ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ 03-10-2019
ಔರಾದ
ಪೊಲೀಸ್ ಠಾಣೆ ಯು.ಡಿ.ಆರ್ ನಂ.
11/2019, ಕಲಂ. 174 ಸಿ.ಆರ.ಪಿ.ಸಿ :-
ದಿನಾಂಕ 02-10-2019 ರಂದು ಫಿರ್ಯಾದಿ ದೇವಿದಾಸ ತಂದೆ ಹಿರಾಮಣ ಚೌಹಾಣ ಸಾ: ಇಂದಿರಾನಗರ ತಾಂಡಾ ರವರ
ಮಗಳಾದ ಪುಜಾ ವಯ: 8 ವರ್ಷ ಇಕೆಯು ಮನೆಯಲ್ಲಿ ಕಟ್ಟೆಯ ಮೇಲೆ ನೀರು ತೆಗೆದುಕೊಂಡು ಕುಡಿಯಲು ಹೋದಾಗ ಕಟ್ಟೆಯ ಮೇಲೆ
ಮುದಡಿಕೊಂಡು ಕುಳಿತ್ತಿದ್ದ ಹಾವು ಆಕೆಯ ಎಡಗಾಲ ಪಾದದ ಮೇಲೆ ಹೆಬ್ಬೆರಳಿನ ಹತ್ತಿರ ಕಚ್ಚಿದ್ದರಿಂದ
ಅವಳನ್ನು ಮೊಟಾರ ಸೈಕಲ್ ಮೇಲೆ ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು
ಮಾಡಿದಾಗ ಪುಜಾ ಇವಳಿಗೆ ವೈದ್ಯಾಧಿಕಾರಿಗಳು ಪರಿಕ್ಷಿಸಿ ದಾರಿಯಲ್ಲಿಯೇ ಮೃತಪಟ್ಟಿರುತ್ತಾಳೆಂದು
ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ
ಅಪರಾಧ ಸಂ.
111/2019, ಕಲಂ. 279, 338 ಜೊತೆ 177, 187 ಐಎಂವಿ
ಕಾಯ್ದೆ :-
ದಿನಾಂಕ 02-10-2019 ರಂದು ಫಿರ್ಯಾದಿ
ಸಲಾಂ ಬೇಗ್ ತಂದೆ ಇಸ್ಮಾಯಿಲ್ ಬೇಗ್ ಸಾ: ಶಿವಪೂರಗಲ್ಲಿ ಹುಮನಾಬಾದ ರವರ ಮಗ ಶಾರುಖ ತನ್ನ ಮೋಟಾರ್ ಸೈಕಲ್ ಸಂ. ಕೆಎ-32/ಡಬ್ಲು-4812 ನೇದನ್ನು ಚಲಾಯಿಸಿಕೊಂಡು ಮನೆಯಿಂದ ಖಾಜಾ ಕಂಪನಿಗೆ ಹೋಗಿ ಕೆಲಸವನ್ನು ಮುಗಿಸಿಕೊಂಡು ರಾತ್ರಿ ಮರಳಿ ಮನೆಗೆ ಬರುತ್ತಿದ್ದಾಗ ಸದರಿ ಮೋಟಾರ್ ಸೈಕಲನ್ನು
ನಿಧಾನವಾಗಿ ಚಲಾಯಿಸಿಕೊಂಡು ಚಿದ್ರಿ ಬೈ ಪಾಸ್ ಹತ್ತಿರ ಬಂದಾಗ ಅದೇ ಸಮಯಕ್ಕೆ ಎದುರಿನಿಂದ ಹುಮನಾಬಾದ ಕಡೆಯಿಂದ ಟಾಟಾ ಏಸ್ ನೇದರ ಚಾಲಕ ನೇದರ ತನ್ನ ವಾಹನವನ್ನು ರಾಂಗ್ ಸೈಡಿನಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಶಾರುಖ ಇತನು ಚಲಾಯಿಸುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿ ತನ್ನ ವಾಹನವನ್ನು ಸ್ವಲ್ಪ ದೂರದಲ್ಲಿ ಹೋಗಿ ನಿಲ್ಲಿಸಿ ವಾಹನದಿಂದ ಕೆಳಗಡೆ ಇಳಿದು ಶಾರುಖ ಇತನು ಗಾಯಗೊಂಡಿರುವುದನ್ನು ನೋಡಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಶಾರುಖ ಇತನ ಬಲಗಾಲ ಮೊಣಕಾಲಿಗೆ ಮತ್ತು ಮೊಣಕಾಲ ಕೆಳಗೆ ತೀವ್ರ ರಕ್ತಗಾಯಗಳು ಆಗಿರುತ್ತವೆ, ನಂತರ ಶಾರುಖ ಇತನು ಚಿಕಿತ್ಸೆ ಕುರಿತು 108 ಅಂಬುಲೆನ್ಸನಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ
ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 172/2019, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ
ಕಾಯ್ದೆ :-
ದಿನಾಂಕ 02-10-2019 ರಂದು ಫಿರ್ಯಾದಿ ಸುರೇಶ ತಂದೆ ಶಾಮ್ರರಾವ
ಹಿಪ್ಪಳಗಾಂವಕರ ವಯ: 35 ವರ್ಷ, ಜಾ: ಎಸ.ಸಿ ಮಾದಿಗ, ಸಾ: ಚಿಟ್ಟಾವಾಡಿ ಬೀದರ ರವರು
ತನ್ನ ತಾಯಿಯಾದ ಈಶ್ಚರಿ ಗಂಡ ಶಾಮ್ರಾರಾವ ವಯ: 55 ವರ್ಷ ರವರ ಜೊತೆಯಲ್ಲಿ ತಾವು ವಾಸವಾಗಿರುವ ಮನೆಯಿಂದ
ಆಕಳು ಕಟ್ಟುವ ಮನೆಗೆ ಹೋಗಿ ಹಾಲು ಹಿಂಡಿಕೊಂಡು ಬೀದರ ಚಿಟ್ಟಾ ರೋಡ ದಾಟುವಾಗ ಚಿಟ್ಟಾ ಕಡೆಯಿಂದ ಬೀದರ ಕಡೆಗೆ
ಮೋಟಾರ ಸೈಕಲ ನಂ. ಕೆಎ-38/ಜೆ-5991 ನೇದರ ಚಾಲಕನಾದ ಆರೋಪಿಯು
ತನ್ನ ಮೋಟಾರ ಸೈಕಲನ್ನು ಜೋರಾಗಿ ಓಡಿಸಿಕೊಂಡು ಬಂದು ಫಿರ್ಯಾದಿಯ ತಾಯಿಯವರಿಗೆ ಒಮ್ಮೇಲೆ ಡಿಕ್ಕಿ
ಮಾಡಿ ತನ್ನ ಮೋಟಾರ್ ಸೈಕಲ್ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಅವರ ಎಡ ಹಣೆಗೆ ರಕ್ತಗಾಯ, ಎಡಗೈ ಮುಂಗೈ ಹತ್ತಿರ ಭಾರಿ
ಗುಪ್ತಗಾಯ ಮತ್ತು ಎಡಗಾಲು ಮೋಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಂತೆ ಆಗಿರುತ್ತದೆ
ಮತ್ತು ಅದೇ ಕಾಲಿಗೆ ಪಾದದವರೆಗೆ ತರಚಿದ ರಕ್ತಗಾಯವಾಗಿರುತ್ತದೆ, ಅಷ್ಟರಲ್ಲಿ ಫಿರ್ಯಾದಿಯು 108 ಅಂಬುಲೇನ್ಸ್‌ಗೆ
ಕರೆಯಿಸಿಕೊಂಡು ಅದರಲ್ಲಿ ಬೀದರ ವಾಸು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕುರಿತು ದಾಖಲು ಮಾಡಿದ್ದು
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 134/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 02-10-2019 ರಂದು ಧುಮ್ಮನಸೂರ ಗ್ರಾಮ ಶಿವಾರದ ಅರಣ್ಯ
ಪ್ರದೇಶದಲ್ಲಿರುವ ಒಂದು ಗಿಡಿದ ಕೆಳಗೆ ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹೆರ ಎಂಬ
ನಸೀಬಿನ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾರೆ ಅಂತ ಅನುರಾಜ ಎಎಸಐ ಹುಮನಾಬಾದ ಪೊಲೀಸ ಠಾಣೆ
ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ದಾಳಿ
ಮಾಡಲು ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಆರೋಪಿತರಾದ 1) ಶಿವನಾಂದ ತಂದೆ
ಸಿದ್ರಮಪ್ಪಾ, 2) ದತ್ತು ತಂದೆ ಶಿವಪ್ಪಾ ಮಡಿವಾಳ,
3) ಏಕನಾಥ, 4) ವಾಸೀದ ಹಾಗೂ 5) ಪವನ ದುಭೆ ಎಲ್ಲರು ಸಾ: ಹುಮನಾಬಾದ ಇವರೆಲ್ಲರ ಮೇಲೆ ದಾಳಿ ಮಾಡಿ ಅವರಿಂದ 52 ಇಸ್ಪೀಟ ಎಲೆಗಳು ಹಾಗೂ ನಗದು 9180/- ರೂಪಾಯಿ ಜಪ್ತಿ ಮಾಡಿಕೊಂಡು ಸದರಿ
ಆರೋಪಿತ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 135/2019, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ಸುಜಾತಾ ಗಂಡ ಬಸವರಾಜ ತುಪ್ಪಾದ, ಸಾ: ಛಟ್ಟಿ ಗಲ್ಲಿ ಹುಮನಾಬಾದ ರವರ ಗಂಡನಾದ ಬಸವರಾಜ ತಂದೆ
ದೂಳಪ್ಪ ತುಪ್ಪದ ರವರು ಈಗ ಸುಮಾರು 6 ತಿಂಗಳಿಂದ ಮನೆಯಲ್ಲಿ ಪ್ಯುರ್ ªÁಟರ್ ಪ್ಲಾಂಟಿನ ಕೆಲಸ ಹಾಗು ಟ್ಯಾಕ್ಷಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಫಿರ್ಯಾದಿಯವರ ಹತ್ತಿರ ಒಂದು ಇಂಡಿಕಾ ಕಾರ್ ನಂ. ಎಮ್.ಹೆಚ್-04/5448 ನೇದ್ದು
ಇರುತ್ತದೆ, ದಿನಾಲು ಗಂಡ
ಬಸವರಾಜ ಇವರು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೊರಗಡೆ ಹೋಗಿ ಪುನಃ ಸಾಯಂಕಾಲ ಮನೆಗೆ ಬರುತ್ತಾರೆ, ಅದೇ ರೀತಿ ದಿನಾಂಕ 25-09-2019 ರಂದು ಗಂಡನು
ಹೊರಗಡೆ ಕೆಲಸ ಇದೆ ಹೋಗಿ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾರೆ, ನಂತರ ಫಿರ್ಯಾದಿಯು 1730 ಗಂಟೆಗೆ ತನ್ನ ಗಂಡನಿಗೆ ಕರೆ
ಮಾಡಿದಾಗ ಅವರ ಮೋಬೈಲ್ ಸ್ವಿಚ್ ಆಫ್ ಅಂತ ಹೇಳಿರುತ್ತದೆ, ಗಂಡನು ಕಾರಿನ ಮೇಲೆ ಡ್ರೈವಿಂಗ ಮಾಡುತ್ತಿರುವಾಗ ಅವರು
ಸ್ವಿಚ್ ಮಾಡಿರಬಹುದೆಂದು ತಿಳಿದುಕೊಂಡು ನಂತರ ಇಲ್ಲಿಯವರೆಗೆ ಸುಮಾರು ಸಲಾ ಕರೆ ಮಾಡಿದರು ಅವರ
ಮೋಬೈಲ್ ಸ್ವಿಚ್ ಆಫ್ ಅಂತ ಹೇಳುತ್ತಿದ್ದು,
ಅವರ ಹತ್ತಿರ ಬಿ.ಎಸ್.ಎನ್.ಎಲ್ ನಂ. 9448605348 ಮತ್ತು ಟಾಟಾ
ಡೊಕೊಮೊ ಕಂಪನಿಯ 9242096245 ಸಿಮ್ಗಳು ಇರುತ್ತವೆ, ಕಾರಣ ಫಿರ್ಯಾದಿಯು ಗಾಬರಿಯಾಗಿ ತನ್ನ ಗಂಡನ ಬಗ್ಗೆ ಅತ್ತೆ ಮಾವ ಹಾಗು ಅವರ ಗೆಳೆಯರಿಗೆ ಹಾಗು
ಸಂಬಂದಿಕರಿಗೆ ಗಂಡನು ಕಾಣೆಯಾದ ಬಗ್ಗೆ ವಿಚಾರಿಸಲು ಗಂಡನು ಸದ್ಯ ಎಲ್ಲಿದ್ದಾನೆ ಎಂಬುದು ಯಾರಿಂದಲು ತಿಳಿದು
ಬಂದಿರುವುದಿಲ್ಲ, ಕಾಣೆಯಾದ ಗಂಡನ ವಿವರ 1) ಹೆಸರು ಬಸವರಾಜ ತಂದೆ ಧೂಳಪ್ಪಾ ತುಪ್ಪದ್, 2) ವಯ 48 ವರ್ಷ, 3) ಜಾತಿ: ಲಿಂಗಾಯತ, 4) ಮಾತನಾಡುವ ಭಾಷೆ: ಕನ್ನಡ, ಹಿಂದಿ, 5) ಧರಿಸಿದ ಬಟ್ಟೆ: ಹಳದಿ ಬಣ್ಣದ ಫುಲ್ ಶರ್ಟ, ನೀಲಿ ಬಣ್ಣದ ಜೀನ್ಸ್
ಪ್ಯಾಂಟ್ ಧರಿಸಿರುತ್ತಾರೆ, 6) ಚಹರೆ ಪಟ್ಟಿ: ದುಂಡು ಮುಖ ಸದೃಡ ಮೈಕಟ್ಟು ತಲೆಯಲ್ಲಿ ಕಪ್ಪು ಕೂದಲು ಉದ್ದನೆಯ ಮುಖ ಗೋಧಿ ಮೈ ಬಣ್ಣ ಅಂದಾಜು
ಎತ್ತರ 5 ಅಡಿ ಎತ್ತರ
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-10-2019 ರಂದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.