Police Bhavan Kalaburagi

Police Bhavan Kalaburagi

Wednesday, May 20, 2020

BIDAR DISTRICT DAILY CRIME UPDATE 20-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 20-05-2020

ಗಾಂದಿಗಂಜ ಪೊಲೀಸ  ಠಾಣೆ ಅಪರಾಧ ಸಂಖ್ಯೆ 83/2020 ಕಲಂ 307 ಐಪಿಸಿ :-

ದಿನಾಂಕ 19-5-2020 ರಂದು 1915 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ಎಂ ಎಲ ಸಿ ಇದೆ ಅಂತಾ ಮಾಹಿತಿ ಮೆರೆಗೆ ಬೀದರ ಸರಕಾರಿ ಆಸ್ಪತ್ರೆಗೆ 19-30 ಗಂಟೆಗೆ ಭೇಟಿ ನೀಡಿ ಗಾಯಾಳು ಸ್ವಾಮಿದಾಸ ಇತನಿಗೆ ನೋಡಲು ಇತನು ಮಾತನಾಡುವ ಸ್ಥಿತಿಯಲ್ಲಿ ಇರದೆ ಇರುವುದರಿಂದ ಅಲ್ಲಿ ಹಾಜರಿದ್ದ ಸ್ವಾಮಿದಾಸ ಇತನ ಹೆಂಡತಿಯಾದ ಸಲೋಮಿ ಗಂಡ ಸ್ವಾಮಿದಾಸ ಹಂಗರಗೆನೋರ ವಯ 32 ವರ್ಷ ಜಾತಿ ಕ್ರಿಶ್ಚನ ಸಾ: ಜಂಬಗಿ ಕಾಲೋನಿ ಮೈಲೂರ ಇವಳ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ  ಇವರ ಪತಿ ಸ್ವಾಮಿದಾಸ ಇತನು ಸೆಂಟ್ರಿಂಗ ಕೆಲಸ ಮಾಡುತ್ತಿದ್ದು ದಿನಾಂಕ 19-5-2020 ರಂದು ಕೆಲಸ ಇಲ್ಲದ ಪ್ರಯುಕ್ತ ಮನೆಯಲ್ಲಿ ಇದ್ದು ಅಂದಾಜು ಮದ್ಯಾಹ್ನ 1400 ಗಂಟೆಗೆ  ಮನೆಯ ಎದರುಗಡೆ ಮೋಟಾರ ಸೈಕಿಲ ಮೇಲೆ ಒಬ್ಬ ವ್ಯಕ್ತಿ ಬಂದು ತನ್ನ ಗಂಡ ಸ್ವಾಮಿದಾಸ ಇತನಿಗೆ ಕರೆದಿದ್ದು ಅವನು ಮುಖ ತೊಳೆದುಕೊಂಡು ಬರುತ್ತೇನೆ ಅಂತಾ ಹೇಳಿ ಮುಖ ತೊಳೆದುಕೊಂಡು ಕರೆಯಲು ಬಂದವನ ಮೋಟಾರ ಸೈಕಿಲ ಮೇಲೆ ಹೊರಗೆ ಹೊಗಿದ್ದು ಇರುತ್ತದೆ ನಂತರ ನನ್ನ ನಾದನಿಯಾದ ರೇಣುಕಾ ಗಂಡ ಸೂರ್ಯಕಾಂತ ಮತ್ತು ಗೊದಾವರಿ ಗಂಡ ಯಾಕುಬ ಇವರು ಬಂದು ತಿಳಿಸಿದ್ದೆನೆಂದರೆ ನಿನ್ನ ಗಂಡನಾದ ಸ್ವಾಮಿದಾಸ ಇವರಿಗೆ ಹಾರೋ ಚಾಕುವಿನಿಂದ ಹೊಟ್ಟೆಯಲ್ಲಿ ಹೊಡೆದು ಗಾಯ ಗೊಳಿಸಿದ್ದು ಅವನು ನೆಲದ ಮೇಲೆ ಬಿದ್ದಿದ್ದು ಹೊಟ್ಟೆಉಯಿಂದ ರಕ್ತ ಬರುತ್ತಿದೆ ಅಂತಾ ಸಾಯಾಂಕಾಲ 5-30 ಗಂಟೆ ಸುಮಾರಿಗೆ ತಿಳಿಸಿದ ಮೇರೆಗೆ ಹೊಗಿ ನೋಡಲು ಓಣಿಯ ಒಂದು ಬಿಲ್ಡಿಂಗ ಹತ್ತಿರ ನೆಲದ ಮೇಲೆ ಬಿದ್ದಿದ್ದು ಫಿರ್ಯಾದಿ ಗಂಡ ನೆಲದ ಮೇಲೆ ಬಿದ್ದಿದ್ದು ಬಲ ಹೊಟ್ಟೆಯ ಕೆಳಗಡೆ ಗಾಯವಾಗಿ ರಕ್ತ ಸೊರುತ್ತಿದ್ದು ತಕ್ಷಣ ಎಲ್ಲರು ಕೂಡಿ   ಸ್ವಾಮಿದಾಸ ಇತನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಿ ಸೆರಿಕ ಮಾಡಿದ್ದು ಘಟನೆಯ ಬಗ್ಗೆ ನನಗೆ ಗೊತ್ತಾಗಿದ್ದೆನೆಂದರೆ ನನ್ನ ಗಂಡ ಇತನು ರವಿ ತಂದೆ ಜೈವಂತ ಇತನ ಹತ್ತಿರ ಖಚರ್ಿಗಾಗಿ ರೂ: 1000/- ತೆಗೆದುಕೊಂಡಿದ್ದು ತೆಗೆದುಕೊಂಡ ಹಣ ಕೊಡು ಅಂತಾ ಕೇಳಿದ್ದು ಅದಕ್ಕೆ ತನ್ನ ಹತ್ತಿರ ಹಣ ಇಲ್ಲ ಅಂತಾ ಅಂದಿದ್ದಕ್ಕೆ ರವಿ ಇತನು ಸಿಟ್ಟಿಗೆದ್ದು ತನ್ನ ಗಂಡನ ಸ್ವಾಮಿದಾಸ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ಅವನ ಹತ್ತಿರ ಇದ್ದ ಚಾಕುವಿನಿಂದ  ಬಲ ಹೊಟ್ಟೆಯ ಕೆಳಗಡೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ: 19-05-2020 ರಂದು 1600 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ  ಕಾಡವಾದ ಸಿವಾರದ  ಇಜಾಜ್ ರವರ ಫಾರ್ಮಹೌಸ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಡುತ್ತಿದ್ದಾರೆ. ಎಂಬ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಇಜಾಜ್ ರವರ ಫಾರ್ಮಹೌಸ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೇಲವು ಜನರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಟುತ್ತಿದ್ದದನ್ನು ಖಚಿತ ಪಡಿಸಿಕೊಂಡು ಸದರಿ ಜನರ ಮೇಲೆ ಎಲ್ಲರು ಸೇರಿ ಏಕ ಕಾಲಕ್ಕೆ ದಾಳಿ ಮಾಡಿ ಇಸ್ಪೇಟ್ ಆಡುತ್ತಿದ್ದ 08 ಜನರನ್ನು ಹಿಡಿದ ನಂತರ ಮೆಹಬೂಬ ಅಲಿ [.ವಿ] ಪಿ.ಎಸ್. ಸಾಬೇಬರು ಅವರನ್ನು ವಿಚಾರಿಸಲಾಗಿ   1]ಮೈನೊದ್ದೀನ ತಂದೆ ಮೆಹಬೂಬಸಾಬ ಗಾಡಿವಾಲೆ ವಯ 60 ವರ್ಷ ಜಾತಿ:ಮುಸ್ಲಿಂ ಉದ್ಯೋಗ: ಕೂಲಿ ಕೆಲಸ ಸಾ||ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 450/- ರೂ  2]ಮಹ್ಮದ ತಂದೆ ಚಾಂದಸಾಬ ದರ್ಗಾವಾಲೆ ವಯ 38 ವರ್ಷ ಜಾತಿ:ಮುಸ್ಲಿಂ ಉದ್ಯೋಗ:ಕೂಲಿ ಕೆಲಸ ಸಾ|| ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 650/- ರೂ 3] ಫಿರೋಜ ತಂದೆ ನಬೀಸಾಬ ಕಲ್ಯಾಣಿವಾಲೆ ವಯ 32 ವರ್ಷ ಜಾತಿ:ಮುಸ್ಲಿಂ ಉದ್ಯೋಗ: ಕೂಲಿ ಕೆಲಸ ಸಾ||ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 400/- ರೂ 4]ಮಹೇಮುದ ತಂದೆ ಉಸ್ಮಾನಮಿಯ್ಯಾ ಯುಪಿವಾಲೆ ವಯ 20 ವರ್ಷ ಜಾತಿ:ಮುಸ್ಲಿಂ ಉದ್ಯೋಗ: ಕೂಲಿ ಕೆಲಸ ಸಾ|| ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 450/- ರೂ 5]ಮಲ್ಲಪ್ಪಾ ತಂದೆ ಜೆಟ್ಟೆಪ್ಪಾ ರಾಯಗೊಂಡ ವಯ 50 ವರ್ಷ ಜಾತಿ:ಕುರುಬ ಉದ್ಯೋಗ: ಪೆಂಟಿಂಗ್ ಕೆಲಸ ಸಾ|| ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 500/- ರೂ 6]ಉಸ್ಮಾನಮಿಯ್ಯಾ ತಂದೆ ರೆಹಮಾನಸಾಬ ಯುಪಿವಾಲೆ ವಯ 50 ವರ್ಷ ಜಾತಿ:ಮುಸ್ಲಿಂ ಉದ್ಯೋಗ: ವ್ಯಾಪಾರ ಸಾ|| ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 560/- ರೂ 7]ಮಲ್ಲಪ್ಪಾ ತಂದೆ ಮಾಣಿಕಪ್ಪಾ ರಾಯಗೊಂಡ ಜಾತಿ:ಕುರುಬ ಉದ್ಯೋಗ: ಒಕ್ಕಲುತನ ಕೆಲಸ ಸಾ|| ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 400/- ರೂ 8]ವೈಜಿನಾಥರಡ್ಡಿ ತಂದೆ ತುಕರಾಮ ಔರಾದಕರ ವಯ 55 ವರ್ಷ ಜಾತಿ:ರಡ್ಡಿ ಉದ್ಯೋಗ: ಒಕ್ಕಲುತನ ಕೆಲಸ ಸಾ||ಕಾಡವಾದ ರವರ ಅಂಗ  ಜಡ್ತಿ ಮಾಡಲು ಅವರ ಹತ್ತಿರ 300/- ರೂ ಎಲ್ಲರ ಮಧ್ಯ 350/- ಹೀಗೆ ಒಟ್ಟು 4060/- ಮತ್ತು 52 ಇಸ್ಪೀಟ ಎಲೆಗಳುನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖ ಕೈಗೋಳ್ಳಲಾಗಿದೆ.