ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-07-2021
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 14/2021, ಕಲಂ. 174 ಸಿ.ಆರ್.ಪಿ.ಸಿ :-
ಮಾಹಾದೇವ ತಂದೆ ನಾಮದೇವ ಶಿಂಧೆ ವಯ: 50 ವರ್ಷ, ಜಾತಿ: ಎಸ್.ಸಿ(ಹೊಲಿಯಾ), ಸಾ: ಹಳ್ಳಿ ರವರ ತಾಯಿ ಸುಕುಮಾರಬಾಯಿ ಇವರಿಗೆ ಈಗ 4-5 ವರ್ಷಗಳಿಂದ ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಇದ್ದವು, ಅಲ್ಲದೇ ಅರೆಹುಚ್ಚಿಯಂತೆ ವರ್ತನೆ ಮಾಡುತ್ತಿದ್ದಳು, ಹೀಗಿರುವಾಗ ದಿನಾಂಕ 11-07-2021 ರಂದು ಮುಂಜಾನೆ ದಿನನಿತ್ಯದಂತೆ ತಾಯಿಯು ಎದ್ದು ಬಹಿರದಸೆ ಹೋಗಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೋಗಿ ತನ್ನ ಅರೆ ಹುಚ್ಚು ಅವಸ್ಥೆಯಲ್ಲಿ ಕಟ್ಟಿಗೆಗಳನ್ನು ಆಯುತ್ತಾ ತಮ್ಮೂರ ಶೀವಾಜಿ ಮಾಲಿ ಪಾಟೀಲ ರವರ ಹೋಲದಲ್ಲಿ ಹೋದಾಗ ಆಕಕಾಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾಳೆ, ತನ್ನ ತಾಯಿಯ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ತರಹದ ಸಂಶಯ ಅಥವಾ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 59/2021, ಕಲಂ. 279, 337, 338 ಐಪಿಸಿ :-
ದಿನಾಂಕ 12-07-2021 ರಂದು ಫಿರ್ಯಾದಿ ಶೇಕಮಿಸಬಾ ತಂದೆ ಶೇಕ ಅಲಿಮೋದ್ದಿನ ವಯ: 17 ವರ್ಷ, ಜಾತಿ: ಮುಸ್ಲಿಂ, ಸಾ: ಚೌಬಾರಾ ಹತ್ತಿರ ಬೀದರ ರವರು ತನ್ನ ಸಂಬಂಧಿಕನಾದ ಎಮ್.ಡಿ ಆಜಾದ ತಂದೆ ಹಿತಾಯತಸಾಬ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಚಿಟ್ಟಾ ಗ್ರಾಮ, ತಾ: ಬೀದರ ರವರು ರಾಯಲ್ ಎನಫಿಲ್ಡ್ ಮೋಟಾರ ಸೈಕಲ್ ನಂ. ಕೆಎ-04/ಜೆ.ಇ-9362 ನೇದರ ಮೇಲೆ ಫಿರ್ಯಾದಿಗೆ ಕೂಡಿಸಿಕೊಂಡು ಬೀದರದಿಂದ ಹುಮನಾಬಾದಗೆ ಬರುವಾಗ ರಾಷ್ಟೀಯ ಹೆದ್ದಾರಿ ನಂ. 65 ನಿಸರ್ಗ ಫಂಕ್ಷನ ಹಾಲ ಹತ್ತಿರ ಡೈವರಶನ ಹತ್ತಿರ ಬಂದಾಗ ಆರೋಪಿ ನಂ. 1 ) ಎಮ್.ಡಿ ಆಜಾದ ತಂದೆ ಹಿತಾಯತಸಾಬ ವಯ: 30 ವರ್ಷ, ಜಾತಿ: ಮುಸ್ಲಿಂ, ಸಾ: ಚಿಟ್ಟಾ ಗ್ರಾಮ, ಇತನು ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಂದು ಮ್ಯಾಕ್ಸಿ ಕ್ಯಾಬ ನಂ. ಕೆಎ-11/ಬಿ-4455 ನೇದರ ಚಾಲಕನಾದ ಆರೋಪಿ ನಂ. 2) ಸಿದ್ದಯ್ಯಾ ತಂದೆ ಶರಣಯ್ಯಾ ಸಾ: ಕೂಡಲಿ ತಾ: ಚಿಂಚೋಳ್ಳಿ ಇತನು ಯಾವುದೇ ಸನ್ನೆ ಮಾಡದೇ ತನ್ನ ಮ್ಯಾಕ್ಸಿ ಕ್ಯಾಬ ಬಲಕ್ಕೆ ತಿರುಗಿಸುವಾಗ ಓವರಟೇಕ ಮಾಡಲು ಹೋಗಿ ಮ್ಯಾಕ್ಸಿ ಕ್ಯಾಬಗೆ ಡಿಕ್ಕಿ ಹೊಡೆದು ಮುಂದೆ ಡಿವೈಡರ ಮಧ್ಯದಲ್ಲಿರುವ ಕಲ್ಲಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಎಮ್.ಡಿ ಆಜಾದನಿಗೆ ತಲೆಯ ಹಣೆಯ ಮೇಲೆ ಭಾರಿ ರಕ್ತಗಾಯ, ಬಲಗಡೆ ಕಿವಿಯ ಮೇಲೆ ರಕ್ತಗಾಯ, ಎಡಮೊಳಕಾಲಿಗೆ ತರಚಿದಗಾಯ ಹಾಗೂ ಬೆನ್ನಿನ ಮೇಲೆ ಗುಪ್ತಗಾಯವಾಗಿರುತ್ತದೆ ಹಾಗೂ ಫಿರ್ಯಾದಿಗೆ ಗಟಾಯಿ ಹತ್ತಿರ ತರಚಿದ ಗಾಯ, ಎರಡು ಮೊಳಕಾಲಿಗೆ ತರಚಿದ ಗಾಯವಾಗಿರುತ್ತದೆ, ನಂತರ 108 ಆಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಇಬ್ಬರು ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.