Police Bhavan Kalaburagi

Police Bhavan Kalaburagi

Tuesday, February 18, 2020

BIDAR DISTRICT DAILY CRIME UPDATE 18-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-02-2020

ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂ. 22/2020, ಕಲಂ. 3 ಕರ್ನಾಟಕ ಓಪನ್ ಪ್ಲೇಸ್ ಡಿಸಫಿಗರಮೆಂಟ್  ಕಾಯ್ದೆ 1951 & 447 ಐಪಿಸಿ :-
ಫಿರ್ಯಾದಿ ರಾಜಶೇಖರ ತಂದೆ ಬಸವರಾಜ ಮಠ ಸಯಾಯಕ ಕಾರ್ಯನಿರ್ವಾಹಕ ಅಭಿಯಂತರರು, ವಯ: 55 ವರ್ಷ, ಸಾ: ನಗರ ಸಭೆ ಬೀದರ ರವರು ಬೀದರ ತಾಲೂಕಿನ ಗೋರನಳ್ಳಿ ಗ್ರಾಮದ ಸರ್ವೆ ನಂ. 1/2 ನೇದರಲ್ಲಿ ಕರ್ನಾಟಕ ಸರಕಾರವು ಬೀದರ ನಗರ ಸಭೆಗೆ ಆಶ್ರಯ ಯೋಜನೆ ಅಡಿಯಲ್ಲಿ ಜಮಿನು ಮಂಜೂರು ಮಾಡಿದ್ದು, ಸದ್ಯ ಸದರಿ ಜಮೀನು ಕರ್ನಾಟಕ ಸರಕಾರ ಬೀದರ ನಗರ ಸಭೆಯ ಅಧೀನದಲ್ಲಿದ್ದು ಅಲ್ಲದೇ ಬಗ್ಗೆ ಬೀದರ ತಹಶೀಲ್ ಕಾರ್ಯಾಲಯದಲ್ಲಿ ಪಹಣಿ ಪತ್ರಿಕೆಯಲ್ಲಿ ಸಹ ಕರ್ನಾಟಕ ಸರ್ಕಾರ ಮುನಸಿಪಲ್ ಇಎಮ್ಇ ಬೀದರ ಆಶ್ರಯ ಯೋಜನೆಗೆ ಅಂತಾ ನಮೂದಿದು ಇದ್ದು, ದಿನಾಂಕ 17-2-2020 ರಂದು ಫಿರ್ಯಾದಿಯು ಸದರಿ ಜಮೀನಿಗೆ ಭೇಟಿ ನೀಡಿದಾಗ ಅದರಲ್ಲಿ ತಗ್ಗು ತೋಡಿ ಬಾಬಾ ಸಾಹೇಬ ಅಂಬೇಡ್ಕರ ರವರ ಭಾವಚಿತ್ರವುಳ್ಳ ದ್ವಜವನ್ನು ನೆಟ್ಟಿದ್ದು ಅಲ್ಲಿ ವಿಚಾರಿಸಲು ತಿಳಿದು ಬಂದಿದ್ದೆನೆಂದರೆ ಆರೋಪಿ ನಾಮದೇವ @ ರಾಮ ಮಾಸ್ಟರ ತಂದೆ ಸಿದ್ರಾಮಪ್ಪಾ ಸಾ: ಗೊರನಳ್ಳಿ ಇವರು ಸದರಿ ಜಮೀನಿನಲ್ಲಿ ಅಪರಾಧಿಕ ಉದ್ದೇಶದಿಂದ ದಿನಾಂಕ 16-02-2020 ರಂದು 2300 ಗಂಟೆಯಿಂದ ದಿನಾಂಕ 17-2-2020 ರಂದು 0600 ಗಂಟೆಯ ಅವಧಿಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಅನಧಿಕೃತವಾಗಿ ಗೊರನಳ್ಳಿ ಗ್ರಾಮ ಸರ್ವೆ ನಂ. 1/2 ರಲ್ಲಿ ತಗ್ಗು ತೋಡಿ ಸರಕಾರಿ ಜಾಗೆಯನ್ನು ಕಬಳಿಸುವ ಉದ್ದೇಶದಿಂದ ಕಬ್ಬಿಣದ ರಾಡಿಗೆ ನೀಲಿ ಬಣ್ಣ ಬಳಿದು ಡಾ: ಬಿ.ಆರ್ ಅಂಬೇಡ್ಕರ ರವರ ಭಾವಚಿತ್ರವುಳ್ಳ ನೀಲಿ ಬಣ್ಣದ ದ್ವಜವನ್ನು ನೆÀಟ್ಟಿದ್ದು ಸದರಿ ಕಂಬ ಮತ್ತು ದ್ವಜವನ್ನು ಬೀದರ ನಗರ ಸಭೆಯ ಕಾರ್ಮಿಕರ ಸಹಾಯದಿಂದ ತೆರವುಗೊಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 13/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 17-02-2020 ರಂದು ಫಿರ್ಯಾದಿ ಲಕ್ಷ್ಮಣ ತಂದೆ ವೆಂಕಟ ಹೊಪಳೆಕರ ಸಾ: ಜೊಶಿ ನಗರ ಭಾಲ್ಕಿ, ತಾ: ಭಾಲ್ಕಿ ರವರು ಲಿಂಗದಳ್ಳಿ ಗ್ರಾಮದ ತಮ್ಮ ಅತ್ತೆ ಯಲ್ಲಮ್ಮ ಗಂಡ ಅಳ್ಳೆಪ್ಪಾ ವಾಡೆಕರ ಇವರ ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ಮಾಷಾಶನ ಮತ್ತು ಧನಗರವಾಡಿ ಗ್ರಾಮದ ಅತ್ತಿಗೆ ಬಸಮ್ಮ ಗಂಡ ಯಲ್ಲಪ್ಪ ಪವಾರ ಇವರ ವಿಧವಾ ಮಾಷಾಶನ ಮಂಜೂರಾತಿಗಾಗಿ ಅವರಿಗೆ ಕರೆದುಕೊಂಡು ಫಿರ್ಯಾದಿಯು ಮುಡಬಿ ಗ್ರಾಮಕ್ಕೆ ಬಂದು ಅತ್ತೆ ಯಲ್ಲಮ್ಮ ಮತ್ತು ಅತ್ತಿಗೆ ಬಸಮ್ಮ ಇವರಿಗೆ ಪೊಸ್ಟ ಆಫೀಸನಲ್ಲಿ ಬಿಟ್ಟು ಫಿರ್ಯಾದಿಯು ಅದೇ ರಸ್ತೆಯ ಮೂಲಕ ಸ್ವಲ್ಪ ಮುಂದೆ ಹೋಗಿ ಹಾರಕೂಡ ರೋಡ ಕಡೆ ಹಾಸ್ಟೆಲ ಮುಂದೆ ಮೂತ್ರ ವಿಸರ್ಜನೆಗಾಗಿ ಹೋಗುತ್ತಿರುವಾಗ ಮುಡಬಿ ಬಸ ನಿಲ್ದಾಣದ ಕಡೆಯಿಂದ ಹಿಂದಿನಿಂದ ಬಂದ ಒಂದು ಅಪರಿಚಿತ ಮೋಟಾರ್ ಸೈಕಲ ಸವಾರ ತನ್ನ ಮೋಟಾರ್ ಸೈಕಲ್ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ತನ್ನ ಮೋಟಾರ್ ಸೈಕಲ್ ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಾಲು ಮೊಳಕಾಲಿನ ಕೆಳಗೆ ಭಾರಿ ಗುಪ್ತಗಾಯವಾಗಿದ್ದರಿಂದ ಜನರು ಮತ್ತು ಅಕ್ಕ ಪಕ್ಕದ ಅಂಗಡಿಯವರು ಫಿರ್ಯಾದಿಗೆ ಎಬ್ಬಿಸಿ ಖಾಸಗಿ ಜೀಪನಲ್ಲಿ ಚಿಕಿತ್ಸೆಗಾಗಿ ಮುಡಬಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 19/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 17-02-2020 ರಂದು ಕವಡಿಯಾಳ(ಎಸ್) ಗ್ರಾಮದಲ್ಲಿರುವ ವಾಲ್ಮಿಕಿ ಚೌಕ ಹತ್ತಿರ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಕೆಂಪು ಬಣ್ಣದ ಪ್ಲಾಸ್ಟೀಕ್ ಚೀಲದಲ್ಲಿ ಸರಾಯಿವುಳ್ಳ ಬಾಟಲಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದಾನೆಂದು ಕರೆ ಮುಖಾಂತರ ಸುನೀಲ್ ಕುಮಾರ ಪಿ.ಎಸ್. [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ವಾಲ್ಮಿಕಿ ಚೌಕ ಹತ್ತಿರ ಹೋಗಿ ನೋಡಲು ಬಾತ್ಮಿಯಂತೆ ಆರೋಪಿ ರಾಜು ತಂದೆ ಪೀರಪ್ಪಾ ಬಿರಾದಾರ ವಯ: 34 ವರ್ಷ, ಜಾತಿ: ಕಬ್ಬಲಿಗ, ಸಾ: ಕವಡಿಯಾಳ(ಎಸ್) ತಾ: ಬಸವಕಲ್ಯಾಣ ಇತನು ತನ್ನ ಹತ್ತಿರ ಒಂದು ಕೆಂಪು ಬಣ್ಣದ ಪ್ಲಾಸಿ್ಟೕಕ್ ಚೀಲವನ್ನು ಇಟ್ಟುಕೊಂಡು ಕುಳಿತ್ತಿದ್ದು ನೋಡಿ ಲ್ಲರೂ ಹೋಗಿ ಸದರಿ ಆರೋಪಿತನ ಮೇಲೆ ಒಮ್ಮೆಲೆ ದಾಳಿ ಮಾಡಿ ಹಿಡಿದುಕೊಂಡು ನಿನ್ನ ಹತ್ತಿರ ಇರುವ ಪ್ಲಾಸ್ಟೀಕ್ ಚೀಲದಲ್ಲಿ ಏನಿದೆ ? ಎಂದು ವಿಚಾರಿಸಿದಾಗ ಅವನು ಸರಾಯಿವುಳ್ಳ ಬಾಟಲ್ಗಳು ಇವೆ ಎಂದು ತಿಳಿಸಿದಾಗ ನಿನ್ನ ಹತ್ತಿರ ಇರುವ ಸರಾಯಿವುಳ್ಳ ಬಾಟಲಗಳು ಮಾರಾಟ ಮಾಡುವ ಬಗ್ಗೆ ಯಾವುದೇ ರೀತಿ ಲೈಸನ್ಸ್ಮತ್ತು ದಾಖಲಾತಿ ದ್ದÀರೆ ಹಾಜರು ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿಯಾವುದೇ ದಾಖಲಾತಿ ಇರುವುದಿಲ್ಲ ಎಂದು ತಿಳಿಸಿದ್ದು, ನಂತರ ಆರೋಪಿತನ ಹತ್ತಿರವಿದ್ದ ಕೆಂಪು ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿ ನೋಡಲು ಅದರಲ್ಲಿ 1) ಓರಿಜಿನಲ್ ಚಾಯಿಸ್ 90 ಎಮ್.ಎಲ್ ನ 37 ಸರಾಯಿ ಪೌಚಗಳು ಅ.ಕಿ 1,121.84 ರೂ., 2) ಓಲ್ಡ ಟಾವರ್ನ ವಿಸ್ಕಿ 180 ಎಂ.ಎಲ್ 13 ಸರಾಯಿ ಪೌಚಗಳು ಅ.ಕಿ 963.69 ರೂ., 3) ಆಫಿಸರ್ ಚಾಯಿಸ್ 180 ಎಂ.ಎಲ್ ನ 05 ಸರಾಯಿ ಪೌಚಗಳು ಅ.ಕಿ 451.05 ರೂ., ಕಿಂಗ್ ಫಿಷರ್ ಸ್ಟ್ರಾಂಗ್ 650 ಎಂ.ಎಲ್ ನ 4 ಬಿಯರ್ ಬಾಟಲಗಳು ಅ.ಕಿ 580/- ರೂ., ಹೀಗೆ ಎಲ್ಲಾ ಸರಾಯಿಯ ಒಟ್ಟು ಬೆಲೆ 3,116.58/- ರೂ. ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 12/2020, ಕಲಂ. 363, 366 ಐಪಿಸಿ :-
ಫಿರ್ಯಾದಿ ಭಗವಾನ ತಂದೆ ಮಾಪಣ್ಣಾ ಬೆಲೂರೆ ವಯ: 45 ವರ್ಷ,  ಜಾತಿ: ಎಸ್.ಸಿ ಮಾದಿಗ, ಸಾ: ಲಾಧಾ ರವರ ಮಗಳಾದ ರೇಣುಕಾ ಗಂದೆ ಭಗವಾನ ಬೆಲೂರೆ ವಯ: 17 ವರ್ಷ, ಇಕೆಯು 10 ನೇ ತರಗತಿ ಪಾಸಾಗಿ ಮನೆಯಲ್ಲಿ ಇದ್ದಳು, ಹೀಗಿರುವಾಗ ದಿನಾಂಕ 17-02-2020 ರಂದು 1730 ಗಂಟೆಗೆ ರೇಣುಕಾ ಇಕೆಯು ನೀರು ತರುವ ಸಲುವಾಗಿ ಕುಂಟೆಗಾಂವ ರೋಡಿಗೆ ಇರುವ ಬಾವಿಗೆ ತನ್ನ ತಂಗಿ ಗೋದಾವರಿ ಇವಲ ಜೊತೆಯಲ್ಲಿ ಹೋದಾಗ ಒಂದು ಕ್ರೋಜರ ಬಂದು ರೇಣುಕಾಗೆ ಅಪಹರಣ ಮಾಡಿದ್ದು ಇರುತ್ತದೆ ಅಂತ ಗೋದಾವರಿ ಫಿರ್ಯಾದಿಗೆ ತಿಳಿಸಿದಾಗ ಫಿರ್ಯಾದಿಯು ತಕ್ಷಣ ಮೋಟಾರ ಸೈಕಲ ತೆಗೆದುಕೊಂಡು ಹುಡುಕಾಡುತ್ತಾ ಬಾಜೋಳಗಾ ಗ್ರಾಮದವರೆಗೆ ಹೋಗಿದರೂ ಸಹ ಕ್ರೋಜರ ಸಿಕ್ಕಿರುವುದಿಲ್ಲ, ರೇಣುಕಾ ಇವಳಿಗೆ ಯಾರು ಅಪಹರಣ ಮಾಡಿರುತ್ತಾರೆ ಗೊತ್ತಾಗಿರುವುದಿಲ್ಲಾ ಮತ್ತು ಫಿರ್ಯಾದಿಯವರ ಮನೆಯ ಮೋಬೈಲಗೆ ದಿನಾಲು ಮೋಬೈಲ್ ನಂ. 6909050709 ನೇದರಿಂದ ಕರೆ ಬರುತ್ತಿದ್ದು ಸದರಿ ನಂಬರನ ಮೇಲೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.