¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-03-2018
ªÀÄÄqÀ©
¥Éưøï oÁuÉ C¥ÀgÁzsÀ ¸ÀA. 24/2018, PÀ®A. 376(1), 363, 366(J) L¦¹ ªÀÄvÀÄÛ PÀ®A.
4 ¥ÉÆPÉÆì PÁAiÉÄÝ 2012 :-
ದಿನಾಂಕ 06-06-2017 ರಂದು ಫಿರ್ಯಾದಿಯವರ ಮಗಳು ಶಾಜನಿ ಔರಾದದಿಂದ ಕಾಣೆಯಾಗಿದ್ದು ಎಲ್ಲಾ ಕಡೆಗೆ ಹುಡುಕಾಡಲಾಗಿ ಹಾಗು
ವಿಚಾರಿಸಲಾಗಿ ಎಲ್ಲಿಯೂ ಅವಳ ಪತ್ತೆಯಾಗಿರುವುದಿಲ್ಲ, ಫಿರ್ಯಾದಿಯ ಹೆಂಡತಿ ಹಾರಕೂಡ ಜಾತ್ರೆಗೆ ಬಂದಾಗ ಹಾರಕೂಡ ಗ್ರಾಮದಲ್ಲಿ ಫಿರ್ಯಾದಿಯವರ
ಮಗಳು ಸಿಕ್ಕಿದ್ದು ಗುರುತು ಹಿಡಿದು ವಿಚಾರಿಸಲಾಗಿ ಅವಳು
ತಿಳಿಸಿದ್ದೆನೆಂದರೆ ಆರೋಪಿತರಾದ 1) ಮಲ್ಲಮ್ಮಾ
ಗಂಡ ಈರಣ್ಣಾ ಅಟಾರೆ ಹಾಗೂ ಲಕ್ಷ್ಮೀಕಾಂತ ಈರಣ್ಣಾ ಅಟಾರೆ ಇಬ್ಬರು ಸಾ: ಹಾರಕೂಡ, ತಾ: ಬವಕಲ್ಯಾಣ
ಇವರಿಬ್ಬರು ಫಿರ್ಯಾದಿಯವರ ಮಗಳು ಅಪ್ರಾಪ್ತ ಬಾಲಕಿ ಅಂತ ಗೊತ್ತಿದ್ದು ಸಹ ಪುಸಲಾಯಿಸಿ
ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ಲೈಂಗಿಕವಾಗಿ ಬಳಸಿಕೊಂಡಿರುತ್ತಾರೆ, ಮಲ್ಲಮ್ಮಾ ಇಕೆಯು
ಸಹ ಇದಕ್ಕೆ ಸಹಕರಿಸಿರುತ್ತಾಳೆಂದು ನೀಡಿದ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 24-03-2018
ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ
ಪೊಲೀಸ್ ಠಾಣೆ ಅಪರಾಧ ಸಂ. 62/2018, ಕಲಂ. 379 ಐಪಿಸಿ :-
ಫಿರ್ಯಾದಿ ಸೀಮಾ ಗಂಡ ಜ್ಞಾನೇಶ್ವರ ತುಕದೆ ಸಾ: ಡಾವರಗಾಂವ, ಸದ್ಯ: ಹಡಪಸರ ಪೂನಾ ರವರ ಗಂಡ ಪೂನಾದಲ್ಲಿ ಬಟ್ಟೆ
ವ್ಯಾಪಾರ ಮಾಡಿಕೊಂಡು ಇರುವದರಿಂದ ಫಿರ್ಯಾದಿಯು ಅಲ್ಲೆ ವಾಸವಾಗಿದ್ದು, ದಿನಾಂಕ 23-03-2018 ರಂದು ಫಿರ್ಯಾದಿ ಮತ್ತು ಫಿರ್ಯಾದಿಯ ಅತ್ತೆ ಸುಂದರಬಾಯಿ, ಮಾವ
ಧೊಂಡಿಬಾ ಕೂಡಿ ಡಾವರಗಾಂವ ಗ್ರಾಮಕ್ಕೆ ಹೋಗುವ ಕುರಿತು ಪೂನಾದಿಂದ ಮುಂಬೈ-ಬೀದರ ರೇಲ್ವೆಯಲ್ಲಿ ಕುಳಿತು ಭಾಲ್ಕಿ ರೇಲ್ವೆ ನಿಲ್ದಾಣಕ್ಕೆ ಬಂದು
ಇಳಿದು ಬಸ್ಸ್ ನಿಲ್ದಾಣಕ್ಕೆ ಹೋಗಿ ಡಾವರಗಾಂವ ಗ್ರಾಮಕ್ಕೆ ಹೋಗುವ ಬಸ್ಸ್ ನಿಲ್ಲುವ ಸ್ಥಳದಲ್ಲಿ
ತಮ್ಮ ಹತ್ತಿರ ಇರುವ 4 ಬ್ಯಾಗಗಳು ಇಟ್ಟು ಅತ್ತೆ
ಮಾವನವರಿಗೆ ಅಲ್ಲಿ ಕೂಡಿಸಿ ಅತ್ತೆ ಮಾವಗೆ ಆರಾಮ ಇಲ್ಲದ ಕಾರಣ ಗುಳಿಗೆ ತರಲು ಮೇಡಿಕಲಗೆ ಹೋಗಿ
ಗುಳಿಗೆ ತೆಗೆದುಕೊಂಡು ವಾಪಸ ಬರುವಷ್ಟರಲ್ಲಿ ಮೂರೆ ಬ್ಯಾಗಗಳು ಇದ್ದವು ಒಂದು ಬ್ಯಾಗ ಇರಲಿಲ್ಲಾ ಆ
ಬ್ಯಾಗಿನಲ್ಲಿ 1) 3 ಗ್ರಾಂ ಬಂಗಾರದ ಝುಮಕಾ ಅ.ಕಿ
8,400/-
ರೂ., 2) 4 ಗ್ರಾಂ ಬಂಗಾರದ ಕಿವಿಯಲ್ಲಿನ
ರಿಂಗ್ ಅ.ಕಿ 11,200/-
ರೂ., 3) 3 ತೋಲೆ ಬೇಳ್ಳೆಯ ಚೈನು ಅ.ಕಿ 900/- ರೂ., 4) ನಗದು
ಹಣ 2000/- ರೂ.
ಹಾಗೂ 5) ಮಕ್ಕಳ ಬಟ್ಟೆ ಮತ್ತು 3-4 ಸಿರೇಗಳು ಅ.ಕಿ 2000/- ರೂ. ಹೀಗೆ ಒಟ್ಟು 24,500/- ರೂ. ಬೆಲೆ ಉಳ್ಳದ್ದು ಇದ್ದವು, ಸದರಿ ಬ್ಯಾಗನ್ನು ಯಾರೋ ಅಪರಿಚೀತ
ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ
24-03-2018 ರಂದು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.