Police Bhavan Kalaburagi

Police Bhavan Kalaburagi

Wednesday, June 30, 2021

BIDAR DISTRICT DAILY CRIME UPDATE 30-06-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-06-2021

 

ಬಗದಲ್ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 03/2021, ಕಲಂ. 174 ಸಿ.ಆರ್.ಪಿ.ಸಿ :-

ಅಂಜಮ್ಮಾ ಗಂಡ ಸಿದ್ದಪ್ಪಾ ಸಿರಗಾನೋರ ವಯ: 42 ವರ್ಷ, ಜಾತಿ: ಎಸ್.ಸಿ, ಮಾದಿಗ, ಸಾ: ಬಗದಲ ರವರ ಗಂಡನಾದ ಸಿದ್ದಪ ತಂದೆ ತಿಪ್ಪಣ್ಣ ಸಿರಗಾನೋರ ವಯ: 47 ವರ್ಷ ರವರು  ಒಕ್ಕಲುತನ ಕೆಲಸಕ್ಕಾಗಿ ಮನ್ನಳ್ಳಿ ಡಿ.ಸಿ.ಸಿ ಬ್ಯಾಂಕನಿಂದ 50,000/- ರೂಪಾಯಿ ಹಾಗೂ ಸ್ವ-ಸಹಾಯ ಸಂಘಗಳಿಂದ ಕೂಡ ಸಾಲ ಮಾಡಿದ್ದು ಇರುತ್ತದೆ ಹಾಗೂ ದಿನಾಂಕ 21-06-2021 ರಂದು ಮಗಳ ಮದುವೆ ಕೂಡ ಸಾಲ ಮಾಡಿದಯೇ ಮಾಡಿರುತ್ತಾರೆ, ಸದರಿ ಸಾಲವನ್ನು ಹೇಗೆ ತಿರಿಸುವುದೆಂದು ಚಿಂತೆ ಮಾಡಿ ದಿನಾಂಕ 29-06-2021 ರಂದು ಬಗದಲ ಮನ್ನಾಖೇಳಿ ರಸ್ತೆಯ ಅಮೃತರಾವ ಪಾಟೀಲ ಇವರಿಗೆ ಸೇರಿರುವ ತೆರೆದ ಬಾವಿಗೆ ಬಿದ್ದು ಮರಣ ಹೊಂದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 126/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 29-06-2021 ರಂದು ಕೊಡಂಬಲ ಗ್ರಾಮದ ಲಕ್ಷ್ಮೀ ಮಂದಿರ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕರೆದು ಅವರಿಗೆ ಒಂದು ರೂಪಾಯಿ ನೀಡಿರಿ ಮಟಕದ ನಂಬರ ಹತ್ತಿದರೆ ಒಂದು ರೂಪಾಯಿಗೆ 80/- ರೂ. ನೀಡುತ್ತೇವೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಚೀಟಿ ಬರೆದುಕೋಡುತ್ತಿದಾರೆಂದು ಮಹಾಂತೇಶ ಲಂಬಿ ಪಿ.ಎಸ್. ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಕೊಡಂಬಲ ಗ್ರಾಮದ ಲಕ್ಷ್ಮೀ ಮಂದಿರ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಕೇಶು ತಂದೆ ಬಸವರಾಜ ಚೌವಾಣ, ವಯ: 34 ವರ್ಷ, ಜಾತಿ: ಲಮಾಣಿ, ಸಾ: ಮಳಚಾಪೂರ ತಾಂಡಾ, ತಾ: ಕಮಲಾಪೂರ, ಜಿ: ಕಲಬುರ್ಗಿ ಇತನು ಒಂದು ಮೋಟಾರ ಸೈಕಲ್ ಹತ್ತಿರ ನಿಂತು ಮಟಕಾ ಚೀಟಿ ಬರೆದುಕೊಡುವುದನ್ನು ನೋಡಿ ಖಚಿತ ಮಾಡಿಕೊಂಡು ಆತನ ಮೇಲೆ ಎಲ್ಲರೂ ದಾಳಿ ಮಾಡಿ ಹಿಡಿದು ಆತನ ಅಂಗ ಶೋಧನೆ ಮಾಡಲು ಆತನ ಜೇಬಿನಿಂದ 1) ಒಂದು ಬಾಲ ಪೇನ್, 2) 5 ನಂಬರ ಬರೆದ ಮಟಕಾ ಚೀಟಗಳು, 3) ನಗದು ಹಣ 23,200/- ರೂ. ಮತ್ತು 4) ಒಂದು ರೆಡಮಿ ಮೋಬೈಲ್ .ಕಿ 5000/- ರೂ. ಸಿಕ್ಕಿದ್ದು ಹಾಗೂ ಅಲ್ಲಿಯೇ ಇದ್ದ ಒಂದು ಕಪ್ಪು ಬಣ್ಣದ ಹಿರೋ ಹೊಂಡಾ ಮೋಟಾರ್ ಸೈಕಲ ನಂ. ಕೆಎ-27/ವಿ-9049, .ಕಿ 25,000/- ರೂ. ನೇದವುಗಳನ್ನು ಜಪ್ತಿ ಮಾಡಿಕೊಂಡು, ಆರೋಪಿಗೆ ವಿಚಾರಿಸಲು ಆತನು ಮಟಕಾದ ನಂಬರ ಚೀಟಿ ಬುಕ್ಕಿಗಳನ್ನು ಬರೆದುಕೊಂಡು ಅವುಗಳನ್ನು ವಾಟ್ಸಪ ನಂ. 9606206297 ನಿಂದ ವೀರಣ್ಣಾ ತಂದೆ ಅಡೆಪ್ಪಾ ಬರ್ಲಾ, ವಯ: 46 ವರ್ಷ, ಸಾ: ಮಾರ್ಖಂಡೇಶ್ವರ ಗಲ್ಲಿ ಚಿಟಗುಪ್ಪಾ ರವರ ವಾಟ್ಸಪ ನಂ. 8296222751 ನೇದಕ್ಕೆ ಹಾಗು ಪವನ ತಂದೆ ರಮೇಶ ಬಾಬಡಗಿ ವಯ: 25 ವರ್ಷ, ಸಾ: ಬನಶಂಕರಿ ಕಾಲೋನಿ ಚಿಟಗುಪ್ಪಾ ರವರ ವಾಟ್ಸಪ ನಂ. 9353211268 ನೇದಕ್ಕೆ ಕಳುಹಿಸುತ್ತಿದ್ದು, ಮಟಕಾ ಬುಕ್ಕಿಯಿಂದ ಬಂದ ಹಣವನ್ನು 2-3 ದಿನಗಳಿಗೊಮ್ಮೆ ನಾನೇ ಚಿಟಗುಪ್ಪಾಕ್ಕೆ ಹೋಗಿ ಪವನ ಹಾಗು ವೀರಣ್ಣಾ ರವರಿಗೆ ನೀಡುವುದಾಗಿ ತಿಳಿಸಿದ್ದು, ಅದಕ್ಕೆ ಅವರು ನನಗೆ ತಿಂಗಳಿಗೆ 15 ಸಾವಿರ ಸಂಬಳ ಹಾಗು ಪ್ರತಿ ದಿನ 500/- ರೂ. ಭತ್ಯೆ ನೀಡುತ್ತಾರೆಂದು ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಅಪರಾಧ ಸಂ. 74/2021, ಕಲಂ. 457, 380 ಐಪಿಸಿ :-

ದಿನಾಂಕ 28-06-2021 ರಂದು 210 ಗಂಟೆಯಿಂದ ದಿನಾಂಕ 29-06-2021 ರಂದು 0500 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಬಿ...ಕಾ.ನಿ ಕಾರ್ಖಾನೆಮೀಲ್ ಹೌಸ್ ಸಮೀಪ ಇರುವ ಬಗ್ಯಾಸ್ ಎಲಿವೇಟರ್ದ ಕಬ್ಬಿಣದ ಚೈನ್ .ಕಿ 70,000/- ರೂ. ಹಾಗೂ ಗೇರ್, ಕಪ್ಲಿಂಗ್ಸ್‌, ನಟ್ ಬೋಲ್ಟ್ಅ.ಕಿ 60,000/- ರೂ., ಹೀಗೆ ಎಲ್ಲವುಗಳ ಒಟ್ಟು .ಕಿ 01,30,000/- ರೂಪಾಯಿ ಬೆಲೆ ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 127/2021, ಕಲಂ. 457, 380 ಐಪಿಸಿ :-

ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳಿಖೇಡ ಸಾ: ನೌಬಾದ, ಬೀದರ ರವರು ಮಾಣಿಕರಾವ ನಿಶಾ ಸೆಕ್ಯೂರಿಟಿ ಸರ್ವಿಸಸ್ ಪ್ರಾ.ಲಿ ನಲ್ಲಿ ಪೆಟ್ರೋಲಿಂಗ ಸೂಪರವೈಜ ಅಂತ ಬೀದರ ಜಿಲ್ಲೆಯಲ್ಲಿರುವ ಸುಮಾರು 269 ಟವರಿನ ಪೆಟ್ರೊಲಿಂಗ ನೋಡಿಕೊಳ್ಳುತ್ತಿದ್ದು, ಹೀಗಿರಲು ದಿನಾಂಕ 29-06=2021 ರಂದು 0430 ಗಂಟೆಗೆ ವಳಖಿಂಡಿ ಗೋಪುರದ ಅಲಾರಾಮ ಬಂದ ಕೂಡಲೇ ತಕ್ಷಣ ಗೋಪುರಕ್ಕೆ ನಿಯೋಜಿಸಿದಂತಹ ಟೆಕ್ನಿಶಿಯನ ಆನಂದ ರವರ ಮೋಬೈಲ್ ನಂ. 7760983426 ನೇದಕ್ಕೆ ಕರೆ ಮಾಡಿ ವಳಕಿಂಡಿ ಟಾವರಿನ ಅಲಾರಾಮ ಬಂದಿದೆ ತಕ್ಷಣ ಹೋಗಿ ನೋಡಲು ತಿಳಿಸಿದಾಗ ಆನಂದ ಟೆಕ್ನಿಷನ ಸದರಿ ಗೊಪುರಕ್ಕೆ ಹೋಗಿ ನೋಡಿ ತಿಳಿಸಿದೆನೆಂದರೆ (ಆಃಆಖ901-I-1072839) ಗೂಪುರದ ಬಾಗಿಲು ಕೀಲಿ ಮುರಿದು  ಯಾರೋ ಅಪರಿಚಿತ ಕಳ್ಳರು ಗೋಪುರದ ಒಳಗೆ ಹೋಗಿ ಗೋಪೂರಕ್ಕೆ ಅಳವಡಿಸಿದ ಅಮರರಾಜ ಕಂಪನಿಯ 24 ಬ್ಯಾಟರಿಗಳನ್ನು ಯಾರೋ ಅಪರಿಚಿತರು ಕೋಣೆಯ ಬೀಗ ಮುರಿದು ಕೊಣೆಯಲ್ಲಿ ಅಳವಡಿಸಿದಂತಹ 24 ಬ್ಯಾಟರಿಗಳು ಅ.ಕಿ 24,000/- ರೂ. ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.