ಕಮಲಾಪೂರ ಠಾಣೆ: ಶ್ರೀ ಸಿದ್ದಣ್ಣ ತಂದೆ ಈರಣ್ಣ ಮಾಗಾ ಸಾ:ಅಂತಪ್ಪನಾಳ ತಾ:ಜಿ: ಗುಲಬರ್ಗಾ ರವರು ನಾನು, ನನ್ನ ಗೆಳೆಯರಾದ ಚಾಂದ ತಂದೆ ಖಾಸೀಮ ಪಟೇಲ ಸಾ:ಅಂತಪ್ಪನಾಳ ಮತ್ತು ಬಸವರಾಜ ತಂದೆ ರಾಜಶೇಖರ ಗಡ್ಡೆನ್ನವರ ಸಾ:ಅಂತಪ್ಪನಾಳ ಒಟ್ಟು 3 ಜನ ಕೂಡಿಕೊಂಡು ಮೊಟಾರ ಸೈಕಲ್ ನಂಬರ ಕೆ.ಎ-32-ಡಬ್ಲೂ-2047 ನೇದ್ದರಲ್ಲಿ ಅಂತಪ್ಪನಾಳದಿಂದ ಕಮಲಾಪೂರಕ್ಕೆ ದಿನಾಂಕ: 11/02/2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಖಾಸಗಿ ಕೆಲಸದ ನಿಮಿತ್ತ ಬರುತ್ತಿದ್ದೆವು ಚಾಂದ ಮೊಟಾರ ಸೈಕಲ್ ಚಲಾಯಿಸುತ್ತಿದ್ದು, ಕಮಲಾಪೂರ ಇನ್ನು 1 ಕಿ.ಮೀ ಅಂತರದಲ್ಲಿದ್ದಾಗ ಚಾಂದ ಪಟೇಲ ಇತನು ನಾನು ಎಷ್ಟು ಹೇಳಿದರೂ ಕೇಳದೇ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಇನ್ನೊಂದು ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿರುತ್ತಾರೆ. ಅಪಘಾತದಲ್ಲಿ ನಮಗೆ ಗಾಯಗಳಾಗಿದ್ದು, ಡಿಕ್ಕಿ ಪಡಿಸಿಕೊಂಡ ಮತ್ತೊಂದು ಮೋಟಾರ ಸೈಕಲ್ ನಂಬರ ಕೆ.ಎ-32-ಎಸ್-0304 ನೇದ್ದರ ಚಾಲಕ ಗುರುನಾಥ, ತುಕಾರಾಮ ರಾಥೋಡ ಮತ್ತು ಮಿಥುನ ರಾಥೋಡ ಮೂವರು ಕವನಳ್ಳಿ ತಾಂಡಾದವರಿದ್ದು ಗುರುನಾಥನಿಗೆ ರಕ್ತಗಾಯವಾಗಿರುತ್ತವೆ ಅಪಘಾತದಲ್ಲಿ ಎರಡೂ ಮೊಟಾರ ಸೈಕಲಗಳು ಜಖಂಗೊಂಡಿರುತ್ತವೆ. ಎರಡು ಮೋಟರ್ ಸೈಕಲ್ ಚಾಲಕರ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 12/2012 ಕಲಂ 279.337 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದನದ ಕೊಬ್ಬು ಸಂಗ್ರಹಣೆ :
ರಾಘವೇಂದ್ರ ನಗರ ಠಾಣೆ:ಶ್ರೀ ಗಂಗಾಧರ ತಂದೆ ಶಿವಪ್ಪ ನೈರ್ಮಲ್ಯ ನಿರೀಕ್ಷಕರು ಮಹಾನಗರ ಪಾಲಿಕೆ ಗುಲಬರ್ಗಾರವರು ನಾನು ಮತ್ತು ಆರ.ಜಿ.ನಗರ ಠಾಣಾ ಸಿಬ್ಬಂದಿಯವರಾದ ಪಾಂಡುರಂಗ, ಪಂಡಿತ ರವರೊಂದಿಗೆ ಸಾರ್ವಜನಿಕರ ಮಾಹಿತಿ ಹಾಗು ಆಯುಕ್ತರ ದೂರವಾಣಿ ಸೂಚನೆ ಮೇರೆಗೆ ದಿನಾಂಕ 12-02-2012 ರಂದು ಬೆಳಿಗ್ಗೆ 11- ಗಂಟೆಗೆ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಿಲಾನಾಬಾದ ಹತ್ತಿರ ಮೌಲಾಲಿ ಕಟ್ಟಾದಲ್ಲಿರುವ ಮನೆಯೊಂದಕ್ಕೆ ಹೋಗಿ ಪರಿಶೀಲಿಸಿ ವಿಚಾರಣೆ ಮಾಡಲಾಗಿ, ಮನೆಯಲ್ಲಿದ್ದ ಚಾಂದಸಾಬ ತಂದೆ ಅಲ್ಲಾಬಕ್ಷ ಖುರೇಷಿ ಇವರ ಹೇಳಿಕೆ ಪ್ರಕಾರ ಸದರಿಯವನು ಮದಿನಾ ಕಾಲೋನಿ, ಜಿಲಾನಾಬಾದ ಹಲವು ಮನೆಗಳಿಂದ ದನಗಳ ಚರ್ಬಿಯನ್ನು ಸಂಗ್ರಹಿಸಿ ಸುಮಾರು 33 ಡಬ್ಬಿಗಳಷ್ಟು ಪ್ರತಿಯೊಂದು 15 ಕೆ.ಜಿ ಯಷ್ಟು ತೂಕವುಳ್ಳವುಗಳು ಕೊಬ್ಬನ್ನು ಸಂಗ್ರಹಿಸಿಟ್ಟಿದ್ದು ಇರುತ್ತದೆ. ಇದರಿಂದ ಬಡಾವಣೆಯಲ್ಲಿರುವ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದ್ದು, ಪರಿಸರ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ಕಾರಣ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೊಬ್ಬು ತುಂಬಿದ ಸಂಗ್ರಹಿಸಿಟ್ಟ 33 ಟೀನ ಡಬ್ಬಿಗಳು ಹಾಗು ಚಾಂದಸಾಬ ತಂದೆ ಅಲ್ಲಾಬಕ್ಷ ಖುರೇಷಿ ಸಾ ಮೌಲಾಲಿ ಕಟ್ಟಾ ಜಿಲಾನಾಬಾದ ಇತನೊಂದಿಗೆ ಠಾಣೆಗೆ ತಂದು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 10/12, U/S S 269, 278, 290 IPC 1860, & KARNATAKA CORPORATION ACT U/s-387 & ENVIRONMENT (PROTECTION) ACT, 1986 U/s-7, 8, 15 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಇಟ್ಟಂಗಿ ಭಟ್ಟಿ ಮಾಲಿಕನಿಂದ ಅಪಹರಣ, ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ: ಶ್ರೀ ಪರಶುರಾಮ ತಂದೆ ಹಣಮಂತ ತಳಕೇರಿ ವ ಸಾ: ಸಂಗೋಳಗಿ (ಜಿ) ನಾನು ಕಳೆದ ಎರಡು ವರ್ಷದ ಹಿಂದೆ ಪೂಣಾ ಪಟ್ಟಣದ ಮಾರೋಂಜಿ ಎಂಬ ಏರಿಯಾದಲ್ಲಿ ಸುಬಾಷ ಬುಚಡೆ ಎಂಬುವರ ಹತ್ತಿರ ಇಟ್ಟಂಗಿ ಭಟ್ಟಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ 2011ನೇ ಸಾಲೀನ ಜೂನ್ ತಿಂಗಳಲ್ಲಿ ಇಟ್ಟಂಗಿ ಭಟ್ಟಿ ಮಾಲಿಕರಾದ ಸುಬಾಷ ಬುಚಡೆ ಇವರು ನಿಮ್ಮೂರ ಕಡೆಯಿಂದ 10 ಜನ ಕೂಲಿ ಆಳುಗಳಿಗೆ ಕರೆದುಕೊಂಡು ಬರಬೇಕು ಅವರಿಗೆ ನಾನು ಅಡ್ವಾನ್ಸ್ ಹಣ ಕೊಡುತ್ತೇನೆ ಎಂದು ಹೇಳಿದ್ದರಿಂದ ನಾನು ಊರಿಗೆ ಬಂದು ತಿಪ್ಪಣ ರಾಠೋಡ, ಅಣ್ಣಪ್ಪ ಹೊನ್ನಳ್ಳಿ ಹಾಘು ಇತರೆ 8 ಜನರಿಗೆ ಕರೆದುಕೊಂಡು ಹೋಗಿ ನಮ್ಮ ಇಟ್ಟಂಗಿ ಭಟ್ಟಿ ಮಾಲಿಕರ ಮುಂದೆ ಭೇಟಿ ಮಾಡಿಸಿರುತ್ತೇನೆ ಅವರು ಕೆಲಸಕ್ಕಾಗಿ ಬಂದಿದ್ದ ನಮ್ಮೂರಿನ ಜನರಿಂದ ಕರಾರು ಬರೆದುಕೊಂಡು ಪ್ರತಿಯೊಬ್ಬರಿಗೆ ಮುಂಗಡವಾಗಿ ಹಣ ಕೊಟ್ಟಿರುತ್ತಾರೆ.ಜೂನ್ ತಿಂಗಳು ಮಳೆ ಪ್ರಾರಂಭವಾಗಿದ್ದರಿಂದ ಇಟ್ಟಂಗಿ ಕೆಲಸ ಬಂದಾಗಿದ್ದು ಕೆಲಸ ಮಾಡಲು ಬಂದ ಎಲ್ಲಾ ಜನರು ಮರಳಿ ಊರಿಗೆ ಬಂದು ಬೇರೆ ಕೆಲಸಗಳಲ್ಲಿ ತೊಡಗಿರುತ್ತಾರೆ. ದೀಪಾವಳಿ ಹಬ್ಬ ಆದ ನಂತರ ಸುಬಾಷ ಬುಚಡೆ ಇವರು ಮಹಾರಾಷ್ಟ್ರದ ಪೂನದಿಂದ ಫೋನ ಮಾಡಿ ಇಟ್ಟಂಗಿ ಕೆಲಸ ಮಾಡುವ ಜನರು ಕೆಲಸಕ್ಕೆ ಬಂದಿಲ್ಲ ಹಣ ತೆಗೆದುಕೊಂಡು ಅಲ್ಲಿಯೇ ಇದ್ದಾರೆ ಅವರು ಯಾವಗಾ ಬರುತ್ತಾರೆ ಅಂತಾ ನನಗೆ ಕೇಳಿದರು ನಾನು ಬೇರೆ, ಬೇರೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ ಅಂತಾ ಹೇಳಿದೆ. ದಿನಾಂಕ: 21/12/2011 ರಂದು ಮದ್ಯಾಹ್ನದ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಇಟ್ಟಂಗಿ ಭಟ್ಟಿಯ ಮಾಲೀಕನಾದ ಸುಬಾಷ ಬುಚುಡೆ ಮತ್ತು ಬಸ್ಸು ಸೀನೂರ ಸಾ: ದೂದುನಿ ಸಂಗಡ 6 ಜನರು ಕೂಡಿಕೊಂಡು ಸ್ಕಾರಪಿಯೋ ನಂಬರ ಎಮ್‌ಹೆಚ್ 14 – 7878 ನೇದ್ದರಲ್ಲಿ ನನಗೆ, ನನ್ನ ಹೆಂಡತಿ ವಿಠಬಾಯಿ ಮತ್ತು 5 ತಿಂಗಳ ಮಗುವಿಗೆ ಎಲ್ಲರೂ ಕೂಡಿ ನನಗೆ ನನ್ನ ಕಣ್ಣನಿಗೆ ಬಟ್ಟೆ ಕಟ್ಟಿ ಜಬರ ದಸ್ತಯಿಂದ ಸ್ಕಾರಪಿಯೋದಲ್ಲಿ ಕೂಡಿಸಿಕೊಂಡು ಆಪಹರಣ ಮಾಡಿಕೊಂಡು ಹೋಗಿ ಸುಬಾಷ ಬುಚಡೆ ಇತನು ಮರಾಠಿ ಬಾಷೆಯಲ್ಲಿ ಅವಾಚ್ಯವಾಗಿ ಬೈಯುತ್ತಿದ್ದು ಮುಂಡದವಾಗಿ ನೀಡಿದ ಹಣ ಕೊಡು ಎಂದು ಕೈಯಿಂದ ಕಪಾಳಕ್ಕೆ ಹೋಡೆದು ಬೂಟಗಾಲಿನಿಂದ ಒದ್ದಿರುತ್ತಾನೆ.” ಮತ್ತು ಬಸ್ಸು ಇತನು ನನ್ನ ಬೆನ್ನಿನಲ್ಲಿ ಕೈಯಿಂದ ಗುದ್ದಿರುತ್ತಾನೆ. ನಂತರ ನನಗೆ ಅಲ್ಲಿ ಬಿಡದೇ ಪೂಣಾಕ್ಕೆ ಕರೆದುಕೊಂಡು ಹೋಗಿ ಪೂನಾ ಪಟ್ಟಣದ ಮಾರುಂಜಿ ಏರಿಯಾದ ಒಂದು ರೋಮಿನಲ್ಲಿ ನನಗೂ ಮತ್ತು ನನ್ನ ಹೆಂಡತಿಗೆ ಒಂದೇ ಹೊತ್ತು ಊಟ ಕೊಟ್ಟು ಕೂಡಿ ಹಾಕಿ ಕಿರುಕುಳ ನೀಡಿರುತ್ತಾರೆ. ನಾನು ದಿನಾಂಕ 05/02/2012 ರಂದು ಇಟ್ಟಂಗಿ ಭಟ್ಟಿಯ ಮಾಲೀಕರಿಂದ ತಪ್ಪಿಸಿಕೊಂಡು ಬಂದಿರುತ್ತೇನೆ. ನನ್ನ ಹೆಂಡತಿ ಮತ್ತು ಮಗ ಪೂನಾದಲ್ಲಿಯೇ ಇರುತ್ತಾರೆ. ಮುಂಗಡವಾಗಿ ಹಣ ತೆಗೆದುಕೊಂಡವರಿಗೆ ಬಿಟ್ಟು ನನಗೆ ಮತ್ತು ನನ್ನ ಹೆಂಡತಿ ಮತ್ತು 5 ತಿಂಗಳ ಮಗುವಿಗೆ ಅಪಹರಣ ಮಾಡಿಕೊಂಡು ಹೋಗಿ ಹೊಡೆ ಬಡೆ ಮಾಡಿ ಮಾಡಿದ ಸುಬಾಷ ಬುಚಡೆ ಮತ್ತು ಬಸ್ಸು ಸೀನೂರ ಸಾ: ದುದುನಿ ಸಂಗಡ 6 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 35/2012 ಕಲಂ 143.147.149.323.355.365.504.342.ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.