Police Bhavan Kalaburagi

Police Bhavan Kalaburagi

Friday, August 14, 2020

BIDAR DISTRICT DAILY CRIME UPDATE 14-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-08-2020

 

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 92/2020 ಕಲಂ 302 ಐಪಿಸಿ :-

ದಿನಾಂಕ 13/08/2020 ರಂದು 21;00 ಗಂಟೆಗೆ ಫಿರ್ಯಾದಿ ಶ್ರೀ ನಿಲೇಶ ತಂದೆ ಮಾದವರಾವ ಕುಲಕರ್ಣಿ ಸಾ: ಸಿ.ಎಮ.ಸಿ ಕಾಲೋನಿ ಮೈಲೂರ ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಯು ಬೀದರ ಝೀರಾ ಕನವೆನಷನ್ ಹಾಲದಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿದ್ದು ಇವರ ಕನವೆನಷನ್ ಹಾಲಿನ ಹಿಂದುಗಡೆ ಕಂಪೌಂಡಗೆ ಹತ್ತಿ ಚಿಕ್ಕಪೇಟದಿಂದ ಗುರುದ್ವಾರಾ ಕಡೆಗೆ ಹಾಯ್ದು ಹೋಗುವ ರಸ್ತೆಯಿಂದ ಶಿವಮಂದಿರ ದಿಂದ ಕೆ.ಹೆಚ.ಬಿ ಕಾಲೋನಿ ಕಡೆಗೆ ಬರುವ ರೋಡ ಇರುತ್ತದೆ.   ಝಿರಾ ಕನವಿನಷನ್ ಹಾಲದಲ್ಲಿ ಬಾಬುಸಿಂಗ ಅಂತಾ ವಾಚಮೆನ ಇರುತ್ತಾರೆ.  ಹೀಗಿರುವಲ್ಲಿ   ದಿನಾಂಕ 13/08/2020 ರಂದು ಅಂದಾಜು ಸಾಯಂಕಾಲ 6;13 ಗಂಟೆ ಸುಮಾರಿಗೆ   ವಾಚಮೆನ ಆದ ಬಾಬುಸಿಂಗ ಇತನು   ಫೊನ ಮಾಡಿ ತಿಳಿಸಿದೆನೆಂದರೆ,   ಕನವೆನಷನ್ ಹಾಲ ಕಂಪೌಂಡ ಗೊಡೆಯ ಪಕ್ಕದಲ್ಲಿ ಗಣೇಶ ಮಂದಿರ ಹಾಗೂ ಶಿವಮಂದಿರ ರೋಡಿನ ಬದಿಯಲ್ಲಿ ಒಂದು ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿರುತ್ತದೆ ಅಂತಾ ತಿಳಿಸಿದ ಕೂಡಲೇ  ಸ್ಥಳಕ್ಕೆ ಬಂದು  ನೋಡಲು ಒಬ್ಬ ಅಪರಿಚಿತ ವ್ಯಕ್ತಿ ಅಂದಾಜು ವಯ 40-45 ವಯಸ್ಸಿನ ವ್ಯಕ್ತಿಯನ್ನು ಯಾರೋ ಅಪರಿಚಿತರು  ು ದಿನಾಂಕ 13/08/2020 ರಂದು ಬೆಳಿಗ್ಗೆ 05;00 ಗಂಟೆಯಿಂದ ಸಾಯಂಕಾಲ 6;00 ಗಂಟೆಯ ಮದ್ಯ ಅವಧಿಯಲ್ಲಿ ಯಾವುದೋ ದುರುದ್ದೇಶದಿಂದ ಸದರಿ ವ್ಯಕ್ತಿಯ ಕುತ್ತಿಗೆಗೆ ಬೆಲ್ಟನಿಂದ ಸುತ್ತಿ ಕೊಲೆ ಮಾಡಿ ಬಿಸಾಡಿರುತ್ತಾರೆ. ಸದರಿ ಮೃತ ದೇಹವು ಬೋರಲಾಗಿ ಬಿದ್ದಿದ್ದು ಮೈಮೇಲೆ ಒಂದು ನೀಲಿ ಬಣ್ಣದ ಹೂವಿನ ಚಿತ್ರಗಳು ಇರುವ ಶರ್ಟ, ನಾಸಿ ಬಣ್ಣದ ಅಂಡರವೇರ ಫೀಕಾಕ ನೀಲಿ ಬಣ್ಣದ ಝೀನ್ಸ ಪ್ಯಾಂಟ ಇದ್ದು ಸೊಂಟದಿಂದ ತೊಡೆಯ ವರೆಗೆ ಕಳಚಿದ್ದು ಇರುತ್ತದೆ. ಕುತ್ತಿಗೆಯ ಮೇಲೆ ಬೆಲ್ಟದಿಂದ ಬಿಗಿದು ಕೊಲೆ ಮಾಡಿದ್ದು ಇರುತ್ತದೆ.  ಪ್ರಕರಣ ದಾಖಲಿಸಿ ತನಿಖೆ ಕೈಕೋಳ್ಳಲಾಗಿದೆ.

ಮೆಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 62/2020 ಕಲಂ 379 ಐಪಿಸಿ :-       

ದಿನಾಂಕ 13-08-2020 ರಂದು 1215 ಗಂಟೆಗೆ ಫಿರ್ಯಾದಿ ಶ್ರೀ ವೆಂಕಟ ತಂದೆ ವೈಜಿನಾಥ ಜಾಧವ ವಯ: 50 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಅಟ್ಟರಗಾ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಂಶವೆನೆಂದರೆ.  ಫೀರ್ಯಾದಿಯು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು ಇವರ  ಬಳಿ ಎರಡು ಆಕಳು ಮತ್ತು ಅವುಗಳ  ಕರುಗಳು ಹಾಗೂ  ಒಂದು ಎಮ್ಮೆ ಸೇರಿ ಒಟ್ಟು 06 ದನಗಳು ಇರುತ್ತವೆ. ಸದರಿ ದನಗಳನ್ನು ಇವರ   ಶಿವಾರದಲ್ಲಿರುವ   ಹೊಲ ಸವರ್ೇ ನಂ 35 ರಲ್ಲಿ ದಿನಾಲು ಕಟ್ಟುತ್ತಿದ್ದು ದಿನಾಂಕ: 07/08/2020 ರಂದು   ದನಗಳನ್ನು ಹೊಲದಲ್ಲಿ ಮೇಯಿಸಿ ಸಾಯಂಕಾಲ ಹೊಲದಲ್ಲಿ ಇರುವ  ತಗಡದ ಶೆಡ್ಡಿನ ಮುಂದೆ  ಕಟ್ಟಿದ್ದು  ಹೊಲದಿಂದ ಊಟಕ್ಕೆಂದು ರಾತ್ರಿ 8:00 ಗಂಟೆಗೆ ಮನೆಗೆ ಬಂದಿದ್ದು ಇರುತ್ತದೆ.  ನಂತರ ಮರಳಿ ದಿನಾಂಕ: 08/08/2020 ರಂದು ನಸುಕಿನ ಜಾವ 0400  ಗಂಟೆಗೆ   ಹೊಲಕ್ಕೆ ಹೋದಾಗ ನಮ್ಮ ಹೊಲದಲ್ಲಿ ತಗಡದ ಶೆಡ್ಡಿನ ಮುಂದೆ ಖುಲ್ಲಾಜಾಗೆಯಲ್ಲಿ ಕಟ್ಟಿದ  ಎಮ್ಮೆ ಇದ್ದಿರಲಿಲ್ಲ.   ಅಂದಾಜು 10 ವರ್ಷದ್ದು, ಕರಿಬೂದು ಬಣ್ಣದು ಅಂದಾಜು ಕಿ: 40,000/- ರೂ ಇರುತ್ತದೆ.  ಸದರಿ ನನ್ನ ಎಮ್ಮೆಯ ಹಗ್ಗ ಕಟ್ಟಿದ ಜಾಗದಿಂದ ಹಗ್ಗ ಕತ್ತರಿಸಿ   ಎಮ್ಮೆಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಧನ್ನೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 114/2020 ಕಲಂ 457, 380 ಐಪಿಸಿ :-

ದಿನಾಂಕ 13/08/2020 ರಂದು  1700  ಗಂಟೆಗೆ ಫಿರ್ಯಾದಿ ಬಾಲಾಜಿ ತಂದೆ ಶ್ರೀಪತರಾವ ಕರಡ್ಯಾಳೆ ವಯಃ 52 ವರ್ಷ ಜಾತಿಃ ಮರಾಠಾ ಉಃ ಒಕ್ಕಲುತನ ಮುಃ ಅಮದಾಬಾದ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸದರ ಸಾರಾಂಶವೆನೆಂದರೆ   ಫಿರ್ಯಾದಿಯು ಅಮದಾಬಾದ ಗ್ರಾಮ ಶಿವಾರದ ಸರ್ವೆ ನಂ 9  ನೇದರಲ್ಲಿ ಹೊಲಕ್ಕೆ ಹೋಗಿ ಕೆಲಸ ಮಾಡಿಕೊಂಡು ಮನೆಗೆ ಬರುತ್ತಿದ್ದು ಪ್ರತಿ ದಿನದಂತೆ ದಿನಾಂಕ 24/07/2020 ರಂದು ಮುಂಜಾನೆ 9-00 ಗಂಟೆಯ   ಹೊಲಕ್ಕೆ ಹೋಗಿ ಸಾಯಂಕಾಲ 6-30 ಗಂಟೆಯ ವರೆಗೆ  ಹೊಲದಲ್ಲಿ ಕೆಲಸ ಮಾಡಿ ಕೆಲವೊಂದು ಸಾಮಾನುಗಳು   ಶೆಡ್ಡನಲ್ಲಿ ಇಟ್ಟು ಮರಳಿ ಮನೆಗೆ ಬಂದಿದ್ದು ಇರುತ್ತದೆ.    ಹೀಗಿರುವಲ್ಲಿ ದಿನಾಂಕ 25/07/2020 ರಂದು ಮುಂಜಾನೆ  1100 ಗಂಟೆಯ ಸುಮಾರಿಗೆ   ಹೊಲದ ಶೆಡ್ಡನಲ್ಲಿರುವ ಗಟಾರ (ಸ್ಪ್ರೇತರಲು ಹೋದಾಗ ಅಲ್ಲಿ ಶೇಡ್ಡಿನ  ಕೀಲಿ ಮುರಿದು ಯಾರೋ ಅಪರಿಚಿತ ಕಳ್ಳರು ಅದರಲ್ಲಿದ್ದ ಸಾಮಾನುಗಳು 1) 20 ಲೀಟರವುಳ್ಳ ಸಿಂಗಲ್ ಪಿಸ್ಟನ್ ಹೆಚ್.ಡಿ.ಪಿ ಸ್ಪೇರ್ ಅ.ಕಿ-19800/- 2)  ತ್ರಿಪಿಸ್ಟನ್ ಹೆಚ್.ಡಿ.ಪಿ, ಹೊಂಡಾ ಕಂಪನಿಯ (ತ್ರಿ.ಹೆಚ್.ಪಿ.ಕಿ-38,000/- 3) ಹೊಂಡಾ ಕಂಪನಿಯ ಫೋರ್ಟೇಬಲ್ ಪಂಪ್ ಅ.ಕಿ/ 22,000  4) ಡಿ..ಪಿ ಗೊಬ್ಬರ 50 ಕೆ.ಜಿವುಳ್ಳ ಪ್ರತಿ ಬ್ಯಾಗಗೆ 1300/- ರೂ.ಗಳು ಒಟ್ಟು 10 ಬ್ಯಾಗಗಳು ಅ.ಕಿ-13,000/- 5) .ಪಿ.ಎಲ್ ಕಂಪನಿಯ ಗೊಬ್ಬರ 50 ಕೆ.ಜಿವುಳ್ಳ 10 ಬ್ಯಾಗಗಳು ಇದರ ಪ್ರತಿ ಬ್ಯಾಗಿನ ಬೆಲೆ 900/- ಒಟ್ಟು 9000 ರೂ.ಗಳು 6) ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧ ಫೇಮ್ 1 ಲೀಟರ್ ಇದ್ದು ಅದರ ಅ.ಕಿ 16000 ರೂ.ಗಳು 7) ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧ ನೆಟಿಯೋ 2 ಕೆ.ಜಿ ಇದ್ದು ಪ್ರತಿ ಕೆ.ಜಿಗೆ 7000 ಇದ್ದು 2 ಕೆ.ಜಿ ಗೆ 14000/ರೂ.ಗಳು ಆಗುತ್ತದೆ. ಹೀಗೆ ಒಟ್ಟು 1,31,800 ರೂ.ಗಳು ಬೆಲೆವುಳ್ಳು ಸಾಮಾನುಗಳು ಯಾರೋ  ಅಪರಿಚಿತ ಕಳ್ಳರು  ಶೇಡ್ಡಿನ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 ಔರಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 61/2020 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ 13-08-2020 ರಂದು 1130 ಗಂಟೆಗೆ ಎಎಸ್ಐ ರವರು  ಠಾಣೆಯಲ್ಲಿದ್ದಾಗ ಔರಾದ(ಬಿ) ಪಟ್ಟಣದ ಕಮೀಟಿ ಹಾಲ  ಹತ್ತಿರ ರೋಡಿನ ಮೇಲೆ ಒಬ್ಬ ವ್ಯೆಕ್ತಿ ಮಟಕಾ ಚೀಟಿ ಬರೆದುಕೊಡುತ್ತಾ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾನೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಕಮೀಟಿ ಹಾಲ ಹತ್ತಿರ ಹೋಗಿ   ನೋಡಲು ಒಬ್ಬ ವಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕೂಗಿ ಕರೆದು ಅದೃಷ್ಟ ಸಂಖ್ಯೆಗೆ ಹಣ ಹಚ್ಚ್ಚಿದರೆ 1/-ರೂ ಗೆ 80/-ರೂ 10 ರೂ ಗೆ 800/-ರೂ ಕೊಡುತ್ತೇವೆ ಎಂದು ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅನ್ನುವ ಅಂಕಿ ಸಂಖ್ಯೆಯ ಚೀಟಿಗಳು ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ಸದರಿ ಅದೃಷ್ಟ ಸಂಖ್ಯೆಗೆ ಹಣ ಪಡೆದುಕೊಳ್ಳುತ್ತಿದ್ದವನು ಸ್ಥಳದಿಂದ ಓಡಿ ಹೋಗುವ ಸಂಭವ ಕಂಡು ಬಂದಿರುವ   ದಾಳಿ ಮಾಡಿದಾಗ  ಅದೃಷ್ಟ ಸಂಖ್ಯೆಗೆ ಹಣ ಕೊಡುತ್ತಿದ್ದ ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ಹಣ ಪಡೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಪರಿಶೀಲನೆ ಮಾಡಿ ನೋಡಲು ತನ್ನ ಹೆಸರು ಯುನುಸಮಿಯಾ ತಂದೆ ಇಸ್ಮಾಯಿಲಸಾಬ ಶೇಖ ವಯ:60ವರ್ಷ ಉ: ಹೊಟೆಲ ಕೆಲಸ ಸಾ; ಹನುಮಾನ ಮಂದಿರ ಹತ್ತಿರ ಔರಾದ ಅಂತ ತಿಳಿಸಿದ್ದು ಈತನ ಹತ್ತಿರ ನಗದು ಹಣ 1800/-ರೂ ,ಅಂಕಿ ಸಂಖ್ಯೆ ಬರೆದ 1 ಮಟಕಾ ಚೀಟಿ ,ಒಂದು ಪೆನ್ನು ಮತ್ತು ಸ್ಯಾಮಸಂಗ ಕಂಪನಿಯ ಮೋಬೈಲ ಇದ್ದವು ಸದರಿಯವನು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಅಂಕಿ ಸಂಖ್ಯೆ ಮೇಲೆ ಹಣ ಪಡೆದುಕೊಂಡು ಅದೃಷ್ಟದ ಆಟದ ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದ ಬಗ್ಗೆ ತಿಳಿಸಿರುತ್ತಾನೆ. ಹೀಗೆ ನಗದು ಹಣ 1800/-ರೂ. 1 ಮಟಕಾ ಚೀಟಿ 1 ಪೆನ್ನು ಮತ್ತು ಸ್ಯಾಮಸಂಗ ಕಂಪನಿಯ ಮೋಬೈಲ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.