Police Bhavan Kalaburagi

Police Bhavan Kalaburagi

Thursday, November 7, 2019

BIDAR DISTRICT DAILY CRIME UPDATE 07-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-11-2019

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 19/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ರೇವಮ್ಮಾ ಗಂಡ ಜ್ಞಾನೇಶ್ವರ ಮೇತ್ರೆ ಸಾ: ಭಾಟಸಾಂಗವಿ ರವರ ಗಂಡನಾದ ಜ್ಞಾನೇಶ್ವರ ತಂದೆ ನಾಮದೇವ ಇವರು ಮೂಕನಾಗಿದ್ದು ಮಾತನಾಡಲು ಬರುವದಿಲ್ಲಾ, ಹೀಗಿರುವಾಗ ದಿನಾಂಕ 06-11-2019 ರಂದು 1000 ಗಂಟೆಗೆ ಹೋಲಕ್ಕೆ ಕೆಲಸಕ್ಕಾಗಿ ಹೋಗಿರುತ್ತಾರೆ, 1700 ಗಂಟೆಗೆ ಹೊಲದಿಂದ ಮನೆಗೆ ಬಂದು ನನಗೆ ಹೊಲದಲ್ಲಿ ಹಾವು ಕಚ್ಚಿದ ವಿಷಯ ಕೈ ಸನ್ನೆಯ ಮೂಲಕ ತಿಳಿಸಿರುತ್ತಾರೆ, ಕೂಡಲೆ ಅವರಿಗೆ ಭಾಲ್ಕಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಭಾಟಸಾಂಗವಿ ಮತ್ತು ಥಮಗ್ಯಾಳ ಗ್ರಾಮದ ಮದ್ಯ ಮ್ರತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 154/2019, ಕಲಂ. ಹುಡುಗಿ ಕಾಣೆ :-
ಫಿರ್ಯಾದಿ ರಾಜಶೇಖರ ತಂದೆ ಹಣಮಂತಪ್ಪ ರೊಡ್ಡ ವಯ: 55 ವರ್ಷ, ಜಾತಿ: ಲಿಂಗಾಯತ, ಸಾ: ವಾಲದೊಡ್ಡಿ ಗ್ರಾಮ, ಸದ್ಯ: ಜೆಪಿ ನಗರ ಬೀದರ ರವರು ಸಾಯಿಬಣ್ಣ ಅಂಬಾಟೆ ರವರ ಮನೆಯಲ್ಲಿ ಸುವರು 4 ವರ್ಷಗಳಿಂದ ವಾಸವಾಗಿದ್ದು, ಫಿರ್ಯಾದಿಯವರ ಮಗಳಾದ ಸ್ನೇಹಾ ವಯ: 19 ವರ್ಷ ಇವಳು ಬೀದರನ ಕರ್ನಾಟಕ ಕಾಲೇಜಿನಲ್ಲಿ ಬಿಎಸ್.ಸಿ ತೃತೀಯ ವರ್ಷದಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು, ಹೀಗಿರುವಾಗ ಎಂದಿನಂತೆ ದಿನಾಂಕ 05-11-2019 ರಂದು ಸ್ನೇಹಾ ಇವಳು ಮನೆಯಿಂದ 1300 ಗಂಟೆಯ ಸುಮಾರಿಗೆ ಕರ್ನಾಟಕ ಕಾಲೇಜಿಗೆ ಹೋಗಿ ಬರುತ್ತೆನೆಂದು ಹೇಳಿ ತನ್ನ ಮೊಬೈಲ ನಂ. 7019988708 ಇದರೊಂದಿಗೆ ಬ್ಯಾಗ ತೆಗೆದುಕೊಂಡು ಹೋದವಳು 1730 ಗಂಟೆಯಾದರು ಮನೆಗೆ ಬರಲಾರದ ಕಾರಣ ಮಗನಾದ ಕಿರಣಕುಮಾರ ಹಾಗೂ ಫಿರ್ಯಾದಿಯು ಸತತವಾಗಿ ಸ್ನೇಹಾ ಇಕೆಗೆ ಕರೆ ಮಾಡಿದ್ದು ಅದು ಸ್ವಿಚ್ಡ್ಆಫ್ ಅಂತ ಹೇಳಿದ್ದು, ನಂತರ ಫಿರ್ಯಾದಿಯು ತಮ್ಮ ಸಂಬಂಧಿಕರ ಹತ್ತಿರ ಕರೆ ಮೂಲಕ ಹಾಗೂ ಇತರೆ ಕಡೆ ಕೇಳಲಾಗಿ ಮಗಳು ಇರುವಿಕೆ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ, ಫಿರ್ಯಾದಿಯವರ ಮಗಳಾದ ಸ್ನೇಹಾ ವಯ 19 ವರ್ಷ ಇವಳು ದಿನಾಂಕ 05-11-2019 ರಂದು 1300 ಗಂಟೆಗೆ ಬೀದರ ನಗರದ ಜೆಪಿ ನಗರದಿಂದ ಕಾಣೆಯಾಗಿರುತ್ತಾಳೆ, ಅವರ ವಿವರ 1) ಹೆಸರು: ಸ್ನೇಹಾ, 2) ತಂದೆ ಹೆಸರು: ರಾಜಶೇಖರ ರೊಡ್ಡ, 3) ವಯ: 19 ವರ್ಷ, 4) ಎತ್ತರ: 5 ಫೀಟ 2 ಇಂಚ್, 5) ಚಹರೆ ಪಟ್ಟಿ: ಸಾಧಾರಣ ಮೈಟ್ಟು, ಗೋಧಿ ಮೈಬಣ್ಣ, ಇರುತ್ತದೆ, 6) ಧರಿಸಿದ ಬಟ್ಟೆಗಳು: ಒಂದು ಕಪ್ಪು  ಬಣ್ಣದ ಟಾಪ್ ಮತ್ತು ಲೆಗಿನ್ಸ್ಧರಿಸಿರುತ್ತಾಳೆ ಹಾಗೂ 7) ಮಾತನಾಡುವ ಭಾಷೆ: ಕನ್ನಡ, ಹಿಂದಿ ಮತ್ತು ಮರಾಠಿ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 06-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 119/2019, ಕಲಂ. 380, 457 ಐಪಿಸಿ :-
ದಿನಾಂಕ 05-11-2019 ರಿಂದ 06-11-2019 ರಂದು 01:30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ದಯಾನಂದ ತಂದೆ ಮೋಹನರಾವ ತುಕದೆ ಸಾ: ಡಾವರಗಾಂವ ವಯ: 46 ವರ್ಷ, ಜಾತಿ: ಮರಾಠಾ, ಸಾ: ಡಾವರಗಾಂವ ರವರ ಮನೆಯಲ್ಲಿ ಕಬ್ಬಿಣ ಸಂದೂಕನಲ್ಲಿ ನಗದು ಹಣ 5000/- ರೂ ಹಾಗೂ 05 ಗ್ರಾಮ ಬಂಗಾರದ ಸುತ್ತುಂಗುರ ಹಾಗೂ ಅಲಮಾರಿಯಲ್ಲಿದ್ದ 7000/- ರೂ. ಎರಡು ತೊಲೆಯ ಬಂಗಾರದ ಒಂದು ಲಾಕೇಟ್, 5 ಗ್ರಾಂ 2 ಬಂಗಾರದ ಉಂಗುರುಗಳು ಒಟ್ಟು 35 ಗ್ರಾಂ ಬಂಗಾರದ ಒಡವೆಗಳ ಅ.ಕಿ 1,05,000/- ಮತ್ತು 15 ತೊಲೆಯ ಬೆಳ್ಳಿಯ ಲಕ್ಷ್ಮೀ ಮೂರ್ತಿ ಮುದ್ರಿತ ನಾಣ್ಯ ಅ.ಕಿ 6000/- ರೂ. ನೇದವುಗಳನ್ನು ಕಳುವ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 155/2019, ಕಲಂ. 379 ಐಪಿಸಿ :-
ದಿನಾಂಕ 30-05-2019  ರಂದು 1200 ಗಂಟೆಗೆ ಫಿರ್ಯಾದಿ ಎಮ್.ಡಿ. ಶಬ್ಬೀರ ಮಿಯಾ ತಂದೆ ಮಹ್ಮದ ರಫೀಕ ವಯ: 36 ವರ್ಷ, ಜಾತಿ: ಮುಸ್ಲಿಂ, ಸಾ: ಗಾದಗಿ, ತಾ: ಬೀದರ ರವರು ಬೀದರ ಬಸ್ ಡಿಪೊ ಹತ್ತಿರ ಇರುವ ಹಳೆಯ ಡೆಂಟಲ ಕಾಲೆಜಿನ ಕಟ್ಟಡದಲ್ಲಿ ಕೆಲಸಕ್ಕಾಗಿ ಬಂದು ತನ್ನ ಹೊಂಡಾ ಶೈನ ಮೋಟರ ಸೈಕಲ ನಂ. ಕೆಎ-38/ಆರ್-5087 ನೇದರ ಮೇಲೆ ಬಂದು ತನ್ನ ಕೆಲಸ ಮುಗಿಸಿಕೊಂಡು ಹೊರಗೆ ಬಂದು ನೋಡಲು ಸದರಿ ಮೊಟರ ಸೈಕಲ ಇರಲಿಲ್ಲ, ಗಾಬರಿಗೊಂಡು ಅತ್ತ ಇತ್ತ ಹುಡುಕಾಡಿ, ತನ್ನ ಗೆಳೆಯರ ಜೊತೆಯಲ್ಲಿ ಬೀದರ ನಗರದ ಎಲ್ಲಾ ಕಡೆಗೆ ಹಡುಕಾಡಿದರೂ ಸಹ ಸಿಗಲಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಹೊಂಡಾ ಶೈನ ಮೋಟರ ಸೈಕಲ ನಂ. ಕೆಎ-38/ಆರ್-5087, 2) ಚೆಸ್ಸಿ ನಂ. ಎಮ್..4.ಜೆ.ಸಿ.36.ಎನ್.ಎಮ್..7201017, 3) ಇಂಜಿನ್ ನಂ. ಜೆ.ಸಿ.36..73852581, 4) ಮಾಡಲ್: 2015, 5) ಬಣ್ಣ: ಗ್ರೇ, 6) .ಕಿ 30,000/- ರೂ. ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.