Police Bhavan Kalaburagi

Police Bhavan Kalaburagi

Sunday, October 16, 2016

Kalaburagi District Reported Crimes

ಕೊಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ರವಿ ತಂದೆ ಚೆನ್ನವೀರ ಜಮಾದಾರ ಸಾ; ಗಂಗಾನಗರ  ಹನುಮಾನ ಗುಡಿ ಹತ್ತಿರ  ಕಲಬುರಗಿ ಇವರು ಈಗ ಎರಡು ವರ್ಷದ ಹಿಂದೆ ಕೈಲಾಸ ನಗರ ದ ಕೃಷ್ಣಾರೆಡ್ಡಿ ಇವರಿಗೆ ಕೊಲೆಗೆ ಯತ್ನಿಸಿದ್ದರಿಂದ ನನ್ನ ತಮ್ಮನ ಹೆಸರು  ಕೂಡಾ ಇತ್ತು. ಅದೇ ಹಳೆ ವೈಮನಸ್ಸು ಕೃಷ್ಣಾರೆಡ್ಡಿಯ ಕಡೆಯವರು ನನ್ನ ತಮ್ಮನ ಮೇಲೆ ದ್ವೇಷ ಸಾದಿಸುತ್ತಾ ಬಂದಿದ್ದು ಇದೆ.  ದಿನಾಂಕ 12/10/16 ರಂದು ಬೆಳ್ಳಿಗ್ಗೆ 10 ಗಂಟೆಗೆ ನನ್ನ ತಮ್ಮ  ವಿಜಯಕುಮಾರ ಈತನು ತನ್ನ ಗೆಳೆಯರೊಂದಿಗೆ ತುಳಾಜಾ ಪೂರಕ್ಕೆ ಹೋಗುವ ಕುರಿತು ಅವನ ಗೆಳೆಯರಾದ 1) ನಾಗೇಶ ತಂದೆ ಶ್ರೀಶೈಲ ಜಮಾದಾರ 2) ಶ್ರೀಪಾದ ತಂದೆ ಲಕ್ಷ್ಮಣ ವಾಡಿ 3) ಕಿರಣ ತಂದೆ ತಿಪ್ಪಣ್ಣಾ ಪೂಜಾರಿ 4) ಅರುಣ ತಂದೆ ಸಿದ್ದಾರಾಮ ಜಮಾದಾರ 5) ಸುನೀಲ ತಂದೆ ರಾಜು ದುಬಿಲಗುಂಡಿ 6) ಸಾಗರ ತಂದೆ ಪ್ರಕಾಶ ಶ್ರೀಮಾನುರ ಕೂಡಿ ನಡೆದುಕೊಂಡು ಮನೆಯಿಂದ ಹೋದರು. ದಿನಾಂಕ 14/10/16 ರಂದು 9:30 ಪಿಎಮಕ್ಕೆ ತುಳಾಜಾಪೂರಕ್ಕೆ ಹೋದ ಶ್ರೀಪಾದ ವಾಡಿ ಇತನು ನಮ್ಮ ಅತ್ತೆಯ ಮಗನಾದ ಸುಭಾಷ ಚಿನ್ನಪ್ಪಳ್ಳಿ ಈತನಿಗೆ ಪೋನ ಮಾಡಿ ವಿಜಯಕುಮಾರನಿಗೆ ಸ್ವಾಮಿ ವೀರೇಶ ಇತರರು ಕೂಡಿ ಹೊಡೆದು ಬುಲೇರೋದಲ್ಲಿ ಹಾಕಿಕೊಂಡು ಹೋಗಿದ್ದಾರೆಂದು ನಳದುರ್ಗದಿಂದ ತಿಳಿಸಿದ ವಿಷಯ ನನಗೆ ಗೋತ್ತಾಗಿ ನಾನು, ಮಹೇಶ ತಂದೆ ಲಕ್ಷ್ಮಿಕಾಂತ, ಅಂಬರೀಶ ತಂದೆ ಕ್ರೀಷ್ಣಾ  ನನ್ನ ತಮ್ಮ ಕಿರಣ ಅಳಿಯ ಸುಬಾಷ ಕೂಡಿ ಅದೇ ರಾತ್ರಿ ನಳದುರ್ಗಕ್ಕೆ ಹೋಗಿ ಶ್ರೀಪಾದನಿಗೆ ವಿಚಾರಿಸಲು ತಿಳಿಸಿದೆನೆಂದರೆ. ನಾನು ಹಾಗೂ ಮೇಲಿನ 5 ಜನರು ಕೂಡಿ ತುಳಾಜಾಪೂರಕ್ಕೆ ಹೋಗುವಾಗ ದಿನಾಂಕ:12/10/16 ರಂದು ರಾತ್ರಿ ಆಳಂದದಲ್ಲಿ ವಸತಿ ಮಾಡಿ ಬೆಳ್ಳಿಗ್ಗೆ ದಿನಾಂಕ: 13/10/16 ರಂದು ಅಚಲೇರಿಯಲ್ಲಿ ಹೋಗಿ ವಸತಿ ಮಾಡಿ ದಿನಾಂಕ 14/10/16 ರಂದು ಬೆಳ್ಳಿಗ್ಗೆ 7-8 ಗಂಟೆಗೆ ಅಚಲೇರಿ ಯಿಂದ ಬಿಟ್ಟು ಸಾಯಂಕಾಲ 7 ಗಂಟೆಯ ಸುಮಾರಿಗೆ ನಳದುರ್ಗದ ನೀರಿನ ಟ್ಯಾಂಕ ಹತ್ತಿರ ಉಳಿದಾಗ ಅಚಲೇರಿಯಲ್ಲಿ ವಿಜಯಕುಮಾರ, ವೀರೇಶ ಸ್ವಾಮಿ ಜಗಳ ಮಾಡಿದ್ದರಿಂದ ಜಗಳದ ವಿಷಯವಾಗಿ ವಿರೇಶ ಸ್ವಾಮಿ ಕಡೆಯಿಂದ ಬುಲೇರೋ ವಾಹನ ಮತ್ತು ಸ್ಕಾರ್ಪಿಯೋ ವಾಹನ  ಮತ್ತು ಮೂರು ನಾಲ್ಕು ಮೋಟಾರ ಸೈಕಲ ಮೇಲೆ ಪರಿಚಯದವರಾದ ಭೋಕೆಡ ಶಿವು, ಸಾಮಾನಿ ಅಂಬ್ರೇಷ, ಜಿಮ್ಮ ಶ್ರೀಕಾಂತ, ಕೃಷ್ಣಾರೆಡ್ಡಿ, ಬುಡ್ಡ ವೀರಯ್ಯ, ಟಬ್ಬ ವಿರ್, ಬೆಂಕಿ ವಿರ್‌‌, ಬಿಲ್ಡರ ಮಂಜು ಬೋಕಡ ಪ್ರಕಾಶ ಇವರು ಇದ್ದು. ವಿಜಯಕುಮಾರನಿಗೆ ತಲೆಯ ಮೇಲೆ ರಾಡಿನಿಂದ ಹೊಡೆದು ಬುಲೇರೋ ಜೀಪಿನಲ್ಲಿ ಹಾಕಿಕೊಂಡು ಹೋಗಿರುತ್ತಾರೆ. ಎಂದು ತಿಳಿಸಿದಾಗ ಈ ಬಗ್ಗೆ ನಳದುರ್ಗ ಪೊಲೀಸ ಠಾಣೆಗೆ ಹೋಗಿ ದೂರು ನೀಡಲು ಅವರು ನಮಗೆ ಬೈದು ಕಳುಹಿಸಿದ್ದು ದಿನಾಂಕ 15/10/16 ರಂದು ಬೆಳಗಿನ ಜಾವ ನಾನು ಮನೆಗೆ ಬಂದಾಗ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಫರಹತಾಬಾದ ಪೊಲೀಸರು ಒಂದು ಶವ ತಂದಿದ್ದಾರೆ ಎಂದು ಗೋತ್ತಾಗಿ ನಾನು ಮತ್ತು ಇತರರೂ ಕೂಡಿ ದವಾಖಾನೆಗೆ ಬಂದು ನೋಡಲಾಗಿ ಸದರಿ ಶವ ನನ್ನ ತಮ್ಮ ವಿಜಯಕುಮಾರನದೆ ಇದ್ದು. ಸದರಿ ಯವನ ತಲೆಯ ಮೇಲೆ ಬಲಗಣ್ಣಿನ ಹುಬ್ಬಿಗೆ ಬಲರಟ್ಟೆಗೆ 2`` ಉದ್ದನೆಯ ಗಾಯ ಮೊಣಕೈಗೆ ತರಚಿದ ಗಾಯವಾಗಿ ದ್ದು ಅಲ್ಲದೇ ಬಲ ಸೊಂಟದ ಕೆಳಗೆ ಗುಪ್ತಾಂಗದ ಹತ್ತಿರ ಬಲ ಭಾಗಕ್ಕೆ ಚಾಕುವಿನಿಂದ ಹೊಡೆದ 1’’ ಸುತ್ತಳತೆಯ ಆಳವಾದ ಭಾರಿ ರಕ್ತಗಾಯವಾಗಿದ್ದು ಹಾಗೂ ಎಡ ಮೋಣಕಾಲ ಮೇಲೆ 1 ಇಂಚು ಉದ್ದ ಗಾಯವಿದ್ದು ಹಾಗೂ ಎಡ ಒಳ ಹಡ್ಡೆಯ ಮೇಲೆ ಚಾಕುವಿನಿಂದ ತಿವಿದ ಗಾಯ ವಾಗಿದ್ದು ಇದೆ. ನನ್ನ ತಮ್ಮನಿಗೆ ಹಳೆಯ ವೈಮನಸ್ಸಿನಿಂದ ಸ್ವಾಮಿ, ವೀರೇಶ, ಕೃಷ್ಣಾರೆಡ್ಡಿ ಹಾಗೂ ಎಂಟು ಜನರು ಹಾಗೂ ಇತರರು ಹೊಡೆಬಡೆ ಮಾಡಿ ಬುಲೇರೋ ವಾಹನದಲ್ಲಿ ಹಾಕಿಕೊಂಡು ಕೊಲೆ ಮಾಡಿ ಸಾಕ್ಷಿಯನ್ನು ನಾಶಪಡಿಸುವ ಸಂಬಂದ ಕಲಬುರಗಿ ಜೇವರ್ಗಿ ರೋಡಿನ ಸಿರನೂರ ಗ್ರಾಮದ ಹತ್ತಿರ ರೋಡಿನ ಬದಿಯಲ್ಲಿ ಬಿಸಾಕಿ ಹೋಗಿದ್ದು ಇದೆ. ಸದರಿ ಘಟನೆ ದಿನಾಂಕ 14/10/16 ರಂದು 8 ಪಿಎಮದಿಂದ 15/10/16 ರ ಬೆಳಗಿನ ಜಾವದ 5 ಗಂಟೆಯ ಮದ್ಯದ ಅವಧಿಯಲ್ಲಿ ಜರುಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ15-10-16 ರಂದು ರಾತ್ರಿ ಟ್ಯಾಕ್ಟ್ರರ ನಂಬರ KA 32  726  ಮತ್ತು ಟ್ಯಾಕ್ಟ್ರರ ಟ್ರಾಲಿ ನಂಬರ KA 32  727  ಚಾಲಕ ಕಲ್ಲಹಂಗರಗಾ ಸೀಮಾಂತರದಲ್ಲಿ ಇರುವ ಜಗದಂಬಾ ದಾಬಾದ ಎದುರುಗಡೆ ಇರುವ ಚಿಂಚನಸೂರ- ಕಲ್ಲಹಂಗರಗಾಕ್ಕೆ ಹೋಗುವ ಮುಖ್ಯ ರಸ್ತೆಯ ಮೇಲೆ ಒಬ್ಬ ಟ್ಯಾಕ್ಟ್ರರ ಚಾಲಕ ರೋಡಿನ ಎಡಭಾಗದ ಮೇಲೆ ಹೋಗು-ಬರುವ ವಾಹನಗಳ ರಸ್ತೆ ಸಂಚಾರಕ್ಕೆ ಅಡೆ ತಡೆಯಾಗುವ ರೀತಿಯಲ್ಲಿ ಮತ್ತು ಮಾನವನ ಜೀವನಕ್ಕೆ ಅಪಾಯವಾಗುವ ರೀತಿಯಲ್ಲಿ ಹಾಗೂ ಯಾವುದೇ ಮುನ್ಸೂಚನೇ ಹಾಕದೇ ಮತ್ತು ಇಂಡಿಕೇಟರ ಲೈಟ್ ಹಾಕದೇ ಟ್ಯಾಕ್ಟ್ರರ ನಿಲ್ಲಿಸಿದ್ದರಿಂದ ಫಿರ್ಯಾದಿ ಮಗ ನಾಗಯ್ಯ ಇತನು ಕಲಬುರಗಿ ಕಡೆಯಿಂದ ತನ್ನ ಹಿರೋ ಸ್ಪೆಂಡರ ಪ್ಲಸ್ ಕೆಎ 32 EC 4177 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ರೋಡಿನ ಮೇಲೆ ನಿಲ್ಲಿಸಿದ ಟ್ಯಾಕ್ಟ್ರರಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ, ಅವನ ಹಣೆಗೆ ಮತ್ತು ತಲೆ ಹಿಂದೆ ಭಾರಿ ರಕ್ತಗಾಯವಾಗಿ ಟ್ಯಾಕ್ಟ್ರರ ಹಿಂಬದಿಯಲ್ಲಿ ಸತ್ತು ಬಿದ್ದಿದ್ದು ಇರುತ್ತದೆ. ಸದರಿ ಘಟನೆಯು ಈ ಮೇಲೆ ಹೇಳಿದಂತೆ ಟ್ಯಾಕ್ಟ್ರರ ನಂಬರ KA 32  726  ಮತ್ತು ಟ್ಯಾಕ್ಟ್ರರ ಟ್ರಾಲಿ ನಂಬರ KA 32  727  ಚಾಲಕ ಮತ್ತು ಹಿರೋ ಸ್ಪೆಂಡರ ಪ್ಲಸ್ ಕೆಎ 32 EC 4177 ನೇದ್ದರ  ಚಾಲಕ ನನ್ನ ಮಗ ನಾಗಯ್ಯ ಇವರಿಬ್ಬರ ತಪ್ಪಿನಿಂದ ಈ ಅಪಘಾತ ಸಂಭವಿಸಿದ್ದರಿಂದ ಮೃತಪಟ್ಟಿರುತ್ತಾನೆ ಅಂತಾ ಶ್ರೀ ನಿಂಗಯ್ಯಾ ತಂದೆ ಬಸಯ್ಯಾ ಕಾಕಂಡಿ ಸಾ : ಚಿಂಚನಸೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ದಿನಾಂಕ: 13/10/2016 ರಂದು ಸಾಯಂಕಾಲ ನನ್ನ ತಂದೆಯಾದ ಶ್ರೀ ಪಾಂಡು ತಂದೆ ದೇಸು ರಾಠೋಡ ಇವರು ತಮ್ಮ ಮೋಟಾರ ಸೈಕಲ ನಂಬರ ಕೆ ಎ 32 ಇಜಿ 4004 ನೇದ್ದು ತೆಗೆದುಕೊಂಡು ಭಂಕೂರವಾಡ ತಾಂಡದಿಂದ ಶಹಾಬಾದ ಬಜಾರಕ್ಕೆ ಹೋಗುತ್ತಿದ್ದಾಗ ವಾಡಿ ಕ್ರಾಸ ನಿಂದ ಶಹಾಬಾದ ಕಡೆಗೆ ಹೋಗುವ ರಸ್ತೆಯಲ್ಲಿ ಜೆ.ಪಿ ಕಂಪನಿಯ ಹತ್ತಿರ ರಸ್ತೆಯಲ್ಲಿ ಸಾಯಂಕಾಲ 5-00 ಗಂಟೆಗೆ ಶಹಾಬಾದ ಕಡೆಯಿಂದ ಒಬ್ಬ ಟವೇರಾ ವಾಹನ ನಂಬರ ಕೆ.ಎ. 32 ಎಮ್ 5836 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿಯ ತಂದೆ ನಡೆಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಎದುರಾಗಿ ಡಿಕ್ಕಿ ಹೋಡಿದ್ದು ತನ್ನ ಟವೇರಾ ವಾಹನವನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ಟವೇರಾ ವಾಹನ ಚಾಲಕನು ವಾಹನವನ್ನು ಸ್ಥಳದಲ್ಲಿಯೇ ಬೀಟ್ಟು ಓಡಿ ಹೋಗಿರುತ್ತಾನೆ ಅಂತಾ ನಮಗೆ ಪರಿಚಿಯದ ಜೈರಾಮ ತಂದೆ ಶಿವಾಜಿ ಇವರು ವಿಷಯ ತಿಳಿಸಿದ್ದರಿಂದ ನಾನು ಬಂದು ನೋಡಲು ವಿಷಯ ನಿಜವಿದ್ದು ನೋಡಲಾಗಿ ನಮ್ಮ ತಂದೆ ಬಲಗಾಲ ಮುರಿದಂತಾಗಿ ಭಾರಿ ರಕ್ತಗಾಯವಾಗಿದ್ದು ಮತ್ತು ಪಾದದ ಹತ್ತಿರ ಮುರಿದಂತೆ ಭಾರಿ ಪೆಟ್ಟಾಗಿ ಬಲಗೈ ತರಚಿದ ರಕ್ತಗಾಯಾವಾಗಿದ್ದು ಇತ್ತು ಉಪಚಾರ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಅಲ್ಲಿ ನಮ್ಮ ತಂದೆ ಉಪಚಾರ ಹೊಂದುತ್ತಾ ರಾತ್ರಿ 9-30 ಗಂಟೆಗೆ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ  ಅಂತಾ ಶ್ರೀ ದತ್ತು ತಂದೆ ಪಾಂಡು ರಾಠೋಡ ಸಾ: ಭಂಕೂರವಾಡಾ ತಾಂಡ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ.ಮಹಮ್ಮದ ಮಜರ ಅಲಿ ತಂದೆ ಮಹಮ್ಮದ ಮೌಲಾಸಾಬ ಸಾ;ಮದಿನಾಕಾಲೂನಿ ಶಾಲಿಮಾರ ಫಕ್ಸನ ಹಾಲ ಹತ್ತಿರ ರೋಜಾ ಕಲಬುರಗಿ ಇವರ ತಮ್ಮ ಮಹಮ್ಮದ ಅಜರೊದ್ದಿನ ತಂದೆ  ಮಹಮ್ಮದ ಮೌಲಾಸಾಬ ಇತನು ದಿನಾಂಕ.5-10-2016 ರಂದು ಮುಂಜಾನೆ ಕೆಲಸಕ್ಕೆ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು ಮರಳಿ ಮನೆಗೆ ಬಂದಿರುವದಿಲ್ಲಾ ಅಂತಾ ಮಹಮ್ಮದ ಅಜರೊದ್ದಿನ ಇತನ ಹೆಂಡತಿ ಶಬಹಾನ ತಿಳಿಸಿದ್ದು, ಆತನ ಪತ್ತೆ ಕುರಿತು ಆತನು ವಾಸಿಸುತಿದ್ದ ಡೆಕ್ಕನ ಕಾಲೇಜ ಹತ್ತಿರ ಇರುವ ಅವರ ಬಾಡಿಗೆ ಮನೆಯ ಹತ್ತಿರ ಹೋಗಿ ವಿಚಾರಣೆ ಮಾಡಿ ಅವರ ಪಕ್ಕದ ಮನೆಯವರು ದಿನಾಂಕ 5-10-2016 ರಂದು ರಾತ್ರಿ 11-00ಗಂಟೆಯ ವರೆಗೆ ಮನೆಯ ಹೊರಗಡೆ ಇದ್ದರು ಅಂತಾ ತಿಳಿಸಿರುತ್ತಾರೆ.  ಆದರೆ ಕೆಲಸಕ್ಕೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವಿಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶಿವಕುಮಾರ ತಂದೆ ನಾಗೆಂದ್ರಪ್ಪಾ ಬಿರಾದಾರ ಸಾ : ದೇವಿ ನಗರ ಕಲಬುರಗಿ ರವರು ದಿನಾಂಕ:30/09/2016 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ತನ್ನ  ಮೊಟಾರ  ಸೈಕಲ್  ನ್ನು ಮನೆಯ ಮುಂದೆ ನಿಲ್ಲಿಸಿದ್ದು  ದಿನಾಂಕ:01/10/2016 ರಂದು ಬೆಳಗ್ಗೆ 6.00 ಗಂಟೆಗೆ ನಾನು ಮನೆಯಿಂದ ಹೊರಗೆ ಬಂದು ಮನೆಯ ಮುಂದೆ ನನ್ನ ಮೋಟಾರ ಸೈಕಲ ಇರಲಿಲ್ಲ ನಾನು ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ ನನ್ನ ಹೀರೊ ಸ್ಪೆಂಡರ ಮೋಟಾರ ಸೈಕಲ ಕಪ್ಪು ಬಣ್ಣವುಳ್ಳದ್ದು ಅದರ ನಂ. KA-32 ED - 8709, CHASSIS NO.MBLHA10ASDHF81387,   NGINE. NO. HA10ELDHF36997  ಇದ್ದು ಅ.ಕಿ.30000/-ರೂ ಬೆಲೆಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.