ದಿನಂಪ್ರತಿ ಅಪರಾಧಘಳ ಮಾಹಿತಿ ದಿನಾಂಕ 21-02-2020
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 03/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 19-02-2020 ರಂದು ಅರ್ಚನಾ ಗಂಡ ಪಿಂಟು ತಳವಾರ ಸಾ: ಐನೋಳ್ಳಿ, ತಾ: ಚಿಂಚೊಳಿ, ಸದ್ಯ: ವಿದ್ಯಾ ನಗರ ಕಾಲೋನಿ, ಬೀದರ ರವರ ಗಂಡನಾದ ಪಿಂಟು ತಂದೆ ನರಸಪ್ಪಾ ತಳವಾರ ರವರಿಗೆ ವ್ಯವಸಾಯದಲ್ಲಿ ಸೂಕ್ತ ಕೃಷಿ ಬೇಳೆ ಇಳುವರಿ ಬರದೆ ಇರುವುದರಿಂದ ಸಾಲ ಮರು ಪಾವತಿ ಮಾಡಲು ಸಾದ್ಯವಾಗದೆ ಇರುವದರಿಂದ ಬೇಸತ್ತು ಬಾಡಿಗೆಯಿಂದ ವಾಸವಾಗಿರುವ ಬೀದರ ನಗರದ ವಿದ್ಯಾ ನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-02-2020 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ.
28/2020, ಕಲಂ. 379 ಐಪಿಸಿ
:-
ದಿನಾಂಕ
13-02-2020 ರಂದು 2200
ಗಂಟೆಯಿಂದ ದಿನಾಂಕ 14-02-2020 ರಂದು
0800 ಗಂಟೆಯ ಅವಧಿಯಲ್ಲಿ ಬೀದರ ನಗರದ ನಂದಿ ಕಾಲೋನಿಯಲ್ಲಿರುವ ಫಿರ್ಯಾದಿ ಅಮರ ತಂದೆ ನಾಗಶೆಟ್ಟಿ ಕೊಡ್ಡೆ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಮೆಡಿಸ್ಕ್ಯಾನ ಲಾ್ಯಬ ಹತ್ತೀರ ನಂದಿ ಕಾಲೋನಿ ಬೀದರ ರವರ ಮನೆಯ ಮುಂದೆ ನಿಲ್ಲಿಸಿದ ಫಿರ್ಯಾದಿಯವರ ಬಜಾಜ ಪಲ್ಸರ್ ಎನ್.ಎಸ್ 160 ಮೋಟರ ಸೈಕಲ ನಂ. ಕೆಎ-38/ವಿ-3623, ಚಾಸಿಸ್ ನಂ. ಎಮ್.ಡಿ.2.ಎ.92.ಸಿ.ವಾಯ್.ಎಕ್ಸ್.ಸಿ.ಎ.21281, ಇಂಜಿನ್ ನಂ. ಜೆ.ಇ.ವಾಯ್.ಸಿ.ಜೆ.ಎ.34179, ಮಾಡಲ್ 2018, ಬಣ್ಣ: ಗ್ರೇ ಬಣ್ಣ, ಅ.ಕಿ 40,000/- ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 24/2020, ಕಲಂ. 3 & 7 ಇ.ಸಿ ಕಾಯ್ದೆ :-
ದಿನಾಂಕ 19-02-2020 ರಂದು ಒಂದು ಬಿಳಿ ಬಣ್ಣದ ಬುಲೇರೊ ವಾಹನ ಸಂ. ಕೆಎ-06-/0607 ನೇದರಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡುವ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆಂದು ವೆಂಕಟ ತಂದೆ ಗಣಪತರಾವ ಬಿರಾದಾರ ಆಹಾರ ನಿರೀಕ್ಷಕರು ತಹಸೀಲ ಕಚೇರಿ ಹುಮನಾಬಾದ ರವರಿಗೆ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ಇಬ್ಬರು ಪಂಚರನ್ನು ಕರೆಯಿಸಿ ದುಬಲಗುಂಡಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋದಾಗ ಅಲ್ಲಿ ಒಂದು ಬಿಳಿ ಬಣ್ಣದ ಬುಲೇರೋ ನಂ. ಕೆಎ-06/ಡಿ-0607 ನೇದು ನಿಂತಿದ್ದು ಸದರಿ ವಾಹನದ ಚಾಲಕನಿಗೆ ವಾಹನದಲ್ಲಿ ಲೋಡ್ ಏನಿದೆ? ಅಂತ ವಿಚಾರಿಸುವಷ್ಟರಲ್ಲಿ ಅವನು ಕೂಡಲೆ ತನ್ನ ವಾಹನವನ್ನು ತೆಗೆದುಕೊಂಡು ಹುಣಸನಾಳ ಕಡೆಗೆ ಓಡಿಸಲು ಪ್ರಾರಂಭಿಸಿದಾಗ ಫಿರ್ಯಾದಿಯವರು ಸಹ ಅವನ ವಾಹನಕ್ಕೆ ಬೆನ್ನಟ್ಟಿದ್ದು, ಬುಲೆರೋ ವಾಹನದ ಚಾಲಕನು ಸುಮಾರು 15-20 ಕಿ.ಮೀ ದೂರ ವೇಗವಾಗಿ ಓಡಿಸಿಕೊಂಡು ಹೋಗಿ ಹುಣಸನಾಳ ಗ್ರಾಮದ ಶಿವಾರದಲ್ಲಿ ವಾಹನ ನಿಲ್ಲಿಸಿ ಅಲ್ಲಿಂದ ಓಡಿ ಹೋಗಿದ್ದು, ನಂತರ ಫಿರ್ಯಾದಿಯವರು ಸದರಿ ವಾಹನವನ್ನು ಪರಿಶೀಲಿಸಿ ನೋಡಲು ಅದು ಬಿಳಿ ಬಣ್ಣದ ಬೊಲೇರೋ ವಾಹನ ಇದ್ದು ಅದರ ನಂ. ಕೆಎ-06/ಡಿ-0607 ಇರುತ್ತದೆ, ವಾಹನದಲ್ಲಿನ ಚೀಲ ಬಿಚ್ಚಿ ನೋಡಲು ಅದರಲ್ಲಿ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ವಿತರಿಸುವ ಪಿಡಿಎಸ್ ಅಕ್ಕಿ ಆಗಿರುತ್ತವೆ, ಒಟ್ಟು 22 ಚೀಲಗಳಿದ್ದು ಪ್ರತಿ ಚೀಲದಲ್ಲಿ 50 ಕೆಜಿಯಷ್ಟು ಪಿಡಿಎಸ್ ಅಕ್ಕಿ ಇರುತ್ತವೆ, ಸದರಿ ಅಕ್ಕಿಯು ಅಂದಾಜು 32,450/- ರೂಪಾಯಿ ಮೌಲ್ಯ ಇರುತ್ತದೆ, ಬುಲೇರೋ ವಾಹನ ಅ.ಕಿ 3 ಲಕ್ಷ ರೂಪಾಯಿ ಇರುತ್ತದೆ, ನಂತರ ಸದರಿ ಅಕ್ಕಿ ವಾಹನವನ್ನು ಜಪ್ತಿ ಮಾಡಿಕೊಂಡು, ಚಾಲಕನ ವಿರುದ್ದ ದಿನಾಂಕ 20-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ
ಸಂ. 22/2020, ಕಲಂ. 279, 337, 338 ಐಪಿಸಿ ಜೊತೆ 177 ಐ.ಎಮ್.ವ್ಹಿ ಕಾಯ್ದೆ :-
ದಿನಾಂಕ 19-02-2020 ರಂದು ಸತೀಷ ತಂದೆ ಅಶೋಕ ರೆಡ್ಡಿ ವಯ: 30 ವರ್ಷ, ಜಾತಿ: ರೆಡ್ಡಿ ಲಿಂಗಾಯತ, ಸಾ: ಚಂಡಕಾಪೂರ, ತಾ: ಬಸವಕಲ್ಯಾಣ ರವರು ತಮ್ಮೂರ ರವಿಂದ್ರ @ ರವಿಕುಮಾರ ಕೂಡಿಕೊಂಡು ಮೋಟರ ಸೈಕಲ್ ನಂ. ಕೆಎ-56/ಎಚ್-1983 ನೇದ್ದರ ಮೇಲೆ ಹಳ್ಳಿ ಗ್ರಾಮದ ಕಡೆ ಧಾಬಾಕ್ಕೆ ಊಟ ಮಾಡಲು ಹೋಗುವಾಗ ಮೋಟರ ಸೈಕಲನ್ನು ರವಿಂದ್ರ @ ರವಿಕುಮಾರ ಈತನು ರಾಂಗ್ ಸೈಡಿನಿಂದ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ರಾ.ಹೇ ನಂ. 65 ರ ಉಮಾಪೂರ ಕ್ರಾಸ್ ಸಮೀಪ ಹೋದಾಗ ಅದೇ ಸಮಯಕ್ಕೆ ಹಳ್ಳಿ ಗ್ರಾಮದ ಕಡೆಯಿಂದ ಮೋಟಾರ್ ಸೈಕಲ ನಂ. ಕೆಎ-56/ಎಚ್-738 ನೇದರ ಚಾಲಕನಾದ ಆರೋಪಿ ಸಂಬಾಜಿ ತಂದೆ ಬಾಬುರಾವ ಶೇಳಗೆ ವಯ: 30 ವರ್ಷ, ಸಾ: ಚಿಟ್ಟಾ(ಕೆ) ಇತನು ತನ್ನ ಮೋಟರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಿದ್ದು ಎರಡು ಮೋಟರ
ಸೈಕಲಗಳು ಮುಖಾ-ಮುಖಿ ಡಿಕ್ಕಿಯಾಗಿರುತ್ತವೆ ಅಪಘಾತದಿಂದ ಫಿರ್ಯಾದಿಯ ಎಡಗಣ್ಣಿನ ಮೇಲೆ ರಕ್ತ-ಗುಪ್ತಗಾಯವಾಗಿದ್ದು, ರವಿಂದ್ರ @ ರವಿಕುಮಾರ ಈತನಿಗೆ ನೋಡಲು ಎಡಗಡೆ ಹಣೆಯ ಮೇಲೆ, ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಹಳ್ಳಿ ಗ್ರಾಮದ ಕಡೆಯಿಂದ ಆರೋಪಿಯ ಬಲಗಡೆ ಹಣೆಯ ಮೇಲೆ, ಹುಬ್ಬಿಗೆ ತಲೆಗೆ ಭಾರಿ ರಕ್ತಗಾಯಗಳಾಗಿದ್ದು ಆತನು ಕೂಡ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ನಂತರ ಜನರು 108 ಅಂಬುಲೆನ್ಸಗೆ ಕರೆ ಮಾಡಿ
ಗಾಯಗೊಂಡ ಎಲ್ಲರಿಗೂ ಅದರಲ್ಲಿ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ಮಾಡಿದ್ದು, ನಂತರ ಮೂವರಿಗೆ ಅದೆ 108 ಅಂಬುಲೆನ್ಸ್
ನಲ್ಲಿ ಉಮರ್ಗಾ ಶೆಂಡಗೆ ಆಸ್ಪತ್ರೆಗೆ ತಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ದಿನಾಂಕ 20-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.