Police Bhavan Kalaburagi

Police Bhavan Kalaburagi

Monday, May 7, 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸರುಬಾಯಿ ಗಂಡ ಪಾಂಡು ಕಾಳೆ ಸಾ|| ದುಧ್ಧಣಗಿ ರವರ ಗಂಡ ಮತ್ತು ದೇವಜಿ ಕಾಳೆ ಅಂತ ಇಬ್ಬರು ಖಾಸ ಅಣ್ಣ ತಮ್ಮಂದಿರಿದ್ದು ಇಬ್ಬರಿಗೂ ತಲಾ 10 ಎಕರೆಯಂತೆ ಜಮೀನು ಪಾಲಿಗೆ ಬಂದಿರುತ್ತದೆ. ನಾವು ಸದರಿ ಜಮೀನಿನಗೆ ಭಿಮಾ ನದಿಯಿಂದ ಪೈಪಲೈನ ಮಾಡಿಸಿ ನಿರಾವರಿ ಮಾಡಿರುತ್ತೇವೆ. ನಮ್ಮ ಮತ್ತು ನನ್ನ ಭಾವ ದೇವಜಿ ರವರ ಜಮೀನು ಒಂದಕ್ಕೊಂದು ಹೊಂದಿಕೊಂಡಿದ್ದು, ಇಬ್ಬರ ಒಟ್ಟಿನಲ್ಲಿರುವ ಹೊಲದ ಬಾಂದಾರಿಯ ಬಗ್ಗೆ ಬಹಳ ದಿವಸಗಳಿಂದ ತಕರಾರು ಇರುತ್ತದೆ. ಸದರಿ ಬಾಂದಾರಿ ವಿಷಯದಲ್ಲಿ ದೇವಜಿ ಆಗಾಗ ನನ್ನ ಗಂಡನೊಂದಿಗೆ ಜಗಳ ಮಾಡುತ್ತಲೆ ಬಂದಿರುತ್ತಾನೆ.     ದಿನಾಂಕ 30-04-2018 ರಂದು ಸಾಯಂಕಾಲ 5:30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡ ಇಬ್ಬರು ನಮ್ಮ ಹೊಲದಲ್ಲಿರುವ ಮೆಟಗಿಯ ಹತ್ತಿರ ಇದ್ದೆವು. ಅದೆ ಸಮಯಕ್ಕೆ ದೇವಜಿ ಕಾಳೆ ಎಂಬಾತನು ಒಂದು ಟ್ಯಾಕ್ಟರ ಬಾಡಿಗೆಗೆ ತಗೆದುಕೊಂಡು ಬಂದು ನಮ್ಮ ಮತ್ತು ಆತನ ಮದ್ಯ ಇರುವ ಹೊಲದ ಬಾಂದಾರಿ ಒಡೆಸುತ್ತಿದ್ದನು. ಆಗ ನನ್ನ ಗಂಡನು ದೇವಜಿಗೆ ಬಾಂದಾರಿ ಒಡೆಸಬೇಡ ಬಾಂದಾರಿ ಒಡೆದರೆ ನಿನ್ನ ಹೊಲದಲ್ಲಿನ ನೀರು ನಮ್ಮ ಹೊಲದಲ್ಲಿ ಬಂದು ನನ್ನ ಹೊಲದಲ್ಲಿನ ಮಣ್ಣು ಕಿತ್ತಿ ಹೋಗಿ ನನ್ನ ಹೊಲ ಹಾಳಾಗುತ್ತದೆ ಅಂತ ಹೇಳಿದರೂ ಕೇಳದೆ ಬಾಂದಾರಿ ಒಡೆಸುತ್ತಿದ್ದನು. ಸದರಿ ವಿಷಯದಲ್ಲಿ ನನ್ನ ಗಂಡ ಮತ್ತು ದೇವಜಿ ಇಬ್ಬರಿಗೂ ಜಗಳವಾಗಿ ಒಬ್ಬರಿಗೊಬ್ಬರು ಕೈಯಿಂದ ಹೊಡೆದಾಡಿರುತ್ತಾರೆ. ಆಗ ನಾನು ಮತ್ತು ಟ್ಯಾಕ್ಟರ ಚಾಲಕ ಹಾಗೂ ಪಕ್ಕದ ಹೊಲದವರಾದ ಹಣಮಂತ ಕಾಳೆ ಮತ್ತು ಆತನ ಹೆಂಡತಿ ಸಕ್ಕುಬಾಯಿ ಕಾಳೆ ರವರೆಲ್ಲರೂ ಜಗಳ ಬಿಡಿಸಿರುತ್ತೇವೆ.ನಂತರ ಸಾಯಂಕಾಲ 6:00 ಗಂಟೆಯ ಸುಮಾರಿಗೆ ದೇವಜಿ ತನ್ನ ಮೆಟಗಿಗೆ ಹೋಗಿ ಒಂದು ಚಾಕು ಮುಚ್ಚಿಟ್ಟುಕೊಂಡು ಬಂದು ಮತ್ತೆ ನನ್ನ ಗಂಡನೊಂದಿಗೆ ಜಗಳ ತಗೆದು ಬೋಸಡಿ ಮಗನೆ ನನ್ನ ಹೊಲದಲ್ಲಿನ ಬಾಂದಾರಿ ನಾನು ಒಡೆಸುತ್ತೇನೆ ಬೇಡ ಅಂತ ಹೇಳುವನು ನಿನ್ಯಾರಲೆ. ನನ್ನ ಕೆಲಸಕ್ಕೆ ಅಡ್ಡಿ ಪಡಿಸಿದರೆ ನಿನ್ನ ಕೊಲೆ ಮಾಡಿಯೆ ಬಿಡುತ್ತೇನೆ ಅಂತ ನನ್ನ ಗಂಡನ ಕೊಲೆ ಮಾಡುವ ಉದ್ದೇಶದಿಂದಲೆ ತನ್ನಲ್ಲಿದ್ದ ಚಾಕು ತಗೆದು ನನ್ನ ಗಂಡನಿಗೆ ಹೊಡೆಯಲು ಬಂದನು. ಆಗ ನನ್ನ ಗಂಡನು ಅವನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಅವನನ್ನು ಬೆನ್ನಟ್ಟಿ ನೆಲಕ್ಕೆ ಕೆಡವಿ ಚಾಕುವಿನಿಂದ ಹೊಟ್ಟೆಗೆ ಮತ್ತು ಬೆನ್ನಿಗೆ ಹೊಡೆದು ಭಾರಿ ರಕ್ತಗಾಯಗಳು ಪಡಿಸಿರುತ್ತಾನೆ. ಆಗ ನಾನು ಮತ್ತು ಟ್ಯಾಕ್ಟರ ಚಾಲಕ ಹಾಗೂ ಪಕ್ಕದ ಹೊಲದವರಾದ ಹಣಮಂತ ಕಾಳೆ ಮತ್ತು ಆತನ ಹೆಂಡತಿ ಸಕ್ಕುಬಾಯಿ ಕಾಳೆ ರವರೆಲ್ಲರೂ ಕೂಡಿಕೊಂಡು ನನ್ನ ಗಂಡನಿಗೆ ಹೊಡೆಯುವುದನ್ನು ಬಿಡಿಸಿರುತ್ತೇವೆ. ನನ್ನ ಗಂಡನ ಹೊಟ್ಟೆಗೆ ಮತ್ತು ಬೆನ್ನಿಗೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿದ್ದರಿಂದ, ರಕ್ತ ಸೋರದಂತೆ ಬಟ್ಟೆ ಕಟ್ಟಿ ಊರಿಗೆ ಹೋಗಿ ನಮ್ಮ ಅಣ್ಣ ತಮ್ಮಕಿಯ ಭಾವನ ಮಗನಾದ ಭಾಗಣ್ಣ ತಂದೆ ಹಣಮಂತ ಕಾಳೆ ಎಂಬಾತನಿಗೆ ತಿಳಿಸಿ ಅವನ ಮೋಟಾರ ಸೈಕಲ ಮೇಲೆ ನಾನು ಮತ್ತು ಭಾಗಣ್ಣ ಇಬ್ಬರು ನಮ್ಮ ಹೊಲಕ್ಕೆ ಬಂದ ನಂತರ ಭಾಗಣ್ಣನು ನನ್ನ ಗಂಡನಿಗೆ ಚಿಕಿತ್ಸೆಗಾಗಿ ಮೋಟರ ಸೈಕಲ ಮೇಲೆ ಅಫಜಲಪೂರಕ್ಕೆ ಕರೆದುಕೊಂಡು ಬಂದಿರುತ್ತಾನೆ. ಈ ವಿಷಯವನ್ನು ನಾನು ಅಫಜಲಪೂರದಲ್ಲಿರುವ ನಮ್ಮ ಸಂಭಂದಿಕರಾದ ದಿಗಂಬರ ಮರಾಠ, ಜೋತಿಬಾ ಮರಾಠ, ಮಹಾಂತೇಶ ರವರಿಗೆ ಪೋನ ಮಾಡಿ ತಿಳಿಸಿರುತ್ತೇನೆ. ಭಾಗಣ್ಣನು ನನ್ನ ಗಂಡನಿಗೆ ಅಫಜಲಪೂರಕ್ಕೆ ಕರೆದುಕೊಂಡು ಬಂದ ನಂತರ ಸದರಿಯವರೆಲ್ಲರೂ ನನ್ನ ಗಂಡನಿಗೆ ಮಹೇಶ ಅವದೆ ಎಂಬಾತನ ಕಾರಿನಲ್ಲಿ ಕಲಬುರಗಿಗೆ ಕರೆದುಕೊಂಡು ಹೋಗಿ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ನನ್ನ ಗಂಡನ ಹೊಟ್ಟೆಗೆ ಆಗಿರುವ ಗಾಯದ ಬಗ್ಗೆ ಡಾಕ್ಟರರು ಆಫರೇಷನ್ ಮಾಡಿದ್ದು ದಿನದಿಂದ ದಿನಕ್ಕೆ ನನ್ನ ಗಂಡನ ಆರೋಗ್ಯ ಹದಗೆಡುತ್ತಾ ಬಂದಿದ್ದರಿಂದ ನನ್ನ ಗಂಡನಿಗೆ ದವಾಖಾನೆಯಲ್ಲಿ ಸೇರಿಕೆ ಮಾಡುವಾಗ ಎನು ಬರೆಸಿದ್ದಾರೆ ಎಂಬುದು ನನಗೆ ಗೊತ್ತಾಗಿರಲಿಲ್ಲ. ಮತ್ತು ನನ್ ಗಂಡನಿಗೆ ಆಗಿರುವ ಗಾಯಗಳಿಂದ ನಾನು ದುಖ:ದಲ್ಲಿ ಇದ್ದುದ್ದರಿಂದ ನನಗೆ ಪೊಲೀಸ್ ಕೇಸ್ ಮಾಡಬೆಕೆಂಬ ಬಗ್ಗೆ ಗೊತ್ತಾಗಿರುವುದಿಲ್ಲ. ನನ್ನ ಗಂಡನಿಗೆ ಚಿಕಿತ್ಸೆ ಫಲಕಾರಿ ಆಗದೆ ನಿನ್ನೆ ದಿನಾಂಕ 04-05-2018 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ಕಲಬುರಗಿಯ ಗಂಗಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎತ್ತುಗಳ ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶಿವರಾಜ ತಂದೆ ಶರಣಪ್ಪ ಹೂಗಾರ ಸಾ|| ಯಡ್ರಾಮಿ ತಾ|| ಜೇವರ್ಗಿ ರವರು ಯಡ್ರಾಮಿ ಸಿಮಾಂತರದ ಹೊಲದಲ್ಲಿ ದಿನಾಂಕ 30-04-2018 ರಂದು 02 ;00 .ಎಂ ದಿಂದ 05 ;00 .ಎಂ ಮದ್ಯದಲ್ಲಿ ಎರಡು ಎತ್ತುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳುವಾದ ಎತ್ತುಗಳು ಬಿಳಿ ಬಣ್ಣದ್ದಿದ್ದು, ನೆಟ್ಟನೆ ಕೋಡು ಇರುತ್ತವೆ, ಎತ್ತುಗಳ ಅ ;ಕಿ ; 42,000/- ರೂ ಇರುತ್ತದೆ. ಸದರಿ ಎತ್ತುಗಳನ್ನು ಪತ್ತೆ ಮಾಡಿ ಆರೋಪಿತರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಕಲಿ ಫೇಸಬುಕ್ ಐಡಿ ಮಾಡಿ ಅವಹೇಳನಕಾರಿಯಾಗಿ ಬರೆದು ಪೋಸ್ಟ ಮಾಡಿದ ಬಗ್ಗೆ :
ಅಫಜಲಪೂರ ಠಾಣೆ : ನಮ್ಮ ರಾಜ್ಯದಲ್ಲಿ ದಿನಾಂಕ 12-05-2018 ರಂದು ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ, ಅಫಜಲಪೂರ ವಿಧಾನ ಸಭಾ ಮತಕ್ಷೇತ್ರ -34 ರಲ್ಲಿ ನಮ್ಮ ಬಿ.ಜೆ.ಪಿ ಪಕ್ಷದ ಅಭ್ಯರ್ಥಿಯಾಗಿ ಶ್ರೀ ಮಾಲಿಕಯ್ಯ ವ್ಹಿ.ಗುತ್ತೇದಾರ ರವರು ಚುನಾವಣೆಯಲ್ಲಿ  ಸ್ಫರ್ದಿಸಿಸಿರುತ್ತಾರೆ. ಶ್ರೀ ಮಾಲಿಕಯ್ಯ ವ್ಹಿ.ಗುತ್ತೇದಾರ ರವರ ಘನತೆಗೆ ಹಾಗೂ ಚುನಾವಣೆಯಲ್ಲಿ ಅವರಿಗೆ ಹಿನ್ನಡೆ ಮಾಡುವ ಉದ್ದೇಶದಿಂದ ಯಾರೋ ದುಸ್ಕರ್ಮಿಗಳು ಸಾಮಾಜಿಕ ಜಾಲತಾಣವಾದ ಪೇಸಬುಕ್ ನಲ್ಲಿ ಶ್ರೀ ಮಾಲಿಕಯ್ಯ ಗುತ್ತೇದಾರ ಎಂಬ ಹೆಸರಿನ ನಖಲಿ ಖಾತೆಯನ್ನು ತೆರೆದು, ದಿನಾಂಕ 01-05-2018 ರಂದು 1:00 ಪಿ ಎಮ್ ಕ್ಕೆ ಶ್ರೀ ಮಾಲಿಕಯ್ಯ ವ್ಹಿ ಗುತ್ತೇದಾರ ರವರ ಬಗ್ಗೆ ಹಾಗೂ ಭಾರತಿಯ ಜನತಾ ಪಕ್ಷದ ಬಗ್ಗೆ ಅವಹೇಳನಕಾರಿಯಾದ ಪೋಸ್ಟಗಳನ್ನು / ಸಂದೇಶಗಳನ್ನು ಸಾಮಾಜಿಕ ಜಾಲತಾಣವಾದ ಪೇಸಬುಕನಲ್ಲಿ ಬಿಟ್ಟಿರುತ್ತಾನೆ. ಹಾಗೂ ಸದರಿ ಖಾತೆಯಿಂದ ಕಾಂಗ್ರೇಸ ಪಕ್ಷದ ಅಭ್ಯರ್ಥಿಯ ಪ್ರಚಾರದ ಪೋಸ್ಟನ್ನು ಬಿಟ್ಟಿರುತ್ತಾರೆ. ಭಾರತಿಯ ಜನತಾ ಪಕ್ಷದ ಬಗ್ಗೆ ಹಾಗೂ ಅಭ್ಯರ್ಥಿಯ ಬಗ್ಗೆ ಅವಹೇಳನಕಾರಿಯಾದ ಸಂದೇಶಗಳನ್ನು ಬಿಟ್ಟ ದುಸ್ಕರ್ಮಿಯ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಶ್ರೀ ಸೂರ್ಯಕಾಂತ ಎಮ್ ನಾಕೇದಾರ  ತಾಲೂಕಾ ಅಧ್ಯಕ್ಷರು ಭಾರತಿಯ ಜನತಾ ಪಕ್ಷ ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.