ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-08-2020
ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 18/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 24-08-2020 ರಂದು 1600 ಗಂಟೆಯಿಂದ 1800 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನಾನು ಮೊಬೈಲ್ ಫೊನ ಕೂಡಿಸು ಅಂತಾ ಕೇಳಿದರೂ ಸಹ ನನಗೆ ಮೋಬೈಲ್ ಕೊಡಿಸಿಲ್ಲ ಅಂತಾ ಫಿರ್ಯಾದಿ ಸದಾಶಿವ ತಂದೆ ನಾಮದೇವ ಪಾಲವೇ, ವಯ: 26 ವರ್ಷ, ಜಾತಿ: ಮರಾಠಾ, ಸಾ: ಉಡಬಾಳ ರವರ ತಂಗಿಯಾದ ಸುಜಾತಾ ತಂದೆ ನಾಮದೇವ ಪಾಲವೇ, ವಯ: 16 ವರ್ಷ, ಜಾತಿ: ಮರಾಠಾ, ಸಾ: ಉಡಬಾಳ ಇಕೆಯು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಮನೆಯಲ್ಲಿ ಅಡುಗೆ ಮನೆಯ ಒಳಗಿನ ಕೊಂಡಿ ಹಾಕಿಕೊಂಡು ಸಿರೆಯಿಂದ ತಗಡದ ಕೆಳಗಿನ ಕಟ್ಟಿಗೆಯ ದಂಟಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ, ಅವಳ ಸಾವಿನ ಬಗ್ಗೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 126/2020, ಕಲಂ. 3, 14(ಎ) ಬಾಲ ಕಾರ್ಮಿಕ ಕಾಯ್ದೆ 1986 :-
ದಿನಾಂಕ 24-08-2020 ರಂದು ಪ್ರಸನ್ನ, ಕಾರ್ಮಿಕ ನಿರೀಕ್ಷಕರು ಬೀದರ ರವರು ಠಾಣೆಗೆ ಹಾಜರಾಗಿ ಫಿರ್ಯಾದು ಸಲ್ಲಿಸಿದ್ದು ಸಾರಾಂಶವೆನೆಂದರೆ ದಿನಾಂಕ 31-07-2020 ರಂದು ಕಾರ್ಮಿಕರ ನಿರೀಕ್ಷಕರು ಬೀದರ, ಜಿಲ್ಲಾ ಮಕ್ಕಳ ರಕ್ಷಣಾದಿಕಾರಿಗಳು ಬೀದರ, ಸಿ.ಡಿ.ಪಿ.ಓ ಬೀದರ, ಯೋಜನಾ ನಿರ್ದೇಶಕರು, ಬಾಲ ಕಾರ್ಮಿಕ ಕೋಶ ಬೀದರ ಹಾಗೂ ಮಕ್ಕಳ ಸಹಾಯವಾಣಿ ಬೀದರ ಜಂಟಿಯಾಗಿ ನಡೆಸಲಾದ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ಮೆ. ಸುಪ್ರಿಯಾ ಟಿಫಿನ ಸೆಂಟರ ಚಿಟ್ಟಾ ಕ್ರಾಸ ಬೀದರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕು. ಕಾರ್ತಿಕ ತಂದೆ ಹಣಮಂತ ವಯ: 16 ವರ್ಷ, ಸಾ: ಅಮಲಾಪುರ, ತಾ: ಬೀದರ ಎಂಬ ಬಾಲ ಕಾರ್ಮಿಕನು ಸದರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು ಪತ್ತೆ ಹಚ್ಚಿ ಬಾಲ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು, ಆರೋಪಿ ಸೂರ್ಯಕಾಂತ ತಂದೆ ಮಲ್ಲಿಕಾರ್ಜುನ ಸಾ: ಅಮಲಾಪುರ, ತಾ: ಬೀದರ ಇವರು ಬಾಲ ಕಾರ್ಮಿಕನನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದು ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯಿದೆ 1986 ಹಾಗೂ ತಿದ್ದುಪಡಿ ಕಾಯಿದೆ 2016 ರ ಕಲಂ. 3(ಎ) ಉಲ್ಲಂಘನೆಯಾಗಿರುತ್ತದೆ, ಮಗುವಿನ ವಯಸ್ಸಿನ ದೃಢಿಕರಣವನ್ನು ಶಾಲೆಯಿಂದ ಪಡೆಯಲು ವಿಳಂಬವಾಗಿದ್ದರಿಂದ ದೂರು ಸಲ್ಲಿಸಲು ವಿಳಂಬವಾಗಿರುತ್ತದೆ, ಸದರಿ ಉಲ್ಲಂಘನೆಯು ಸಜ್ಞೆಯ ಅಪರಾಧವಾಗಿದ್ದರಿಂದ ಆರೋಪಿ ಸೂರ್ಯಕಾಂತ ಇವರ ವಿರುದ್ಧ ಪ್ರಕರಣ ದಾಖಲಿಸಿಲು ವಿನಂತಿ ಅಂತ ನೀಡಿದ ದೂರಿನ ಮೇರೆಗೆ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 127/2020, ಕಲಂ. 3, 14(ಎ) ಬಾಲ ಕಾರ್ಮಿಕ ಕಾಯ್ದೆ 1986 :-
ದಿನಾಂಕ 24-08-2020 ರಂದು ಪ್ರಸನ್ನ, ಕಾರ್ಮಿಕ ನಿರೀಕ್ಷಕರು ಬೀದರ ರವರು ಠಾಣೆಗೆ ಹಾಜರಾಗಿ ಫಿರ್ಯಾದು ಸಲ್ಲಿಸಿದ್ದು ಸಾರಾಂಶವೇನೆಂದರೆ ದಿನಾಂಕ 31-07-2020 ರಂದು ಕಾರ್ಮಿಕರ ನಿರೀಕ್ಷಕರು ಬೀದರ, ಜಿಲ್ಲಾ ಮಕ್ಕಳ ರಕ್ಷಣಾದಿಕಾರಿಗಳು ಬೀದರ, ಸಿ.ಡಿ.ಪಿ.ಓ ಬೀದರ, ಯೋಜನಾ ನಿರ್ದೇಶಕರು, ಬಾಲ ಕಾರ್ಮಿಕ ಕೋಶ ಬೀದರ ಹಾಗೂ ಮಕ್ಕಳ ಸಹಾಯವಾಣಿ ಬೀದರ ಜಂಟಿಯಾಗಿ ನಡೆಸಲಾದ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ಮೆ. ಜೈ ಭವಾನಿ ಸವಿರ್ಸ ಸೆಂಟರ್ಸ ಚಿಟ್ಟಾ ರೋಡ ಗುಂಪಾ ಬೀದರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕು. ಪ್ರೇಮ ತಂದೆ ಲಲ್ಲು ವಯ: 14 ವರ್ಷ, ಸಾ: ಚಿಟ್ಟಾ, ತಾ: ಬೀದರ ಎಂಬ ಬಾಲ ಕಾರ್ಮಿಕನು ಸದರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು ಪತ್ತೆ ಹಚ್ಚಿ ಬಾಲ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು, ಆರೋಪಿ ರಂಜೀತ ತಂದೆ ಶೀವರಾಜ ಮೆ. ಜೈ ಭವಾನಿ ಸರ್ವಿಸ ಸೆಂಟರ್ಸ ಮಾಲೀಕ ಚಿಟ್ಟಾ ರೋಡ ಗುಂಪಾ ಬೀದರ ಇವರು ಬಾಲ ಕಾರ್ಮಿಕನನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದು ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯಿದೆ 1986 ಹಾಗೂ ತಿದ್ದುಪಡಿ ಕಾಯಿದೆ 2016 ರ ಕಲಂ. 3(ಎ) ಉಲ್ಲಂಘನೆಯಾಗಿರುತ್ತದೆ, ಮಗುವಿನ ವಯಸ್ಸಿನ ದೃಢಿಕರಣವನ್ನು ಶಾಲೆಯಿಂದ ಪಡೆಯಲು ವಿಳಂಬವಾಗಿದ್ದರಿಂದ ದೂರು ಸಲ್ಲಿಸಲು ವಿಳಂಬವಾಗಿರುತ್ತದೆ, ಸದರಿ ಉಲ್ಲಂಘನೆಯು ಸಜ್ಞೆಯ ಅಪರಾಧವಾಗಿದ್ದರಿಂದ ಆರೋಪಿ ರಂಜೀತ ಇವರ ವಿರುದ್ದ ಪ್ರಕರಣ ದಾಖಲಿಸಲು ವಿನಂತಿ ಅಂತ ನೀಡಿದ ದೂರಿನ ಮೇರೆಗ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 58/2020, ಕಲಂ. 279, 338 ಐಪಿಸಿ ಜೊತೆ 187 ಐಎಮವಿ ಕಾಯ್ದೆ :-
ದಿನಾಂಕ 24-08-2020 ರಂದು ಫಿರ್ಯಾದಿ ಎಂ.ಡಿ ಅಮ್ಜದ ತಂದೆ ಮನ್ಸೂರಮಿಯಾ, ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಕಮಠಾಣಾ, ತಾ: ಜಿ: ಬೀದರ ರರು ತಲೋಡಿಯಲ್ಲಿರುವ ಮಾವನ ಮನೆಯಿಂದ ಮುಲ್ತಾನ ಪಾಷಾ ದರ್ಗಾ ಮುಖಾಂತರವಾಗಿ ಕಮಠಾಣೆಗೆ ಹೊಗಲು ನಯಕಮಾನ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ವೈಟ್ ಹೌಸ್ ಅಂಗಡಿ ನಯಾಕಮಾನ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಮುಲ್ತಾನ ಪಾಷಾ ದರ್ಗಾ ಕಡೆಯಿಂದ ಒಂದು ಅಪರಿಚಿತ ಮೋಟಾರ ಸೈಕಲ ನೇದರ ಸವಾರ ತನ್ನ ಮೋಟಾರ ಸೈಕಲನ್ನು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗಾಲ ಮೋಣಕಾಲ ಕೆಳಗೆ ಭಾರಿ ರಕ್ತಗುಪ್ತಗಾಯ, ಬಲಗಾಲ ಅಂಗಾಲ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ನಂತರ 108 ಅಂಬುಲೇನ್ಸದಲ್ಲಿ ಬೀದರ ಸರಕಾರಿ ಆಸ್ಪತ್ರಗೆ ಬಂದು ಚಿಕಿತ್ಸೆ ಕುರಿತು ದಾಖಲಾಗಿದ್ದು ಇರುತ್ತದೆ ಅಂತ ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 70/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 24-08-2020 ರಂದು ಫಿರ್ಯಾದಿ ಪವಿತ್ರಾ ಗಂಡ ಕುಪೇಂದ್ರ ಅರಕಿ ಸಾ: ಮೀನಕೇರಾ ರವರ ಊರಿನ ವಾಲ್ಮಿಕಿ ಮಂದಿರದಲ್ಲಿ ಪೂಜೆ ಇರುವುದರಿಂದ ಫಿರ್ಯಾದಿಯು ತನ್ನ ಸಂಬಂದಿಯಾದ ಜಗದೇವಿ ಗಂಡ ಪ್ರಭು ಅರಕಿ ವಯ: 50 ವರ್ಷ ಮತ್ತು ಮಗಳಾದ ಮಹೇಶ್ವರಿ ತಂದೆ ಕುಪೇಂದ್ರ ವಯ: 12 ವರ್ಷ ಮೂವರು ಕೂಡಿ ಚಿಂಚೊಳಿ-ಬೀದರ ರೊಡ ರಾಜ್ಯ ಹೇದ್ದಾರಿ 15 ರೊಡಿನ ಪಕ್ಕದಲ್ಲಿರುವ ವಾಲ್ಮಿಕಿ ಗುಡಿಯ ಕಡೆ ಮೀನಕೇರಾದಿಂದ ನಡೆದುಕೊಂಡು ಹೊಗುತ್ತಿರುವಾಗ ಮೂವರು ತಮ್ಮೂರ ರೊಡಿನ ಪಕ್ಕದಲ್ಲಿರುವ ಮಜ್ಜಿದ ಹತ್ತಿರ ಇರುವಾಗ ಚಿಂಚೋಳಿ ಕಡೆಯಿಂದ ಮೊಟಾರ ಸೈಕಲ್ ನಂ. ಕೆಎ-38/ಕ್ಯೂ-9082 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗು ನೀಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೊಗುತ್ತಿದ್ದ ಮೂವರಿಗೂ ಎದುರಿನಿಂದ ಬಂದು ಡಿಕ್ಕಿ ಮಾಡಿ ತನ್ನ ಮೊಟಾರ ಸೈಕಲ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತಲೆಗೆ ರಕ್ತಗಾಯ, ಜಗದೇವಿ ರವರಿಗೆ ಎಡಗಾಲ ಮೊಳಕಾಲ ಕೆಳಗೆ ಕಾಲು ಮೂರಿದು ಭಾರಿ ಗಪ್ತಗಾಯ, ಎದೆಗೆ ಗುಪ್ತಗಾಯ, ಮೂಗಿಗೆ ಹಣೆಗೆ ತರಚಿದ ರಕ್ತಗಾಯವಾಗಿರುತ್ತದೆ, ಮಗಳು ಮಹೇಶ್ವರಿ ಇವಳಿಗೆ ಬಲ ಸೊಂಟದಲ್ಲಿ ಗುಪ್ತಗಾಯ, ಬಲ ಮೇಲಕಿಗೆ ಗುಪ್ತಗಾಯ, ಬಲಗಾಲ ಮೊಳಕಾಲ ಕೇಳಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಮೂವರಿಗೂ ತಮ್ಮೂರ ದಶರಥ ಅರಕಿ ಮತ್ತು ರಮೇಶ ಭೋವಿ ಇಬ್ಬರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 50/2020, ಕಲಂ. 420, 465, 468 ಐಪಿಸಿ :-
ಆರೋಪಿ ಮೊಹ್ಮದ ಅಸ್ಲಂ ಶಿಕ್ಷಕರು ಸರಕಾರಿ ಪ್ರಾಥಮಿಕ ಉರ್ದು ಶಾಲೆ ಹೊನ್ನಡಿ ತಾ: ಜಿ: ಬೀದರ ಇವರು 2007 ರ ಡಿ.ಎಲ.ಆರ.ಸಿ ನೇಮಕಾತಿಯಲ್ಲಿ ಸುಳ್ಳು ಗ್ರಾಮೀಣ ಪ್ರಮಾಣ ಪತ್ರ ನೀಡಿ ಪ್ರಾಥಮೀಕ ಶಾಲಾ ಶಿಕ್ಷಕರ ಹುದ್ದೆ ಪಡೆದಿರುತ್ತಾರೆ, ನಂತರ ಶಿಕ್ಷಣ ಇಲಾಖೆ ವತಿಯಿಂದ ಈ ವಿಷಯವಾಗಿ ಪರಿಶೀಲಿಸಲಾಗಿ ಅವರು ಸುಳ್ಳು ಗ್ರಾಮೀಣ ಪ್ರಮಾಣ ಪತ್ರ ನೀಡಿ ನೇಮಕಾತಿಯಲ್ಲಿ ಮೋಸ ಮಾಡಿರುತ್ತಾರೆಂದು ಗೊತ್ತಾಗಿರುತ್ತದೆ ಅಂತ ಫಿರ್ಯಾದಿ ಸೂರ್ಯಕಾಂತ ಮದಾನೆ ಸರ್ಕಾರಿ ಅಧಿಕಾರಿ ಬಿ.ಇ.ಓ ಕಛೇರಿ ಬೀದರ ರವರು ನೀಡಿದ ದೂರಿನ ಮೇರೆಗೆ ಸದರಿ ಆರೋಪಿತನ ವಿರುದ್ಧ ದಿನಾಂಕ 24-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 66/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 24-08-2020 ರಂದು ಹುಲಸೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 5 ಜನರು ಹಣ ಹಚ್ಚಿ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ಗೌತಮ ಪಿಎಸ್ಐ ಹುಲಸೂರ ಪೊಲೀಸ ಠಾಣೆ ರವರಿಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹುಲಸೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಹೋಗಿ ಗಿಡದ ಮರೆಯಾಗಿ ನಿಂತು ನೋಡಲು ಹುಲಸೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಕುತ್ತಬೋದ್ದಿನ ತಂದೆ ಮೈನೋದ್ದಿನ ಶೇಖ ವಯ: 42 ವರ್ಷ, ಜಾತಿ: ಮುಸ್ಲಿಂ, 2) ಅನ್ವರ ಪಾಷಾ ತಂದೆ ಮಹೇಬೂಬ ಪಾಷಾ ಮೋಮಿನ ವಯ: 26 ವರ್ಷ, ಜಾತಿ: ಮುಸ್ಲಿಂ, 3) ಬಬಲು ತಂದೆ ಫತರುಸಾಬ ಮುಗಡೆ ವಯ: 25 ವರ್ಷ, ಜಾತಿ: ಮುಸ್ಲಿಂ, 4) ಮಸ್ತಾನ ತಂದೆ ಜೈನೋದ್ದಿನ ಶೇಖ ವಯ: 23 ವರ್ಷ, ಜಾತಿ: ಮುಸ್ಲಿಂ, 5) ಫಾರೂಕ ತಂದೆ ಅಕ್ಬರ ಅಲಿ ಮುಲ್ಲಾ ವಯ: 33 ವರ್ಷ, ಜಾತಿ ಮುಸ್ಲಿಂ, ಎಲ್ಲರೂ ಸಾ: ಹುಲಸೂರ ಇವರೆಲ್ಲರೂ ಗೋಲಾಕಾರವಾಗಿ ಕುಳಿತು ಹಣ ಹಚ್ಚಿ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಅವರಿಂದ ಒಟ್ಟ ನಗದು ಹಣ 1570/- ರೂ. ಮತ್ತು 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 111/2020, ಕಲಂ. ಮಹಿಳೆ ಕಾಣೆ :-
ದಿನಾಂಕ 24-08-2020 ರಂದು ಫಿರ್ಯಾದಿ ರೇವಣಪ್ಪಾ ತಂದೆ ಮಾಳಪ್ಪಾ ಬೀರಗೊಂಡ, ವಯ: 55 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಲ್ಲೂರ, ತಾ: ಹುಮನಾಬಾದ ರವರ ಮಗಳಾದ ಜ್ಯೋತಿ ಇಕೆಯು ತನ್ನ ಗಂಡನೊಂದಿಗೆ ತಕ್ಕರಾರು ಮಾಡಿಕೊಂಡಿದರಿಂದ ತನ್ನ ಮಗಳು ಮತ್ತು ಮೊಮ್ಮಗಳಿಗೆ ಸುಮಾರು 20 ದಿವಸಗಳ ಹಿಂದೆ ಕರೆದುಕೊಂಡು ಕಲ್ಲೂರಕ್ಕೆ ಬಂದಿದ್ದು, ಹೀಗಿರುವಾಗ ದಿನಾಂಕ 23-08-2020 ರಂದು 1000 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಹೆಂಡತಿಯ ಜೊತೆಯಲ್ಲಿ ತಮ್ಮ ಹೊಲದಲ್ಲಿನ ಹೆಸರಿನ ಬೇಳೆ ರಾಶಿ ಮಾಡುವ ಸಲುವಾಗಿ ಹೋಗುವಾಗ ಮನೆಯಲ್ಲಿ ಮಗಳು ಜ್ಯೋತಿ ಮತ್ತು ಮೊಮ್ಮಗಳು ಹರ್ಷಿತಾ ಇಬ್ಬರು ಮನೆಯಲ್ಲಿ ಇದ್ದರು, ನಂತರ 1400 ಗಂಟೆಯ ಸುಮಾರಿಗೆ ಫಿರ್ಯಾದಿಯು ಮನೆಗೆ ಬಂದು ನೋಡಲಾಗಿ ಮನೆಯಲ್ಲಿದ್ದ ಮಗಳು ಜ್ಯೋತಿ ಇಕೆಯು ಮೊಮ್ಮಗಳಾದ ಹರ್ಷಿತಾ ಇವಳೊಂದಿಗೆ ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ನೋಡಿ ಮನೆಯಲ್ಲಿ ಯಾರಿಗೂ ಹೇಳದೆ ಮನೆಯಿಂದ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ ಬರದೇ ಕಾಣೆಯಾಗಿರುತ್ತಾಳೆ, ಫಿರ್ಯಾದಿಯು ಎಲ್ಲಾ ಕಡೆ ಹಾಗೂ ತಮ್ಮ ಸಂಬಂಧಿಕರಿಗೆ ಕಾಣೆಯಾದ ಮಗಳು ಜ್ಯೋತಿ ಮತ್ತು ಮೊಮ್ಮಗಳು ಹರ್ಷಿತಾಳ ಬಗ್ಗೆ ವಿಚಾರಿಸಲು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.