Police Bhavan Kalaburagi

Police Bhavan Kalaburagi

Thursday, July 11, 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ :  ದಿನಾಂಕ: 09/07/2019 ರಂದು ನರೋಣಾ ಪೊಲೀಸ ಠಾಣಾ ವ್ಯಾಪ್ತಿಯ ಮುನ್ನಳ್ಳಿ ಗ್ರಾಮದಲ್ಲಿರುವ  ಬಸ್‌ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ದಾಳಿ ಕುರಿತು ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ. ನರೋಣಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮುನ್ನಳ್ಳಿ ಗ್ರಾಮದಲ್ಲಿರುವ  ಬಸ್‌ ನಿಲ್ದಾಣದ ದೆವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಬಸ್‌ ನಿಲ್ದಾಣದ  ಮುಂದಿನ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೊಸ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಚಿದಾನಂದ ತಂದೆ ಗುರುಪಾದಪ್ಪಾ ಬುಜುರ್ಕೆ, ಸಾ:ಮುನ್ನಳ್ಳಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1]ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2)ಒಂದು ಬಾಲ ಪೆನ್‌ 3)ನಗದು ಹಣ 930/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಠಾಣೆಯ ಗುನ್ನೆ ನಂ:96/2019 ಕಲಂ 78(3) ಕೆ.ಪಿ ಆಕ್ಟ & 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಮದುವೆಯಾಗುತ್ತೆನೆ ಅಂತಾ ನಂಬಿಸಿ ಅತ್ಯಾಚಾರ ವೆಸಗಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 10-07-2019 ರಂದು ಕುಮಾರಿ ಮ್ಮೂರ ಕನ್ಯಾ ಪ್ರೌಡ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಈಗ ಒಂದು ವರ್ಷದಿಂದ ನಮ್ಮ ತಾಂಡಾದ ನಮ್ಮ ಸಂಬಂಧಿಕ ಓಂಗಿರಿ ತಂದೆ ಲಕ್ಷ್ಮಣ ರಾಠೋಡ ಇವನು ನಮ್ಮ ಮನೆಯಲ್ಲಿ ಯಾರು ಇರದ ಸಮಯ ನೋಡಿ ನಮ್ಮ ಮನೆಗೆ ಬಂದು ನನಗೆ ಮದುವೆಯಾಗುತ್ತೇನೆ ಅಂತಾ ಹೇಳುವುದು ಮತ್ತು ನನ್ನ ಮೈ ಕೈ ಮುಟ್ಟುತ್ತಾ ಹಲುವಾರು ಬಾರಿ ನನಗೆ ನಮ್ಮ ಮನೆಯಲ್ಲಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಭೊಗ ಮಾಡುತ್ತಾ ಬಂದಿರುತ್ತಾನೆ, ನಾನು ಅಂಜಿ ತಿಳಿಯದೆ ನಮ್ಮ ಮನೆಯಲ್ಲಿ ಹೇಳಿರಲಿಲ್ಲಾ, ಈಗ ಎರಡು ತಿಂಗಳ ಹಿಂದೆ ದಿನಾಂಕ 05-05-2019 ರಂದು ಮದ್ಯಾಹ್ನ 3;00 ಗಂಟೆ ಸುಮಾರಿಗೆ ನಾನು ಒಬ್ಬಳೆ ಮನೆಯಲ್ಲಿದ್ದಾಗ ಓಂಗಿರಿ ಇವನು ನಮ್ಮ ಮನೆಗೆ ಬಂದು ನನ್ನೊಂದಿಗೆ ಸ್ವಲ್ಪ ಹೊತ್ತು ಮಾತನಾಡುತ್ತಾ ಒಮ್ಮೇಲೆ ನನ್ನ ಎದೆಭಾಗವನ್ನು ಮುಟ್ಟಿ ನನಗೆ ಲೈಂಗಿಕ ಸಂಭೋಗ ಮಾಡಿ ಅಲ್ಲಿಂದ ಹೋದನು, ನಂತರ ನಾನು ಬಗ್ಗೆ ಮನೆಯಲ್ಲಿ ಹೇಳಿದರೆ ನನಗೆ ಬೈಯುತ್ತಾರೆ ಅಂತಾ ಅಂಜಿ ಸುಮ್ಮನಿದ್ದೇ, ಈಗ ಕೆಲವು ದಿನಗಳಿಂದ ಓಂಗಿರಿ ಇವನು ನಾನು ನಿನಗ ಮದುವೆಯಾಗುವುದಿಲ್ಲಾ ನೀನು ಬೆರೆಕಡೆ ಯಾರಿಗಾದರು ಮದುವೆಯಾಗು ಅಂತಾ ಅನ್ನುತ್ತಿದ್ದರಿಂದ ನಾನು ಎಲ್ಲಾ ಘಟನೆಯ ಬಗ್ಗೆ ನಮ್ಮ ತಂದೆ ತಾಯಿಗೆ ತಿಳಿಸಿ ಹೇಳಿರುತ್ತೇನೆ, ನಾನು ಅಪ್ರಾಪ್ತಳಿರುವುದು ಗೊತ್ತಿದ್ದು ಸಹ ಮೇಲ್ಕಂಡ ಓಂಗಿರಿ ತಂದೆ ಲಕ್ಷ್ಮಣ ರಾಠೋಡ ಇವನು ನನಗೆ ಮದುವೆಯಾಗುತ್ತೇನೆ ಅಂತಾ ಅನ್ನುತ್ತಾ ನನ್ನ ಮೈ ಕೈ ಮುಟ್ಟಿ ನನಗೆ ಮೇಲಿಂದ ಮೆಲೆ ಲೈಂಗಿಕ ಸಂಭೋಗ ಮಾಡಿರುತ್ತಾನೆ, ಸದ್ಯ ನನಗೆ ಮದುವೆಕೂಡ ಆಗುವುದಿಲ್ಲಾ ಅಂತಾ ಅನ್ನುತ್ತಿರುತ್ತಾನೆ, ಆದ್ದರಿಂದ ಓಂಗಿರಿಯ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆ ಗುನ್ನೆ ನಂ 76/2019  ಕಲಂ 376 (3) (2) (ಎನ್), ಐಪಿಸಿ ಮತ್ತು 4,6 ಪೊಕ್ಸೊ ಕಾಯ್ದೆ 2012 ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.