆ. ಆತನು ಕೊಲೆ ಮಾಡಿದ ಬಗ್ಗೆ ಯಾರಿಗೂ ಸಂಶಯ ಬರಬಾರದೆಂದು ತನ್ನ ಕಾರನ್ನು ರೊಡಿಗೆ ಪಿಕಾಕ್ ಧಾಬಾದ ಮುಂದೆಹೊಸದಾಗಿಕಟ್ಟಿದ  ಅಂಗಡಿಯ ಎಂಗಲಗೆ ಉದ್ದೇಶ ಪೂರ್ವಕವಾಗಿ ಹೊಡೆದು ಎಕ್ಸಿಡೆಂಟ್ ಮಾಡಿದ ಹಾಗೆ ನಿಲ್ಲಿಸಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 84/2020 ಕಲಂ 279, 304 () ಐಪಿಸಿ ಜೋತೆ 187 ಐ ಎಮ್ ವಿ ಆಕ್ಟ್ :-

ದಿನಾಂಕ 23/12/2020 ರಂದು 2030 ಗಂಟೆಗೆ ಶ್ರೀಮತಿ ಫರಿದಾ ನಿಬತ ಗಂಡ ಮಹಮದ್ ಫಯಾಜೋದ್ದಿನ ಸಾ|| ಓಲ್ಡ್  ಮೈಲೂರು ಬೀದರ ರವರು   ಠಾಣೆಗೆ ಹಾಜರಾಗಿ ನೀಡದ ದೂರಿನ ಸಾರಾಂಶವೆನೆಂದರೆ  ಅವರು ತಮ್ಮ ದೂರಿನಲ್ಲಿ ನನ್ನ ಗಂಡ ಫಯಾಜೋದ್ದಿನ್ ರವರು ಸುಮಾರು 20 ವರ್ಷಗಳಿಂದ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಫೀಲ್ಡ್ ಮ್ಯಾನ ಅಂತಾ ಕೆಲಸ ಮಾಡಿಕೊಂಡು ಇದ್ದರು.   ದಿನಾಂಕ 23/12/2020 ರಂದು ಮುಂಜಾನೆ 8:00 ಗಂಟೆಯ ಸುಮಾರಿಗೆ ನಾಳೆ ನಾರಂಜಾ ಸಕ್ಕರೆ ಕಾರ್ಖಾನೆಯಲ್ಲಿ ಜಿಬಿ ಮೀಟಿಂಗ್ ಇದ್ದ ಕಾರಣ ನಾರಂಜಾ ಸಕ್ಕರೆ ಕಾರ್ಖಾನೆಗೆ ತಮ್ಮ ಹೊಂಡ ಸಿಬಿ ಸೈನ್ ಮೋಟಾರ ಸೈಕಲ್ ನಂ ಕೆಎ-38/ಕ್ಯೂ-2776 ನೇದರ ಮೇಲೆ ಮೈಲೂರದ   ಮನೆಯಿಂದ ನಾರಂಜಾ ಸಕ್ಕರೆ ಕಾರ್ಖಾನೆಗೆ ಹೊಗಿರುತ್ತಾರೆ.      ದಿನಾಂಕ 23/12/2020 ರಂದು ರಾತ್ರಿ 7:30 ಗಂಟೆಯ ಸುಮಾರಿಗೆ ನಾರಂಜಾ ಸಕ್ಕರೆ ಕಾರ್ಖಾನೆಯಲ್ಲಿ ಫಿರ್ಯಾದಿ ಗಂಡನೊಂದಿಗೆ ಫಿಲ್ಡ್ ಮ್ಯಾನ್ ಅಂತಾ ಕೆಲಸ ಮಾಡುವ  ಪರಿಚಯಸ್ಥ ರಾದ ಗೌಸೊದ್ದಿನ್ ತಂದೆ ನವಾಬೊದ್ದಿನ್ ಅಮಲಾಪೂರ ಗ್ರಾಮ ರವರು  ಫೋನ್ ಮಾಡಿ ನಿಮ್ಮ ಗಂಡ ಮಹಮದ್ ಫಯಾಜೋದ್ದಿನ್ ರವರು ಎನ್ ಎಸ್ ಎಸ್ ಕೆ ದದ್ದಾಪೂರ ರೋಡಿನ ಮೇಳೆ ವಾಹನ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ ತಕ್ಷಣ ಘಟನೆ ಸ್ಥಳಕ್ಕೆ ಹೋಗಿ ನೋಡಲು ಅವರ ಹಣೆಯ ಮೇಲೆ ಮತ್ತು ತಲೆಗೆ ಭಾರಿ ರಕ್ತಗಾಯ, ಹಾಗು ಬಲಕಾಲಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.    ಸದರಿ ಘಟನೆ ದಿನಾಂಕ  23/12/2020 ರಂಧು ರಾತ್ರಿ 7:00 ಗಂಟೆಯ ಸುಮಾರಿಗೆ ಹೊಂಡಾ ಸಿಬಿ ಸೈನ್ ಮೋಟಾರ ಸೈಕಲ್ ನಂ ಕೆಎ-38/ಕ್ಯೂ-2776 ನೇದರ ಮೇಲೆ ಕಾರ್ಖಾನೆಯಿಂದ ದದ್ದಾಪೂರ ಮಾರ್ಗವಾಗಿ ಬೀದರಕ್ಕೆ ಬರುತ್ತಿರುವಾಗ ದದ್ದಾಪೂರ ಕಡೆ ಯಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಹಾಗು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಎನ್ ಎಸ್ ಎಸ್ ಕೆ ದದ್ದಾಪೂರ ರೋಡಿನ ದದ್ದಾಪೂರ ಗ್ರಾಮದ ನರಸಿಂಗರಾವ ಬಿರಾದಾರ ರವರ ಹೊಲದ ಹತ್ತಿರ ಮಹಮದ್ ಫಿಯಾಜೋದ್ದಿನ್ ರವರ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿದ್ದರಿಂದ ಅಪಘಾತ ವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 85/2020 ಕಲಂ 457, 380 ಐಪಿಸಿ :-

ದಿನಾಂಕ 23-12-2020 ರಂದು 0830 ಗಂಟೆಗೆ ಫಿರ್ಯಾದಿ ಶ್ರೀ ಖುಷಾಲ ತಂದೆ ಹಾವಣ್ಣಾ ಕೋರೆ ಸಾ: ಕೌಠಾ(ಬಿ) ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 22-12-2020 ರಂದು ಫಿರ್ಯಾದಿ ಮಗಳು ಪ್ರೀಯಾ ಇವಳಿಗೆ ಆರಾಮ ಇಲ್ಲದ ಕಾರಣ ಹೆಂಡತಿ ಹಾಗೂ ಮಕ್ಕಳಿಬ್ಬರೂ ಬೀದರ ಆಸ್ಪತ್ರೆಗೆ ಹೋಗಿ ಅಲ್ಲಿ ಬೀದರನಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿರುತ್ತಾರೆ. ರಾತ್ರಿ 2100 ಗಂಟೆಗೆ  ಮನೆಯಲ್ಲಿ ಊಟ ಮಾಡಿ ಮನೆಯ ಹೊರಗಿನಬಾಗಿಲು ಮುಚ್ಚಿ ಕೀಲಿ ಹಾಕಿಕೊಂಡು   ಅಣ್ಣಾ ಸಂಗಪ್ಪಾ ರವರ ಮನೆಗೆ ಹೋಗಿ ಅಲ್ಲಿಯ ಮಲಗಿಕೊಂಡಿದ್ದು ದಿನಾಂಕ 23-12-2020 ರಂದು ನಸುಕಿನ ಜಾವ 5:00 ಗಂಟೆಗೆ ಎದ್ದು ಮನೆಗೆ ಹೋಗಿದ್ದಾಗ ಮನೆಯ ಹೊರ ಬಾಗಿಲಿನ ಕಿಲಿ ಮುರಿದಿದ್ದು ತಟ್ಟಿಗಳು ಮುಚ್ಚಿದ್ದು ಇರುತ್ತವೆ ಆಗ ನಾನು ತಟ್ಟಿಗಳು ತೆರೆದು ಒಳಗೆ ಹೋಗಿ ನೊಡಿದಾಗ ಎದುರಿನ ಮನೆಯ ಬಾಗಿಲು ತಟ್ಟಿ ತೆರೆದಿದ್ದು ಅದರ ಒಳಗೆ ಹೋಗಿ ನೋಡಲು ಅದರಲ್ಲಿದ್ದ ಅಲ್ಮಾರಿಯ ತಟ್ಟಿಗಳು ಒಡೆದು ತೆರೆದಿದ್ದ ಸ್ಥೀತಿಯಲ್ಲಿದ್ದು ಅಲ್ಮಾರೆಯಲ್ಲಿದ್ದ ಬಟ್ಟೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ ಅಲ್ಮಾರಿಯಲ್ಲಿನ ಲಾಕರ ತೆರೆದಿದ್ದುರುತ್ತದೆ. ಲಾಕರದಲ್ಲಿ ಇಟ್ಟಿದ್ದ 1] 4 ತೊಲೆಯ ಎರಡೂ ಬಂಗಾರದ ಬಳೆ ಅಕಿ 1,20,000/-ರೂ ನೇದು 2] 4 ತೊಲೆ ಬಂಗಾರದ ಕೊರಳಿನಲ್ಲಿ ಹಾಕುವ ಸರ ಅಕಿ 1,20,000/-ರೂ. 3] 1 ತೊಲೆ ಬಂಗಾರದ ನೆಕಲೇಸ್ ಅಕಿ 20,000/-ರೂ. ನೇದು 4] 3 ಗ್ರಾಂ ನ ಎರಡೂ ಕಿವಿ ಬಂಗಾರದ  ಝುಮಕಾ  ಅಕಿ 9,000/-ರೂ. 5] 5 ಗ್ರಾಂ ಉಳ್ಳ ಬಂಗಾರದ ಎರಡೂ ಉಂಗರುಗಳು ಅಕಿ 25,000/-ರೂ ನೇದು 6] 5 ಗ್ರಾಂ ಬಂಗಾರದ ಚೈನ ಸರ ಅಕಿ 10,000/-ರೂ. ಮತ್ತು 7] ನಗದು ಹಣ 25,000/-ರೂ ನೇದವು ಇದ್ದಿರುವುದಿಲ್ಲಾ   ಯಾರೋ ಅಪರಿಚಿತ ಕಳ್ಳರು ದಿನಾಂಕ 22-12-2020 ರಂದು 9:00 ಪಿಎಂ ಗಂಟೆಯಿಂದ ದಿನಾಂಕ 23-12-2020 ರಂದು 5:00 ಎ ಎಂ ಗಂಟೆ ಮಧ್ಯಾವಧಿಯಲ್ಲಿ ನಮ್ಮ ಮನೆಯ ಬೀಗಮುರಿದು ನಮ್ಮ ಮನೆಯಲ್ಲಿ ನುಗ್ಗಿ ಮನೆಯ ಅಲ್ಮಾರಿಯಲ್ಲಿದ್ದ 3,04,000/-ರೂ ಮೌಲ್ಯದ ಬಂಗಾರದ ಒಡೆಗಳು ಹಾಗೂ ನಗದು ಹಣ 25,000/-ರೂ. ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.