Police Bhavan Kalaburagi

Police Bhavan Kalaburagi

Monday, February 22, 2016

BIDAR DISTRICT DAILY CRIME UPDATE 22-02-2016¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-02-2016

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 61/2016, PÀ®A 32, 34 PÉ.E PÁAiÉÄÝ :-
¢£ÁAPÀ 21-02-2016 gÀAzÀÄ »¥Àà¼ÀUÁAªÀ PÁæ¸À ºÀwÛgÀ PÀıÀ£ÀÆgÀ PÀqɬÄAzÀ E§âgÀÄ ªÀåQÛUÀ¼ÀÄ MAzÀÄ ªÉÆÃmÁgÀ ¸ÉÊPÀ® ªÉÄÃ¯É CPÀæªÀĪÁV ¸ÀgÁ¬Ä ¸ÀAUÀæºÀ ªÀiÁrPÉÆAqÀÄ ¸ÀAUÀªÀÄ PÀqÉUÉ ºÉÆÃUÀĪÀªÀjzÁÝgÉ CAvÀ CqÀªÉ¥Áà §¤ß ¹¦L OgÁzÀ (©) gÀªÀjUÉ RavÀ ªÀiÁ»w §AzÀ ªÉÄÃgÉUÉ ¹¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, ¹§âA¢AiÀĪÀgÉÆqÀ£É ©æqÀÓ ºÀwÛgÀ ªÀÄgÉAiÀiÁV zÁj PÁAiÀÄÄvÁÛ PÀĽwgÀĪÁUÀ  MAzÀÄ ªÉÆÃmÁgÀ ¸ÉÊPÀ® ªÉÄÃ¯É E§âgÀÄ ªÀåQÛUÀ¼ÀÄ £ÀqÀÄªÉ MAzÀÄ UÀAlÄ ElÖPÉÆAqÀÄ §gÀĪÀÅzÀ£ÀÄß £ÉÆÃr ¥ÉưøÀgÀÄ ºÀoÁvÀÛ£É zÁ½ ªÀiÁr ¸ÀzÀj ªÉÆÃmÁgÀ ¸ÉÊPÀ®UÉ PÉÊ ªÀiÁr ¤°è¸ÀĪÁUÀ ªÉÆÃmÁgÀ ¸ÉÊPÀ® ¸ÀªÁgÀ  fVzÀÄ Nr ºÉÆÃVgÀÄvÁÛ£É, £ÀAvÀgÀ ªÉÆÃmÁgÀ ¸ÉÊPÀ® »AzÉ PÀĽvÀªÀ¤UÉ »rzÀÄ ºÉ¸ÀgÀÄ «¼Á¸À «ZÁj¸À®Ä  vÀ£Àß ºÉ¸ÀgÀÄ ªÀiÁzÉñÀ vÀAzÉ ±ÀgÀt¥Áà ªÀiÁ¼É ªÀAiÀÄ: 25 ªÀµÀð, eÁw: J¸ï¹, ¸Á: C±ÉÆÃPÀ£ÀUÀgÀ ¨sÁ°Ì CAvÀ w½¹zÀ£ÀÄ, ªÉÆmÁgÀ ¸ÉÊPÀ® ªÉÄÃ¯É K¤zÉ JAzÀÄ «ZÁj¸À®Ä EzÀgÀ°è ¸ÀgÁ¬Ä ¨Ál®ÄUÀ½zÀÄÝ ªÀiÁgÁl ªÀiÁqÀ®Ä vÉUÉzÀÄPÉÆAqÀÄ ºÉÆÃUÀÄwÛgÀĪÀÅzÁV w½¹zÀ£ÀÄ, EzÀ£ÀÄß J°èAzÀ vÀA¢gÀĪÀÅzÁV PÉüÀ¯ÁV PÀıÀ£ÀÆgÀ UÁæªÀÄzÀ ªÉAPÀmÉñÀégÀ ªÉÊ£ï ±Á¥À ªÀiÁ°ÃPÀgÁzÀ ªÉAPÀl £ÀgÀ¹AºÀgÉrØ EªÀgÀÄ ºÉýzÀ ªÉÄÃgÉUÉ ªÀiÁå£ÉdgÀÄUÀ¼ÁzÀ gÁdgÉrØ ºÁUÀÆ C¤Ã® vÀAzÉ eÉmÉÖ¥Áà PÀªÀÄoÁtPÀgï EªÀgÀÄ ¤Ãr ºÀ½îUÀ¼À°è ªÀiÁgÁl ªÀiÁqÀ®Ä ºÉýzÀ ªÉÄÃgÉUÉ £Á£ÀÄ ºÁUÀÆ Nr ºÉÆÃzÀ ¥ÀªÀ£À vÀAzÉ CA¨ÁzÁ¸À ¸Á: ¨sÁ°Ì E§âgÀÄ PÀÆr ºÁ®ºÀ½î, ZÁAzÉÆÃj, §¼ÀvÀ(PÉ), §¼ÀvÀ(©) UÁæªÀÄUÀ½UÉ PÉÆlÄÖ §gÀ®Ä ºÉÆÃUÀÄwÛgÀĪÀÅzÁV w½¹zÀ£ÀÄ, ¸ÀzÀj ¸ÀgÁ¬Ä ªÀiÁgÁl ¤ªÀÄä ºÀwÛgÀ ¸ÀgÀPÁgÀzÀ ªÀw¬ÄAzÀ AiÀiÁªÀÅzÁzÀgÀÆ ¯ÉʸÀ£Àì/C£ÀĪÀÄw EzÉÃAiÉÄà JAzÀÄ «ZÁj¸À®Ä E®è C£À¢üÃPÀÈvÀªÁV ªÀiÁgÁl ªÀiÁqÀ®Ä vÉUÉzÀÄPÉÆAqÀÄ ºÉÆÃUÀÄwÛgÀĪÀÅzÁV w½¹zÀ£ÀÄ, £ÀAvÀgÀ ¸ÀzÀj UÀAl£ÀÄß vÉgÉzÀÄ ¥Àj²Ã°¹ £ÉÆÃqÀ®Ä EzÀgÀ°è MlÄÖ 8 PÁlð£ÀUÀ½zÀÄÝ MAzÉÆAzÁV vÉgÉzÀÄ ¥Àj²Ã°¹ £ÉÆÃqÀ®Ä 8 PÁlð£ÀUÀ¼À ¥ÉÊQ 7  PÁlð£ÀUÀ¼À°è ¥ÀæwAiÉÆAzÀgÀ°è 90 JªÀiïJ¯ï£À 96 AiÀÄÄJ¸ï «¹Ì ¥Áè¹ÖPï 672 ¨Ál®ÄUÀ½zÀÄÝ MAzÀgÀ C.Q. 25/- gÀÆ¥Á¬ÄUÀ¼ÀAvÉ MlÄÖ 672 ¨Ál®ÄUÀ¼À C.Q 16,800/- gÀÆ¥Á¬ÄUÀ¼ÁUÀ§ºÀÄzÀÄ ºÁUÀÆ MAzÀÄ PÁlð£ÀzÀ°è 180 JªÀiïJ¯ï£À 48 N®Ø mÁªÀgÀ£ï «¹Ì ¥ËZÀUÀ½zÀÄÝ MAzÀgÀ C.Q. 59/- gÀÆ¥Á¬ÄUÀ¼ÀAvÉ MlÄÖ 48 ¥ËZïUÀ¼ÀÀ C.Q 2832/- gÀÆ¥Á¬ÄUÀ¼Á§ºÀÄzÀÄ, £ÀAvÀgÀ ¸ÀzÀj ¸ÀgÁ¬ÄAiÀÄ£ÀÄß vÁ¨ÉUÉ vÉUÉzÀÄPÉÆArzÀÄÝ ºÁUÀÆ ¸ÀzÀj ¸ÀgÁ¬Ä ¸ÁV¸À®Ä §¼À¹zÀ ªÉÆÃmÁgÀ ¸ÉÊPÀ® £ÉÆÃqÀ®Ä »ÃgÉÆà ºÉÆAqÁ PÀA¥À¤AiÀÄ ¸ÉèAqÀgï ¥Àè¸ï ªÉÆÃmÁgÀ ¸ÉÊPÀ® EzÀÄÝ £ÀA. J¦-28/r¦-2591 EgÀÄvÀÛzÉ C.Q 30,000/- gÀÆ DUÀ§ºÀÄzÀÄ, £ÀAvÀgÀ ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 36/2016, PÀ®A 279, 338 L¦¹ :-
ದಿನಾಂಕ 21-02-2016 ರಂದು ಫಿರ್ಯಾದಿ ಶಿವರಾಜ ತಂದೆ ಈರಪ್ಪಾ ಮೀನಕೇರಿ ಸಾ: ಹಳ್ಳಿಖೇಡ (ಬಿ), ಸದ್ಯ ಬಿ.ಎಸ್.ಎಸ್.ಕೆ ಹಳ್ಳಿಖೇಡ (ಬಿ) ರವರ ಮಗನಾದ ಸಾಗರ ವಯ: 16 ವರ್ಷ ಇವನು ಬಿ.ಎಸ್.ಎಸ್.ಕೆ ಯಿಂದ ಹಳ್ಳಿಖೇಡ (ಬಿ) ಗ್ರಾಮಕ್ಕೆ ತನ್ನ ಗೆಳೆಯನ ಹತ್ತಿರ ಹೋಮ ವರ್ಕ ಮಾಡಿಕೊಳ್ಳಲು ಹಿರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-39/ಕೆ-1319 ನೇದರ ಮೇಲೆ ತನ್ನ ಸೈಡಿಗೆ ತಾನು ಹಳ್ಳಿಖೇಡ (ಬಿ) ಗ್ರಾಮದ ಭಾಯಿ ಬನಸೀಲಾಲ ಶಾಲೆಯ ಹತ್ತಿರ ರೋಡಿನ ಮೇಲೆ ಬರುವಾಗ ಎದುರುಗಡೆಯಿಂದ ಒಂದು ಗೂಡ್ಸ ಆಟೊ ನಂ. ಕೆಎ-39/6252 ನೇದರ ಚಾಲಕನಾದ ಆರೋಪಿ ಇಸಾಕ್ ತಂದೆ ನೂರ ಅಲಿ ಬಾಗವಾನ, ವಯ 30 ವರ್ಷ, ಸಾ: ಹಳ್ಳಿಖೇಡ(ಬಿ) ಇತನು ತನ್ನ ಆಟೊ ಅತಿ ವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಸದರಿ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿದ ಪರಿಣಾಮ ಸಾಗರ ಈತನಿಗೆ ಬಲಗಣ್ಣಿನ ಕೆಳಗೆ, ಬಲಮುಂಗೈ ತರಚಿದ ಗಾಯಗಳು ಮತ್ತು ಬಲಗಾಲ ಮೊಳಕಾಲ ಹತ್ತಿರ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 22-02-2016 ರಂದು ರಾತ್ರಿ 02-50 ಗಂಟೆ ಸುಮಾರಿಗೆ ಮೃತ ಶರಣಪ್ರಸಾದ ಇತನು ಕೆ.ಟಿ.ಎಮ್.  ಡ್ಯೂಕ ಮೋಟಾರ ಸೈಕಲ ಚೆಸ್ಸಿ ನಂ VBKJGJ4AFC259997 ನೇದ್ದನ್ನು ರಾಮ ಮಂದಿರ ರಿಂಗ ರೋಡ ಕಡೆಯಿಂದ ಆರ.ಪಿ. ಸರ್ಕಲ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡ ಎಡ ಬಲ ಕಟ್ ಹೊಡೆದು ಯಾತ್ರಿಕ ನಿವಾಸದ ಎದುರು ರೋಡ ಪಕ್ಕದಲ್ಲಿ ನಿಲ್ಲಿಸಿದ ಕಾರ ನಂಬರ ಕೆಎ-32-ಎಮ್-2877 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಕೆಳಗಡೆ ಬಿದ್ದು ತೆಲೆಗೆ ಭಾರಿ ಗುಪ್ತ ಪೆಟ್ಟು ಎಡ ಗದ್ದಕ್ಕೆ ರಕ್ತಗಾಯ ಎಡ ಹೊಟ್ಟೆಯ ಮೇಲೆ ರಕ್ತಗಾಯ ಬಲ ಪೆಕ್ಕೆಗೆ ತರಚಿದಗಾಯ ಹೊಟ್ಟೆಯ ಮೇಲೆ ತರಚಿದಗಾಯ ಬಲಗೈ ಮುಂಗೈ ಹತ್ತೀರ ತರಚಿದಗಾಯ ಎಡ ತೊಡೆಗೆ ಭಾರಿ ಗುಪ್ತಪೆಟ್ಟು ಹಾಗೂ ಬಲ ಮೊಳಕಾಲ ಹತ್ತೀರ ತರಚಿದ ಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಮೀನಾಕ್ಷಿ ಗಂಡ ಪರ್ವತರೆಡ್ಡಿ ಭರತನೂರ ಸಾ: ಏಷಿಯನ್ ಗಾರ್ಡನಿಯಾ ಏಷಿಯನ್ ಮಹಲ ಹಿಂದುಗಡೆ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಅಶೋಕ ನಗರ ಠಾಣೆ : ದಿನಾಂಕ 18/02/2016 ರಂದು  ಗೋದುತಾಯಿ ನಗರ ಹೊಸ ಮದೆರ ತೆರೆಸಾ ಶಾಲೆಯ ಹತ್ತಿರದ ರೈಲ್ವೆಟ್ರಾಕ್ ಪಕ್ಕದ ರಸ್ತೆಯಲ್ಲಿ 5-6 ಜನರು ದರೋಡೆಗೆ ಸಂಚು ರೂಪಿಸುತ್ತಿದ್ದಾರೆಂದು ಬಾತ್ಮಿ ಬಂದ ಮೇರೆಗೆ ಶ್ರೀ ಜೇಮ್ಸ್ ಮೆನೆಜಸ್ ಪಿಐ ಅಶೋಕ ನಗರ ಠಾಣೆ ಹಾಗು  ಗುರುಮೂರ್ತಿ ಪಿಸಿ-269, ಜ್ಯೋತಿರ್ಲಿಂಗ್ ಪಿಸಿ-1159 , ಅನೀಸ್ ಪಿಸಿ-12 ಮತ್ತು ಜೀಪ ಡ್ರೈವರ ಎಪಿಸಿ-52  ಮತ್ತು ಪಂಚರೊಂದಿಗೆ ಗೋದುತಾಯಿ ನಗರದ ಹೊಸ ಮದರ ತೆರೆಸಾ ಶಾಲೆಯ ಹತ್ತಿರ ಜೀಪನ್ನು ನಿಲ್ಲಿಸಿ ಮರೆಯಾಗಿ ನೋಡಲು 5-6 ಜನರು ಕೈಯಲ್ಲಿ ಲಾಂಗ, ಚಾಕು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದರೋಡೆಗೆ ಸಂಚು ರೂಪಿಸಿರುತ್ತಿರುವದನ್ನು ಖಾತ್ರಿ ಪಡೆಸಿಕೊಂಡು ದಾಳಿ ಮಾಡಿ 5 ಜನರನ್ನು ಹಿಡಿದಿದ್ದು ಒಬ್ಬ ತಪ್ಪಿಸಿಕೊಂಡು ರೈಲ್ವೆ ಟ್ರಾಕ ಕಡೆಗೆ ಓಡಿ ಹೋಗಿರುತ್ತಾನೆ. ಸೆರೆ ಸಿಕ್ಕ 5 ಜನರನ್ನು ಒಬ್ಬೋಬರನ್ನಾಗಿ ಹೆಸರು ವಿಳಾಸ ವಿಚಾರಿಸಲು 1] ಪ್ರಶಾಂತ ತಂದೆ ರಜನಿಕಾಂತ ಐಗೊಳೆ ಸಾ: ತಾರಫೈಲ್ 6 ನೇ ಕ್ರಾಸ್ ಕಲಬುರಗಿ  2] ಅರುಣ ತಂದೆ ಬಸವರಾಜ ಕೂಡ್ಯಾಳ ಸಾ: ವಿಜಯ ನಗರ ಬ್ರಹ್ಮಪೂರ ಕಲಬುರಗಿ 3) ಮಾದು @ ಮಾದೇಶ ತಂದೆ ಬಾಬುರಾವ  ಸಾ: ಬಸವನಗರ ಕಲಬುರಗಿ 4)ನಾಗೇಶ ತಂದೆ ಜಿತೇಂದ್ರ ಬೊಧನ ಸಾ: ಬಸವನಗರ ಕಲಬುರಗಿ  5) ರಾಮು ತಂದೆ ಸೂರ್ಯಕಾಂತ ನಾಲವಾರ ಸಾ: ವಡ್ಡರಗಲ್ಲಿ ಬ್ರಹ್ಮಪೂರ ಕಲಬುರಗಿ ನಂತರ ಓಡಿ ಹೊದವನ ಹೆಸರು ಕೇಳಿದಾಗ  ಅಂಬರೀಶ ತಂದೆ ರಾಮಚಂದ್ರ  ಬನಸೊಡೆ  ಸಾ: ಗುಲಾಬವಾಡಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಂದ ಕೃತ್ಯಕ್ಕೆ ಬಳಸಿದ ಕಾರದ ಪುಎಇ ಚೀಟಗಳು, ಲಾಂಗ ಮಚ್ಚು ಮತ್ತು ಚಾಕುಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಅಶೋಕ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಗಳು :
ಆಳಂದ ಠಾಣೆ : ಶ್ರೀ,ದೇವಿಂದ್ರ ತಂದೆ ತುಳಜಾರಾಮ ಲಾಡಂತೆ ಮು|| ಶುಕ್ರವಾಡಿ ತಾ: ಆಳಂದ ರವರು ಗ್ರಾಮ ಪಂಚಾಯತ ಚುನಾವಣೆಯಲ್ಲಿ ನನ್ನ ಹೆಂಡತಿಗೆ ಅಬ್ಯರ್ಥಿಯಾನ್ನಾಗಿ ನಾಮ ಪತ್ರ ಸಲ್ಲಿಸಿರುವ ಪ್ರಯುಕ್ತ ದಿನಾಂಕ 19/02/2016 ರಂದು ಸಾಯಾಂಕಾಲ 8 ಗಂಟೆಗೆ ಬಾಬುರಾವ ತಂದೆ ಕಲ್ಲಪ್ಪ ಮಾಲಿ ಪಾಟೀಲ ಮತ್ತು ಅವರ ಸಂಗಡಿಗರು ಸೇರಿ ನಮ್ಮ ಮನೆಗೆ ಬಂದು ನನು ಹೇಳಿದ ಪಕ್ಷಕ್ಕೆ ಮತ ನೀಡಬೇಕು ಏಂದು ವಿನಂತಿಸಿದ ಮತ್ತು ಈ ಹಿಂದೆ ಗ್ರಾಂ..ಪಂ ಚುನಾವಣೆಯಾಗಲಿಕ್ಕೆ ನೀನೆ ಕಾರಣ ನಿನ್ನ ಹೆಂಡತಿ ನಾಮಪತ್ರ ಸಲ್ಲಿಸದಿದ್ದರೆ ನಾನು ಅವಿರೋದ ಆಯ್ಕೆಯಾಗುತ್ತಿದ್ದ ನಿನ್ನಿಂದ ನನ್ನ ಗೆ 1 ಲಕ್ಷ ರೂಪಾಯಿ ಹಾನಿಯಾಯಿತು ಈ ಸಲ ನೀನು ವಿರೋದಿಸದೆ ನಾವು ಹೇಳಿದ ಪಕ್ಕಕ್ಕೆ ಮತ ನೀಡು ತಪ್ಪಿದರೆ ನಿನ್ನ ಗತಿ ನೆಟ್ಟಗಿರುವಿದಲ್ಲಾ ಎಂದು ಹೆದರಿಸಿದರು. ಅದಕ್ಕೆ ನಾನು ಜೀವ ಭಯದಿಂದ ಒಲ್ಲದ ಮನಸ್ಸಿನಿಂದ ಒಪ್ಪಿದೆ ಮತಹಾಕಲು ತೆಗೆದುಕೊ 1000 ( ಒಂದು ಸಾವಿರ ರೂಪಾಯಿ) ಒತ್ತಾಯಿಸಿದರು ಅದಕ್ಕೆ ನಾನು ಒಪ್ಪಲಿಲ್ಲಾ ನನ್ನ ಮನೆಯಲ್ಲಿ ಬಿಸಾಕಿ ಹೊದರು ಅದರಂತೆ ದಿನಾಂಕ 20/02/2016 ರಂದು ಮತದಾನ ಮಾಡಲಿಕ್ಕೆ 10 ಜನ ಒಟ್ಟಾಗಿ ಹೋಗಿ ಸರದಿಯಲ್ಲಿ ನಿಂತು ಮತದಾನ ಮಾಡಿ ಬರುವಾಗ ರಸ್ತೆ ಪಕ್ಕದಲ್ಲಿ ಶ್ರೀ ಬಾಬುರಾವ ಪಾಟೀಲ ಮತ್ತು ಅವರ ಸಂಗಡಿಗರೆಲ್ಲರೂ ನನ್ನ ಹತ್ತಿರಕ್ಕೆ ಬಂದರು. ನಾವು ಹೇಳಿದ ಚಿನ್ನಗೆ ನೀನು ಮತಹಾಕಿಲ್ಲಾ ಮಗನೆ ಬಹಳ ಸೊಕ್ಕ ಬಂದದಾ ಈ ಹೊಲ್ಯಾ ಸುಳಿಮಗನಿಗೆ ಏಂದು ಶ್ರೀ ಬಾಬುರಾವ ತಂದೆ ಕಲ್ಲಪ್ಪ ಮಾಲಿ ಪಾಟೀಲ ಮು: ಶುಕ್ರವಾಡಿ ಅವರು ಮತ್ತು ಸಂಗಡಿ ಕೆಲವರು ಸೇರಿ ನನಗೂ ಮತ್ತು ನನ್ನ ಹೇಂಡ್ತಿ ಹಾಗು ನನ್ನ ಅಣ್ಣನ ಮತ್ತು ಅಕ್ಕನ ಜೀವ ಭೆದರಿಕೆ ಹಾಕಿ ಮತದಾನ ಮಾಡುವಂತೆ ಒತ್ತಾಯಿಸಿ ಮತದಾನ ಮಾಡಿದಕ್ಕೆ ಹಾಗು ಮತದಾನ ಮಾಡುದಂತೆ ತಡೆಓಡ್ಡಿ ಹೊಡೆಬಡೆ ಮಾಡಿ ಸಾರ್ವಜನಿಕವಾಗಿ ಬಟ್ಟೆಹರಿದು ಅವಮಾನಿಸಿ ಉದ್ದೇಶ ಪೂರಕವಾಗಿ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ರಾಜಕುಮಾರ ತಂದೆ ಉತ್ತಮ ಕಾಂಬಳೆ ಮು: ಹೆಬಳಿ  ತಾ : ಆಳಂದರವರು ದಿನಾಂಕ 18-02-2016 ರಂದು ಚುನಾವಣೆ ಪ್ರಯುಕ್ತ ಸಾವಳೇಶ್ವರ ಗ್ರಾಮಕ್ಕೆ ಹೋಗಿ ಪ್ರಚಾರ ಮುಗಿಸಿಕೊಂಡು ಬರುವ ಸಂದರ್ಭಧಲ್ಲಿ ಅಂದಾಜು ಸಮಯ ರಾತ್ರಿ 10:30 ಗಂಟೆಗೆ ಪಡಸಾವಳಿಯಿಂದ ಒಂದು ಪರ್ಲಾಂಗ ದೂರದ ಸ್ಥಳದಲ್ಲಿ ಸಾವಳೇಶ್ವರ ದಿಂದ ಪಡಸಾವಳೆ ರಸ್ತೆ ಮದ್ಯದಲ್ಲಿ ರಾಮಚಂದ್ರ ತಂದೆ ಕಲ್ಯಾಣರಾವ ಪಾಟೀಲ ಮತ್ತು ಆಕಾಶ ತಂದೆ ಧರ್ಮರಾಯ ಪಾಟೀಲ, ವೈಜುನಾಥ ತಂದೆ ಸೋಮನಾಥ ಪಾಟೀಲ, ಲಾಯಕ ಅಲಿ ತಂದೆ ಖಾಜಾ ಮುಲ್ಲಿಕ ಇನಾಂದಾರ , ವಿಶ್ವನಾಥ ತಂದೆ ಹಣಮಂತಪ್ಪಾ ಗುಬ್ಬೇಡ, ಪ್ರಭು ತಂದೆ ಅಪ್ಪಾರಾವ ಪೂಜಾರಿ, ಫಿರೋಜ ತಂದೆ ಅಲ್ಲಿಸಾಬ, ರೇವಣಸಿದ್ದ ತಂದೆ ಶಿವಲಿಂಗಪ್ಪಾ ಗುತ್ತೇದಾರ, ಶಿವಕಿರಣ ತಂದೆ ಶ್ರೀಮಂತರಾವ ಪಾಟೀಲ. ಪಂಡಿತ ಖಾನಾಪೂರೆ, ರಾಜಶೇಖರ ಪಾಟೀಲ. ಚಂದ್ರಕಾಂತ ಭಕರೆ , ಮಲ್ಲಿನಾಥ ಭಕರೆ, ಬಸವರಾಜ ಛೌಲ , ಸಿದ್ದಾರಾಮ ಪಾಟೀಲ , ಶರಣಬಸಪ್ಪಾ ವಾಗೆ, ಮಲ್ಲಿನಾಥ ಬಿರಾಧಾರ , ವಿಶ್ವನಾಥ ಜಮಾದಾರ, ಪಂಡಿತ ಜಿಡಗೆ ಹಾಗು ಇನ್ನಿತರು 20-25 ಜನರು ಇವರೆಲ್ಲರೂ ಸಾ: ಪಡಸಾವಳಿ, ಸರಸಂಬಾ. ಗುಳ್ಳೊಳ್ಳಿ, ಮೋಘಾ (ಬಿ) ,ಆಳಂದ ,ಹೆಬಳಿ ಇವರೆಲ್ಲ ಬಿ.ಆರ್‌.ಪಾಟೀಲ ಬೆಂಬಲಿಗರು ರಾಮಚಂದ್ರ ಪಾಟೀಲ ರೊಂದಿಗೆ ಸ್ಕಾರ್ಪಿಯೊ ನಂ ಎಮ್‌‌ಎಚ್‌ 13 ಎಝ 8954 ಹಾಗು ಇನ್ನೊಂದು ಸ್ಕಾಪಿಯೋ ನಂ ಕೆಎ 32 ಎನ್‌‌ 4593 ವಾಹನಗಳು ಹಾಗು ಇನ್ನಿತರ ದ್ವಿ ಚಕ್ರ ವಾಹನಗಳು ರಸ್ತೆಯ ಮದ್ಯೆ ನಿಲ್ಲಿಸಿ ನಾವು ನಮ್ಮವರ ಕ್ರೋಜರ ವಾಹನದಲ್ಲಿ ಹೊಗುವಾಗ ರಾಮಚಂದ್ರ ಪಾಟೀಲನು ಬಂದು ನಮಗೆ ತಡೆದು ಏ ರಂಡಿ ಮಕ್ಕಳೆ ನನ್ನವಿರುದ್ದ ಪ್ರಚಾರ ಮಾಡುತ್ತಿರಿ ಏನೂ ಸೂಳೆ ಮಕ್ಕಳೆ ನಿಮಗೆ ಇವತ್ತು ಖಲ್ಲಾಸ ಮಾಡುತ್ತೇವೆ ನಮ್ಮ ವಾಹನದಲ್ಲಿ ಇದ್ದ ಶ್ರೀಮಂತ ಶಿರೂರೆ ಇವರಿಗೆ ವಾಹನದಿಂದ ಹೊರಗೆ ಎಳೆದು ಎದೆಯ ಮೇಲಿನ ಅಂಗಿಯನ್ನು ಹಿಡಿದು ತಂದಾಗ ಆನಂದರಾಯ ಗಾಯಕವಾಡ, ಇವರು ಬಿಡಿಸಲು ಹೋದಾಗ ಏ ರಂಡಿ ಮಗನೇ ಹೊಲೇಯ ನಿನ್ನದು ಬಹಳ ಆಗಿದೆ ಬೋಸಡಿ ಮಗನೇ ಹೊಲೆ ನೀ ಮಲ್ಲಣ್ಣಾಗ ಬಹಳ ಬೆಂಬಲ ಮಾಡುಗತ್ತಿದ ಇವತ್ತು ನೀ ನಮಗ ಚೋಲೊ ಸಿಕ್ಕಿದಿ ಇವತ್ತು ನಿನಗೆ ಇಲ್ಗಯೇ ಜೀವಂತ ಹುಳುತ್ತೇವೆ ಅಂತಾ ರಾಮಚಂದ್ರ ಪಾಟೀಲ ಮತ್ತು ಅವನ ಸಂಗಡಿಗರು ಎಲ್ಲರೂ ಕೊಲೇಯ ಮಾಡುವ ಉದ್ದೇಶದಿಂದ ಹಲ್ಲೆ ಮಾಡುತ್ತಿದ್ದಾಗ ನಾನು ಹಿಂದಿನ ಮೋಟರ ಸೈಕಲ ಮೇಲಿನಿಂದ ಇಳಿದು ನಮ್ಮ ಆನಂದರಾಯ ಗಾಯಕವಾಡರೊಂದಿಗೆ ಏಕೆ ಜಗಳ ಮಾಡುತ್ತಿರಿ ಅಂತಾ ಕೇಳಿದಾಗ ನೀ ನಮಗೆ ಏನು ಕೆಳತಿಯೋ ಮಗನೇ ರಾಜ ನಿಮ್ಮ ಹೊಲೇ ಬಹಳ ನಡೆದಿದೆ ಸೂಳೆ ಮಕ್ಕಳೆ ನಿಮಗೆ ಮೇಲೆ ಎಷ್ಟು ಹಣ ಕೊಟ್ಟಿನರೋ ಸುಳೆ ಮಕ್ಕಳೆ ಹೊಲೇರ ಅವನ ಹಿಂದ ಏಕ ತಿರಗಾಡುತ್ತಿರಿ ಅಂತಾ ರಾಮಚಂದ್ರ ಪಾಟೀಲ ಮತ್ತು ಅವನ ಸಂಗಡಿಗರು ನನಗೆ ಕೈಯಿಂದ ಹಾಗು ಬಡಿಗೆಯಿಂದ ಬೆನ್ನಿನ ಮೇಲೆ ಮತ್ತು ಮುಖದ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡುತ್ತಿದ್ದಾಗ ಕ್ರೋಜರ ವಾಹನದಲ್ಲಿ ಇದ್ದ ಪ್ರಬಾಕರ ನಾಗೂರೆ, ಶ್ರೀಮಂತ ನಾಗೂರೆ , ದರ್ಮರಾಜ ನಿಂಬರ್ಗಿ ಮತ್ತು ಮೈಹಿಬೂಬ ಗುಂಜೋಟಿ ಬಂದು ಅವರಿಂದ ಬಿಡಿಸಿದರು ಆಗ ರಾಮಚಂದ್ರ ಪಾಟೀಲ ಮತ್ತು ಸಂಗಡಿಗರು ನನ್ನ ದ್ವಿ ಚಕ್ರ ವಾಹನಕ್ಕೆ ಕೆಳಗೆ ಬಿಳಿಸಿ ವಾಹನಕ್ಕೆ ಕಲ್ಲಿನಿಂದ ಹೊಡೆದು ಜಖಂಗೊಳಿಸಿ ಹಾನಿ ಮಾಡಿರುತ್ತಾರೆ. ಇವತ್ತು ನಿಮಗೆ ಬಿಟ್ಟಿದೇವೆ ಇನ್ಒಮ್ಮೆ ಸರಿಕ್ಕರೆ ನಿಮಗೆ ಜೀವ ಸಹತಿ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಜೇವರ್ಗಿ ಠಾಣೆ : ಶ್ರೀ ಅರ್ಜುನ ತಂದೆ ಮರೆಪ್ಪ ಕೋಬಾಳಕರ್‌ ಸಾ : ವಿಧ್ಯಾನಗರ ಜೇವರಗಿ  ದಿನಾಂಕ 20.02.2016 ರಂದು ರಾಸಣಗಿ ಗ್ರಾಮದ ಶ್ರೀ. ವೀರಾಂಜನೇಯ ದೇವರ ದರ್ಶನಕ್ಕೆ ನನ್ನ ಕಾರ್‌ ನಂ ಕೆ.ಎ32ಎಮ್‌9980 ನೇದ್ದು ತೆಗೆದುಕೊಂಡು ಹೋಗಿ ಸದರಿ ಗ್ರಾಮದ ಶ್ರೀ ವೀರಾಂಜನೇಯ ದೇವಸ್ತಾನದ ಮುಂದೆ ನಿಂತಿದ್ದಾಗ 1) ಬಸವರಾಜ ತಂದೆ ಶಿವಪುತ್ರಪ್ಪ ಮೇಳಕುಂದಾ 2) ಶಿವಪುತ್ರ ತಂದೆ ಧರ್ಮರಾಜ ಮೇಳಕುಂದಾ  3) ದೇವಿಂದ್ರ ತಂದೆ ಶಿವಪುತ್ರ ಮೇಳಕುಂದಾ 4) ಶಿವಪುತ್ರ ತಂದೆ ಗೋಲ್ಲಾಳಪ್ಪ ಸಾ : ಎಲ್ಲರು ರಾಸಣಗಿ   ಇವರು ಕೂಡಿಕೊಂಡು ತಮ್ಮ ಟಾಟಾ ಸುಮೋ ವಾಹನ ನಂ ಕೆಎ39ಎಮ್‌524 ನೇದ್ದರಲ್ಲಿ ಬಂದು ನನ್ನ ಕಾರಿಗೆ ಡಿಕ್ಕಿಪಡಿಸಿದರು. ನಾನು ಅವರಿಗೆ ಯಾಕೆ ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದಿಯಾ ಅಂತ ಕೇಳಿದ ಕೂಡಲೆ ಆರೋಪಿತರೆಲ್ಲರು ಕೂಡಿಕೊಂಡು ಎಲೆ ಮಾದಿಗ ಸೂಳೆ ಮಗನೆ ನಿನ್ನ ಆಸ್ತಿ ನುಂಗಿದಂತೆ ನಿನಗು ಕೂಡ ನುಂಗುತ್ತೆನೆ ಅಂತ ಕೊಲೆ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಕಲ್ಲಪ್ಪ ತಂದೆ ಶಿವಕಾಂತ ಹೂಗಾರ ಸಾ|| ಹಳ್ಯಾಳ ಇವರು ಮೂರು ಜನ ಅಣ್ಣ ತಮ್ಮರಿದ್ದು ಮೊದಲನೆಯವನು ನಾನು, 2 ನೇಯವನು ಮಲ್ಲಪ್ಪ, 3 ನೇಯವನು ಅಶೋಕ ಅಂತಾ ಮೂರು ಜನರು ಅಣ್ಣ ತಮ್ಮರು ಇರುತ್ತೇವೆ. ನಾವು ಮೂರು ಜನರು ಅಫಜಲಪೂರ ಸೀಮಾಂತರದಲ್ಲಿ ಬರುವ ನಮ್ಮ ಹೊಲದಲ್ಲಿ ಮನೆ ಕಟ್ಟಿಕೊಂಡು ಒಟ್ಟಾಗಿಯೆ ಇರುತ್ತೇವೆ, ನಮ್ಮಂತೆ ನಮ್ಮ ಹೊಲದ ಪಕ್ಕದಲ್ಲಿ ನಮ್ಮ ಏರಡನೆ ಅಣ್ಣ ತಮ್ಮಕಿಯ ಹಣಮಂತ ತಂದೆ ಜಗದೇವಪ್ಪ ಹೂಗಾರ ಇವರ ಹೊಲವಿದ್ದು, ಅವನು ಸಹ ನಮ್ಮಂತೆ ಹೊಲದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುತ್ತಾನೆ, ಸದರಿ ಹಣಮಂತನಿಗೆ ನಾನು ಈಗ ಕೆಲವು ತಿಂಗಳ ಹಿಂದೆ ಕೈಗಡವಾಗಿ ಹಣ ಕೊಟ್ಟಿರುತ್ತೇನೆ. ನಾನು ಸದರಿ ಹಣವನ್ನು ಮರಳಿ ಕೊಡು ಅಂತಾ ಕೇಳಿದಾಗ, ಸದರಿ ಹಣಮಂತನು ನನಗೆ ಏನೊ ಸೂಳೆ ಮಗನೆ ಈಗ ನನಗೆ ಹಣ ಕೊಡಲು ಆಗುವುದಿಲ್ಲ ಏನು ಮಾಡಿಕೊಳ್ಳುತ್ತಿ ಮಾಡಿಕೊ ಅಂತಾ ಜಗಳ ಮಾಡುತ್ತಿರುತ್ತಾನೆ. ಆದರು ಸಹ ನಾನು ಪುನ ಪುನ ಅವನಿಗೆ ಹಣ ಕೇಳುತ್ತಿದ್ದರಿಂದ ಸದರಿ ಹಣಮಂತನು ನನಗೆ ಮಗನೆ ನೀನು ಹೀಗೆ ಹಣ ಕೇಳುತ್ತಾ ಇರು ನಿನಗೆ ಒಂದಲ್ಲಾ ಒಂದಿನ ನಿನ್ನ ಜಿವ ಸಹಿತ ಬಿಡುವುದಿಲ್ಲ ಅಂತಾ ಹೇಳಿರುತ್ತಾನೆ. ಹೀಗಿದ್ದು ಇಂದು ದಿನಾಂಕ 21-02-2016 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಕುಳಿತ್ತಿದ್ದಾಗ ಸದರಿ ಹಣಮಂತನು ನಮ್ಮ ಮೇಟಗಿಯ ಮುಂದಿನಿಂದ ತನ್ನ ಹೊಲದ ಕಡೆಗೆ ಹೋಗುತ್ತಿದ್ದನು, ಆಗ ನಾನು ಹಣಮಂತನಿಗೆ ನೀನು ತಗೆದುಕೊಂಡು ಹಣ ಯಾವಾಗ ಕೊಡುತ್ತಿ ಕೊಡು ಅಂತಾ ಕೇಳೀದೆನು, ಅದಕ್ಕೆ ಹಣಮಂತನು ಸಂಜೆ ಕೊಡುತ್ತೇನೆ ಅಂತಾ ಹೇಳಿ ಹೊದನು, ಅದರಂತೆ ರಾತ್ರಿ 9:30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಪಕ್ಕದ ಹೊಲದವರಾದ ಪ್ರಭು ರಾಠೋಡ ಹಾಗೂ ಪಂಡಿತ ರಾಠೋಡ ಮೂರು ಜನರು ನಮ್ಮ ಹೊಲದಲ್ಲಿರುವ ಮನೆಯ ಮುಂದೆ ಮಾತಾಡುತ್ತಾ ಕುಳಿತಿದ್ದಾಗ, ನನ್ನ ಜೋತೆಗೆ ಹಣದ ವಿಚಾರವಾಗಿ ಜಗಳ ಮಾಡುತ್ತಿದ್ದ ನಮ್ಮ ಏರಡನೆ ಅಣ್ಣ ತಮ್ಮಕಿಯ ಹಣಮಂತ ತಂದೆ ಜಗದೇವಪ್ಪ ಹೂಗಾರ ಈತನು ನಮ್ಮ ಮೇಟಗಿಯ ಮುಂದೆ ಬಂದು ನನ್ನನ್ನು ಕರೆದನು, ಆಗ ನಾನು ಹಣ ಕೊಡಲು ಕರೆಯುತ್ತಿದ್ದಾನೆ ಅಂತಾ ತಿಳಿದುಕೊಂಡು ನಾನು ಕುಳಿತ ಸ್ಥಳದಿಂದ ಎದ್ದು ಅವನ ಹತ್ತಿರ ಹೋಗಿ ಏನು ಅಂತಾ ವಿಚಾರಿಸುತ್ತಿದ್ದಾಗ, ಹಣಮಂತನು ಕತ್ತಲಲ್ಲಿ ಮಗನೆ ನನಗೆ ಹಣ ಕೇಳುತ್ತಿ, ನೀನು ಜಿವಂತ ಇದ್ದರೆ ಹಣ ಕೇಳಬೇಕಲ್ಲಾ ಅಂತಾ ಅಂದವನೆ ತನ್ನ ಕೈಯಲ್ಲಿದ್ದ ಚಾಕುದಿಂದ ನನ್ನ ಹೊಟ್ಟೆಗೆ ಹೊಡೆದನು, ಆಗ ನಾನು ಕೇಳಗೆ ಬಿದ್ದಾಗ ಹಣಮಂತನು ಅಲ್ಲಿಂದ ಕತ್ತಲಲ್ಲಿ ಓಡಿ ಹೊದನು, ಸದರಿ ಹಣಮಂತನು ನನ್ನ ಹೊಟ್ಟೆಗೆ ಚಾಕುವಿನಿಂದ ತಿವಿದರಿಂದ ನನ್ನ ಹೊಟ್ಟೆಯ ಕರಳುಗಳು ಹೊರಗೆ ಬಂದು ಬಾರಿ ರಕ್ತ ಸ್ರಾವ ಆಗುತ್ತಿತ್ತು, ಆಗ ಅಲ್ಲೆ ಇದ್ದ ಪಂಡಿತ ರಾಠೋಡ, ಪ್ರಭು ರಾಠೋಡ ಹಾಗೂ ಮನೆಯಲ್ಲಿದ್ದ ನನ್ನ ಹೆಂಡತಿ ಶಾಂತಾಬಾಯಿ ಹಾಗೂ ನನ್ನ ತಮ್ಮನ ಹೆಂಡತಿ ರೇಣುಕಾ ಇವರು ಬಂದು ನನಗೆ ನೀರು ಹಾಕಿದರು, ಅಷ್ಟೊತ್ತಿಗೆ ನನ್ನ ತಮ್ಮಂದಿರಾದ ಮಲ್ಲಪ್ಪ ಮತ್ತು ಅಶೋಕ ಇವರು ಬಂದು ನನ್ನನ್ನು ನಮ್ಮ ಮೋಟರ ಸೈಕಲ ಮೇಲೆ ಅಫಜಲಪೂರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ, ಸದರಿ ಹಣಮಂತ ತಂದೆ ಜಗದೇವಪ್ಪ ಹೂಗಾರ ಸಾ|| ಹಳ್ಯಾಳ ಈತನಿಗೆ ನಾನು ಹಣ ಕೊಟ್ಟಿದ್ದು, ಸದರಿ ಹಣವನ್ನು ನಾನು ಮರಳಿ ಕೊಡು ಅಂತಾ ಕೇಳಿದಕ್ಕೆ ಹಣಮಂತನು ನನ್ನ ಮೇಲೆ ದ್ವೇಷ ಮಾಡಿಕೊಂಡಿದ್ದು, ನಾನು ಹಣ ಕೊಡು ಅಂತಾ ಮರಳಿ ಮರಳಿ ಕೇಳುತ್ತಿದ್ದರಿಂದ ನನ್ನ ಮೇಲೆ ಸಿಟ್ಟು ಮಾಡಿಕೊಂಡು ನನ್ನನ್ನು ಕೋಲೆ ಮಾಡಬೆಕೆಂಬ ಉದ್ದೇಶದಿಂದ ನನ್ನ ಹೊಟ್ಟೆಗೆ ಹರಿತವಾದ ಚಾಕುವಿನಿಂದ ತಿವಿದು ಬಾರಿ ರಕ್ತಗಾಯ ಪಡಿಸಿ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ.ತುಕಾರಾಮ ತಂದೆ ದತ್ತು ಜಮಾದಾರ ಸಾ:ಶುಕ್ರವಾಡಿ ಇವರು ದಿನಾಂಕ 20/02/2016 ರಂದು ತಾಲ್ಲೂಕ , ಜಿಲ್ಲಾ ಪಂಚಾಯತಿ ಪ್ರಯುಕ್ತವಾಗಿ ನಾನು ಮದ್ಯಾಹ್ನ 3:30 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಭೂತ ನಂ 200 ನೇದ್ದರ ಬೌಂಡರಿ ಹೊರಗಡೆ ಇದ್ದಾಗ ಕಾಂಗ್ರಸ್‌ ಪಕ್ಷದ ಕಾರ್ಯಕರ್ತನಾದ ತುಳಜಾರಾಮ ಲಾಡಂತೆ ಇತನು ಓಟ ಹಾಕಲು ಒಳಗಡೆ ಹೊಗುವವರಿಗೆ ಕಾಂಗ್ರಸ್‌ ಪಕ್ಷದ ಕೈ ಗುರುತಿಗೆ ಓಟ ಹಾಕ್ರಿ ಅಂತಾ ಅನ್ನುತ್ತಿದ್ದಾಗ ಅದಕ್ಕೆ ನಾನು ಇಲ್ಲಿ ಯಾಕೆ ಅದಕ್ಕೆ ಇದಕ್ಕೆ ಹಾಕು ಅಂತಾ ಯ್ಯಾಕೆ ಹೆಳತಿ ಅಂತಾ ಅಂದಿದಕ್ಕೆ 1) ದೇವಿಂದ್ರಪ್ಪ ತಂದೆ ತುಳಜಾರಾಮ ಲಾಡಂತೆ 2) ತುಳಜಾರಾಮ ತಂದೆ ವಿಠಲ ಲಾಡಂತೆ 3) ಕುಪೇಂದ್ರ ತಂದೆ ವಿಠಲ ಲಾಡಂತೆ 4) ಶಾಂತಪ್ಪ ತಂದೆ ಸಿದ್ದಪ್ಪ ಹಾರಕೂಡೆ 5) ಉಮಾಕಾಂತ ತಂದೆ ವಿಠಲ ಲಾಡಂತೆ 6) ಬಸವರಾಜ ತಂದೆ ದೂಳಪ್ಪ ಹಾರಕೂಡೆ 7) ಪ್ರಲಾದ ತಂದೆ ತುಳಜಾರಾಮ ಲಾಡಂತೆ ಎಲ್ಲರೂ ಅಕ್ರಮ ಕೂಟ ಮಾಡಿಕೊಂಡು ಬಂದು ನಮಗೆ ಬೇಕಾದವರಿಗೆ ಚಿನ್ನೆ ತೋರಿಸಿ ಹಾಕಲು ಹೇಳುತ್ತಿ ನಿನು ಯ್ಯಾಕೆ ಬೇಡ ಅಂತಿ ರಂಡಿ ಮಗನೇ ಅಂತಾ ಬೈದು ಕುಪೇಂದ್ರ ಮತ್ತು ಶಾಂತಪ್ಪ ಒತ್ತಿ ಹಿಡಿದಾಗ ದೇವಿಂದ್ರ ಲಾಡಂತೆ ಇತನು ಕಲ್ಲನಿಂದ ತಲೆಯ ಹಿಂದುಗಡೆ ಹೊಡೆದಾಗ ಭಾರಿ ರಕ್ತಗಾಯವಾಗಿ ನಾನು ಕೆಳಗಡೆ ಬಿದ್ದಾಗ ತುಳಜಾರಾಮ , ಉಮಾಕಾಂತ ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ ಸೂರ್ಯಕಾಂತ ರಂಜೇರಿ ಇತನು ಬಿಡಿಸಲು ಬಂದಾಗ ಬಸವರಾಜ ಮತ್ತು ಪ್ರಲಾದ ಇತನು ಕಟ್ಟಿಗೆ ತೆಗೆದುಕೊಂಡು ಸೂರ್ಯಕಾಂತನಿಗೆ ತೆಲೆಗೆ ಹೊಡೆದು ರಕ್ತಗಾಯಗೊಳಿಸಿದಾಗ ಅಲ್ಲಿಯೇ ಇದ್ದ ಜೈರಾಜ ಮಾನೆ ಮತ್ತು ಮಸಣಪ್ಪಾ ಪಾಟೀಲ ರವರು ಬಂದು ಬಿಡಿಸುವಾಗ ಮಕ್ಕಳೆ ಇವತ್ತು ಉಳಿದಿರಿ ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ವಿಶ್ವನಾಥ ತಂದೆ ಹಣಮಂತ ಗುಬ್ಬೆವಾಡ ಮು: ಸರಸಂಬಾ ತಾ : ಆಳಂದ ಇವರು ದಿನಾಂಕ: 18/02/2016 ರಂದು ಸಾಯಂಕಾಲ 08 ಗಂಟೆಗೆ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕ ಪಂಚಾಯತಿಯ ಚುನಾವಣೆ ನಿಮಿತ್ಯ ಪೊಲೀಂಗ್ ಎಜೆಂಟ್ ಮಾಡುವ ಕುರಿತು ಚಿಂಚೋಳ್ಳಿ (ಬಿ) ಗ್ರಾಮಕ್ಕೆ ನಾನು ಹಾಗೂ ಆರ್.ಕೆ.ಪಾಟೀಲ, ರಮೇಶ ಪಾಟೀಲ ಹೊದಲೂರ, ವೈಜನಾಥ ಪಾಟೀಲ ಪಡಸಾವಳಗಿ, ಲಾಯಕ ಪಟೇಲ್ ಹೆಬಳಿ ಹಾಗೂ ಇನ್ನೀತರರು ಕೂಡಿ ಹೋಗಿ ಅಲ್ಲಿ ಪೋಲಿಂಗ್ ಎಜೆಂಟ್ ಮಾಡುವ ಬಗ್ಗೆ ಮಾತಾಡಿ ವಾಪಸ ಸರಸಂಬಾಕ್ಕೆ ಬರುತ್ತಿರುವಾಗ ಪಡಸಾವಳಗಿ ಗ್ರಾಮದಲ್ಲಿ ಕೂಡಾ ನಮ್ಮ ಕಾರ್ಯಕರ್ತರಿಗೆ ಚುನಾವಣೆ ವಿಷಯದಲ್ಲಿ ಮಾತಾಡಿ ಹೋಗುವಾಗ ದಾರಿಯಲ್ಲಿ ಅಂದರೆ ಪಡಸಾವಳಗಿ ಗ್ರಾಮ ದಾಟಿ 1 ಫರ್ಲಾಂಗ್ ಅಂತರದಲ್ಲಿ ನಾವು ಹೋಗುವಾಗ ಹಿಂದಿನಿಂದ ಬಹಳ ಸೈಕಲ ಮೋಟರ್ ಗಳು ಮತ್ತು ಎರಡು ಜೀಪಗಳು ನಮ್ಮ ಹಿಂದುಗಡೆಯಿಂದ ಬರುವುದು ಕಂಡು ನಮ್ಮ ಜೀಪ ಡ್ರೈವರ ಸ್ವಾಮಿ ಸೈಡ ಕೊಡುತ್ತಿರುವಾಗ ಯ್ಯಾರೊ ಒಬ್ಬರು ಆರ್‌.ಕೆ ಪಾಟೀಲ ಇದ್ದರೆ ಅವನಿಗೆ ಖತಮ ಮಾಡ್ರಿ ಅಂತಾ ಅನ್ನುವುದು ಕೇಳಿಸಿತು ಆಗ ನಾನು ಆರ್‌.ಕೆ ಪಾಟೀಲರಿಗೆ ಗಾಡಿಯಿಂದ ಇಳೀದು ಓಡ್ರಿ ಅಂತಾ ಹೇಳಿದೆನು.ಅವರು ಗಾಡಿಯಿಂದ ಇಳಿದು ಅಡವಿಯಲ್ಲಿ ಓಡಿದರು. ನಾನು ಕೂಡಾ ಓಡಬೇಕೆನ್ನುವಷ್ಟರಲ್ಲಿ ನಮಗೆ ಕಲ್ಲಿನಿಂದ ಹೊಡೆಯುತ್ತಿದ್ದರು. ಕಲ್ಲುಗಳು ನಮ್ಮ ಸ್ಕಾರ್ಪಿಯೊ ಜೀಪ ನಂ ಎಮ್‌ಎಚ್‌ 13 ಎಝ್‌ 8954 ದ ಸೈಡ ಗ್ಲಾಸ ಒಡೆದು ಹಾನಿಗೊಂಡಿದ್ದು ಅಲ್ಲದೆ ಬಾಗಿಲು ಗ್ಲಾಸಗಳು ಕೂಡಾ ಹಾನಿಗೊಂಡಿದ್ದು ಅಲ್ಲದೆ ಎದುರಿನ ಗ್ಲಾಸ ಕೂಡಾ ಹಾನಿಗೊಂಡಿರುತ್ತದೆ. ನನ್ನ ಎಡಗೈಗೆ ಕಲ್ಲಿನ ಎಟು ಮುಂಗೈ ಮೇಲ್ಭಾಗಕ್ಕೆ ಕಲ್ಲಿನ ಎಟಿನಿಂದ ಭಾರಿ ಗಾಯವಾಗಿರುತ್ತದೆ. ಅಲ್ಲದೇ ನಮಗೆ ಹೊಡೆದವರನ್ನು ಗುರುತಿಸಲಾಗಿ 1) ಮಲ್ಲಣ್ಣಾ .ಡಿ.ನಾಗೂರೆ, 2)ಶ್ರೀಮಂತ ಎ ಬೆಳಮ 3) ಪ್ರಭಾಕರ ನಾಗೂರೆ 4) ಶ್ರೀಮಂತ ನಾಗೂರೆ 5) ಪ್ರಭಾಕರ ಗುತ್ತೇದಾರ ಅಲ್ಲದೇ 6) ಧರ್ಮರಾಜ ನಿಂಬರ್ಗಿ 7) ಸಂಜು ಶೇರಿಕಾರ 8) ಚಿದಾನಂದ ಸ್ವಾಮಿ 9) ಮೈಬೂಬ ಗುಂಜೊಟಿ ಸಾ: ಪಡಸಾವಳಗಿ ಇದ್ದು ಅವರನ್ನು ಜೀಪಿನ ಬೆಳಕಿನಲ್ಲಿ ಗುರ್ತಿಸದಲ್ಲದೇ ನಮ್ಮೊಂದಿಗೆ ಇದ್ದ ವೈಜುನಾಥ ಪಾಟೀಲ ಮತ್ತು ಲಾಯಕ ಪಟೇಲ ಹೆಬಳಿಯವರು ಉಳಿದವರಾದ ಮಲ್ಲಿನಾಥ ಪೋತೆ , ರಾಮಣ್ಣಾ ಜಾದವ , ಬಸವರಾಜ ತಂದೆ ವಿಠಲ ಜಮಾದಾರ, ಬುಜಿಂಗ ಸರಸಂಬಾ ಹಾಗು ಹೆಬಳಿ ಗ್ರಾಮದ ಶಪೀಕ ರಪಿಯೊದ್ದಿನ್‌ , ಕಲಿಪ ಪಟೆಲ, ಶಪೀಕ ಖಾಜಾಸಾಬ , ಇಸಾಕ ಅಬ್ಬಾಸ ಅಲಿ, ಮೈಬೂಬ ದಸ್ತಗಿರಿ ಶೇಖ , ಮೈಬೂಬ ಖಯಂ ಪಟೆಲ , ಅಲ್ಲಾವುದ್ದಿನ್‌ ಇಬ್ರಾಹಿಂ ಶೇಖ ಅಂತಾ ಹೆಸರು ಗುರ್ತಿಸಿರುತ್ತಾರೆ.  ಇನ್ನು ಕೆಲವು ಜನರು ಇದ್ದು ಅವರನ್ನು ನೋಡಿದರೆ ಗುರ್ತಿಸುತ್ತೇನೆ. ನಮ್ಮ ಮೇಲೆ ಅಲ್ಲೆ ಮಾಡಲು ಬಂದ ಕ್ರೋಜರ ಜೀಪ ನಂ ಕೆಎ 32 ಎನ್‌ 3198 ಇದ್ದುದಲ್ಲದೇ ಕೆಂಪು ಬಣ್ಣದ ಸೈಕಲ ಮೋಟರ ಎಮ್‌ಎಚ್‌ 14 ಎ 2285 ಮತ್ತು ಮೋಟರ ಸೈಕಲ ಕೆಎ 32 ಎಸ್‌‌ 4416 ಗಾಡಿ ಅಂದರೆ ಮೋಟರ ಸೈಕಲದವರು ತಮ್ಮ ವಾಹನ ನಿಲ್ಲಿಸಿ ಕಲ್ಲನಿಂದ ಹೊಡೆದು ಗಾಯಗೊಳಿಸಿದಲ್ಲದೇ ನಮ್ಮ ಸ್ಕಾಪಿರ್ಯೊ ಜೀಪ ಹಾನಿಗೊಳಿಸಿದ್ದು ಅದೆ . ಜೀಪಗೆ ಹಾನಿ ಸುಮಾರು 30,000/- ರೂಪಾಯಿ ಆಗಬಹುದು ಮಲ್ಕಣ್ಣಾ ನಾಗೂರೆ ರವರು ಆರ್‌.ಕೆ.ಪಾಟೀಲರಿಗೆ ಮುಗಿಸಿ ಬಿಡಬೇಕೆಂದರೆ ತಪ್ಪಿಸಿಕೊಂಡು ಹೋಗಿದ್ದಾನೆ ನೋಡಾಮಿ ಅಂತಾ ಅನ್ನುತ್ತಿದ್ದನು. ಮುಂದೆ ಹಿಂದೆನಿಂದ ಸ್ಕಾರ್ಪಿಯೊ ನಂ ಕೆಎ 32 ಎನ್‌ 4593 ಬುರುವುದನ್ನು ನೋಡಿ ಆರೋಪಿತರೆಲ್ಲರೂ ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ಕರಣ ದಾಖಲಾಗಿದೆ.  
ಕಳವು ಪ್ರಕರಣ :
ಮುಧೋಳ ಠಾಣೆ : ಶ್ರೀ ಶಂಕರ ತಂದೆ ಛತ್ರಪತಿ ಗಡಾಳೆ ಸಾ|| ಮುಧೋಳ ಇವರು ಮುಧೋಳ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಈಗ ಸುಮಾರು 10 ವರ್ಷಗಳ ಹಿಂದೆ ದೇವಸ್ಥಾನದ ಕಮೀಟಿಯನ್ನು ರಚನೆಮಾಡಿದ್ದು ಅವಾಗಿನಿಂದ ನಾನು ಸದರಿ ಕಮಿಟಿಯ ಅಧ್ಯಕ್ಷನಾಗಿ ಕೆಲಸಮಾಡುತ್ತಿದ್ದೆನೆ. ನಮ್ಮ ಮನೆಯು ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದು ನಿನ್ನೆ ದಿನಾಂಕ 17-02-2016 ರಂದು ರಾತ್ರಿ 10-30 ಗಂಟೆಯ ವರೆಗೆ ದೇವಸ್ಥಾನದಲ್ಲಿದ್ದು ನಂತರ ನಾನು ನಮ್ಮ ಮನೆಗೆ ಹೋಗಿ ಊಟಮಾಡಿ ಮಲಗಿಕೊಂಡಿದ್ದು ದಿನಾಂಕ 18-02-2016 ರಂದು ಬೆಳಗ್ಗೆ 5-30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದಾಗ ನಮ್ಮ ಊರಿನ ನಾಗನಾಥ ತಂದೆ ಹಣಮಂತ ಚಿಕಣಿ ಇವರು ನಮ್ಮ ಮನೆಗೆ ಬಂದು ನನಗೆ ಎಬ್ಬಿಸಿ ಹೇಳಿದ್ದೆನೆಂದರೆ ನಾನು ಎಂದಿನಂತೆ ದೇವಸ್ಥಾನಕ್ಕೆ ಪೂಜೆಮಾಡಲು ಬಂದು ದೇವಸ್ಥಾನದ ಓಳಗೆ ಹೋಗಿ ನೋಡಲಾಗಿ ದೇವಸ್ಥಾನದ ಹೊರಗಿನ ಬಾಗಿಲಿಗೆ ಹಾಕಿದ ಕೊಂಡಿಯನ್ನು ಮುರಿದು ಬಾಗಿಲು ತೆರೆದಿದ್ದು ಗರ್ಭಗುಡಿಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಒಳಹೋಗಿ ಒಳಗಡೆ ಇರುವ ಒಂಬತ್ತು ಹೆಡೆಯ ಹಾವಿನ ಮೂರ್ತಿಯೋಂದಿಗಿರುವ ಪಂಚಲೋಹದ ರಾಮಲಿಂಗೇಶ್ವರ ದೇವರ ಮೂರ್ತಿ ಕಾಣಲಿಲ್ಲಾ ನಂತರ ಒಳಗಡೆ ಇಟ್ಟಿರಬಹುದು ಅಂತಾ ಒಳಗೆಲ್ಲಾ ಹೋಗಿ ನೋಡಲಾಗಿ ಎಲ್ಲಿಯೂ ಕಂಡಿರುವದಿಲ್ಲಾ ಅದಕ್ಕೆ ನಾನು ಗಾಬರಿಗೊಂಡು ನಿಮ್ಮ ಹತ್ತಿರ ಬಂದಿರುತ್ತೆನೆ ಅಂತಾ ತಿಳಿಸಿದನು. ನಂತರ ನಾನು ದೇವಸ್ಥಾನಕ್ಕೆ ಹೋಗಿ ನೋಡಲಾಗಿ ದೇವಸ್ಥಾನದ ಹೊರಗಿನ ಬಾಗಿಲಿಗೆ ಹಾಕಿದ ಕೊಂಡಿಯನ್ನು ಮುರಿದು ಬಾಗಿಲು ತೆರೆದಿದ್ದು ಗರ್ಭಗುಡಿಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದಿದ್ದು ಕಂಡುಬಂದಿದ್ದು ನಾನು ಒಳಹೋಗಿ ನೋಡಲಾಗಿ ಒಂಬತ್ತು ಹೆಡೆಯ ಹಾವಿನ ಮೂರ್ತಿಯೋಂದಿಗಿರುವ ಪಂಚಲೋಹದ ರಾಮಲಿಂಗೇಶ್ವರ ದೇವರ ಮೂರ್ತಿ ಸುಮಾರು 30 ಕೆಜಿ ತೂಕದ ಅಂದಾಜು ಕಿಮ್ಮತ್ತು ಸುಮಾರು 50,000 ರೂಪಾಯಿ ಕಿಮ್ಮತ್ತಿನ ದೇವರ ಮೂರ್ತಿ ಕಳುವಾಗಿದ್ದು ಕಂಡು ಬಂದಿರುತ್ತದೆ. ನಂತರ ನಾನು ಸದರಿ ವಿಷಯವನ್ನು ನಮ್ಮ ಕಮೀಟಿಯ ಇತರ ಸದಸ್ಯರಿಗೆ ತಿಳಿಸಿದ್ದು ಅವರು ದೇವಸ್ಥಾನಕ್ಕೆ ಬಂದು  ನಾವೆಲ್ಲರೂ ಸೇರಿ ಈ ಬಗ್ಗೆ ಅಲ್ಲಿದ್ದ ದೇವಸ್ಥಾನದ ಪೂಜಾರಿಯಾದ ದೊಡ್ಡ ನರಸಿಂಹಲು ಪೂಜಾರಿ ಯವರಿಗೆ ವಿಚಾರಿಸಲು ನಾನು ರಾತ್ರಿ 2-00 ಗಂಟೆಯ ಸುಮಾರಿಗೆ ಏಕಿ ಮಾಡಲು ಎದ್ದಾಗ ಪೊಲೀಸರು ಗಸ್ತಿನಲ್ಲಿ ಬಂದಿದ್ದು ಈ ಸಮಯದಲ್ಲಿ ಯಾವುದೇ ಕಳ್ಳತನವಾಗಿರುವದಿಲ್ಲಾ ಅಂತಾ ತಿಳಿಸಿದನು. ಕಾರಣ ಇಂದು ದಿನಾಂಕ 18-02-2016 ರಂದು ರಾತ್ರಿ 2-00 ಗಂಟೆಯಿಂದ ದಿನಾಂಕ 18-02-2016 ರ ಬೆಳಗ್ಗಿನ ಜಾವ 5-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಹೊರಗಿನ ಬಾಗಿಲಿಗೆ ಹಾಕಿದ ಕೊಂಡಿಯನ್ನು ಮುರಿದು ಬಾಗಿಲು ತೆರೆದು ಗರ್ಭಗುಡಿಯ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಒಳಗಡೆ ಇದ್ದ ಸುಮಾರು 30 ಕೆಜಿ ತೂಕದ ಅಂದಾಜು ಸುಮಾರು 50,000 ರೂಪಾಯಿ ಕಿಮ್ಮತ್ತಿನ ದೇವರ ಮೂರ್ತಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.