ಅಪಘಾತ ಪ್ರಕರಣಗಳು
:
ನರೋಣಾ ಠಾಣೆ : ದಿನಾಂಕ 13/09/2019 ರಂದು ಸಾಯಂಕಾಲ
ಶ್ರೀ ರಾಣಪ್ಪ ತಂದೆ ಮಾಪಣ್ಣ ಕಂಭಾ ರವರು ಮನೆಯಲ್ಲಿರುವಾಗ ನನ್ನ
ತಮ್ಮ ನಮ್ಮೂರಿನ ಕ್ರಾಸ್ ಹತ್ತಿರ ಹೋಗಿ ಬರುತ್ತೇನೆ ಅಂತಾ ಹೇಳಿ ಹೊರಟು ಹೊದನು ನಂತರ ರಾತ್ರಿ 8 ಗಂಟೆ ಸುಮಾರಿಗೆ ನಮ್ಮೂರಿನ ಗೌತಮ ತಂದೆ ರಾಣಪ್ಪ ವಗ್ಗೆ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಿನ್ನ ತಮ್ಮ
ಕುಮಾರ ಈತನಿಗೆ ಲಾಡ
ಚಿಂಚೋಳಿ ಕ್ರಾಸ್ ದಾಟ
ಸಲ್ಪ ಮುಂದೆರಸ್ತೆ ಅಪಘಾತವಾಗಿ ಭಾರಿ
ರಕ್ತಗಾಯ ಹಾಗೂ ಗುಪ್ತಗಾಯವಾಗಿ ಮೃತ ಪಟ್ಟಿರುತ್ತಾನೆ
ನೀನು ಬೇಗ
ಭಾ
ಅಂತ
ತಿಳಿಸಿದಾಗ ನಾನು ಹಾಗೂ ನಮ್ಮೂರಿನ ಪ್ರಭು ತಂದೆ ವಿಠಲ ಶಿಲ್ಡ ಮತ್ತು ಈರಣ್ಣ ತಂದೆ ಕಾಶಿರಾಯ ಎಲ್ಲರು ಕೂಡಿ ಸ್ವಲ್ಪ ಸಮಯದ ನಂತರ ಲಾಡ
ಚಿಂಚೋಳಿ ಕ್ರಾಸ್ ಹತ್ತಿರ ಹೋಗಿ ನೋಡಲಾಗಿ ಕ್ರಾಸ್ ದಾಟಿ ಸುಮಾರು 30 ಫೀಟ್ ಅಅಂತರದಲ್ಲಿ ರೋಡಿನ
ಮೇಲೆ ನನ್ನ ತಮ್ಮ ಕುಮಾರ ಈತನಿಗೆ ಎಡ
ಹಣೆ
ಹತ್ತಿರ ಭಾರಿ ರಕ್ತಗಾಯ ಎರಡು ಕೈಗಳಿಗೆ ಎದೆಗೆ ತರಚಿದ ರಕ್ತಗಾಯ ಬಲಗಾಲ ತೊಡೆ ಹತ್ತಿರ ಭಾರಿ ಗುಪ್ತಗಾಯವಾಗಿ ಕಾಲು ಮುರಿದಂತೆ
ಕಂಡು ಬಂದಿದ್ದು ಸ್ತಳದಲ್ಲಿಯೇ ಮೃತಪಟ್ಟಿರುತ್ತಾನೆ ಅಲ್ಲೇ
ಸ್ಥಳದಲ್ಲಿದ್ದ ನಮ್ಮೂರಿನ ಗೌತಮ
ಈತನಿಗೆ ವಿಚಾರಿಸಲಾಗಿ ಇಂದು ಆಳಂದದಲ್ಲಿ
ಖಾಸಗಿ ಕೆಲಸವಿದ್ದ ಕಾರಣ ಮೋ/ಸೈಕಲ
ಮೇಲೆ ಹೋಗಿ ಮರಳಿ ಮನೆಗೆ ಬರುವಾಗ ಚಿಂಚೋಳಿ ಕ್ರಾಸ್ ಹತ್ತಿರ ರಾತ್ರಿ ಬರುವಾಗ ಕಲಬುರಗಿ ಆಳಂದ ಮುಖ್ಯ ರಸ್ತೆಯಿಂದ ಕಲಬುರಗಿ ಕಡೆಯಿಂದ ಒಬ್ಬ ಟಾಟಾ ಗೂಡ್ಸ ವಾಹನದ ಚಾಲಕ ತನ್ನ ವಾಹನವನ್ನು ಅತೀ
ವೇಗ
ಹಾಗೂ ನಿಸ್ಕಾಳಜಿತನದಿಂದ ಮಾನವ ಜೀವಕ್ಕೆ
ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರೋಡಿನ
ಪಕ್ಕದಿಂದ ನಡೆದುಕೊಂಡು ಹೋರಟಿದ್ದ ನಿಮ್ಮ
ತಮ್ಮ ಕುಮಾರನಿಗೆ ಡಿಕ್ಕಿ ಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ
ಆತನಿಗೆ ಹೋಗಿ ಬರುವ ವಾಹನಗಳ ಲೈಟಿನ ಬೆಳಕಿನಲ್ಲಿ ನೋಡಿರುತ್ತೇನೆ ಆತನಿಗೆ
ನಡಿದರೆ ಗುರುತಿಸುತ್ತೇನೆ, ಅಂತಾ ತಿಳಿಸಿದ್ದು
ಟಾಟಾ ಗೂಡ್ಸ ವಾಹನದ ನಂಬರ ನೋಡಲಾಗಿ ಕೆ.ಎ22 ಎ5410
ಅಂತಾ ಇರುತ್ತದೆ, ಕಾರಣ ಮಾನ್ಯರವರು ಈ
ಬಗ್ಗೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಡಿ ಠಾಣೆ : ಶ್ರೀ ಉಮೇಶ ತಂದೆ ಮಾಹಾದೇವಪ್ಪ
ಹುಬ್ಬಳ್ಳಿ ಸಾ:ನಾಲವಾರ ರವರು ದಿನಾಂಕ 13/09/2019 ರಂದು ರಾತ್ರಿ ನಾನು ಮತ್ತು ನಮ್ಮ ಗ್ರಾಮದ ನಾಗರಾಜ
ತಂದೆ ಬಸವರಾಜ ಕುಲಕುಂದಿ ರವರು ಕೂಡಿಕೊಂಡು ನನ್ನ ಮೊಟರ ಸೈಕಲ ನಂಬರ ಕೆಎ-32 ಇಕ್ಯೂ-2086 ನೇದ್ದರ
ಮೇಲೆ ಕುಳಿತುಕೊಂಡು ನಾಲವಾರ ಸ್ಟೇಷನ ಆಚೆ ಇರುವ ಆನಂದ ಮಾಲಕರ ದಾಬಾಕ್ಕೆ ಹೋಗಿ ಊಟ ಮುಗಿಸಿಕೊಂಡು
ಮರಳಿ 10-30 ಪಿ.ಎಮ್ ಸುಮಾರು ಮೊಟರ ಸೈಕಲ ಮೇಲೆ ನಮ್ಮೂರಿಗೆ ಬರುವ ಕಾಲಕ್ಕೆ ನಮ್ಮೂರಿನ ಕ್ರಾಸ ಹತ್ತಿರ
ರೊಡಿಗೆ ರೊಡ ಕ್ರಾಸ ಮಾಡಬೇಕೆನ್ನುವಷ್ಟರಲ್ಲಿ ಕುಂಬಾರಹಳ್ಳಿ ಕಡೆಯಿಂದ ಒಂದು ವಾಹನ ಚಾಲಕ ವಾಹನವನ್ನು
ಅತೀ ವೇಗ ಹಾಗೂ ಆಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ನಮ್ಮ ಮೊಟರ ಸೈಕಲ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ
ನಾವು ಕೆಳಗಡೆ ಬಿಳುವಾಗ ದಾರಿಗೆ ಹೊರಟ ನಮ್ಮ ಗ್ರಾಮದ ಸಿದ್ದರಾಜ ತಂದೆ ಸಂಗಣ್ಣಾ ಲಾಡ್ಲಾಪೂರ ಇತನಿಗೆ
ಬೈಕ ಬಡಿದು ಆತನು ಸಹ ಕೆಳಗಡೆ ಬಿದ್ದನು. ನಂತರ ನಾವು ನಿಧಾನವಾಗಿ ಎದ್ದು ಕುಳಿತುಕೊಂಡೆವು. ವಾಹನ
ಚಾಲಕನು ಮುಂದೆ ಹೋಗಿ ನಿಲ್ಲಿಸಿದ್ದು ನೋಡಲಾಗಿ ಟಿಪ್ಪರ ಇದ್ದು ಅದರ ನಂಬರ ಕಾಣಿಸಲಿಲ್ಲ. ಟಿಪ್ಪರ
ಹಿಂದುಗಡೆ SRC ಅಂತಾ ಬರೆದಿರುತ್ತದೆ. ಟಿಪ್ಪರ ಚಾಲಕನು ಕೆಳಗೆ ಇಳಿದು ನಮಗೆ ನೋಡಿ ಮತ್ತೆ ತನ್ನ ವಾಹನ ತೆಗೆದುಕೊಂಡು
ಯಾದಗೀರ ಕಡೆಗೆ ಹೊರಟು ಹೋದನು. ನನ್ನ ತಲೆಯ ಎಡಗಡೆ ಹಿಂದೆ, ಬಲಗಣ್ಣಿನ ಮೇಲೆ ಹಾಗೂ ಕೆಳಗಡೆ ಬಲಗಾಲ ಕೆಳಗೆ ರಕ್ತಗಾಯವಾಗಿ, ನಾಗರಾಜ ಇತನಿಗೆ ಮುಗಿನ ಮೇಲೆ ರಕ್ತಗಾಯವಾಗಿ, ತಲೆಗೆ ಭಾರಿ ಗುಪ್ತಗಾಯವಾಗಿದ್ದು
ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಿದ್ದರಾಜ ಇತನಿಗೆ ಮೈ ಕೈಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿದ್ದವು.ಆಗ
ಘಟನೆ ನೋಡಿದ ಸಾಬಣ್ಣಾ ತಂದೆ ಶಿವರಾಯ ರವರು ಬಂದು ನೋಡಿ ನಮಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ವಾಡಿ
ಸರ್ಕಾರಿ ಆಸ್ಪತ್ರೆಯ ವರೆಗೆ ತಂದು ಅಲ್ಲಿಂದ ಅಂಬುಲೇನ್ಸದಲ್ಲಿ ಕಲಬುರಗಿ ಯುನೈಟೆಡ ಆಸ್ಪತ್ರೆಗೆ ತಂದು
ಸೇರಿಕೆ ಮಾಡಿದ್ದು ಇರುತ್ತದೆ.ಟಿಪ್ಪರ ಹಾಗೂ ಚಾಲಕನಿಗೆ ನೋಡಿದ್ದು ಮತ್ತೆ ನೋಡಿದ್ದಲ್ಲಿ ಗುರ್ತಿಸುತ್ತೆನೆ. ಟಿಪ್ಪರ ಚಾಲಕನ ಅಲಕ್ಷತನದಿಂದ ಈ ಘಟನೆ ಸಂಭವಿಸಿದ್ದು ಆತನ
ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಕಳವು
ಪ್ರಕರಣ :
ರೇವೂರ ಠಾಣೆ : ಶ್ರೀ ಗೋಪಿನಾಥ ತಂದೆ ಹಾಮು ರಾಠೋಡ ಉ : ಅತನೂರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮುಖ್ಯ ಶೀಕ್ಷಕ ಸಾ: ಕಿಣಗಿ ತಾಂಡಾ ತಾ :
ಕಮಲಾಪೂರ ಜಿ: ಕಲಬುರಗಿ ರವರು ದಿನಾಂಕ:14/09/2019 ರಂದು 07.45 ಎ,ಎಮ್ ಕ್ಕೆ ನಾನು ಹಾಗು ನಮ್ಮ ಸಹ ಶೀಕ್ಷಕರು ಶಾಲೆಗೆ ಬಂದಾಗ ಶಾಲೆಯ ಕಂಪ್ಯೂಟರ ಕೋಣೆಯ ಗೇಟಿನ
ಬಾಗಿಲು ಅರ್ಧ ತೆರೆದಿತ್ತು. ನಾವು ಕೋಣೆಯ ಹತ್ತೀರ ಹೋಗಿ ನೋಡಲಾಗಿ ಅದರ ಬಾಗಿಲಿಗೆ ಹಾಕಿದ 02
ಕೀಲಿಗಳನ್ನು ಕಲ್ಲಿನಿಂದ ಜಜ್ಜಿ ಮುರಿದಿದ್ದು ಇತ್ತು. ಒಳಗೆ ಹೋಗಿ ನೋಡಲಾಗಿ ಸರಕಾರಿದಿಂದ
ವಿದ್ಯಾರ್ಥಿಗಳ ಕಂಪ್ಯೂಟರ ಕಲಿಕೆಗಾಗಿ ಮಂಜೂರು ಆದ 05 HP ಕಂಪನಿಯ
ಕಂಪ್ಯೂಟರಗಳಲ್ಲಿ 03 ಮಾನಿಟರ್ ನಂಬರ 01) CNC-172P99-238900010438197001. 02) CNC-172P8IX38900010438197001 ಹಾಗೂ 03) CNC-712PQBG38900010438197001. ಅ.ಕಿ.9,000 ರೂಪಾಯಿ, ಹಾಗೂ 03 ಸಿ.ಪಿ.ಯು ಅ.ಕಿ. 12000 ರೂಪಾಯಿ ಮತ್ತು 05 ಕೀ-ಬೋರ್ಡಗಳು ಅ.ಕಿ. 1,500 ರೂಪಾಯಿ. ಒಟ್ಟು 22,500/- ರೂಪಾಯಿ ಬೆಲೆಬಾಳುವ ಸಾಮಾನುಗಳನ್ನು ಯಾರೋ ಕಳ್ಳರು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕ:13/09/2019 ರಂದು 05.30 ಪಿ,ಎಮ್ ದಿಂದ ಇಂದು ದಿನಾಂಕ:14/09/2019 ರಂದು 07.45 ಎ,ಎಮ್ ಮಧ್ಯದ ಅವಧಿಯಲ್ಲಿ ಅತನೂರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಕಂಪ್ಯೂಟರ್ ಕೋಣೆಯ
ಗೇಟಿನ ಬಾಗಿಲು ಮುರಿದು HP
ಪಂಪನಿಯ 03 ಮಾನಿಟರ್, 03 ಸಿ.ಪಿ.ಯು ಹಾಗೂ 05 ಕೀ-ಬೋರ್ಡ
ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಋಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.