ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ರಾಚಮ್ಮ ಹಿರೇಮಠ
ಸಾ: ಆನೂರ ಹಾ:ವ ಜೆ.ಆರ್ ನಗರ ಖಾದ್ರಿ ಚೌಕ ಕಲಬುರಗಿ ರವರ ಗಂಡನವರು ಸುಮಾರು 05 ವರ್ಷಗಳ ಹಿಂದೆ
ಮೃತಪಟ್ಟಿರುತ್ತಾರೆ. ನನ್ನ ಮಕ್ಕಳೆಲ್ಲರ ಮದುವೆ ಆಗಿರುತ್ತದೆ. ನನ್ನ ಮಗಳು ಚಂದ್ರಕಲಾ ಎಂಬಾಕೆಗೆ
ದಿನಾಂಕ 23-05-2010 ರಂದು ಬಡದಾಳ ಗ್ರಾಮದ
ವೈಜನಾಥ ತಂದೆ ಮಡಿವಾಳಯ್ಯ ವಿರಂತಮಠ (ವಿರಕ್ತಮಠ) ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ.
ನನ್ನ ಮಗಳ ಮದುವೆಯು ಅವಳ ಗಂಡನ ಸೋದರ ಮಾವಂದಿರಾದ ಮಹಾಂತಯ್ಯ ಹಾಗೂ ಪುತ್ರಯ್ಯ ರವರ
ಮದ್ಯಸ್ತಿಕೆಯಲ್ಲಿ ಅವರ ಮನೆಯ ಮುಂದೆ ಆಗಿರುತ್ತದೆ. ಇಲ್ಲಿಯವರೆಗೆ ನನ್ನ ಮಗಳಿಗೆ ಮಕ್ಕಳು
ಆಗಿರುವುದಿಲ್ಲ. ನನ್ನ ಮಗಳ ಗಂಡ ವೈಜನಾಥನು ಅಫಜಲಪೂರದಲ್ಲಿಯೆ ಟೆಂಟ ಹೊಡೆಯುವ ಕೂಲಿ ಕೆಲಸ ಮಾಡಿಕೊಂಡು ಶಿವಪ್ಪ
ಕನ್ನೋಳ್ಳಿ ಎಂಬುವವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತಾನೆ. ನನ್ನ ಮಗಳಿಗೆ ಮದುವೆಯಾಗಿ ಸುಮಾರು 7 ½ ವರ್ಷ ಕಳೆದರು ಮಕ್ಕಳಾಗದ
ಕಾರಣ ನನ್ನ ಮಗಳ ಗಂಡ ವೈಜನಾಥ ಮತ್ತು ಆತನ ತಾಯಿ ಬಸಮ್ಮ ರವರು ದಿನಾಲು ಮಕ್ಕಳಾಗಿರುವುದಿಲ್ಲ ಅಂತ
ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ. ಈಗ ಸುಮಾರು 03 ತಿಂಗಳ ಹಿಂದೆ ನನ್ನ ಮಗಳ
ಗಂಡ ಮತ್ತು ಅತ್ತೆ ಹೊಡೆ ಬಡೆ ಮಾಡಿದ್ದರಿಂದ ನನ್ನ ಮಗ ಮತ್ತು ನಮ್ಮ ಸಂಭಂದಿಕರಾದ ಈರಯ್ಯಸ್ವಾಮಿ
ರವರು ಬಂದು ನನ್ನ ಮಗಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಈಗ ಒಂದು ವಾರದ ಹಿಂದೆ ನನ್ನ
ಮಗಳ ಗಂಡ ವೈಜನಾಥನು ನಮ್ಮ ಮನೆಗೆ ಬಂದು ಇನ್ನು ಮುಂದೆ ನಾನು ನನ್ನ ಹೆಂಡತಿಗೆ ಯಾವುದೆ ರೀತಿ
ಕಿರುಕುಳ ಕೊಡುವುದಿಲ್ಲ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಹೇಳಿದ್ದರಿಂದ ನಾವು ನಮ್ಮ ಮಗಳಿಗೆ
ಕಳುಹಿಸಿ ಕೊಟ್ಟಿರುತ್ತೇವೆ. ದಿನಾಂಕ 27-10-2017 ರಂದು ಬೆಳಿಗ್ಗೆ ಅಫಜಲಪೂರದ
ರಾಜುಸ್ವಾಮಿ ಎಂಬುವವರು ನನಗೆ ಪೋನ ಮೂಲಕ ತಿಳಿಸಿದ್ದೆನೆಂದರೆ, ನಿಮ್ಮ ಮಗಳಾದ
ಚಂದ್ರಕಲಾಳಿಗೆ ಅವಳ ಗಂಡ ವೈಜನಾಥನು ಮದ್ಯರಾತ್ರಿ 01:00 ಗಂಟೆಯ ಸುಮಾರಿಗೆ ಅವರು
ಬಾಡಿಗೆಯಿಂದ ವಾಸವಾಗಿದ್ದ ಮನೆಯಲ್ಲಿಯೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟ
ಕೈಯಿಂದ ಹೊಡೆದು ಕುತ್ತಿಗೆ ಹಿಚುಕಿ ಕೊಲೆ
ಮಾಡಿರುತ್ತಾನೆ ಅಂತಾ ತಿಳಿಸಿರುತ್ತಾರೆ. ವಿಷಯ ಗೊತ್ತಾದ ನಂತರ ಬೆಳಿಗ್ಗೆ 09:30 ಗಂಟೆ ಸುಮಾರಿಗೆ ನಾನು
ಮತ್ತು ನನ್ನ ಮಗ ವಿರಾಜ, ಮೈದುನರಾದ ವೀರಯ್ಯಸ್ವಾಮಿ ಹಾಗೂ ನಮ್ಮ ಸಂಭಂದಿಕರಾದ ಈರಯ್ಯಸ್ವಾಮಿ, ಲಲಿತಾಬಾಯಿ, ಮಹಾದೇವಿ, ವಿಶ್ವನಾಥ, ಸಿದ್ದಯ್ಯ ಮತ್ತಿತರರು
ಕೂಡಿ ಅಫಜಲಪೂರಕ್ಕೆ ಬಂದು, ಶಿವಪ್ಪ ಕನ್ನೋಳ್ಳಿ ಎಂಬುವವರ ಮನೆಯಲ್ಲಿ ಬಾಡಿಗೆಯಿಂದ
ವಾಸವಾಗಿದ್ದ ಕೋಣೆಯಲ್ಲಿ ನನ್ನ ಮಗಳ ಶವ ನೋಡಿರುತ್ತೇವೆ.ನನ್ನ ಮಗಳು ಚಂದ್ರಕಲಾಳ ಕೊಲೆ ಮಾಡಲು
ಕಾರಣವೆನೆಂದರೆ, ಮದುವೆಯಾಗಿ 7 ½ ಕಳೆದರು ಮಕ್ಕಳಾಗದ ಕಾರಣ, ನನ್ನ ಮಗಳ ಗಂಡನಾದ ವೈಜನಾಥ ವಿರಂತಮಠ (ವಿರಕ್ತಮಠ), ಮತ್ತು ಆತನ ತಾಯಿ ಬಸಮ್ಮ
ವಿರಂತಮಠ (ವಿರಕ್ತಮಠ) ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟ ಬಸಮ್ಮ
ವೈಜನಾಥನಿಗೆ ಈ ರಂಡೆಗೆ ಕೊಲೆ ಮಾಡು ನಾನು ನಿನಗೆ ಮತ್ತೊಂದು ಮದುವೆ ಮಾಡುತ್ತೇನೆ ಅಂತ ಪ್ರಚೋದನೆ
ಮಾಡಿದ್ದರಿಂದ, ದಿನಾಂಕ 27-10-2017 ರಂದು ಮದ್ಯರಾತ್ರಿ 01:00 ಗಂಟೆಯ ಸುಮಾರಿಗೆ ನನ್ನ
ಮಗಳೊಂದಿಗೆ ಆಕೆಯ ಗಂಡ ವೈಜನಾಥನು ಜಗಳ ಮಾಡಿ ಕೈಯಿಂದ ಹೊಡೆದು ಕುತ್ತಿಗೆ ಹಿಚುಕಿ ಕೊಲೆ
ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣಗಳು
ಕಮಲಾಪೂರ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಉಮೇಶ ಮಾಳಗೆ ಸಾ:ಭೂಂಯ್ಯಾರ
ತಾ:ಜಿ:ಕಲಬುರಗಿ ಇವರು ಭಾವನಾದ ಮಲ್ಲಿಕಾರ್ಜುನ ಮಾಳಗೆ ಇವರ ಹತ್ತೀರ ಫ್ಯಾಶನ ಪ್ರೋ ಮೋಟರ ಸೈಕಲ
ನಂ.ಕೆಎ.32 ಇಎಮ್.4928 ನೇದ್ದು ಇದ್ದು. ನನ್ನ ಭಾವನಿಗೆ ಟೆಂಗಳಿ ಗ್ರಾಮದ
ಬ್ರಹ್ಮಾನಂದ ತಂದೆ ಭೀಮರಾವ ಇವರ ಪರಿಚಯ ಇದ್ದು. ಅವರು ದಿನಾಂಕ:24.10.2017 ರಂದು ಅವರ ಕೆಲಸದ ಸಲುವಾಗಿ ನಮ್ಮೂರಿಗೆ ಬಂದು
ನನ್ನ ಭಾವನವರ ಮೇಲ್ಕಂಡ ಮೋಟರ ಸೈಕಲನ್ನು ತೆಗೆದುಕೊಂಡು ಹೋಗಿರುತ್ತಾರೆ. ಹಿಗಿದ್ದು ದಿನಾಂಕ:25.10.2017 ರಂದು ಬೆಳಿಗ್ಗೆ ನಮ್ಮ ತಾಯಿಯವರಿಗೆ ಆರಾಮ ಇಲ್ಲದ
ಕಾರಣ ನಾನು ನನ್ನ ಮಗನಾದ ಆದಿತ್ಯ ಇವನಿಗೆ ಸಂಗಡ ಕರೆದುಕೊಂಡು ನಮ್ಮೂರಿನಿಂದ ನನ್ನ ತವರೂರಾದ
ಧನ್ನೂರ ಗ್ರಾಮಕ್ಕೆ ಹೋಗುವ ಕುರಿತು ಕಮಲಾಪೂರ ಬಸ್ ಸ್ಟ್ಯಾಂಡಗೆ ಬಂದು ನಿಂತಾಗ ಮುಂಜಾನೆ 10.45 ಗಂಟೆಯ ಸೂಮಾರಿಗೆ ನನ್ನ
ಭಾವ ಮಲ್ಲಿಕಾರ್ಜುನ ಇವರ ಮೇಲ್ಕಂಡ ಮೋಟರ ಸೈಕಲನ್ನು ಬ್ರಹ್ಮಾನಂದ
ಈತನು ನಡೆಸಿಕೊಂಡು ಬಸ ನಿಲ್ದಾಣದ ಹತ್ತೀರ ಬಂದಾಗ ನಾನು ಬ್ರಹ್ಮಾನಂದ ಇವರ ಹತ್ತೀರ ಹೋಗಿ ನೀವು
ಎಲ್ಲಿಗೆ ಹೋಗುತ್ತಿದ್ದಿರಿ ಅಂತಾ ಕೇಳಲು ಅವರು ಹುಮನಾಬಾದಗೆ ಹೋಗುತ್ತಿರುವುದಾಗ ತಿಳಿಸಿದ್ದು.
ಆಗ ನಾನು ನನ್ನ ತವರೂರಾದ ಧನ್ನೂರಗೆ ಹೋಗುತ್ತಿದ್ದು. ನನಗೆ ಮತ್ತು ನನ್ನ ಮಗನಿಗೆ
ಹಳ್ಳಿಖೇಡವರೆಗೆ ಬಿಟ್ಟು ಹೋಗುವಂತೆ ಕೇಳಿದಾಗ ಅವರು ಅದಕ್ಕೆ ಒಪ್ಪಿ ನನಗೆ ಹಾಗೂ ನನ್ನ ಮಗ
ಆದಿತ್ಯ ಇಬ್ಬರಿಗೂ ಮೇಲ್ಕಂಡ ಮೋ.ಸೈಕಲ ಮೇಲೆ ಕೂಡಿಸಿಕೊಂಡು ಹೋರಟಿದ್ದು. ಬ್ರಹ್ಮಾನಂದ ಈತನು
ತಾನು ನಡೆಸುತ್ತಿದ್ದ ಮೋಟರ ಸೈಕಲನ್ನು ಅತಿವೇಗದಿಂದ ಅಡ್ಡಾತಿಡ್ಡಿಯಾಗಿ ನಡೆಸುತ್ತಿದ್ದಾಗ ನಾನು
ಅವರಿಗೆ ಮೋ.ಸೈಕಲನ್ನು ನಿಧಾನವಾಗಿ ನಡೆಸಲು ಹೇಳಿದರು ಕೂಡಾ ಅವರು ಹಾಗೆ ನಡೆಸಿಕೊಂಡು
ಹೋಗುತ್ತಿದ್ದು. ನಾವು ಕುಳಿತು ಹೋಗುತ್ತಿದ್ದ ಮೋಟರಸೈಕಲ ಮುಂಜಾನೆ 11.00 ಗಂಟೆಯ ಸೂಮಾರಿಗೆ ಕಲಬುರಗಿ ಹುಮನಾಬಾದ ಹೆದ್ದಾರಿ
ಕಿಣ್ಣಿಸಡಕ ಗ್ರಾಮದ ಅಂಬೇಡ್ಕರ ಮುರ್ತಿಯ
ಹತ್ತೀರದಿಂದ ಹೋಗುತ್ತಿದ್ದಾಗ ಬ್ರಹ್ಮಾನಂದ ಈತನು ತಾನು ನಡೆಸುತ್ತಿದ್ದ ಮೇಲ್ಕಂಡ ಮೋಟರ
ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಿಲೆ ಸ್ಕೀಡಾಗಿ ಮೋಟರ ಸೈಕಲ ಸಮೇತ
ಕೆಡವಿದ್ದು. ನಮಗೆ ಅಪಘಾತವಾದದನ್ನು ನೋಡಿ ಅಲ್ಲೆ ಸ್ಥಳದಲ್ಲಿದ್ದ ನಮಗೆ ಪರಿಚಯದವರಾದ ಮಹೇಶ ಇವರು
ಬಂದು ನಮಗೆ ಎಬ್ಬಿಸಿ ನೋಡಲು ನನಗೆ ದವಾಖಾನೆಗೆ ತೋರಿಸುವಂತ ಯಾವುದೇ ಗಾಯಗಳು ಆಗಿರಲಿಲ್ಲ. ನಂತರ
ನನ್ನ ಮಗ ಆದಿತ್ಯನಿಗೆ ನೋಡಲು ಅವನ ಬಲಕಾಲ ತೋಡೆಗೆ ಭಾರಿ ರಕ್ತಗಾಯ ಬಲಕೈ ಮೋಣಕೈ ಹಿಂದೆ ತರಚಿದ
ಗಾಯ ಹಣೆ ಮತ್ತು ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದವು. ನಂತರ ಬ್ರಹ್ಮಾನಂದ ಈತನು ಮೇಲೆ ಎದ್ದು
ಹೆದರಿಕೊಂಡು ತಾನು ನಡೆಸುತ್ತಿದ್ದ ಮೋಟರ ಸೈಕಲನ್ನು ತೆಗೆದುಕೊಂಡು ಓಡಿ ಹೋಗಿರುತ್ತಾನೆ. ನಂತರ
ನಮಗೆ ಅಪಘಾತವಾದ ಸುದ್ದಿ ನನ್ನ ಗಂಡ ಉಮೇಶ ಹಾಗೂ ಭಾವ ಮಲ್ಲಿಕಾರ್ಜುನ ಇವರಿಗೆ ಫೊನ ಮುಖಾಂತರ ತಿಳಿಸಿ 108 ಅಂಬುಲೆನ್ಸಗೆ ಕರೆಮಾಡಿ ಅದರಲ್ಲಿ ನಾನು ನನ್ನ ಮಗ
ಆದಿತ್ಯ ಈತನಿಗೆ ಉಪಚಾರ ಕುರಿತು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ
ಮಾಡಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಕಮಲಾಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ದಿನಾಂಕ: 25-10-17 ರಂದು ಮುಂಜಾನೆ 9-30 ಗಂಟೆಗೆ
ನನ್ನ ಗಂಡ ಭೀಮರಾಯ ಮತ್ತು ನಮ್ಮೂರಿನ ಹುಸೇನಪಟೇಲ್ ಮೇಟಿ ಇಬ್ಬರು ಕೂಡಿ ಹುಸೇನಪಟೇಲ ಇವರ ಸೈಕಲ
ಮೊಟಾರ ನಂ ka-32 ED-4145 ನೇದ್ದರ ಮೇಲೆ ಕೆಲಸದ ನಿಮಿತ್ಯ ಯಡ್ರಾಮಿಗೆ ಹೋದರು ಸ್ವಲ್ಪ ಹೊತ್ತಿನಲ್ಲಿ
ನಮ್ಮೂರಿನ ಮಹೇಬೂಬಪಟೇಲ ಪೊಲೀಸ್ ಬಿರಾದಾರ ಇವರು ನಮಗೆ ಪೋನ ಮಾಡಿ ಈದಿಗ ಹುಸೇನಪಟೇಲ , ಭೀಮರಾಯ
ಇಬ್ಬರೂ ಕೂಡಿ ಸೈಕಲ ಮೊಟಾರ ಮೇಲೆ ಕೆನಾಲ ದಾಟಿ ಹೋರಟಾಗ ಜೇವರಗಿ ಕಡೆಯಿಂದ ಒಂದು ಲಾರಿ
ಬಂದಿದ್ದು, ಅದರ ಚಾಲಕನು ಲಾರಿಯನ್ನು ಅತಿ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ಹುಸೇನಪಟೇಲ , ಭೀಮರಾಯ ಇಬ್ಬರು ಸೈಕಲ ಮೊಟಾರ ಸಮೇತ ರಸ್ತೆಯ
ಮೇಲೆ ಬಿದ್ದು, ಭಾರಿ ಗಾಯಗೊಂಡಿದ್ದು, ಲಾರಿ ಚಾಲಕ ತನ್ನ ಲಾರಿ Ka-32
B-0888 ನ್ನು ರಸ್ತೆಯ ಮೇಲೆ ಬಿಟ್ಟು ಓಡಿ ಹೋಗಿರುತ್ತಾನೆ.
ಭೀಮರಾಯನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಲು ನಾನು
ಮತ್ತು ನನ್ನ ಮಗ ಸೂರ್ಯಕಾಂತ ಇತರರು ಕೂಡಿ ಸ್ಥಳಕ್ಕೆ ಬಂದು ನೋಡಲು ನನ್ನ ಗಂಡನು ಮೃತಪಟ್ಟಿದ್ದು ಅವನೆ ಬೆನ್ನಿನ ತೊಗಲು ಪೂರ್ತಿ ಕಿತ್ತಿದ್ದು, ಬಲಗೈ ಮುರಿದಿರುತ್ತದೆ. ಎದೆಗೆ
ಸೊಂಟಕ್ಕೆ ಭಾರಿ ಪೆಟ್ಟಾಗಿ ಗುಪ್ತಾಂಗದಿಂದ ರಕ್ತ ಬಂದಿರುತ್ತದೆ. ಹುಸೇನಪಟೇಲ ಇವನ ಗದ್ದಕ್ಕೆ
ಮತ್ತು ಮೂಗಿನ ಮೇಲೆ , ಬಲಗೈ, ಎಡಗೈ ಹಾಗೂ ಎಡಮೊಳಕಾಲಿಗೆ ಭಾರಿರಕ್ತಗಾಯಗಳಾಗಿ ಬಾಯಿಯಿಂದ ರಕ್ತ
ಬರುತ್ತಿತ್ತು. ಹುಸೇನಪಟೇಲ ಇವರಿಗೆ ಇಲಾಜು ಕುರಿತು ಮೈಬೂಬಪಟೇಲ ಇವರು ಯಡ್ರಾಮಿ ದವಾಖಾನೆಗೆ
ಕರೆದುಕೊಂಡು ಹೋಗಿರುತ್ತಾರೆ ಅಂತಾ ಶ್ರೀಮತಿ
ಶರಣಮ್ಮ ಗಂ ಭೀಮರಾಯ ಕಟ್ಟಿಮನಿ ಸಾ:ಸೈದಾಪೂರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಮಿಲಿಂದಕುಮಾರ
ತಂದೆ ಗಿರೆಪ್ಪಾ ಸಿಂಗೆ ಸಾ|| ಬಂಗರಗಾ ತಾ||
ಆಳಂದ ಪುಣೆ ಪಟ್ಟಣದ ಪಿಂಪ್ರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ,ದಿನಾಂಕ
13/10/2017 ರಂದು ನನ್ನ ಆರೋಗ್ಯ ಸರಿಯಿಲ್ಲದ ಕಾರಣ ನನ್ನ ತಾಯಿ ನಮ್ಮ ಮನೆಗೆ ಕೀಲಿ ಹಾಕಿಕೊಂಡು
ನಮ್ಮ ಬಳಿ ಪೂನಾಕ್ಕೆ ಬಂದಿದ್ದಳು, ಆಗ ನಾನು ನನ್ನ ಹೆಂಡತಿ ಅವಳನ್ನು ದೀಪಾವಳಿ
ಮುಗಿಸಿಕೊಂಡು ಹೋಗು ಅಂತಾ ಅಂದಿರುತ್ತೇವೆ, ಆಗ ನಮ್ಮ ತಾಯಿ ಅಲ್ಲೆ ಉಳಿದುಕೊಂಡಿದ್ದು ದಿನಾಂಕ 23/10/2017 ರಂದು ಬೆಳಿಗ್ಗೆ 05.30 ಗಂಟೆಗೆ ನನಗೆ
ನಮ್ಮ ತಂಗಿಯಾದ ವಿಜಯಲಕ್ಷ್ಮೀ ಇವಳು ಫೋನ್ ಮಾಡಿ ವಿಷಯ ತಿಳಿಸಿದ್ದೆನೆಂದರೆ ಬಂಗರಗಾ ಗ್ರಾಮದ
ನನ್ನ ಮನೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಫೋನ್ ಮೂಲಕ ವಿಷಯ
ತಿಳಿಸಿದಾಗ ನಾನು & ನಮ್ಮ ತಾಯಿ ಕೂಡಿಕೊಂಡು ದಿನಾಂಕ 24/10/2017 ರಂದು
ಬೆಳಿಗ್ಗೆ 07-00 ಗಂಟೆಗೆ ಪೂನಾದಿಂದ ಬಂದು ನೋಡಲು ನಮ್ಮ ಮನೆಯನ್ನು ಯಾರೋ ಕಳ್ಳರು ಕೀಲಿ ಮುರಿದು
ನಮ್ಮ ಮನೆಯ ಟಿಜೋರಿಲ್ಲಿ ಇಟ್ಟಿದ್ದ 1) ಬಂಗಾರದ ಜುಮಕೆಗಳು &
ಹುವಾ 15 ಗ್ರಾಂ 2) 5 ಗ್ರಾಂ ಬಂಗಾರದ ಸುತ್ತುಂಗುರ 3) ಬಂಗಾರದ ತಾಳಿ &
ಸರ 10 ಗ್ರಾಂ 4) ಬಂಗಾರದ ಲಾಕೇಟ್ 10 ಗ್ರಾಂ ಹೀಗೆ ಒಟ್ಟು 40 ಗ್ರಾಮ ಬಂಗಾರ ಇದರ ಅಂ
ಕಿಮ್ಮತ್ತು 80000/- ರೂಪಾಯಿ 04 ತೋಲೆ ಬೆಳ್ಳಿ
ಇದರ ಅಂ ಕಿ 1000/- ರೂಪಾಯಿ ಹಾಗೂ 02 ಎಲ್‌ಇಡಿ ಡಿಜೆ ಲೈಟ್ ಅಂ ಕಿ 3000/- ಎರಡು ತಾಮ್ರದ
ಕೊಡಗಳು ಅಂ ಕಿ 2000/- ಬೆಲೆ ಬಾಳುವ ಬಟ್ಟೆಗಳು ಅಂ ಕಿ 4000/- ಮತ್ತು ನಗದು ಹಣ 46000/-
ರೂಪಾಯಿ ಹೀಗೆ ಒಟ್ಟು ಸುಮಾರು 1 ಲಕ್ಷ 36 ಸಾವೀರ ರೂಪಾಯಿ ಬೆಲೆ ಬಾಳುವ ಬಂಗಾರ &
ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಯಾರೋ ಕಳ್ಳರು ದಿ|| 23/10/17
ರ ಮಧ್ಯರಾತ್ರಿ 01-00 ಗಂಟೆಯಿಂದ ಬೆಳಗಿನ 04-00 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯ ಕೀಲಿ ಮುರಿದು
ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.