ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 06-04-2015 ರಂದು ರಾತ್ರಿ ಶ್ರೀ ಎಸ.ಎಸ್. ದೊಡಮನಿ ಪಿ.ಎಸ್.ಐ (ಕಾಸು) ರವರು ಮಾನ್ಯ ಡಿ.ಎಸ್.ಪಿ ಸಾಹೇಬರು ಕರೆಯಸಿದ ಮೇರೆಗೆ ನಾನು ಮತ್ತು ಪಿ.ಸಿ 619 ಕೂಡಿ ಡಿ.ಎಸ್.ಪಿ ಆಫೀಸಿಗೆ ಹೋದಾಗ ಮಾನ್ಯ ಶ್ರೀ ಮಹಾನಿಂಗ ನಂದಗಾವಿ ಡಿ.ಎಸ್.ಪಿ “ಎ” ಉಪ ವಿಭಾಗ ರವರು ನಮಗೆ ತಿಳಿಸಿದ್ದೇನೆಂದರೆ ಐವಾನ್-ಏ-ಶಾಹಿ ಏರಿಯಾದ ಶಿವು ಪಾಟೀಲ ಇವರ ಅಪಾರ್ಟ್‌ಮೆಂಟ್‌ನಲ್ಲಿ ಮೂರನೇ ಅಂತಸ್ತಿನ ನಾಲ್ಕನೇ ಬ್ಲಾಕನಲ್ಲಿ ಕೆಲವು ಜನರು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಶ್ರೀ ಮಹಾನಿಂಗ ನಂದಗಾಂವ ಡಿ.ಎಸ್.ಪಿ ಸಾಹೇಬರು “ಎ” ಉಪ ವಿಭಾಗ ಕಲಬುರಗಿ ರವರ ನೇತ್ರತ್ವದಲ್ಲಿ ನಾನು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಐವಾನ್-ಏ-ಶಾಹಿ ಏರಿಯಾದ ಶಿವು ಪಾಟೀಲ ಇವರ ಅಪಾರ್ಟ್‌ಮೆಂಟ್‌ನಲ್ಲಿ ಮೂರನೇ ಅಂತಸ್ತಿನ ನಾಲ್ಕನೇ ಬ್ಲಾಕನಲ್ಲಿ ಹೋಗಿ ನೋಡಲು ಬಾಗಿಲ ಮರೆಯಲ್ಲಿ ನಿಂತು ನೋಡಲು ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರ ನೇತೃತ್ವದಲ್ಲಿ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು 1) ಪ್ರಕಾಶ ತಂದೆ ಪರಮೇಶ್ವರ ಕಡಗಂಚಿ ಸಾ:ಪ್ಲಾಟ್ ನಂ:87 ಜಯ ನಗರ ಕಲಬುರಗಿ 2) ಸಂತೋಷ ತಂದೆ ಸಂಗಪ್ಪ ದುತ್ತರಗಿ ಸಾ:ಮುಕ್ತಂಪೂರ 3) ಸಂಗಮೇಶ ತಂದೆ ಶ್ರೀನಿವಾಸ ಬಿರಾದಾರ ಸಾ:ಗಂಜ ಬ್ಯಾಂಕ ಕಾಲೋನಿ ಕಲಬುರಗಿ 4) ಅಬ್ದುಲ ರಶೀದ ತಂದೆ ಸತ್ತಾರಮಿಯಾ ಅಬ್ದುಲ ಸಾ:ಅಟೋ ಸ್ಟ್ಯಾಂಡ ಹತ್ತಿರ ಬಸವೇಶ್ವರ ಕಾಲೋನಿ ಕಲಬುರಗಿ 5) ಪ್ರದೀಪ ತಂದೆ ಮದನ ತಿವಾರಿ ಸಾ:ಕಟಗರಪೂರ ಶಹಾಬಜಾರ ಕಲಬುರಗಿ 6) ಸಂಜಯ ತಂದೆ ವಿಠಲ ಚವ್ಹಾಣ ಸಾ:ಸ್ಟೇಡಿಯಂ ಹಿಂದುಗಡೆ ಬ್ಯಾಂಕ ಕಾಲೋನಿ ಕಲಬುರಗಿ 7) ಫೆರೋಜ ತಂದೆ ಮಜೀದಖಾನ ಸಾ:ಜಿಲಾನಾಬಾದ ಕಾಲೋನಿ ಎಮ್.ಎಸ್.ಕೆ ಕಲಬುರಗಿ 8) ಅಹೆಮದ ಖಾನ ತಂದೆ ಬಾಬಾಖಾನ ಸಾ : ಎಕ್ಬಾಲ ಕಾಲೋನಿ ಕಲಬುರಗಿ 9) ಶರಣಬಸಪ್ಪ ತಂದೆ ರವಿ ಶಂಕರ ಪಾಟೀಲ ಸಾ:ಮನೆ ನಂ:3-980/1 ಅತ್ತರ ಕಂಪೌಂಡ ತಿರಂದಾಸ ಟಾಕೀಸ ಹತ್ತಿರ ಕಲಬುರಗಿ 10) ರಮೇಶ ತಂದೆ ರೇವಣಸಿದ್ದಪ್ಪ ಘಂಟಿ ಸಾ:ವಿರೇಂದ್ರ ಪಾಟೀಲ ನಗರ ಜಿ.ಡಿ.ಎ ಲೇಔಟ್ ಕಲಬುರಗಿ 11) ಶರಣಬಸಪ್ಪ ತಂದೆ ಗುಂಡಪ್ಪ ಜಗತ ಸಾ:ಮನೆ ನಂ:8-1479 ಸುಭಾಶ ನಗರ ಶಹಾ ಬಜಾರ ಕಲಬುರಗಿ 12) ವೈಜುನಾಥ ತಂದೆ ಶಿವರಾಯ ಪಾಟೀಲ ಸಾ:ಗಾಜಿಪೂರ ಕಲಬುರಗಿ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 72,500/- ರೂ. ಮತ್ತು 52 ಇಸ್ಪೆಟ್ ಎಲೆಗಳು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಸ್ತಠಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ಮಾಡಿ ತಲೆಮರಿಸಿಕೊಂಡ ಆರೋಪಿತನ ಬಂಧನ :
ವಿಶ್ವವಿದ್ಯಾಲಯ ಠಾಣೆ : ದಿನಾಂಕ 24/5/2013 ರಂದು ಕಾಳನೂರ ತಾಂಡಾದ ಶ್ರೀ ಟೋಪು ಚಿನ್ನಾ ರಾಠೋಡ, ಆತನ ಹೆಂಡತಿ ಹಾಗು ಮಕ್ಕಳನ್ನು ಅವರ ಸಂಬಂಧಿಕರಾದ ರಾಜಶೇಖರ ಮತ್ತು ವಿಕಾಸ ಇವರು ಶರಣಸಿರಸಗಿ ತಾಂಡಾದ ಹಾಗು ಕಲಬುರಗಿ ನಗರದ ಕೆಲ ಹುಡುಗರನ್ನು ಕರೆದುಕೊಂಡು ಕಾಳನೂರ ತಾಂಡಾಕ್ಕೆ ಹೋಗಿ ಟೋಪ ಚಿನ್ನಾ ರಾಠೋಡ ಇವರ ಮನೆಗೆ ನುಗ್ಗಿ ಗಲಾಟೆ ಮಾಡಿ ಮನೆಯ ಸಾಮಾನುಗಳನ್ನು ಒಡೆದು ಹಾನಿ ಮಾಡಿ, ಮನೆಯವರಿಗೆ ಅಪಹರಿಸಿಕೊಂಡು ಹೋಗಿ ಟೋಪು ಚಿನ್ನಾರಾಠೋಡ ಈತನ ಹೆಂಡತಿಯನ್ನು ಅವರಲ್ಲಿಯ ಒಬ್ಬನು ಮೋಟಾರ ಸೈಕಲ ಮೇಲೆ ಜಭರ ದಸ್ತಿಯಿಂದ ಕೂಸಿಕೊಂಡು ಹೈಕೊರ್ಟ ಹತ್ತಿರದ ಖುಲ್ಲಾ ಜಾಗದಲ್ಲಿ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿ ಅವಳನ್ನು ಶರಣಸಿರಸಗಿ ತಾಂಡಾಕ್ಕೆ ಕರೆದುಕೊಂಡು ಹೋಗಿ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರಿನ ಮೇರೆಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ಆರೋಪಿತರನ್ನು ಶೀಘ್ರವಾಗಿ ಪತ್ತೆ ಮಾಡಿ ದಸ್ತಗಿರಿ ಮಾಡುವಂತೆ ಮಾನ್ಯ ಶ್ರೀ ಅಮಿತ್ ಸಿಂಗ್. ಕಖ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ, ಶ್ರೀ ಬಿ. ಮಹಾಂತೇಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀ ಎಸ್.ಎಲ್ ಝಂಡೇಕರ್ ಡಿ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ರವರ ನೇತೃತ್ವದಲ್ಲಿ ಅಧಿಕರಿಯವರಾದ ಶ್ರೀ ಜೆ. ಹೆಚ್ ಇನಾಮದಾರ ಸಿಪಿಐ ಎಂ. ಬಿ ನಗರ ವೃತ್ತ ಕಲಬುರಗಿ, ಶ್ರೀ ರಘು ಎನ್ ಪಿ.ಎಸ್.ಐ ವಿಶ್ವವಿದ್ಯಾಲಯ ಪೊಲೀಸ ಠಾಣೆ ಕಲಬುರಗಿ ಹಾಗು ಸಿಬ್ಬಂದಿಯವರಾದ ಹೆಚ್.ಸಿಗಳಾದ ಶಂಕರ, ಅರ್ಜುನ, ಅರ್ಜುನಸಿಂಗ್, ಸಂತೋಷ, ಮಲ್ಲಿಕಾರ್ಜುನ ಮತ್ತು ಅಶೋಕ ಹಳಿಗೋಧಿ ರವರು ಕೂಡಿಕೊಂಡು ಮಾಹಿತಿ ಸಂಗ್ರಹಿಸಿ ಈ ಪ್ರಕರಣದಲ್ಲಿ ಕಳೆದ 2 ವರ್ಷಗಳಿಂದ ತಲೆ ಮರೆಯಿಸಿಕೊಂಡ ಈ ಕೆಳಕಂಡ ಆರೋಪಿಯನ್ನು ದಿನಾಂಕ 6/4/2015 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ಇನ್ನೂಳಿದ ಆರೋಪಿತರ ಪತ್ತೆಗಾಗಿ ಜಾಲ ಬೀಸಿ ಈ ಕೇಳಕಂಡ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. 1) ಅರುಣಕುಮಾರ ತಂದೆ ಶಂಭುಲಿಂಗ ಭರಣಿ ಸಾ : ಶರಣಸಿರಸಗಿ ಮಡ್ಡಿ ತಾ/ಜಿ ಕಲಬುರಗಿ