ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 14-07-2020
ಔರಾದ(ಬಿ)
ಪೊಲೀಸ್ ಠಾಣೆ ಯು.ಡಿ.ಆರ್ ನಂ. 08/2020,
ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 13-07-2020 ರಂದು ಫಿರ್ಯಾದಿ ಲಕ್ಷ್ಮೀಬಾಯಿ ಗಂಡ ದೇವಿದಾಸ ಕುಂಪರ್ಸೆ ಸಾ: ದುಡಕನಾಳ ರವರ ಮಗಳಾದ ಹರಿಬಾಯಿ @ ಉಷಾ ಇವಳು ನೀರು ತರಲು ಬಾವಿಗೆ ಬಂದು ಆಕಸ್ಮೀಕವಾಗಿ ಕಾಲು ಜಾರಿ ಕೊಡದ ಹಗ್ಗದ ಸಮೇತ ಬಾವಿಯಲ್ಲಿ ಬಿದ್ದು ನಿರೀನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ, ಆಕೆಯ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ದೂರು ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ
ಪೊಲೀಸ್
ಠಾಣೆ, ಬೀದರ ಅಪರಾಧ ಸಂ. 106/2020, ಕಲಂ. 457, 380 ಐಪಿಸಿ :-
ದಿನಾಂಕ 29-06-2020 ರಂದು ರಾತ್ರಿ
ವೇಳೆಯಲ್ಲಿ ಬೀದರ ತೋಟಗಾರಿಕೆ ಮಾಹಾವಿದ್ಯಾಲಯ ಜಹಿರಾಬಾದ ರಸ್ತೆ ಬೀದರನ ಅಡುಗೆ ಮನೆಯ ಹಿಂದಿನ ಬಾಗಿಲ
ಬೀಗವನ್ನು ಯಾರೋ ಕಳ್ಳರು ಮುರಿದು ಅಡುಗೆ ಮಾಡುವ ಪಾತ್ರೆಗಳು, ಗ್ಯಾಸ ಸ್ಟೋ, ಅಡುಗೆಯ ಕುಕರ ಊಟದ
ಪಾತ್ರೆಗಳು ಹಾಗು ಇತರೆ ಸಾಮಾನುಗಳು ಹೀಗೆ ಒಟ್ಟು 9860/- ರೂಪಾಯಿ ಬೆಲೆ
ಬಾಳುವ ವಸ್ತುಗಳು ಕಳವು ಮಾಡಿರುತ್ತಾರೆಂದು ಫಿರ್ಯಾದಿ ಅಶೋಕ ಸೂರ್ಯವಂಶಿ ತಂದೆ ಪ್ರಭಾಕರ ವಯ:
45
ವರ್ಷ,
ಜಾತಿ: ಎಸ್.ಸಿ, ಉ: ಸಹಾಯಕ ಪ್ರಾಧ್ಯಪಕರು ಮತ್ತು ನಿಲಯ ಪಾಲಕರು ತೋಟಗಾರಿಕೆ ವಿದ್ಯಾಲಯ ಸಾ: ರಾಂಪುರೆ
ಕಾಲೋನಿ ಬೀದರ ರವರು ನೀಡಿದ ದೂರಿನ ಮೇರೆಗೆ ದಿನಾಂಕ 13-07-2020 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 93/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 13-07-2020 ರಂದು ಬಸವಕಲ್ಯಾಣ ನಗರದ ಖಿಲ್ಲಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು
ಪಿ.ಎಸ.ಐ [ಕಾ&ಸೂ] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು
ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಖಿಲ್ಲಾ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಖಿಲ್ಲಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಗೌಸ್ ತಂದೆ ಹೈದರಸಾಬ ದಾದು ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಹಳೆ ಆಟೋ ನಗರ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ 1/- ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರೂ ಒಮ್ಮೆಲೆ
ದಾಳಿ ಮಾಡಿ ಆರೋಪಿಗೆ ಹಿಡಿದು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ
2430/- ರೂ., ಮತ್ತು 02 ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಸಿಕ್ಕಿರುತ್ತದೆ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 102/2020, ಕಲಂ.
381 ಐಪಿಸಿ :-
ಆರೋಪಿ ತೋಟ ರಮೇಶ
ಇವನು ಸ್ವೀಟಿಕ್ ಲ್ಯಾಬ್ ಪ್ರೈವೆಟ್ ಲೀಮಿಟೆಡ ಕಂಪನಿಯಲ್ಲಿ ದಿನಾಂಕ 20-02-2017 ರಿಂದ ಪ್ರೋಡಕ್ಷನ್ ಮ್ಯಾನೇಜರ ಅಂತಾ ನೇಮಕಗೊಂಡು ಕೆಲಸ ಮಾಡುತ್ತಿರುತ್ತಾನೆ, ನಂತರ
ರಮೇಶ ಇವನು ಕಾರ ಹಾಗೂ ಇತರೆ ವಾಹನಗಳ ಮೂಲಕ ಸದರಿ ಕಂಪನಿಯಲ್ಲಿ 2019-2020 ರಿಂದ ಆಗಾಗ ಟೇಲಿಸ್ಟರಾನ್ ಮತ್ತು ಟಿ.ಅರ.ಟಿ ಕೇಮಿಕಲ್ ಪೌಡರ 25 ಕೆ.ಜಿ ಅ.ಕಿ 30,000/- ನೇದ್ದು ಕಳವು
ಮಾಡಿರುತ್ತಾನೆಂದು ಫಿರ್ಯಾದಿ ಸೂರ್ಯಕಿರಣ ತಂದೆ ಶ್ರೀನಿವಾಸರಾವ ಸಾ: ವಿಜಯವಾಡಾ, ಸದ್ಯ: ಸ್ಟೀಟಿಕ ಲ್ಯಾಬ್ ಪ್ರೈವೆಟ್ ಲಿಮಿಟೆಡ್ ಹುಮನಾಬಾದ ರವರು ನೀಡಿದ ದೂರಿನ ಮೇರೆಗೆ ದಿನಾಂಕ 13-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂ.
102/2020, ಕಲಂ. 380 ಐಪಿಸಿ :-
ದಿನಾಂಕ 11-07-2020 ರಂದು 00 ಗಂಟೆಯಿಂದ 0400 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಅರವಿಂದ ತಂದೆ ಸುಭಾಷ ಮೇತ್ರೆ ವಯ: 33 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಮುಸ್ತರಿ ರವರ ಮನೆಯಲ್ಲಿನ ಅಲಮಾರಾವನ್ನು ಯಾರೋ ಅಪರಿಚಿತ ಕಳ್ಳರು
ತೆರೆದು ಅದರಲ್ಲಿನ ಒಂದು ತೊಲೆಯ ಬಂಗಾರದ ಸುತ್ತುಂಗರ ಸುಮಾರು 40,000/- ರೂ. ಮತ್ತು 7 ತೊಲೆಯ ಬೆಳ್ಳಿಯ ಆಭರಣಗಳು ಸುಮಾರು 3000/- ರೂ. ಬೆಲೆವುಳ್ಳ ಆಭರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಹಾಗೂ ಫಿರ್ಯಾದಿಯವರ ಮನೆಯ ಪಕ್ಕದ ಮನೆಯವರಾದ ಸುನೀಲ ತಂದೆ ರವಿ ಕಾಲೆಬಾಗ ರವರ ಪಡಸಾಲೆಯಲ್ಲಿದ ಒಂದು ರೇಡಮಿ ನೋಟ್-5 ಮೋಬೈಲ್ ನಂ. 7558486404 ಅ.ಕಿ 4000/- ರೂಪಾಯಿ
ನೇದನ್ನು ಸಹ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ
ಮೇರೆಗೆ ದಿನಾಂಕ 13-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ
ಪೊಲೀಸ್ ಠಾಣೆ ಅಪರಾಧ ಸಂ. 53/2020, ಕಲಂ. 15(ಎ),
32 (iii) ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ 13-07-2020 ರಂದು ಇಲ್ಲಾಳ ಗ್ರಾಮದ ಘಾಟಹಿಪ್ಪರ್ಗಾ ರೋಡ ಪಕ್ಕದಲ್ಲಿರುವ ರಾಜು ವೆಂಕಟಗೀರಿ ಈತನ ತಗಡಿನ ಶೆಡ್ಡ ಹತ್ತಿರ ಇಬ್ಬರು ವ್ಯಕ್ತಿಗಳು ಮದ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೋಡುತ್ತಿದ್ದಾರೆಂದು ಕುಮಾರಿ ಜೈಶ್ರೀ ಪಿ.ಎಸ್.ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಇಲ್ಲಾಳ ಗ್ರಾಮದಲ್ಲಿರುವ ಘಾಟಹಿಪ್ಪರ್ಗಾ ರೋಡ ಹತ್ತಿರ ಹೋಗಿ ನೋಡಲು ಅಲ್ಲಿ ಆರೋಪಿತರಾದ 1) ರಾಜು ತಂದೆ ವೇಂಕಟಗೀರಿ ವಯ: 37 ವರ್ಷ, ಜಾತಿ: ಗೋಸ್ವಾಮಿ ಮತ್ತು 2) ನಾಗೀಂದ್ರ ತಂದೆ ಮಸಾಜಿ ಮದಲವಾಡ ವಯ: 39 ವರ್ಷ, ಜಾತಿ: ಎಸ್.ಸಿ ಹರಿಜನ, ಇಬ್ಬರು ಸಾ: ಇಲ್ಲಾಳ, ತಾ: ಬಸವಕಲ್ಯಾಣ ಇವರಿಬ್ಬರು ಇಲ್ಲಾಳ ಗ್ರಾಮದಲ್ಲಿ ಘಾಟಹಿಪ್ಪರ್ಗಾ ರೋಡಿನ ಪಕ್ಕದಲ್ಲಿರುವ ತಗಡಿನ ಶೆಡ್ಡಿನ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ನಿಂತುಕೊಂಡು ಸರಾಯಿ ಪೌಚಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಡುವುದನ್ನು ಕಂಡು ಅವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಗೆ ಹಿಡಿದು, ಅವರ ತಾಬೆಯಲ್ಲಿದ್ದ ಸರಾಯಿ ಪೌಚ್ಗಳನ್ನು ಪರಿಶೀಲಿಸಿ ನೋಡಲು 180 ಎಮ್.ಎಲ್ ನ 03 ಓಲ್ಡ್ ಟಾವರ್ನ ವಿಸ್ಕಿ ಸಾರಾಯಿ ಪೌಚ್ ಅ.ಕಿ 217/- ರೂಪಾಯಿಗಳು ಮತ್ತು 02 ಪ್ಲಾಸ್ಟಿಕ್ ಗ್ಲಾಸ್ ಸಿಕ್ಕಿದ್ದು ಅವುಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ
ಸಂ. 107/2020, ಕಲಂ. ಮಹಿಳೆ ಕಾಣೆ :-
ದಿನಾಂಕ 13-07-200
ರಂದು
ಸಂಗಮ್ಮಾ
@ ಹಾಲಮ್ಮಾ
ಗಂಡ ಯಾದವರಾವ ಮನಳಕರ ವಯ: 45 ವರ್ಷ, ಜಾತಿ: ಎಸ.ಸಿ ಹೊಲಿಯಾ, ಸಾ:
ನಾವದಗೇರಿ ಬೀದರ ರವರ ತಾಯಿ ಗುಜ್ಜಮ್ಮಾ ಗಂಡ ಮುಲ್ತಾನಿ ವಯ 68 ವರ್ಷ ಇವಳು ಚಂದಾಪೂರದಲ್ಲಿ
ಕೂಲಿ ಕೆಲಸ ಮಾಡಿಕೊಂಡು ಅವಳು ಒಬ್ಬಳೆ ತನ್ನ ತಾನೆ ಅಡಿಗೆ ಮಾಡಿಕೊಂಡು ಉಟ ಮಾಡುತ್ತಾ ಇದ್ದು,
ಫಿರ್ಯಾದಿ ಮತ್ತು ಫಿರ್ಯಾದಿಯ ಅಕ್ಕ ಹಾಗು ಅಣ್ಣ ರಾಜು ಆಗಾಗ ಚಂದಾಪೂರಕ್ಕೆ ಹೊಗಿ ತಮ್ಮ ತಾಯಿಗೆ ಭೆಟಿಯಾಗಿ
ಸುಖ-ದುಖ ವಿಚಾರಿಸುತ್ತಾ ಬಂದಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ
10-07-2020 ರಂದು 2100 ಗಂಟೆಗೆ ಸೊದರ ಮಾವನ
ಮಗನಾದ ಓಂಕಾರ ಇವನು ಫಿರ್ಯಾದಿಗೆ ಕರೆ ಮಾಡಿ ಮಾಹಿತಿ ತಿಳಿಸಿದೆನೆಂದರೆ ಅಜ್ಜಿ ಗುಜ್ಜಮ್ಮಾ ಇವಳು
ಮುಂಜಾನೆ
1000 ಗಂಟೆಗೆ
ಕೂಲಿ ಕೆಲಸಕ್ಕೆ ಮನೆಯಿಂದ ಹೊದವಳು ಮರಳಿ ಮನೆಗೆ ಬಂದಿರುವುದಿಲ್ಲ ಅಂತ ತಿಳಿಸಿದ್ದು, ನಂತರ ಫಿರ್ಯಾದಿಯು
ಚಂದಾಪೂರ ಗ್ರಾಮಕ್ಕೆ ಹೋಗಿ ವಿಚಾರಣೆ ಮಾಡಲು ತಾಯಿ ಗುಜ್ಜಮ್ಮಾ ಇವಳು ದಿನಾಂಕ
10-07-2020 ರಂದು
ಮುಂಜಾನೆ
1000 ಗಂಟೆಗೆ
ಮನೆಯಿಂದ ಕೂಲಿ ಕೆಲಸಕ್ಕೆ ಹೊದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ
ಅಂತ ಗೊತ್ತಾಗಿ ನಂತರ ತಾನು ಹಾಗು ತಮ್ಮ ಸಂಬಂಧಿಕರು ಹುಡುಕಾಡಿದರು ಕಾಣೆಯಾದ ತಾಯಿ ಸಿಗಲಿಲ್ಲಾ, ಕಾಣೆಯಾದ ತನ್ನ ತಾಯಿ ಚಹರೆ ಪಟ್ಟಿ 1) ಹೆಸರು: ಗುಜ್ಜಮ್ಮಾ, 2) ಗಂಡ ಮುಲ್ತಾನಿ ಹೊನ್ನೆನವರ,
3)
ವಯ: 68 ವರ್ಷ, 4) ಜಾತಿ: ಎಸ.ಸಿ ಹೊಲಿಯಾ, 5) ಮಾತಾಡುವ ಭಾಷೆ: ಕನ್ನಡ, 6) ಚಹರೆ ಪಟ್ಟಿ ಸಾದಾ
ಕಪ್ಪು ಬಣ್ಣ, ದುಂಡು ಮುಖ, ಬಾಯಿಲ್ಲಿ ಒಂದು ಹಲ್ಲು ಇರುವುದಿಲ್ಲಾ, 7) ಅಂದಾಜು 5 ಅಡಿ ಉದ್ದ ಹಾಗೂ
8) ಮೈಮೆಲೆ ಇದ್ದ ಬಟ್ಟೆಗಳು:
ನಿಳಿ ಬಣ್ಣದ ಸಿರೆ ಬ್ಲೌಜ್ ಧರಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.