Police Bhavan Kalaburagi

Police Bhavan Kalaburagi

Wednesday, December 26, 2018

BIDAR DISTRICT DAILY CRIME UPDATE 26-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-12-2018

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 84/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 23-12-2018 ರಂದು ಫಿರ್ಯಾದಿ ಮಾರುತಿ ತಂದೆ ಮಲ್ಲಪ್ಪಾ ಬಿಂಗೆನೋರ ವಯ: 20 ವರ್ಷ, ಜಾತಿ: ಕುರುಬ, ಸಾ: ಕರಕನಳ್ಳಿ, ತಾ: ಹುಮನಾಬಾದ, ಜಿಲ್ಲಾ: ಬೀದರ ರವರ ಅಣ್ಣಾನಾದ ಪ್ರಭು ತಂದೆ ಮಲ್ಲಪ್ಪಾ ವಯ: 25 ವರ್ಷ, ಜಾತಿ: ಕುರುಬ, ಇತನು ತನ್ನ ಮೊಟಾರ್ ಸೈಕಲ್ ನಂ. ಎಪಿ-22/ಎಎ-4368 ನೇದರ ಮೇಲೆ ಕರಕನಳ್ಳಿಯಿಂದ ಗೌಸಬಾದ ಕಡೆಗೆ ಹೋಗುವಾಗ ಕರಕನಳ್ಳಿ ಅರಣ್ಯ ಪ್ರದೇಶದಲ್ಲಿ ಚಿಂಚೋಳಿ-ಬೀದರ ರೋಡಿನ ಮೇಲೆ ಚಿಂಚೋಳಿ ಕಡೆಯಿಂದ ಸರಕಾರಿ  ಬಸ್ ನಂ. ಕೆಎ-38/ಎಫ್-0827 ನೇದರ ಚಾಲಕನಾದ ಆರೋಪಿ ಕಾಶಿನಾಥ ತಂದೆ ನಾಗಪ್ಪಾ ಅರ್ಕಿ ವಯ: 43 ವರ್ಷ, ಜಾತಿ: ಕಬ್ಬಲಿಗ, ಸಾ: ನಾಗನಕೇರಾ, ತಾ: ಹುಮನಾಬಾದ ಇತನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪ್ರಭು ಇತನ ಸದರಿ ಮೋಟಾರ್ ಸೈಕಲಗೆ ಒಮ್ಮೆಲೆ ಡಿಕ್ಕಿ ಮಾಡಿ ತನ್ನ ಬಸ್ಸು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಪ್ರಭು ಇತನಿಗೆ ತಲೆಗೆ ಮತ್ತು ಎದೆಗೆ ಗುಪ್ತಗಾಯ, ಕೈಗಳಿಗೆ ತರಚಿದ ಗಾಯಗಳಾಗಿದ್ದು, ನಂತರ ಗಾಯತೊಮಡ ಪ್ರಭುಗೆ 108  ಅಂಬುಲೆನ್ಸನಲ್ಲಿ ಹಾಕಿಕೊಂಡು ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ  ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಉಸ್ಮಾನಿಯ ಆಸ್ಪತ್ರೆ  ಹೈದ್ರಾಬಾದನಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-12-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 120/2018, PÀ®A. 279, 283, 338 L.¦.¹ eÉÆvÉ 187 LJA« PÁAiÉÄÝ :-
ದಿನಾಂಕ 25-12-2018 ರಂದು ಫಿರ್ಯಾದಿ ಬಾಲಾಜಿ ತಂದೆ ಬಾಬುರಾವ ಕಾಟೆಕರ ವಯ: 32 ವರ್ಷ, ಜಾತಿ: ಮರಾಠ, ಸಾ: ಹುಣಸನಾಳ, ತಾ: ಹುಮನಾಬಾದ ರವರ ತಮ್ಮನಾದ ಸುಜಿತ ವಯ: 28 ವರ್ಷ ಇತನು ಇಬ್ರಾಹಿಂಭಾಗ ಬಸವಕಲ್ಯಾಣ ರವರ ಲಾರಿ ನಂ. ಕೆಎ-56/2822 ನೇದ್ದರ ಮೇಲೆ ಕ್ಲೀನರ ಕೆಲಸ ಮಾಡಿಕೊಂಡಿರುತ್ತಾನೆ, ಹೀಗಿರುವಲ್ಲಿ ದಿನಾಂಕ 25-12-2018 ರಂದು ಸುಜಿತ ಹಾಗೂ ಸದರಿ ಲಾರಿ ಚಾಲಕನಾದ ನಾಜಿಂ ಪಟೇಲ ಸಾ: ಕಪ್ಪರಗಾಂವ ಈತನು ಚಲಾಯಿಸುತ್ತಾ ಲಾರಿಯಲ್ಲಿ ಉಮರ್ಗಾದಿಂದ ಕಟ್ಟಿಗೆ ಲೋಡ ತುಂಬಿಕೊಂಡು ಬಸವಕಲ್ಯಾಣಕ್ಕೆ ಬರುವಾಗ ನಾಜಿಂ ಪಟೇಲ ಈತನು ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಾ.ಹೇ ನಂ. 65 ಮೇಲೆ ಉಮಾಪೂರ ಕ್ರಾಸ್ ಹತ್ತಿರ ರೋಡಿನ ಮೇಲೆ ಯಾವುದೇ ಮೂನ್ಸೂಚನೆ ಇಲ್ಲದೇ  ಇಂಡೀಕೇಟರ್ ಹಾಕದೇ ನಿಂತ್ತಿದ್ದ ಲಾರಿ ನಂ. ಕೆಎ-56/3611 ನೇದ್ದಕ್ಕೆ ಡಿಕ್ಕಿ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಸುಜತನಿಗೆ ಎಡಗೈ ಮುಂಗೈ ಹತ್ತಿರ ಭಾರಿ ರಕ್ತಗಾವಾಗಿರುತ್ತದೆ ಹಾಗೂ ನಾಜೀಂ ಪಟೇಲನಿಗೆ ಯಾವುದೇ ಗಾಯವಾಗಿರುವುದಿಲ್ಲ, ಲಾರಿ ಚಾಲಕ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES.


C¥sÀd®¥ÀÆgÀ ¥Éưøï oÁuÉ : ದಿನಾಂಕ 25/12/2018 ರಂದು 11.00 ಎಎಮ್ ಕ್ಕೆ ಫಿರ್ಯಾದಿದಾರನಾದ  ಶ್ರೀ ಅಮೋಘಿ ತಂದೆ ಚಂದಪ್ಪ ಪೂಜಾರಿ ಸಾ||ಅಳ್ಳಗಿ(ಕೆ) ತಾ||ಅಫಜಲಪೂರ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಸಾರಂಶವೇಂದರೆ ನಾನು ಮೇಲ್ಕಾಣಿಸಿದ ವಿಳಾಸದಲ್ಲಿ ಹೆಂಡತಿ ಮಕ್ಕಳೊಂದಿಗೆ ಇದ್ದು ಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತೇನೆ. ನಮಗೆ ಗ್ರಾಮ ಪಂಚಾಯತ್ ದವರು ನಮ್ಮ ಗ್ರಾಮದಲ್ಲಿ ಸರಕಾರದಿಂದ ಜಾಗ ನೀಡಿದ್ದು ನಾವು ಸದರಿ ಜಾಗದಲ್ಲಿ ಮನೆಮಾಡಿಕೊಂಡು ವಾಸವಾಗಿರುತ್ತೇವೆ. ನಮ್ಮ ಗ್ರಾಮದ ಅಶೋಕ ತಂದೆ ರಾಮಚಂದ್ರ ಪವಾರ, , ಸೂರ್ಯಕಾಂತ ತಂದೆ ರಾಮಚಂದ್ರ ಪವಾರ ರವರು ಸದರಿ ಜಾಗೆ ನಮ್ಮದು ಇರುತ್ತದೆ ಹಾಗು ಪಾಹಣಿಯಲ್ಲಿ ನಮ್ಮದೆ ಹೆಸರು ಇರುತ್ತದೆ ನೀವು ಜಾಗಕ್ಕೆ ನಮಗೆ ಹಣ ಕೊಡಬೇಕು ಇಲ್ಲಂದ್ರ ಬಿಟ್ಟು ಹೋಗಿ ಅಂತ  ನನ್ನೊಂದಿಗೆ ಆಗಾಗ ಜಗಳ ಮಾಡುತ್ತಾ ಬಂದಿರುತ್ತಾರೆ ನಾನು ಸದರಿಯವರಿಗೆ ಜಾಗ ನಮಗೆ ಸರಕಾರ ನೀಡಿರುತ್ತದೆ ಇದಕ್ಕೆ ಸಂಬಂದಿಸಿದ ಕಾಗದ ಪತ್ರ ನಮ್ಮ ಹೆಸರಿನಲ್ಲಿರುತ್ತವೆ ಅಂತ ಹೇಳಿರುತ್ತೇನೆ ಹಾಗು ಸದರಿ ವಿಷಯದ ಬಗ್ಗೆ ನಮ್ಮ ಗ್ರಾಮದ ಮುಖಂಡರು ಪಂಚಾಯತ್ ಮಾಡಿರುತ್ತಾರೆ.  ದಿನಾಂಕ 25/12/2018 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ನಾನು ಕೂಲಿಕೆಲಸಕ್ಕೆ ಆಳುಗಳನ್ನು ಹೇಳಲು ನಮ್ಮ ಗ್ರಾಮದ ಅಶೋಕ ಪವಾರ ರವರ ಮನೆಯ ಮುಂದಿನಿಂದ ಹೋಗುತಿದ್ದಾಗ ನನಗೆ ನೋಡಿ ಸೂರ್ಯಕಾಂತ ತಂದೆ ರಾಮಚಂದ್ರ ಪವಾರ, ವಿಲಾಸ ತಂದೆ ಸೂರ್ಯಕಾಂತ ಪವಾರ, ವಿಕಾಸ ತಂದೆ ಸೂರ್ಯಕಾಂತ ಪವಾರ, ದತ್ತಾತ್ರೇಯ ತಂದೆ ಸಂಬಾಜಿ ಪವಾರ ಹಾಗು ವಿಜಯಕುಮಾರ ತಂದೆ ಸಿದ್ದಣ್ಣ ಪಾಟೀಲ ರವರು ಗುಂಪು ಕಟ್ಟಿಕೊಂಡು ತಮ್ಮ ಕೈಯಲ್ಲಿ ಮೋಟಾರ್ ಸೈಕಲ್ ಜೈನ, ಬೇಲ್ಟ ಹಾಗು ಕಬ್ಬಿಣದ ರಾಡ ಹಿಡಿದುಕೊಂಡು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಹತ್ತಿರ ಬಂದು ನನಗೆ ಕೊಲೆ ಮಾಡುವ ಉದ್ದೆಶದಿಂದ ನನಗೆ ಅಶೋಕ ಈತನು ಎದೆಯ ಮೇಲಿನ ಅಂಗಿ ಹಿಡಿದು ರಂಡಿ ಮನಗೆ ನಮ್ಮ ಜಾಗ ಬಿಟ್ಟು ಹೋಗು ಅಂತ ಹೇಳಿದರು ಹೋಗಲ್ಲಾ ಅಂತ ಅಂದು ಬೈಯುತಿದ್ದಾಗ ಸದರಿಯವರು ಬೈಯುವದನ್ನು ಕೇಳಿ ನಮ್ಮ ಗ್ರಾಮದ ಮಾಹಂತೇಶ ತಂದೆ ಭೀಮಶ್ಯಾ ಸಿಂಧೆ, ಇಮಾಮಸಾಬ ತಂದೆ ಅಬ್ದುಲಸಾಬ ಶೇಖ, ಅಶೋಕ ತಂದೆ ಹುಲೇಪ್ಪ ಕಲ್ಲೂರ ರವರು ಬಂದು ಯಾಕೆ ಏನಾಗಿದೆ ಅಂತ ಕೇಳುತಿದ್ದಾಗ ವಿಕಾಸ ಈತನು ರಂಡಿ ಮಗನಿಗೆ ಇವತ್ತ ಬಿಡಲ್ಲಾ ಅಂತ ಅಂದು ತನ್ನ ಕೈಯಲಿದ್ದ ಮೋಟಾರ್ ಸೈಕಲ್ ಚೈನಿನಿಂದ ನನ್ನ ಎದೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದನು ಆಗ ನಾನು ಚಿರಾಡುತಿದ್ದಾಗ ವಿಜಯಕುಮಾರ ತಂದೆ ಸಿದ್ದಣ್ಣ ಪಾಟೀಲ ಈತನು ತನ್ನ ಕೈಯಲ್ಲಿನ ಬೇಲ್ಟನಿಂದ ನನ್ನ ಬೆನ್ನಿಗೆ ಕಾಲಿಗೆ ಹೊಡೆಯುತಿದ್ದನು ವಿಕಾಸ ಇತನು ರಾಡಿನಿಂದ ನನ್ನ ತಲೆಗೆ  ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿದ್ದು ಸದರಿ ಏಟು ನನ್ನ ಹೆಡಕಿಗೆ ಬಿದ್ದಿರುತ್ತದೆ ಅಲ್ಲೆ ಇದ್ದ ಮಹಾಂತೇಶ ಸಿಂಧೆ, ಇಮಾಮಸಾಬ ಶೇಖ, ಅಶೋಕ ಕಲ್ಲೂರ ರವರು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ಸದರಿಯವರು ಅಲ್ಲಿಂದ ಹೋಗುವಾಗ ಬೋಸಡಿ ಮಗನೆ ನೀ ಜಾಗ ಬಿಡಬೇಕು ಇಲ್ಲಂದ್ರ 3,00,000/-ರೂಪಾಯಿ ಕೊಡಬೇಕು ಅಂತ ಅಂದು ಅಲ್ಲಿಂದ ಹೋಗಿರುತ್ತಾರೆ ನಂತರ ಮಹಾಂತೇಶ ರವರು 108 ಅಂಬ್ಯೂಲೆನ್ಸಗೆ ಪೋನ ಮಾಡಿ ಅದರಲ್ಲಿ ನನಗೆ ಹಾಕಿಕೊಂಡು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಕರೆದುಕೊಂಡು ಬಂದಿರುತ್ತಾರೆ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಠಾಣೆಗೆ ಬಂದಿರುತ್ತೇನೆ. ಕಾರಣ ಮೇಲೆ ನಮೂದಿಸಿದ  1)ಅಶೋಕ ತಂದೆ ರಾಮಚಂದ್ರ ಪವಾರ, 2) ಸೂರ್ಯಕಾಂತ ತಂದೆ ರಾಮಚಂದ್ರ ಪವಾರ,3) ವಿಲಾಸ ತಂದೆ ಸೂರ್ಯಕಾಂತ ಪವಾರ, 4)ವಿಕಾಸ ತಂದೆ ಸೂರ್ಯಕಾಂತ ಪವಾರ,5)ದತ್ತಾತ್ರೇಯ ತಂದೆ ಸಂಬಾಜಿ ಪವಾರ ಹಾಗು 6)ವಿಜಯಕುಮಾರ ತಂದೆ ಸಿದ್ದಣ್ಣ ಪಾಟೀಲ  ರವರೆಲ್ಲರು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಮಾರಣಾಂತಿಕ ಹಲ್ಲೆ  ಮಾಡಿದ್ದು ಸದರಿಯವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ್ದು ನಿಜ ಇರುತ್ತದೆ ಅಂತಾ ಕೊಟ್ಟ್ ಹೇಳಿಕೆ ಫೀರ್ಯಾದಿ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ 244/2018 ಕಲಂ 143,147,148,504,324,307 ಸಂ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.
C¥sÀd®¥ÀÆgÀ ¥Éưøï oÁuÉ : ದಿನಾಂಕ 25-12-2018 ರಂದು ಬೆಳಗ್ಗೆ 11:30 ಗಂಟೆಗೆ ಫೀರ್ಯಾದಿಇ ಮಹಾಂತಪ್ಪ ಕಡಕೋಳ ಸಾ: ಘತ್ತರಗಾ ರವರು ಠಾಣೆಗೆ ಬಂದು ಕನ್ನಡದಲ್ಲ ಗಣಕೀಕೃತ ಮಾಡಿದ ಫೀರ್ಯಾದಿ ಸಲ್ಲಸಿದ್ದು ಸದರಿ ಫೀರ್ಯಾದ ಸಾರಾಂಶವೇನೆಂದರೆ ನಾನು ಮಹಾಂತಪ್ಪ ತಂ/ಶರಣಪ್ಪ ಕಡಕೋಳ || 48 ಜಾ|| ಕಬ್ಬಲಿಗೇರ || ಕೂಲಿ ಕೆಲಸ ಸಾ|| ಘತ್ತರಗಾ ತಾ|| ಅಫಜಲಪೂರ, ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನಂದರೆ ನಾನು ಕೂಲಿಕೆಲಸ ಮಾಡಿಕೊಂಡು ನನ್ನ ಹೆಂಡತಿ ಶೋಭಾ ಮತ್ತು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುತ್ತೇನೆ. ನಮಗೆ 1) ಭಾಗ್ಯಶ್ರೀ 2) ಸುನೀಲ 3) ಮಹಾನಂದ 4) ಅನೀಲ ಅಂತ ಹೀಗೆ ಒಟ್ಟು ನಾಲ್ಕು ಜನರು ಮಕ್ಕಳಿರುತ್ತಾರೆ.  ದಿನಾಂಕ:25-12-2018 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ನನ್ನ ಕೊನೆಯ ಮಗ ಅನೀಲ ವಯ|| 18 ಮತ್ತು ನಮ್ಮೂರಿನ ಚೇತನ ತಂ/ಶಂಕರ ಬಿದನೂರ ಇವರಿಬ್ಬರು ತಮ್ಮ ವಯಕ್ತಿಕ ಕೆಲಸದ ಸಲುವಾಗಿ ಅಫಜಲಪೂರಕ್ಕೆ ಹೋಗಿ ಬರುತ್ತೇವೆ ಅಂತ ಭಾಗಣ್ಣ ಹೂಗಾರನ ಮೋಟರ ಸೈಕಲ ನಂ:ಕೆಎ.29 ಎಸ್. 5480 ನೇದ್ದನ್ನು ತೆಗೆದುಕೊಂಡು ಬಂದಿರುತ್ತಾರೆ. ಆಗ ಚೇತನನು ಮೋಟರ ಸೈಕಲ ನಡೆಸುತ್ತ ಬಂದಿದ್ದು, ನನ್ನ ಮಗ ಅನೀಲನು ಆತನ ಹಿಂದೆ ಕುಳಿತು ಬಂದಿರುತ್ತಾನೆ. ಬೆಳಿಗ್ಗೆ 9-15 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ಹಿಂಚಗೇರಾ ಗ್ರಾಮದ ಬಸವರಾಜ ತಳವಾರ ಎಂಬಾತನು ನನಗೆ ಪೋನ್ ಮೂಲಕ ತಿಳಿಸಿದ್ದೇನಂದರೆ, ಈಗ ಸ್ವಲ್ಪ ಸಮಯದ ಹಿಂದೆ ಅಂದರೆ ಬೆಳಿಗ್ಗೆ 9-00 ಗಂಟೆ ಸುಮಾರಿಗೆ  ಚೇತನ  ಬಿದನೂರ ಮತ್ತು ನಿಮ್ಮ ಮಗ ಅನೀಲ ರವರು ಮೋಟರ ಸೈಕಲ ನಂ:ಕೆಎ.29 ಎಸ್.5480 ನೇದ್ದರ ಮೇಲೆ ಅಫಜಲಪೂರದ ಕಡೆಗೆ ಹೋಗುತ್ತಿದ್ದಾಗ ಘತ್ತರಗಾ-ಅಫಜಲಪೂರ ರೋಡಿನ ಮೇಲೆ ನಮ್ಮೂರ ಹತ್ತಿರ ಇರುವ ತಿರುವಿನಲ್ಲಿ ಸದರಿಯವರ ಮೋಟರ ಸೈಕಲಗೆ ಅಫಜಲಪೂರದಿಂದ ಘತ್ತರಗಾ ಕಡೆಗೆ ಹೊರಟಿದ್ದ ಟಾಟಾ ಸುಮೊ ನಂ: ಕೆ..19 5501 ನೇದ್ದರ ಚಾಲಕನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮೋಟರ ಸೈಕಲಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ತನ್ನ ವಾಹನವನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಘಟನೆಯಲ್ಲಿ ನಿಮ್ಮ ಮಗನ ಮುಖ ಮತ್ತು ತಲೆಗೆ ಹಾಗು ಮೈಕೈಗಳಿಗೆ ಭಾರಿರಕ್ತಗಾಯಗಳಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ. ಚೇತನನಿಗೆ ಮುಖಕ್ಕೆ, ತಲೆಗೆ ಮತ್ತು ಮೈಕೈಗಳಿಗೆ ಭಾರಿರಕ್ತಗಾಯ ಮತ್ತು ಒಳಪೆಟ್ಟುಗಳಾಗಿರುತ್ತವೆ ಅದೇ ಸಮಯಕ್ಕೆ ಕ್ರೋಸರನಲ್ಲಿ ಬರುತ್ತಿದ್ದ ಸಿದ್ದರಾಮ ಇಂಗಳಗಿ, ಶರಣಪ್ಪ ಕಮಾನಮನಿ ಇಬ್ಬರು ಸಾ|| ಘತ್ತರಗಾ ರವರು ಸದರಿ ಘಟನೆ ನೋಡಿರುತ್ತಾರೆ ಅಂತ ತಿಳಿಸಿದನು. ಅದೇ ಸಮಯಕ್ಕೆ ಕ್ರೂಸರ್ ನಲ್ಲಿ ಬಂದಿದ್ದ ಬಗಲೂರ ಗ್ರಾಮದ ರುದ್ರಪ್ಪ ಕುರನಳ್ಳಿ ಎಂಬಾತನು ಚೇತನನಿಗೆ ಕ್ರೂಸರ್ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಅಫಜಲಪೂರಕ್ಕೆ ಕರೆದುಕೊಂಡು ಹೋಗಿರುತ್ತಾನೆ ಅಂತ ತಿಳಿಸಿದನು. ವಿಷಯವನ್ನು ನಾನು ನನ್ನ ಹೆಂಡತಿಗು ಮತ್ತು ನಮ್ಮ ಸಂಬಂಧಿಕರಾದ 1) ಸುಭಾಸ್ ತಂ/ಶರಣಪ್ಪ ಹಂಚನಾಳ 2) ಶಿವರಾಯ ತಂ/ಸೈಬಣ್ಣ ಹಂಚನಾಳ 3) ಮಲ್ಲಪ್ಪ ತಂ/ಭೀಮರಾಯ ಹಂಚನಾಳ 4) ಸಿದ್ದಪ್ಪ ತಂ/ಭಗವಂತರಾಯ ಹಂಚನಾಳ ರವರಿಗೆ ತಿಳಿಸಿದ್ದು, ನಂತರ ನಾವೆಲ್ಲರು ಘಟನೆ ಜರುಗಿದ ಸ್ಥಳಕ್ಕೆ ಬಂದು ನನ್ನ ಮಗನ ಶವ ಮತ್ತು ಆತನಿಗೆ ಆಗಿರುವ ಗಾಯಗಳನ್ನು ನೋಡಿ ಶವವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಂದು ಅಫಜಲಪೂರ ಸರ್ಕಾರಿ ದವಾಖಾನೆಯಲ್ಲಿ ಹಾಕಿಸಿರುತ್ತೇವೆ. ಗಾಯ ಹೊಂದಿದ ಚೇತನನಿಗೆ ಅಫಜಲಪೂರದ ಬಸವರಾಜ ಚಿಂಚೋಳಿ ಎಂಬುವರು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಿರುತ್ತಾರೆ. ಸದರಿ ಘಟನೆಯು ಟಾಟಾ ಸುಮೊ ನಂ:ಕೆಎ.19 5501 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಮಗ ಮತ್ತು ಚೇತನ ರವರ ಮೋಟರ ಸೈಕಲ ನಂ:ಕೆಎ.29 ಎಸ್. 5480 ನೇದ್ದಕ್ಕೆ ಡಿಕ್ಕಿಹೊಡೆಸಿ ಅಪಘಾತಪಡಿಸಿದ್ದರಿಂದ ಸಂಭವಿಸಿರುತ್ತದೆ. ಕಾರಣ ಟಾಟಾ ಸುಮೊ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಿ ನಮಗೆ ನ್ಯಾಯ ಕೊಡಿಸಲು ವಿನಂತಿ ಅಂತಾ ಕೊಟ್ಟ ಸಾರಾಂಶದ ಮೇಲಿಂದ ನಾನು ಅಂಬಾದಾಸ ಸಿ.ಹೆಚ್.ಸಿ 290 ಅಫಜಲಪೂರ ಠಾಣೆ ಗುನ್ನೆ ನಂ 245/2018 ಕಲಂ 279, 338, 304 () ಐಪಿಸಿ ಮತ್ತು 187 .ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.
C¥sÀd®¥ÀÆgÀ ¥Éưøï oÁuÉ : ದಿನಾಂಕ 25-12-2018 ರಂದು 7:00 ಪಿ ಎಮ್ ಕ್ಕೆ ಮಾನ್ಯ ಪಿ.ಎಸ್. ಸಾಹೇಬರು ಒಬ್ಬ ಆರೋಪಿತನೊಂದಿಗೆ ಮುದ್ದೆ ಮಾಲು ಮತ್ತು ವರದಿ ಹಾಜರ ಪಡಿಸಿದ್ದು, ಸದರ ವರದಿ ಸಾರಾಂಶದವೇನೆಂದರೆ ದಿನಾಂಕ 25-12-2018 ರಂದು 03.20 ಪಿಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ, ಬಾತ್ಮಿದಾರರಿಂದ ಮಾಹಿತಿ ತಿಳಿಸಿದ್ದೆನೆಂದರೆ ಮಣುರ ಗ್ರಾಮದ ಬಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಇಬ್ಬರು ಪಂಚರಾದ 1) ಚಂದಪ್ಪ ತಂದೆ ರಮೇಶ ಕೋಳಿಗೇರಿ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ|| ಇಬ್ಬರು ಅಫಜಲಪೂರ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ನಾನು ಮತ್ತು ಸಿಬ್ಬಂದಿಯವರಾದ ಮಯೂರ ಹೆಚ್.ಸಿ-275, ಗುಂಡಪ್ಪ ಸಿಹೆಚ್ ಸಿ-68 ರವರನ್ನು ಸಂಗಡ ಕರೆದುಕೊಂಡು ಪಂಚರೊಂದಿಗೆ 3:30 ಪಿಎಮ್ ಕ್ಕೆ ನಮ್ಮ ಇಲಾಖಾ ವಾಹನದಲ್ಲಿ ಹೊರಟು. 4:30 ಪಿಎಮ್ ಕ್ಕೆ ಮಣುರ ಗ್ರಾಮದ ಬಸನಿಲ್ದಾಣ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶರಣಬಸಪ್ಪ ತಂದೆ ಕಾಡಪ್ಪ ಅಜಗೊಂಡ ||36 ವರ್ಷ ಜಾ||ಲಿಂಗಾಯತ ||ಚಾಲಕ ಸಾ||ಮಣುರ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 820/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು,  ಸದರಿಯವುಗಳನ್ನು ಪಂಚರ ಸಮಕ್ಷಮ 4:40 ಪಿ.ಎಮ್ ದಿಂದ 5:40 ಪಿಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ನಂತರ ಸದರಿ ಆರೋಪಿತನೊಂದಿಗೆ ಮರಳಿ ಠಾಣೆಗೆ ಬಂದು 7:00 ಪಿ.ಎಮ್ ಕ್ಕೆ ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನಿಡಿದ್ದರ ಮೇರೆಗೆ ಠಾಣೆ ಗುನ್ನೆ ನಂ 246/2018 ಕಲಂ 78 (3) ಕೆ.ಪಿ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.
ನರೋಣಾ ಪೊಲೀಸ ಠಾಣೆ : ದಿನಾಂಕ 25/12/2018 ರಂದು 4-30 ಗಂಟೆಗೆ ಶ್ರೀ.ಚೇತನ ಪಿ.ಎಸ್.ಐ ನರೋಣಾ ಠಾಣೆ, ರವರು ಠಾಣೆಗೆ ಹಾಜರಾಗಿ ವರದಿಯೊಂದಿಗೆ ನಮೂದಿಸಿದ 8 ಜನ ಆರೋಪಿತರನ್ನು ಹಾಗೂ ಜಪ್ತಿ ಪಡಿಸಿದ ಮುದ್ದೆ ಮಾಲು ಮತ್ತು ಅಸಲು ಜಪ್ತಿ ಪಂಚನಾಮೆಯನ್ನು ಹಾಜರ ಪಡಿಸಿದ್ದು ಸದರಿ ವರದಿಯ  ಸಾರಂಶವೆನೆಂದರೆ ದಿನಾಂಕ:25/12/2018 ರಂದು 2-10 ಪಿ.ಎಂ.ಕ್ಕೆ ನಾನು ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೆನೆಂದರೆ ಗೋಳಾ (ಬಿ) ಗ್ರಾಮದ ಮಲ್ಕಣ ದೇವರ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ದಾಳಿ ಕುರಿತು ಮಾನ್ಯ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ ನ್ಯಾಯಾಧೀಶರು ಆಳಂದ ರವರ ಅನುಮತಿ ಪಡೆದುಕೊಂಡು ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಪಂಚರಾದ ಶ್ರೀ.ಬಂಡಪ್ಪ ತಂದೆ ದೂಳಪ್ಪ ನಾಟೀಕಾರ  ವಯ;57ವರ್ಷ  ಉ;ಕೂಲಿಕೆಲಸ  ಜಾ:ಕಬ್ಬಲಿಗ ಸಾ:ನರೋಣಾ ಗ್ರಾಮ ಮತ್ತು  ಶ್ರಿಮಂತ ತಂದೆ ಶಂಕ್ರಪ್ಪಾ ಡೆಂಕಿ, ವಯಾ:55 ವರ್ಷ, ಜಾತಿ:ಲಿಂಗಾಯತ, :ಹೊಟಲಕೆಲಸ, ಸಾ:ನರೋಣಾ ಗ್ರಾಮ ಇವರನ್ನು ಬರಮಾಡಿಕೊಂಡು ಸದರಿ ವಿಷಯ ತಿಳಿಸಿ ಪಂಚರಾಗಲು ಒಪ್ಪಿಕೊಂಡ ಮೇರೆಗೆ ಪಂಚರು ಹಾಗೂ ನಾನು ಮತ್ತು ಸಿಬ್ಬಂದಿಯವರಾದ 1)ಆನಂದ ಸಿಪಿಸಿ-12058, 2) ಬಸವರಾಜ ಸಿಪಿಸಿ-672, 3)ಮೇಘರಾಜ ಸಿಪಿಸಿ-78 ರವರೆಲ್ಲರೂ ಕೂಡಿ ಒಂದು ಖಾಸಗಿ ಕ್ರೂಜರ ಜೀಪಿನಲ್ಲಿ ಠಾಣೆಯಿಂದ 2-30 ಪಿ,ಎಮ್,ಕ್ಕೆ ಹೊರಟು ಬಾತ್ಮಿ ಬಂದ ಸ್ಥಳವಾದ ಗೋಳಾ (ಬಿ) ಗ್ರಾಮದ ಮಲ್ಕಣ ದೇವರ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವರ  ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 7 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಹಾಗೂ ಸಿಬ್ಬಂದಿಯವರು ಕೂಡಿ ಸದರಿ ಜೂಜುಕೋರರ ಮೇಲೆ 3-00 ಪಿ.ಎಂ.ಕ್ಕೆ ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ರಮೇಶ್  ತಂದ ಶಿವಲಿಂಗಪ್ಪಾ ಪೂಜಾರಿ, ವಯಾ:24 ವರ್ಷ, ಜಾತಿ:ಕುರುಬ, ಉ:ಖಾಸಗಿ ಕೆಲಸ, ಸಾ:ಗೋಳಾ (ಬಿ) ಅಂತಾ ಹೇಳಿದ್ದು ಈತನ ಕೈಯಲ್ಲಿ 28 ಇಸ್ಪಿಟ ಎಲೆಗಳಿದ್ದು ಅವನ ಮುಂದೆ 12 ರಂತೆ ಎರಡು ಗುಂಪುಗಳಲ್ಲಿ 24 ಇಸ್ಪಿಟ ಎಲೆಗಳಿದ್ದು ಅವನನ್ನು ಚೆಕ್ ಮಾಡಲಾಗಿ ಅವನ ಹತ್ತಿರ 110/- ರೂಪಾಯಿಗಳು ದೊರೆತವು.2)ಗುರುನಾಥ ತಂದೆ ಕುಪೇಂದ್ರ ದುಧನಿ, ವಯಾ:30 ವರ್ಷ, ಜಾತಿ:ಮಾಲಗಾರ, ಉ:ಕೂಲಿಕೆಲಸ,  ಸಾ:ಗೋಳಾ (ಬಿ) ಈತನ ಹತ್ತಿರ 90 ರೂಪಾಯಿಗಳು ದೊರೆತವು,3)ಖಾಸಿಂ ತಂದೆ ಮಕಬೂಲಸಾಬ ವಯಾ:24 ವರ್ಷ, ಜಾತಿ:ಮುಸ್ಲಿಂ, ಉ:ಕೂಲಿಕೆಲಸ, ಸಾ:ಗೋಳಾ (ಬಿ),ಈತನ ಹತ್ತಿರ 80 ರೂಪಾಯಿಗಳು ದೊರೆತವು, 4)ಲಾಲ್ಡೆಸಾಬ ತಂದೆ ಹುಸೇನಸಾಬ ವಯಾ:25 ವರ್ಷ, ಜಾತಿ:ಮುಸ್ಲಿಂ, ಉ:ಕೂಲಿಕೆಲಸ, ಸಾ:ಗೋಳಾ (ಬಿ) ಈತನ ಹತ್ತಿರ 120 ರೂಪಾಯಿಗಳು ದೊರೆತವು, 5)ಮೊನಬಿ ತಂದೆ ಮೈಬೂಬಸಾಬ ಗಾಡಿವಾಲೆ, ವಯಾ:28 ವರ್ಷ, ಜಾತಿ:ಮುಸ್ಲಿಂ, ಉ:ಕೂಲಿಕೆಲಸ, ಸಾ: ಗೋಳಾ (ಬಿ),ಈತನ ಹತ್ತಿರ 70 ರೂಪಾಯಿಗಳು ದೊರೆತವು 6)ಲಾಲಸಾಬ ತಂದೆ ಹೈದರಸಾಬ ಮುಜಾವರ, ವಯಾ:45 ವರ್ಷ, ಜಾತಿ:ಮುಸ್ಲಿಂ, ಉ:ಕೂಲಿಕೆಲಸ, ಸಾ:ಗೊಳಾ(ಬಿ) ಈತನ ಹತ್ತಿರ 130 ರೂಪಾಯಿಗಳು ದೊರೆತವು, 7)ಪರಮೇಶ್ವರ ತಂದೆ ಸಿದ್ರಾಮಪ್ಪಾ ಚಿಂಚೋಳಿ, ವಯಾ:50 ವರ್ಷ, ಜಾತಿ:ಲಿಂಗಾಯತ, ಉ:ಕೂಲಿಕೆಲಸ, ಸಾ:ಗೊಳಾ(ಬಿ) ಗ್ರಾಮ,  ಈತನ ಹತ್ತಿರ 60 ರೂಪಾಯಿಗಳು ದೊರೆತವು, 8)ರಮೇಶ ತಂದೆ ಯಶ್ವಂತರಾವ ಪಾಟೀಲ, ವಯಾ:40 ವರ್ಷ, ಜಾತಿ:ಮಾಳಗಾರ, ಉ:ಒಕ್ಕಲುತನ, ಸಾ:ಗೋಳಾ(ಬಿ) ಈತನ ಹತ್ತಿರ ರೂ 100 ದೊರೆತವು ಹಾಗೂ ನೆಲದ ಮೇಲೆ ಇಸ್ಪಿಟ ಪಣಕ್ಕೆ ಹಚ್ಚಿದ 110 ರೂಪಾಯಿಗಳು ಇದ್ದವು.ಇಸ್ಪಿಟ ಪಣಕ್ಕೆ ಉಪಯೋಗಿಸಿದ ಹೀಗೆ ಒಟ್ಟು ನಗದು ಹಣ 870/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡು ಈ ಬಗ್ಗೆ 3-00 ಪಿ.ಎಂ. ದಿಂದ 4-00 ಪಿ.ಎಂ.ವರೆಗೆ ಪಂಚನಾಮೆಯನ್ನು ಕೈಕೊಂಡು ಸದರಿ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಆರೋಪಿ ಹಾಗೂ ಮುದ್ದೆಮಾಲಿನೊಂದಿಗೆ 4-30 ಪಿ.ಎಂ.ಕ್ಕೆ ಠಾಣೆಗೆ ಬಂದು ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿ ವರದಿಯನ್ನು ಹಾಜರಿದ್ದ ದಯಾನಂದ ಸಿ.ಹೆಚ್‌.ಸಿ-21 ರವರಿಗೆ ಜಪ್ತಿ ಪಂಚನಾಮೆ ಆರೋಪಿತರ ಸಮೇತ ಒಪ್ಪಿಸಿ ಆರೋಪಿತರರ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ ಮೆರೆಗೆ ನಾನು ದಯಾನಂದ ಸಿ.ಹೆಚ್‌.ಸಿ-21 ನರೋಣಾ ಪೊಲೀಸ ಠಾಣೆ ಅಪರಾಧ ಸಂ 157/2018 ಕಲಂ 87 ಕೆ,ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದ  ಬಗ್ಗೆ ವರದಿ.
¥sÀgÀºÀvÁ¨ÁzÀ ¥ÉưøÀ oÁuÉ : ¢£ÁAPÀ 23/12/18 gÀAzÀÄ gÁwæªÉüÉAiÀÄ°è DgÉÆæ  E¸Áä¬Ä® vÀAzÉ C®è§PÀë EvÀ£ÀÄ ¦üAiÀiÁ𢠣ÉÆÃqÀĪÀÅzÀÄ, ªÀiÁvÁr¸ÀĪÀÅzÀÄ ¸À£Éß ªÀiÁqÀĪÀÅzÀÄ ªÀiÁqÀÄwÛzÀÄÝ, PÉÊ»r zÀÄ  dUÁÎr ªÀiÁ£À¨sÀAUÀPÉÌ AiÀÄwß¹zÀÝ jAzÀ ªÀÄvÀÄÛ CAf¹zÀjAzÀ £À£Àß vÀªÀgÀÆ ªÀÄ£ÉUÉ ºÉÆÃUÀ¨ÉÃPÉAzÀÄ ºÉÆÃVzÀÄÝ £À£Àß ªÀiÁ£À¨sÀAUÀPÉÌ AiÀÄwß¹zÀ E¸Áä¬Ä¯ï ºÁUÀÆ CªÀ£À UɼÉAiÀÄ C¯Áè vÀAzÉ G¸Áä£À¸Á§ ªÀÄvÀÄÛ CªÀ¤UÉ PÀĪÀÄäPÀÄÌ ¤ÃqÀÄwÛzÀÝ CªÀgÀ vÀAzÉ C¯Áè§PÀë, vÁ¬Ä ©Ã§£ï ©Ã gÀªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÆV¸À¨ÉÃPÉAzÀÄ ಪ್ರಕರಣ ದಾಖಲಿಸಿದ  ಬಗ್ಗೆ ವರದಿ.