ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 31-05-2019 ರಂದು ಬಡದಾಳ ಗ್ರಾಮದ ಶರಣಪ್ಪ ತಂದೆ ಶಿವಪ್ಪ ಮಾಶಾಳ ಎಂಬುವವರು ಮಣೂರ ಯಲ್ಲಮ್ಮ ಧೇವಿಗೆ ದೇವರ ಕಾರ್ಯಕ್ರಮ ಮಾಡಿರುತ್ತಾರೆ. ಸದರಿ ಕಾರ್ಯಕ್ರಮಕ್ಕೆ ನನ್ನ ತಮ್ಮನು ಸಹ ಹೋಗಿರುತ್ತಾನೆ. ಇಂದು ಸಾಯಂಕಾಲ 4:45 ಗಂಟೆಗೆ ನಾನು ನಮ್ಮೂರಿನಲ್ಲಿದ್ದಾಗ ನಮ್ಮ ಸೋದರ ಮಾವನಾದ ಸಿದ್ದಪ್ಪ ತಂದೆ ಸಂಗಪ್ಪ ನಾಟಿಕಾರ ಸಾ|| ಬಡದಾಳ ಈತನು ನನಗೆ ಪೋನ ಮಾಡಿ ನಿಮ್ಮ ತಮ್ಮನಾದ ಬಸವರಾಜ ಅವನ ಗೆಳೆಯನಾದ ಹೋನ್ನಪ್ಪ ತಂದೆ ಬಸಣ್ಣ ಪರೀಟ್ ಇಬ್ಬರು ಕೂಡಿ ಯಲ್ಲಪ್ಪ ತಂದೆ ಭೀಮಶಾ ತಳವಾರ ಸಾ|| ಸಿಂದಗಿ ಇವರ ಹಿರೊ ಸಿಡಿ ಡಿಲೆಕ್ಸ ಕಂಪನಿಯ ಮೋಟರ ಸೈಕಲ ನಂ ಕೆಎ-28 ಇಬಿ-8506 ನೇದ್ದರ ಮೇಲೆ ಮಣೂರ ಯಲ್ಲಮ್ಮ ಧೇವಿಯ ದೇವರ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬಡದಾಳಕ್ಕೆ ಹೋಗುತ್ತಿದ್ದಾಗ ಈಗ ಸಾಯಂಕಾಲ 4:30 ಗಂಟೆ ಸುಮಾರಿಗೆ ಕರಜಗಿ ಗ್ರಾಮದ ಹೈದ್ರಾ ಕ್ರಾಸಿನಲ್ಲಿರುವ ಪೆಟ್ರೋಲ ಬಂಕ ಹತ್ತಿರ ನಿನ್ನ ತಮ್ಮನು ನಡೆಸುತ್ತಿದ್ದ ಮೋಟರ ಸೈಕಲಕ್ಕೆ ಟಂ ಟಂ ನಂ ಕೆಎ-32 ಎ-5467 ನೇದ್ದರ ಚಾಲಕ ಟಂ ಟಂ ನ್ನು ಎದುರಿನಿಂದ ಅತಿ ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಡಿಕ್ಕಿ ಪಡಿಸಿರುತ್ತಾನೆ ಇದರಿಂದ ನಿನ್ನ ತಮ್ಮನಿಗೆ ಮತ್ತು ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ ಹೊನ್ನಪ್ಪ ಪರೀಟ್ ಇಬ್ಬರಿಗೂ ಭಾರಿ ಗಾಯಗಳಾಗಿರುತ್ತವೆ. ನಿನ್ನ ತಮ್ಮನನ್ನು ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದೇವೆ ನೀವು ಬನ್ನಿ ಅಂತಾ ತಿಳಿಸಿರುತ್ತಾರೆ. ಸದರಿ ಸುದ್ದಿ ಕೇಳಿ ನಾನು ಮತ್ತು ನನ್ನ ತಂದೆಯ ಅಣ್ಣ ತಮ್ಮರಾದ ಸಂಜೀವ ವಾಲಿಕಾರ, ಶ್ರೀಶೈಲ ವಾಲಿಕಾರ, ಶಿವಪ್ಪ ವಾಲಿಕಾರ ನಾಲ್ಕು ಜನರು ಕೂಡಿ ಅಫಜಲಪೂರಕ್ಕೆ ಹೊರಟಿರುತ್ತೇವೆ. ನಂತರ 6:00 ಗಂಟೆ ಸುಮಾರಿಗೆ ನನ್ನ ಮಾವನಾದ ಸಿದ್ದಪ್ಪ ನಾಟಿಕಾರ ಈತನು ನನಗೆ ಪೋನ ಮಾಡಿ ನಿನ್ನ ತಮ್ಮನು ಕಲಬುರಗಿಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಗೋಬ್ಬುರ (ಬಿ) ಹತ್ತಿರ ಮೃತ ಪಟ್ಟಿರುತ್ತಾನೆ. ನೀವು ಅಫಜಲಪೂರಕ್ಕೆ ಬನ್ನಿ ಅಂತ ತಿಳಿಸಿದ ಮೇರೆಗೆ ನಾವು ಅಫಜಲಪೂರಕ್ಕೆ ಬಂದಿದ್ದು, ಸ್ವಲ್ಪ ಸಮಯದ ನಂತರ ನನ್ನ ತಮ್ಮನ ಶವವು ಅಫಜಲಪೂರಕ್ಕೆ ಬಂದಿದ್ದು, ನನ್ನ ತಮ್ಮನ ಶವವನ್ನು ಅಫಜಲಪೂರದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ತಂದು ಹಾಕಿರುತ್ತೇವೆ. ಅಂತಾ
ಶ್ರೀ ಸಿದ್ದಾರಾಮ ತಂದೆ ಬುದ್ದಪ್ಪ ವಾಲಿಕಾರ ಸಾ|| ಚಿಕ್ ಬೇನೂರ ತಾ|| ಇಂಡಿ ಜಿ|| ವಿಜಯಪೂರ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು
ಪ್ರಕರಣಗಳು :
ಚೌಕ ಠಾಣೆ : ಶ್ರೀಮತಿ
ಪ್ರಭಾವತಿ ಗಂಡ ಸಿದ್ರಾಮಪ್ಪ ಕಣ್ಣಿ, ಸಾ: ಸಂಜಯಗಾಂಧಿನಗರ
ದುಬೈಕಾಲೂನಿ ಕಲಬುರಗಿ ರವರ ಮದುವೆಯು ಕಳೆದ ಆರು ವರ್ಷಗಳ ಹಿಂದೆ ಕಲಬುರಗಿಯ ಸಂಜಯಗಾಂಧಿ ನಗರ ದುಬೈ
ಕಾಲೂನಿಯ ಸಿದ್ರಾಮಪ್ಪ ತಂದೆ ಸುಭಾಶ ಕಣ್ಣಿ ಇವರೊಂದಿಗೆ ಆಗಿದ್ದು ಇರುತ್ತದೆ. ನಮಗೆ ಸೃಷ್ಠಿ ಅಂತಾ ಐದು ತಿಂಗಳ ಹೆಣ್ಣುಮಗಳು ಇರುತ್ತಾಳೆ. ನನ್ನ
ಗಂಡ ಸಿದ್ರಾಮಪ್ಪ ತಂದೆ ಸುಭಾಶ ಕಣ್ಣಿ, ಇವರ ಎಡಗಾಲು ಅಂಗವಿಕಲಾಗಿ ಕುಂಟುತ್ತಾ
ನಡೆಯುತ್ತಿದ್ದರು. ಆದರೂ ಸಹ ಒಂದು ಟಾಟಾ ಎಸಿ ವಾಹನ ಇಟ್ಟುಕೊಂಡು ಅದರ ಮೇಲೆ
ಡ್ರೈವರ ಕೆಲಸ ಮಾಡಿಕೊಂಡಿದ್ದರು. ಈಗ 2-3 ದಿವಸಗಳ
ಹಿಂದೆ ನನ್ನ ಗಂಡನಿಗೆ ಆರಾಮ ತಪ್ಪಿದ್ದರಿಂದ ಖಾಸಗಿಯಾಗಿ ವೈದ್ಯರ ಹತ್ತಿರ ಉಪಚಾರ ಪಡೆದುಕೊಂಡಿದ್ದು
ವೈದ್ಯರು ಅವರಿಗೆ ಗೊಳಿ, ಔಷದ ತಗೆದುಕೊಳ್ಳುವಂತೆ ತಿಳಿಸಿದ ಮೇರೆಗೆ ಮನೆಯಲ್ಲಿಯೇ
ಗೊಳಿ, ಔಷದ ತಗೆದುಕೊಳ್ಳುತ್ತಿದ್ದರು. ದಿನಾಂಕ.30.05.2019
ರಂದು ಬೆಳಿಗ್ಗೆ 8.30 ಗಂಟೆಗೆ ನನ್ನ ಗಂಡ ಮನೆಯಿಂದ ಹೊರಗೆ
ಹೋಗಿ ಮರಳಿ ರಾತ್ರಿ 9.00 ಗಂಟೆಗೆ ಮನೆಗೆ ಬಂದಿದ್ದು ಆಗ ನಾನು ನಮ್ಮ ಅತ್ತೆ
ಮಹಾದೇವಿ, ನೆಗೆಣಿ ಸರೋಜಾ, ಮೈದುನ ಶರಣಕುಮಾರ
ಕೂಡಿ ಮನೆಯಲ್ಲಿ ಊಟ ಮಾಡುತ್ತಿದ್ದೇವು. ನನ್ನ ಗಂಡನಿಗೂ ಸಹ ಊಟ ಮಾಡಲು ಕರೆದಿದ್ದು
ಆಗ ಅವರು ಊಟ ಮಾಡುವುದಿಲ್ಲ ಅಂತಾ ಹೇಳಿ ನೀರು ಕುಡಿದು ಮಲಗಿಕೊಂಡರು. ಬೆಳಿಗ್ಗೆ
4.00 ಗಂಟೆ ಸುಮಾರಿಗೆ ನನ್ನ ಗಂಡ ನನಗೆ ಎಬ್ಬಿಸಿ ರಾತ್ರಿ ದವಖಾನಿ ಗೊಳಿ ತಗೆದುಕೊಳ್ಳಲು
ಹೋಗಿ ಪಕ್ಕದಲ್ಲಿದ್ದ ಇಲಿ ಸಾಯುವ ಔಷದ ಗೊಳಿ ತಪ್ಪಾಗಿ ತಗೆದುಕೊಂಡಿರುತ್ತೇನೆ ನನಗೆ ಕಸಿವಿಸಿಯಾಗಿ
ಉಲ್ಟಿ ಬರುತ್ತಾಯಿದೆ ಅಂತಾ ಹೇಳಿದ್ದರಿಂದ ನಮ್ಮ ಅತ್ತೆ ಮತ್ತು ನಮ್ಮ ಮೈದುನ ಕುಡಿ ನನ್ನ ಗಂಡನಿಗೆ
ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಒಂದು ಆಟೋದಲ್ಲಿ ಕೂಡಿಸಿಕೊಂಡು ಹೋದರು. ನಂತರ ನಾನು ಸಹ ಸರ್ಕಾರಿ ಆಸ್ಪತ್ರೆಗೆ ಹೋಗಿರುತ್ತೇನೆ. ಅಲ್ಲಿಯ
ವೈದ್ಯರು ನನ್ನ ಗಂಡನಿಗೆ ಹೆಚ್ಚಿನ ಉಪಚಾರಕ್ಕಾಗಿ ಸನರೈಸ್ ಆಸ್ಪತ್ರೆಗೆ ತಗೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ
ಗಂಡನಿಗೆ ಸರ್ಕಾರಿ ಆಸ್ಪತ್ರೆಯಿಂದ ಸನರೈಸ್ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು, ನನ್ನ ಗಂಡ ಸನರೈಸ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಚಿಕಿತ್ಸೆ ಪಲಕಾರಿಯಾಗದೇ ಇಲಿ ಸಾಯುವ
ಔಷದಿ ಗೊಳಿಗಳನ್ನು ನುಂಗಿದ್ದರಿಂದ ಇಂದು ದಿನಾಂಕ.31.05.2019 ರಂದು ಬೆಳಗಿನ
ಜಾವ 5.06 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.