Police Bhavan Kalaburagi

Police Bhavan Kalaburagi

Thursday, May 20, 2021

BIDAR DISTRICT DAILY CRIME UPDATE 20-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-05-2021

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 17/2021, ಕಲಂ. 498(), 323, 504, 506 ಐಪಿಸಿ :-

ಫಿರ್ಯಾದಿ ಮಾರ್ಟಿನಾ ಗಂಡ ದೀಪಕ ಘಾಗರೆ ವಯ: 30 ವರ್ಷ, ಜಾತಿ: ಕ್ರಿಶ್ಚನ್, ಸಾ: ನ್ಯೂ ಕ್ರಿಶ್ಚನ್ ಕಾಲೋನಿ ಕಮಲನಗರ, ಜಿ: ಬೀದರ, ಸದ್ಯ: ಎಡನ ಕಾಲೋನಿ ಬೀದರ ರವರ ಮದುವೆಯು ಸುಮಾರು 11 ವರ್ಷಗಳ ಹಿಂದೆ ದೀಪಕ ತಂದೆ ಸುಶೀಲಕುಮಾರ ಸಾ: ನ್ಯೂ ಕ್ರಿಶ್ಚನ್ ಕಾಲೋನಿ ಕಮಲನಗರ ಇತನ ಜೊತೆಯಲ್ಲಿ ಆಗಿರುತ್ತದೆ, ಫಿರ್ಯಾದಿಗೆ ಎರಡು ಜನ ಮಕ್ಕಳಿರುತ್ತಾರೆ,  ಮದುವೆಯಾದ ನಂತರ ಗಂಡ ಫಿರ್ಯಾದಿಯ ಜೊತೆಯಲ್ಲಿ ಸ್ವಲ್ಪ ದಿವಸಗಳು ಮಾತ್ರ ಚೆನ್ನಾಗಿದ್ದು, ನಂತರ ಫಿರ್ಯಾದಿಯ ಮೇಲೆ ಸಂಶಯ ಪಡುತ್ತಾ ಬಂದು ನೀನು ಕೆಲಸಕ್ಕೆ ಹೋದಾಗ ಬೇರೆಯವನ ಜೊತೆಯಲ್ಲಿ ಇರುತ್ತಿ ಅಂತ ಮನಸ್ಸಿಗೆ ನೋವಾಗುವ ಹಾಗೆ ಹೊಲಸು ಮಾತನಾಡುತ್ತಾ, ಕೈಯಿಂದ ಹೊಡೆ ಬಡೆ ಮಾಡುತ್ತಾ ದಿನಾಲು ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಅವನು ಕೊಡುವ ಕಿರುಕುಳದಿಂದ ಫಿರ್ಯಾದಿಗೆ ಮಾನಸಿಕ ಒತ್ತಡವಾಗಿ 6 ತಿಂಗಳ ಹಿಂದೆ ಸ್ಪಾಂಡಲಸಿಸ್ ಸರ್ಕುಲರ್ ಸಮಸ್ಯೆ ಆಗಿದ್ದು, ಇದರ ಬಗ್ಗೆ ಫಿರ್ಯಾದಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಇರುತ್ತದೆ ಮತ್ತು ನ್ನ ಮಕ್ಕಳ ಉಪ ಜೀವನಕ್ಕಾಗಿ ಎಡಿಷನಲ್ ಸಿವಿಲ್ ಜಡ್ಜ & ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹಾಕಿದ್ದು ಅದರ ಕ್ರಿಮಿನಲ್ ಮಿಸ್ಲೆನಿಯಸ್ ನಂ. 58/2021 ರುತ್ತದೆ, ಇದರ ವಿಚಾರಣೆ ಮುಗಿದು ಮಾನ್ಯ ನ್ಯಾಯಾಲಯವು ಪ್ರತಿಯೊಬ್ಬರಿಗೆ 2,000/- ರೂಪಾಯಿ ಜೀವನಾಂಶ ಕೊಡಬೇಕೆಂದು ಆದೇಶ ಮಾಡಿರುತ್ತದೆ, ಆದರೆ ಇಲ್ಲಿಯವರೆಗೆ ಗಂಡ ಉಪಜೀವನಕ್ಕಾಗಿ ಹಣ ನೀಡಿರುವದಿಲ್ಲ, ಫಿರ್ಯಾದಿಯು ಗುತ್ತಿಗೆ ಆಧಾರದ ಮೇಲೆ ಸ್ಟಾಪ್ ನರ್ಸ ಅಂತ ಕರ್ತವ್ಯ ನಿರ್ವಹಿಸುತ್ತಿದ್ದು, ಹೀಗಿರುವಾಗ ದಿನಾಂಕ 16-05-2021 ರಂದು ಗಂಡನಾದ ದೀಪಕ ಇತನು ಫಿರ್ಯಾದಿಯು ಕೆಲಸ ಮಾಡುವ ಝಿರಾ ಕನ್ವೆಷನ್ ಹಾಲಗೆ (ಕೋವಿಡ್ ಸೆಂಟರ್) ಬಂದು ಜಗಳ ಮಾಡಿ ಕೈಯಿಂದ ಬೆನ್ನಿನ ಮೇಲೆ, ಹೊಟ್ಟೆಯಲ್ಲಿ ಹೊಡೆದು, ಕಾಲಿನಿಂದ ಒದ್ದು ನೂಕಿಕೊಟ್ಟು, ನಿನಗೆ ಜೀವ ಸಮೇತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 19-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಅಪರಾಧ ಸಂ. 29/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 19-05-2021 ರಂದು ಬೀದರ ನಗರದ ದೀನ ದಯಾಳ ನಗರ ಹತ್ತಿರ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಕು.ಸಂಗೀತಾ ಪಿ.ಎಸ್. (ಕಾ.ಸು) ಮಾರ್ಕೆಟ ಪೊಲೀಸ್ ಠಾಣೆ ಬೀದರ ಜರವರಿಗೆ ಬಂದ ಬಾತ್ಮಿ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ದೀನ ದಯಾಳ ನಗರಕ್ಕೆ ಹೋಗಿ ಮರೆಯಾಗಿ ನಿಂತು ನೋಡಲಾಗಿ, ಲ್ಲಿ ರೋಡಿನ ಬದಿಯಲ್ಲಿ ಆರೋಪಿ ಉತ್ತಮ ತಂದೆ ಶಂಕರರಾವ ಉಪಾಧ್ಯಾಯ ವಯ: 48 ವರ್ಷ, ಜಾತಿ: ಮಾಂಗರವಾಡಿ, ಸಾ: ದೀನ ದಯಾಳ ನಗರ ಬೀದರ ಇತನು ತನ್ನ ಕೈಯಲ್ಲಿ ಒಂದು ಪ್ಲಾಸ್ಟಿಕ ಚೀಹಿಡಿದುಕೊಂಡು ನಿಂತಿದ್ದು ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಜೋತೆ ಆತನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವನಿಗೆ ಪ್ಲಾಸ್ಟಿಕ ಚೀದಲ್ಲಿ ಏನಿದೆ ಎಂದು ವಿಚಾರಿಸಲಾಗಿ ಅವನು ಇದರಲ್ಲಿ ಸರಾಯಿ ಇದೆ ಎಂದು ತಿಳಿಸಿದಾಗ ಅವನಿಗೆ ನಿನ್ನ ಹತ್ತಿರ ಕಾಗದ ಪತ್ರಗಳು ಇವೆ ಎಂದು ವಿಚಾರಿಸಲಾಗಿ ಅವನು ನನ್ನ ಹತ್ತಿರ ಸರಾಯಿಗೆ ಸಂಬಂಧಿಸಿಯಾವುದೇ ಕಾಗದ ಪತ್ರಗಳು ಇರುವುದಿಲ್ಲಾ ಎಂದು ತಿಳಿಸಿದ ಮೇರೆಗೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಪ್ಲಾಸ್ಟಿಕ ಚೀಪರಿಶೀಲಿಸಿ ನೋಡಲಾಗಿ, ಅದರಲ್ಲಿ 1) 10 ಮೇಕ್ ಡಾಲ್ ವಿಸ್ಕಿ 180 ಎಂ.ಎಲ್ ನ ವುಳ್ಳವು ಅ.ಕಿ 1980/- ರೂ., 2) 14 ಆಫಿಸರ್ಸ್ಚಾಯಿಸ್ ವಿಸ್ಕಿ ಟೆಟ್ರಾ ಪ್ಯಾಕ 180 ಎಂ.ಎಲ್ ವುಳ್ಳವು ಅ.ಕಿ 1484/- ರೂ., 3) 22 ಓಲ್ಡ್ಟಾವರ್ನ ಟ್ವರಿನ್ ವಿಸ್ಕಿ ಟೆಟ್ರಾ ಪ್ಯಾಕ 180 ಎಂ.ಎಲ್ ವುಳ್ಳವು ಅ.ಕಿ 1892/-ರೂ., 4) 24 ಬ್ಯಾಗಪೈಪರ್ ವಿಸ್ಕಿ ಟೆಟ್ರಾ ಪ್ಯಾಕ್ 180 ಎಂ.ಎಲ್ ವುಳ್ಳವು ಅ.ಕಿ 2544/- ರೂ., 5) 8 ಐಬಿ ವಿಸ್ಕಿ 180 ಎಂ.ಎಲ್ ವುಳ್ಳವು ಅ.ಕಿ 1584/- ರೂ., ಹೀಗೆ ಒಟ್ಟು 9,484/- ರೂ. ಬೆಲೆಯ ಸರಾಯಿ ಇದ್ದು, ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡ, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 38/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 19-05-2021 ರಂದು ಹುಲಸೂರನ ಭವಾನಿ ಮಂದಿರ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಗೌತಮ ಪಿ.ಎಸ.ಐ ಹುಲಸೂರ ಪೊಲೀಸ ಠಾಣೆ ರವರೊಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹುಲಸೂರನ ಭವಾನಿ ಮಂದಿರ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಜಗನ್ನಾಥ ತಂದೆ ಷಣ್ಮುಕಪ್ಪಾ ಮೇತ್ರೆ, ವಯ: 50 ವರ್ಷ, ಜಾತಿ: ಸಿಂಪಗಾರ, 2) ಗುರುನಾಥ ತಂದೆ ವಿಶ್ವನಾಥಪ್ಪಾ ಪಾತ್ರೋಟ, ವಯ: 40 ವರ್ಷ, ಜಾತಿ: ಒಡ್ಡರ, 3) ಸತೀಶ ತಂದೆ ಲಿಂಬಾಜಿ ಭಗುವಾಲೆ, ವಯ: 40 ವರ್ಷ, ಜಾತಿ: ಮರಾಠಾ, 4) ರಾಜಕುಮಾರ ತಂದೆ ತ್ರಿಮುಕಪ್ಪ ನಿಲಂಗೆ, ವಯ: 50 ವರ್ಷ, ಜಾತಿ: ಲಿಂಗಾಯತ ಹಾಗೂ 5) ವೈಜಿನಾಥ ತಂದೆ ಷಣ್ಮುಕಪ್ಪಾ ಮೇತ್ರೆ, ವಯ: 55 ವರ್ಷ, ಜಾತಿ: ಸಿಂಪಗೇರ, ಎಲ್ಲರೂ ಸಾ: ಹುಲಸೂರ ಇವರೆಲ್ಲರೂ ಕುಳಿತುಕೊಂಡು ಇಸ್ಪೀಟ ಜೂಜಾಟ ಆಡುತ್ತಿರುವದನ್ನು ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 2050/- ರೂ ಹಾಗು 52 ಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 49/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 19-0-/2021 ರಂದು ನಸುಕಿನ ಜಾವ ಫಿರ್ಯಾದಿ ರಾಜಪ್ಪಾ ತಂದೆ ಕಾಶಪ್ಪಾ ಗೋಖಲೆ ವಯ: 46 ವರ್ಷ, ಜಾತಿ:  ಎಸ. ಸಿ ಹೇಳವಾ, ಸಾ: ಕನಕಟ್ಟಾ, ತಾ: ಹುಮನಾಬಾದ ರವರು ತಾನು ಲಾಯಿಸುತ್ತಿದ್ದ ಟಿ.ವಿ.ಎಸ್ ಎಕ್ಸ್.ಎಲ್ ಸೂಪರ್ ಮೋಟಾರ್ ಸೈಕಲ್ ಸಂ. ಕೆಎ-39/ಎಲ್-6449 ನೇದರ ಮೇಲೆ ಭಾಗಾದಿಯಾದ ಸುನಿಲ ತಂದೆ ಅಂಬಣ್ಣಾ ಗೋಖಲೆ ಸಾ:  ಕನಕಟ್ಟಾ ಇವನಿಗೆ ಕೂಡಿಸಿಕೊಂಡು ಮಾವಿನ ಕಾಯಿಗಳನ್ನು ಕಡಿದುಕೊಂಡು ಬರಲು ಮ್ಮ ಹೊಲಕ್ಕೆ ಹೋಗುತ್ತಿರುವಾಗ ಕನಕಟ್ಟಾ ಹೊರ ವಲಯದ ಬ್ರಿಡ್ಜ್ ಹತ್ತಿರ ಹೋದಾಗ ಎದುರಿನಿಂದ ಅಂದರೆ ಹುಣಸಗೇರಾ ಗ್ರಾಮದ ಕಡೆಯಿಂದ ಒಂದು ಅಪರಿಚಿತ ಗೂಡ್ಸ್ ಆಟೋ ಚಾಲಕ ತನ್ನ ಆಟೋವನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲನ ಬಲಗಡೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಆಟೋವನ್ನು ನಿಲ್ಲಿಸದೇ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯವಾಗಿರುತ್ತದೆ, ಸುನಿಲ ಇವನಿಗೆ ದೇಹದ ಅಲ್ಲಲ್ಲಿ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ, ನಂತರ ಫಿರ್ಯಾದಿಯು ಸದರಿ ಘಟನೆಯ ಬಗ್ಗೆ ಮ್ಮ ಸಂಬಂಧಿಕರಿಗೆ ಕರೆ  ಮಾಡಿ ತಿಳಿಸಿದಾಗ ಫಿರ್ಯಾದಿಯ ಮಗ ಶಾಂತಕುಮಾರ ಇವನು ಘಟನಾ ಸ್ಥಳಕ್ಕೆ ಬಂದು ಅಪಘಾತದಲ್ಲಿ ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ(ಬಿ) ಪೊಲೀಸ ಠಾಣೆ ಅಪರಾಧ ಸಂ. 57/2021, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 19-05-2021 ರಂದು ಫಿರ್ಯಾದಿ ಪ್ರವೀಣ ತಂದೆ ಅಣ್ಣೇಪ್ಪಾ ಶೇರಿಕರ ಸಾ: ಹಳ್ಳಿಖೇಡ(ಬಿ) ರವರು ಹಳ್ಳಿಖೇಡ(ಬಿ) ಪಟ್ಟಣದ ಬೀದರ-ಹುಮನಾಬಾದ ರೋಡಿಗೆ ಹತ್ತಿ ಇರುವ ನಮ್ಮ ಹೊಲದಲ್ಲಿದ್ದಾಗ ಫಿರ್ಯಾದಿಯವರ ದೊಡ್ಡಪ್ಪನಾದ ಬಸವರಾಜ ತಂದೆ ಭೀಮಣ್ಣಾ ಶೇರಿಕರ ವಯ: 70 ವರ್ಷ ಹಳ್ಳಿಖೇಡ(ಬಿ) ರವರು ತಮ್ಮ ಟಿ.ವಿ.ಎಸ್ ಸೂಪರ್ ಎಕ್ಸ.ಎಲ್ ಮೋಟಾರ ಸೈಕಲ್ ನಂ. ಕೆಎ-39/ಎಲ್-5518 ನೇ ಮೇಲೆ ತಮ್ಮ ಹೊಲದ ಕಡೆ ಹೋಗಲು ರಸ್ತೆ ದಾಟುವಾಗ ಬೀದರ ಕಡೆಯಿಂದ ಮಾರುತಿ ಸುಜುಕಿ ಸ್ವೀಫ್ಟ್ವಿ.ಡಿ. ಕಾರ ನಂ. ಕೆಎ-33/-3087 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೆ ದೊಡ್ಡಪ್ಪ ವರು ಚಲಾಯಿಸುತ್ತಿರುವ ಮೋಟಾರ ಸೈಕಲ್ಗೆ ಹಿಂದುಗಡೆಯ ಬಲಗಡೆಯ ಸೈಡಿಗೆ ಒಮ್ಮೇಲೆ ರಾಂಗ ರೂಟಿಗೆ ಹೋಗಿ ಡಿಕ್ಕಿ ಮಾಡಿ ನಂತರ ಕಾರ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ದೊಡ್ಡಪ್ಪ ರವರ ಎಡಗಡೆ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಕಿವಿಯಿಂದ ರಕ್ತಸ್ರಾವವಾಗಿರುತ್ತದೆ ಮತ್ತು ಹಣೆಗೆ ರಕ್ತಗಾಯ ಮತ್ತು ಬಲಗೈ ಭುಜಕ್ಕೆ, ಎಡಗಾಲ ಮೊಳಕಾಲ ಮೇಲೆ, ಎರಡು ಮುಂಗೈಗಳಿಗೆ ಹಾಗೂ ಎಡಗಾಲ ಹೆಬ್ಬರಳಿಗೆ ತರಚಿದ ರಕ್ತಗಾಯಗಳು ಆಗಿರುತ್ತವೆ, ನಂತರ ಗಾಯಗೊಂಡ ದೊಡ್ಡಪ್ಪ ರವರಿಗೆ ಒಂದು ಖಾಸಗಿ ವಾಹನದಲ್ಲಿ ಹಳ್ಳಿಖೇಡ(ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಲು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯವರು ದೊಡ್ಡಪ್ಪನಿಗೆ ಪರೀಕ್ಷಿಸಿ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.