ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 07-08-2020
ಮಾರ್ಕೇಟ ಪೊಲೀಸ ಠಾಣೆ ಅಪರಾಧ ಸಂಖ್ಯೆ 46/2020 ಕಲಂ 379 ಐಪಿಸಿ :-
ದಿನಾಂಕ 24-06-2020 ರಂದು 1215-1230 ಗಂಟೆಯ ಅವಧಿಯಲ್ಲಿ ಕೆ.ಎ-38 ಯು-6850 ಅಕಿ:30000/-ರೂಗಳ ಬೆಲೆಬಾಳುವ
ಮೋ.ಸೈಕಲನ್ನು ಎಬಿಸಿ ಹೊಟೆಲ ಎದುರುಗಡೆ
ನಿಲ್ಲಿಸಿ ಮೊಬೈಲ ರಿಪೇರಿ ಮಾಡುವ ಕುರಿತು ಹೊಗಿದ್ದು ನಂತರ ಮರಳಿ ಬಂದು ನೋಡುವಷ್ಟರಲ್ಲಿ ದ್ವೀಚಕ್ರ ವಾಹನ ಇರಲಿಲ್ಲಾ ಎಲ್ಲಾ ಕಡೆ ಹುಡುಕಾಡಿದರೂ ಸಹ ನನ್ನ ವಾಹನ
ಸಿಕ್ಕಿರುವದಿಲ್ಲಾ ಯಾರೋ ಅಪರಿಚಿತ ಕಳ್ಳರು ನನ್ನ ವಾಹನ ಕಳುವು ಮಾಡಿಕೊಂಡು ಹೋಗಿರುತ್ತಾರೆಂದು
ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮಂಠಾಳ ಪೊಲೀಸ್
ಠಾಣೆ ಅಪರಾಧ ಸಂಖ್ಯೆ 68/2020 ಕಲಂ: 78(3) ಕೆ.ಪಿ. ಆಕ್ಟ್ ;-
ದಿನಾಂಕ 06/08/2020 ರಂದು 13-00 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಕಾಂಬಳೆವಾಡಿ
ಗ್ರಾಮದ ಹನುಮಾನ ಮಂದಿರದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ
ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಎಂದು ಬಾತ್ಮಿ ಬಂದ ಮೇರೆಗೆ, ಕಾಂಬಳೆವಾಡಿ
ಗ್ರಾಮಕ್ಕೆ ತಲುಪಿ ಹೋಗಿ ನೋಡಿದಾಗ ಹನುಮಾನ ಮಂದಿರದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಎಂಬ ಜೂಜಾಟದ
ನಂಬರ ಬರೆಯಿಸಿ 1 ರೂಪಾಯಿ 80 ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ
ಹಣ ಪಡೆದು ನಂಬರ ಬರೆದುಕೊಳ್ಳುತ್ತಿದ್ದಾಗ ನಾನು ನಮ್ಮ ಪೊಲೀಸ್ ಸಿಬ್ಬಂದಿ ಕೂಡಿ ಇಂದು 14:10 ಗಂಟೆಗೆ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದು ಅವನ
ಹೆಸರು ಮತ್ತು ವಿಳಾಸ ವಿಚಾರಿಸಲು ತನ್ನ ಹೆಸರು ಗೋಪಾಳ ತಂದೆ ಪಾಂಡುರಂಗ ಪಾಶಮೆ ವಯಸ್ಸು: 30 ವರ್ಷ ಸಾ: ಕಾಂಬಳೆವಾಡಿ ಇವನ ಹತ್ತಿರವಿದ್ದ 1) ನಗದು ಹಣ 1230/-ರೂಪಾಯಿ, 2) ಎರಡು ಮಟಕಾ ಚೀಟಿಗಳು ಮತ್ತು ಒಂದು ಬಾಲ್ ಪೆನ್ನ ಜಪ್ತಿ
ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್. ಸಂಖ್ಯೆ 12/2020 ಕಲಂ 174 ಸಿಆರ್.ಪಿ.ಸಿ:-
ದಿನಾಂಕ:
06-08-2020 ರಂದು 0800 ಗಂಟೆಗೆ
ಫಿರ್ಯಾದಿ ಶ್ರೀ ಸಂತೋಷ ತಂದೆ ಗೌಡಪ್ಪಾ ನಿಲಾ ವಯ 35 ವರ್ಷ
ಜಾತಿ ಲಿಂಗಾಯತ ಸಾ// ಹಾಲಹಳ್ಳಿ
(ಕೆ) ರವರು
ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಇವರ ತಂದೆಯಾದ
ಗೌಡಪ್ಪಾ ತಂದೆ ಸಿದ್ರಾಮಪ್ಪಾ ನಿಲಾ ವಯ: 68 ವರ್ಷ
ಇವರು ನಿವೃತ ಸಂಗೀತ ಶಿಕ್ಷಕರು ಇದ್ದು ಇಗ 8 ವರ್ಷಗಳ
ಹಿಂದೆ ನಿವೃತ್ತಿಯಾದ ಮೇಲೆ ಒಕ್ಕಲುತನ ಕೆಲಸವನ್ನು ಮಾಡಿಕೊಂಡಿರುತ್ತಾರೆ ಇವರು ಕುರುಡರಿದ್ದು
ತಾನು ಅವರ ಜೊತೆ ಒಕ್ಕಲುತನ ಕೆಲಸವನ್ನು ಮಾಡಿಕೊಂಡಿದ್ದು
ಇವರಿಗೆ ಹಾಲಹಳ್ಳಿ ಶಿವಾರದಲ್ಲಿ ಸರ್ವೆ ನಂ.
120 ರಲ್ಲಿ 7
ಎಕರೆ
31 ಗುಂಟೆ ಜಮೀನು ಇರುತ್ತದೆ. ಇದರ
ಮೇಲೆ ಅವಲಿಂಬಿಸಿಕೊಂಡು ಉಪಜೀವನ ನಡೆಸುತ್ತಿದ್ದು
ಈಗ 4-5 ವರ್ಷದಿಂದ
ಜಮೀನು ಸರಿಯಾಗಿ ಬೆಳೆಯದೆ ಇರುವುದರಿಂದ ಬ್ಯಾಲಹಳ್ಳಿ ಪಿ.ಕೆ,ಪಿ.ಎಸ
ನಲ್ಲಿ 60,000/- ರೂಪಾಯಿ
ಕೃಷಿ ಸಾಲ ಮತ್ತು ಪಿ.ಕೆ.ಜಿ.ಬಿ
ಬ್ಯಾಲಹಳ್ಳಿ ನಲ್ಲಿ 2,50,000/- ರೂಪಾಯಿ
ಸಾಲ ಪಡೆದುಕೊಂಡಿರುತ್ತಾರೆ. ಮತ್ತು
5 ಲಕ್ಷ ರೂಪಾಯಿ ಖಾಸಗಿ ಸಾಲ ಇದ್ದು ಈ ಹಿಂದೆ ಸಾಲವಾಗಿದ್ದರಿಂದ
1 ಎಕ್ಕರೆ 5 ಗುಂಟೆ
ಜಮೀನು ಮಾರಾಟ ಮಾಡಿದ್ದು ಇರುತ್ತದೆ. ಇವರ ತಂದೆಯವರು
ತಮಗೆ ಆದ ಸಾಲದ ಬಗ್ಗೆ ಸದಾ ಚಿಂತೆ ಮಾಡುತ್ತಿದ್ದರು ಸಾಲವನ್ನು ಹೇಗೆ ತಿರಿಸುವುದಂತಾ ಮನಸ್ಸಿನ ಮೇಲೆ ಪರಿಣಾಮ
ಮಾಡಿಕೊಂಡು ನೀರು ಇಲ್ಲದ ಹಾಳು ಬಾವಿಯಲ್ಲಿ ಬಿದ್ದು ಆತ್ಮ ಹತ್ಯ
ಮಾಡಿಕೊಂಡಿರುತ್ತಾರೆ. ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.