Police Bhavan Kalaburagi

Police Bhavan Kalaburagi

Sunday, June 6, 2021

BIDAR DISTRICT DAILY CRIME UPDATE 06-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-06-2021

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 84/2021, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 05-06-2021 ರಂದು ಬೀದರ ನಗರದ ಸಪ್ನಾ ಮಲ್ಟಿಪ್ಲೇಕ್ಸ ಹತ್ತಿರ ಕೆಲವು ಜನರು ಅನಧಿಕೃತವಾಗಿ ಇಸ್ಪೀಟ ಎಲೆಗಳಿಂದ ಹಣ ಹಚ್ಚಿ ಪಣತೊಟ್ಟು ಜೂಜಾಟ ಆಡುತ್ತಿದ್ದಾರೆಂದು ಜಗದೀಶ ನಾಯ್ಕ ಪಿ.ಎಸ್. (ಕಾಸು-1) ಗಾಂಧಿಗಂಜ ಪೊಲೀಸ ಠಾಣೆ, ಬೀದರ ರವರಿಗೆ ಖಚೀತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೀದರ ಮನ್ನಳಿ ರೋಡಿನ ಬದಿಯಲ್ಲಿರುವ ಚಾಮುಂಡಾ ಟೈಲ್ಸ ಅಂಗಡಿ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಚಾಮುಂಡಾ ಟೈಲ್ಸ ಅಂಗಡಿ ಹಿಂದೆ ಸಪ್ನಾ ಮಲ್ಟಿಪ್ಲೇಕ್ಸ ಪಕ್ಕದಲ್ಲಿ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಜೂಜಾದಲ್ಲಿ ತೊಡಗಿದ ಆರೋಪಿತರಾದ 1) ಶಿವಕುಮಾರ ತಂದೆ ಸಂಗಪ್ಪಾ ಸೊರಳ್ಳೆ ಸಾ: ಶಿವನಗರ ಬೀದರ, 2) ಕುಮಾರ @ ವಿಶಾಲ ತಂದೆ ವೈಜಿನಾಥ ಕೋರೆ 3) ರೋಹಿತ ತಂದೆ ಪ್ರದೀಪ ನೀಲಂಗೆ ಇಬ್ಬರು ಸಾ: ಅಕ್ಕಮºÁದೇವಿ ಕಾಲೋನಿ ಬೀದರ, 4) ಅಮರ ತಂದೆ ಅಶೋಕ ಪಾಟೀಲ್ ಸಾ: ಹಾರೂರಗೇರಿ ಬೀದರ, 5) ಸಂಗಮೇಶ ತಂದೆ ಧನರಾಜ ಗುಲಶೆಟ್ಟಿ ಸಾ: ಗುಮ್ಮೆ ಕಾಲೋನಿ ಬೀದರ, 6) ಸುರೇಶ ತಂದೆ ಗುರಪ್ಪಾ ಬಿರಾದಾರ, 7) ಬಸವರಾಜ ತಂದೆ ಸುಭಾಸ ಬಿರಾದಾರ, 8) ಗುಂಡಪ್ಪಾ ತಂದೆ ನಾಗಪ್ಪಾ ಬಿರಾದಾರ ಮೂವರು ಸಾ: ಮಂಗಲಪೇಟ ಬೀದರ, 9) ಉಮೇಶ ತಂದೆ ಅಣ್ಣೆಪ್ಪಾ ಕಡ್ಡೆ ಸಾ: ಖಾಜಿ ಕಾಲೋನಿ ಬೀದರ, 10) ಸಂಗಮೇಶ ತಂದೆ ನಾಗಶೆಟ್ಟಿ ಕರೆಪ್ಪನೋರ ಸಾ: ಹಳ್ಳದಕೇರಿ ಬೀದರ ರವರೆಲ್ಲರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವರಿಂದ ನಗದು ಒಟ್ಟು 24,110/- ರೂ. ಹಾಗೂ 52 ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 62/2021, ಕಲಂ. 379 ಐಪಿಸಿ :-

ದಿನಾಂಕ 03-05-2021 ರಂದು 1935 ಗಂಟೆಯ ಸುಮಾರಿಗೆ ಫಿರ್ಯಾದಿ ಭೀಮಶಾ ಹದಗಲ ವಯ: 49 ವರ್ಷ, ಜಾತಿ: ಎಸ್.ಸಿ ಹೊಲೆಯ, ಸಾ: .ಡಬ್ಲು.ಎಸ್ ಮನೆ ನಂ. 97 ಕೆ.ಹೆಚ್.ಬಿ. ಹುಡ್ಕೊ ಕಾಲೋನಿ ಬಿದರ ರವರು ತಮ್ಮ ಮನೆಯಿಂದ ಶಿವಮಂದಿರಕ್ಕೆ ಹೋಗಿ ನಂತರ ಸ್ವಲ್ಪ ದೂರದಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋಗಿ ಬರುವಾಗ ತನ್ನ ಮೊಬೈಲನ್ನು ಶರ್ಟಿನ ಜೇಬಿನಲ್ಲಿಟ್ಟಿದ್ದು, ಅದನ್ನು ಕಂಡ ಕಳ್ಳರು ಬಿಳಿಯ ಸ್ಕೂಟಿಯ ಮೇಲೆ ಕರಿ ಬಟ್ಟೆ, ಮುಖಕ್ಕೆ ಕರಿಬಟ್ಟೆಯನ್ನು ಧರಿಸಿ ಫಿರ್ಯಾದಿಯವರ ಹತ್ತಿರ ಬಂದು ಮೋಟರ ಸೈಕಲನ್ನು ಬಿಳುವಂತೆ ಮಾಡಿದ್ದು, ಆಗ ಫಿರ್ಯಾದಿಯು ಅವರನ್ನು ಎಬ್ಬಿಸಲು ಅವರ ಹತ್ತಿರ ಹೋದಾಗ ಅವರು ತನ್ನಿಂದ ತಾನೆ ಎದ್ದು ಹೋಗಿದ್ದು, ನಂತರ ಫಿರ್ಯಾದಿಯು ತನ್ನ ಜೇಬಿನಲ್ಲಿದ್ದ ಮೊಬೈಲನ್ನು ನೋಡಲು ಮೋಬೈಲ್ ಇರಲಿಲ್ಲ, ಜೇಬಿನಲ್ಲಿದ್ದ ಮೊಬೈಲನ್ನು ಸದರಿ ಇಬ್ಬರು ಕಳ್ಳರೆ ಕಳವು ಮಾಡಿಕೊಂಡು ಹೋಗಿರಬಹುದು, ಮೊಬೈಲಿನಲ್ಲಿ ಸಿಮ್ಮ ಸಂ. 7019927405 ಮತ್ತು 8970259664 ಇದ್ದವು, ಸದರಿ ಮೋಬೈಲ್ ರೆಡಮಿ ನೋಟ್-7 .ಕಿ 8000/- ರೂ. ಇದ್ದು, ಅದರ .ಎಮ್... ಸಂ. 864324042943737 ಮತ್ತು 864324042943745 ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 05-06-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ