Police Bhavan Kalaburagi

Police Bhavan Kalaburagi

Wednesday, January 31, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಭೀರಲಿಂಗ ತಂದೆ ಶಂಕರಲಿಂಗ ಹೋಸಮನಿ ಸಾಃ ಜನಿವಾರ ತಾಃ ಜೇವರಗಿ ಇವರು ದಿನಾಂಕ 10/01/2018 ರಂದು ಮುಂಜಾನೆ ನಾನು ಮತ್ತು ಶಂಕರ ಇಬ್ಬರೂ ನಮ್ಮೂರಿನಿಂದ ಜೇವರಗಿಗೆ ಕೆಲಸಕ್ಕೆ ಬಂದು ಶೋರೂಮನಲ್ಲಿ ಕೆಲಸ ಮಾಡಿ ಮದ್ಯಾಹ್ನ ಊಟ ಮಾಡುವ ಸಲುವಾಗಿ ರೈಸಾ ದಾಬಾದ ಕಡೆಗೆ ಹೋಗುತ್ತಿದ್ದೆವು. ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ರೀಲಾಯನ್ಸ್ ಪೆಟ್ರೊಲ ಪಂಪ್ ದಾಟಿ ಗಡ್ಡಿಪೂಲ ಕಡೆಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೆ ಜೇವರಗಿ ಕಡೆಯಿಂದ  ಕಡೆಯಿಂದ ಒಂದು ಕಾರನ್ನು ಅದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನ ಸೈಡಿನಿಂದ ಹೋಗುತ್ತಿದ್ದ ನನಗೆ ಡಿಕ್ಕಿಪಡಿಸಿ ನನ್ನ ಜೊತೆ ಇದ್ದ ಶಂಕರನಿಗೂ ಹಿಂದಿನಿಂದ ಡಿಕ್ಕಿಪಡಿಸಿದನು. ಆಗ ನಾನು ಮತ್ತು ನನ್ನ ಗೆಳೆಯ ಇಬ್ಬರೂ ರೊಡಿನಲ್ಲಿ ಬಿದ್ದೆವು, ಆಗ ನನಗೆ ಬಲಕಣ್ಣಿನ ಹತ್ತಿರ, ಮತ್ತು ಹಣೆಯ ಮೇಲೆ ಮೂಗಿನ ಹತ್ತಿರ  ರಕ್ತಗಾಯವಾಗಿರುತ್ತದೆ. ನನ್ನ ಗೆಳೆಯ  ಶಂಕರ ತಂದೆ ಈರಪ್ಪ ನಾಟೀಕರ ಇತನಿಗೆ ಬೇನ್ನು ಮೇಲೆ ಕುತ್ತಿಗೆಯ ಹಿಂಬಾಗದಲ್ಲಿ ಬಾರಿ ಒಳಪೆಟ್ಟು ಮತ್ತು ತರಚಿದ ರಕ್ತಗಾಯ ಆಗಿರುತ್ತದೆ. ನಮಗೆ ಡಿಕ್ಕಿ ಪಡಿಸಿದ ಕಾರ ನಂಬರ ನೋಡಲು ಕೆಎ-32-ಸಿ-7489 ನೇದ್ದು ಅದರ ಚಾಲಕನಿಗೆ ಹೆಸರು ಕೇಳಲಾಗಿ ಅವನು ತನ್ನ ಹೆಸರು ಮಡಿವಾಳಪ್ಪ ತಂದೆ ರೇವಣಸಿದ್ದಪ್ಪ ಅಂತಾ ಹೇಳಿ ತನ್ನ ಕಾರ ಚಾಲು ಮಾಡಿಕೊಂಡು ಓಡಿ ಹೋದನು. ಅವನಿಗೆ ಮುಂದೆ ನೊಡಿದಲ್ಲಿ ಗುರುತಿಸುತ್ತೆನೆ. ಅಲ್ಲಿಯೇ ರೋಡಿನಲ್ಲಿ ಬರುತ್ತಿದ ನಮಗೆ ಪರಿಚಯದ ಮೇಕ್ಯಾನಿಕ ಈಶ್ವರ ತಂದೆ ವಿರಂದ್ರ ಗೊಸೂಲ್ ಈತನು ನೋಡಿ  ನನಗೆ ಮತ್ತು ನನ್ನ ಗೆಳೆಯ ಶಂಕರ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಉಪಚಾರ ಕೊಡಿಸಿ ನಂತರ ಅಲ್ಲಿಂದ ಈಶ್ವರ ಮತ್ತು ಪರಮೇಶ್ವರ ತಂದೆ ವಿರೇಂದ್ರ  ಗೊಸುಲ ಇವರು ನಮಗೆ ಒಂದು ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಹೆಚ್ಚಿನ  ಉಪಚಾರ ಕುರಿತು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರತ್ತಾರೆ. ನಾನು ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಬಿಡುಗಡೆಯಾಗಿ ಬಂದಿರುತ್ತೆನೆ. ನನ್ನ ಗೆಳೆಯ ಶಂಕರನಿಗೆ ಬಾರಿ ಗಾಯವಾಗಿದರಿಂದ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಆರಾಮವಾಗದಕ್ಕೆ ಅವನ ಮನೆಯವರು ಅವನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ದಿನಾಂಕ 31/01/2018 ರಂದು ಬೆಳಿಗ್ಗೆ 6 ಗಂಟೆಗೆ ಪ್ರಕರಣದಲ್ಲಿನ ಘಾಯಾಳು ಶ್ರೀ ಶಂಕರ ತಂದೆ ಈರಪ್ಪಾ ನಾಟೀಕಾರ @ ಹಳ್ಳಿ  ಸಾ// ಜನಿವಾರ  ತಾ// ಜೇವರಗಿ ಇತನ ಸಹೋದರನಾದ ಶ್ರೀ ಶಿವಪ್ಪಾ ತಂದೆ ಈರಪ್ಪ ನಟಿಕಾರ  @ ಹಳ್ಳಿ ಇವರು ಠಾಣೆಗೆ ಹಾಜರಾಗಿ ತಮ್ಮ ಪುರವಣಿ ಹೇಳಿಕೆ ನೀಡಿದ್ದೇನೆಂದರೆ ದಿನಾಂಕ 10/01/2018 ರಂದು ಜೇವರಗಿ ನಗರದ ರಿಲಾಯನ್ಸ ಪೆಟ್ರೋಲ ಬಂಕ ಹತ್ತಿರ ಕಲಬುರಗಿ ಕಡೆಗೆ ಹೋಗುವ ರೋಡಿನ ಮೇಲೆ  ನನ್ನ ತಮ್ಮ ಶಂಕರ ತಂದೆ ಈರಪ್ಪಾ ನಾಟಿಕಾರ @ ಹಳ್ಳಿ ಇತನಿಗೆ ಕಾರ ನಂ ಕೆಎ-32 ಸಿ- 7489  ನೇದ್ದರ ಚಾಲಕ ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ  ಹಿಂದಿನಿಂದ ನನ್ನ ತಮ್ಮನಿಗೆ ಡಿಕ್ಕಿ ಹೊಡೆದು ತನ್ನ ಕಾರ ಸಮೇತ ಓಡಿ ಹೋದ ಪರಿಣಾಮವಾಗಿ ನನ್ನ ತಮ್ಮ ಶಂಕರನಿಗೆ ಕುತ್ತಿಗೆಯ ಹಿಂಬಾಗದಲ್ಲಿ ಭಾರಿ ಗುಪ್ತಗಾಯವಾಗಿದ್ದರಿಂದ ನವು ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿರುತ್ತೇವೆ. ನನ್ನ ತಮ್ಮ ಶಂಕರ ಇತನು ಚಿಕಿತ್ಸೆಯಲ್ಲಿ ಗುಣಮುಖನಾಗದೆ ನಿನ್ನೆ ದಿನಾಂಕ 30/01/2018 ರಂದು ಸಾಯಂಕಾಲ 4-45 ಗಂಟೆಗೆ  ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ  ಮೃತಪಟ್ಟಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಸೇಡಂ ಠಾಣೆ : ದಿನಾಂಕ: 29-01-2018 ರಂದು ಫಿರ್ಯಾದಿದಾರರ ಗಂಡನಾದ ಅಲಿಸಾಬ ಇತನು ಉಡಗಿ ಗ್ರಾಮದ ಹಂಗನಳ್ಳಿ ಕಡೆಗೆ ಹೋಗುವ ರಸ್ತೆಯ ಮೇಲೆ ಎಂದಿನಂತೆ ಸಂಡಾಸಕ್ಕೆ ಹೋಗುತ್ತಿರುವಾಗ ಉಡಗಿ ಕಡೆಯಿಂದ ಮೊಟಾರ ಸೈಕಲ್ ನಂ. ಕೆಎ32 ಇಜಿ9377 ನೆದ್ದರ ಸವಾರನು ತನ್ನ ವಶದಲ್ಲಿದ್ದ ಮೊಟಾರ ಸೈಕಲನ್ನು ಅತಿ ವೇಗದಿಂದ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನಾದ ಅಲಿಸಾಬ ಇತನಿಗೆ ಅಪಘಾತ ಪಡಿಸಿ ಮೊಟಾರ ಸೈಕಲನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು, ಅಲಿಸಾಬ ಇತನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸೇಡಂಕ್ಕೆ ತೆಗೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ .ಎಸ್.ಎಮ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಉಪಚಾರ ನೀಡಿದ್ದು, ಇಂದು ದಿನಾಂಕ: 30-01-2018 ರಂದು ಬೆಳಿಗ್ಗೆ 04:30 ಗಂಟೆಗೆ ಅಲಿಸಾಬ ಇತನು ಉಪಚಾರ ಫಲಕಾರಿಯಾಗದೆ ಮೃತಪಟ್ಟಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸದೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ