Police Bhavan Kalaburagi

Police Bhavan Kalaburagi

Sunday, June 20, 2021

BIDAR DISTRICT DAILY CRIME UPDATE 20-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-06-2021

 

ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 19-06-2021 ರಂದು ಫಿರ್ಯಾದಿ ಕು. ಗೋಪಿಬಾಯಿ ತಂದೆ ದತ್ತಾತ್ರಿ ಕಾಂಬಳೆ ಸಾ: ಎಕಂಬಾ ರವರ ತಂದೆಯಾದ ದತ್ತಾತ್ರಿ ತಂದೆ ಮಾಧವ ಕಾಂಬಳೆ ವಯ: 51 ವರ್ಷ ಗೆ ನಮ್ಮ ಹೊಲದಲ್ಲಿ ಬೀಜ ಬಿತ್ತನೆ ಮಾಡುವ ಕುರಿತು ಹೋಲಕ್ಕೆ ಹೋಗಿ ಹೊಲದಲ್ಲಿದ್ದ ಮುಳ್ಳಿನ ಹುಲ್ಲಿನ ಕಂಟಿಯಲ್ಲಿದ್ದ ಒಕ್ಕಲುತನ ಸಾಮಾನು ತಗೆಯಲು ಹೋದಾಗ ಆಕಸ್ಮಿಕವಾಗಿ ಎಡಗೈ ಮುಷ್ಟಿ ಮೇಲೆ ಹಾವು ಕಚ್ಚಿದ್ದರಿಂದ ಚಿಕಿತ್ಸೆ ಕರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ತಮ್ಮ ತಂದೆಯವರ ಸಾವಿನಲ್ಲಿ ಯಾವುದೇ ಸಂಶಯ ಇರುವುದಿಲ್ಲಾ ಮತ್ತು ಯಾರ ಮೇಲೆ ಯಾವುದೇ ದೂರು ಇರುವುದಿಲ್ಲಾ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ  ಪ್ರಕರಣ ದಾಖಲು ಮಾಡಿಕೊಂಡು ತನಿಕೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 11/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಶಿವಲೀಲಾ ಗಂಡ ವೀರಶೆಟ್ಟಿ ಖಪಲೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾಳ ರಾಜೋಳಾ, ತಾ: ಬಸವಕಲ್ಯಾಣ ರವರ ಗಂಡನಾದ ವೀರಶೆಟ್ಟಿ ತಂದೆ ಶರಣಪ್ಪಾ ಖಪಲೆ ರವರು ಸಾಗುವಳಿ ಮಾಡಲು ಹೊಲದ ಮೇಲೆ ತೆಗೆದುಕೊಂಡ ಸಾಲವನ್ನು ಹೇಗೆ ಕಟ್ಟಬೇಕೆಂದು ಮನನೊಂದು ದಿನಾಂಕ 19-06-2021 ರಂದು ತಮ್ಮ ಹೊಲದಲ್ಲಿರುವ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ದೂರು ಅಥವಾ ಸಂಶಯ ವಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 118/2021, ಕಲಂ. 379 ಐಪಿಸಿ :-

ಫಿರ್ಯಾದಿ ಇಬ್ರಾಹಿಂ ತಂದೆ ಜಬ್ಬಾರಸಾಬ ಔರಾದ ವಯ:28 ವರ್ಷ, ಜಾತಿ: ಮುಸ್ಲಿಂ, ಸಾ: ಉಡಬಾಳ ವಾಡಿ ರವರ ತಮ್ಮ ಮನೆಯ ಮುಂದೆ ನಿಲ್ಲಿಸಿದ ಬಜಾಜ್ ಪಲ್ಸರ್ ಮೋಟಾರ ಸೈಕಲ್ ನಂ. ಕೆಎ-39/ಆರ್-6414, ಅ.ಕಿ 45,000/- ರೂ. ನೇದನ್ನು ದಿನಾಂಕ 18-06-2021 ರಂದು 0015 ಗಂಟೆಯಿಂದ 0100 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 19-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 58/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 19-06-2021 ರಂದು ನಿಟ್ಟೂರ ಗ್ರಾಮದ ಹನುಮಾನ ಮಂದಿರದ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ 01/- ರೂಪಾಯಿಗೆ 80 ರೂಪಾಯಿ ಕೊಡುತ್ತೆನೆಂದು ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ಮಟಕಾ ಜೂಜಾಟ ನಡೆಸುತ್ತಿದ್ದಾನೆಂದು ಸಿಪಿಐ ಭಾಲ್ಕಿ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ವರು ಚಿದಾನಂದ ಸೌಧಿ ಪಿಎಸ್ಐ [ಕಾಸೂ] ಧನ್ನೂರ ಪೊಲೀಸ ಠಾಣೆ, ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಶಿವಾಜಿ ಚೌಕದಿಂದ ನಡೆದುಕೊಂಡು ಹನುಮಾನ ಮಂದಿರದ ಹತ್ತಿರ ಇರುವ ಅಗಸಿಯಿಂದ ಸ್ವಲ್ಪ ಅಂತದಲ್ಲಿ ಹೋಗಿ ಮರೆಯಾಗಿ ನಿಂತು ನೋಡಲು ನಿಟ್ಟೂರ ಗ್ರಾಮದ ಅಗಸಿ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿ ಗೋವಿಂದ ತಂದೆ ಬಾಬುರಾವ ವಾಗ್ಧರೆ ವಯ: 25 ವರ್ಷ, ಜಾತಿ: ಮರಾಠಾ, ಸಾ: ನಿಟ್ಟೂರ ಇತನು ಮಟಕಾ ಜೂಜಾಟ ನಡೆಸುತ್ತಾ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದುಕೊಂಡಾಗ ಅಲ್ಲಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿತನ ಅಂಗ ಜಡ್ತಿ ಮಾಡಲು ಆತನ ಹತ್ತಿರದಿಂದ ನಗದು ಹಣ 4,200/- ರೂಪಾಯಿ, ಒಂದು ಬಾಲ ಪೆನ್ನ, ಮಟಕಾ ನಂಬರ ಬರೆದ 05 ಚಿಟಿಗಳು ಸಿಕ್ಕಿದ್ದು, ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.