ಕಳ್ಳತನ ಪ್ರಕರಣ :
ಶಹಾಬಾದ ಠಾಣೆ : ಶ್ರೀ ಅಣವೀರಪ್ಪಾ ತಂದೆ ಬಸವರಾಜ ಪಾಟೀಲ ವ:38 ವರ್ಷ ಜಾ:ಲಿಂಗಾಯತ ಉ:ಔಷದ ವ್ಯಾಪಾರ ಸಾ: ಲಕ್ಷ್ಮಿಗಂಜ್ ಶಹಾಬಾದ ರವರು ನಾನು ಕ್ರಿಮಿನಾಶಕ ಔಷದ ಇದ್ದು ಅದನ್ನು ದಿನಾಂಕ:14/10/2011 ರಂದು ರಾತ್ರಿ ವ್ಯಾಪಾರ ಮುಗಿಸಿಕೊಂಡು ಲಾಕ ಮಾಡಿಕೊಂಡು ಮನೆಗೆ ಬಂದಿದ್ದು ದಿನಾಂಕ;15/10/2011 ರಂದು ಬೆಳಿಗ್ಗೆ ಬಂದು ಅಂಗಡಿ ತೆರೆಯಲು ಅಂಗಡಿಯ ಬೀಗ ಮುರಿದಿದ್ದು ಗಾಬರಿಯಾಗಿ ನಮ್ಮ ಪಾರ್ಟನರ್ ಅಪ್ಪರಾವ ಗುಂಡಪ್ಪಾರವರಿಗೆ ಪೋನ ಮಾಡಿ ತಿಳಿಸಿ ತೊಗರಿಗೆ ಹೊಡೆಯುವ ಕ್ರಿಮಿನಾಶಕ ಔಷದ ಪ್ರೊಕ್ಲೈಮ್ ಎಂಬ 28 ಕೆ.ಜಿ ಕ್ರಿಮಿನಾಶಕ ಔಷಧ ಬಾಟಲಿಗಳು ಅ.ಕಿ. 1,75,000/- ರೂ. ಮತ್ತು ಗಲ್ಲಾದಲ್ಲಿದ್ದ 1,280/- ರೂ. ನಗದು ಹಣ ಯಾರೋ ಕಳ್ಳರು ಅಂಗಡಿಯ ಬಾಗಿಲದ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 157/2011 ಕಲಂ:457 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ
ಗುಲಬರ್ಗಾ ಗ್ರಾಮೀಣ ಠಾಣೆ : ಶ್ರೀ ಯಲ್ಲಯ್ಯ ತಂದೆ ಗುಂಡಯ್ಯ ಗುತ್ತೇದಾರ ಸಾ: ನಂದಿಕೂರ ಗ್ರಾಮ ತಾ: ಜಿ: ಗುಲಬರ್ಗಾರವರು ನನ್ನ ಅತ್ತೆ ಅಂಬುಬಾಯಿ ತಿರಿಕೊಂಡಿದ್ದರಿಂದ ನನ್ನ ತಮ್ಮ ಮಲ್ಲಯ್ಯ ಮತ್ತು ಅಕ್ಕನ ಮಗ ಉದಯ ಇಬ್ಬರೂ ಕೂಡಿಕೊಂಡು ಮೋಟಾರ ಸೈಕಲ ನಂ ಕೆಎ 32 ಎಕ್ಸ್ 9456 ನೇದ್ದರ ಮೇಲೆ ಡಬರಾಬಾದ ಗ್ರಾಮಕ್ಕೆ ಹೊರಟಿದ್ದು ಅವರ ಹಿಂದೆ ನಾನು ಕೂಡ ಹೊರಟು ರಿಂಗ ರೋಡ ರಾಮ ಮಂದಿರ ಕ್ರಾಸದಲ್ಲಿ ಚಹಾ ಕೂಡಿಯಲು ನಿಂತಿದ್ದು, ಅದೇ ಸಮಯಕ್ಕೆ ನಂದಿಕೂರಿನ ಶ್ರೀಕಾಂತ ಗುಳ್ಳೇನವರ ಇತನು ನನಗೆ ಪೋನ ಮಾಡಿ ಉದನೂರ ಕ್ರಾಸದಲ್ಲಿ ಲಾರಿ ನಂ ಕೆಎ 32 ಎ- 0942 ನೇದ್ದರ ಚಾಲಕನು ಲಾರಿಯಲ್ಲಿ ಉಸುಕು ತುಂಬಿ ಕೊಂಡು ನಿಂತಿದ್ದ ಲಾರಿ ಚಾಲಕನು ಯಾವುದೇ ಮುನ್ಸೂಚನೆ ನೀಡದೆ ಲಾರಿಯನ್ನು ಅಲಕ್ಷತನದಿಂದ ಹಿಂದೆ ತೆಗೆದು ಕೊಂಡಿದ್ದರಿಂದ ಹಿಂದೆ ಜೇವರ್ಗಿ ರಿಂಗ ರೋಡ ಕಡೆಯಿಂದ ಹೊರಟ ನಿಮ್ಮ ತಮ್ಮ ಮಲ್ಲಯ್ಯನ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಲಾರಿಯ ಹಿಂದಿನ ಗಾಲಿಯಲ್ಲಿ ಸಿಕ್ಕಿ ಬಿದಿದ್ದರಿಂದ ಲಾರಿ ಹಿಂದಿನ ಬಾಡಿ ಮಲ್ಲಯ್ಯನ ತಲೆಗೆ (ಹಣೆಗೆ) ಬಡೆದಿದ್ದು & ಲಾರಿಯ ಟೈಯರ ಮಲ್ಲಯ್ಯ ಮತ್ತು ಉದಯನ ಮೈಮೇಲಿಂದ ಹೋಗಿದ್ದರಿಂದ ಇಬ್ಬರಿಗೂ ಬಾರಿ ರಕ್ತಗಾಯಗಳಾಗಿ ಮಲ್ಲಯ್ಯ ಸ್ಥಳದಲ್ಲಿ ಮೃತಪಟ್ಟಿದ್ದು ಎಂದು ತಿಳಿಸಿದನು ಗಾಯ ಗೊಂಡಿದ್ದ ಉದಯನನ್ನು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿದ್ದು. ತನ್ನ ತಮ್ಮನ ಶವ ಅಲ್ಲಿಯೇ ಬಿಟ್ಟು ಸರಕಾರಿ ಆಸ್ಪತ್ರೆಗೆ ಬಂದು ಉದಯನಿಗೆ ನೋಡಲಾಗಿ ಅವನು ಮೃತ್ತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.301/2011 ಕಲಂ 279,304(ಎ) ಐಪಿಸಿ ಸಂ/ 187 ಐಎಂವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ
ಗುಲಬರ್ಗಾ ಗ್ರಾಮೀಣ ಠಾಣೆ : ಶ್ರೀ ಯಲ್ಲಯ್ಯ ತಂದೆ ಗುಂಡಯ್ಯ ಗುತ್ತೇದಾರ ವ:32 ವರ್ಷ ಉ: ಸಮಾದಾನ ಹೊಟೇಲದಲ್ಲಿ ಕುಕ್ಕರ ಕೆಲಸ ಜಾ: ಇಲಿಗೇರ ಸಾ: ನಂದಿಕೂರ ಗ್ರಾಮ ತಾ: ಜಿ: ಗುಲಬರ್ಗಾ ರವರು ಡಬರಾಬಾದ ಗ್ರಾಮದಲ್ಲಿ ನನ್ನ ಅತ್ತೆ ಅಂಬುಬಾಯಿ ಇವರು ತೀರಿಕೊಂಡಿದ್ದರಿಂದ ಅವರ ಅಂತ್ಯಕ್ರೀಯೆ ಕುರಿತು, ನನ್ನ ತಮ್ಮ ಮಲ್ಲಯ್ಯ ಹಾಗೂ ಅಕ್ಕನ ಮಗ ಉದಯ ಇಬ್ಬರೂ ಕೂಡಿಕೊಂಡು ಮೋಟಾರ ಸೈಕಲ ನಂ ಕೆಎ 32 ಎಕ್ಸ್ 9456 ನೇದ್ದರ ಮೇಲೆ ಡಬರಾಬಾದ ಗ್ರಾಮಕ್ಕೆ ಹೊರಟಿದ್ದು ಅವರ ಹಿಂದೆ ನಾನು ಹಿಂದೆ ಹೊರಟು ರಿಂಗ ರೋಡ ರಾಮ ಮಂದಿರ ಕ್ರಾಸದಲ್ಲಿ ಚಹಾ ಕೂಡಿಯಲು ನಿಂತಿದ್ದು, ಅದೇ ಸಮಯಕ್ಕೆ ನಂದಿಕೂರಿನ ಶ್ರೀಕಾಂತ ಗುಳ್ಳೇನವರ ಇತನು ನನಗೆ ಪೋನ ಮಾಡಿ ಉದನೂರ ಕ್ರಾಸದಲ್ಲಿ ಲಾರಿ ನಂ ಕೆಎ 32 ಎ- 0942 ನೇದ್ದರ ಚಾಲಕನು ಲಾರಿಯಲ್ಲಿ ಉಸುಕು ತುಂಬಿ ಕೊಂಡು ನಿಂತಿದ್ದ ಲಾರಿ ಚಾಲಕನು ಯಾವುದೇ ಮುನ್ಸೂಚನೆ ನೀಡದೆ ಲಾರಿಯನ್ನು ಅಲಕ್ಷತನದಿಂದ ಒಮ್ಮೇಲೆ ವೇಗದಲ್ಲಿ ಹಿಂದೆ ತೆಗೆದು ಕೊಂಡಿದ್ದರಿಂದ ನಿಮ್ಮ ತಮ್ಮ ಮಲ್ಲಯ್ಯನ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಲಾರಿಯ ಹಿಂದಿನ ಗಾಲಿಯಲ್ಲಿ ಸಿಕ್ಕಿಬಿದಿದ್ದರಿಂದ ಲಾರಿ ಹಿಂದಿನ ಬಾಡಿ ಮಲ್ಲಯ್ಯನ ತಲೆಗೆ (ಹಣೆಗೆ) ಬಡೆದಿದ್ದು & ಲಾರಿಯ ಟೈಯರ ಮಲ್ಲಯ್ಯ ಮತ್ತು ಉದಯನ ಮೈಮೇಲಿಂದ ಹೋಗಿದ್ದರಿಂದ ಇಬ್ಬರಿಗೂ ಬಾರಿ ರಕ್ತಗಾಯಗಳಾಗಿ ಮಲ್ಲಯ್ಯ ಸ್ಥಳದಲ್ಲಿ ಮೃತಪಟ್ಟಿದ್ದು ಎಂದು ತಿಳಿಸಿದನು ಗಾಯ ಗೊಂಡಿದ್ದ ಉದಯನನ್ನು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿದ್ದು. ಆಸ್ಪತ್ರೆಗೆ ಬಂದು ಉದಯನಿಗೆ ನೋಡಲಾಗಿ ಅವನು ಮದ್ಯಾಹ್ನ ಮೃತ್ತಪಟ್ಟಿರುತ್ತಾನೆ ಎಂದು ಗೋತ್ತಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.301/2011 ಕಲಂ 279,304(ಎ) ಐಪಿಸಿ ಸಂ/ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.
ವಂಚನೆ ಪ್ರಕರಣ :
ಸ್ಟೇಷನ ಬಜಾರ ಪೊಲೀಸ ಠಾಣೆ : ಶ್ರೀ ಉದಯ ಶಂಕರ ತಂದೆ ಸುಭಾಷಚಂದ್ರ ಶೆಟ್ಟಿ ಸಾ|| ಇಂಟರ ನ್ಯಾಷನಲ್ ಹೋಟೇಲ ಹತ್ತಿರ ಭಾಗ್ಯವಂತಿ ನಗರ ಗುಲಬರ್ಗಾ ರವರು ನಾನು ಆಳಂದ ರಸ್ತೆಯಲ್ಲಿರಯವ ಶೆಟ್ಟಿ ಕನಸ್ಟ್ರಕ್ಷನ ಕಂಪನಿಯಲ್ಲಿ ಪಾಲುದಾರನಾಗಿದ್ದು ಮಲ್ಟಿ ಪ್ಲೆಕ್ಸ ಸಿನೆಮಾ ಚಿತ್ರ ಮಂದಿರವಿದೆ. ಇದನ್ನು ಫನ್ ಮಲ್ಟಿ ಪ್ಲೆಕ್ ಫೆಕ್ಸ ಮುಂಬಯಿ ಎಂಬ ಚಲನಚಿತ್ರ ನಡೆಸುವ ಕಂಪನಿಗೆ ನವೆಂಬರ 2006 ರಲ್ಲಿ 5 ವರ್ಷಗಳ ಅವಧಿಗೆ ಬಾಡಿಗೆ ನೀಡಿದ್ದು, ಕರ್ನಾಟಕ ಮನೊರಂಜನಾ ತೆರಿಗೆ ಚಿತ್ರ ಮಂದಿರದ ಮಾಲಿಕರಿಗೆ ವಿನಾಯಿತಿ ಇರುತ್ತದೆ. ಈ ಸೌವಲತ್ತು ಆರ್ಥಿಕ ಸಹಾಯವಾಗುತ್ತಿದ್ದು ಇದು ಚಿತ್ರ ಮಂದಿರದ ಮಾಲೀಕರಿಗೆ ಮಾತ್ರ ಇರುತ್ತದೆ. ಆದರೆ ಬಾಡಿಗೆದಾರರಿಗೆ ಸಿಗುವುದಿಲ್ಲ. ದಿ:04/10/2006 ರಂದು ಮನೋರಂಜನಾ ತೆರಿಗೆ ಕಛೇರಿ ಗುಲಬರ್ಗಾದಲ್ಲಿ ಚಲನಚಿತ್ರ ನಡೆಸಲು ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದು ನಾನು ಸಲ್ಲಿಸಿದ ಅರ್ಜಿಯನ್ನು ತಾವೆ ಸ್ವಂತ ಸಲ್ಲಿಸಿರುವುದಾಗಿ ನಾನೇ ಅವರು ಎಂಬಂತೆ ತೋರಿಸಿ ಅರ್ಜಿಯ ಮೇಲೆ ಅನುಪ್ ಇವರು ತಮ್ಮ ಬಾವ ಚಿತ್ರವನ್ನು ಅಂಟಿಸಿ ಮೋಸ ಮಾಡಿದ್ದು ದಿ : 17/11/2006 ರಂದು ಹಿಂದಿನ ದಿನಾಂಕ : 15/11/2006 ಅಂತಾ ಹಾಕಿ ಪರವಾನಿಗೆ ಪಡೆದಿರುವರು. ಹೀಗಾಗಿ ಸರಕಾರದಿಂದ ಸಿಗಬೇಕಾದ ತೆರಿಗೆ ವಿನಾಯಿತಿಯನ್ನು ನನ್ನ ಬಾಡಿಗೆದಾರರು ಸ್ವಂತ ಪಡೆಯುವ ದುರುದ್ದೇಶದಿಂದ ಹಾಗೂ ತಾವೇ ಸ್ವಂತ ನಮ್ಮ ಚಲನಚಿತ್ರ ಮಾಲೀಕರೆಂದು ಬಾಸವಾಗುವಂತೆ ವರ್ತಿಸಿ. ಮೋಸ ಮಾಡಿದ ಅನುಪ್ ಉಪಾಧ್ಯಕ್ಷರು ಫನ್ ಮಲ್ಟಿ ಪ್ಲೆಕ್ಸ ಹಾಗೂ ವಿಶಾಲ ಆನಂದ ಸಿ.ಓ.ಓ. ಫನ್ ಮಲ್ಟಿ ಫೆಕ್ಸ ಹಾಗೂ ಅತುಲ್ ಗೋಯಲ್ ಸಿ.ಇ.ಓ. ಫನ್ ಮಲ್ಟಿ ಫೆಕ್ಸ ಇವರ ವಿರುದ್ಧ ವಂಚನೆ ದಾಖಲಾತಿ ಸೃಷ್ಠಿ ಮತ್ತು ವ್ಯಕ್ತಿ ಸುಳ್ಳಾಗಿ ಪ್ರತಿನಿಧಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 183/11 ಕಲಂ 419, 420, 468, 471, ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಪೊಲೀಸ್ ಠಾಣೆ: ಸೂರ್ಯಕಾಂತ ತಂದೆ ಶರಣಪ್ಪ ಅವರಾದಿ ಸಾ: ಬಿದನೂರ ತಾ: ಅಫಜಲಪೂರ ರವರು ನಾವು ನಿನ್ನೆ ದಿನಾಂಕ: 14/10/2011ರಂದು ತಮ್ಮ ಓಣಿಯ ಶರಣಮ್ಮ ಮ್ಯಾಕೇರಿ ಇವರ ತಂಗಿಯ ಮಗ ಯಾದಗಿರಿಯಲ್ಲಿ ತೀರಿಕೊಂಡಿದ್ದರಿಂದ ಗ್ರಾಮದ ಪರಮೇಶ್ವರನ ಕ್ರೋಜರ ವಾಹನ ನಂಬರ ಕೆಎ.22 ಎಮ್.ಬಿ 5656 ನೇದ್ದರಲ್ಲಿ ನಾನು ಮತ್ತು ಓಣಿಯ 20 ಜನರು ಶವ ಸಂಸ್ಕಾರ ಮುಗಿಸಿಕೊಂಡು ವಾಪಸ ಯಾದಗಿರಿಯಿಂದ ಶಹಾಪೂರ - ಜೇವರ್ಗಿ ಮಾರ್ಗವಾಗಿ ಬರುತ್ತಿದ್ದಾಗ ದಿನಾಂಕ: 14-15/10/2011 ರಂದು ಮಧ್ಯರಾತ್ರಿ 00-30 ಗಂಟೆಗೆ ಕ್ರೋಜರ ವಾಹನದ ಎಡ ಭಾಗದ ಹಿಂದಿನ ಟೈಯರ ಪಂಚ್ಚರ ಆಗಿದ್ದರಿಂದ ಕ್ರೋಜರನ್ನು ಶಹಾಫೂರ - ಜೇವರ್ಗಿ ಮೇನ ರೋಡಿನ ಅವರಾಧ ಕ್ರಾಸ ಇನ್ನೂ ಒಂದು ಕೀ,ಮಿ . ಅಂತರದಲ್ಲಿದ್ದಾಗ ರೋಡಿನ ಸೈಡಿಗೆ ನಿಲ್ಲಿಸಿ ಕ್ರೋಜರ ಚಾಲಕನು ಟೈಯರ ಪಂಚ್ಚರ ತೆಗೆಯಿಸಿಕೊಳ್ಳಲು ಸಂಗಡ ತಿಪ್ಪಣ್ಣ ತಳ್ಳಕೇರಿ ಇತನನ್ನು ಕರೆದುಕೊಂಡು ಹೋದಾಗ ಕ್ರೋಜರನಲ್ಲಿ ಇದ್ದ ನಮ್ಮೂರ ಪ್ರಯಾಣಿಕರು ಕೆಲವು ಜನರು ಕ್ರೋಜರನಲ್ಲಿ ಕುಳಿತ್ತಿದ್ದರೂ , ಕೆಲವು ಜನರು ಕ್ರೋಜರನಿಂದ ಕೆಳಗೆ ಇಳಿದು ಕ್ರೋಜರ ಮುಂದುಗಡೆ ರೋಡಿನಲ್ಲಿ ಕುಳಿತು ಮಾತಾನಾಡುತ್ತಾ ಇದ್ದಾಗ ಮಧ್ಯ ರಾತ್ರಿ 01-00 ಗಂಟೆಗೆ ಶಹಾಪೂರ ಕಡೆಯಿಂದ ಒಂದು ಲಾರಿ ನಂಬರ ಕೆಎ. 25 ಬಿ 2295 ನೇದ್ದರ ಚಾಲಕನು ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನಾವು ಕುಳಿತುಕೊಂಡಿದ್ದ ಕ್ರೋಜರಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದು ಡಿಕ್ಕಿ ಪಡಿಸಿದ ಪರಿಣಾಮ ಸುಭದ್ರಬಾಯಿ ಗಂಡ ಶಿವಪ್ಪ ಪಾಳೆದ , ವ: 60 ವರ್ಷ, ಸಾಬವ್ವ ಗಂಡ ಚಂದ್ರಶ್ಯಾ ನಡಗಟ್ಟಿ, ವ: 45 ವರ್ಷ, ಮರೆಮ್ಮ ಗಂಡ ಸೈದಪ್ಪ ಹಳ್ಳಿ, ವ: 50 ವರ್ಷ, ಮರೆಮ್ಮ ಗಂಡ ಮರೆಪ್ಪ ಹಳ್ಳಿ, ವ: 40 ವರ್ಷ, ರತ್ನಾಬಾಯಿ ಗಂಡ ದೇವಪ್ಪ ಹೇರೂರ, 50 ವರ್ಷ, ಶರಣಮ್ಮ ಗಂಡ ಸೈದಪ್ಪ ಮ್ಯಾಕೇರಿ, ವ: 40 ವರ್ಷ, ಹಣಮಂತ ತಂದೆ ಬಸಪ್ಪ ಹಳ್ಳಿ, ವ: 50 ವರ್ಷ, ಶರಣಮ್ಮ ಗಂಡ ಹಾಜಪ್ಪ ಮ್ಯಾಕೇರಿ ವ: 30 ವರ್ಷ, ಸಾ: ಎಲ್ಲಾರೂ ಬಿದನೂರ ಗ್ರಾಮ ತಾ: ಅಫಜಲಪೂರ ರವರು 8 ಜನ ಸ್ಥಳದಲ್ಲಿ ಸತ್ತು , 9 ಜನರಿಗೆ ಗಾಯಾಗಳಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 180/2011 ಕಲಂ 279, 337, 338, 304 (ಎ) ಐಪಿಸಿ ಸಂಗಡ 187 ಐ.ಎಮ್.ವಿ ಅಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.