Police Bhavan Kalaburagi

Police Bhavan Kalaburagi

Friday, November 10, 2017

KALABURAGI DISTRICT REPORTED CRIMES

ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಪುರಮ್‌ ಶಾಂತನು ಪಿ. ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರು ಆರ್.ಸಿ ಸಾಹೇಬರು ಮನೆಯಲ್ಲಿ ಇರುವ ಆಫೀಸನಲ್ಲಿನ ಕೆಲಸ ಮತ್ತು ದೂರವಾಣಿ ಕರೆಗಳನ್ನು ಸ್ವಿಕರಿಸುವುದು ಮಾಡುತ್ತಿದ್ದು ಎಂದಿನಂತೆ ದಿನಾಂಕ 07/11/2017 ರಂದು ಮಧ್ಯಾಹ್ನ 12:00 ಗಂಟೆ ಸುಮಾರಿಗೆ ನಾನು ಸಾಹೇಬರ ಮನೆಗೆ ಹೋದಾಗ ಆರ್.ಸಿ ಸಾಹೇಬರ ತಾಯಿಯವರಾದ ಶ್ರೀಮತಿ ಮಿತಿಲೇಶ ಗುಪ್ತಾ ರವರು  ನನಗೆ ತಿಳಿಸಿದ್ದೆನೆಂದರೆಮನೆಯಲ್ಲಿನ .ಟಿ.ಎಮ್ ಕಾರ್ಡ ಕಾಣುತ್ತಿಲ್ಲಾ ಅಂತಾ ತಿಳಿಸಿ ಓರಿಯಂಟಲ್‌ ಬ್ಯಾಂಕ ಆಫ್‌ ಕಾಮರ್ಸ ಅಕೌಂಟ ನಂ.09172011006836 ಇದ್ದು ಈ ಎ.ಟಿ.ಎಮ್ ಕಾರ್ಡನಿಂದ ನನಗೆ ಗೊತ್ತಿಲ್ಲದೆ ಒಟ್ಟು ಹಣ 40,000/-ರೂಗಳು ಡ್ರಾ ಆಗಿರುತ್ತವೆ ಅಂತಾ ತಿಳಿಸಿದ್ದು ನಂತರ ನಾನು ಬ್ಯಾಂಕಿಗೆ ಹೋಗಿ ವಿಚಾರಣೆ ಮಾಡಿದಾಗ ಸಿಟಿ ಬ್ಯಾಂಕ .ಟಿ.ಎಮ್ ವಸಂತ ನಗರ ಬೆಂಗಳೂರಿನಿಂದ ಡ್ರಾ ಆಗಿರುತ್ತವೆ ಎಂದು ಗೊತ್ತಾಗಿರುತ್ತದೆ ಹಿಂದೆ ಆರ್.ಸಿ ಸಾಹೇಬರು ಬೆಂಗಳೂರಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಅವರ ಮನೆಯಲ್ಲಿ ಕೆಲಸ ಮಾಡುವ ಉತ್ತಮ ಎಂಬುವವನು 15 ದಿನಗಳ ಹಿಂದೆ ಆರ್.ಸಿ ಸಾಹೇಬರ ಮನೆಯಲ್ಲಿ ಕೆಲಸ ಮಾಡುವ ಸಲುವಾಗಿ ಬಂದಿದ್ದು  ಅವನು ದಿನಾಂಕ 05/11/2017 ರಂದು ಸಂಜೆ 6:00 ಗಂಟೆ ಸುಮಾರಿಗೆ ಮನೆಯಿಂದ ಬೆಂಗಳೂರಿಗೆ ಹೋಗಿದ್ದು ಆತನು ಮನೆಯಿಂದ ಹೋಗುವಾಗ ಮನೆಯಲ್ಲಿನ .ಟಿ.ಎಮ್ ಕಾರ್ಡ ಕಳ್ಳತನ ಮಾಡಿಕೊಂಡು ಹೋಗಿ ಹಣ ಡ್ರಾ ಮಾಡಿಕೊಂಡಿರಬಹುದು ಅಂತಾ ಆರ್.ಸಿ ಸಾಹೇಬರ ತಾಯಿಯವರು ಸಂಶಯ ವ್ಯಕ್ತ ಪಡಿಸಿರುತ್ತಾರೆಕಾರಣ ಆರ್.ಸಿ ಸಾಹೇಬರ ಮನೆಯಿಂದ ಎ.ಟಿ.ಎಮ್. ಕಾರ್ಡ ಕಳ್ಳತನ ಮಾಡಿಕೊಂಡು ಹೋಗಿ 40,000/- ರೂ ಡ್ರಾ ಮಾಡಿದವನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪ ತಂದೆ ಲಕ್ಕಪ್ಪ ಹಣಜಿ ಸಾ||ಅಳ್ಳಗಿ(ಬಿತಾ||ಅಫಜಲಪೂರ ರವರ ಮಗ ದಿನಾಂಕ 09/11/2017 ರಂದು ಬೆಳಿಗ್ಗೆ ಎಂದಿನಂತೆ 09.00 ಗಂಟೆ ಸುಮಾರಿಗೆ ನನ್ನ ಮಗನು ಗೌಂಡಿ ಕೆಲಸಕ್ಕೆ ಮಾಶಾಳ ಗ್ರಾಮಕ್ಕೆ ಹೋಗುತ್ತೇನೆ ಅಂತ ಹೇಳಿ ನಮ್ಮ ಮೋಟಾರ ಸೈಕಲ್ ನಂ ಕೆಎ-32 ಇಎ-5056 ನೇದ್ದನ್ನು ತಗೆದುಕೊಂಡು ಮನೆಯಿಂದ ಹೋಗಿದ್ದು   07.00 ಪಿಎಮ್ ಸುಮಾರಿಗೆ ನನಗೆ ಪರಿಚಯಸ್ಥರಾದ ಮಾಶಾಳ ಗ್ರಾಮದ ಚಂದ್ರಮಾ ತಂದೆ ತುಕಾರಾಮ ಹವಳಗಾ ರವರು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಸಾಯಂಕಾಲ 6.30 ಗಂಟೆ ಸುಮಾರಿಗೆ ಕರಜಗಿ ಹಾಗು ಮಾಶಾಳ ಮದ್ಯೆ ಇರುವ ಸಾಯಿ ದಾಬಾ ಹತ್ತಿರ ಇದ್ದಾಗ .ಕರಜಗಿ ಕಡೆಯಿಂದ ಒಬ್ಬ ಲೂನಾ ಮೋಟಾರ ಸೈಕಲ್ ಸವಾರ ಹಾಗು ಮಾಶಾಳ ಕಡೆಯಿಂದ ಒಬ್ಬ ಮೋಟಾರ ಸೈಕಲ್ ಸವಾರ ಅತಿವೇಗ ಹಾಗು ನಿಸ್ಕಾಳಜಿತನದಿಂದ ತಮ್ಮ ಮೋಟಾರ ಸೈಕಲನ್ನು ಚಲಾಯಿಸಿ ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ರೋಡಿನ ಎಡಬಾಗಕ್ಕೆ ಬಿದ್ದರು ಆಗ ನಾನು ಹಾಗು ಅಲ್ಲೆ ದಾಬಾ ಹತ್ತಿರ ಇದ್ದ ಜನರು ಸ್ಥಳಕ್ಕೆ ಓಡಿ ಹೋಗಿ ನೋಡಲಾಗಿ ಮೋಟಾರ ಸೈಕಲ ನಂ ಕೆ-32 ಇಎ-5056 ನೇದ್ದರ ಸವಾರ ನಿಮ್ಮ ಮಗನಾದ ದತ್ತ ಇರುತ್ತಾನೆ ತಲೆಗೆ  ಭಾರಿ ಒಳಪೆಟ್ಟುಗಳಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಲೂನಾ ಮೋಟಾರ್ ಸೈಕಲ್ ಸವಾರ ಕರಜಗಿ ಗ್ರಾಮದ ಇಸ್ಮಾಯಿಲ್ ಅತ್ತಾರ ಅಂತ ಇದ್ದು ಸದರಿಯವನಿಗೆ ತಲೆಗೆ ಕಾಲಿಗೆ ಹಾಗು ಮೈ ಕೈಗಳಿಗೆ ಭಾರಿ ಸಾದಾರಕ್ತಗಾಯಗಳಾಗಿರುತ್ತವೆ ಅಂತ ತಿಳಿಸಿದನುನಂತರ ನಾನು ಈ ವಿಷಯವನ್ನು  ನಮ್ಮ ಗ್ರಾಮದ ರವಿ ತಂದೆ ಮಾಣಿಕ ದುದ್ದಣಗಿಮಲ್ಲಪ್ಪ ತಂದೆ ಭೀಮಶ್ಯಾ ಬಂಕದಬಾಬುಗೌಡ ತಂದೆ ರುದ್ರಗೌಡ ಪಾಟೀಲ ತಿಳಿಸಿ ಎಲ್ಲರು ಕೂಡಿಕೊಂಡು ಸಾಯಿ ದಾಬಾ ಹತ್ತಿರ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಮಾಶಾಳಯಿಂದ ಕರಜಗಿ ಕಡೆ ಬರುವ ರೋಡಿನ ಏಡಭಾಗದಲ್ಲಿ ನನ್ನ ಮಗ ಮೃತಪಟ್ಟು ಬಿದ್ದಿದ್ದುಆತನ ಎಡಕಾಲಿಗೆ ರಕ್ತಗಾಯ ಮತ್ತು ತಲೆಗೆ  ಭಾರಿ  ಒಳಪೆಟ್ಟುಗಳಾಗಿ  ಮೂಗಿನಿಂದ  ಮತ್ತು ಕಿವಿಯಿಂದ  ರಕ್ತ ಸೋರಿ ಮೃತ ಪಟ್ಟಿದ್ದು ಇರುತ್ತದೆಲಾನಾ ಮೋಟಾರ್ ಸೈಕಲ್ ಸವಾರ ಇಸ್ಮಾಯಿಲ್ ಇತನಿಗೆ ತಲೆಗೆ ಕೈ ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿರುತ್ತವೆನಂತರ ಅಲ್ಲೆ ಇದ್ದ ಜನರು ಇಸ್ಮಾಯಿಲನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಆಸ್ಪತ್ರೆ ಕರೆದುಕೊಂಡು ಹೋದರು ಲೂನಾ ಮೋಟಾರ ಸೈಕಲ್ ಸವಾರ ಇಸ್ಮಾಯಿಲ್ ಹಾಗು ನನ್ನ ಮಗ ದತ್ತ ಇಬ್ಬರು ಒಬ್ಬರಿಗೊಬ್ಬರು ಅತಿವೇಗ ಹಾಗು ನಿಸ್ಕಾಳಜಿತನದಿಂದ ಮೋಟಾರ್ ಸೈಕಲನ್ನು  ಚಲಾಯಿಸಿ ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ಇಸ್ಮಾಯಿಲ್ ನ್ನು ಗಂಬೀರ ಗಾಯ ಹೊಂದಿದ್ದು ನನ್ನ ಮಗನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಸದರಿ ಘಟನೆಯ ಬಗ್ಗೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗೋವಿಂದ ತಂದೆ ಗೇಮು ಚವ್ಹಾಣ ಸಾ : ವಾಡಿ ತಾ:ಚಿತ್ತಾಪುರ ಜಿ:ಕಲಬುರಗಿ ಸದ್ಯ ಸಂತೋಷ ಕಾಲೋನಿ ನ್ಯೂ ಜೇವರ್ಗಿ ರೋಡ ಕಲಬುರಗಿ ಇವರು ದಿನಾಂಕ:- 17-10-2017 ರಂದು ನನಗೆ ಮತ್ತು ಬಸ್ ನಿರ್ವಾಹಕ ಯಶ್ವಂತ ಟಿ.ಸಿ ನಂ 1412 ಇಬ್ಬರಿಗೆ ಬಸ್ ನಂ ಕೆಎ-32 ಎಪ್-2140 ನೇದ್ದು ಕಲಬರಗಿ-ಪೂನಾ ಮಾರ್ಗ ಸಂಖ್ಯೆ 5-6-5 ನೇದ್ದರ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಸದರಿ ಬಸ್ಸಿನಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಹೊರಟಾಗ ನಮ್ಮ ಬಸ ಆಳಂದ ಚೆಕ್ಕ ಪೊಸ್ಟ ಬಿಟ್ಟು ಹೋಗುತ್ತಿರುವ ಆ ಸಮಯದಲ್ಲಿ  ಮಂಜೂರ ಪಟೇಲ್ ತಂದೆ ಖಾಸಿಂ ಪಟೇಲ್ ಚಾಲಕ ಕಂ. ನಿರ್ವಾಹಕ ಬಸ ಡಿಪೊ ನಂ 03  ಕಲಬುರಗಿ ಮತ್ತು ಇತರೇ 03 ಜನರು ಬಸ್ಸಿನ ಬೈನಟ್ಟಿ  ಸೈಡ ಗ್ಲಾಸ ಕಾಣದಂತೆ ಕುಳಿತುಕೊಂಡರು ಆಗ ನಾನು ಬಸ್ಸನ್ನು ಚಾಲು ಮಾಡಿಕೊಂಡು ಹೊರಟೇನು ಸಂಜೆ 07:30 ಗಂಟೆ ಸುಮಾರಿಗೆ ಆಳಂದ ರೋಡಿಗೆ ಇರುವ ಓವರ್ ಬ್ರಿಜನ ಮೇಲೆ ಬಸ್ಸು ಹೋಗುತ್ತಿದಂತೆ ನಾನು ಬೈನಟ್ಟ ಮೇಲೆ ಕುಳಿತುಕೊಂಡಿದ್ದ ಮಂಜೂರ ಪಟೇಲ್ ಇತನಿಗೆ ಸೈಡ್ ಗ್ಲಾಸ ಕಾಣುತ್ತಿಲ್ಲಾ ಸ್ವಲ್ಪ ಸರಿದು ಕುಳಿತುಕೊಳ್ಳಿ ಅಂತಾ ಅಂದಾಗ ಆಗ ಮಂಜೂರ ಪಟೇಲ್ ಇತನು ನನಗೆ ಆಚೆ ಸರಿ ಎಂದು ಹೇಳುತ್ತಿಯಾ ಮಗನೇ ನಾನು ಘಟಕ ನಂ 03 ರಲ್ಲಿ ಬಸ್ ಚಾಲಕನಿರುತ್ತೇನೆ ಅಂತಾ ಅಂದಾಗ ಆಗ ನೀವು ಬಸ್ ಚಾಲಕರಿರಬಹುದು ಆದರೇ ನನಗೆ ಸೈಡ್ ಗ್ಲಾಸ್ ಕಾಣುತ್ತಿಲ್ಲಾ ನೀವು ಬಸ್ ಚಾಲಕರಿರುತ್ತಿರಿ ಸೈಡ್ ಗ್ಲಾಸ್ ಕಾಣದೇ ಇದ್ದರೇ ಬಸ ಹೇಗೆ ಚಾಲನೆ ಮಾಡಿಬೇಕು ನೀವೇ ಹೇಳಿ ಅಂತಾ ಅಂದಾಗ ಆಗ ಮಂಜೂರ ಪಟೇಲ್ ಇತನು ಏ ಲಂಬಾಣಿ ಸೂಳೇ ಮಗನೇ ನಾನು ಯಾರು ಏನು ಅಂತಾ ನಿನಗೆ ಗೊತ್ತಿಲ್ಲಾ ನಿನಗೆ ಈಗಲೇ ಏನು ಮಾಡುತ್ತೇನೆ ನೋಡು ಎಂದು ಅವಾಚ್ಯವಾಗಿ ಬೈಯ್ದು ಬಸ್ಸು ನಡೆಸುತ್ತಿದ್ದ ಸ್ಟೇರಿಂಗ ಹಿಡಿದಾಗ ಆಗ ನಾನು ಬಸ್ಸು ಸೈಡಿಗೆ ನಿಲ್ಲಿಸಿದಾಗ ಆಗ ಮಂಜೂರ ಪಟೇಲ್ ಇತನು ಕೈಯಿಂದ ಎಡ ಕಪಾಳದ ಮೇಲೆ ಹೊಡೆದು ನಂತರ ಚಪ್ಪಲಿಯಿಂದ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಬಗ್ಗಿಸಿ ಬೆನ್ನಿನ ಮೇಲೆ ಒಂದೇ ಸವನೇ ಹೊಡೆಯುತ್ತಿದ್ದಾಗ ಆಗ ಬಸ್ ನಿರ್ವಾಹಕ ಯಶ್ವಂತ ಮತ್ತು ಇತರೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಂದು ನನಗೆ ಹೊಡೆವುದನ್ನು ಬೀಡಿಸಿಕೊಂಡು ಮಂಜೂರ ಪಟೇಲ್ ಇತನಿಗೆ ಹಿಡಿವಷ್ಟರಲ್ಲಿ ಆತನು ಅಲ್ಲಿಂದ ಹೋಲದಲ್ಲಿ ಓಡಿ ಹೋದನು. ನನಗೆ ಹೊಡೆವುದನ್ನು ಬೀಡಿಸಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರ ಹೆಸರು ಮತ್ತು ವಿಳಾಸ ಗೊತ್ತಿಲ್ಲಾ ನೋಡಿದರೇ ಗುರ್ತಿಸುತ್ತೇನೆ. ನಂತರ ನಾನು ಅದೇ ನೋವಿನಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಆಳಂದವರೆಗೆ ಒಯ್ದು ಅವರನ್ನು ಆಳಂದದಲ್ಲಿ ಬಿಟ್ಟು ನಮ್ಮ ಮೇಲಾಧಿಕಾರಿಗಳಿಗೆ ಈ ವಿಷಯ ತಿಳಿಸಿ ಮರಳಿ ಕಲಬುರಗಿ ಬಂದಿರುತ್ತೇನೆ. ನಂತರ ಮರು ದಿವಸ ದಿನಾಂಕ:-18/10/2017 ರಂದು ನನಗೆ ಬಹಳ ನೋವು ಆಗುತ್ತಿದ್ದರಿಂದ್ದ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಹೊರ ರೋಗಿ ಅಂತಾ ಉಪಚಾರ ಪಡೆಕೊಂಡಿರುತ್ತೇನೆ.ನಾನು ಮತ್ತು ಮಂಜೂರ ಅಲಿ ಒಂದೇ ಇಲಾಖೆ ಇದ್ದು ಕೆಲಸ ಮಾಡುತ್ತಿದ್ದರಿಂದ್ದ ಈ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಗಳಲ್ಲಿ ವಿಚಾರಣೆ ಮಾಡಿ ಇಂದು ಪೊಲೀಸ ಠಾಣೆಗೆ ದೂರು ದಾಖಲಿಸಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.